IND vs AFG: ಅರ್ಧಶತಕದಿಂದ ವಂಚಿತರಾದ್ರು ಹೊಸ ಮೈಲಿಗಲ್ಲು ದಾಟಿದ ರೋಹಿತ್ ಶರ್ಮಾ – Kannada News | IND vs AFG 2nd odi Rohit Sharma Joins Elite 14,000 List A Run Club
ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ 2027 ರ ನಡೆಯಲಿರುವ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬೇಕೆಂದರೆ ಪ್ರಸ್ತುತ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಮಿಂಚಲೇಬೇಕಿದೆ. ಮೊದಲ ಏಕದಿನದಲ್ಲಿ ಕೇವಲ 16 ರನ್ಗಳಿಗೆ ಸುಸ್ತಾಗಿದ್ದ ರೋಹಿತ್ ಎರಡನೇ ಏಕದಿನ ಪಂದ್ಯದಲ್ಲಿ ಲಯದಲ್ಲಿ ಕಾಣಿಸಿಕೊಂಡರಾದರೂ ಅರ್ಧಶತಕದಂಚಿನಲ್ಲಿ ಎಡವಿದರು (PC-PTI). ಲಕ್ನೋದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 39 ಎಸೆತಗಳನ್ನು ಎದುರಿಸಿದ ರೋಹಿತ್ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 48 ರನ್ ಬಾರಿಸಿ ಔಟಾದರು….