ಉಚಿತ 5G ಅಪ್‌ಗ್ರೇಡ್ ಆಸೆಗೆ ಬಿದ್ದ ಬೆಂಗಳೂರು ವ್ಯಕ್ತಿಗೆ ಶಾಕ್: ಅಕೌಂಟ್ ಹ್ಯಾಕ್ ಮಾಡಿ 15 ಲಕ್ಷ ರೂ. ಸಾಲ ಪಡೆದ ಸೈಬರ್ ವಂಚಕರು! – Kannada News | Bengaluru Cyber Fraud: Man Seeking Free 5G Upgrade Duped of Rs 15 Lakh Loan
ಬೆಂಗಳೂರು, ಜೂನ್ 17: ಸ್ಮಾರ್ಟ್‌ಫೋನ್‌ನಲ್ಲಿ ಉಚಿತವಾಗಿ 4G ಯಿಂದ 5G ನೆಟ್‌ವರ್ಕ್‌ಗೆ ಅಪ್‌ಗ್ರೇಡ್ ಮಾಡಿಕೊಡುವುದಾಗಿ ನಂಬಿಸಿದ ಸೈಬರ್ ವಂಚಕನೊಬ್ಬ, ಬೆಂಗಳೂರಿನ (Bengaluru) ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 15 ಲಕ್ಷ ರೂಪಾಯಿ ಇನ್‌ಸ್ಟಂಟ್ ಲೋನ್ ಮಾಡಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ವಿಕ್ಟೋರಿಯಾ ಲೇಔಟ್ ನಿವಾಸಿ, 50 ವರ್ಷದ ವ್ಯಕ್ತಿ ಈ ಜಾಲಕ್ಕೆ ಬಲಿಯಾದವರಾಗಿದ್ದಾರೆ. ಕೇವಲ 30 ನಿಮಿಷಗಳ ಅವಧಿಯಲ್ಲಿ ವಂಚಕರು ಇವರ ಬ್ಯಾಂಕ್ ಖಾತೆಯನ್ನು ಸಂಪೂರ್ಣ ಹ್ಯಾಕ್ ಮಾಡಿ ಈ…