All posts by nagaraj11081993

ಮೆಜೆಸ್ಟಿಕ್ ರೈಲ್ವೆ ಪಾರ್ಕಿಂಗ್ ಲಾಟ್‌ನಲ್ಲಿ ಕಾರಿಗೆ ಬೆಂಕಿ – Kannada News | Short Circuit Causes Blaze, Destroys Car at Bengalurus Majestic Railway Parking

ಬೆಂಗಳೂರು, ಫೆ.19: ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿದ್ದ ಕಾರಿಗೆ  ಬೆಂಕಿ ಹೊತ್ತಿಕೊಂಡ ಘಟನೆಯೊಂದು. ಹಲವು ದಿನಗಳಿಂದ ಪಾರ್ಕಿಂಗ್ ಲಾಟ್‌ನಲ್ಲಿ ನಿಂತಿದ್ದ ಈ ಕಾರಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ. ಅಗ್ನಿ ಕೆನ್ನಾಲಿಗೆಗೆ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದಾವಿಸಿದ್ದಾರೆ. ಬೆಂಕಿ ಪಕ್ಕದಲ್ಲಿದ್ದ ಇತರ ಕಾರುಗಳಿಗೂ ಹರಡುವ ಸಾಧ್ಯತೆಯಿದ್ದುದರಿಂದ, ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿದ್ದಾರೆ. ಆದರೂ, ಅಗ್ನಿ ಅವಘಡದಿಂದ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರೈಲ್ವೆ ನಿಲ್ದಾಣದ ಪಾರ್ಕಿಂಗ್‌ನಲ್ಲಿ ಇಂತಹ ಅಗ್ನಿ ಅವಘಡ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

31 ಕೇಸ್ ಇದ್ದರೂ 9 ವರ್ಷಗಳಿಂದ ಕಣ್ಣಾಮುಚ್ಚಾಲೆ: ರಂಜಾನ್​​ಗೆಂದು ವಿದೇಶದಿಂದ ಬಂದು ಲಾಕ್​​ ಆದ ಆರೋಪಿ – Kannada News | Safwan Hussain Arrested: Notorious Rowdy with 31 Cases Nabbed After 9 Years Abroad

ಮಂಗಳೂರು/ ರಾಮನಗರ, ಫೆಬ್ರವರಿ 19: ಆರೋಪಿಗಳು ಚಾಪೆ ಕೆಳಗೆ ತೂರಿದರೆ, ಪೊಲೀಸರು ರಂಗೋಲಿ ಕೆಳಗೆ ತೂರ್ತಾರೆ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ. ಒಂದೆರಡಲ್ಲ ಬರೋಬ್ಬರಿ 31 ಕೇಸ್​ಗಳಿದ್ದರು ಪೊಲೀಸರ ಕೈಗೆ ಸಿಗದೆ 9 ವರ್ಷಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಆರೋಪಿಯನ್ನ ಕೊನೆಗೂ ಖಾಕಿ ಬಂಧಿಸಿದೆ. ರೌಡಿಶೀಟರ್ ಸಫ್ವಾನ್ ಹುಸೈನ್ (42) ಅರೆಸ್ಟ್​​ ಆದ ಆರೋಪಿಯಾಗಿದ್ದು, ಹೆಸರು ಬದಲಿಸಿಕೊಂಡು ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದ. ರಂಜಾನ್​​ ಹಿನ್ನೆಲೆ ವಿದೇಶದಿಂದ ಈತ ಬಂದಿರುವ ಮಾಹಿತಿ ಆಧರಿಸಿ ಆಂಧ್ರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿರುವ ಮಂಗಳೂರು ಸಿಸಿಬಿ ಪೊಲೀಸರು ಈತನನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.

ಟಾರ್ಗೆಟ್ ಗ್ಯಾಂಗ್​​ನಲ್ಲಿ ಸಕ್ರಿಯನಾಗಿದ್ದ ರೌಡಿಶೀಟರ್ ಸಫ್ವಾನ್ ಹುಸೈನ್ ವಿರುದ್ಧ 2 ಕೊಲೆ, ಗ್ಯಾಂಗ್ ರೇಪ್, ಕೊಲೆಯತ್ನ, ದರೋಡೆ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 31 ಪ್ರಕರಣಗಳಿವೆ. ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಕಳ್ಳತನ, ಸರಗಳ್ಳತನದಲ್ಲಿಯೂ ಈತ ಭಾಗಿಯಾಗಿದ್ದ ಎನ್ನಲಾಗಿದೆ. ನಕಲಿ ಹೆಸರಿನಲ್ಲಿ ಆಧಾರ್ ಮಾಡಿಸಿ ಆಂಧ್ರ ಪ್ರದೇಶದಲ್ಲಿ ಉಮ್ಮರ್ ಮೊಹಮ್ಮದ್ ನಾಸಿರ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದ ಆರೋಪಿ, 2018ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದ. ಆದರೆ ಹಬ್ಬದ ಹಿನ್ನೆಲೆ ಈತ ದೇಶಕ್ಕೆ ಮರಳಿ ಬಂದಿರುವ ಮಾಹಿತಿ ಆಧಾರದಲ್ಲಿ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಆಂಧ್ರ ಪ್ರದೇಶದ ರಾಯ್ ಚೋಟೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿರುವ ಮಂಗಳೂರು ಸಿಸಿಬಿ ಪೊಲೀಸರ ತಂಡ ಸಫ್ವಾನ್ ಹುಸೈನ್​​ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ​​; ವಿದೇಶದಿಂದ ಬಂದ ತಂದೆ, ಮಗಳಿಗಾಗಿ ಕಣ್ಣೀರು

ಚಾಕುವಿನಿಂದ ಇರಿದು ಪತ್ನಿಯನ್ನು ಕೊಂದ ಪಾಪಿ ಪತಿ

ಪತ್ನಿಯನ್ನು ಪತಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ಯಾರಬ್​​ ನಗರದಲ್ಲಿ ನಡೆದಿದೆ. ಸೋಫಿಯಾ ಬಾನು(21) ಕೊಲೆಯಾದ ದುರ್ದೈವಿಯಾಗಿದ್ದು, ಆರೋಪಿ ಸಲ್ಮಾನ್(22) ಆರೋಪಿಯಾಗಿದ್ದಾನೆ. ಪತ್ನಿಯನ್ನು ಹತ್ಯೆ ಮಾಡಿ ಈತ ತಾನೇ ಪೊಲೀಸ್​​ ಠಾಣೆಗೆ ಹೋಗಿ ಶರಣಾಗಿದ್ದು, ಕೌಟುಂಬಿಕ ಕಲಹ ಅಥವಾ ಅನೈತಿಕ ಸಂಬಂಧ ಹಿನ್ನೆಲೆ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ರಾಮನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

54ನೇ ವಯಸ್ಸಿನಲ್ಲಿ 20 ಕೆಜಿ ತೂಕ ಇಳಿಸಿಕೊಂಡ ಖುಷ್ಬೂ; ಸಾಧ್ಯವಾಗಿದ್ದು ಹೇಗೆ? – Kannada News | Khushboo Sundar: 20kg Weight Loss at 54 Proves Hard Work Overcomes Myths

54 ನೇ ವಯಸ್ಸಿನಲ್ಲಿಯೂ ನಟಿ ಖುಷ್ಬೂ ಅವರು 20 ಕೆಜಿ ದೇಹದ ತೂಕವನ್ನು ಕಳೆದುಕೊಂಡಿದ್ದಾರೆ. ಇಂಜೆಕ್ಷನ್ ಬಳಸಿ ಅವರು ತೂಕ ಕಳೆದುಕೊಂಡರು ಎಂದು ಕೆಲವರು ಹೇಳಿದ್ದಾರೆ. ಈ ವಿಷಯದಲ್ಲಿ ಅವರನ್ನು ಟ್ರೋಲ್ ಮಾಡಿದರು. ಆದರೆ, ಅವರು ತಮ್ಮ ಕಠಿಣ ಪರಿಶ್ರಮವನ್ನು ನಂಬಿದ್ದರು. ಅವರ ತೂಕ ಇಳಿಸುವಿಕೆಯ ಹಿಂದಿನ ಕಠಿಣ ಪರಿಶ್ರಮ ಮತ್ತು ಸಮಾಜದಲ್ಲಿನ ತಪ್ಪು ಕಲ್ಪನೆಗಳನ್ನು ಅವರು ಹೇಗೆ ನಿವಾರಿಸಿದರು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಖುಷ್ಬೂ ಅವರ ತೂಕ ಇಳಿಸುವ ಪ್ರಯಾಣವು 2020ರಲ್ಲಿ ಕಾಣಿಸಿಕೊಂಡ ಕೊರೊನಾ ಸಮಯದಲ್ಲಿ ಆರಂಭ ಆಯಿತು. ಆ ಸಮಯದಲ್ಲಿ, ಅವರ ತೂಕ 93 ಕೆಜಿ ಇತ್ತು. ಅಂದಿನಿಂದ, ಅವರು ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಯೋಗ, ಜಿಮ್ ಮಾಡೋದು ಮತ್ತು ಕಟ್ಟುನಿಟ್ಟಿನ ಆಹಾರಕ್ರಮವನ್ನು ಅನುಸರಿಸುವ ಮೂಲಕ ಅವರು ತಮ್ಮ ದೇಹವನ್ನು ರೂಪಿಸಿಕೊಂಡಿದ್ದಾರೆ.

ಫಿಟ್ನೆಸ್‌ಗೆ ಅವರ ಸಮರ್ಪಣೆಗಾಗಿ ಖ್ಯಾತ ನಿರ್ದೇಶಕ ಆನಂದ್ ಕುಮಾರ್ ಅವರನ್ನು ಶ್ಲಾಘಿಸಿದ್ದಾರೆ. ಅವರು ಪ್ರತಿದಿನ 10,000 ರಿಂದ 15,000 ಹೆಜ್ಜೆಗಳನ್ನು ನಡೆಯುತ್ತಾರೆ ಮತ್ತು ಅವರು ಪ್ರಯಾಣ ಮಾಡುವಾಗಲೂ
ನಡೆಯುವುದನ್ನು ಎಂದಿಗೂ ನಿರ್ಲಕ್ಷಿಸುವುದಿಲ್ಲ.

40 ವರ್ಷದ ನಂತರ ತೂಕ ಇಳಿಸಿಕೊಳ್ಳುವುದು ಅಸಾಧ್ಯ ಎಂದು ಹಲವರು ಭಾವಿಸುತ್ತಾರೆ. ಆದರೆ ಖುಷ್ಬೂ ಅದನ್ನು ತಳ್ಳಿ ಹಾಕುತ್ತಾರೆ. ‘ವಯಸ್ಸಾದಂತೆ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ ನಿಜ, ಆದರೆ ಅದು ಸಂಪೂರ್ಣವಾಗಿ ನಿಲ್ಲುವುದಿಲ್ಲ. ನಾವು ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡುವುದರಿಂದ ಮತ್ತು ನಮ್ಮ ಹಳೆಯ ಆಹಾರ ಪದ್ಧತಿಯನ್ನು ಬದಲಾಯಿಸದ ಕಾರಣ ನಾವು ತೂಕ ಹೆಚ್ಚಿಸಿಕೊಳ್ಳುತ್ತೇವೆ’ ಎಂದು ಅವರು ಹೇಳಿದ್ದಾರೆ.

‘ತೂಕ ಇಳಿಸಿಕೊಳ್ಳಲು ಕೇವಲ ನಡೆಯುವುದು ಅಥವಾ ಓಡುವುದು ಸಾಕಾಗುವುದಿಲ್ಲ. ಸ್ನಾಯುಗಳ ಬಲವನ್ನು ಹೆಚ್ಚಿಸುವ ವ್ಯಾಯಾಮಗಳು ಸಹ ಅಗತ್ಯ. ಸ್ನಾಯುಗಳು ಬಲವಾಗಿದ್ದಷ್ಟೂ ಕ್ಯಾಲೊರಿಗಳು ವೇಗವಾಗಿ ಬರ್ನ್ ಆಗುತ್ತವೆ’ ಎನ್ನುತ್ತಾರೆ ಅವರು.

‘ಋತುಚಕ್ರದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ ತೂಕ ಹೆಚ್ಚಾಗುವುದು ಸಹಜ. ಆದಾಗ್ಯೂ, ಒತ್ತಡವನ್ನು ಕಡಿಮೆ ಮಾಡುವುದು, ಸರಿಯಾದ ನಿದ್ರೆ ಮಾಡುವುದು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ಇದನ್ನು ನಿವಾರಿಸಬಹುದು’ ಎಂಬುದು ಅವರ ಅಭಿಪ್ರಾಯ.

ಇದನ್ನೂ ಓದಿ: ಶೀಘ್ರವೇ ಖುಷ್ಬೂ ಸುಂದರ್ ಹಿರಿಮಗಳು ಚಿತ್ರರಂಗಕ್ಕೆ ಎಂಟ್ರಿ? ಕೇಳಿ ಬಂತು ಬಿಗ್ ಅಪ್​ಡೇಟ್

ಹೇಗೆ ಬದುಕಬೇಕು ಎಂಬುದಕ್ಕೆ ಖುಷ್ಬೂ ಸುಂದರ್ ಒಂದು ಉತ್ತಮ ಉದಾಹರಣೆ. 54 ನೇ ವಯಸ್ಸಿನಲ್ಲಿ ಅವರು ಸಾಧಿಸಿದ ಈ ಬದಲಾವಣೆ ಅನೇಕರಿಗೆ ಮಾದರಿ. ಸರಿಯಾದ ಮನಸ್ಥಿತಿ ಮತ್ತು ಸ್ಥಿರ ಪ್ರಯತ್ನದಿಂದ, ವಯಸ್ಸಿನ ಹೊರತಾಗಿಯೂ ಯಾರಾದರೂ ಆರೋಗ್ಯವಂತರಾಗಬಹುದು.

(ವಿಶೇಷ ಸೂಚನೆ: ಇದು ಸಂಪೂರ್ಣವಾಗಿ ನಟಿಯ ಅಭಿಪ್ರಾಯ. ನೀವು ಕೂಡ ದೇಹದ ತೂಕ ಇಳಿಸಿಕೊಳ್ಳಬೇಕು ಎಂದಿದ್ದರೆ ವೈದ್ಯರ ಸಲಹೆ ಪಡೆದು ಮುಂದುವರಿಯಿರಿ)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:03 am, Thu, 19 February 26

Source link

ವೇಗವಾಗಿ ಬಂದು ಕಾಲುವೆಗೆ ಉರುಳಿದ ಕಾರು, ಇಬ್ಬರು ವಿದ್ಯಾರ್ಥಿಗಳು ಸೇರಿ ನಾಲ್ಕು ಮಂದಿ ಸಾವು – Kannada News | Speeding Car Plunges Into Canal in Mathura, Four Killed on Way to Wedding

ಲಕ್ನೋ, ಫೆಬ್ರವರಿ 19: ವೇಗವಾಗಿ ಬಂದ ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸೇರಿ ನಾಲ್ವರು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಮದುವೆಗೆ ತೆರಳುತ್ತಿದ್ದಾಗ ತಿರುವು ಬಂದಿದೆ ಆಗ ವೇಗವನ್ನು ನಿಯಂತ್ರಿಸಲು ಸಾಧ್ಯವಾಗದೆ ಕಾಲುವೆಗೆ ಉರುಳಿದೆ. ಎಲ್ಲರೂ ಸಾವನ್ನಪ್ಪಿದ್ದಾರೆ. ತುಂಬಾ ಸಮಯದ ಬಳಿಕ ಕಾರನ್ನು ಕಾಲುವೆಯಿಂದ ಹೊರ ತೆಗೆಯಲಾಯಿತು. ಆ ವಿಡಿಯೋ ಇಲ್ಲಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಜೆಪಿ ತಂತ್ರಜ್ಞಾನದಲ್ಲೂ ‘ಕಾಪಿ-ಪೇಸ್ಟ್’ ಸಂಸ್ಕೃತಿ ಮುಂದುವರಿಸಿದೆ: ‘ರೋಬೋಡಾಗ್’ ವಿವಾದಕ್ಕೆ ಸಿಎಂ ಸಿದ್ದರಾಮಯ್ಯ ಕಿಡಿ – Kannada News | Robodog Controversy: Chinese Tech Fiasco at India AI Summit Sparks ‘Make in India’ Debate

ಬೆಂಗಳೂರು, ಫೆ.19: ದೆಹಲಿಯ ಭರತ್ ಮಂಟಪದಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್’ನಲ್ಲಿ (India AI Impact Summit) ಪ್ರದರ್ಶಿಸಲಾದ ‘ರೋಬೋಡಾಗ್’ (Robodog) ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರವು ಈ ಹಿಂದೆ ಯುಪಿಎ (UPA) ಸರ್ಕಾರದ ಯೋಜನೆಗಳನ್ನು ನಕಲು ಮಾಡಿ ತನ್ನದೇ ಎಂದು ಹೆಸರಿಟ್ಟುಕೊಂಡಿತ್ತು. ಈಗ ತಂತ್ರಜ್ಞಾನದಲ್ಲೂ ಅದೇ ‘ಕಾಪಿ-ಪೇಸ್ಟ್’ ಸಂಸ್ಕೃತಿಯನ್ನು ಮುಂದುವರಿಸಿದೆ ಎಂದು ಸಿದ್ದರಾಮಯ್ಯ ಎಕ್ಸ್​​ ಖಾತೆಯಲ್ಲಿ ಟೀಕಿಸಿದ್ದಾರೆ.

ಸಮ್ಮೇಳನದಲ್ಲಿ ಪ್ರದರ್ಶಿಸಲಾದ ರೋಬೋಡಾಗ್ ಚೀನಾ ಮೂಲದ ‘ಯೂನಿಟ್ರೀ’ (Unitree) ಕಂಪನಿಯ ಉತ್ಪನ್ನವಾಗಿದೆ. ಆದರೆ ಇದನ್ನು ಭಾರತದ್ದೇ ಆವಿಷ್ಕಾರ ಎಂಬಂತೆ ಬಿಂಬಿಸಿರುವುದು ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗುರ ತಂದಿದೆ ಎಂದು ಅವರು ಕಿಡಿಕಾರಿದ್ದಾರೆ. ಮೋದಿಯವರ ‘ಮೇಕ್ ಇನ್ ಇಂಡಿಯಾ’ (Make in India) ಅಭಿಯಾನವು ಈಗ ‘ಫೇಕ್ ಇನ್ ಇಂಡಿಯಾ’ (Fake in India) ಆಗಿ ಬದಲಾಗಿದೆ. ಸ್ವದೇಶಿ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವ ಬದಲು ಪರಕೀಯರ ತಂತ್ರಜ್ಞಾನಕ್ಕೆ ಭಾರತದ ಲೇಬಲ್ ಅಂಟಿಸುವ ಕೆಲಸ ಆಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ನೋಡಿ ಎಕ್ಸ್​​​ ಪೋಸ್ಟ್​;

ಇಂತಹ ಜಾಗತಿಕ ಮಟ್ಟದ ಸಮ್ಮೇಳನದಲ್ಲಿ ಸರಿಯಾದ ಪರಿಶೀಲನೆ ಇಲ್ಲದೆ ರೋಬೋಟ್ ಪ್ರದರ್ಶನ ಮಾಡಿರುವುದು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಮತ್ತು ಪ್ರಚಾರದ ಹಪಾಹಪಿಯನ್ನು ತೋರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ರೋಬೋಡಾಗ್ ವಿವಾದವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ದೆಹಲಿಯ ಭರತ್ ಮಂಟಪದಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026’ ರಲ್ಲಿ ನಡೆದ ಈ ಘಟನೆಯು ದೇಶೀಯ ಆವಿಷ್ಕಾರ ಮತ್ತು ತಂತ್ರಜ್ಞಾನದ ನೈಜತೆಯ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಟ್ ಪ್ರದರ್ಶನ; ವಿವಾದಕ್ಕೆ ಕ್ಷಮೆ ಯಾಚಿಸಿದ ಗಾಲ್ಗೋಟಿಯಾಸ್ ವಿವಿ

ವಿವಾದದ ಕೇಂದ್ರಬಿಂದು: ಗಾಲ್ಗೋಟಿಯಸ್ ವಿಶ್ವವಿದ್ಯಾಲಯ:

ಉತ್ತರ ಪ್ರದೇಶದ ಗಾಲ್ಗೋಟಿಯಸ್ ವಿಶ್ವವಿದ್ಯಾಲಯವು ಸಮ್ಮೇಳನದಲ್ಲಿ ಒಂದು ರೋಬೋಟಿಕ್ ನಾಯಿಯನ್ನು ಪ್ರದರ್ಶಿಸಿತು. ಇದಕ್ಕೆ ‘ಒರಿಯನ್’ (Orion) ಎಂದು ಹೆಸರಿಡಲಾಗಿತ್ತು. ಆದರೆ, ನೆಟ್ಟಿಗರು ಇದನ್ನು ತಕ್ಷಣವೇ ಗುರುತಿಸಿ, ಇದು ಚೀನಾದ ‘ಯೂನಿಟ್ರೀ’ (Unitree) ಕಂಪನಿಯ Unitree Go2 ಮಾಡೆಲ್ ಎಂದು ಸಾಕ್ಷ್ಯ ಸಮೇತ ಬಹಿರಂಗಪಡಿಸಿದ್ದಾರೆ. ವಿಶ್ವವಿದ್ಯಾಲಯದ ಪ್ರೊಫೆಸರ್ ನೇಹಾ ಸಿಂಗ್ ಅವರು ಮಾಧ್ಯಮಗಳ ಮುಂದೆ ಮಾತನಾಡುವಾಗ ಇದನ್ನು ನಮ್ಮ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ” ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಚೀನಾದಿಂದ ಕೇವಲ 2-3 ಲಕ್ಷ ರೂಪಾಯಿಗೆ ಸಿಗುವ ರೋಬೋಟ್ ಎಂದು ಗೊತ್ತಾದಾಗ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ರಾಜಮನೆತನದ ವಿವಾಹ, ವಧುವಿನ ಮೇಲೆ ಹೂವಿನಂತೆ ಬರೋಬ್ಬರಿ 8 ಕೋಟಿ ರೂ. ನಗದು ಚೆಲ್ಲಿದ ವರ – Kannada News | Punjab: Wedding Extravaganza: Groom’s Family Showers Bride With Bundles of Cash

ಅಮೃತಸರ, ಫೆಬ್ರವರಿ 19: ಪಂಜಾಬ್​​ನ ತರಣ್ ತರಣ್​ನಲ್ಲಿ ನಡೆದ ರಾಜಮನೆತನದ ವಿವಾಹವೊಂದು ಎಲ್ಲರ ಗಮನ ಸೆಳೆದಿದೆ. ವರ ವಧುವಿನ ಮೇಲೆ ಬರೋಬ್ಬರು 8 ಕೋಟಿ ರೂ. ಮೌಲ್ಯದ ನೋಟುಗಳ ಸುರಿಮಳೆಗೈದಿದ್ದಾನೆ. ಎಲ್ಲರೂ ಅಚ್ಚರಿಯಿಂದ ಈ ದೃಶ್ಯ ವೀಕ್ಷಿಸಿದ್ದಾರೆ. ಅಲ್ಲಿದ್ದ ಅತಿಥಿಗಳು ಈ ದೃಶ್ಯವನ್ನು ನೋಡಿ ಆಘಾತಕ್ಕೊಳಗಾದರು. ಕೆಲವರು ಇದನ್ನು ರಾಜಮನೆತನದ ಪದ್ಧತಿ ಎಂದು ಕರೆದರೆ, ಇನ್ನು ಕೆಲವರು ಇದನ್ನು ಆಡಂಬರ ಎಂದು ಕರೆದಿದ್ದಾರೆ.

ಕೋಟ್ಯಂತರ ರೂಪಾಯಿಯ ಸುರಿಮಳೆ ಇದು ಎಂಬ ಚರ್ಚೆಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ಪ್ರಾರಂಭವಾದವು. ಬಳಿಕ ಡಿಜೆ ಆಪರೇಟರ್  ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಸುಮಾರು 3 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಹೆಚ್ಚಿನ ನೋಟುಗಳು ಹತ್ತು ರೂಪಾಯಿಗಳದ್ದಾಗಿದ್ದವು ಎಂದು ಅವರು ಹೇಳಿದ್ದಾರೆ. ಇದು ವಿವಾಹ ಆಚರಣೆಯ ಭಾಗ ಮತ್ತು ಕುಟುಂಬದವರು ಸಂತೋಷವನ್ನು ವ್ಯಕ್ತಪಡಿಸುವ ವಿಧಾನ ಎಂದು ಹೇಳಲಾಗುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಭಾಗ್ಯಲಕ್ಷ್ಮೀ’ ಧಾರಾವಾಹಿ ಕೊನೆಯಾಗುತ್ತಾ? ‘ತಾಂಡವ್’ ಪಾತ್ರಧಾರಿ ಸುದರ್ಶನ್ ಹೇಳೋದೇನು? – Kannada News | Bhagyalakshmi Serial End? Actor Sudarshan Dispels Rumors After 1000 Episodes

ಕಲರ್ಸ್ ಕನ್ನಡದಲ್ಲಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಈಗಾಗಲೇ ಸಾವಿರ ಎಪಿಸೋಡ್​​ಗಳನ್ನು ಪೂರ್ಣಗೊಳಿಸಿದೆ. ಈ ಧಾರಾವಾಹಿ ಒಳ್ಳೆಯ ಟಿಆರ್​​ಪಿಯನ್ನು ಪಡೆದುಕೊಳ್ಳುತ್ತಾ ಬರುತ್ತಿದೆ. ಈಗ ಧಾರಾವಾಹಿ ಕೊನೆ ಆಗುತ್ತಿದೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಧಾರಾವಾಹಿಯಲ್ಲಿ ತಾಂಡವ್ ಪಾತ್ರ ಮಾಡ್ತಿರೋ ಸುದರ್ಶನ್ ಮಾತನಾಡಿದ್ದಾರೆ. ಅವರು ಧಾರಾವಾಹಿ ಮುಗಿಯುತ್ತಾ ಅಥವಾ ಇಲ್ಲವಾ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

‘ಭಾಗ್ಯಲಕ್ಷ್ಮೀ’ ಧಾರಾವಾಹಿ 2022ರಲ್ಲಿ ಪ್ರಸಾರ ಆರಂಭಿಸಿತು. ಮೊದಲು ಅಕ್ಕ-ತಂಗಿ ಕಥೆಯನ್ನು ಹೊಂದಿದ್ದ ಈ ಧಾರಾವಾಹಿ, ಆ ಬಳಿಕ ಅಕ್ಕನ ಕಥೆಯೇ ಬೇರೆ, ತಂಗಿ ಕಥೆಯೇ ಬೇರೆ ಮಾಡಲಾಯಿತು. ‘ಲಕ್ಷ್ಮೀ ಬಾರಮ್ಮ’ ಹೆಸರಲ್ಲಿ ತಂಗಿ ಧಾರಾವಾಹಿ ಪ್ರಸಾರ ಕಂಡಿತು. ‘ಭಾಗ್ಯಲಕ್ಷ್ಮೀ’ ಹಾಗೆಯೇ ಮುಂದುವರಿಯಿತು. ಈಗ ಧಾರಾವಾಹಿ ಕೊನೆ ಆಗುತ್ತದೆ ಎಂದು ಹೇಳಲಾಗುತ್ತಾ ಇದೆ.

ತಾಂಡವ್ ಒಳ್ಳೆಯವನಾಗೋ ಪ್ರಯತ್ನದಲ್ಲಿ ಇದ್ದಾನೆ. ಭಾಗ್ಯಾಳ ಬಳಿ ಕ್ಷಮೆ ಕೇಳಿ ಮನೆಗೆ ಬರಬೇಕು ಎಂಬ ಪ್ರಯತ್ನಿಸುತ್ತಿದ್ದಾನೆ. ಇದು ನಾಟಕವೋ ಅಥವಾ ನಿಜಕ್ಕೂ ಆತ ಬದಲಾಗಿದ್ದಾನೋ ಎಂಬ ಪ್ರಶ್ನೆ ವೀಕ್ಷಕರದ್ದು. ಇನ್ನು ಅತ್ತ, ಆದಿಯು ಭಾಗ್ಯಾಳ ವಿವಾಹ ಆಗುವ ಪ್ರಯತ್ನದಲ್ಲಿ ಇದ್ದಾನೆ. ಇದು ಕೂಡ ಕುತೂಹಲ ಸೃಷ್ಟಿಸಿದೆ. ಹಾಗಾದರೆ ಸುದರ್ಶನ್ ಹೇಳೋದೇನು?

‘ಒಂದು ಧಾರಾವಾಹಿ ಸಾವಿರ ಎಪಿಸೋಡ್ ಪೂರ್ಣಗೊಳಿಸುತ್ತಿದ್ದಂತೆ ಧಾರಾವಾಹಿ ಮುಗಿಯುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ನಮ್ಮ ಧಾರಾವಾಹಿ ಕಡಿಮೆ ಟಿಆರ್​​ಪಿ ಪಡೆದರೆ ಆ ರೀತಿಯ ಊಹೆ ಅಥವಾ ಕಲ್ಪನೆ ಮಾಡಿಕೊಳ್ಳಬಹುದು. ಆದರೆ, ನಮ್ಮ ಧಾರಾವಾಹಿ ಉತ್ತಮ ಟಿಆರ್​​ಪಿಯನ್ನೇ ಪಡೆದುಕೊಳ್ಳುತ್ತಿದೆ. ಹೀಗಾಗಿ, ಧಾರಾವಾಹಿ ಮುಗಿಯುತ್ತದೆ ಎಂಬುದರಲ್ಲಿ ಅರ್ಥವಿಲ್ಲ. ಆದರೂ ಧಾರಾವಾಹಿ ವಿಷಯದಲ್ಲಿ ವಾಹಿನಿಯವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು’ ಎನ್ನುತ್ತಾರೆ ಅವರು.

ಇದನ್ನೂ ಓದಿ: ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಆದಿ ಮದುವೆ ಆಗಲು ಬಂದ ಮೇಘಾಶ್ರೀ; ಹೊಸ ತಿರುವಿಗೆ ವೇದಿಕೆ

ಇನ್ನು, ‘ರಾಣಿ’ ಹೆಸರಿನ ಸೀರಿಯಲ್ ಬಿಗ್ ಬಾಸ್ ಸಂದರ್ಭದಲ್ಲೇ ಘೋಷಣೆ ಆಗಿದೆ. ಈ ಧಾರಾವಾಹಿಯ ಪ್ರೋಮೋ ಕೂಡ ರಿಲೀಸ್ ಆಗಿದೆ. ಧಾರಾವಾಹಿ ಪ್ರಸಾರ ಆಗಬೇಕು ಎಂದರೆ ಒಂದು ಧಾರಾವಾಹಿ ಪೂರ್ಣಗೊಳ್ಳಲೇಬೇಕು. ಅದು ‘ಭಾಗ್ಯಲಕ್ಷ್ಮೀ’ನಾ ಎಂಬ ಪ್ರಶ್ನೆ ಸದ್ಯದ್ದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು, ಬೆಳಗಾವಿಯಲ್ಲಿ ‘ಅನಾರೋಗ್ಯಕರ’ ಗಾಳಿಮಟ್ಟ: ಕೆಮ್ಮು, ನೆಗಡಿ, ಉಸಿರಾಟದ ತೊಂದರೆಗಳು ಹೆಚ್ಚಾಗುವ ಸಾಧ್ಯತೆ – Kannada News | Bengaluru Air Pollution: Karnataka AQI ‘Unhealthy,’ Doctors Warn of Respiratory Issues

ಬೆಂಗಳೂರು, ಫೆ.19: ಇಂದು (ಫೆ. 19) ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು (Air Quality Index) ಹದಗೆಟ್ಟಿದ್ದು, ಅದರಲ್ಲೂ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಆತಂಕಕಾರಿ ಮಟ್ಟಕ್ಕೆ ತಲುಪಿದೆ. ನಗರದ ಸರಾಸರಿ ಗಾಳಿಯ ಮಟ್ಟ 117 ರಿಂದ 157 ರ ನಡುವೆ ದಾಖಲಾಗಿದ್ದು, ಇದು ‘ಕಳಪೆ’ ಮತ್ತು ಕೆಲವು ಭಾಗಗಳಲ್ಲಿ ‘ಅನಾರೋಗ್ಯಕರ’ ಮಟ್ಟಕ್ಕೆ ತಲುಪಿದೆ. ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್ ಮತ್ತು ಬಿಟಿಎಂ ಲೇಔಟ್‌ನಂತಹ ಪ್ರದೇಶಗಳಲ್ಲಿ ಮಾಲಿನ್ಯದ ಮಟ್ಟ ಹೆಚ್ಚಿದೆ.

ಇನ್ನು ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ವಾಯು ಗುಣಮಟ್ಟ ಕಳಪೆಯಾಗಿದ್ದು, ಗಾಳಿಯ ಮಟ್ಟ 277 ದಾಖಲಾಗಿದೆ. ಇದು ‘ಅನಾರೋಗ್ಯಕರ’ ಹಂತ ಎಂದು ಹೇಳಲಾಗಿದೆ. ಹಾಗಾಗಿ ಶ್ವಾಸಕೋಶದ ಸಮಸ್ಯೆ ಇರುವವರಿಗೆ ಹಾನಿಕಾರಕವಾಗಿದೆ. ಕರಾವಳಿ ಭಾಗದಲ್ಲೂ ವಾಯು ಗುಣಮಟ್ಟ ಕುಸಿತ ಕಂಡಿದ್ದು, ವಾಹನ ದಟ್ಟಣೆ ಮತ್ತು ಒಣ ಹವೆಯಿಂದಾಗಿ ಗಾಳಿಯಲ್ಲಿ ಧೂಳಿನ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ತಾಪಮಾನದ ಏರಿಳಿತ (ಬೆಳಿಗ್ಗೆ ಚಳಿ, ಮಧ್ಯಾಹ್ನ ಬಿಸಿಲು) ಮತ್ತು ವಾಯು ಮಾಲಿನ್ಯದ ಕಾರಣದಿಂದಾಗಿ ಕೆಮ್ಮು, ನೆಗಡಿ ಮತ್ತು ಉಸಿರಾಟದ ತೊಂದರೆಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಸಂಚರಿಸುವಾಗ N95 ಮಾಸ್ಕ್ ಬಳಸುವುದು ಉತ್ತಮ.ಉಸಿರಾಟದ ತೊಂದರೆ ಇರುವವರು ಮತ್ತು ಮಕ್ಕಳು ಬೆಳಿಗ್ಗೆ ಅಥವಾ ಸಂಜೆ ಹೊರಗೆ ಹೋಗುವುದನ್ನು ಕಡಿಮೆ ಮಾಡುವುದು ಸೂಕ್ತ ಹಾಗೂ ಒಣ ಹವೆಯಿರುವುದರಿಂದ ಸಾಕಷ್ಟು ನೀರು ಕುಡಿಯಿರಿ ಎಂದು ಸಲಹೆ ನೀಡಿದ್ದಾರೆ. ಇನ್ನು ಈ ಗಾಳಿ ಗುಣಮಟ್ಟ ಮಧ್ಯಾಹ್ನ ಅಥವಾ ಸಂಜೆ ಹೊತ್ತಿಗೆ ಬದಲಾಗಬಹುದು ಎಂದು ಹೇಳಲಾಗಿದೆ. ಗಾಳಿಯಲ್ಲಿ ಪ್ರಮುಖವಾಗಿ PM2.5 ಮತ್ತು PM10 ಕಣಗಳ ಪ್ರಮಾಣ ಹೆಚ್ಚಾಗಿದೆ, ಇದು ಒಣ ಹವೆಯಿಂದಾಗಿ ಗಾಳಿಯಲ್ಲಿ ಧೂಳು ಸುಲಭವಾಗಿ ಹರಡುತ್ತದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಈ ಜಿಲ್ಲೆಗಳಲ್ಲಿ ಶಾಖದ ತೀವ್ರತೆ ಹೆಚ್ಚಾಗಲಿದೆ, ದೇಹದ ಚರ್ಮದ ಬಗ್ಗೆ ಇರಲಿ ಎಚ್ಚರ

ಪ್ರಮುಖ ಜಿಲ್ಲೆಗಳಲ್ಲಿ ವಾಯುಗುಣ ಮಟ್ಟ:

ಬೆಂಗಳೂರು-157

ಮಂಗಳೂರು-178

ಬೆಳಗಾವಿ-277

ಮೈಸೂರು-85

ಚಾಮರಾಜನಗರ – 45

ಶಿವಮೊಗ್ಗ – 187

ಬಳ್ಳಾರಿ -146

ಹಬ್ಬಳ್ಳಿ-160

ಉಡುಪಿ – 185

ವಿಜಯಪುರ -144

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್​​ಗೆ ಕೇಡು ಬಯಸಿದ ಧುರಂಧರ್​ನ ಕರ್ಮ ಹಿಂಬಾಲಿಸುತ್ತಿದೆ’; ಹಿಂದಿ ಯೂಟ್ಯೂಬರ್​​ ಸೆನ್ಸೇಷನ್ ಹೇಳಿಕೆ – Kannada News | Dhurandhar 2 Faces Karma: YouTuber on Toxic Rivalry and Legal Woes

‘ಧುರಂಧರ್ 2’ ಸಿನಿಮಾ (Dhurandhar 2 Movie) ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರ ಗೆದ್ದೇ ಗೆಲ್ಲುತ್ತೆ ಎಂಬ ನಂಬಿಕೆ ಅಭಿಮಾನಿಗಳದ್ದು. ಈ ಚಿತ್ರದ ಟೀಸರ್ ಇತ್ತೀಚೆಗೆ ರಿಲೀಸ್ ಆಯಿತು. ಆದರೆ, ಹೆಚ್ಚಿನ ಪರಿಣಾಮ ಬೀರಲು ಇದು ವಿಫಲವಾಗಿದೆ. ಇನ್ನು, ಐಎಂಡಿಬಿ ರೇಟಿಂಗ್​​ನಲ್ಲಿಯೂ ‘ಧುರಂಧರ್ 2’ ಸಿನಿಮಾನ ‘ಟಾಕ್ಸಿಕ್’ ಹಿಂದಕ್ಕೆ ಹಾಕಿದೆ. ಈ ಎಲ್ಲಾ ವಿಷಯಗಳ ಮಧ್ಯೆ ‘ಧುರಂಧರ್ 2 ತಂಡವನ್ನು ಕರ್ಮ ಹಿಂಬಾಲಿಸುತ್ತಿದೆ ಎಂದು ಹಿಂದಿ ಯೂಟ್ಯೂಬರ್ ಒಬ್ಬರು ಹೇಳಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ.

ಹಿಂದಿ ಮಂದಿ ‘ಧರುಂದರ್ 2’ ಸಿನಿಮಾ ಪರವಾಗಿ ಮಾತನಾಡುತ್ತಾ ಇದ್ದಾರೆ. ಈ ಚಿತ್ರದ ಎದುರು ರಿಲೀಸ್ ಆಗೋ ಸಿನಿಮಾಗಳು ನಾಶವಾಗುತ್ತವೆ ಎಂದು ಭಯ ಹುಟ್ಟಿಸೋ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಒಳಗೆ ಭಯ ಇದ್ದೇ ಇದೆ. ಈ ಕಾರಣದಿಂದಲೇ ವದಂತಿ ಹಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಕೆಲವರ ಆರೋಪ. ‘ಟಾಕ್ಸಿಕ್ ಮುಂದಕ್ಕೆ ಹೋಗುತ್ತೆ, ಟಾಕ್ಸಿಕ್ ಅಂದುಕೊಂಡ ದಿನಾಂಕದಂದು ರಿಲೀಸ್ ಆಗಲ್ಲ’ ಎಂದೆಲ್ಲ ವದಂತಿ ಹಬ್ಬಿಸುವ ಕೆಲಸ ಮಾಡಿದ್ದು ‘ಧುರಂಧರ್’ ತಂಡ ಎಂದು ಹಿಂದಿ ಯೂಟ್ಯೂಬರ್ ವಾದಿಸಿದ್ದಾರೆ.

‘ನೂರಕ್ಕೆ ನೂರಾಹತ್ತು ಪರ್ಸೆಂಟ್ ಹೇಳ್ತಿದೀನಿ ಧುರಂಧರ್ 2 ಸಿನಿಮಾ ಪೋಸ್ಟ್​ಪೋನ್ ಆಗಲಿದೆ. ಬೇರೆಯವರಿಗೆ ಹೊಂಡ ತೋಡಿದರೆ, ಬೀಳೋದು ನಾವೇ. ಟಾಕ್ಸಿಕ್ ಪೋಸ್ಟ್​​ಪೋನ್​ ಆಗುತ್ತದೆ ಎಂದು ಧುರಂಧರ್ ತಂಡದವರು ಸುದ್ದಿ ಹಬ್ಬಿಸುತ್ತಲೇ ಬಂದರು. ಚಿತ್ರದ ಕಥೆ ಲೀಕ್ ಆಗಿದೆ ಎಂದು ಕೂಡ ಹೇಳಿದರು. ಆದರೆ, ಈಗ ಕರ್ಮ ಧುರಂಧರ್ 2 ಚಿತ್ರಕ್ಕೆ ಸುತ್ತಿಕೊಂಡು ಬಂದಿದೆ. ಅವರ ಸಿನಿಮಾ ಮುಂದಕ್ಕೆ ಹೋಗುತ್ತದೆ’ ಎಂದು ಹೇಳಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ‘ಧುರಂಧರ್ 2’ ಜೊತೆ ಬರ್ತಾರಾ ಅಕ್ಷಯ್ ಕುಮಾರ್? ಆದರೆ ಒಂದು ಟ್ವಿಸ್ಟ್

‘ಧುರಂಧರ್ 2’ ಚಿತ್ರಕ್ಕೆ ಕಾನೂನಾತ್ಮಕವಾಗಿಯೂ ಸಮಸ್ಯೆ ಆಗಿದೆ. ಮುಂಬೈನ ಅನೇಕ ಕಡೆಗಳಲ್ಲಿ ಇವರು ಶೂಟ್ ಮಾಡುತ್ತಿದ್ದಾರೆ. ನಿರ್ಬಂಧಿತ ಪ್ರದೇಶಗಳಲ್ಲೂ ಶೂಟ್ ಮಾಡುವ ಮೂಲಕ ಬೃಹತ್ ಮುಂಬೈ ಪಾಲಿಕೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:29 am, Thu, 19 February 26

Source link

ಮರು ಮದುವೆಯಾದರೂ ಬಿಡಲಿಲ್ಲ, ಮನೆಗೆ ನುಗ್ಗಿ ಮೂರು ತಿಂಗಳ ಗರ್ಭಿಣಿಯಾಗಿದ್ದ ಮಾಜಿ ಪತ್ನಿಯ ಇರಿದು ಕೊಂದ ಟೆಕ್ಕಿ – Kannada News | Hyderabad Techie Murders Pregnant Ex Wife: Domestic Dispute Escalates to Fatal Attack

ಹೈದರಾಬಾದ್, ಫೆಬ್ರವರಿ 19: ಟೆಕ್ಕಿಯೊಬ್ಬ ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಯನ್ನು ಇರಿದು ಕೊಂದಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಅವರಿಬ್ಬರು ಸತಿ ಪತಿಗಳಾಗಿದ್ದ ಸಂದರ್ಭದಲ್ಲಿ ಪತಿ ಮೇಲೆ ಆಕೆ ಕೌಟುಂಬಿಕ ಹಿಂಸಾಚಾರದ ದೂರು ದಾಖಲಿಸಿದ್ದಳು. ಆತ ಕೆನಡಾದಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಈ ದೂರಿನಿಂದಾಗಿ ಆತ ಕೆನಡಾಗೆ ಹಿಂದಿರುಗಲು ಸಾಧ್ಯವಾಗಿಲ್ಲ, ಅದಕ್ಕೆ ಹತಾಶಗೊಂಡ ವ್ಯಕ್ತಿ ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಯ ತಲೆಗೆ ಚಾಕುವಿನಿಂದ ಪದೇ ಪದೇ ಇರಿದು ಹತ್ಯೆ(Murder)) ಮಾಡಿದ್ದಾನೆ. ತನ್ನ ತಾಯಿಯ ಸಾವಿಗೂ ಮಾಜಿ ಪತ್ನಿಯೇ ಕಾರಣ ಎಂದು ಆರೋಪಿಸಿದ್ದಾನೆ.

ಮಹಿಳೆಯ ಎರಡನೇ ಪತಿ ತನ್ನ ದೂರಿನಲ್ಲಿ ಆಕೆ ಮೂರು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಹೇಳಿದ್ದಾರೆ. ಪೊಲೀಸರು ಇದನ್ನು ಇಲ್ಲಿಯವರೆಗೆ ದೃಢಪಡಿಸಲಾಗಿಲ್ಲ ಮತ್ತು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಆ ವ್ಯಕ್ತಿ 2022 ರಲ್ಲಿ ಆ ಮಹಿಳೆಯನ್ನು ವಿವಾಹವಾಗಿದ್ದ. ಮದುವೆ ಭಾರತದಲ್ಲಿ ನಡೆಯಿತು, ಮತ್ತು ಆ ವ್ಯಕ್ತಿ ನಂತರ ಕೆನಡಾಕ್ಕೆ ತೆರಳಿದ್ದರು, ಅಲ್ಲಿಗೆ ಪತ್ನಿಯನ್ನು ಕೂಡ ಕರೆದುಕೊಂಡು ಹೋಗಿದ್ದ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಶುರುವಾಗಿದ್ದವು ಈ ಕಾರಣದಿಂದ ಆಕೆ ಭಾರತಕ್ಕೆ ವಾಪಸಾಗಿದ್ದಳು, ಬಳಿಕ ಮಹಾರಾಷ್ಟ್ರದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಆಕೆ ದಾಖಲಿಸಿದ್ದಳು. ದಂಪತಿ 2024ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಮತ್ತು ಆ ಮಹಿಳೆ ಏಪ್ರಿಲ್ 2025 ರಲ್ಲಿ ಮತ್ತೆ ವಿವಾಹವಾಗಿದ್ದರು.

ತನ್ನ ತಾಯಿಯ ಮರಣದ ನಂತರ ಆ ವ್ಯಕ್ತಿ ಮಾರ್ಚ್ 2025 ರಲ್ಲಿ ಭಾರತಕ್ಕೆ ಮರಳಿದ್ದ, ಕೌಟುಂಬಿಕ ಹಿಂಸಾಚಾರ ಪ್ರಕರಣದ ಕಾರಣ ಆತನ ವಿರುದ್ಧ ಲುಕ್-ಔಟ್ ಸುತ್ತೋಲೆ ಹೊರಡಿಸಲಾಗಿತ್ತು. ಆತನ ಪಾಸ್‌ಪೋರ್ಟ್ ಅನ್ನು ಅಮಾನತುಗೊಳಿಸಲಾತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮತ್ತಷ್ಟು ಓದಿ: ಪ್ರೇಯಸಿಯ ಕೊಂದು ಶವದ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಮಾಧ್ಯಮಗಳೆದುರು ನಕ್ಕು ಹೇಳಿದ್ದೇನು?

ಈ ಕಾರಣದಿಂದಾಗಿ, ಆತ ಕೆನಡಾಕ್ಕೆ ಹಿಂತಿರುಗಲು ಸಾಧ್ಯವಾಗಲಿಲ್ಲ. ಆತ ನಿರುದ್ಯೋಗಿಯಾಗಿದ್ದ ಮತ್ತು ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದ. ತನ್ನ ತಾಯಿಯ ಸಾವು ಈ ಮಾನಸಿಕ ಯಾತನೆಯಿಂದಾಗಿ ಆಗಿದೆ ಎಂದು ಆತ ನಂಬಿದ್ದ. ಹಾಗಾಗಿ ಆಕೆಯನ್ನು ಕೊಲ್ಲುವುದೇ ಲೇಸು ಎನ್ನುವ ನಿರ್ಧಾರಕ್ಕೆ ಬಂದಿದ್ದ.ಆಕೆಯ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಆಕೆಯ ವಿಳಾಸವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ.

ಎರಡು ತಿಂಗಳ ಹಿಂದೆ ಹೈದರಾಬಾದ್ ತಲುಪಿ ಹಾಸ್ಟೆಲ್‌ನಲ್ಲಿ ವಾಸವಿದ್ದ. ದಂಪತಿ ಇತ್ತೀಚೆಗಷ್ಟೆ ಅಪಾರ್ಟ್​ಮೆಂಟ್ ಕೂಡ ಖರೀದಿ ಮಾಡಿದ್ದರು. ಆತ ಎರಡು ಚಾಕುಗಳು, ಒಂದು ಡ್ರಿಲ್ಲಿಂಗ್ ಮೆಷಿನ್ ಮತ್ತು ಐದು ಲೀಟರ್ ಪೆಟ್ರೋಲ್ ತುಂಬಿದ ಕ್ಯಾನ್‌ನೊಂದಿಗೆ ಮಹಿಳೆಯ ಅಪಾರ್ಟ್‌ಮೆಂಟ್‌ಗೆ ತಲುಪಿದ್ದ. ಆ ವ್ಯಕ್ತಿ ತನ್ನ ಮಾಜಿ ಪತ್ನಿಯ ಮನೆಗೆ ನುಗ್ಗಿ, ಆಕೆ ಇದ್ದ ಕೋಣೆಗೆ ಪ್ರವೇಶಿಸಿ, ಒಳಗಿನಿಂದ ಲಾಕ್ ಮಾಡಿ, ಆಕೆಯ ತಲೆಗೆ ಚಾಕುವಿನಿಂದ ಹಲವು ಬಾರಿ ಇರಿದು ಕೊಂದಿದ್ದಾನೆ.

ಇದು ಸಂಭವಿಸಿದಾಗ ಮಹಿಳೆಯ ಅತ್ತೆ ಬಾಲ್ಕನಿಯಲ್ಲಿದ್ದರು. ಕುಟುಂಬ ಸದಸ್ಯರು ಪೊಲೀಸರಿಗೆ ಕರೆ ಮಾಡಿದರು ಮತ್ತು ತಂಡವೊಂದು ಮನೆಗೆ ತಲುಪಿತು, ಆದರೆ ಆ ವ್ಯಕ್ತಿ ಕೋಣೆಯಾದ್ಯಂತ ಪೆಟ್ರೋಲ್ ಸುರಿದುಕೊಂಡು ಶೌಚಾಲಯಕ್ಕೆ ಬೀಗ ಹಾಕಿಕೊಂಡಿದ್ದ.ಆ ವ್ಯಕ್ತಿ ಕೋಣೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ. ಅವನನ್ನು ಶೌಚಾಲಯದಿಂದ ಹೊರಗೆ ತರಲು ಸ್ವಲ್ಪ ಮನವೊಲಿಸಬೇಕಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ಆತನನ್ನು ವಶಕ್ಕೆ ಪಡೆಯಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link