ನಂದಿನಿ ಉತ್ಪನ್ನ ತಿಂದರೆ ಕ್ಯಾನ್ಸರ್ ಬರುತ್ತಾ? ಅಂತೆ-ಕಂತೆಗಳಿಗೆ ಕೆಎಂಎಫ್ ಎಂಡಿ ಸ್ಪಷ್ಟನೆ – Kannada News | Do Nandini Products Cause Cancer; KMF Debunks Cancer Claims as Fake News
ಕೆಎಂಎಫ್ ಉತ್ಪನ್ನಗಳುImage Credit source: deccanherald ಬೆಂಗಳೂರು, ಫೆಬ್ರವರಿ 19: ಕೆಎಂಎಫ್ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್. ಕೆಎಂಎಫ್ ಉತ್ಪನ್ನಗಳು (KMF Products) ದೇಶ-ವಿದೇಶಗಳಿಗೆ ಸರಬರಾಜು ಆಗುತ್ತದೆ. ಇದೀಗ ಈ ಬ್ರ್ಯಾಂಡ್ ಮೇಲೆ ಕಿಡಿಗೇಡಿಗಳ ಕಣ್ಣು ಬಿದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಂದಿನ ಉತ್ಪನ್ನಗಳ ಬಗ್ಗೆ ಸುಳ್ಳು ಸುದ್ದಿ ಹರಿಬಿಡಲಾಗುತ್ತಿದೆ. ಆ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಲಾಗುತ್ತಿದೆ. ಹೀಗಾಗಿ ಕಿಡಿಗೇಡಿಗಳ ವಿರುದ್ಧ ಕಾನೂನು ಸಮರಕ್ಕೆ ಕೆಎಂಎಫ್ ಸಜ್ಜಾಗಿದ್ದು, ಸುಳ್ಳು ಸುದ್ದಿ ಹರಿಬಿಡುತ್ತಿರುವವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಮುಂದಾಗಿದೆ. ಇದು…