All posts by nagaraj11081993

Daily Devotional: ಮಕ್ಕಳು ಮಾತನಾಡುವಾಗ ತೊದಲುತ್ತಿದ್ರೆ ಜ್ಯೋತಿಷ್ಯ ಪ್ರಕಾರ ಇದೇ ಕಾರಣ – Kannada News | Addressing Childrens Speech Challenges: Insights from Astrology and Traditional Practices

ಬೆಂಗಳೂರು, ಫೆ.19: ಮಕ್ಕಳು ಮಾತನಾಡುವಾಗ ತೊದಲುತ್ತಿದ್ದರೆ ಅಥವಾ ಮಾತು ತಡವಾಗಿದ್ದರೆ ಪೋಷಕರಿಗೆ ಇದು ಸಾಮಾನ್ಯ ಆತಂಕ. ವೈದ್ಯಕೀಯವಾಗಿ ಯಾವುದೇ ಗಂಭೀರ ಸಮಸ್ಯೆ ಇಲ್ಲದಿದ್ದರೂ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಇದಕ್ಕೆ ಕೆಲವು ಪರಿಹಾರಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಗ್ರಹವು ಬುದ್ಧಿಶಕ್ತಿಗೆ ಮತ್ತು ಶುಕ್ರ ಗ್ರಹವು ಮಾತು ಹಾಗೂ ಕಂಠಕ್ಕೆ ಕಾರಕರು. ಇವುಗಳ ಅನುಗ್ರಹ ಮಾತಿನ ಬೆಳವಣಿಗೆಗೆ ಮುಖ್ಯ. ಮಕ್ಕಳ ಕೊಠಡಿಯಲ್ಲಿ ಹಸಿರು ಬಣ್ಣ ಹೆಚ್ಚಾಗಿ ಇರುವಂತೆ ನೋಡಿಕೊಳ್ಳುವುದು, ಅಂದರೆ ವಾಲ್‌ಪೇಪರ್ ಅಥವಾ ಗೋಡೆಗೆ ತಿಳಿ ಹಸಿರು ಬಣ್ಣ ಬಳಸುವುದು ಉತ್ತಮ. ಪ್ರತಿ ಬುಧವಾರ ನೆನೆಸಿದ ಹೆಸರು ಕಾಳನ್ನು ಮಕ್ಕಳಿಗೆ ದಾನ ಮಾಡಿಸುವುದು ಮಂಗಳಕರ. ವಾಕ್ಚಾತುರ್ಯದ ದೇವತೆಯಾದ ಸರಸ್ವತಿಯ ಆಶೀರ್ವಾದ ಪಡೆಯಲು, ಗುರುಗಳ ಕೈಯಿಂದ ಗುರುವಾರದಂದು ಬೆಳ್ಳಿಯ ಕಡ್ಡಿಯಿಂದ ನಾಲಿಗೆಯ ಮೇಲೆ ಐಂ ಬೀಜಾಕ್ಷರವನ್ನು ಬರೆಸುವುದು ಒಂದು ಸಂಪ್ರದಾಯ. ಗಾಯತ್ರಿ ಮಂತ್ರವನ್ನು ಮನೆಯಲ್ಲಿ ಪಠಿಸುವುದು ಅಥವಾ ಕೇಳಿಸುವುದು ಮಗುವಿನ ಬುದ್ಧಿಶಕ್ತಿ ಮತ್ತು ಮಾತಿನ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಹಯಗ್ರೀವ ಸ್ತೋತ್ರ ಪಠಣ ಮತ್ತು ದಕ್ಷಿಣಾಮೂರ್ತಿ ದರ್ಶನವೂ ಸಹ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಬಲಮುರಿ ಶಂಖದಿಂದ ಜೇನುತುಪ್ಪವನ್ನು ಮಗುವಿನ ನಾಲಿಗೆಗೆ ಸ್ಪರ್ಶಿಸುವುದು ಸಹ ಶುಭ ಫಲಿತಾಂಶ ನೀಡುತ್ತದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hassan: ಮದ್ಯದ ಅಮಲಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು – Kannada News | Drunk Driver Loses Control, Car Crashes Into House in Yalagunda Village, Hasan

ಹಾಸನ, ಫೆಬ್ರವರಿ 19: ಮದ್ಯದ ಅಮಲಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ರಸ್ತೆ ಬದಿಯ ಮನೆಗೆ ನುಗ್ಗಿರುವ ಘಟನೆ ಹಾಸನ ಜಿಲ್ಲೆಯ ಯಲಗುಂದ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರಿಗೆ ಗಂಭೀರ ಗಾಯಗಳಾಗಿದ್ದರೆ, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗ್ತಿದ್ದು, ಕಾರಲ್ಲಿದ್ದವರು ಪುರದಮ್ಮ ದೇವಸ್ಥಾನದಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದರು ಎನ್ನಲಾಗಿದೆ. ಕಾರು ಗುದ್ದಿದ ರಭಸಕ್ಕೆ ಮನೆಗೆ ತೀವ್ರ ಹಾನಿಯಾಗಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

 Daily Horoscope: ಇಂದು ರಾಶಿಯವರಿಗೆ ದೊಡ್ಡ ಜವಾಬ್ದಾರಿಗಳು ಹೆಚ್ಚಾದರೂ, ಉದ್ಯೋಗದಲ್ಲಿ ಶುಭವಾಗಲಿದೆ

ಬೆಂಗಳೂರು, ಫೆ.19:  ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಇಂದಿನ (ಫೆ.19) ದ್ವಾದಶ ರಾಶಿಗಳ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸದ ಶುಕ್ಲಪಕ್ಷದ ಬಿದಿಗೆ ತಿಥಿ, ಪೂರ್ವಾಭಾದ್ರ ನಕ್ಷತ್ರದಿಂದ ಕೂಡಿರುವ ವಿಶೇಷ ದಿನವಾಗಿದೆ. ರವಿ ಮತ್ತು ಚಂದ್ರ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು, ಇದು ಹಲವು ರಾಶಿಗಳಿಗೆ ಶುಭ ಫಲ ನೀಡಲಿದೆ. ಮೇಷ ರಾಶಿಗೆ ಜವಾಬ್ದಾರಿಗಳು ಹೆಚ್ಚಾದರೂ, ಉದ್ಯೋಗದಲ್ಲಿ ಶುಭವಾಗಲಿದೆ. ವೃಷಭ ರಾಶಿಯವರು ಹಣ ಗಳಿಕೆಯಲ್ಲಿ ಆಸಕ್ತಿ ತೋರಲಿದ್ದು, ಹಳೆಯ ಬಾಕಿ ವಸೂಲಿಯಾಗಲಿದೆ. ಮಿಥುನ ರಾಶಿಯವರಿಗೆ ಹಳೆಯ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಕರ್ಕಾಟಕ ರಾಶಿಯವರಿಗೆ ಮಾತು ಮತ್ತು ಹಣಕಾಸಿನ ವಿಷಯದಲ್ಲಿ ಶುಭವಾಗಲಿದೆ. ಸಿಂಹ ರಾಶಿಯವರ ಆತ್ಮವಿಶ್ವಾಸ ಗಟ್ಟಿಯಾಗಿದ್ದು, ಕಾರ್ಯಗಳಲ್ಲಿ ಯಶಸ್ಸು ಸಾಧಿಸುವರು. ಕನ್ಯಾ ರಾಶಿಯವರಿಗೆ ಆಕಸ್ಮಿಕ ಧನಯೋಗ ಮತ್ತು ಕಾರ್ಯಸಿದ್ಧಿ ಲಭಿಸಲಿದೆ. ತುಲಾ ರಾಶಿಯವರಿಗೆ ಹೊಸ ಅವಕಾಶಗಳು ಒದಗಿ ಬರಲಿದ್ದು, ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ವೃಶ್ಚಿಕ ರಾಶಿಯವರಿಗೆ ಆಕಸ್ಮಿಕ ಧನಯೋಗ ಮತ್ತು ಅವಿವಾಹಿತರಿಗೆ ಶುಭ ಸಮಾಚಾರವಿದೆ. ಧನುಸ್ಸು ರಾಶಿಯವರಿಗೆ ಬಿಡುವಿಲ್ಲದ ಕೆಲಸ ಮತ್ತು ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಯೋಗವಿದೆ. ಮಕರ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಪ್ರಮೋಷನ್ ಲಭಿಸಲಿದೆ. ಕುಂಭ ರಾಶಿಯವರಿಗೆ ತಂದೆ-ತಾಯಿಗಳ ಆರೋಗ್ಯದ ಬಗ್ಗೆ ಚಿಂತೆ ಕಾಡಬಹುದು, ಆದರೆ ಸಂಧ್ಯಾಕಾಲದಲ್ಲಿ ಶುಭ ಸುದ್ದಿ ದೊರೆಯಲಿದೆ. ಮೀನ ರಾಶಿಯವರಿಗೆ ಹೂಡಿಕೆಯಿಂದ ಲಾಭ ಮತ್ತು ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಬಣ್ಣ, ಸಂಖ್ಯೆ ಹಾಗೂ ವಿಶೇಷ ಮಂತ್ರಗಳನ್ನು ಸೂಚಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಸಂಗಾತಿಯ ಬಗ್ಗೆ ಅಪಾರ್ಥ ತಿಳಿದುಕೊಳ್ಳುವರು… – Kannada News | Horoscope 19 Thursday 2026; Dina Rashi Bhavishya Today, Checkout the details here

ಮೇಷ ರಾಶಿ:

ನಿಮ್ಮ ದೌರ್ಬಲ್ಯವನ್ನು ನೀವು ಸಹಾಕರಾತ್ಮಕವಾಗಿ ಪಡೆದುಕೊಂಡು ಮುನ್ನಡೆಯಬಹುದು. ಅಧ್ಯಾತ್ಮದಿಂದ ಆತ್ಮಬಲದ ವೃದ್ಧಿ. ಮನೆಯ ವಿಷಮ ಸ್ಥಿತಿಯನ್ನು ನಿಭಾಯಿಸುವಿರಿ. ಸಂಗಾತಿಗೆ ನಿಮ್ಮ ವಾಸ್ತವದ ಉದ್ಯೋಗದ ವಾಸ್ತವ ಚಿತ್ರಣವನ್ನು ಕೊಡುವಿರಿ. ಧಾರ್ಮಿಕ ಶ್ರದ್ಧೆಯಿಂದ ಅನುಕೂಲತೆ ಇರಲಿದೆ. ಮಿತ್ರರ ಧನಸಹಾಯದಿಂದ ವಾಹನವನ್ನು ಖರೀದಿಸುವಿರಿ. ವಿನೀತ ವೇಷವೇ ನಿಮಗೆ ಶೋಭೆ.

ವೃಷಭ ರಾಶಿ:

ಯಾರ ಕಣ್ತಪ್ಪಿಸಿಯೂ ನೀವು ವ್ಯವಹಾರವನ್ನು ಮಾಡಲಾಗದು. ಮಾತಿನಲ್ಲಿ ಮೃದುತ್ವವನ್ನು ಇತರರಿಗೂ ಇಷ್ತವಾದೀತು. ಯಾರಾದರೂ ನಿಮ್ಮ ಕಿವಿಕಚ್ಚಬಹುದು. ನಿಮ್ಮ ಮನಸ್ಸು ಹೊಸ ಪರಿವರ್ತನೆಯ ಕಡೆ ಹೊರಳುವುದು. ಅಶುಭವಾರ್ತೆಗೆ ನೀವು ಕಿವಿಯಾಗಬೇಕಾದೀತು. ಲೆಕ್ಕ ಶೋಧಕರು ಹೆಚ್ಚಿನ ಒತ್ತಡದಲ್ಲಿ ಇರುವರು. ಅಪರಿಚಿತರ ಜೊತೆ ಸಲುಗೆಯ ವ್ಯವಹಾರವು ಬೇಡ. ಸಂಗಾತಿಯ ಮಾತು ನಿಮಗೆ ಇಷ್ಟವಾಗದು. ಆದರೆ ನೇರವಾಗಿ ಹೇಳಲು ಧೈರ್ಯ ಸಾಲದು.

ಮಿಥುನ ರಾಶಿ:

ಮಕ್ಕಳು ಹೇಳಿದ್ದನ್ನು ನೀಡುವಿರಿ. ಮಕ್ಕಳ ದುರ್ಬಲ ಮನಸ್ಸಿಗೆ ಸರಿಯಾದ ಮಾರ್ಗದರ್ಶನ ಬೆಂಬಲದ ಅಗತ್ಯವಿದೆ. ಹೊಸ ಉದ್ಯಮದ ಸಲುವಾಗಿ ಉದ್ಯಮಿಗಳನ್ನು ಭೇಟಿ ಮಾಡುವಿರಿ. ಸಾಲವನ್ನು ಮಾಡಬೇಕಾಗಿಬರಬಹುದು. ಅತಿಯಾದ ಆನಂದದ ಮಧ್ಯದಲ್ಲಿ ದುಃಖವೂ ಇದೆ. ಕಛೇರಿಯ ಒತ್ತಡದಿಂದ ವಿರಾಮವನ್ನು ಪಡೆದು ಕುಟುಂಬಕ್ಕೆ ಸಮಯವನ್ನು ಕೊಡುವಿರಿ. ಉದ್ಯೋಗದ ನಿಮಿತ್ತ ಅನಿವಾರ್ಯವಾಗಿ ಓಡಾಟ ಮಾಡುವ ಸಂದರ್ಭವು ಬರಬಹುದು.

ಕರ್ಕಾಟಕ ರಾಶಿ:

ಯಾರದೋ ತಪ್ಪಿನಿಂದ ಅಕಸ್ಮಾತ್ ಆಗಿ ವಾಹನದಿಂದ ಬೀಳುವ ಸಾಧ್ಯತೆ. ಅಧಿಕಾರದ ಆಮಿಷಕ್ಕೆ ಬಲಿಯಾಗಬಹುದು. ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಸಂಗಾತಿಯಿಂದ ಹಣವನ್ನು ಕೇಳಿಪಡೆಯುವಿರಿ. ಪಾಲುದಾರಿಕೆಯಿಂದ ನಿಮಗೆ ಉಪಯೋಗವಾಗಲಿದೆ. ಆರ್ಥಿಕತೆಯ ತೊಂದರೆಯಿಂದ ನಿಮ್ಮ ಕೆಲವು ವಸ್ತುಗಳನ್ನು ಮಾರಾಟ ಮಾಡುವಿರಿ. ನಿಮ್ಮ ಅಪ್ರಾಮಣಿಕತೆಯು ಕೆಲವರಿಗೆ ಗೊತ್ತಾಗಬಹುದು.

ಸಿಂಹ ರಾಶಿ:

ಗೌರವವಿಲ್ಲದೆ ಕಡೆ ಹೋಗಲು ನೀವು ಬಯಸುವುದಿಲ್ಲ. ಇನ್ನೊಬ್ಬರಿಗೆ ಸಹಾಯ ಮಾಡಲು ಕೂಡಿಟ್ಟ ಹಣವನ್ನು ತೆಗೆಯಬೇಕಾದೀತು. ನಿಗದಿತ ಸಮಯಕ್ಕೆ ಕೆಲಸವಾಗದೇ ಇರುವ ಕಾರಣ ಕೆಲಸವನ್ನು ಕೊಟ್ಟವರು ನಿಮ್ಮ ಮೇಲೆ ಮುನಿಸಿಕೊಂಡಾರು. ನಿಮ್ಮ ಸಂಗಾತಿಯ ಮಾತುಗಳಿಗೆ ಪ್ರಾಮುಖ್ಯತೆ ನೀಡಿ. ನಿಮ್ಮ ಕಾರಣದಿಂದಲೇ ನೊಂದಿರಲೂ ಸಾಕು. ಆಲಸ್ಯದ ಕಾರಣ ಇಂದು ಕಛೇರಿಗೆ ವಿಳಂಬವಾಗಿ ಹೋಗುವಿರಿ. ಹೊಸ ವಿಚಾರಗಳ ಕಲಿಕೆಗೆ ಅವಕಾಶಗಳು ಸಿಗುವುದು. ವ್ಯಾಪಾರವನ್ನು ಹೆಚ್ಚಿನ ಆದಾಯ ಬರುವಂತೆ ಮಾಡಿಕೊಳ್ಳುವಿರಿ.

ಕನ್ಯಾ ರಾಶಿ:

ಅಶಿಸ್ತಿನಿಂದ ನಿಮಗೆ ಕೆಟ್ಟ ಹೆಸರು ಬರಬಹುದು. ಸಂಕುಚಿತ ಸ್ವಭಾವವನ್ನು ದೂರ ಮಾಡಿಕೊಳ್ಳುವುದು ಉತ್ತಮ. ನಿಮ್ಮದಾದ ಕಾರ್ಯದಲ್ಲಿ ನೀವು ತೊಡಗಿಗೊಳ್ಳಿ. ಹಣಕಾಸಿನ ಅನುಕೂಲತೆಗಳನ್ನು ನೋಡಿ ಮಾತುಕೊಡಿ. ಖಾಲಿ ಇರುವುದು ಬೇಡ. ವಾಹನ ಸಂಚಾರದಲ್ಲಿ ಅಡಚಣೆ ಆಗಲಿದೆ. ಪುಣ್ಯ ಸ್ಥಳಗಳ ದರ್ಶನದಿಂದ ಮನಸ್ಸಿಗೆ ಸಮಾಧಾನ. ಸಹೋದ್ಯೋಗಿಯ ಅಸಹಕಾರದಿಂದ ಅವರ ಮೇಲೆ ದ್ವೇಷ. ಆಕಸ್ಮಿಕವಾಗಿ ನಿಮಗೆ ಧನನಷ್ಟವಾಗಲಿದ್ದು ಚಿಂತೆ ಕಾಡುವುದು. ನಿಮ್ಮ ಸಣ್ಣ ತಪ್ಪೂ ಅಪಹಾಸ್ಯಕ್ಕೀಡಾಗುವುದು.

ತುಲಾ ರಾಶಿ:

ವ್ಯಾಪಾರಸ್ಥರು ಹೊಸತನ್ನು ಮಾಡಲು ಇಚ್ಛಿಸುವಿರಿ. ಈಗಿನ ಪರಿಸ್ಥಿತಿಯಲ್ಲಿ ಬದಲಾವಣೆ ಬೇಕೆನಿಸುವುದು. ನಿಮ್ಮ ಶ್ರಮದ ಬಗ್ಗೆ ಕಹಿಯಾದ ಮಾತುಗಳು ಕೇಳಿಬರಬಹುದು. ಇಂದು ಯಾರನ್ನೂ ನಂಬುವ ಸ್ಥಿತಿಯಲ್ಲಿ ನೀವು ಇರಲಾರಿರಿ. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ. ವಿವಾಹವಾದರೂ ಭವಿಷ್ಯದ ಬಗ್ಗೆ ನಕಾರಾತ್ಮಕ ಆಲೋಚನೆಯು ಇರಲಿದೆ. ನಿಮಗೆ ಅಭದ್ರತೆಯು ಕಾಡಬಹುದು. ಮಕ್ಕಳ ಸಂತೋಷದಲ್ಲಿ ನೆಮ್ಮದಿ ಇರಲಿದೆ. ನಿಮ್ಮ ಗೌಪ್ಯ ಸಂಗತಿಗಳು ಹಂಚಿಕೆಯಾಗುವುದು.

ವೃಶ್ಚಿಕ ರಾಶಿ:

ಬಹಳ ದಿನಗಳಿಂದ ಸ್ಥಗಿತಗೊಂಡ ಕೆಲಸಗಳೂ ಪೂರ್ಣಗೊಳ್ಳುತ್ತವೆ. ಸಣ್ಣ ವ್ಯಾಪಾರಿಗಳು ವ್ಯವಹಾರ ಹೆಚ್ಚಳದ ಬಗ್ಗೆ ಗಮನಹರಿಸಬೇಕು. ಸೌಂದರ್ಯದ ವಿಚಾರದಲ್ಲಿ ಅಸೂಯೆ ತಲೆ ಹಾಕುವುದು. ಬಹಳ ದಿನಗಳಿಂದ ಕಾಣಿಸಿಕೊಳ್ಳದ ನೋವು ಕಾಣಿಸಿಕೊಳ್ಳಬಹುದು. ಧಾರ್ಮಿಕ ಆಚರಣೆಯಲ್ಲಿ ವಿಶ್ವಾಸವು ಕಡಿಮೆಯಾಗಲಿದೆ. ನೀವು ಬಿಟ್ಟರೂ ಸ್ನೇಹಿತರು ನಿಮ್ಮನ್ನು ಬಿಡಲಾರರು. ಸಂಗಾತಿಯು ನಿಮ್ಮನಡೆಯನ್ನು ಅನುಮಾನಸಿಬಹುದು.

ಧನು ರಾಶಿ:

ಅಪಮಾನದಿಂದ ದುರ್ಬಲರಾಗುವ ಸಾಧ್ಯತೆ ಇದೆ. ನೀವು ಉದ್ಯೋಗವನ್ನು ವಿನಮ್ರಭಾವದಿಂದ ನಡೆಸುವಿರಿ. ಮಕ್ಕಳ ಅತಿಯಾದ ಮಾತು ನಿಮಗೆ ಮುಜುಗರ ತಂದೀತು. ದಾಂಪತ್ಯದಲ್ಲಿ ಪರಸ್ಪರ ವಿರೋಧವು ಬರುವಹಾಗಿದ್ದರೂ ಸದ್ಭಾವವನ್ನು ಇಟ್ಟುಕೊಳ್ಳುವುದು ಮುಖ್ಯವಾಗುದು. ಅನಿರೀಕ್ಷಿತ ದೂರಪ್ರಯಾಣದಿಂದ ಖರ್ಚು. ಹಿರಿಯರ ಜೊತೆ ಔಚಿತ್ಯ ರೀತಿಯಿಂದ ವ್ಯವಸ್ಥೆ ವ್ಯವಹರಿಸಿ. ಸ್ತ್ರೀಯರಿಂದ ಅಪಮಾನವಾಗುವ ಸಾಧ್ಯತೆ ಇದೆ. ಕುಟುಂಬದಿಂದ ಅನಾದರಕ್ಕೆ ಒಳಗಾಗುವಿರಿ. ಆಕಸ್ಮಿಕ ಧನಲಾಭವು ನಿಮಗೆ ಆಶ್ಚರ್ಯ ಉಂಟಾಗಬಹುದು.

ಮಕರ ರಾಶಿ:

ಆರ್ಥಿಕತೆಗೆ ಸಂಬಂಧಿಸಿದಂತೆ ಮೈಯೆಲ್ಲ ಕಣ್ಣಾಗಬೇಕಾಗುವುದು. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವಿರಿ. ಸಹೋದ್ಯೋಗಿಗಳ ಜೊತೆ ವಿವಾದವಾಗಬಹುದು. ಪಾಲುದಾರಿಕೆಯಲ್ಲಿ ರಾಜಕೀಯ ಸೇರುವುದು. ಸ್ತ್ರೀಯರಿಗೆ ಪ್ರಯಾಣದಿಂದ ತೊಂದರೆ. ಯಾರದೋ ಪ್ರಭಾವವನ್ನು ಬಳಸಿ ನೀವು ಕೆಲಸವನ್ನು ಮಾಡಿಸಿಕೊಳ್ಳುವಿರಿ. ವ್ಯವಹಾರದಲ್ಲಿ ಮುಗ್ಗರಿಸುವ ಸಂದರ್ಭವು ಬರಬಹುದು. ನಿಮ್ಮ ಮಾತಿನಲ್ಲಿ ಉದ್ಧಟತನ ಕಾಣಿಸುವುದು. ಏನಾದರೂ ಹೇಳಿ ತಪ್ಪಿಸಿಕೊಳ್ಳುವಿರಿ‌.

ಕುಂಭ ರಾಶಿ:

ಹುಮ್ಮನಸ್ಸಿನಿಂದ ಕೆಲವು ಕೆಲಸಗಳನ್ನು ಪೂರ್ಣಗೊಳಿಸಲು ಬಯಸಿ, ಅನಂತರ ಕೆಲವು ಸವಾಲುಗಳನ್ನು ಅನುಭವಿಸುತ್ತಾರೆ. ಅಧಿಕ ಹೂಡಿಕೆಯನ್ನು ಎಲ್ಲಿಯೋ ಮಾಡಿ ನಷ್ಟ ಅಂದುಕೊಂಡಿದ್ದಕ್ಕಿಂತ ಖರ್ಚು ಅಧಿಕವಾಗಿದ್ದು ಗಳಿಕೆಯ ಬಗ್ಗೆ ಆಲೋಚಿಸುವಿರಿ. ಮಾಡಬೇಕು ಎನಿಸಿದ್ದನ್ನು ಹೇಳಿಯೇ ತೀರುವಿರಿ. ನಿಯಮ ಭಂಗದಿಂದ ದಂಡ ಬೀಳುವುದು. ಸ್ನೇಹಿತರು ನಿಮ್ಮನ್ನು ದೂರವಿಟ್ಟಾರು. ಸಂಗಾತಿಯ ಅನಾದರವು ನಿಮ್ಮನ್ನು ಬಹಳ ಕಾಡಬಹುದು.

ಮೀನ ರಾಶಿ:

ನೌಕರರು ಇಂದು ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳುವರು. ನಿಮ್ಮ ವಾದವು ವಿಷಯಾಧಾರಿತವಾಗಿರಲಿ, ವ್ಯಕ್ತಿಗತವಾಗುವುದು ಬೇಡ. ಸಮಾನ ಚಿಂತನಶೀಲರ ನಡುವೆ ಸಖ್ಯವಾಗುವುದು. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ಗ್ರಾಹಕರಿಗೆ ನಿಮ್ಮ ಅಸಮಾಧಾನವೂ ಆಗುವುದು. ಇಂದು ಜ್ಞಾನವೃದ್ಧರ ಸೇವೆಗೆ ಅವಕಾಶ ಸಿಗಲಿದೆ. ಅಪಘಾತದಿಂದ ಉಂಟಾದ ನೋವಿನಿಂದ ನಿಧಾನವಾಗಿ ಆಚೆ ಬರಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಧನಿಷ್ಠಾ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಸಿದ್ಧ, ಕರಣ : ಕೌಲವ, ಸೂರ್ಯೋದಯ – 06 – 47 am, ಸೂರ್ಯಾಸ್ತ – 06 – 29 pm, ಇಂದಿನ ಶುಭಾಶುಭ ಕಾಲ : ರಾಹು 14:06 – 15:34, ಯಮಗಂಡ ಕಾಲ 06:47 – 08:15, ಗುಳಿಕ ಕಾಲ 09:43 – 11:11

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 19ರ ದಿನಭವಿಷ್ಯ

ಲಕ್ಷ್ಮೀನರಸಿಂಹ ದೇವಾಲಯಕ್ಕೆ ತೆರಳಿ ತುಳಸಿ ಮಾಲೆಯನ್ನು ಸಮರ್ಪಣೆ ಮಾಡಿ. ಇದರಿಂದಾಗಿ ನಿಮ್ಮನ್ನು ಕಾಡುತ್ತಿರುವ ಆತಂಕ, ಹಿಂಜರಿಕೆ ಹಾಗೂ ಮಾನಸಿಕ ಕ್ಲೇಶ ದೂರವಾಗುತ್ತದೆ. ಯಾವುದೇ ಕೆಲಸವನ್ನು ಮಾಡಬೇಕೋ ಬೇಡವೋ ಎಂಬ ದ್ವಂದ್ವ ಇದ್ದಲ್ಲಿ ಸ್ಪಷ್ಟತೆ ಸಿಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಸಮಯದೊಳಗೆ ಪೂರ್ಣಗೊಳಿಸಬೇಕಾದ ಕೆಲಸಗಳನ್ನು ಆದ್ಯತೆ ಮೇಲೆ ಮಾಡಿ ಮುಗಿಸಿ. ಇನ್ನು ನೀವೇನಾದರೂ ಹಣ್ಣು- ಹೂವು, ತರಕಾರಿ ಇಂಥವುಗಳ ವ್ಯಾಪಾರವನ್ನು ಮಾಡುವವರಾದರೆ ಹೊಸದಾಗಿ ಹೂಡಿಕೆ ಮಾಡುವ ಕಡೆಗೆ ಆದ್ಯತೆಯನ್ನು ನೀಡಲಿದ್ದೀರಿ. ಪ್ರೀತಿ- ಪ್ರೇಮದಲ್ಲಿ ಇರುವವರು ಮನೆಯಲ್ಲಿ ವಿಚಾರ ಪ್ರಸ್ತಾವ ಮಾಡುವ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಚಾಲಕ ವೃತ್ತಿಯಲ್ಲಿ ಇರುವಂಥವರಿಗೆ ಒತ್ತಡದ ದಿನ ಇದಾಗಿರುತ್ತದೆ. ನೀವು ಓಡಿಸುವ ವಾಹನದ ಸರ್ವೀಸ್ ಆಗಿದೆಯಾ, ಅದು ಎಲ್ಲ ರೀತಿಯಲ್ಲೂ ಉತ್ತಮವಾದ ಸ್ಥಿತಿಯಲ್ಲಿ ಇದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಕ್ಷೇಮ. ಈ ದಿನ ಸಾಧ್ಯವಾದಲ್ಲಿ ಹನುಮಂತ ದೇವರ ದೇವಾಲಯಕ್ಕೆ ತೆರಳಿ ದರ್ಶನವನ್ನು ಪಡೆಯಿರಿ. ಬ್ಯಾಂಕ್ ಉದ್ಯೋಗಿಗಳಿಗೆ ಟಾರ್ಗೆಟ್ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಸ್ನೇಹಿತರಿಗೆ ಕೊಟ್ಟ ಮಾತಿನಂತೆಯೇ ನಡೆದುಕೊಳ್ಳುವುದು ಈ ದಿನ ನಿಮಗೆ ಆದ್ಯತೆಯಾಗಲಿದೆ. ಕಟ್ಟಡ ನಿರ್ಮಾಣ, ರಿನೋವೇಷನ್ ಇಂಥದ್ದನ್ನು ಮಾಡಿಸುತ್ತಾ ಇರುವವರಿಗೆ ಏಕ ಕಾಲಕ್ಕೆ ಹಲವು ಕೆಲಸಗಳು ಹುಡುಕಿಕೊಂಡು ಬರಲಿವೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಆಪ್ತರಾದವರು ಕೆಲಸ ಬಿಡುವ ತೀರ್ಮಾನ ಮಾಡುವ ಸಾಧ್ಯತೆ ಇದೆ. ಉದ್ಯೋಗಸ್ಥರಿಗೆ ನಿಮ್ಮ ಮೇಲೆ ಸಂಸ್ಥೆಗೆ ವಿಪರೀತ ನಿರೀಕ್ಷೆ ಇದೆ ಎಂಬುದು ಗಮನಕ್ಕೆ ಬರಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ; ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 19ರ ದಿನಭವಿಷ್ಯ

ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆದು ಬಿಳಿ ಹೂವಿನಿಂದ ಕಟ್ಟಿದ ಮಾಲೆಯನ್ನು ದೇವಿಗೆ ಅರ್ಪಿಸುವುದರಿಂದ ದೀರ್ಘ ಕಾಲದಿಂದ ಬಾಕಿ ಉಳಿದ ಕೆಲಸ- ಕಾರ್ಯಗಳು ಪೂರ್ಣಗೊಳ್ಳಲಿವೆ. ಶತ್ರುಗಳ ವಿರುದ್ಧ ನಿಮ್ಮ ಕೈ ಮೇಲಾಗಲಿದೆ.

 

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಚಿನ್ನದ ಬಾಂಡ್ ಅಥವಾ ಇಟಿಎಫ್ ನಲ್ಲಿ ಈಗಾಗಲೇ ಹಣ ಹಾಕಿದ್ದೀರಿ ಅಂತಾದಲ್ಲಿ ಅದನ್ನು ಹಿಂತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮೂಡಲಿದೆ. ಮನೆಯಲ್ಲಿ ಮಾಡಿಸಬೇಕಾದ ಕೆಲಸಗಳು ಇದ್ದಲ್ಲಿ ಅದರ ಬಗ್ಗೆ ಸಂಬಂಧಪಟ್ಟವರನ್ನು ಕರೆಸಿ ಮಾತುಕತೆ ಆಡಲು ಮುಂದಾಗುತ್ತೀರಿ. ಅದೇ ರೀತಿ ಮನೆಯಲ್ಲಿ ಇರುವಂಥ ಹಾಗೂ ಸದ್ಯಕ್ಕೆ ಬಳಕೆ ಮಾಡದಿರುವಂಥ ಕೆಲವು ವಸ್ತುಗಳ ಮಾರಾಟ ಮಾಡುವ ಯೋಗ ಸಹ ಇದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ವಿದೇಶದಲ್ಲಿ ವ್ಯಾಸಂಗ/ ಉದ್ಯೋಗ ಮಾಡಬೇಕು ಎಂದು ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಹೋಟೆಲ್ ಉದ್ಯಮವನ್ನು ನಡೆಸುತ್ತಿರುವವರಿಗೆ ವಿಸ್ತರಣೆ ಬಗ್ಗೆ ಆಲೋಚನೆ ಬರಲಿದೆ. ಇನ್ನು ಇದಕ್ಕಾಗಿಯೇ ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂತಾದಲ್ಲಿ ಇಲ್ಲಿಯವರೆಗೆ ನಾನಾ ಕಾರಣಗಳಿಂದ ವಿಳಂಬ ಆಗುತ್ತಿರುವ ಪ್ರಕ್ರಿಯೆಗೆ ವೇಗ ದೊರೆಯಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಹೊಸ ಕಾರು ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರು ಅಲ್ಲಿಂದ ಮುಂದಿನ ಹಂತಕ್ಕೆ ಉದ್ದೇಶವನ್ನು ಒಯ್ಯುವ ಯೋಗ ಇದೆ. ಕ್ರೆಡಿಟ್ ಕಾರ್ಡ್ ಬಳಸುವವರು ಖರ್ಚಿನ ಮೇಲೆ ಹತೋಟಿ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನಿಮಗೆ ಅಗತ್ಯ ಇಲ್ಲದ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹೋಗಬೇಡಿ. ನಿಮ್ಮಲ್ಲಿ ಕೆಲವರು ಹಳೇ ಆಸ್ತಿ ವ್ಯಾಜ್ಯಗಳು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗುವುದಿಲ್ಲ ಎಂಬುದು ಖಚಿತವಾಗಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 19ರ ದಿನಭವಿಷ್ಯ

ಮೂರು ಅಥವಾ ಐವರು ಮುತ್ತೈದೆಯರಿಗೆ ಈ ದಿನ ಸಂಜೆಯ ವೇಳೆ ಅರಿಶಿನ- ಕುಂಕುಮ, ಕುಪ್ಪಸದ ಕಣದೊಂದಿಗೆ ನೀಡಿ. ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂಬ ಪ್ರಯತ್ನದಲ್ಲಿ ಇದ್ದಲ್ಲಿ, ಸಾಲ ತೀರಿಸುವ ಪ್ರಯತ್ನ ಮಾಡುತ್ತಿದ್ದಲ್ಲಿ ಶುಭ ಬೆಳವಣಿಗೆಗಳು ಆಗಲಿವೆ.

 

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಜೊತೆಯಲ್ಲಿ ಇರುವ ಕುಟುಂಬ ಸದಸ್ಯರು ಅಥವಾ ಸಹೋದ್ಯೋಗಿಗಳು ಏನು ಆಲೋಚನೆ ಮಾಡುತ್ತಾರೆ ಹಾಗೂ ಆಯಾ ಸನ್ನಿವೇಶಕ್ಕೆ ತಕ್ಕಂತೆ ನಿರ್ಧಾರ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದಲ್ಲಿ ಆದಾಯ ಹೆಚ್ಚಳ ಆಗಲಿದೆ. ಹೊಸದಾದ ಆದಾಯ ಮೂಲಗಳು ತೆರೆದುಕೊಳ್ಳಲಿವೆ. ಶ್ವಾಸಕೋಶದ ಸಮಸ್ಯೆ ಇರುವವರು ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವುದಕ್ಕೆ ಆದ್ಯತೆಯನ್ನು ನೀಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಮನೆ ಅಥವಾ ಜಮೀನಿಗೆ ಸಂಬಂಧಿಸಿದ ಕಾಗದಪತ್ರ/ದಾಖಲೆಗಳನ್ನು ಹೊಂದಿಸಿಕೊಳ್ಳುತ್ತಾ ಇದ್ದಲ್ಲಿ ನಿಮಗೆ ಮತ್ತೊಬ್ಬರ ಸಹಾಯದಿಂದ ದೊರೆಯಲಿದೆ. ಹಳೇ ಪರಿಚಯದ ವ್ಯಕ್ತಿಯೊಬ್ಬರು ಈ ಹಿಂದೆ ನೀವು ಮಾಡಿಕೊಟ್ಟ ಕೆಲಸಕ್ಕೆ ಪ್ರತಿಯಾಗಿ ಉಡುಗೊರೆ ಅಥವಾ ಹಣವನ್ನು ನೀಡಬಹುದು. ಟೈಲ್ಸ್- ಗ್ರಾನೈಟ್ ಹಾಕುವಂಥ ಕೆಲಸ ಮಾಡುವವರಿಗೆ ದೊಡ್ಡ ಮಟ್ಟದ ಕೆಲಸವೊಂದು ಹುಡುಕಿಕೊಂಡು ಬರುವ ಯೋಗ ಇದ್ದು, ಆದಾಯವೂ ಜಾಸ್ತಿಯಾಗಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಸಂಬಂಧಿಕರ ಮನೆಯಲ್ಲಿನ ಕಾರ್ಯಕ್ರಮಗಳಿಗೆ ಸ್ವಲ್ಪ ಮುಂಚಿತವಾಗಿಯೇ ಬಂದು ಸಹಾಯ ಮಾಡುವಂತೆ ನಿಮ್ಮನ್ನು ಕೇಳಿಕೊಳ್ಳಬಹುದು. ಇನ್ನು ಮನೆಗೆ ಟೀವಿ, ಸ್ಪೀಕರ್ ಈ ರೀತಿಯಾದದ್ದನ್ನು ಖರೀದಿಸಬೇಕು ಎಂದು ತೀರ್ಮಾನವನ್ನು ಮಾಡಲಿದ್ದೀರಿ. ಅಧ್ಯಾತ್ಮ ವಿಚಾರಗಳಲ್ಲಿಯೂ ತೊಡಗಿಕೊಳ್ಳುವ ಯೋಗ ಬರಲಿದೆ. ಅಧ್ಯಾತ್ಮ ಕಾರ್ಯಕ್ರಮಗಳಿಗೆ ದೇಣಿಗೆ ಕೇಳಿಕೊಂಡು ಬಂದಲ್ಲಿ ನಿಮ್ಮಿಂದ ಸಾಧ್ಯವಾದಷ್ಟು/ ನಿಮ್ಮಿಂದ ಸಾಧ್ಯವಾದದ್ದನ್ನು ನೀಡಿ.

ಲೇಖನ- ಸ್ವಾತಿ ಎನ್.ಕೆ.

 

Source link

ಆಪರೇಷನ್ ಸಿಂದೂರ್ ಕುರಿತು ಸಿನಿಮಾ ಮಾಡಲಿರುವ ವಿವೇಕ್ ಅಗ್ನಿಹೋತ್ರಿ – Kannada News | Director Vivek Agnihotri to make a film on Operation Sindoor

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಸತ್ಯ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವ ಮೂಲಕ ಫೇಮಸ್ ಆಗಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’, ‘ದಿ ಬೆಂಗಾಲ್ ಫೈಲ್ಸ್’ ಮುಂತಾದ ಸಿನಿಮಾಗಳನ್ನು ಅವರು ಮಾಡಿದ್ದಾರೆ. ಈಗ ಮತ್ತೊಂದು ನೈಜ ಘಟನೆ ಆಧಾರಿತ ಸಿನಿಮಾಗೆ ಅವರು ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ‘ಆಪರೇಷನ್ ಸಿಂದೂರ್’ (Operation Sindoor) ಕುರಿತು ಅವರು ಸಿನಿಮಾ ಮಾಡುತ್ತಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅವರು ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಪಾಕ್ ಉಗ್ರರು ಭಾರತದ ಪ್ರವಾಸಿಗರನ್ನು ಗುರಿಯಾಗಿಸಿ ಪಹಲ್ಗಾಮ್​​ನಲ್ಲಿ ಗುಂಡಿನ ದಾಳಿ ಮಾಡಿದ್ದರು. ಅದರಿಂದ ಅಮಾಯಕರ ಪ್ರಾಣಿಹಾನಿ ಆಗಿತ್ತು. ಆ ಘಟನೆಗೆ ಪ್ರತ್ಯುತ್ತರ ನೀಡಲು ಭಾರತವು ‘ಆಪರೇಷನ್ ಸಿಂದೂರ್’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿತು. ಪಾಕ್ ಉಗ್ರರ ಅಡುಗುತಾಣಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿತು. ಆ ಘಟನೆಗಳನ್ನು ಕೇಂದ್ರವಾಗಿ ಇಟ್ಟುಕೊಂಡು ಸಿನಿಮಾ ಸಿದ್ಧವಾಗಲಿದೆ.

‘ಆಪರೇಷನ್ ಸಿಂದೂರ್’ ಸಿನಿಮಾಗೆ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ಟಿ ಸಿರೀಸ್’ ಬಂಡವಾಳ ಹೂಡಲಿದೆ. ನಿರ್ಮಾಪಕ ಭೂಷಣ್ ಕುಮಾರ್ ಅವರು ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಅವರ ಜೊತೆಗೆ ವಿವೇಕ್ ಅಗ್ನಿಹೋತ್ರಿ ಅವರ ‘ಐ ಆ್ಯಮ್ ಬುದ್ಧ ಪ್ರೊಡಕ್ಷನ್ಸ್’ ಸಂಸ್ಥೆ ಕೂಡ ನಿರ್ಮಾಣದಲ್ಲಿ ಕೈಜೋಡಿಸಲಿದೆ ಎಂಬ ಸುದ್ದಿ ಹಬ್ಬಿದೆ.

ಸದ್ಯಕ್ಕೆ ಈ ಮಾಹಿತಿ ಕೇವಲ ಅಂತೆ-ಕಂತೆಗಳ ಹಂತದಲ್ಲಿ ಇದೆ. ಟಿ-ಸಿರೀಸ್ ಕಡೆಯಿಂದಾಗಿ, ವಿವೇಕ್ ಅಗ್ನಿಹೋತ್ರಿ ಅವರ ಕಡೆಯಿಂದಾಗಲಿ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಹಾಗಾಗಿ ಸಿನಿಮಾದಲ್ಲಿ ಯಾವೆಲ್ಲ ಕಲಾವಿದರು ನಟಿಸುತ್ತಾರೆ? ಶೂಟಿಂಗ್ ಯಾವಾಗ ಆರಂಭ ಆಗಲಿದೆ ಎಂಬಿತ್ಯಾದಿ ಮಾಹಿತಿ ಕೂಡ ಸದ್ಯಕ್ಕೆ ಲಭ್ಯವಾಗಿಲ್ಲ.

ಇದನ್ನೂ ಓದಿ: ‘ಧುರಂಧರ್’ ನಿರ್ದೇಶಕ ದೇವರ ಮಗ: ಸಿಕ್ಕಾಪಟ್ಟೆ ಹೊಗಳಿದ ವಿವೇಕ್ ಅಗ್ನಿಹೋತ್ರಿ

ವಿವೇಕ್ ಅಗ್ನಿಹೋತ್ರಿ ಅವರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ಭರ್ಜರಿ ಗೆಲುವು ಸಿಕ್ಕಿತ್ತು. ಆದರೆ ನಂತರದ ಸಿನಿಮಾಗಳು ಅವರ ಕೈ ಹಿಡಿಯಲಿಲ್ಲ. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲಿಲ್ಲ. ‘ದಿ ಬೆಂಗಾಲ್ ಫೈಲ್ಸ್’ ಮೇಲೆ ಅವರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ಸಿನಿಮಾ ಕೂಡ ಸೋತಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IIT ಬಾಂಬೆ ತರಗತಿಯ ಟೇಬಲ್ ಮೇಲೆ ಹತ್ತಿ ನಿಂತ ನಾಯಿ; ವಿಡಿಯೋ ವೈರಲ್ – Kannada News | Dog spotted standing on classroom table at IIT Bombay Video goes Viral

ಮುಂಬೈ, ಫೆಬ್ರವರಿ 18: IIT ಬಾಂಬೆಯಲ್ಲಿ ವಿದ್ಯಾರ್ಥಿಗಳ ಜೊತೆ ಇನ್ನೊಬ್ಬರು ವಿಶೇಷ ಅತಿಥಿ ಪಾಠ ಕೇಳಲು ಬಂದಿದ್ದರು. ನಾಯಿಯೊಂದು ಐಐಟಿ ಬಾಂಬೆಯ ಕ್ಲಾಸ್​​ರೂಂನೊಳಗೆ ಬಂದು ಟೇಬಲ್ ಹತ್ತಿ ನಿಂತಿರುವ ವಿಡಿಯೋ ವೈರಲ್ (Video Viral) ಆಗಿದೆ. ಪಿಯೂಷ್ ಜೈಸ್ವಾಲ್ ಎಂಬುವವರು Instagramನಲ್ಲಿ ಹಂಚಿಕೊಂಡಿರುವ ವಿಡಿಯೋವನ್ನು ತರಗತಿಯ ಸಮಯದಲ್ಲಿ ಚಿತ್ರೀಕರಿಸಲಾಗಿದೆ. ಈ ವೇಳೆ ನಾಯಿ ಟೇಬಲ್ ಮೇಲೆ ಹತ್ತಿ ನಿಂತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎ ಖಾತಾ ವರ್ಗಾವಣೆಗೆ ಆನ್​ಲೈನ್​​ನಲ್ಲಿ ಹಣ ಪಾವತಿಸುವ ಮುನ್ನ ಎಚ್ಚರ: ಎ ಖಾತಾ ಮಾಡಿಸುವವರು ಇದನ್ನ ಓದಲೇಬೇಕು – Kannada News | Bangaluru: B Khata to A Khata Online: Payment Pending Glitches Worry Property Owners

ಬೆಂಗಳೂರು, ಫೆಬ್ರವರಿ 18: ಸಾರ್ವಜನಿಕರು ಪಾಲಿಕೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇತ್ತೀಚೆಗೆ ಬಿ ಖಾತಾ (B Khata) ಹೊಂದಿರುವ ಆಸ್ತಿ ಮಾಲೀಕರು ಎ ಖಾತಾಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಿದೆ. ಆದರೆ ಇದೇ ಆನ್​​​ಲೈನ್​​ ವ್ಯವಸ್ಥೆಯಲ್ಲಿ ಸಮಸ್ಯೆಗಳು ಉಂಟಾಗಿವೆ. ಆಸ್ತಿ ಮಾಲೀಕರು ಖಾತಾ ವರ್ಗಾವಣೆಗೆ ಲಕ್ಷಾಂತರ ರೂ ಹಣ ಪಾವತಿಸಿದ ಬಳಿಕವೂ ವೆಬ್​​ಸೈಟ್​ನಲ್ಲಿ ಮಾತ್ರ ಪೆಂಡಿಂಗ್​ ತೋರಿಸುತ್ತಿದೆ. ಹೀಗಾಗಿ ಆಸ್ತಿ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನೊಂದೆಡೆ ಸಾರ್ವಜನಿಕರಿಗೆ ಜಿಬಿಎ ದೋಖಾ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಈ ಬಗ್ಗೆ ಟಿವಿ9 ಡಿಜಿಟಲ್​ ಕನ್ನಡಗೆ ಬೆಂಗಳೂರಿನ ಆಸ್ತಿ ಮಾಲೀಕರಾದ ಎಮ್. ಶ್ರೀನಿವಾಸ ಎಂಬುವವರು ತಮಗಾದ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಗರದ ವಾರ್ಡ್ 161ರ ವ್ಯಾಪ್ತಿಗೆ ಬರುವ ಹೊಸಕೆರೆಹಳ್ಳಿಯಲ್ಲಿ ವಾಸವಾಗಿರುವ ಎಮ್. ಶ್ರೀನಿವಾಸ ಅವರು, ಅಲ್ಲಿ ಇರುವಂತಹ ಬಿ ಖಾತಾ ಸ್ವತ್ತಿನ ಮನೆಗೆ ಎ ಖಾತಾಗೆ ವರ್ಗಾವಣೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು.

ಆಸ್ತಿ ಮಾಲೀಕರಾದ ಎಮ್. ಶ್ರೀನಿವಾಸ ಟ್ವೀಟ್​​

ಈ ಸ್ವತ್ತು ಅವರ ಪತ್ನಿ ಸ್ವಾತಿ ಎನ್.ಕೆ. ಹೆಸರಿನಲ್ಲಿದ್ದು, ಕಳೆದ ಶುಕ್ರವಾರ ಅಂದರೆ ಫೆಬ್ರವರಿ 12ರಂದು ಒಟ್ಟು ಮೊತ್ತ ಒಂದು ಲಕ್ಷದ ಅರವತ್ತೇಳು ಸಾವಿರದ ಏಳು ನೂರಾ ಎಪ್ಪತ್ತೊಂದು ರೂಪಾಯಿ ಆನ್​​ಲೈನ್ ಮೂಲಕ ಪಾವತಿ ಮಾಡಿದ್ದಾರೆ. ಆದರೆ ಏಳು ದಿನಗಳ ನಂತರವೂ ಆ ಪಾವತಿಯು ಪೆಂಡಿಂಗ್ ಎಂಬ ಸ್ಟೇಟಸ್​ನಲ್ಲಿಯೇ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎಮ್. ಶ್ರೀನಿವಾಸ ಅವರಿಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.

ಇದನ್ನೂ ಓದಿ: ಬೆಂಗಳೂರಿನ ಬಿ ಖಾತಾದಾರರಿಗೆ ಗುಡ್ ನ್ಯೂಸ್: ಲಕ್ಷಾಂತರ ಅಪಾರ್ಟ್‌ಮೆಂಟ್‌ಗಳಿಗೆ ಸಿಗಲಿದೆ ಎ ಖಾತಾ!

ಇನ್ನು ಲಕ್ಷಾಂತರ ರೂ ಹಣ ಮಾತ್ರ ಖಾತೆಯಿಂದ ಡೆಬಿಟ್ ಆಗಿದೆ. ಆದರೆ ಆ ಮೊತ್ತಕ್ಕೆ ಜಿಬಿಎ ಕಡೆಯಿಂದ ಯಾವುದೇ ರಸೀದಿ ಕೂಡ ಇವರಿಗೆ ತಲುಪಿಲ್ಲ. ಇಷ್ಟು ದೊಡ್ಡ ಮೊತ್ತ ಹೀಗೆ ಒಂದು ವಾರ ಕಳೆದರೂ ಯಾವ ಸ್ಥಿತಿಯಲ್ಲಿದೆ ಎಂಬುದು ಗೊತ್ತಾಗದೇ ಪರದಾಡಿದ್ದಾರೆ. ಇನ್ನು ಈ ಸಮಸ್ಯೆಯನ್ನು ಯಾರು ಬಗೆಹರಿಸುತ್ತಾರೆ ಎಂಬುವುದು ತಿಳಿಯದೇ ಕಂಗಾಲಾಗಿದ್ದಾರೆ.

ಇದನ್ನೂ ಓದಿ: BBMP Khata Services: ಎಲ್ಲ ಬಿ ಖಾತಾದಾರರಿಗೆ ಸಿಗಲಿದೆ ಎ ಖಾತಾ ಮಾನ್ಯತೆ: ಆಸ್ತಿ ಮಾಲೀಕರಿಗೆ ಸಂಪುಟ ಭರ್ಜರಿ ಗುಡ್ ನ್ಯೂಸ್

ಅವರ ವಾರ್ಡ್ ವ್ಯಾಪ್ತಿಯ ಎಆರ್​ಒ ಹಿಡಿದು, ಜಿಬಿಎ ಕೇಂದ್ರ ಕಚೇರಿ ತನಕ ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಪಾವತಿ ಮಾಡಿರುವ ಮೊತ್ತದ ಬಗ್ಗೆ ಆತಂಕಗೊಂಡಿದ್ದು, ದಯವಿಟ್ಟು ಸಮಸ್ಯೆಗೆ ಪರಿಹಾರ ತಿಳಿಸುವಂತೆ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:38 pm, Wed, 18 February 26

Source link