All posts by nagaraj11081993

ಬೀದಿ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ಮುನ್ನ ಎಚ್ಚರ: ಗೋಡೆಯ ಮುಂದೆ ನಿಂತರೆ ಎಲ್ಲರಿಗೂ ಕಾಣುತ್ತದೆ! ಪಾಲಿಕೆಯಿಂದ ‘ಕನ್ನಡಿ’ ಭಾಗ್ಯ – Kannada News | Mysuru Combats Public Urination: Unique Stainless Steel Mirrors at Bus Stops

ಮೈಸೂರು ಮೂತ್ರ ವಿಸರ್ಜನೆ ತಡೆಗೆ ಹೊಸ ಪ್ಲಾನ್

ಮೈಸೂರು, ಮೇ.6: ಸಾರ್ವಜನಿಕ ಸ್ಥಳಗಳಲ್ಲಿ, ಅದರಲ್ಲೂ ಮುಖ್ಯವಾಗಿ ಬಸ್ ನಿಲ್ದಾಣಗಳ ಬಳಿಯ ಖಾಲಿ ಕಾಂಪೌಂಡ್ ಗೋಡೆಗಳ ಬಳಿ ಮೂತ್ರ ವಿಸರ್ಜನೆ ಮಾಡುವುದು ಮತ್ತು ಅದರಿಂದ ಬರುವ ದುರ್ವಾಸನೆಯನ್ನು ಹೋಗಲಾಡಿಸಲು ಮೈಸೂರು ಮಹಾನಗರ ಪಾಲಿಕೆ (Mysore Metropolitan Corporation) ಒಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪಾಲಿಕೆ ಮಾಡುತ್ತಿದೆ. ಸಾರ್ವಜನಿಕರೇ ಈ ಬಗ್ಗೆ ಕಾಳಜಿ ವಹಿಸಬೇಕಿತ್ತು. ಆದರೆ ದಂಡ ಎಲ್ಲ ರೀತಿಯ ಪ್ರಯೋ ಮಾಡಿದ್ರೂ ಪ್ರಯೋಜನ ಆಗಿರಲಿಲ್ಲ. ಇದೀಗ ಪಾಲಿಕೆ ಈ ಬಗ್ಗೆ ಗಂಭೀರವಾಗಿ ಚಿಂತೆ ನಡೆಸಿ, ಮಾಸ್ಟರ್​​ ಪ್ಲಾನ್​​ ಮಾಡಿದೆ.

ಮೈಸೂರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಸುಮಾರು 80 ಮೀಟರ್ ಉದ್ದದ ಕಾಂಪೌಂಡ್ ಗೋಡೆಗೆ ಸ್ಟೇನ್ ಲೆಸ್ ಸ್ಟೀಲ್ (Stainless Steel) ಶೀಟ್‌ಗಳನ್ನು ಅಳವಡಿಸಲಾಗಿದೆ. ಇದು ಕನ್ನಡಿಯಂತೆ ಕೆಲಸ ಮಾಡುತ್ತದೆ. ಈ ಶೀಟ್‌ಗಳ ಮುಂದೆ ಯಾರಾದರೂ ನಿಂತರೆ, ಅವರ ಪ್ರತಿಬಿಂಬವು ಕನ್ನಡಿಯಂತೆ ಕಾಣಿಸುವುದಲ್ಲದೆ, ಅವರ ಹಿಂಭಾಗದಲ್ಲಿ ಚಲಿಸುವವರಿಗೆ ಇವರು ಏನು ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಇದು ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವವರಿಗೆ ಮುಜುಗರ ಉಂಟುಮಾಡುವ ಮೂಲಕ ಅಂತಹ ಕೆಲಸ ಮಾಡದಂತೆ ತಡೆಯುತ್ತದೆ.

ಇದನ್ನ ಓದಿ: 15 ದಿನದಲ್ಲಿ 65 ಕೋಟಿ ಮೌಲ್ಯದ ಡ್ರಗ್ಸ್ ಸೀಜ್!: ಬೆಂಗಳೂರಿಗೆ ಡ್ರಗ್ಸ್ ಹರಿದು ಬರುತ್ತಿರುವುದು ಏಕೆ? ಪೊಲೀಸರು ಪತ್ತೆಹಚ್ಚಿದ 11 ಶಾಕಿಂಗ್ ಕಾರಣಗಳು!

ಕನ್ನಡಿಯ ಸುತ್ತಲೂ ಆಕರ್ಷಕ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲಾಗಿದ್ದು, ರಾತ್ರಿ ವೇಳೆ ಸ್ಟ್ರೀಟ್ ಲೈಟ್‌ಗಳ ಜೊತೆಗೆ ಇವು ಕೂಡ ಆನ್ ಆಗುತ್ತವೆ. ಇದು ಆ ಪ್ರದೇಶಕ್ಕೆ ಹೊಸ ಕಳೆ ನೀಡುತ್ತದೆ. ಸುಮಾರು 9.5 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಾಯೋಗಿಕವಾಗಿ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದ ಗೋಡೆಗೆ ಅಳವಡಿಸಲಾಗಿರುವ ಈ ಯೋಜನೆಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದು ರಾಜ್ಯದಲ್ಲೇ ಜಾರಿಯಾದ ಇಂತಹ ಮೊದಲ ಯೋಜನೆಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಸ್​ಬಿಐ ನೌಕರರ ಎರಡು ದಿನ ಮುಷ್ಕರ; ಏನು ಕಾರಣ, ಅವರ 16 ಬೇಡಿಕೆಗಳೇನು? ಇಲ್ಲಿದೆ ಮಾಹಿತಿ – Kannada News | SBI employees strike for 2 days in May last week, 16 key demands

ಎಸ್​ಬಿಐ ನೌಕರರ ಮುಷ್ಕರImage Credit source: AI/Mediaforge/TV9

ನವದೆಹಲಿ, ಮೇ 6: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೌಕರರು ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರ (SBI employees strike) ನಡೆಸಲು ನಿರ್ಧರಿಸಿದ್ದಾರೆ. ಮೇ 25 ಮತ್ತು 26ರಂದು ಈ ಪ್ರತಿಭಟನೆಗಳು ನಡೆಯಲಿವೆ. ಪಿಂಚಣಿ, ನೇಮಕಾತಿ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿ ನೌಕರರು 16 ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸುತ್ತಿದ್ದಾರೆ. ಎಸ್​ಬಿಐ ದೇಶಾದ್ಯಂತ 50 ಕೋಟಿಗೂ ಅಧಿಕ ಸಂಖ್ಯೆಯಷ್ಟು ಗ್ರಾಹಕರ ಬಳಗ ಹೊಂದಿರುವುದರಿಂದ, ಈ ಎರಡು ದಿನಗಳ ಮುಷ್ಕರವು ಬಹಳ ಮಂದಿಯ ಮೇಲೆ ಪರಿಣಾಮ ಬೀರಬಹುದು.

ಎಸ್​ಬಿಐ ಉದ್ಯೋಗಿಗಳು ಮುಷ್ಕರ ನಡೆಸಲು ಪ್ರಮುಖ ಕಾರಣಗಳೇನು?

  • ಸಿಬ್ಬಂದಿ ಕೊರತೆ ಇದ್ದರೂ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಇದರಿಂದ ಇರುವ ನೌಕರರ ಮೇಲೆ ಹೆಚ್ಚಿನ ಕೆಲಸದ ಹೊರೆ ಬೀಳುತ್ತಿದೆ ಎಂಬುದು ಒಂದು ಸಂಗತಿ.
  • ಪಿಂಚಣಿ ಸಂಬಂಧಿತ ಸೌಲಭ್ಯಗಳು ಏಕರೂಪದಲ್ಲಿ ಇಲ್ಲದೇ ಇರುವುದರಿಂದ ಪಿಂಚಣಿ ಸಮಾನತೆ ಇಲ್ಲ ಎಂದು ತಗಾದೆ ತೆಗೆಯಲಾಗಿದೆ.
  • ಕೆಲಸದ ಸ್ಥಳದಲ್ಲಿ ಇನ್ನೂ ಉತ್ತಮವಾದ ವಾತಾವರಣ ಕಲ್ಪಿಸಬೇಕು. ನೌಕರರ ಕ್ಷೇಮಕ್ಕೆ ಆದ್ಯತೆ ಕೊಡಬೇಕು ಎನ್ನುವ ಕೂಗು ಇದೆ.
  • ಬ್ಯಾಂಕಿನ ಬೆನ್ನೆಲುಬಿನಂತಿರುವ ಕಾಯಂ ಹುದ್ದೆಗಳನ್ನು ಹೊರಗುತ್ತಿಗೆ (Outsourcing) ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಎಸ್​ಬಿಐ ನೌಕರರ ಒಕ್ಕೂಟ ಆಗ್ರಹಿಸಿದೆ.
  • ಕಳೆದ ಮೂರು ದಶಕಗಳಿಂದ ಸಂದೇಶವಾಹಕರ (Messengers) ನೇಮಕಾತಿ ಸ್ಥಗಿತಗೊಂಡಿದೆ. ಇತ್ತೀಚೆಗೆ ಸೂರತ್‌ನ ಎಸ್‌ಬಿಐ ಶಾಖೆಯಲ್ಲಿ ನಡೆದ ದರೋಡೆಯನ್ನು ಉಲ್ಲೇಖಿಸಿ, ನೌಕರರು ಮತ್ತು ಗ್ರಾಹಕರ ಸುರಕ್ಷತೆಗಾಗಿ ಸಶಸ್ತ್ರ ರಕ್ಷಕರನ್ನು (Armed Guards) ನೇಮಿಸಬೇಕೆಂದು ಒತ್ತಾಯಿಸಲಾಗಿದೆ.
  • ರಾಷ್ಟ್ರೀಯ ಪೆನ್ಶನ್ ಯೋಜನೆಯಡಿ ಬರುವ ನೌಕರರಿಗೆ ತಮ್ಮ ‘ಪೆನ್ಶನ್ ಫಂಡ್ ಮ್ಯಾನೇಜರ್’ ಅನ್ನು ಆಯ್ಕೆ ಮಾಡಿಕೊಳ್ಳುವ ಅಥವಾ ಬದಲಾಯಿಸುವ ಮುಕ್ತ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ.
  • 12ನೇ ದ್ವೈಪಕ್ಷಿಕ ಒಪ್ಪಂದದ ಪ್ರಕಾರ ಎಲ್ಲ ನೌಕರರಿಗೆ ಶೇ. 17 ರಷ್ಟು ವೇತನ ಹೆಚ್ಚಳ ಮಾಡಬೇಕಿತ್ತಾದರೂ, ಅಧಿಕಾರಿಗಳಿಗೆ ಮಾತ್ರ ವಿಶೇಷ ಭತ್ಯೆ ನೀಡಿ ಅವರ ವೇತನವನ್ನು ಶೇ. 22 ರಷ್ಟು ಹೆಚ್ಚಿಸಲಾಗಿದೆ. ಈ ವೇತನ ತಾರತಮ್ಯವನ್ನು ಸರಿಪಡಿಸಬೇಕು ಎನ್ನುವ ಕೂಗು ಇದೆ.
  • 2019ರ ನಂತರ ಬ್ಯಾಂಕ್‌ಗೆ ಸೇರಿದ ನೌಕರರಿಗೆ ಅಂತರ-ವೃತ್ತ ವರ್ಗಾವಣೆಗೆ (Inter Circle Transfers) ಅವಕಾಶ ನೀಡಬೇಕು ಎನ್ನುವ ಬೇಡಿಕೆಯೂ ಇದೆ.

ಇದನ್ನೂ ಓದಿ: ಮುಂದಿನ 9 ವರ್ಷದಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ನಗರ ಬೆಂಗಳೂರು; ಸಾವಿಲ್ಸ್ ವರದಿ

ಎಸ್​ಬಿಐ ನೌಕರರ 16 ಪ್ರಮುಖ ಬೇಡಿಕೆಗಳಿವು

  1. ಉದ್ಯೋಗಿಗಳ ಎನ್​ಪಿಎಸ್ ಸ್ಕೀಮ್​ನಲ್ಲಿ ಯಾವ ಪೆನ್ಷನ್ ಫಂಡ್ ಮ್ಯಾನೇಜರ್ ಬೇಕು ಎಂಬುದನ್ನು ಆಯ್ದುಕೊಳ್ಳುವ ಆಯ್ಕೆ ಬೇಕು.
  2. ಉದ್ಯೋಗಿಗಳ ಪಿಂಚಣಿ ಸಮಾನತೆ ಇರಲಿ
  3. ಸಿಬ್ಬಂದಿ ಕೊರತೆ ಇಲ್ಲದಂತೆ ಸರಿಯಾಗಿ ನೇಮಕಾತಿ ಆಗಬೇಕು.
  4. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.
  5. ಕೆಲಸದ ಹೊರೆಯ ಒತ್ತಡ ಕಡಿಮೆ ಮಾಡಬೇಕು.
  6. ಬಡ್ತಿ ನೀತಿ ಇನ್ನೂ ಉತ್ತಮವಿರಬೇಕು.
  7. ವರ್ಗಾವಣೆ ನೀತಿ ಸುಧಾರಿಸಬೇಕು.
  8. ಉತ್ತಮ ವೈದ್ಯಕೀಯ ಸೌಲಭ್ಯ ಇರಬೇಕು.
  9. ಸಂಬಳ ಸಮಸ್ಯೆ ಬಗೆಹರಿಸಬೇಕು.
  10. ಉದ್ಯೋಗಿಗಳ ಹಕ್ಕು ರಕ್ಷಿಸಬೇಕು.
  11. ಕೆಲಸದ ವಾತಾವರಣ ಸುಧಾರಿಸಬೇಕು
  12. ದೂರು ಪರಿಹಾರ ವ್ಯವಸ್ಥೆ ಉತ್ತಮವಾಗಿರಬೇಕು.
  13. ಎಲ್ಲಾ ನೌಕರ ವರ್ಗಗಳಲ್ಲಿ ನ್ಯಾಯಯುತ ನೀತಿ ಮತ್ತು ನಡವಳಿಕೆ ಇರಬೇಕು.
  14. ಶಾಖಾ ಮಟ್ಟದ ಸಿಬ್ಬಂದಿ ಬಲಪಡಿಸಬೇಕು.
  15. ನಿವೃತ್ತಿ ಸೌಲಭ್ಯ ಉತ್ತಮವಾಗಿರಬೇಕು.
  16. ಉದ್ಯೋಗಿಗಳ ಕಲ್ಯಾಣ ಮತ್ತು ಸೇವಾ ಭದ್ರತೆ ಸುಧಾರಣೆಗಳಾಗಬೇಕು.

ಗ್ರಾಹಕರ ಮೇಲೆ ಇದರ ಪರಿಣಾಮವೇನು?

ಎಸ್‌ಬಿಐ ದೇಶಾದ್ಯಂತ ಸುಮಾರು 50 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಪ್ರತಿದಿನ ಕೋಟ್ಯಂತರ ವಹಿವಾಟುಗಳು ನಡೆಯುತ್ತವೆ. ಮುಷ್ಕರದ ಕಾರಣದಿಂದ ಕೆಳಗಿನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಬಹುದು:

ಮೇ 25 ಮತ್ತು 26 ರಂದು ಬ್ಯಾಂಕ್‌ಗಳ ಒಳಗೆ ನಡೆಯುವ ನಗದು ಜಮೆ, ಚೆಕ್ ಕ್ಲಿಯರೆನ್ಸ್, ಲೋನ್ ಪ್ರಕ್ರಿಯೆಗಳು ಮತ್ತು ಲಾಕರ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಬಹುದು ಅಥವಾ ವಿಳಂಬವಾಗಬಹುದು.

ಎರಡು ದಿನಗಳ ಕಾಲ ಬ್ಯಾಂಕ್ ನೌಕರರು ಇರುವುದಿಲ್ಲವಾದ್ದರಿಂದ ಎಟಿಎಂಗಳಿಗೆ ನಗದು ಮರುತುಂಬಿಸುವ ಪ್ರಕ್ರಿಯೆಗೆ ಹಿನ್ನಡೆಯಾಗಿ ಎಟಿಎಂಗಳಲ್ಲಿ ಹಣ ಖಾಲಿಯಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ವಿಜಯ್​ನ ಪೋರ್ಟ್​ಫೋಲಿಯೋ ಇಂಟರೆಸ್ಟಿಂಗ್; ಹೂಡಿಕೆಯಲ್ಲಿ ಸಂಪ್ರದಾಯವಾದಿ; ಎಲ್ಲೆಲ್ಲಿದೆ ಅವರ 624 ಕೋಟಿ ರೂ ಹಣ?

ಮೇ 23 ನಾಲ್ಕನೇ ಶನಿವಾರ ಮತ್ತು ಮೇ 24 ಭಾನುವಾರ ಆಗಿರುವುದರಿಂದ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಇದರ ಬೆನ್ನಲ್ಲೇ ಮೇ 25, 26 ರಂದು ಮುಷ್ಕರ ನಡೆಯುವುದರಿಂದ ಸತತ 4 ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳಲ್ಲಿ ಏರುಪೇರಾಗಬಹುದು. ಒಂದು ವೇಳೆ ಮುಷ್ಕರದ ದಿನ ಸಾರ್ವಜನಿಕ ರಜೆ ಬಂದರೆ, ಪ್ರತಿಭಟನೆಯನ್ನು ಮೇ 27ಕ್ಕೆ ಮುಂದೂಡಲಾಗುತ್ತದೆ.

ಗ್ರಾಹಕರಿಗೆ ಸಲಹೆಗಳು

ಮುಷ್ಕರದ ಅವಧಿಯಲ್ಲೂ **SBI YONO ಆಪ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು UPI (ಫೋನ್ ಪೇ, ಗೂಗಲ್ ಪೇ ಇತ್ಯಾದಿ) ಆನ್‌ಲೈನ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಮೇ 23 ಕ್ಕಿಂತ ಮುಂಚಿತವಾಗಿಯೇ ನಿಮ್ಮ ಅಗತ್ಯಕ್ಕೆ ತಕ್ಕಷ್ಟು ನಗದು ಹಣವನ್ನು ಬ್ಯಾಂಕ್ ಅಥವಾ ಎಟಿಎಂನಿಂದ ಡ್ರಾ ಮಾಡಿ ಇಟ್ಟುಕೊಳ್ಳುವುದು ಉತ್ತಮ. ಚೆಕ್ ಕ್ಲಿಯರೆನ್ಸ್ ಅಥವಾ ಸಾಲದ ಕಂತುಗಳ ಪಾವತಿಯಂತಹ ಪ್ರಮುಖ ಕೆಲಸಗಳಿದ್ದಲ್ಲಿ ಮೇ 22ರ ಒಳಗಾಗಿಯೇ ಪೂರ್ಣಗೊಳಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

DK ಕೋಚ್ ಆಗಲು ಇವರೇ ಕಾರಣ..! – Kannada News | DK Reveals How Virat Kohli Inspired His RCB Coaching Role

ಐಪಿಎಲ್ ಅಂಗಳದಲ್ಲಿ ಅಬ್ಬರಿಸಿದ್ದ ‘ಫಿನಿಶರ್’ ದಿನೇಶ್ ಕಾರ್ತಿಕ್, ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್. ಆಟಗಾರನಾಗಿ ನಿವೃತ್ತಿ ಹೊಂದಿದ ಬೆನ್ನಲ್ಲೇ ಡಿಕೆ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಎರಡನೇ ಇನಿಂಗ್ಸ್ ಆರಂಭಿಸಿದ್ದರು. ಇದಕ್ಕೆ ವಿರಾಟ್ ಕೊಹ್ಲಿ ಎಂಬ ಕುತೂಹಲಕಾರಿ ವಿಷಯವನ್ನು ದಿನೇಶ್ ಕಾರ್ತಿಕ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

ಕೊಹ್ಲಿಯ ‘ಮಹತ್ವದ’ ಸಲಹೆ:

ಇಂಡಿಯನ್ ಪ್ರೀಮಿಯರ್ ಲೀಗ್​​ಗೆ ನಿವೃತ್ತಿ ಘೋಷಿಸಿದ ಬಳಿಕ ನಾನು ಗೊಂದಲದಲ್ಲಿದ್ದೆ. ಈ ವೇಳೆ ನಾನು ವಿರಾಟ್ ಕೊಹ್ಲಿಯನ್ನು ಎರಡು ಬಾರಿ ಭೇಟಿಯಾಗಿದ್ದೆ. ಈ ವೇಳೆ ಅವರು ನೀಡಿದ ಸಲಹೆಯು ನಾನು ಸೆಕೆಂಡ್ ಇನಿಂಗ್ಸ್​ ಆರಂಭಿಸಲು ಕಾರಣವಾಯ್ತು ಎಂದಿದ್ದಾರೆ.

  • ಮೊದಲ ಬಾರಿ: ನಿವೃತ್ತಿಯ ನಂತರ ವಿರಾಟ್ ಕೊಹ್ಲಿಯನ್ನು ಭೇಟಿಯಾದಾಗ ಅವರು”ನೀನು ಕೋಚಿಂಗ್ ಪಾತ್ರದ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು” ಎಂದು ಪ್ರೋತ್ಸಾಹಿಸಿದ್ದರು.
  • ಎರಡನೇ ಬಾರಿ: ಆರ್‌ಸಿಬಿಯ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರಿಂದ ಅಧಿಕೃತವಾಗಿ ಕೋಚಿಂಗ್ ಆಫರ್ ಬಂದಾಗ, ವಿರಾಟ್ ಕೊಹ್ಲಿ ಅವರು ಕಾರ್ತಿಕ್‌ಗೆ “ನೀನು ಖಂಡಿತವಾಗಿಯೂ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು, ಇದು ನಿನಗೆ ಸರಿಯಾಗಿ ಹೊಂದಿಕೆಯಾಗುತ್ತದೆ” ಎಂದು ಭರವಸೆ ನೀಡಿದ್ದರು.

ವಿರಾಟ್ ಕೊಹ್ಲಿಯ ಈ ಸಲಹೆಗಳು ಮತ್ತು ಪ್ರೊತ್ಸಾಹದೊಂದಿಗೆ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಲು ಒಪ್ಪಿಕೊಂಡರು. ಅದರಂತೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಡಿಕೆ ಮೊದಲ ಸೀಸನ್​ನಲ್ಲೇ ಆರ್​ಸಿಬಿ ತಂಡಕ್ಕೆ ಕಪ್ ಗೆದ್ದು ಕೊಡುವ ಮೂಲಕ ಯಶಸ್ಸು ಸಾಧಿಸಿದರು.

ಆರ್‌ಸಿಬಿಗೆ ಡಿಕೆ ಬಲ:

ದಿನೇಶ್ ಕಾರ್ತಿಕ್ ಅವರ ಅಪಾರ ಅನುಭವ ಮತ್ತು ಭಾರತೀಯ ಕ್ರಿಕೆಟ್‌ನ ಆಳವಾದ ಜ್ಞಾನವು ತಂಡಕ್ಕೆ ವರದಾನವಾಗಿದೆ. ಮುಖ್ಯ ಕೋಚ್ ಆಂಡಿ ಫ್ಲವರ್ ಕೂಡ ತಂಡದಲ್ಲಿ ಒಬ್ಬ ಭಾರತೀಯ ಮಾರ್ಗದರ್ಶಕ ಇರಬೇಕು ಎಂದು ಬಯಸಿದ್ದರು. ಕಾರ್ತಿಕ್ ಅವರ ಮಾರ್ಗದರ್ಶನದಲ್ಲಿ ಆರ್‌ಸಿಬಿ ತಂಡವು ಈಗಾಗಲೇ 2025ರ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದೆ.

ಜಾಗತಿಕ ಮಟ್ಟದಲ್ಲೂ ಡಿಕೆ ಹವಾ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ಸಿನ ನಂತರ, ದಿನೇಶ್ ಕಾರ್ತಿಕ್ ಅವರ ಕೋಚಿಂಗ್ ಬೇಡಿಕೆ ಹೆಚ್ಚಾಗಿದೆ. 2026ರ ‘ದಿ ಹಂಡ್ರೆಡ್’ (The Hundred) ಕ್ರಿಕೆಟ್ ಟೂರ್ನಿಯಲ್ಲಿ ಅವರು ಲಂಡನ್ ಸ್ಪಿರಿಟ್ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ‘ಹುಳುಕು’ ಬಹಿರಂಗ ಪಡಿಸಿದ ಮಂಜ್ರೇಕರ್

ಒಟ್ಟಿನಲ್ಲಿ, ಮೈದಾನದಲ್ಲಿ ಫಿನಿಶರ್ ಆಗಿ ಮಿಂಚಿದ್ದ ದಿನೇಶ್ ಕಾರ್ತಿಕ್, ಈಗ ಮೈದಾನದ ಹೊರಗೂ ಕೊಹ್ಲಿಯ ಬೆಂಬಲದೊಂದಿಗೆ ಯಶಸ್ವಿ ತರಬೇತುದಾರರಾಗಿ ಹೊರಹೊಮ್ಮುತ್ತಿದ್ದಾರೆ.

Source link

ಬಿಜೆಪಿ ಗೆಲುವಿನ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಕಾಳಿಘಾಟ್​​ ನಿವಾಸದ ಭದ್ರತೆ ಕಡಿತ – Kannada News | Mamata banerjees residence security reduced following bjps west bengal victory

ಕೋಲ್ಕತ್ತಾ, ಮೇ 06: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಬಿಜೆಪಿ ಜಯಭೇರಿ ಬಾರಿಸಿದ್ದು, ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದ ಸುತ್ತಮುತ್ತಲಿನ ಪರಿಸ್ಥಿತಿಯ ಮೇಲೂ ಪರಿಣಾಮ ಬೀರಿದೆ. ಕೋಲ್ಕತ್ತಾದ ಕಾಳಿಘಾಟ್‌ನಲ್ಲಿರುವ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ನೀಡಲಾಗಿದ್ದ ಭದ್ರತೆಯನ್ನು ಕಡಿತಗೊಳಿಸಲಾಗಿದ್ದು, ಹಿಂದೆ ಮುಖ್ಯಮಂತ್ರಿಗಳ ನಿವಾಸಕ್ಕೆ ಇದ್ದ ಭಾರೀ ಭದ್ರತೆ ಕಡಿತಗೊಳಿಸಲಾಗಿದೆ. ಮಮತಾ ನಿವಾಸದ ರಸ್ತೆಗೆ ಅಡ್ಡಲಾಗಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ರಸ್ತೆಯಲ್ಲಿ ಓಡಾಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಧುರಂಧರ್ 2’ ವಿವಾದ ಸುಖಾಂತ್ಯ; ಆದಿತ್ಯ ಧರ್ ಬಳಿ ಕ್ಷಮೆ ಕೇಳಿದ ಸಂತೋಷ್ ಕುಮಾರ್  – Kannada News | Dhurandhar Copyright Row Settles: Aditya Dhar Wins as Santosh Kumar Apologizes

ಬಾಲಿವುಡ್‌ನ ಖ್ಯಾತ ನಿರ್ದೇಶಕ ಆದಿತ್ಯ ಧರ್ ಅವರ ‘ಧುರಂಧರ್: ದಿ ರಿವೇಂಜ್’ ಸಿನಿಮಾ ಸಾಕಷ್ಟು ಮೆಚ್ಚುಗೆ ಪಡೆದಿದೆ. ಈ ಚಿತ್ರವನ್ನು ನೋಡಿ ಅನೇಕರು ಹೊಗಳಿದ್ದಾರೆ. ಈ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಮಾಯಿ ಕೂಡ ಮಾಡಿದೆ. ಇದರ ಜೊತೆಗೆ ಸಿನಿಮಾ ಸುತ್ತ ಕಾನೂನು ಸಂಘರ್ಷ ಎದುರಾಗಿತ್ತು. ಸದ್ಯ ಇದಕ್ಕೆ ತೆರೆ ಬಿದ್ದಿದೆ. ಆದಿತ್ಯ ಧರ್ ವಿರುದ್ಧ ಕೃತಿ ಚೌರ್ಯದ ಆರೋಪ ಮಾಡಿದ್ದ ಸಂತೋಷ್ ಕುಮಾರ್ ಅವರು ನ್ಯಾಯಾಲಯದಲ್ಲಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಆ ಬಳಿಕ ಬಾಂಬೆ ಹೈಕೋರ್ಟ್ ಈ ಪ್ರಕರಣವನ್ನು ಕೈಬಿಟ್ಟಿದೆ.

1.‘ಧುರಂಧರ್ 2’ ರಿವೇಂಜ್ ವಿವಾದಕ್ಕೆ ತೆರೆ

2. ಆದಿತ್ಯ ಧರ್ ಬಳಿ ಕ್ಷಮೆ ಕೇಳಿದ ಸಂತೋಷ್ ಕುಮಾರ್

3. ಸಂತೋಷ್ ಬಳಿ ಇದೆ ಇನ್ನೊಂದು ಆಯ್ಕೆ 

2026ರ ಮಾರ್ಚ್ ತಿಂಗಳಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ಕುಮಾರ್ ಅವರು ಆದಿತ್ಯ ಧರ್ ಮೇಲೆ ಗಂಭೀರ ಆರೋಪ ಮಾಡಿದ್ದರು. ತಾವು 2023ರಲ್ಲಿ ಚಿತ್ರಕಥೆ ಬರಹಗಾರರ ಸಂಘದಲ್ಲಿ (SWA) ನೋಂದಾಯಿಸಿದ್ದ ‘ಡಿ-ಸಾಹೇಬ್’ ಚಿತ್ರಕಥೆಯನ್ನು ಕದ್ದು ಆದಿತ್ಯ ಧರ್ ‘ಧುರಂಧರ್’ ಸಿನಿಮಾ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಹೇಳಿಕೆಯಿಂದ ತಮ್ಮ ವೃತ್ತಿಜೀವನಕ್ಕೆ ಮತ್ತು ಗೌರವಕ್ಕೆ ಧಕ್ಕೆ ಬಂದಿದೆ ಎಂದು ಆದಿತ್ಯ ಧರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರಿದ್ದ ಏಕಸದಸ್ಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸಂತೋಷ್ ಕುಮಾರ್ ಅವರು ಮಾರ್ಚ್ 30ರಂದು ತಾವು ನೀಡಿದ್ದ ಹೇಳಿಕೆಗಳ ಬಗ್ಗೆ ನ್ಯಾಯಾಲಯದಲ್ಲಿ ಲಿಖಿತವಾಗಿ ಕ್ಷಮೆ ಕೇಳಿದರು. ಈ ಕ್ಷಮೆಯನ್ನು ಸ್ವೀಕರಿಸಿದ ಆದಿತ್ಯ ಧರ್ ಅವರ ಪರ ವಕೀಲರು, ನಮಗೆ ಪರಿಹಾರದ ನಿರೀಕ್ಷೆಯಾಗಲಿ ಅಥವಾ ಪ್ರಕರಣ ಮುಂದುವರಿಸುವ ಆಸಕ್ತಿಯಾಗಲಿ ಇಲ್ಲ ಎಂದು ತಿಳಿಸಿದರು. ಎರಡೂ ಕಡೆಯವರು ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಪ್ರಕರಣವನ್ನು ಮುಕ್ತಾಯಗೊಳಿಸಿದೆ.

ಮಾನನಷ್ಟ ಮೊಕದ್ದಮೆ ಮುಕ್ತಾಯಗೊಂಡಿದ್ದರೂ, ಕಥೆಯ ಹಕ್ಕುಸ್ವಾಮ್ಯದ ವಿಚಾರದಲ್ಲಿ ಕಾನೂನು ಹೋರಾಟ ನಡೆಸಲು ಸಂತೋಷ್ ಕುಮಾರ್ ಅವರಿಗೆ ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಂದರೆ, ಕಥೆ ಯಾರಿಗೆ ಸೇರಿದ್ದು ಎಂಬ ಬಗ್ಗೆ ಅವರು ಸ್ವತಂತ್ರವಾಗಿ ದೂರು ದಾಖಲಿಸಬಹುದಾಗಿದೆ. ಆರಂಭದಲ್ಲಿ ಕ್ಷಮೆ ಕೇಳಲು ಹಿಂದೇಟು ಹಾಕಿದ್ದ ಸಂತೋಷ್ ಕುಮಾರ್, ಕೊನೆಗೆ ಕ್ಷಮೆ ಕೇಳಿ ವಿವಾದಕ್ಕೆ ಅಂತ್ಯ ಹಾಡಿದರು. ಕಥೆಯ ಹಕ್ಕು ಸ್ವಾಮ್ಯದಲ್ಲಿ ಅವರು ಕೇಸ್ ಹಾಕುತ್ತಾರಾ ನೋಡಬೇಕಿದೆ.

Source link

Vastu Tips: ಸೆಕೆಂಡ್ ಹ್ಯಾಂಡ್ ವಸ್ತು ಖರೀದಿಸುವ ಮುನ್ನ ಈ ವಾಸ್ತು ನಿಯಮ ತಿಳಿದಿರಲಿ; ಇಲ್ಲದಿದ್ದರೆ ಸಂಕಷ್ಟ ತಪ್ಪಿದ್ದಲ್ಲ! – Kannada News | Vastu Tips: Second Hand Items to Avoid Bringing Negative Energy Home

ಇಂದಿನ ಕಾಲದಲ್ಲಿ ಬಜೆಟ್ ಉಳಿಸಲು ಅಥವಾ ವಿಂಟೇಜ್ (Vintage) ಲುಕ್ ಪಡೆಯಲು ಅನೇಕರು ಹಳೆಯ ಅಥವಾ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ನಾವು ಮನೆಗೆ ತರುವ ಪ್ರತಿಯೊಂದು ವಸ್ತುವು ತನ್ನದೇ ಆದ ಶಕ್ತಿಯನ್ನು (Energy) ಹೊಂದಿರುತ್ತದೆ. ಬೇರೆಯವರು ಬಳಸಿದ ವಸ್ತುಗಳನ್ನು ಮನೆಗೆ ತರುವಾಗ, ಅವರ ಅದೃಷ್ಟ ಅಥವಾ ಸಂಕಷ್ಟಗಳು ನಮ್ಮ ಮನೆಗೆ ಬರಬಹುದು ಎಂಬ ನಂಬಿಕೆಯಿದೆ. ಹಾಗಾದರೆ, ಯಾವ ವಸ್ತುಗಳನ್ನು ಸೆಕೆಂಡ್ ಹ್ಯಾಂಡ್ ಖರೀದಿಸುವುದು ಅಶುಭ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವಾಸ್ತು ಶಾಸ್ತ್ರ ಮತ್ತು ವಸ್ತುಗಳ ಶಕ್ತಿ:

ವಾಸ್ತು ಶಾಸ್ತ್ರವು ಪ್ರತಿಯೊಂದು ನಿರ್ಜೀವ ವಸ್ತುವೂ ಶಕ್ತಿಯನ್ನು ಹೀರಿಕೊಳ್ಳುತ್ತದೆ ಎಂದು ಹೇಳುತ್ತದೆ. ಒಬ್ಬ ವ್ಯಕ್ತಿಯು ಒಂದು ವಸ್ತುವನ್ನು ದೀರ್ಘಕಾಲ ಬಳಸಿದಾಗ, ಅವರ ಆಲೋಚನೆಗಳು, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಕಂಪನಗಳು ಆ ವಸ್ತುವಿನೊಂದಿಗೆ ಬೆರೆತುಹೋಗುತ್ತವೆ. ಆತ ಕಷ್ಟದಲ್ಲಿದ್ದರೆ ಅಥವಾ ಮಾನಸಿಕವಾಗಿ ನೊಂದಿದ್ದರೆ, ಆ ನಕಾರಾತ್ಮಕತೆಯು ನಿಮ್ಮ ಮನೆಯ ಶಾಂತಿಯನ್ನು ಕದಡಬಹುದು.

ಬಳಸಿದ ಹಾಸಿಗೆ ಮತ್ತು ಪೀಠೋಪಕರಣಗಳು:

ಮನೆಯಲ್ಲಿ ಹಾಸಿಗೆಯು ಅತ್ಯಂತ ವೈಯಕ್ತಿಕವಾದ ವಸ್ತುವಾಗಿದೆ. ವಾಸ್ತು ಪ್ರಕಾರ, ಹಳೆಯ ಹಾಸಿಗೆಯನ್ನು ಬಳಸುವುದು ಅಶುಭ. ಏಕೆಂದರೆ ಅದು ಹಿಂದಿನ ಮಾಲೀಕರ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಹೊಂದಿರುತ್ತದೆ. ಒಂದು ವೇಳೆ ಅವರು ದೀರ್ಘಕಾಲದ ಅನಾರೋಗ್ಯ ಅಥವಾ ದಾಂಪತ್ಯ ಕಲಹದಿಂದ ಬಳಲುತ್ತಿದ್ದರೆ, ಆ ಹಾಸಿಗೆಯನ್ನು ಬಳಸುವ ಹೊಸ ಮಾಲೀಕರಿಗೂ ನಿದ್ರಾಹೀನತೆ ಮತ್ತು ವೈವಾಹಿಕ ಸಮಸ್ಯೆಗಳು ಎದುರಾಗಬಹುದು. ಹಾಗೆಯೇ, ಮರವು ಶಕ್ತಿಯನ್ನು ಬೇಗನೆ ಹೀರಿಕೊಳ್ಳುವುದರಿಂದ ಹಳೆಯ ಸೋಫಾ ಅಥವಾ ಕುರ್ಚಿಗಳನ್ನು ಖರೀದಿಸುವಾಗ ಜಾಗರೂಕರಾಗಿರಿ.

ಹಳೆಯ ಗಡಿಯಾರಗಳು:

ಗಡಿಯಾರವು ಕೇವಲ ಸಮಯವನ್ನು ತೋರಿಸುವುದಿಲ್ಲ, ಅದು ನಮ್ಮ ಜೀವನದ ಗತಿಯನ್ನು ನಿರ್ಧರಿಸುತ್ತದೆ. ಬೇರೆಯವರು ಬಳಸಿದ ಅಥವಾ ನಿಂತುಹೋದ ಹಳೆಯ ಗಡಿಯಾರಗಳನ್ನು ಮನೆಗೆ ತರುವುದು ನಿಮ್ಮ ಪ್ರಗತಿಗೆ ತಡೆಯೊಡ್ಡಬಹುದು. ಹಿಂದಿನ ಮಾಲೀಕರು ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದರೆ, ಅದರ ಪ್ರಭಾವ ನಿಮ್ಮ ಮೇಲೂ ಬೀರುವ ಸಾಧ್ಯತೆ ಇರುತ್ತದೆ. ಮನೆಯಲ್ಲಿ ಯಾವಾಗಲೂ ಹೊಸ ಮತ್ತು ಸುಸ್ಥಿತಿಯಲ್ಲಿರುವ ಗಡಿಯಾರವನ್ನೇ ಇಟ್ಟುಕೊಳ್ಳುವುದು ಶ್ರೇಯಸ್ಕರ.

ಬಟ್ಟೆ ಮತ್ತು ಪಾದರಕ್ಷೆಗಳು:

ಅನೇಕರು ಇತರರ ಹಳೆಯ ಬಟ್ಟೆಗಳನ್ನು ಅಥವಾ ಬೂಟುಗಳನ್ನು ಧರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪಾದರಕ್ಷೆಗಳು ಶನಿ ಗ್ರಹಕ್ಕೆ ಸಂಬಂಧಿಸಿವೆ. ಬೇರೆಯವರ ಹಳೆಯ ಅಥವಾ ಹರಿದ ಬೂಟುಗಳನ್ನು ಧರಿಸುವುದರಿಂದ ಜಾತಕದಲ್ಲಿ ಶನಿ ದೋಷ ಉಂಟಾಗಬಹುದು ಮತ್ತು ದಾರಿದ್ರ್ಯಕ್ಕೆ ಕಾರಣವಾಗಬಹುದು. ಅಲ್ಲದೆ, ಬಟ್ಟೆಗಳ ಮೂಲಕ ಇನ್ನೊಬ್ಬರ ಅನಾರೋಗ್ಯ ಅಥವಾ ನಕಾರಾತ್ಮಕ ಭಾವನೆಗಳು ನಿಮ್ಮ ದೇಹವನ್ನು ಪ್ರವೇಶಿಸಬಹುದು.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಪೊರಕೆ:

ಪೊರಕೆಯನ್ನು ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬೇರೆಯವರ ಮನೆಯಲ್ಲಿ ಬಳಸಿದ ಪೊರಕೆಯನ್ನು ನಿಮ್ಮ ಮನೆಗೆ ತರುವುದು ಅಥವಾ ನಿಮ್ಮ ಮನೆಯ ಪೊರಕೆಯನ್ನು ಬೇರೆಯವರಿಗೆ ನೀಡುವುದು ಎರಡೂ ವಾಸ್ತು ಪ್ರಕಾರ ತಪ್ಪು. ಇದು ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಮತ್ತು ಬಡತನಕ್ಕೆ ದಾರಿ ಮಾಡಿಕೊಡುತ್ತದೆ.

ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಬಳಸಲೇಬೇಕಾದಲ್ಲಿ ಈ ಪರಿಹಾರಗಳನ್ನು ಅನುಸರಿಸಿ:

ಒಂದು ವೇಳೆ ಅನಿವಾರ್ಯವಾಗಿ ನೀವು ಹಳೆಯ ವಸ್ತುಗಳನ್ನು ಖರೀದಿಸಿದ್ದರೆ ಅಥವಾ ಉಡುಗೊರೆಯಾಗಿ ಪಡೆದಿದ್ದರೆ, ಈ ಕೆಳಗಿನ ಕ್ರಮಗಳನ್ನು ಅನುಸರಿಸಿ ಅದರ ನಕಾರಾತ್ಮಕತೆಯನ್ನು ಹೋಗಲಾಡಿಸಬಹುದು:

  • ಗಂಗಾಜಲ ಅಥವಾ ಉಪ್ಪು ನೀರು: ಹೊಸದಾಗಿ ತಂದ ವಸ್ತುವನ್ನು ಗಂಗಾಜಲದಿಂದ ಪ್ರೋಕ್ಷಿಸಿ ಅಥವಾ ಉಪ್ಪು ಬೆರೆಸಿದ ನೀರಿನಿಂದ ಸ್ವಚ್ಛಗೊಳಿಸಿ. ಉಪ್ಪು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಗುಣ ಹೊಂದಿದೆ.
  • ಧೂಪ-ದೀಪ: ಕರ್ಪೂರ ಅಥವಾ ಸಾಂಬ್ರಾಣಿ ಧೂಪವನ್ನು ವಸ್ತುವಿನ ಸುತ್ತ ತೋರಿಸುವುದರಿಂದ ಅದರ ಶಕ್ತಿಯು ಶುದ್ಧೀಕರಣಗೊಳ್ಳುತ್ತದೆ.
  • ಸೂರ್ಯನ ಬೆಳಕು: ಸೂರ್ಯನ ಶಾಖವು ಅತ್ಯುತ್ತಮ ನೈಸರ್ಗಿಕ ಶುದ್ಧೀಕರಣಕಾರಕ. ಸಾಧ್ಯವಾದರೆ ಆ ವಸ್ತುವನ್ನು ಒಂದು ದಿನ ಪೂರ್ತಿ ಬಿಸಿಲಿನಲ್ಲಿ ಇರಿಸಿ. ಇದರಿಂದ ಅದರಲ್ಲಿರುವ ನಕಾರಾತ್ಮಕ ಕಂಪನಗಳು ನಾಶವಾಗುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಂಗಭದ್ರಾ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಆತಂಕ: ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಭೀತಿ – Kannada News | Tungabhadra Dam Hits Dead Storage: Drinking Water Crisis Looms Over 4 Districts as Water Levels Drop to 10 TMC

ತುಂಗಭದ್ರಾ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಆತಂಕImage Credit source: tv9

ಹೊಸಪೇಟೆ, ಮೇ 6: ಕಲ್ಯಾಣ ಕರ್ನಾಟಕದ ಜೀವನಾಡಿ ಎಂದೇ ಕರೆಯಲ್ಪಡುವ ತುಂಗಭದ್ರಾ ಜಲಾಶಯದಲ್ಲಿ (TB Dam) ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಇದೀಗ ‘ಡೆಡ್ ಸ್ಟೋರೇಜ್’ ಹಂತಕ್ಕೆ ತಲುಪಿದೆ. ಜಲಾಶಯದಲ್ಲಿ ಪ್ರಸ್ತುತ ಕೇವಲ 10 ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು, ಮುಂಬರುವ ಮಳೆಗಾಲದವರೆಗೆ ಈ ನೀರನ್ನು ನಾಲ್ಕು ಜಿಲ್ಲೆಗಳಿಗೆ ಹಂಚಿಕೆ ಮಾಡುವುದು ತುಂಗಭದ್ರಾ ಮಂಡಳಿಗೆ (TB Board) ದೊಡ್ಡ ಸವಾಲಾಗಿ ಪರಿಣಮಿಸಿದೆ.

ಮುಖ್ಯಾಂಶಗಳು

  • 105 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ ಲಭ್ಯವಿರುವುದು ಕೇವಲ 10 ಟಿಎಂಸಿ ನೀರು ಮಾತ್ರ.
  • ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ಮುಂದಿನ ಒಂದು ತಿಂಗಳು ಇದೇ ನೀರನ್ನು ಪೂರೈಸುವ ಅನಿವಾರ್ಯತೆ ಇದೆ.
  • 54 ಕೋಟಿ ರೂ. ವೆಚ್ಚದಲ್ಲಿ ಡ್ಯಾಂನ 33 ಕ್ರಸ್ಟ್ ಗೇಟ್‌ಗಳ ದುರಸ್ತಿ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.

ನೀರಿನ ಹಂಚಿಕೆ ಸವಾಲು

ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ, ಇರುವ ನೀರನ್ನು ಅತ್ಯಂತ ಜಾಗರೂಕತೆಯಿಂದ ಬಳಕೆ ಮಾಡಬೇಕಿದೆ. ಈಗಾಗಲೇ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಮೂಲಕ ನೀರನ್ನು ಹರಿಸಲಾಗುತ್ತಿದ್ದು, ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಭಾಗದ ಕೆರೆಗಳನ್ನು ತುಂಬಿಸಿಕೊಳ್ಳಲಾಗುತ್ತಿದೆ. ಮೇ ತಿಂಗಳ ಬಿಸಿಲಿನ ತಾಪಕ್ಕೆ ನೀರಿನ ಆವಿಯಾಗುವಿಕೆ ಹೆಚ್ಚಾಗುವುದರಿಂದ, ಜೂನ್‌ನಲ್ಲಿ ಮಳೆ ಬರುವವರೆಗೂ ಕುಡಿಯುವ ನೀರಿಗೆ ತತ್ವಾರ ಉಂಟಾಗದಂತೆ ನಿಭಾಯಿಸುವುದು ಅಧಿಕಾರಿಗಳಿಗೆ ಕಷ್ಟಸಾಧ್ಯ ಎನಿಸುತ್ತಿದೆ.

ಗೇಟ್ ರಿಪೇರಿ ಕಾರ್ಯ ಪೂರ್ಣ

ಮತ್ತೊಂದೆಡೆ, ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಕೈಗೊಳ್ಳಲಾಗಿದ್ದ 33 ಕ್ರಸ್ಟ್ ಗೇಟ್‌ಗಳ ದುರಸ್ತಿ ಕಾರ್ಯ ಇದೀಗ ಮುಕ್ತಾಯವಾಗಿದೆ. ಸುಮಾರು 54 ಕೋಟಿ ರೂ. ವೆಚ್ಚದಲ್ಲಿ ಗೇಟ್‌ಗಳನ್ನು ಬದಲಾಯಿಸಲಾಗಿದ್ದು, ಮುಂದಿನ 50 ವರ್ಷಗಳ ಕಾಲ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲದೆ ಕಾರ್ಯನಿರ್ವಹಿಸಲಿವೆ ಎಂದು ತಜ್ಞರು ತಿಳಿಸಿದ್ದಾರೆ. ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಲಾಶಯಕ್ಕೆ ಭೇಟಿ ನೀಡಿ ರಿಪೇರಿ ಕಾರ್ಯವನ್ನು ಪರಿಶೀಲಿಸಿದ್ದಾರೆ. ಮೇ 15 ರಂದು ವಿಶೇಷ ಪೂಜೆಯ ಮೂಲಕ ದುರಸ್ತಿಗೊಂಡ ಗೇಟ್‌ಗಳ ಉದ್ಘಾಟನೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಜಲಾಶಯಕ್ಕೆ ಅಳವಡಿಸಿರುವ ಕ್ರಸ್ಟ್ ಗೇಟ್ ವೀಕ್ಷಿಸಿದ ಡಿಸಿಎಂ ಡಿಕೆ!

ಜಲಾಶಯದ ಗೇಟ್‌ಗಳು ದುರಸ್ತಿಯಾಗಿರುವುದು ರೈತರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಜೂನ್ ತಿಂಗಳ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗುವ ನಿರೀಕ್ಷೆಯಿದ್ದು, ಆ ಬಳಿಕವಷ್ಟೇ ಅದ್ದೂರಿಯಾಗಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಲಿದೆ. ಅಲ್ಲಿಯವರೆಗೂ ಲಭ್ಯವಿರುವ ಅಲ್ಪ ಪ್ರಮಾಣದ ನೀರನ್ನೇ ಮಿತವಾಗಿ ಬಳಸಿ ಬೇಸಿಗೆಯನ್ನು ಕಳೆಯಬೇಕಾದ ಅನಿವಾರ್ಯತೆ ನಾಲ್ಕು ಜಿಲ್ಲೆಗಳ ಜನರಿಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

15 ದಿನದಲ್ಲಿ 65 ಕೋಟಿ ಮೌಲ್ಯದ ಡ್ರಗ್ಸ್ ಸೀಜ್!: ಬೆಂಗಳೂರಿಗೆ ಡ್ರಗ್ಸ್ ಹರಿದು ಬರುತ್ತಿರುವುದು ಏಕೆ? ಪೊಲೀಸರು ಪತ್ತೆಹಚ್ಚಿದ 11 ಶಾಕಿಂಗ್ ಕಾರಣಗಳು! – Kannada News | Mega Drug Bust in Bengaluru: Police Uncover Global Trafficking Routes and Youth Targets

ಬೆಂಗಳೂರು, ಮೇ.6: ಇತಿಹಾಸದಲ್ಲೇ ಕಾಣದ ರೀತಿಯಲ್ಲಿ ಬೆಂಗಳೂರು ನಗರಕ್ಕೆ ಬೃಹತ್ ಪ್ರಮಾಣದಲ್ಲಿ ಮಾದಕ ದ್ರವ್ಯಗಳು ಹರಿದು ಬರುತ್ತಿವೆ. ಪೊಲೀಸರು ಎಷ್ಟೇ ಹದ್ದಿನ ಕಣ್ಣಿಟ್ಟಿದ್ದರೂ, ಡ್ರಗ್ಸ್ ಸಪ್ಲೈ ಜಾಲ ಮಾತ್ರ ಕಡಿಮೆಯಾಗುತ್ತಿಲ್ಲ. ಇದು ನಗರದ ಜನತೆಯಲ್ಲಿ ಮತ್ತು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಳೆದ ಕೇವಲ 15 ದಿನಗಳಲ್ಲಿ ಬೆಂಗಳೂರು ಪೊಲೀಸರು ನಗರದ ವಿವಿಧೆಡೆ ದಾಳಿ ನಡೆಸಿ ಬರೋಬ್ಬರಿ 65 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಅಂಕಿ-ಅಂಶವೇ ನಗರದಲ್ಲಿ ಡ್ರಗ್ಸ್ ಜಾಲ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಮಾದಕ ದ್ರವ್ಯಗಳು ದೇಶದ ಮೂಲೆ ಮೂಲೆಗಳಿಂದ ಮತ್ತು ವಿದೇಶಗಳಿಂದಲ್ಲೂ ನಗರಕ್ಕೆ ಬರುತ್ತಿವೆ. ದೆಹಲಿ, ಮುಂಬೈ ಸೇರಿದಂತೆ ಥೈಲ್ಯಾಂಡ್ ಮತ್ತು ಆಫ್ರಿಕಾ ದೇಶಗಳಿಂದ ನಗರಕ್ಕೆ ತಲುಪುತ್ತಿವೆ. ವಿಶಾಖಪಟ್ಟಣಂ (ವೈಜಾಗ್) ಮತ್ತು ಒಡಿಶಾ ಭಾಗಗಳಿಂದ ಅತಿ ಹೆಚ್ಚಾಗಿ ಸರಬರಾಜಾಗುತ್ತಿದೆ.

ಇವರ ಟಾರ್ಗೆಟ್ ಯಾರು ?:

ನಗರದಲ್ಲಿ ಹೆಚ್ಚುತ್ತಿರುವ ಐಟಿ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಶ್ರೀಮಂತ ವರ್ಗದ ಯುವಜನತೆಯನ್ನು ಗುರಿಯಾಗಿಸಿಕೊಂಡು ಈ ಜಾಲ ಕೆಲಸ ಮಾಡುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಬೇಡಿಕೆ ಏಕಿದೆ ಮತ್ತು ಇದರ ಹಿಂದಿರುವ ಕಿಂಗ್‌ಪಿನ್‌ಗಳ ಬಗ್ಗೆ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರಿಗೆ ಡ್ರಗ್ಸ್ ಹರಿದು ಬರುತ್ತಿರುವುದು ಏಕೆ? ಪೊಲೀಸರು ಪತ್ತೆಹಚ್ಚಿದ 11 ಶಾಕಿಂಗ್ ಕಾರಣಗಳು!

ಯುವಜನತೆಯ ಬೇಡಿಕೆ: ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಜನತೆಯಲ್ಲಿ ಡ್ರಗ್ಸ್‌ಗೆ ಇರುವ ಅತಿಯಾದ ಕ್ರೇಜ್ ಈ ದಂಧೆಗೆ ದೊಡ್ಡ ಮಾರುಕಟ್ಟೆ ಒದಗಿಸಿದೆ.

ಥೈಲ್ಯಾಂಡ್ ನಂಟು: ಥೈಲ್ಯಾಂಡ್‌ನಲ್ಲಿ ನೆಲೆಸಿರುವ ಕೆಲವು ಭಾರತೀಯರು ಅಲ್ಲಿಂದ ನೇರವಾಗಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಾರೆ.

ಪ್ಯಾಕಿಂಗ್ ತಂತ್ರ: ಥೈಲ್ಯಾಂಡ್‌ನಲ್ಲಿ ಸುಲಭವಾಗಿ ಸಿಗುವ ಗಾಂಜಾ ಮತ್ತು ಮಾದಕ ವಸ್ತುಗಳನ್ನು ‘ಎಂಜಿನಿಯರಿಂಗ್ ಪ್ಯಾಕಿಂಗ್’ ಮೂಲಕ ಕಾರ್ಗೋ ಮುಖಾಂತರ ಸಾಗಿಸಲಾಗುತ್ತಿದೆ.

ಚಿನ್ನದ ಸ್ಮಗ್ಲಿಂಗ್ ಬದಲಿಗೆ ಡ್ರಗ್ಸ್: ಚಿನ್ನದ ಕಳ್ಳಸಾಗಣೆ ಮೇಲೆ ನಿಗಾ ಹೆಚ್ಚಾದ ಬೆನ್ನಲ್ಲೇ, ಸ್ಮಗ್ಲರ್‌ಗಳು ಹೊರದೇಶದಿಂದ ಡ್ರಗ್ಸ್ ತರುವುದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

ಕಡಿಮೆ ವೆಚ್ಚದ ವ್ಯಸನ: ಮದ್ಯಪಾನಕ್ಕೆ ಮಾಡುವ ಖರ್ಚಿಗಿಂತ ಗಾಂಜಾ ಸೇವನೆಗೆ ಕಡಿಮೆ ಖರ್ಚಾಗುವುದು ವ್ಯಸನಿಗಳನ್ನು ಆಕರ್ಷಿಸುತ್ತಿದೆ.

ಸಿಂಥೆಟಿಕ್ ಡ್ರಗ್ಸ್ ಮೊರೆ: ಹೈ-ಪ್ರೊಫೈಲ್ ಜನರು ಮತ್ತು ಶ್ರೀಮಂತರು ಹೆಚ್ಚಾಗಿ ಸಿಂಥೆಟಿಕ್ ಡ್ರಗ್ಸ್ ಬೆನ್ನತ್ತುತ್ತಿದ್ದಾರೆ.

ಥೈಲ್ಯಾಂಡ್‌ನಿಂದ ಎಲ್‌ಎಸ್‌ಡಿ ಆಮದು: ಕಳೆದ ವಾರ ಸಿಕ್ಕಿದ 19 ಸಾವಿರ ಎಲ್‌ಎಸ್‌ಡಿ (LSD) ಸ್ಟ್ರಿಪ್ಸ್‌ಗಳು ಸಹ ಥೈಲ್ಯಾಂಡ್‌ನಿಂದಲೇ ಬಂದಿರುವುದು ಪತ್ತೆಯಾಗಿದೆ.

ವ್ಯಸನಿಗಳ ವಿಚಾರಣೆ: ಡ್ರಗ್ಸ್ ಸೇವಿಸುವವರ ಮೇಲೆ ಕೇಸ್ ದಾಖಲಿಸಿ ವಿಚಾರಣೆ ನಡೆಸುತ್ತಿರುವುದರಿಂದ ಸಪ್ಲೈ ಮಾಡುವವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿದೆ.

ಬೆಂಗಳೂರು ಈಗ ಟ್ರಾನ್ಸಿಟ್ ಹಬ್: ಬೆಂಗಳೂರಿಗೆ ಡ್ರಗ್ಸ್ ತಂದು ಇಲ್ಲಿಂದ ಬೇರೆ ನಗರಗಳಿಗೆ ರವಾನಿಸುವ ಜಾಲವೂ ಸಕ್ರಿಯವಾಗಿದೆ.

ತೀವ್ರ ಕಾರ್ಯಾಚರಣೆ: ಪೊಲೀಸರು ಹಿಂದೆಂದಿಗಿಂತಲೂ ಕಟ್ಟುನಿಟ್ಟಾಗಿ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಜಂಟಿ ತನಿಖೆ: ರಾಜ್ಯ ಪೊಲೀಸ್ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು (NCB ನಂತಹ ಸಂಸ್ಥೆಗಳು) ಒಟ್ಟಾಗಿ ಕೆಲಸ ಮಾಡುತ್ತಿರುವುದು ಈ ಜಾಲವನ್ನು ಭೇದಿಸಲು ಸಹಕಾರಿಯಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪೊಲೀಸರ ಮೆಗಾ ಡ್ರಗ್ ಬೇಟೆ: ಒಂದೇ ವಾರದಲ್ಲಿ 50 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

13 ಕೆಜಿಗೂ ಹೆಚ್ಚು ಮಾದಕ ವಸ್ತುಗಳು ಸೀಜ್!:

ಈ ಹಿಂದೆ ಮಾದಕ ಮುಕ್ತ ಬೆಂಗಳೂರು ನಿರ್ಮಾಣದ ನಿಟ್ಟಿನಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ್ದ ಪೊಲೀಸರು, ನಗರದ ಎರಡು ಪ್ರಮುಖ ಭಾಗಗಳಲ್ಲಿ ದಾಳಿ ನಡೆಸಿ ಬರೋಬ್ಬರಿ 14.75 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ನಂದಿನಿ ಲೇಔಟ್ ಮತ್ತು ಯಶವಂತಪುರ ಪೊಲೀಸರು ನಡೆಸಿದ ಈ ದಾಳಿಯಲ್ಲಿ ಒಟ್ಟು 13.7 ಕೆಜಿ ಹೈಡ್ರೋ ಗಾಂಜಾ ಮತ್ತು ಅಪಾರ ಪ್ರಮಾಣದ ಎಂಡಿಎಂಎ (MDMA) ಮಾದಕ ವಸ್ತುಗಳನ್ನು ಸೀಜ್ ಮಾಡಲಾಗಿತ್ತು. ಈ ದಂಧೆಯಲ್ಲಿ ತೊಡಗಿದ್ದ ಕೇರಳ ಮೂಲದ ಪೆಡ್ಲರ್‌ಗಳು ಹಾಗೂ ಓರ್ವ ರೌಡಿಶೀಟರ್ ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಕಂಬಿ ಹಿಂದೆ ತಳ್ಳಿದ್ದರು. ಬಂಧಿತ ಆರೋಪಿಗಳು ವಿದೇಶಿ ಮೂಲದವರು ಮತ್ತು ನೈಜೀರಿಯಾ ಪ್ರಜೆಗಳೊಂದಿಗೆ ಸಂಪರ್ಕ ಹೊಂದಿರುವ ಅನುಮಾನ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.

ಕೇವಲ ಒಂದು ವಾರದಲ್ಲಿ 50 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!

ಏಪ್ರಿಲ್​​ 29ರಂದು ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಮಾಫಿಯಾದ ಬೆನ್ನೆಲುಬು ಮುರಿಯಲು ಸಂಕಲ್ಪ ಮಾಡಿರುವ ನಗರ ಪೊಲೀಸರು ಐತಿಹಾಸಿಕ ಕಾರ್ಯಾಚರಣೆ ನಡೆಸಿದ್ದರು. ಏಪ್ರಿಲ್ 29ರಂದು ವರದಿಯಾದಂತೆ, ಕೇವಲ ಒಂದು ವಾರದ ಅವಧಿಯಲ್ಲಿ ಪೊಲೀಸರು ಬರೋಬ್ಬರಿ 50 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ನಗರದ ವಿವಿಧ ವಿಭಾಗಗಳ ಪೊಲೀಸರು ಸಂಘಟಿತವಾಗಿ ಮತ್ತು ಏಕಕಾಲದಲ್ಲಿ ದಾಳಿಗಳನ್ನು ನಡೆಸುವ ಮೂಲಕ ಅಕ್ರಮ ಮಾದಕ ದ್ರವ್ಯ ಜಾಲವನ್ನು ಪತ್ತೆಹಚ್ಚಿದ್ದರು. ಡ್ರಗ್ಸ್ ಮಾಫಿಯಾವನ್ನು ಬುಡಸಹಿತ ಕಿತ್ತೆಸೆಯಲು ಪೊಲೀಸರು ಈ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಮಾರಾಟಗಾರರಲ್ಲಿ ಭೀತಿ ಮೂಡಿಸಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:54 am, Wed, 6 May 26

Source link

ಮದುವೆ ಮಂಟಪಕ್ಕೇ ನುಗ್ಗಿ ಬಂಗಾರ, ಬೆಳ್ಳಿ ಕದ್ದ ಕಳ್ಳ: ಎಸ್ಕೇಪ್​​ ಆಗುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ – Kannada News | Hospet Kalyana Mantapa Theft: Gold and Silver Stolen, Thief Caught on CCTV

ವಿಜಯನಗರ/ದೇವನಹಳ್ಳಿ, ಮೇ 06: ಮದುವೆ ಮಂಟಪಕ್ಕೇ ನುಗ್ಗಿ ಕಳ್ಳನೋರ್ವ ವಧುವಿಗೆ ಹಾಕಬೇಕಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳಿದ್ದ ಬ್ಯಾಗ್​​ ಕಳ್ಳತನ ನಡೆಸಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ಸಿದ್ಧಿಪ್ರಿಯ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಬ್ಯಾಗ್ ಸಮೇತ ಕಳ್ಳ ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೇ 4ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 40 ಗ್ರಾಂನ ಚಿನ್ನದ ಸರ, ಅರ್ಧ ಕೆ.ಜಿ. ಬೆಳ್ಳಿ, 10 ಸಾವಿರ ನಗದು ಮತ್ತು ಎರಡು ಮೊಬೈಲ್​​ ಫೋನ್​​ಗಳನ್ನು ಖದೀಮ ದೋಚಿದ್ದಾನೆ ಎನ್ನಲಾಗಿದೆ.

  • ಮದುವೆ ಮಂಟಪಕ್ಕೇ ನುಗ್ಗಿ ಬಂಗಾರ-ಬೆಳ್ಳಿ ಕದ್ದ ಕಳ್ಳ
  • ಹೊಸಪೇಟೆಯ ಸಿದ್ಧಿಪ್ರಿಯ ಕಲ್ಯಾಣ ಮಂಟಪದಲ್ಲಿ ಘಟನೆ
  • ಕಳ್ಳ ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

ಇದನ್ನೂ ಓದಿ: ಹೊಸಪೇಟೆ ಸರಣಿ ಅಪಘಾತ; ಕನ್ಯೆ ನೋಡಲು ಹೊರಟಿದ್ದ ಆ ಮೂರು ಜನ ಸೇರಿದ್ದು ಮಸಣಕ್ಕೆ!

ಪೊಲೀಸರು ದೂರು ದಾಖಲಿಸಿಕೊಳ್ಳದ ಆರೋಪ

ಕಳ್ಳತನ ನಡೆದಿರುವ ಬಗ್ಗೆ ವಿನೋದ ಎನ್ನುವರು ದೂರು ಕೊಡಲು ಮುಂದಾಗಿದ್ದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಒಂದೇ ಬಿಲ್‌ನಲ್ಲಿ ನಾಲ್ಕು ಐಟಂಗಳು ಇವೆ, ಇದರಲ್ಲಿ ಎರಡು ಐಟಂ ಕಳ್ಳತನ ಆಗಿದೆ ಎಂದು ಹೇಳಿದ್ದೀರಿ. ಹೀಗಾಗಿ ಉಳಿದ ಎರಡು ಐಟಂ ತೆಗೆದುಕೊಂಡು ಬನ್ನಿ , ಆಮೇಲೆ ದೂರು ದಾಖಲಿಸಿಕೊಳ್ಳುತ್ತೇವೆಂದು ಪೊಲೀಸರು ಹೇಳಿದ್ದಾರಂತೆ. ಹೀಗಾಗಿ ಘಟನೆ ನಡೆದು ಎರಡು ದಿನವಾದರೂ ಚಿತ್ತವಾಡ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ಬಗ್ಗೆ ಇನ್ನೂ ದುರು ದಾಖಲಾಗಿಲ್ಲ.

ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿ ಕಳವು

ತಡರಾತ್ರಿ ಬಂದ ಕಳ್ಳರು ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿಯನ್ನು ಕದ್ದೊಯ್ದಿರುವ ಘಟನೆ ಹೊಸಕೋಟೆ ನಗರದ ನಂದಶ್ರೀ ಕಲ್ಯಾಣ ಮಂಟಪ ಬಳಿ ನಡೆದಿದೆ. ಬೈಕ್​​ನಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಕಳ್ಳತನ ನಡೆಸಿದ್ದು, ಬೈಕ್​​ ಕದಿಯುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವ್ಹೀಲಿಂಗ್​​ ಮಾಡುವ ಪುಂಡರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಕಳ್ಳರು ಬಂದಿದ್ದ ಬೈಕ್​​ಗೆ ನಂಬರ್​​ ಪ್ಲೇಟ್​​ ಕೂಡ ಇರಲಿಲ್ಲ. ಜೊತೆಗೆ ಬೈಕ್​​ನ ಮಾಡಿಫಿಕೇಷನ್ ಮಾಡಲಾಗಿರೋದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಸ್ಕೂಟಿಯ ಹ್ಯಾಂಡಲ್​​ ಲಾಕ್​​ನ ಕಾಲಿನಿಂದ ಮುರಿದು ಆರೋಪಿಗಳು ಕಳ್ಳತನ ನಡೆಸಿದ್ದು, ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:59 am, Wed, 6 May 26

Source link

ಬಸ್ಸಿನ ಛಾವಣಿಗಿಂತ ಎತ್ತರವಿದ್ದ ಕಂಡಕ್ಟರ್​ಗೆ ಬೆನ್ನು, ಕುತ್ತಿಗೆ ನೋವು: ಕೆಲಸವನ್ನೇ ಬದಲಿಸಿ ಮಾದರಿಯಾದ ಆರ್​ಟಿಸಿ – Kannada News | Telangana RTC Reassigns Tall Conductor Amin Ansari Due to Height Related Pain

ತೆಲಂಗಾಣ, ಮೇ 06: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಉದ್ಯೋಗಿಯೊಬ್ಬರ ವಿಶಿಷ್ಟ ದೈಹಿಕ ಸಮಸ್ಯೆಯನ್ನು ಅರ್ಥಮಾಡಿಕೊಂಡು, ಅವರಿಗೆ ಪೂರಕವಾದ ಕೆಲಸ ನೀಡುವ ಮೂಲಕ ತೆಲಂಗಾಣ(Telangana) ಸಾರಿಗೆ ಸಂಸ್ಥೆಯು ಮಾದರಿಯಾಗಿದೆ. ಸುಮಾರು 198 ಸೆಂಟಿಮೀಟರ್ (6 ಅಡಿ 6 ಇಂಚು) ಎತ್ತರವಿರುವ ಕಂಡಕ್ಟರ್ ಅಮೀನ್ ಅಹ್ಮದ್ ಅನ್ಸಾರಿ ಅವರಿಗೆ ಬಸ್ಸಿನ ಒಳಗಿನ ಇಕ್ಕಟ್ಟಾದ ಜಾಗದಲ್ಲಿ ಕೆಲಸ ಮಾಡುವುದು ಒಂದು ದೊಡ್ಡ ಶಿಕ್ಷೆಯಾಗಿತ್ತು.

ಬಗ್ಗಿದ ಕುತ್ತಿಗೆ, ಬೆನ್ನಿಗಂಟಿದ ನೋವು
ಮೆಹದಿಪಟ್ನಂ ಡಿಪೋಗೆ ಸೇರಿದ ಅನ್ಸಾರಿ ಅವರಿಗೆ ಬಸ್ಸಿನ ಒಳಗಿನ ಸೀಮಿತ ಹೆಡ್‌ರೂಮ್ ಮತ್ತು ಕಿರಿದಾದ ಹಜಾರಗಳಲ್ಲಿ ಸಂಚರಿಸುವುದು ದೈಹಿಕವಾಗಿ ಅಸಾಧ್ಯವಾಗಿತ್ತು. ಬಸ್ಸಿನ ಒಳಗೆ ನೇರವಾಗಿ ನಿಲ್ಲಲು ಸಾಧ್ಯವಾಗದ ಕಾರಣ, ಅವರು ಸದಾ ಕುತ್ತಿಗೆ ಬಗ್ಗಿಸಿಯೇ ಟಿಕೆಟ್ ನೀಡಬೇಕಿತ್ತು.

ಈ ಕಾರಣದಿಂದಾಗಿ ಅವರು ತೀವ್ರವಾದ ಕುತ್ತಿಗೆ ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದರು. ಏಪ್ರಿಲ್ 28 ರಂದು ಅವರ ತಾತ್ಕಾಲಿಕ ಬದಲಿ ಕರ್ತವ್ಯದ ಅವಧಿ ಮುಗಿದು ಮತ್ತೆ ಬಸ್ಸಿಗೆ ಮರಳಿದಾಗ, ಅವರ ನೋವು ಉಲ್ಬಣಿಸಿತ್ತು. ಅನ್ಸಾರಿ ಅವರ ಈ ವಿಶೇಷ ಪರಿಸ್ಥಿತಿಯನ್ನು ಗಮನಿಸಿದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮವು (TGSRTC), ಮೇ 5 ರಂದು ಹೈದರಾಬಾದ್‌ನ ಬಸ್ ಭವನದಿಂದ ಅಧಿಕೃತ ಆದೇಶವೊಂದನ್ನು ಹೊರಡಿಸಿದೆ.

ಮತ್ತಷ್ಟು ಓದಿ: ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ

ಅನ್ಸಾರಿ ಅವರಿಗೆ ಅವರ ಎತ್ತರಕ್ಕೆ ಪೂರಕವಾದ ಕರ್ತವ್ಯವನ್ನು ಮರು ನಿಯೋಜಿಸಲಾಗಿದೆ. ಇನ್ನು ಮುಂದೆ ಅವರನ್ನು ಬಸ್ ಪಾಸ್ ವಿಭಾಗಗಳಲ್ಲಿ ಅಥವಾ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಕಚೇರಿ ಆಧಾರಿತ ಕೆಲಸಗಳಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ನಿಗಮದ ಈ ಪ್ರಾಯೋಗಿಕ ನಿರ್ಧಾರವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಕೆಲಸದ ಸ್ಥಳವು ಉದ್ಯೋಗಿಗಳ ಅಗತ್ಯಕ್ಕೆ ತಕ್ಕಂತೆ ಬದಲಾಗಬೇಕು ಎಂಬ ಚರ್ಚೆಯನ್ನು ಇದು ಹುಟ್ಟುಹಾಕಿದೆ. ಉತ್ಪಾದಕತೆಗೆ ಧಕ್ಕೆಯಾಗದಂತೆ ಉದ್ಯೋಗಿಯ ಆರೋಗ್ಯವನ್ನು ಗೌರವಿಸಿದ ಆರ್‌ಟಿಸಿ ಕ್ರಮವನ್ನು ಜನರು ಶ್ಲಾಘಿಸಿದ್ದಾರೆ.

ಈ ಬದಲಾವಣೆಯು ಅಮೀನ್ ಅಹ್ಮದ್ ಅನ್ಸಾರಿ ಅವರಿಗೆ ದೈಹಿಕ ಯಾತನೆಯಿಂದ ಮುಕ್ತಿ ನೀಡುವುದಲ್ಲದೆ, ಅವರು ನಿಟ್ಟುಸಿರು ಬಿಟ್ಟು ನೆಮ್ಮದಿಯಿಂದ ಕೆಲಸ ನಿರ್ವಹಿಸಲು ಸಹಕಾರಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link