ಅಂಚೆ ಮತಪತ್ರ ತಿದ್ದುಪಡಿ ಆರೋಪ: ಬಿಜೆಪಿಯ ಡಿ.ಎನ್. ಜೀವರಾಜ್ ವಿರುದ್ಧದ ಕೇಸ್ಗೆ ತಾತ್ಕಾಲಿಕ ತಡೆ – Kannada News | Sringeri Postal Ballot Tampering Allegations: High Court Temporarily Stays FIR Against BJP’s D.N. Jeevaraj
ಡಿ.ಎನ್. ಜೀವರಾಜ್ ವಿರುದ್ಧದ ಕೇಸ್ಗೆ ತಾತ್ಕಾಲಿಕ ತಡೆ ಬೆಂಗಳೂರು/ಚಿಕ್ಕಮಗಳೂರು, ಮೇ 05: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ವೇಳೆ ಮತಪತ್ರಗಳಲ್ಲಿ ತಿದ್ದುಪಡಿ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧ ದಾಖಲಾದ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಾತ್ಕಾಲಿಕ ತಡೆ ನೀಡಿದೆ. ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ರಜಾ ಪೀಠ, ಪ್ರಾಥಮಿಕವಾಗಿ ಎಫ್‌ಐಆರ್‌ಗೆ ತಡೆ ನೀಡಬೇಕು ಎಂಬ ಅಭಿಪ್ರಾಯದಲ್ಲಿದ್ದೇವೆ. ರಾಜಕೀಯ ಒತ್ತಡದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಬಾರದು. ಇದು ಕಾನೂನು…