ಸೋಮವಾರವೂ ‘ಕೆಡಿ’ ಭರ್ಜರಿ ಕಲೆಕ್ಷನ್; ಕೆವಿಎನ್ಗೆ ಒಂದೇ ದಿನ ಡಬಲ್ ಧಮಾಕ – Kannada News | KD Movie Box Office: Strong Monday Collection, Dhruva Sarja’s Film Passes Key Test
‘ಈ ಸಿನಿಮಾ ನಿಜಕ್ಕೂ ಗೆಲ್ಲುತ್ತಾ’ ಎಂದು ಪ್ರಶ್ನೆ ಮಾಡಿದವರಿಗೆಲ್ಲ ‘ಕೆಡಿ’ ಚಿತ್ರ ಸರಿಯಾದ ಉತ್ತರವನ್ನೇ ನೀಡಿದೆ. ಧ್ರುವ ಸರ್ಜಾ ವೃತ್ತಿ ಜೀವನಕ್ಕೆ ಮತ್ತೊಂದು ಗೆಲುವು ಸಿಕ್ಕಿದೆ. ಪ್ರೇಮ್ ಅವರು ನಿರ್ದೇಶನದಲ್ಲಿ ತಾವು ಗ್ರಿಪ್ ಕಳೆದುಕೊಂಡಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ‘ಕೆಡಿ’ ಸಿನಿಮಾ (KD Movie) ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಗುರುವಾರದಿಂದ ಭಾನುವಾರದವರೆಗೆ ಸಿನಿಮಾ ಗೆದ್ದು ಬೀಗಿದೆ. ಸೋಮವಾರದ ಪರೀಕ್ಷೆಯಲ್ಲೂ ಸಿನಿಮಾ ಮೆಚ್ಚುಗೆ ಪಡೆದಿದೆ. ಈ ಮೂಲಕ ಸಿನಿಮಾ ಗೆದ್ದಿದೆ ಎಂಬ ಅಭಿಪ್ರಾಯವನ್ನು ಬಾಕ್ಸ್…