ಕೊನೆಗೂ ಎಚ್ಚೆತ್ತ ಪುರಾತತ್ವ ಇಲಾಖೆ: ಸೋರುತ್ತಿದ್ದ ಬನವಾಸಿ ದೇಗುಲದ ದುರಸ್ತಿ ಕಾರ್ಯ ಆರಂಭ – Kannada News | ASI Begins Repair Works at Historic 1,500 Year Old Banavasi Madhukeshwara Temple Following Public Outcry
ಬನವಾಸಿ ದೇಗುಲ ದುರಸ್ತಿ ಕಾರ್ಯ ನಡೆಯುತ್ತಿರುವುದುImage Credit source: Tv9 Kannada ಶಿರಸಿ, ಜೂನ್ 17: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ವರದಾ ನದಿ ದಡದಲ್ಲಿರುವ 1500 ವರ್ಷಗಳ ಇತಿಹಾಸಿರುವ ಮಧುಕೇಶ್ವರ ದೇವಸ್ಥಾನ ಕನ್ನಡಿಗರ ಅಸ್ಮಿತೆ ಹಾಗೂ ಸಾಂಸ್ಕೃತಿಕ ಪ್ರತೀಕ. ಹೀಗಾಗಿಯೇ ಇಲ್ಲಿಗೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಭೇಟಿ ನೀಡುತ್ತಾರೆ. ಹೀಗಿದ್ದರೂ ಕಳೆದ ಕೆಲ ವರ್ಷಗಳಿಂದ ದೇವಸ್ಥಾನ ಸೋರುತ್ತಿತ್ತು. ಎಲ್ಲವನ್ನೂ ಕಂಡು ಕಾಣದಂತಿದ್ದ ಪುರಾತತ್ವ ಇಲಾಖೆಯ ವಿರುದ್ಧ ಸಿಡಿದೆದ್ದ ಸಾರ್ವಜನಿಕರು ಅರೆ…