All posts by nagaraj11081993

Gold Rate Today: 14,315 ರೂಗೆ ಇಳಿದ ಆಭರಣ ಚಿನ್ನದ ಬೆಲೆ; ಇಲ್ಲಿದೆ ದರಪಟ್ಟಿ – Kannada News | Gold Price Today on 20th February 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಫೆಬ್ರುವರಿ 20: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಳೆದ ಕೆಲ ತಿಂಗಳಿಂದ ಕಂಡಿದ್ದ ವಿಪರೀತ ಬೆಲೆ ಏರಿಕೆ ಆಟ ಇದೀಗ ಕಡಿಮೆಗೊಂಡಿದೆ. ಬೆಲೆಗಳು ಸ್ಥಿರಗೊಳ್ಳುವ ಲಕ್ಷಣ ಕಾಣುತ್ತಿದೆ. ನಿನ್ನೆ ಗುರುವಾರ 210 ರೂಗಳಷ್ಟು ಏರಿಕೆ ಆಗಿದ್ದ ಚಿನ್ನದ ಬೆಲೆ (Gold Rates) ಇವತ್ತು 30 ರೂ ಕಡಿಮೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ನಿನ್ನೆ 15 ರೂ ಏರಿಕೆ ಆಗಿತ್ತು. ಇವತ್ತು ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ವಿದೇಶಗಳಲ್ಲಿ ಹಲವೆಡೆ ಬೆಲೆಗಳ ಅಲ್ಪ ಏರಿಳಿಕೆಗಳಾಗಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,56,170 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,43,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 20ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,617 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,315 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,713 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 270 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,617 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,315 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 270 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,315 ರೂ
  • ಚೆನ್ನೈ: 14,420 ರೂ
  • ಮುಂಬೈ: 14,315 ರೂ
  • ದೆಹಲಿ: 14,330 ರೂ
  • ಕೋಲ್ಕತಾ: 14,315 ರೂ
  • ಕೇರಳ: 14,315 ರೂ
  • ಅಹ್ಮದಾಬಾದ್: 14,320 ರೂ
  • ಜೈಪುರ್: 14,330 ರೂ
  • ಲಕ್ನೋ: 14,330 ರೂ
  • ಭುವನೇಶ್ವರ್: 14,315 ರೂ

ಇದನ್ನೂ ಓದಿ: ದೆಹಲಿಯ ಎಐ ಶೃಂಗಸಭೆಯಲ್ಲಿ 8 ವರ್ಷದ ಬಾಲಕನಿಂದ ಮುಖ್ಯ ಭಾಷಣ; ಏನಿವನ ಸಾಧನೆ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 598 ರಿಂಗಿಟ್ (13,913 ರುಪಾಯಿ)
  • ದುಬೈ: 557.25 ಡಿರಾಮ್ (13,802 ರುಪಾಯಿ)
  • ಅಮೆರಿಕ: 156 ಡಾಲರ್ (14,191 ರುಪಾಯಿ)
  • ಸಿಂಗಾಪುರ: 198.20 ಸಿಂಗಾಪುರ್ ಡಾಲರ್ (14,206 ರುಪಾಯಿ)
  • ಕತಾರ್: 553.50 ಕತಾರಿ ರಿಯಾಲ್ (14,025 ರೂ)
  • ಸೌದಿ ಅರೇಬಿಯಾ: 565 ಸೌದಿ ರಿಯಾಲ್ (13,703 ರುಪಾಯಿ)
  • ಓಮನ್: 59.35 ಒಮಾನಿ ರಿಯಾಲ್ (14,025 ರುಪಾಯಿ)
  • ಕುವೇತ್: 45.42 ಕುವೇತಿ ದಿನಾರ್ (13,526 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 270 ರೂ
  • ಚೆನ್ನೈ: 270 ರೂ
  • ಮುಂಬೈ: 270 ರೂ
  • ದೆಹಲಿ: 270 ರೂ
  • ಕೋಲ್ಕತಾ: 270 ರೂ
  • ಕೇರಳ: 270 ರೂ
  • ಅಹ್ಮದಾಬಾದ್: 270 ರೂ
  • ಜೈಪುರ್: 270 ರೂ
  • ಲಕ್ನೋ: 270 ರೂ
  • ಭುವನೇಶ್ವರ್: 270 ರೂ
  • ಪುಣೆ: 270

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ‘ಪರಮ್’ ಗೆ ಪ್ರಧಾನಿ ಮೋದಿ ಫಿದಾ! ಇದು ಭಾರತದ ಅತ್ಯಂತ ಶಕ್ತಿಶಾಲಿ ರೋಬೋಟ್ ನಾಯಿ – Kannada News | Meet Param: India’s Most Powerful Native Robot Dog

ಬೆಂಗಳೂರು, ಫೆ.20: ಬೆಂಗಳೂರು ಮೂಲದ ರೋಬೋಟಿಕ್ಸ್ ಸ್ಟಾರ್ಟ್-ಅಪ್ ‘ಜನರಲ್ ಅಟಾನಮಿ’ (General Autonomy) ಅಭಿವೃದ್ಧಿಪಡಿಸಿರುವ ಭಾರತದ ಮೊದಲ ಸ್ವದೇಶಿ ನಿರ್ಮಿತ ರೋಬೋಟಿಕ್ ನಾಯಿ ‘ಪರಮ್’ (Param) ಸುದ್ದಿಯಲ್ಲಿದೆ. ದೆಹಲಿಯಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026’ ರಲ್ಲಿ ಇದನ್ನು ಅನಾವರಣಗೊಳಿಸಲಾಗಿದೆ. ಕಂಪನಿಯು ಪರಮ್ ಅನ್ನು “ಭಾರತದ ಅತ್ಯಂತ ಶಕ್ತಿಶಾಲಿ ಸ್ಥಳೀಯ ರೋಬೋಟ್ ನಾಯಿ” ಎಂದು ಬಣ್ಣಿಸಿದೆ. ‘ಪರಮ್’ ಕೇವಲ ಭಾರತದಲ್ಲಿ ಜೋಡಿಸಲಾದ ಯಂತ್ರವಲ್ಲ, ಬದಲಿಗೆ ಭಾರತೀಯ ಇಂಜಿನಿಯರ್‌ಗಳು ಮೊದಲಿನಿಂದಲೂ ವಿನ್ಯಾಸಗೊಳಿಸಿ ನಿರ್ಮಿಸಿರುವ ಸಂಪೂರ್ಣ ಸ್ವದೇಶಿ ರೋಬೋಟ್ ಆಗಿದೆ.

ಈ ಯೋಜನೆಯನ್ನು ಕೇವಲ 7 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ಈ ಹಿಂದೆ ಹ್ಯೂಮನಾಯ್ಡ್ ರೋಬೋಟ್ ನಿರ್ಮಿಸಿದ ಮಾದರಿಯನ್ನು ತಂಡವು ಇಲ್ಲಿ ಬಳಸಿಕೊಂಡಿದ್ದು, ಈ ರೋಬೋಟ್ ಅದ್ಭುತ ಸಾಮರ್ಥ್ಯಗಳನ್ನು ಕೂಡ ಹೊಂದಿದೆ. ಇದು ಸ್ವತಂತ್ರವಾಗಿ ಸಂಚರಿಸಬಲ್ಲದು, ದಾರಿ ಮಧ್ಯೆ ಬರುವ ಅಡೆತಡೆಗಳನ್ನು ಗುರುತಿಸಿ ತನ್ನ ಹಾದಿಯನ್ನು ಬದಲಿಸಿಕೊಳ್ಳುತ್ತದೆ. ಇದು 30 ಸೆಂಟಿಮೀಟರ್ ಎತ್ತರದ ಮೆಟ್ಟಿಲುಗಳನ್ನು ಹತ್ತಬಲ್ಲದು. ಕಡಿಮೆ ಎತ್ತರದ ಜಾಗಗಳಲ್ಲಿ ‘ಏಡಿ ನಡಿಗೆ’ಯಂತೆ (Crab walk) ಸಾಗುತ್ತದೆ. ಕೆಳಗೆ ಬಿದ್ದರೆ ತಾನಾಗಿಯೇ ಎದ್ದು ನಿಲ್ಲುವ ಸಾಮರ್ಥ್ಯವನ್ನು ಕೂಡ ಹೊಂದಿದೆ.

ಇದನ್ನೂ ಓದಿ: ಹಸುಗಳಿಗೂ AI ಅನ್ವಯಿಸುವ ಬಗ್ಗೆ ಮೋದಿ ತುರ್ತು ನಿರ್ಧಾರ; ನಂದನ್ ನಿಲೇಕಣಿ ಬಣ್ಣನೆ

ಇಲ್ಲಿದೆ ನೋಡಿ ಪೋಸ್ಟ್:

ಸ್ಟಾರ್ಟ್-ಅಪ್ ಇಂಡಿಯಾದ 10 ವರ್ಷಗಳ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದನ್ನು ಪ್ರದರ್ಶಿಸಲಾಗಿತ್ತು. ಈ ವೇಳೆ ಪ್ರಧಾನಿಯವರು ರೋಬೋಟ್‌ನ ಕಾರ್ಯಕ್ಷಮತೆಯನ್ನು ಮೆಚ್ಚಿಕೊಂಡಿದ್ದರು. ಇಂತಹ ರೋಬೋಟ್‌ಗಳು ಮುಖ್ಯವಾಗಿ ಕಾರ್ಖಾನೆಗಳ ತಪಾಸಣೆ, ಅಪಾಯಕಾರಿ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ, ಗಡಿ ಭದ್ರತೆ ಮತ್ತು ಸಂಶೋಧನಾ ಯೋಜನೆಗಳಿಗೆ ಸಹಕಾರಿಯಾಗಲಿವೆ. ಬೆಂಗಳೂರು ಮೂಲದ ಈ ಸಂಸ್ಥೆಯು ಚೀನಾದ ರೋಬೋಟ್‌ಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಈ ಸಾಧನೆ ಮಾಡಿದೆ. ಭಾರತೀಯ ರೊಬೊಟಿಕ್ಸ್ ತಂತ್ರಜ್ಞಾನವು ಹೇಗೆ ಬೆಳೆಯುತ್ತಿದೆ ಮತ್ತು ಜಾಗತಿಕವಾಗಿ ಸ್ಪರ್ಧಿಸುವ ಗುರಿಯನ್ನು ಹೊಂದಿದೆ ಎಂಬುದನ್ನು ಪರಮ್ ತೋರಿಸುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:10 am, Fri, 20 February 26

Source link

Friday Lakshmi Puja: ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ನೆಲೆಸಲು ಶುಕ್ರವಾರ ಈ ರೀತಿ ಮಾಡಿ – Kannada News | Friday Lakshmi Puja: Essential Rituals for Wealth, Peace and Prosperity

ಹಿಂದೂ ಸಂಪ್ರದಾಯಗಳಲ್ಲಿ ಪ್ರತಿ ದಿನಕ್ಕೂ ತನ್ನದೇ ಆದ ಮಹತ್ವವಿದೆ. ಅದರಲ್ಲೂ ಶುಕ್ರವಾರವನ್ನು ವಿಶೇಷವಾಗಿ ಶುಭ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನವು ಸಂಪತ್ತು, ಶಾಂತಿ ಮತ್ತು ಸಮೃದ್ಧಿಯ ಸಂಕೇತವಾದ ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಆದ್ದರಿಂದ ಅನೇಕ ಭಕ್ತರು ಈ ದಿನದಂದು ಪೂಜೆ, ಜಪ, ದಾನ ಧರ್ಮಗಳ ಮೂಲಕ ಅವಳ ಕೃಪೆಯನ್ನು ಪಡೆಯಲು ಪ್ರಯತ್ನಿಸುತ್ತಾರೆ.

ಮಹಾಲಕ್ಷ್ಮಿಯ ಆಶೀರ್ವಾದವು ಕೇವಲ ಹಣಕಾಸಿನ ಸಂಪತ್ತಿಗೆ ಸೀಮಿತವಾಗಿಲ್ಲ. ಅದು ಮನಸ್ಸಿನ ಶಾಂತಿ, ಕುಟುಂಬದಲ್ಲಿ ಸಾಮರಸ್ಯ ಮತ್ತು ಜೀವನದಲ್ಲಿ ಸಮತೋಲನವನ್ನು ನೀಡುತ್ತದೆ ಎಂದು ನಂಬಲಾಗಿದೆ. “ಓಂ ಶ್ರೀಂ ಮಹಾಲಕ್ಷ್ಮಿಯೈ ನಮಃ” ಎಂಬ ಮಂತ್ರವನ್ನು ಭಕ್ತಿಯಿಂದ ಜಪಿಸಿದರೆ ಮನಸ್ಸಿನ ದೌರ್ಬಲ್ಯ ಮತ್ತು ಬಡತನದ ಭಾವನೆ ದೂರವಾಗಿ ದೈವಿಕ ಶಕ್ತಿ ಹೆಚ್ಚುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ.

ಶುಕ್ರವಾರ ದಾನ ಮಾಡಬೇಕಾದ ವಸ್ತುಗಳು:

ಶುಕ್ರವಾರದಂದು ದಾನ ಮಾಡುವುದನ್ನು ಅತ್ಯಂತ ಪುಣ್ಯಕಾರ್ಯವೆಂದು ಪರಿಗಣಿಸಲಾಗಿದೆ. ವಿಶೇಷವಾಗಿ ಸಿಹಿತಿಂಡಿಗಳು, ಬಿಳಿ ಬಣ್ಣದ ಆಹಾರ ಪದಾರ್ಥಗಳು, ಹಾಲು, ಮೊಸರು, ಅಕ್ಕಿ, ಸಕ್ಕರೆ ದಾನ ಮಾಡಿದರೆ ಶುಭ ಫಲಗಳು ದೊರೆಯುತ್ತವೆ ಎಂದು ನಂಬಿಕೆ ಇದೆ. ಉಪ್ಪು, ಸಕ್ಕರೆ ಅಥವಾ ಮೊಸರಿನಂತಹ ದಿನನಿತ್ಯದ ಅಗತ್ಯ ವಸ್ತುಗಳನ್ನು ದಾನ ಮಾಡುವುದರಿಂದ ಕುಟುಂಬದಲ್ಲಿ ಸಮೃದ್ಧಿ ಮತ್ತು ದಾಂಪತ್ಯ ಜೀವನದಲ್ಲಿ ಸಾಮರಸ್ಯ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

ಶ್ರೀ ಯಂತ್ರ ಪೂಜಾ ವಿಧಾನ:

ಶ್ರೀ ಯಂತ್ರವು ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದ ಪವಿತ್ರ ಚಿಹ್ನೆಯೆಂದು ಪರಿಗಣಿಸಲಾಗುತ್ತದೆ. ಶುಕ್ರವಾರದಂದು ಶ್ರೀ ಯಂತ್ರವನ್ನು ಹಸುವಿನ ಹಾಲಿನಿಂದ ಸ್ವಚ್ಛಗೊಳಿಸಿ, ಅರಿಶಿನ ಮತ್ತು ಕುಂಕುಮದಿಂದ ಅಲಂಕರಿಸಿ ಪೂಜಾ ಮಂದಿರದಲ್ಲಿ ಅಥವಾ ಹಣ ಇಡುವ ಸ್ಥಳದಲ್ಲಿ ಪ್ರತಿಷ್ಠಾಪಿಸಿದರೆ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಆರ್ಥಿಕ ಸ್ಥಿರತೆ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಮನೆ ಬಾಗಿಲಲ್ಲಿ ಈ ಕಾರ್ಯ ಮಾಡಿ:

ಮನೆ ಪ್ರವೇಶದ್ವಾರವು ಶಕ್ತಿಯ ಪ್ರವೇಶದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಶುಕ್ರವಾರದಂದು ಮಾವಿನ ಎಲೆಗಳಿಂದ ಕಮಾನು ಕಟ್ಟಿದರೆ ಅದೃಷ್ಟ ಮನೆಗೆ ಪ್ರವೇಶಿಸುತ್ತದೆ ಎಂದು ನಂಬಿಕೆ ಇದೆ. ಬಾಗಿಲಿನ ಬಳಿ ಉಪ್ಪು ತುಂಬಿದ ಸಣ್ಣ ಪಾತ್ರೆಯನ್ನು ಇಡುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ತಾಮ್ರದ ಪಾತ್ರೆಯಲ್ಲಿ ನೀರು, ಅರಿಶಿನ, ಕರ್ಪೂರ ಮತ್ತು ನಾಣ್ಯ ಇಟ್ಟು ಬಾಗಿಲಿನ ಒಳಭಾಗದಲ್ಲಿ ಇಡುವುದರಿಂದ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆಯೂ ಇದೆ.

ಹಾಗೆಯೇ ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳನ್ನು ಬಾಗಿಲಲ್ಲಿ ಹಾಕುವುದು ದೃಷ್ಟಿದೋಷ ನಿವಾರಣೆಗೆ ಸಹಾಯಕವೆಂದು ಪರಿಗಣಿಸಲಾಗುತ್ತದೆ. ಶುಕ್ರವಾರದಂದು ಕೇಸರಿಯಿಂದ ಸ್ವಸ್ತಿಕ ಚಿಹ್ನೆ ಬರೆದು ಅಲಂಕರಿಸುವುದನ್ನು ಸಂಪತ್ತಿನ ಸಂಕೇತವೆಂದು ಕಾಣಲಾಗುತ್ತದೆ. ಒಟ್ಟಾರೆ, ಶುಕ್ರವಾರದಂದು ಭಕ್ತಿಯಿಂದ ಸಣ್ಣಪುಟ್ಟ ಆಚರಣೆಗಳನ್ನು ಮಾಡಿದರೆ ಮಹಾಲಕ್ಷ್ಮಿಯ ಕೃಪೆಯಿಂದ ಮನೆಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿ ಹರಿದು ಬರುತ್ತದೆ ಎಂದು ಸಾಂಪ್ರದಾಯಿಕ ನಂಬಿಕೆ ಹೇಳುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಭಾರಿ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ – Kannada News | Senior Congress Ministers Express Frustration Over Government Inertia and Party Confusion

ಬೆಂಗಳೂರು, ಫೆಬ್ರವರಿ 20: ಕಾಂಗ್ರೆಸ್ ಸರ್ಕಾರದಲ್ಲಿ ಕೆಲಸಗಳು ನಿಂತಲ್ಲೇ ನಿಂತಿವೆ ಎಂದು ಹಿರಿಯ ಸಚಿವರುಗಳ ವಲಯದಲ್ಲಿಯೇ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಆಡಳಿತದಲ್ಲಿ ಜಡತ್ವ ಆವರಿಸಿದ್ದು, ಪಕ್ಷದಲ್ಲಿನ ಗೊಂದಲಗಳು ಮತ್ತು ಮಂತ್ರಿಗಳಿಗೆ ಅನಗತ್ಯ ಜವಾಬ್ದಾರಿಗಳನ್ನು ವಹಿಸಿರುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಈ ಕುರಿತು ಆರು ಮಂದಿ ಹಿರಿಯ ಸಚಿವರು ಕಳೆದ ವಾರ ಸಭೆ ನಡೆಸಿ, ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ. ಭಾಷಣಗಳು, ಜಾಹೀರಾತುಗಳು ಮತ್ತು ಹೇಳಿಕೆಗಳು ವಾಸ್ತವಕ್ಕೆ ದೂರವಾಗಿದ್ದು, ಕ್ಷೇತ್ರದ ಮತ್ತು ಇಲಾಖೆಯ ಮಟ್ಟದಲ್ಲಿ ಯಾವುದೇ ಕೆಲಸಗಳು ಚುರುಕುಗೊಂಡಿಲ್ಲ ಎಂಬ ಆತಂಕವನ್ನು ಮಂತ್ರಿಗಳು ವ್ಯಕ್ತಪಡಿಸಿದ್ದಾರೆ. ಸಂಪನ್ಮೂಲ ಕ್ರೋಢೀಕರಣದಂತಹ ಹೆಚ್ಚುವರಿ ಕಾರ್ಯಗಳನ್ನು ಸಚಿವರ ಹೆಗಲಿಗೆ ಹಾಕಿರುವುದರಿಂದ ಇಲಾಖಾ ಕೆಲಸಗಳಿಗೆ ಹಿನ್ನಡೆಯಾಗಿದೆ. ಪಕ್ಷ ಸಂಘಟನೆಯಲ್ಲಿಯೂ ತಮ್ಮನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಬೇಸರ ಮಂತ್ರಿಗಳಲ್ಲಿದೆ. ತಳಮಟ್ಟದ ಕಾರ್ಯಕರ್ತರೂ ಕೂಡ ನಾಯಕತ್ವದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಈ ಗೊಂದಲಗಳಿಗೆ ಹಿರಿಯ ನಾಯಕರಿಂದ ಪರಿಹಾರ ದೊರೆಯುತ್ತಿಲ್ಲ ಎಂಬುದು ಸಚಿವರ ಮುಖ್ಯ ದೂರು. ಜಡತ್ವದಿಂದ ಕೂಡಿದ ಆಡಳಿತದಲ್ಲಿ ಮುಂದುವರಿಯುವುದಕ್ಕಿಂತ ಸಚಿವ ಸಂಪುಟದಿಂದ ಹೊರಗುಳಿಯುವ ಬಗ್ಗೆಯೂ ಕೆಲ ಸಚಿವರು ಆಲೋಚಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹತ್ತು ದಿನ ಟೈಂ ಕೊಡ್ತೀನಿ, ಹೇಳಿದ್ದು ಕೇಳದೆ ಇದ್ರೆ ಯುದ್ಧ ಗ್ಯಾರಂಟಿ, ಇರಾನ್​ಗೆ ಗಡುವು ಕೊಟ್ಟ ಟ್ರಂಪ್ – Kannada News | Trump Issues 10 Day Ultimatum to Iran: US War Threat Looms, Middle East Crisis Deepens

ವಾಷಿಂಗ್ಟನ್, ಫೆಬ್ರವರಿ 20:ಅಮೆರಿಕ ಮತ್ತು ಇರಾನ್(Iran) ನಡುವಿನ ಉದ್ವಿಗ್ನತೆ ಉತ್ತುಂಗಕ್ಕೇರಿದೆ. ಟ್ರಂಪ್ ಒಂದರ ನಂತರ ಒಂದರಂತೆ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಈಗ ಅಮೆರಿಕ ಇರಾನ್​​ಗೆ ಕೇವಲ ಹತ್ತು ದಿನಗಳ ಗಡುವು ನೀಡಿದೆ. ತಾವು ಹೇಳಿದ ಹಾಗೆ ಕೇಳದಿದ್ದರೆ ಯುದ್ಧ ಗ್ಯಾರಂಟಿ ಎಂದು ಟ್ರಂಪ್ ಹೇಳಿದ್ದಾರೆ.  ಪರಿಣಾಮಗಳು ಭೀಕರವಾಗಿರುತ್ತವೆ ಎಂದು ಹೇಳುವ ಮೂಲಕ ಖಮೇನಿಗೆ ಅಲ್ಟಿಮೇಟಮ್ ನೀಡಿದ್ದಾರೆ. ಟ್ರಂಪ್ ಅವರ ಈ ಅಂತಿಮ ಎಚ್ಚರಿಕೆ ಮಧ್ಯಪ್ರಾಚ್ಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಅಮೆರಿಕ ರಣ ಕಹಳ ಮೊಳಗಿಸಿದೆ .

ಗುರುವಾರ ನಡೆದ ಗಾಜಾ ಶಾಂತಿ ಮಂಡಳಿಯ ಸಭೆಯಲ್ಲಿ ಅಧ್ಯಕ್ಷ ಟ್ರಂಪ್ ಟೆಹ್ರಾನ್​​ಗೆ ನೇರ ಎಚ್ಚರಿಕೆ ನೀಡಿದ್ದಾರೆ. ಮುಂದಿನ 10 ದಿನಗಳಲ್ಲಿ, ಇರಾನ್‌ನೊಂದಿಗೆ ಒಪ್ಪಂದವಾಗುತ್ತದೆಯೇ ಅಥವಾ ಯುದ್ಧವಾಗುತ್ತದೆಯೇ ಎಂಬುದು ಇಡೀ ಜಗತ್ತಿಗೆ ತಿಳಿಯಲಿದೆ. ಯಾವುದೇ ಒಪ್ಪಂದಕ್ಕೆ ಬರದಿದ್ದರೆ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಮುಂದಿನ ಹೆಜ್ಜೆ ಎಂದರೆ ಇರಾನ್​​ನ ಪರಮಾಣು ಸೌಲಭ್ಯಗಳ ಮೇಲೆ ನೇರವಾಗಿ ದಾಳಿ ಮಾಡುವುದು ಎಂದರ್ಥ.

ಟ್ರಂಪ್ ಅವರ ರಹಸ್ಯ ಯೋಜನೆ ಏನು?
ಇರಾನ್ ತನ್ನ ಕ್ಷಿಪಣಿಗಳು ಮತ್ತು ಪರಮಾಣು ಸೌಲಭ್ಯಗಳನ್ನು ಸಂಪೂರ್ಣವಾಗಿ ಕೆಡವಬೇಕು, ಇಲ್ಲದಿದ್ದರೆ ಅಮೆರಿಕ ದಾಳಿಗೆ ಸಿದ್ಧವಾಗಿದೆ ಎಂಬುದು ಟ್ರಂಪ್ ಅವರ ನೇರ ಸಂದೇಶವಾಗಿದೆ. ಗುಪ್ತಚರ ವರದಿಗಳು ಮತ್ತು ದಿ ಟೆಲಿಗ್ರಾಫ್‌ನ ಮಾಹಿತಿ ಪ್ರಕಾರ, ಶನಿವಾರದೊಳಗೆ ಇರಾನ್ ಮೇಲೆ ದಾಳಿ ಮಾಡಲು ಅಮೆರಿಕ ಸೇನೆಗೆ ಹಸಿರು ನಿಶಾನೆ ಸಿಕ್ಕಿದೆ.

ಅಮೆರಿಕದ ಅತ್ಯಂತ ಆಧುನಿಕ ವಿಮಾನವಾಹಕ ನೌಕೆ ಯುಎಸ್‌ಎಸ್ ಜೆರಾಲ್ಡ್ ಆರ್. ಫೋರ್ಡ್ ಮುಂದಿನ ಕೆಲವು ದಿನಗಳಲ್ಲಿ ಮೆಡಿಟರೇನಿಯನ್ ಸಮುದ್ರಕ್ಕೆ ಆಗಮಿಸಲಿದ್ದು, ಇರಾನ್ ಮೇಲೆ 24/7 ನಿರಂತರ ಬಾಂಬ್ ದಾಳಿ ಮಾಡುವ ಸಾಮರ್ಥ್ಯವನ್ನು ಅಮೆರಿಕಕ್ಕೆ ನೀಡುತ್ತದೆ.

ಮತ್ತಷ್ಟು ಓದಿ: ಇರಾನ್ ವಿರುದ್ಧ ಯುದ್ಧಕ್ಕೆ ಅಮೆರಿಕ ಸನ್ನದ್ಧ, ಟ್ರಂಪ್ ಓಕೆ ಅನ್ನೋದೊಂದೇ ಬಾಕಿ

ಅಮೆರಿಕವು ಮಧ್ಯಪ್ರಾಚ್ಯದಲ್ಲಿ ತನ್ನ ಸಕ್ರಿಯ ನೌಕಾ ಪಡೆಯ ದೊಡ್ಡ ಭಾಗವನ್ನು ನಿಯೋಜಿಸಿದೆ. ಇದರಲ್ಲಿ ನೂರಾರು ಫೈಟರ್ ಜೆಟ್‌ಗಳು, ಎರಡು ವಿಮಾನವಾಹಕ ನೌಕೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹೊತ್ತ 150 ಕ್ಕೂ ಹೆಚ್ಚು ಸರಕು ವಿಮಾನಗಳು ಸೇರಿವೆ. ಈ ವಾರ, ಇರಾನ್‌ನ ಸುತ್ತಮುತ್ತಲ ಪ್ರದೇಶದಲ್ಲಿ 50 ಕ್ಕೂ ಹೆಚ್ಚು F-35, F-22 ಮತ್ತು F-16 ಫೈಟರ್ ಜೆಟ್‌ಗಳನ್ನು ನಿಯೋಜಿಸಲಾಗಿದೆ. ಸ್ವಿಟ್ಜರ್​​ಲ್ಯಾಂಡ್​ನ ಜಿನೀವಾದಲ್ಲಿ ಅಮೆರಿಕ ಮತ್ತು ನಿರಾನಿನ ನಿಯೋಗಗಳು ಉನ್ನತ ಮಟ್ಟದ ಪರಮಾಣು ಒಪ್ಪಂದದ ಕುರಿತು ಚರ್ಚಿಸಲು ಸಭೆ ಸೇರಿದ ಬಳಿಕ ಈ ಮಾಹಿತಿ ಹೊರಬಿದ್ದಿದೆ.

ಅಮೆರಿಕದ ದಾಳಿಯು ಪಶ್ಚಿಮ ಏಷ್ಯಾದಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು. ಆದಾಗ್ಯೂ, ಇರಾನ್ ಮೇಲಿನ ದಾಳಿಯ ಕುರಿತು ಡೊನಾಲ್ಡ್ ಟ್ರಂಪ್ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಅಮೆರಿಕದ ಆಡಳಿತದ ಮೂಲವನ್ನು ಉಲ್ಲೇಖಿಸಿ ದಿ ಟೆಲಿಗ್ರಾಫ್, ಮುಂಬರುವ ವಾರದಲ್ಲಿ ಅಮೆರಿಕ-ಇರಾನ್ ಯುದ್ಧ ಪ್ರಾರಂಭವಾಗುವ ಸಾಧ್ಯತೆ 90 ಪ್ರತಿಶತ ಎಂದು ಹೇಳಿಕೊಂಡಿದೆ.

ಈ ವಾರದ ಕೊನೆಯಲ್ಲಿ ಅಮೆರಿಕದ ದಾಳಿ ಸಂಭವಿಸಬಹುದು ಎಂದು ಅವರು ಹೇಳಿದ್ದಾರೆ. ಇಸ್ರೇಲಿ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥರು ಮುಂದಿನ ಕೆಲವು ದಿನಗಳಲ್ಲಿ ಇರಾನ್ ಮೇಲೆ ಅಮೆರಿಕದ ದಾಳಿ ನಡೆಯಲಿದೆ, ಇದು ದೊಡ್ಡ ಯುದ್ಧಕ್ಕೆ ಕಾರಣವಾಗಬಹುದು ಎಂದು ಹೇಳುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:11 am, Fri, 20 February 26

Source link

ವಿಜಯಪುರ: ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಬಾಣಂತಿ ಹಾಗೂ ನವಜಾತ ಶಿಶು ಸಾವು! – Kannada News | Mother, newborn die due to alleged medical negligence at Govt Hospital in Vijayapura

ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಬಾಣಂತಿ ಹಾಗೂ ನವಜಾತ ಶಿಶು ಸಾವು!

ವಿಜಯಪುರ, ಫೆಬ್ರವರಿ 20: ಸಿಂದಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮತ್ತು ನವಜಾತ ಶಿಶು (Newborn Death) ಮೃತಪಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಗರ್ಭಿಣಿಗೆ ನರ್ಸ್​ಗಳೇ ಹೆರಿಗೆ ಮಾಡಿಸಿದ್ದರು. ಈ ವೇಳೆ ನವಜಾತ ಶಿಶು ಸಾವನ್ನಪ್ಪಿತ್ತು. ನಂತರ ಬಾಣಂತಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ವೈದ್ಯರಿಲ್ಲದೆ ಹೆರಿಗೆ, ಶಿಶು ಸಾವು

ತಾಲೂಕಿನ ಢವಳಾರ ಗ್ರಾಮದ ಮೈತ್ರಾರನ್ನು ಹೆರಿಗೆಗಾಗಿ ಮೊದಲು ಯಂಕಂಚಿ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಸಿಂದಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯವಿರಲಿಲ್ಲವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಂತಿಮವಾಗಿ ನರ್ಸ್‌ಗಳು ಹಾಗೂ ಇತರ ಸಿಬ್ಬಂದಿಯವರು ಹೆರಿಗೆ ಮಾಡಿಸಿದ್ದು, ಹೆರಿಗೆಯ ವೇಳೆ ನವಜಾತ ಗಂಡು ಶಿಶು ಸಾವನ್ನಪ್ಪಿದೆ. ನಂತರ ಮೈತ್ರಾಗೆ ತೀವ್ರ ರಕ್ತಸ್ರಾವ ಉಂಟಾಗಿ ಸ್ಥಿತಿ ಗಂಭೀರಗೊಂಡಾಗ ತಕ್ಷಣವೇ ಹೆಚ್ಚಿನ ಚಿಕಿತ್ಸೆಗೆ ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಲಾಯಿತು.

ಇದನ್ನೂ ಓದಿ ಸಾಕು ಮಗ, ಸಹೋದರಿಯಿಂದಲೇ ಮಹಿಳೆಯ ಕೊಲೆ; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರ!

ಬೇರೆ ಆಸ್ಪತ್ರೆಗೆ ಕರೆದೊಯ್ಯುವಾಗ ಬಾಣಂತಿಯೂ ಸಾವು!

ಆದರೆ ಅಂಬ್ಯುಲೆನ್ಸ್‌ನಲ್ಲಿ ವಿಜಯಪುರಕ್ಕೆ ಸಾಗಿಸುವಾಗ ಮಾರ್ಗ ಮಧ್ಯೆ ಮೈತ್ರಾ ಮೃತಪಟ್ಟಿದ್ದಾರೆ. ಬಾಣಂತಿ ಮತ್ತು ಶಿಶುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಪೋಷಕರು ಆರೋಪಿಸಿದ್ದು, ಕರ್ತವ್ಯದಲ್ಲಿದ್ದರೆ ಇಬ್ಬರ ಜೀವ ಉಳಿಯುತ್ತಿತ್ತೆಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲವೆಂಬ ಆರೋಪವೂ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ವೈದ್ಯಾಧಿಕಾರಿ ಸಂಪತ್ ಕುಮಾರ್,  ಈ ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆಯಾದ ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಾಡಿಗೆ ಹೆಚ್ಚು ಮಾಡಿ ಸಂಕಷ್ಟಕ್ಕೆ ಸಿಲುಕಿದ ಬೆಂಗಳೂರಿನ ಮನೆ ಮಾಲೀಕರು: 75,000 ರೂ. ಆಸೆಗೆ ವರ್ಷದಲ್ಲಿ 5 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ – Kannada News | Whitefield Rent Woes: Landlord’s High Price Strategy Costs Lakhs as Market Shifts

ಬೆಂಗಳೂರು, ಫೆ.20: ಸಿಲಿಕಾನ್​​ ಸಿಟಿಯಲ್ಲಿ ಬಾಡಿಗೆ ಮನೆಗಳ (Bangalore rent) ಗೋಳು ಒಂದೊಂದಲ್ಲ, ಪ್ರತಿದಿನ ಈ ಬಾಡಿಗೆ ಮನೆಗಳ ವಿಚಾರದ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತ ಇರುತ್ತದೆ. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಾಡಿಗೆ ಮನೆಗಳು ದುಬಾರಿ ಆಗುತ್ತಿದೆ. ಈ ವಿಚಾರಗಳನ್ನು ಇಟ್ಟುಕೊಂಡಿ ಸೋಶಿಯಲ್​​ ಮೀಡಿಯಾದಲ್ಲಿ ಪ್ರತಿದಿನ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ವೈಟ್‌ಫೀಲ್ಡ್‌ನಲ್ಲಿ 3 ಬಿಹೆಚ್​​​​ಜೆ ಮನೆಗೆ ಬಾಡಿಗೆ ಹೆಚ್ಚು ಮಾಡಿದಕ್ಕಾಗಿ ಮಾಲೀಕರು ಸುಮಾರು 5 ಲಕ್ಷ ರೂಪಾಯಿಗೂ ಅಧಿಕ ನಷ್ಟ ಅನುಭವಿಸಿದ್ದಾರೆ. ಈ ಬಗ್ಗೆ ರೆಡ್ಡಿಟ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ವೈಟ್‌ಫೀಲ್ಡ್‌ನಲ್ಲಿರುವ 3BHK ಫ್ಲಾಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಮಾಲೀಕರು 3BHK ಫ್ಲಾಟ್‌ನ ಪ್ರತಿ ರೂಮ್‌ಗೆ 25,000 ರೂ. ಬಾಡಿಗೆ ನಿಗದಿಪಡಿಸಿದ್ದರು (ಒಟ್ಟು 75,000 ರೂ.). ಆದರೆ ಆ ಪ್ರದೇಶದಲ್ಲಿ ಸರಾಸರಿ ಬಾಡಿಗೆ ಕೇವಲ 20,000 ರೂ. ಇತ್ತು. ಹೆಚ್ಚಿನ ಬಾಡಿಗೆಯ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ಎರಡು ರೂಮ್‌ಗಳು ಖಾಲಿ ಉಳಿದಿವೆ. ಕೇವಲ ಒಬ್ಬರು ಬಾಡಿಗೆದಾರರು ಮಾತ್ರ ಒಂದು ರೂಮ್‌ಗೆ 25,000 ರೂ. ನೀಡಿ, ಇಡೀ 3BHK ಮನೆಯಲ್ಲಿ ವಾಸಿಸುತ್ತಿದ್ದಾರೆ. ಇದರಿಂದಾಗಿ ಮಾಲೀಕರು ಪ್ರತಿ ತಿಂಗಳು ಸುಮಾರು 40,000 ರಿಂದ 50,000 ರೂ.ಗಳ ಬಾಡಿಗೆಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ರೆಡ್ಡಿಟ್‌ನಲ್ಲಿ (Reddit) ಬರೆದುಕೊಂಡಿರುವ ಬಾಡಿಗೆದಾರರು, “ಮನೆ ಮಾಲೀಕರು ಇಂದಿಗೂ 2022ರ ಆ ಡಿಮ್ಯಾಂಡ್‌ನಲ್ಲೇ ಬದುಕುತ್ತಿದ್ದಾರೆ, ಆದರೆ ಈಗ ಮಾರುಕಟ್ಟೆ ಬದಲಾಗಿದೆ” ಎಂದು ಹೇಳಿದ್ದಾರೆ. ಮಾಲೀಕರು ಈಗ ಬಾಡಿಗೆಯನ್ನು ಪ್ರತಿ ರೂಮ್‌ಗೆ 18,000 ರೂ.ಗೆ ಇಳಿಸಿದ್ದರೂ ಸಹ, ಇನ್ನೂ ಹೊಸ ಬಾಡಿಗೆದಾರರು ಫ್ಲಾಟ್‌ಗೆ ಬರಲು ಒಪ್ಪುತ್ತಿಲ್ಲ. ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳ ಸಂಖ್ಯೆ ಹೆಚ್ಚಿದ್ದರೂ ಸಹ, ಕೆಲವು ಪ್ರದೇಶಗಳಲ್ಲಿ ಬಾಡಿಗೆ ದರಗಳಿಂದ ಬಾಡಿಗೆದಾರರ ಸಂಖ್ಯೆ ಕಡಿಮೆ ಆಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿಗೆ ಸ್ಥಳಾಂತರಗೊಂಡ ಬಳಿಕ ಮೊದಲ ವಾರದ ತನ್ನ ಖರ್ಚು ವೆಚ್ಚ ಹಂಚಿಕೊಂಡ ವ್ಯಕ್ತಿ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೂಡ ಕಮೆಂಟ್​ ಮಾಡಿದ್ದಾರೆ. ಹೆಚ್ಚುತ್ತಿರುವ ಪೂರೈಕೆ ಇರುವ ಪ್ರದೇಶಗಳಲ್ಲಿ ಬಾಡಿಗೆದಾರರು ಈಗ ಅನುಕೂಲವನ್ನು ಹೊಂದಿದ್ದಾರೆ ಎಂದು ಒಬ್ಬರು ಹೇಳಿದ್ದಾರೆ. ಸ್ವತಂತ್ರ ಕಟ್ಟಡದಲ್ಲಿ 2BHK 20 ಸಾವಿರ ರೂಪಾಯಿಗೆ ಲಭ್ಯವಿದೆ. ಇನ್ನು ರೂಮ್​​ ಶೇರಿಂಗ್ ಮಾಡುವುದಾದರೆ 8 ಸಾವಿರ ಏಕೆ ಪಾವತಿಸುತ್ತಾರೆ? ವೈಟ್‌ಫೀಲ್ಡ್ ಪ್ರದೇಶದಲ್ಲಿ ಇಷ್ಟೊಂದು ಬಾಡಿಗೆ ನೀಡುವುದು ಒಂದು ದೊಡ್ಡ ತಮಾಷೆಯಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಮಾಲೀಕರು 500-1000 ರೂ. ರಿಯಾಯಿತಿಗೆ ಫ್ಲಾಟ್ ಖಾಲಿ ಇಡುವುದನ್ನು ನಾನು ನೋಡಿದ್ದೇನೆ. ಅವರು ದೀರ್ಘಾವಧಿಯಲ್ಲಿ 50,000,000 ಕಳೆದುಕೊಳ್ಳುತ್ತಾರೆ ಎಂದು ಇನ್ನೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಟೀಸರ್ ಡೈಲಾಗ್ ಮೂಲಕ ‘ಧುರಂಧರ್ 2’ಗೆ ಎಚ್ಚರಿಕೆ ಕೊಟ್ಟ ಯಶ್ – Kannada News | Yash’s Toxic Dialogue: A Fierce Reply to Ranveer Singh Dhurandhar 2 Movie

‘ಟಾಕ್ಸಿಕ್’ ಸಿನಿಮಾದ ಟೀಸರ್ (Toxic Teaser) ರಿಲೀಸ್ ಆಗಿ ಹಲ್​ಚಲ್​ ಎಬ್ಬಿಸುತ್ತಿದೆ. ಈ ಟೀಸರ್ ರಿಲೀಸ್ ಆದ ಕೆಲವೇ ಹೊತ್ತಿಗೆ ಮಿಲಿಯನ್ ವೀಕ್ಷಣೆ ಕಂಡಿದೆ. ಈ ಸಿನಿಮಾ ಹಿಂದಿಯ ‘ಧುರಂಧರ್ 2’ ಚಿತ್ರದ ಎದುರು ರಿಲೀಸ್ ಆಗುತ್ತಿದೆ. ರೇಸ್​​ಗೆ ಇಳಿದು ಯಶ್ ಸೋತ ದಾಖಲೆ ಇಲ್ಲ. ಹೀಗಾಗಿ, ‘ಧುರಂಧರ್ 2’ ಸಿನಿಮಾ ಎದುರು ಕೂಡ ಗೆಲ್ಲೋದು ‘ಟಾಕ್ಸಿಕ್’ ಎಂಬ ಮಾತು ಕೇಳಿ ಬಂದಿದೆ. ಈ ಮಧ್ಯೆ ಟೀಸರ್​ನಲ್ಲಿ ಬರೋ ಒಂದು ಡೈಲಾಗ್ ‘ಧುರಂಧರ್ 2’ ಚಿತ್ರಕ್ಕೆ ಕೊಟ್ಟ ಕೊಟ್ಟ ಕೌಂಟರ್ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಇದೆ.

ಯಶ್ ಅವರು ಸ್ವಭಾವದಲ್ಲಿ ಹಠವಾದಿ. ಏನೇ ಬಂದರೂ ಅದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಹಠ ಅವರಿಗೆ ಇದೆ. ಒಂದೊಂದೇ ಮೆಟ್ಟಿಲು ಹತ್ತಿ ಅವರು ತುಂಬಾನೇ ಎತ್ತರಕ್ಕೆ ಹೋಗಿದ್ದಾರೆ. ಹೀಗಾಗಿ ಅವರಲ್ಲಿ ಹಠ ಮತ್ತಷ್ಟು ಹೆಚ್ಚಿದೆ. ‘ಧುರಂಧರ್ 2’ ಚಿತ್ರದ ಎದುರು ರಿಲೀಸ್ ಆಗಿ ಗೆದ್ದೇ ಗೆಲ್ಲುತ್ತೇನೆ ಎಂಬ ಛಲದಲ್ಲಿ ಅವರಿದ್ದಾರೆ. ಟೀಸರ್​​ನಲ್ಲಿ ಬರುವ ಸಂಭಾಷಣೆಯನ್ನು ಅನೇಕರು ‘ಧುರಂಧರ್ 2’ ಚಿತ್ರಕ್ಕೆ ಕೊಟ್ಟ ಕೌಂಟರ್ ಎಂದು ಹೇಳುತ್ತಿದ್ದಾರೆ.

‘ಈ ಸಲ ಯುದ್ಧನೇ ಬೇರೆ, ಅವರ ಕುತಂತ್ರನೇ ಬೇರೆ, ಎಲ್ಲರನ್ನೂ ಎದುರು ಹಾಕಿಕೊಂಡು ಬದುಕೋಕೆ ಆಗಲ್ಲ ರಾಯ. ಹಠ ಬಿಟ್ಬಿಡು, ಇಟ್ಸ್ ಓವರ್’ ಎಂದು ವ್ಯಕ್ತಿಯೋರ್ವನ ಧ್ವನಿ ಬರುತ್ತದೆ. ಆಗ ರಾಯ (ಯಶ್) ಇದಕ್ಕೆ ಉತ್ತರಿಸುತ್ತಾನೆ. ‘ನಾನು ಹೇಳಿದ್ರೆ ಮಾತ್ರ ಅದು ಓವರ್, ಇಲ್ಲದಿದ್ರೆ ಅಲ್ಲ’ ಎಂದು ರಾಯ ಹೇಳುತ್ತಾನೆ.

ಇದನ್ನೂ ಓದಿ: ಟಾಕ್ಸಿಕ್​ ಟೀಸರ್​: ಫ್ಯಾನ್ಸ್​​ಗೆ ಡಬಲ್ ಧಮಾಕ; ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಯಶ್

‘ಧುರಂಧರ್ ಸೀಕ್ವೆಲ್ ಎದುರು ಬರಬೇಡಿ. ಮುಂದಕ್ಕೆ ಹೋಗಿ’ ಎಂಬ ಕಿವಿಮಾತನ್ನು ಯಶ್​​ಗೆ ಅನೇಕರು ಹೇಳಿದ್ದು ಇದೆ. ಇದಕ್ಕೆ ಕೌಂಟರ್ ಕೊಡೋ ದೃಷ್ಟಿಯಲ್ಲಿ ಈ ರೀತಿ ಹೇಳಿರಬಹುದು ಎಂದು ಅನೇಕರು ಹೇಳಿದ್ದಾರೆ. ಹಠ ಬಿಡೋ ಮಾತೆ ಇಲ್ಲ ಎಂಬುದನ್ನು ಟೀಸರ್ ಮೂಲಕ ಯಶ್ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:16 am, Fri, 20 February 26

Source link

Daily Devotional: ಮಕ್ಕಳು ಮಾತನಾಡುವಾಗ ತೊದಲುತ್ತಿದ್ದಾರಾ? ಜ್ಯೋತಿಷ್ಯ ಪರಿಹಾರ ಇಲ್ಲಿದೆ – Kannada News | Astrological and Spiritual Remedies for Childrens Delayed Speech and Stuttering

ಮಕ್ಕಳು ಮಾತನಾಡುವಾಗ ತೊದಲುತ್ತಿದ್ದರೆ ಅಥವಾ ಮಾತು ತಡವಾಗಿದ್ದರೆ ಪೋಷಕರಿಗೆ ಇದು ಸಾಮಾನ್ಯವಾಗಿ ಆತಂಕವನ್ನುಂಟು ಮಾಡುವ ಸಂಗತಿಯಾಗಿದೆ. ಸಾಮಾನ್ಯವಾಗಿ ವೈದ್ಯರು “ಏನೂ ತೊಂದರೆ ಇಲ್ಲ, ಸ್ವಲ್ಪ ದಿನ ಕಾಯಿರಿ, ಸರಿಹೋಗುತ್ತದೆ” ಎಂದು ಹೇಳುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಇದಕ್ಕೆ ಕೆಲವು ನಿರ್ದಿಷ್ಟ ಕಾರಣಗಳು ಮತ್ತು ಪರಿಹಾರಗಳು ಇವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಮಕ್ಕಳ ಮಾತಿನ ಸಾಮರ್ಥ್ಯವನ್ನು ವೃದ್ಧಿಸಲು ಕೆಲವು ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ಪರಿಹಾರಗಳನ್ನು ಸೂಚಿಸಲಾಗಿದೆ. ಪುಟ್ಟ ಮಕ್ಕಳಿರುವ ಮನೆಗಳಲ್ಲಿ, ವಿಶೇಷವಾಗಿ ಮೂರರಿಂದ ಐದು ವರ್ಷದೊಳಗಿನ ಮಕ್ಕಳು ಮಲಗುವ ಅಥವಾ ಆಡುವ ಕೋಣೆಯಲ್ಲಿ ಆದಷ್ಟು ಹಸಿರು ಬಣ್ಣ ಹೆಚ್ಚಾಗಿ ಇರುವಂತೆ ನೋಡಿಕೊಳ್ಳಬೇಕು. ಗೋಡೆಯ ಬಣ್ಣ ತಿಳಿ ಹಸಿರಾಗಿರಬಹುದು ಅಥವಾ ವಾಲ್‌ಪೇಪರ್ ಹಸಿರು ಬಣ್ಣದ್ದಾಗಿರಬಹುದು. ಪಾಟ್‌ಗಳಲ್ಲಿ ಗಿಡಗಳನ್ನು ಇಡುವುದು ಸಹ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹಸಿರು ಬಣ್ಣವು ಬುಧ ಗ್ರಹಕ್ಕೆ ಸಂಬಂಧಿಸಿದ್ದು, ಇದು ಬುದ್ಧಿಶಕ್ತಿ ಮತ್ತು ಸಂವಹನ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿ.

ಐದು ಅಥವಾ ಆರು ವರ್ಷ ವಯಸ್ಸಾದರೂ ಮಕ್ಕಳು ತೊದಲು ಮಾತನಾಡುತ್ತಿದ್ದರೆ, ಡಾಕ್ಟರ್‌ಗಳ ಸಲಹೆಯ ಜೊತೆಗೆ ಜ್ಯೋತಿಷ್ಯ ಪರಿಹಾರಗಳನ್ನು ಅನುಸರಿಸಬಹುದು. ಪ್ರತಿ ಬುಧವಾರ ನೆನೆಸಿದ ಹೆಸರು ಕಾಳನ್ನು ಆ ಮಗುವಿನ ಕೈಯಿಂದ ದಾನ ಮಾಡಿಸುವುದರಿಂದ ಶುಭ ಫಲಗಳು ದೊರೆಯುತ್ತವೆ. ಬುಧವಾರದ ದಿನ ಹೆಸರು ಕಾಳು ದಾನ ಮಾಡುವುದು ಬುಧ ಗ್ರಹದ ಅನುಗ್ರಹಕ್ಕೆ ಕಾರಣವಾಗುತ್ತದೆ.

ವಾಕ್ಚಾತುರ್ಯದ ದೇವತೆ ಸಾಕ್ಷಾತ್ ಸರಸ್ವತಿ. ಮಕ್ಕಳ ಮಾತಿನ ಶಕ್ತಿಯನ್ನು ಹೆಚ್ಚಿಸಲು ಗುರುಗಳ (ಮಠಾಧೀಶರು ಅಥವಾ ಆಧ್ಯಾತ್ಮಿಕ ಶಕ್ತಿ ಹೊಂದಿದ ಮಹನೀಯರು) ಆಶೀರ್ವಾದ ಪಡೆಯಬಹುದು. ಗುರುವಾರದ ದಿನ, ಬೆಳಗಿನ ಸೂರ್ಯೋದಯದ ಸಮಯದಲ್ಲಿ, ಗುರುಗಳಿಗೆ ನಮಸ್ಕಾರ ಮಾಡಿ, ಅವರ ಕೈಯಿಂದ ಬೆಳ್ಳಿಯ ಕಡ್ಡಿಯಿಂದ ಮಗುವಿನ ನಾಲಿಗೆಯ ಮೇಲೆ ಐಂ ಬೀಜಾಕ್ಷರವನ್ನು ಬರೆಸುವುದು ಬಹಳ ಶುಭಕರ. ಇದು ಮಾತಿನ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಗುರೂಜಿ ಹೇಳಿದ್ದಾರೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಮನೆಯಲ್ಲಿ ಗಾಯತ್ರಿ ಮಂತ್ರವನ್ನು ಪಠಿಸುವುದು ಅಥವಾ ಫೋನ್‌ನಲ್ಲಿ ಕೇಳಿಸುವುದು ಸಹ ಉತ್ತಮ ಪರಿಹಾರ. ಗಾಯತ್ರಿ ಮಂತ್ರದ ಶಬ್ದ ತರಂಗಗಳು ಮಗುವಿನ ಕಿವಿಗೆ ತಲುಪಿದಾಗ, ಅದು ನಾಲಿಗೆ ಮತ್ತು ಕಂಠದ ಶಕ್ತಿಯನ್ನು ಹೆಚ್ಚಿಸುತ್ತದೆ. ಗಾಯತ್ರಿ ಮಂತ್ರವು ಗ್ರಹಣ ಶಕ್ತಿಯನ್ನು ಹೆಚ್ಚಿಸಿ, ಮೆದುಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಮನಸ್ಸಿಗೆ ತೀಕ್ಷ್ಣ ಶಕ್ತಿಯನ್ನು ನೀಡುತ್ತದೆ. ಹಯಗ್ರೀವ ಸ್ತೋತ್ರ “ಜ್ಞಾನಾನಂದಮಯಂ ದೇವಂ ನಿರ್ಮಲ ಸ್ಫಟಿಕಾಕೃತಿಂ ಆಧರಂ ಸರ್ವ ವಿದ್ಯಾ ನಾಮ್ ಹಯಗ್ರೀವ ಮುಪಾಸ್ಮಹೇ” ಇದನ್ನು ಪಠಿಸುವುದು ಹಾಗೂ ದಕ್ಷಿಣಾಮೂರ್ತಿ ದರ್ಶನ ಮಾಡಿಸುವುದು ಸಹ ಜ್ಞಾನ ಮತ್ತು ಮಾತಿನ ವೃದ್ಧಿಗೆ ಸಹಕಾರಿ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತ್ಯೇಕ ರಸ್ತೆ ಅಪಘಾತ: ಮೂವರ ದಾರುಣ ಸಾವು, ಓರ್ವನ ಸ್ಥಿತಿ ಗಂಭೀರ – Kannada News | Karnataka Road Accidents: 3 Dead, 1 Injured in Mysuru, Chitradurga, Bengaluru Crashes

ಅಪಘಾತದ ಬಳಿಕ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿರುವ ಬೈಕ್​​Image Credit source: Tv9 Kannada

ಮೈಸೂರು/ಚಿತ್ರದುರ್ಗ, ಫೆಬ್ರವರಿ 20: ಮೈಸೂರು, ಚಿತ್ರದುರ್ಗ ಮತ್ತು ಬೆಂಗಳೂರು ಉತ್ತರ ತಾಲೂಕಿನಲ್ಲಿ ನಡೆದಿರುವ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯಲ್ಲಿ ಲಾರಿ-ಬೈಕ್​​ ನಡುವೆ ಅಪಘಾತ ನಡೆದು ಇಬ್ಬರು ಮೃತಪಟ್ಟಿದ್ದರೆ, ಚಿತ್ರದುರ್ಗದಲ್ಲಿ ನಡೆದ ಕಾರು ಮತ್ತು ಲಾರಿ ನಡುವಿನ ಡಿಕ್ಕಿಯಲ್ಲಿ ಓರ್ವ ಅಸುನೀಗಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಹುಣಸಮಾರನಹಳ್ಳಿಯಲ್ಲಿ ಗೂಡ್ಸ್​ ವಾಹನ ಡಿಕ್ಕಿಯಾಗಿ ಪೊಲೀಸ್​​ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದಾರೆ.

ಭೀಕರ ಅಪಘಾತ: ಬೈಕ್​​ ಸವಾರರು ಸಾವು

ಮೈಸೂರು ಜಿಲ್ಲೆ ಹುಣಸೂರಿನ ತಾಲೂಕಿನ ಅರಸು ಕಲ್ಲಹಳ್ಳಿ ಗ್ರಾಮದಲ್ಲಿ ಲಾರಿ-ಬೈಕ್​​ ನಡುವೆ ಸಂಭವಿಸಿದ ಭೀಕರ ಅಪಘಾತಕ್ಕೆ ಸವಾರರು ಬಲಿಯಾಗಿದ್ದಾರೆ. ಅಪಘಾತದ ರಭಸಕ್ಕೆ ಬೈಕ್​​ ಹೊತ್ತಿ ಉರಿದ್ದಿದ್ದು, ಸುರೇಶ್​(63), ಮಾದೇವ್​(52) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:  ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಅಪಘಾತ; ಬೈಕ್​​ ಸವಾರ ಸಾವು, ಪತ್ನಿ ಗಂಭೀರ

ಲಾರಿ-ಕಾರು ಮುಖಾಮುಖಿ ಡಿಕ್ಕಿ

ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ನಡೆದಿದೆ.

ಪೊಲೀಸ್​ ಸಿಬ್ಬಂದಿಗೆ ಗೂಡ್ಸ್​ ವಾಹನ ಡಿಕ್ಕಿ

ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್​ ಸಿಬ್ಬಂದಿಗೆ ಗೂಡ್ಸ್​ ವಾಹನ ಡಿಕ್ಕಿಯಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆ‌‌ಯ ಉತ್ತರ ತಾಲೂಕಿನ ಏರ್​ಪೋರ್ಟ್​​ ರಸ್ತೆಯ ಹುಣಸಮಾರನಹಳ್ಳಿ ಬಳಿ ನಡೆದಿದೆ. ಸಿಟಿಗೆ ಪ್ರವೇಶವಿಲ್ಲ ಎಂದು ವಾಹನ ತಡೆದಿದ್ದಕ್ಕೆ ಗುದ್ದಿಕೊಂಡು ಹೋಗಲು ಚಾಲಯ ಯತ್ನ ನಡೆಸಿದ್ದು, ಘಟನೆಯಲ್ಲಿ ಸಂಚಾರಿ ಪೊಲೀಸ್​ ಕಾನ್ಸ್​​ಟೇಬಲ್​ ವಿಕಾಸ್​ಗೆ ಗಂಭೀರ ಗಾಯಗಳಾಗಿವೆ. ನಿತ್ಯ ಬೆಳಗ್ಗೆ 7:30ರಿಂದ 11 ಗಂಟೆವರೆಗೆ ಏರ್​​ಪೋರ್ಟ್​ ರಸ್ತೆಯಲ್ಲಿ ಗೂಡ್ಸ್ ವಾಹನಗಳಿಗೆ ನಿಷೇಧವಿದೆ. ಹೀಗಿದ್ದರೂ ಏರ್​​ಪೋರ್ಟ್​ ಹೆದ್ದಾರಿಗೆ ಗೂಡ್ಸ್ ವಾಹನ ಎಂಟ್ರಿ ಕೊಟ್ಟಿತ್ತು. ಈ ವೇಳೆ‌‌ ವಾಹನ ನಿಲ್ಲಿಸುವಂತೆ ಸೂಚನೆ ನೀಡಿದರೂ ಚಾಲಕ ನಿಲ್ಲಿಸಿಲ್ಲ ಎನ್ನಲಾಗಿದೆ. ಗಂಭೀರ ಗಾಯಗೊಂಡ ವಿಕಾಸ್​​ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದ್ದು, ಅವರ ದೂರಿನನ್ವಯ ಗೂಡ್ಸ್ ಚಾಲಕನ‌ ವಿರುದ್ಧ ಕೇಸ್ ದಾಖಲಾಗಿದೆ. ಆರೋಪಿ ಭರಕತ್ ಖಾನ್ ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ಗೂಡ್ಸ್​ ವಾಹನವನ್ನೂ ಸೀಜ್ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link