All posts by nagaraj11081993

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಕಥೆ ಬಗ್ಗೆ ಸಿಕ್ತು ದೊಡ್ಡ ಅಪ್​​ಡೇಟ್ – Kannada News | Toxic Movie: Yash’s Film Plot, Release Date and Competition Details Revealed

‘ಟಾಕ್ಸಿಕ್’ ಸಿನಿಮಾ ರಿಲೀಸ್​​ಗೆ ಇನ್ನು ಒಂದು ತಿಂಗಳು ಕೂಡ ಬಾಕಿ ಉಳಿದಿಲ್ಲ. ಈ ಚಿತ್ರದ ಪ್ರಚಾರ ಕಾರ್ಯ ಇನ್ನೂ ಆರಂಭ ಆಗಿಲ್ಲ ಎಂಬ ಬೇಸರ ಯಶ್ ಅಭಿಮಾನಿಗಳಿಗೆ ಇದೆ. ಈ ಮಧ್ಯೆ ಸಿನಿಮಾದ ಕಥೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಒಂದಿ ಹರಿದಾಡುತ್ತಿದೆ. ಸಿನಿಮಾದ ಥೀಮ್ ಯಾವ ರೀತಿ ಇರಬಹುದು ಎಂಬ ಕುತೂಹಲಕ್ಕೆ ತೆರೆ ಬಿದ್ದಂತೆ ಆಗಿದೆ.

‘ಟಾಕ್ಸಿಕ್’ ಸಿನಿಮಾದ ಕಥೆಯ ಬಗ್ಗೆ ಫಾರ್​ ಫಿಲ್ಮ್ಸ್ ಕೋ ಎಲ್​​ಎಲ್​ಎಲ್​ಸಿ ಎಂಬುವವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಟಾಕ್ಸಿಕ್’ ಸಿನಿಮಾ 1940-70ರ ಅವಧಿಯಲ್ಲಿ ಗೋವಾದಲ್ಲಿ ನಡೆಯುವ ಕಥೆಯಂತೆ. ಕ್ರೈಮ್ ಲೋಕವನ್ನು ಹಿಂಸೆ, ಭಯ ಮೊದಲಾದ ವಿಷಯಗಳ ಮೂಲಕ ಕಟ್ಟುವ ಕಥೆಯನ್ನು ಈ ಸಿನಿಮಾ ಹೊಂದಿದೆ ಎಂದು ಹೇಳಲಾಗುತ್ತಾ ಇದೆ.

ಸಾಮಾನ್ಯವಾಗಿ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಒಂದಷ್ಟು ಥಿಯರಿಗಳು ಹುಟ್ಟಿಕೊಳ್ಳೋದು ಸಾಮಾನ್ಯ. ಈಗ ‘ಟಾಕ್ಸಿಕ್’ ವಿಷಯದಲ್ಲೂ ಹೀಗೆಯೇ ಆಗಿರಬಹುದು ಎಂಬುದು ಕೆಲವರ ಊಹೆ. ‘ಟಾಕ್ಸಿಕ್’ ಟ್ರೇಲರ್ ರಿಲೀಸ್ ಆದ ಬಳಿಕವೇ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಮಾರ್ಚ್ ಮೊದಲ ವಾರದಲ್ಲಿ ಟಾಕ್ಸಿಕ್ ಟ್ರೇಲರ್ ಬರಲಿದೆ.

ಮಾರ್ಚ್ 19ರಂದು ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಎದುರು ‘ಧುರಂಧರ್ 2’ ಸಿನಿಮಾ ರಿಲೀಸ್ ಆಗುತ್ತಿದೆ. ಯಶ್ ಎದುರು ರಿಲೀಸ್ ಆಗಿ ಗೆಲುವು ಸಾಧಿಸಿದವರೇ ಇಲ್ಲ ಎಂದರೂ ತಪ್ಪಾಗಲಾರದು. ಶಾರುಖ್ ಖಾನ್ (ಝೀರೋ), ದಳಪತಿ ವಿಜಯ್ (ಬೀಸ್ಟ್​) ಈ ಮೊದಲು ಯಶ್ ಸಿನಿಮಾ ಎದುರು ಬಂದು ಮಂಡಿ ಊರಿದ್ದಾರೆ. ಇದೇ ಪರಿಸ್ಥಿತಿ ‘ಧುರಂಧರ್ 2’ ಚಿತ್ರಕ್ಕೂ ಬರಲಿದೆ ಎಂಬ ಮಾತು ಕೇಳಿ ಬಂದಿವೆ.

‘ಟಾಕ್ಸಿಕ್’ ಸಿನಿಮಾನ ಮಲಯಾಳಂ ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕಿಯಾರಾ ಅಡ್ವಾಣಿ,ರುಕ್ಮಿಣಿ ವಸಂತ್, ಹುಮಾ ಖುರೇಶಿ, ನಯನತಾರಾ, ತಾರಾ ಸುತಾರಿಯಾ ಮೊದಲಾದವರು ನಟಿಸಿದ್ದಾರೆ.

Source link

SBI Youth for India Fellowship: SBI ಯೂತ್ ಫಾರ್ ಇಂಡಿಯಾ ಫೆಲೋಶಿಪ್‌ಗೆ ಅರ್ಜಿ ಆಹ್ವಾನ; ತರಬೇತಿಯ ಜೊತೆಗೆ ಆರ್ಥಿಕ ನೆರವು – Kannada News | SBI Youth for India Fellowship: Empowering Rural Development for Young Indians

ಎಸ್‌ಬಿಐ ಫೌಂಡೇಶನ್ ಯೂತ್ ಫಾರ್ ಇಂಡಿಯಾ ಫೆಲೋಶಿಪ್‌

ಎಸ್‌ಬಿಐ ಫೌಂಡೇಶನ್ ಯೂತ್ ಫಾರ್ ಇಂಡಿಯಾ ಫೆಲೋಶಿಪ್‌ನ 13ನೇ ಬ್ಯಾಚ್‌ಗಾಗಿ ನೋಂದಣಿಗಳನ್ನು ಆರಂಭಿಸಿದೆ. ಈ ಫೆಲೋಶಿಪ್‌ ಮೂಲಕ ವಿದ್ಯಾವಂತ ಮತ್ತು ಉತ್ಸಾಹಿ ಯುವಕರಿಗೆ ದೇಶದ ಹಳ್ಳಿಗಳಲ್ಲಿ ಅಭಿವೃದ್ಧಿ ಯೋಜನೆಗಳೊಂದಿಗೆ ನೇರವಾಗಿ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಆಯ್ಕೆಯಾದ ಫೆಲೋಗಳು ವಿವಿಧ ರಾಜ್ಯಗಳಲ್ಲಿನ ಅನುಭವೀ ಸರ್ಕಾರೇತರ ಸಂಸ್ಥೆಗಳ (NGO) ಜೊತೆಗೆ ಕೈಜೋಡಿಸಿ ಶಿಕ್ಷಣ, ಆರೋಗ್ಯ, ಜೀವನೋಪಾಯ, ಪರಿಸರ ಹಾಗೂ ಮಹಿಳಾ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಕಾರ್ಯಕ್ರಮವು ಕೇವಲ ಸಾಮಾಜಿಕ ಸೇವೆಯ ಅವಕಾಶವಷ್ಟೇ ಅಲ್ಲ, ನಾಯಕತ್ವ ಕೌಶಲ್ಯ, ತಳಮಟ್ಟದ ಅರಿವು ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ವೃದ್ಧಿಸುವ ವಿಶಿಷ್ಟ ವೇದಿಕೆಯಾಗಿದೆ.

ಫೆಲೋಶಿಪ್ ಅವಧಿ ಮತ್ತು ಉದ್ದೇಶ:

ಈ ಫೆಲೋಶಿಪ್ 13 ತಿಂಗಳ ಪೂರ್ಣಾವಧಿ ಕಾರ್ಯಕ್ರಮವಾಗಿದೆ. ಆಯ್ಕೆಯಾದ ಯುವಕರನ್ನು ಗ್ರಾಮೀಣ ಪ್ರದೇಶಗಳಿಗೆ ನಿಯೋಜಿಸಲಾಗುತ್ತದೆ, ಅಲ್ಲಿ ಅವರು ಸಮಸ್ಯೆಗಳನ್ನು ಅರಿತು, ಸಮುದಾಯದೊಂದಿಗೆ ಕೆಲಸ ಮಾಡಿ ಶಾಶ್ವತ ಪರಿಹಾರಗಳನ್ನು ರೂಪಿಸುವಲ್ಲಿ ಪಾಲ್ಗೊಳ್ಳುತ್ತಾರೆ. ಯುವಜನರಿಗೆ ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ನೇರ ಅನುಭವ ಕಲ್ಪಿಸುವುದೇ ಇದರ ಮುಖ್ಯ ಗುರಿಯಾಗಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಅರ್ಜಿ ಸಲ್ಲಿಸಲು ಕೆಳಗಿನ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗಿದೆ:

  • ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು. OCI, ನೇಪಾಳ ಮತ್ತು ಭೂತಾನ್ ನಾಗರಿಕರೂ ಅರ್ಹರು.
  • ವಯಸ್ಸು 21 ರಿಂದ 32 ವರ್ಷಗಳ ನಡುವೆ ಇರಬೇಕು.
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದಿರಬೇಕು.
  • ಪದವಿಯನ್ನು ಅಕ್ಟೋಬರ್ 1, 2026ರೊಳಗೆ ಪೂರ್ಣಗೊಳಿಸಿರಬೇಕು.

ಕೆಲಸದ ಕ್ಷೇತ್ರಗಳು:

ಫೆಲೋಗಳಿಗೆ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಗ್ರಾಮೀಣ ಉದ್ಯಮಶೀಲತೆ, ಜೀವನೋಪಾಯ ವೃದ್ಧಿ, ಮಹಿಳಾ ಸಬಲೀಕರಣ ಸೇರಿದಂತೆ ಸುಮಾರು 12 ಪ್ರಮುಖ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ಇದರಿಂದ ಸಮಾಜ ಮತ್ತು ಅಭಿವೃದ್ಧಿ ಕ್ಷೇತ್ರದ ಕುರಿತು ನೈಜ ಅನುಭವ ಲಭಿಸುತ್ತದೆ.

ಆರ್ಥಿಕ ನೆರವು ಮತ್ತು ಸೌಲಭ್ಯಗಳು:

ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವಿಧ ಆರ್ಥಿಕ ಮತ್ತು ಭದ್ರತಾ ಸೌಲಭ್ಯಗಳನ್ನು ನೀಡಲಾಗುತ್ತದೆ:

  • ತಿಂಗಳಿಗೆ 15,000 ರೂ. ಸ್ಟೈಪೆಂಡ್
  • ಸ್ಥಳೀಯ ಪ್ರಯಾಣಕ್ಕೆ ತಿಂಗಳಿಗೆ 1,000 ರೂ.
  • ಕಾರ್ಯಕ್ರಮ ಪೂರ್ಣಗೊಂಡ ನಂತರ 70,000 ರೂ. ಒಂದು ಬಾರಿಯ ಭತ್ಯೆ
  • ಆರೋಗ್ಯ ಮತ್ತು ಅಪಘಾತ ವಿಮೆ
  • ಕಾರ್ಯಕ್ರಮ ಪೂರ್ಣಗೊಳಿಸಿದ ಬಳಿಕ ಅಧಿಕೃತ ಪ್ರಮಾಣಪತ್ರ

ಇದನ್ನೂ ಓದಿ: ಕರ್ನಾಟಕದ ಹಾಲು ಒಕ್ಕೂಟದಲ್ಲಿ 194 ಹುದ್ದೆಗಳಿಗೆ ನೇಮಕಾತಿ; 10ರಿಂದ ಪದವೀಧರರವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯುತ್ತದೆ:

  • ಆನ್‌ಲೈನ್ ನೋಂದಣಿ ಮತ್ತು ಪ್ರಾಥಮಿಕ ಮೌಲ್ಯಮಾಪನ
  • ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಸಂದರ್ಶನ
  • ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆ

ಎಸ್‌ಬಿಐ ಯೂತ್ ಫಾರ್ ಇಂಡಿಯಾ ಫೆಲೋಶಿಪ್‌ ಕೇವಲ ಉದ್ಯೋಗಾವಕಾಶವಲ್ಲ; ಇದು ದೇಶದ ಗ್ರಾಮೀಣ ಅಭಿವೃದ್ಧಿಯಲ್ಲಿ ನೇರವಾಗಿ ಪಾಲ್ಗೊಳ್ಳುವ, ಜೀವನಪಾಠ ಕಲಿಸುವ ಮತ್ತು ಸಮಾಜದೊಂದಿಗೆ ಬಲವಾದ ಬಾಂಧವ್ಯ ನಿರ್ಮಿಸುವ ಮಹತ್ವದ ಅನುಭವವಾಗಿದೆ. ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಲು ಬಯಸುವ ಯುವಕರಿಗೆ ಇದು ಒಂದು ಅಪರೂಪದ ಅವಕಾಶವಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ramdan 2026: ಫೆ. 19ರಿಂದ ಪವಿತ್ರ ರಂಜಾನ್ ಮಾಸ ಪ್ರಾರಂಭ: ಉಪವಾಸ, ಪ್ರಾರ್ಥನೆಯ ಮಹತ್ವ ತಿಳಿಯಿರಿ – Kannada News | Ramazan 2026: Fasting Rules, Dates and Significance of Roza in Islam

ಪ್ರಪಂಚದ ಅನೇಕ ದೇಶಗಳಲ್ಲಿ, ವಿಶೇಷವಾಗಿ ಸೌದಿ ಅರೇಬಿಯಾದಲ್ಲಿ, ಫೆಬ್ರವರಿ 17 ರಂದು ಪವಿತ್ರ ರಂಜಾನ್ ತಿಂಗಳ ಚಂದ್ರ ಕಾಣಿಸಿಕೊಂಡಿದ್ದು, ಫೆಬ್ರವರಿ 18ರಿಂದ ಉಪವಾಸಗಳು ಆರಂಭವಾಗಿವೆ. ಮೆಕ್ಕಾ, ಮದೀನಾ ಸೇರಿದಂತೆ ಜಗತ್ತಿನಾದ್ಯಂತ ಇಸ್ಲಾಂ ಧರ್ಮದವರು ತಮ್ಮ ಸ್ಥಳೀಯ ಮಸೀದಿಗಳಲ್ಲಿ ತರಾವೀಹ್ ಪ್ರಾರ್ಥನೆ (Taraweeh) ಗಳಿಂದ ಈ ಮಾಸವನ್ನು ಆಚರಿಸುತ್ತಿದ್ದಾರೆ. ಅರೇಬಿಯಾ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಸಾಮಾನ್ಯವಾಗಿ ರಂಜಾನ್ ಉಪವಾಸದ ದಿನಕ್ಕೆ ಒಂದು ದಿನದ ವ್ಯತ್ಯಾಸವಿರುತ್ತದೆ, ಹಾಗಾಗಿ ಭಾರತದಲ್ಲಿ ಮೊದಲ ಉಪವಾಸವು ಫೆಬ್ರವರಿ 19 ರಿಂದಲೇ ಪ್ರಾರಂಭವಾಗಲಿದೆ.

ರೋಜಾ ಎಂದರೇನು?

ರಂಜಾನ್ ಉಪವಾಸ ಇಸ್ಲಾಂ ಧರ್ಮದಲ್ಲಿ ಅತ್ಯಂತ ಶ್ರದ್ಧಾ ಆರಾಧನಾ ಮಾದರಿಯಾಗಿದೆ. ಇದನ್ನು ರೋಜಾ ಎಂದು ಕರೆಯಲಾಗುತ್ತದೆ. ಮುಸ್ಲಿಮರು ಸೂರ್ಯೋದಯಕ್ಕೆ ಮುಂಚಿತವಾಗಿ ತಮ್ಮ ಉಪವಾಸ ನಿರ್ಧರಿಸುತ್ತಾರೆ ಮತ್ತು ಸೂರ್ಯಾಸ್ತದವರೆಗೆ ಆಹಾರ, ನೀರು, ಪಾನೀಯ ತ್ಯಜಿಸುತ್ತಾರೆ. ಉಪವಾಸ ಮುಗಿಯುವ ಕ್ಷಣದಲ್ಲಿ ಸೂರ್ಯಾಸ್ತದ ನಂತರ ಕುಟುಂಬ ಮತ್ತು ಸಮೂಹದೊಂದಿಗೆ ಇಫ್ತಾರ್ ಮಾಡಲಾಗುತ್ತದೆ. ಉಪವಾಸವು ಕೇವಲ ಆಹಾರ, ನೀರಿನ ತ್ಯಾಗವಲ್ಲ; ಅದು ಮನಸ್ಸಿನ ಶುದ್ಧೀಕರಣ, ಮಾತಿನ ಸಂಯಮ, ನಡವಳಿಕೆಯ ಶಿಸ್ತಿಗೆ ಪ್ರಮುಖ ಅವಕಾಶವನ್ನಾಗಿ ಪರಿಗಣಿಸಲಾಗಿದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ರಂಜಾನ್ ಉಪವಾಸದ ಮುಖ್ಯ ನಿಯಮಗಳು:

  • ಸೆಹ್ರಿ (Sehri): ಸೂರ್ಯೋದಯಕ್ಕೂ ಮುನ್ನ, ಬೆಳಿಗ್ಗೆ ಮೊದಲಿನ ಆಹಾರವನ್ನು ಸೇವಿಸುವುದು. ಇದನ್ನು ಉಪವಾಸಕ್ಕೆ ಸಿದ್ಧತೆ ಎಂದು ಪರಿಗಣಿಸಲಾಗುತ್ತದೆ. ಸೆಹ್ರಿಯ ನಂತರ, ಸೂರ್ಯಾಸ್ತದವರೆಗೆ ಯಾವುದೇ ಆಹಾರ, ನೀರು, ಅಥವಾ ಪಾನೀಯ ಸೇವಿಸುವಂತಿಲ್ಲ.
  • ಇಫ್ತಾರ್ (Iftar): ಸೂರ್ಯಾಸ್ತದ ನಂತರ ಮೊದಲು ಖರ್ಜೂರ ಮತ್ತು ನೀರು ಸೇವಿಸಿ ಉಪವಾಸ ಮುರಿಯಲಾಗುತ್ತದೆ. ಸಾಮಾನ್ಯವಾಗಿ ಆರಂಭಿಸಿ, ನಂತರ ಇಫ್ತಾರ್ ಮಾಡಲಾಗುತ್ತದೆ.
  • ಪ್ರಾರ್ಥನೆಗಳು: ಐದು ಬಾರಿ ನಮಾಜ್ (ಪ್ರಾರ್ಥನೆ) ಮತ್ತು ರಾತ್ರಿ ತರಾವೀಹ್ ನಮಾಜ್ ಗಳು ಅದರ ಪವಿತ್ರತೆಗೆ ಮುಖ್ಯ ಪಾತ್ರ ವಹಿಸುತ್ತವೆ.

ರಂಜಾನ್ ತಿಂಗಳ ಮಹತ್ವ:

ರಂಜಾನ್ ಭಗವಂತ ಅಲ್ಲಾನಿಗೆ ಸಮರ್ಪಿತ ಸಮಯವೆಂದು ಪರಿಗಣಿಸಲಾಗಿದೆ. ಹೀಗಾಗಿ ಈ ತಿಂಗಳು ಭಗವಂತನೊಂದಿಗೆ ಹೆಚ್ಚು ಸಂಪರ್ಕ ಸಾಧಿಸುವ ಸಮಯ. ಉಪವಾಸದ ಜೊತೆಗೆ ಪ್ರಾರ್ಥನೆ, ದಾನಧರ್ಮ — ಜಕಾತ್ ಮತ್ತು ಸದಾಗಾ ಮೂಲಕ ಮಾನವೀಯತೆ, ಸಹೋದರತ್ವ ಮತ್ತು ಸಹಾಯಭಾವವನ್ನು ಉತ್ತೇಜಿಸುವುದೇ ರಂಜಾನ್ ಹಬ್ಬದ ಅತ್ಯಂತ ಮಹತ್ವದ ಸಂದೇಶವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಟಾವಿಗೆ ಬಂದಿದ್ದ ಬೆಳೆ ತಿಂದು ತೇಗಿದ ಒಂಟಿ ಸಲಗ: ಆನೆ ಓಡಿಸಲು ರೈತರ ಹರಸಾಹಸ – Kannada News | Wild Elephant Damages Maize Crop in Chikkarangashetty Doddi of Hanur Taluk, Chamarajanagara

ಚಾಮರಾಜನಗರ, ಫೆಬ್ರವರಿ 18: ಗಡಿ ನಾಡು ಚಾಮರಾಜನಗರದಲ್ಲಿ ಮತ್ತೆ ಕಾಡಾನೆ ಹಾವಳಿ ಮಿತಿ ಮೀರಿದೆ. ಕಟಾವಿಗೆ ಬಂದಿದ್ದ ಮೆಕ್ಕೆಜೋಳವನ್ನು ಒಂಟಿ ಸಲಗ ತಿಂದು ತೇಗಿದ್ದು, ತಡರಾತ್ರಿ 3 ಗಂಟೆಯವರೆಗೂ ಕಾಡಾನೆ ಓಡಿಸಲು ಹನೂರು ತಾಲೂಕಿನ ಕಾಡಂಚಿನ ಪ್ರದೇಶ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದಲ್ಲಿ ರೈತರು ಹರಸಾಹಸ ಪಟ್ಟಿದ್ದಾರೆ. ನಂಜಶೆಟ್ಟಿ ಎಂಬುವವರಿಗೆ ಸೇರಿದ ಜಮೀನಿಗೆ ಲಗ್ಗೆಯಿಟ್ಟ ಕಾಡಾನೆ, 5 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಸಂಪೂರ್ಣ ಹಾಳು ಮಾಡಿದೆ. ಒಂಟಿ ಸಲಗವನ್ನು ಓಡಿಸುವ ವೇಳೆ ಬಿದ್ದು ರೈತನ ಕಾಲಿಗೆ ಗಾಯ ಕೂಡ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಹಾರಾಷ್ಟ್ರ : ಬಸ್, ಆಟೋ ನಡುವೆ ಭೀಕರ ಅಪಘಾತ, ತುಂಡು ತುಂಡಾಗಿ ಬಿದ್ದ ಆಟೋ, ಶಾಲಾ ಮಕ್ಕಳು ಸೇರಿ ನಾಲ್ವರು ಸಾವು – Kannada News | ST Bus Rams Into Auto, Four Killed on the Spot in Fatal Crash in Maharashtra

ಅಮರಾವತಿ, ಫೆಬ್ರವರಿ 18: ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ ಹಾಗೂ ಆಟೋ ನಡುವೆ ಅಪಘಾತ(Accident) ಸಂಭವಿಸಿದ್ದು, ಶಾಲಾ ಮಕ್ಕಳು ಸೇರಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಾಗ್ಪುರಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ ವರುದ್-ರಾಜುರಾ ಬಜಾರ್ ರಸ್ತೆಯಲ್ಲಿ ಬೆಳಗ್ಗೆ ಈ ಘಟನೆ ನಡೆದಿದೆ. ಈ ಭೀಕರ ಅಪಘಾತದ ನಂತರ ಆ ಪ್ರದೇಶದಲ್ಲಿ ಕೋಲಾಹಲ ಉಂಟಾಗಿದ್ದು, ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮಾಹಿತಿ ಪ್ರಕಾರ, ಅಮರಾವತಿ ಜಿಲ್ಲೆಯ ವರುದ್ ತಾಲೂಕಿನ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳು ರಿಕ್ಷಾದಲ್ಲಿ ಕೆಲವು ಸ್ಥಳೀಯ ನಾಗರಿಕರು ಕೂಡ ಇದ್ದರು.

ಪ್ರಯಾಣಿಕರಿಂದ ತುಂಬಿದ್ದ ಆಟೋಗೆ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ ರಿಕ್ಷಾ ತುಂಡು ತುಂಡಾಗಿ ಬಿದ್ದಿತ್ತು. ರಿಕ್ಷಾದಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಶಾಲಾ ಮಕ್ಕಳೂ ಸೇರಿದ್ದಾರೆ. ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಮತ್ತೊಂದು ಘಟನೆ
ಯಾವತ್ಮಲ್ ಜಿಲ್ಲೆಯ ಅರ್ನಿ ಬಸ್ ನಿಲ್ದಾಣದಲ್ಲಿ ಅಪಘಾತವೊಂದು ಸಂಭವಿಸಿದೆ. ಯಾವತ್ಮಲ್​ನಿಂದ ಪುಸಾದ್ ಮಾರ್ಗವಾಗಿ ಚಲಿಸುತ್ತಿದ್ದ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ ಬ್ರೇಕ್ ಫೇಲ್ ಆದ ಪರಿಣಾಮ ಬಸ್ ನಿಲ್ದಾಣದಲ್ಲಿರುವ ಪಿಲ್ಲರ್​ಗೆ ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ ಪ್ರಯಾಣಿಕರಿದ್ದ ಪರಿಣಾಮ ಆ ಪ್ರದೇಶಲ್ಲಿ ಗದ್ದಲ ಉಂಟಾಯಿತು. ಆದರೆ ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮತ್ತಷ್ಟು ಓದಿ: ಹೊಸಕೋಟೆ ಬಳಿ ಬೈಕ್, ಕ್ಯಾಂಟರ್ ಲಾರಿಗೆ ಕಾರು ಡಿಕ್ಕಿಯಾಗಿ ಭೀಕರ ಅಪಘಾತ: 7 ಜನ ಸಾವು

ಪ್ರಯಾಣಿಕರನ್ನು ಇಳಿಸಲು ಬಸ್ ನಿಲ್ದಾಣಕ್ಕೆ ಪ್ರವೇಶಿಸುತ್ತಿದ್ದಾಗ ಚಾಲಕ ಬ್ರೇಕ್ ಹಾಕಲು ಪ್ರಯತ್ನಿಸಿದ್ದಾರೆ, ಆದರೆ ತಾಂತ್ರಿಕ ದೋಷದಿಂದ ಬ್ರೇಕ್ ಕೆಲಸ ಮಾಡಲಿಲ್ಲ. ನಿಯಂತ್ರಣ ತಪ್ಪಿರುವುದನ್ನು ಅರಿತು ಚಾಲಕ ಮುನ್ನೆಚ್ಚರಿಕೆವಹಿಸಿ ಕಂಬಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಪರಿಣಾಮ ಬಸ್ಸಿನ ಕ್ಯಾಬಿನ್​ಗೆ ಹಾನಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಫ್ರೀಯಾಗಿ ಮೂವಿ ಸಿಗುತ್ತೆ ಎಂದು ಡೌನ್ ಲೋಡ್ ಮಾಡ್ತಿದ್ದಿರಾ? ಡೌನ್ ಲೋಡ್ ಆಗುವ ಸಮಯವೇ ಆಗುತ್ತೆ ವಂಚಕರಿಗೆ ವರದಾನ, ಹೇಗೆ ಗೊತ್ತಾ? – Kannada News | Beware Free Movie Downloads: Bengaluru Resident Lost Thousands to Cyber Criminals

ಫ್ರೀಯಾಗಿ ಮೂವಿ ಸಿಗುತ್ತೆ ಎಂದು ಡೌನ್ ಲೋಡ್ ಮಾಡ್ತಿದ್ದಿರಾ?ಡೌನ್ ಲೋಡ್ ಆಗುವ ಸಮಯವೇ ಆಗುತ್ತೆ ವಂಚಕರಿಗೆ ವರದಾನ, ಹೇಗೆ ಗೊತ್ತಾ?

ಬೆಂಗಳೂರು, ಫೆಬ್ರವರಿ 18: ಹೊಸ ಸಿನೆಮಾ ರಿಲೀಸ್ ಆಗಿದೆ, ಓಟಿಟಿಗೂ ಬಂದಿದೆ ಆದರೆ ಹಣ ಕೊಟ್ಟು ನೋಡಲು ಮನಸ್ಸಿಲ್ಲವೆಂದು ಫ್ರೀಯಾಗಿ ಎಪಿಕೆ ಫೈಲ್ ಡೌನ್​ಲೋಡ್ ಮಾಡುವ ಗೀಳಿಗೆ ಬಿದ್ದವರು ಹಲವರು ಇದ್ದಾರೆ. ಆದರೆ ಹೀಗೆ ಉಚಿತವಾಗಿ ಸಿನಿಮಾ (Free Movie) ನೋಡಲು ಮುಂದಾದ ಕಾಂಟ್ರಾಕ್ಟರ್ ಒಬ್ಬರು ಸೈಬರ್ ವಂಚನೆಗೆ ಒಳಗಾಗಿ 56 ಸಾವಿರ ರೂಪಾಯಿ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓಟಿಪಿ ಇಲ್ಲದೆಯೇ ಹೋಯ್ತು ಹಣ!

ಅಪರಿಚಿತ ವ್ಯಕ್ತಿಯೊಬ್ಬರು ಬಾಲಕೃಷ್ಣ ಎಂಬುವವರಿಗೆ ವಾಟ್ಸಾಪ್ ಮೂಲಕ ಬಾರ್ಡರ್-2 ಚಿತ್ರದ ಎಪಿಕೆ ಫೈಲ್ ಕಳುಹಿಸಿದ್ದರು. ಈ ಲಿಂಕ್ ಮೂಲಕ ಚಿತ್ರವನ್ನು ಡೌನ್‌ಲೋಡ್ ಮಾಡಲು ಮುಂದಾದಾಗ, ಸೈಬರ್ ವಂಚಕರು ಬಾಲಕೃಷ್ಣ ಅವರ ಖಾಸಗಿ ಡೇಟಾವನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಚಿತ್ರ ಡೌನ್‌ಲೋಡ್ ಆಗುತ್ತಿರುವ ಸಮಯವನ್ನು ದುರುಪಯೋಗಪಡಿಸಿಕೊಂಡ ವಂಚಕರು, ನಂತರ ಹಂತ ಹಂತವಾಗಿ ಅವರ ಬ್ಯಾಂಕ್ ಖಾತೆಯಿಂದ 56 ಸಾವಿರ ರೂಪಾಯಿಗಳನ್ನು ವರ್ಗಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ ಆನ್ಲೈನ್​ನಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ! ನೀವು ಹೀಗೂ ಮೋಸ ಹೋಗಬಹುದು!

ಇದಕ್ಕೂ ಮೊದಲು ಬ್ಯಾಂಕ್​ನಿಂದ ಎಟಿಎಮ್ ಕಾರ್ಡ್​ ಕಳುಹಿಸಲು ನಿಮ್ಮ ಮನೆಯ ವಿಳಾಸ ಕಳುಹಿಸಿ ಎಂಬ ಹುಸಿ ಕರೆಯನ್ನೂ ಬಾಲಕೃಷ್ಣ ಸ್ವೀಕರಿಸಿದ್ದರು. ಆದರೆ ಇವರು ತಮ್ಮ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಂಡಿರಲಿಲ್ಲ. ನಂತರ ಫೆಬ್ರವರಿ 2ರಂದು ಅವರ ವಾಟ್ಸಾಪ್ಗೆ ಬೇರೊಂದು ನಂಬರ್​ನಿಂದ ಮೂವಿಯ ಎಪಿಕೆ ಫೈಲ್ ಬಂದಿತ್ತು ಎಂದು ದೂರುದಾರ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ನವವಿವಾಹಿತ ಜೋಡಿಯನ್ನು ಕಂಡೊಡನೆ ಶುಭಾಶಯ ಕೋರಿದ ಶಾಲಾ ಬಸ್ಸಿನಲ್ಲಿದ್ದ ಪುಟಾಣಿಗಳು – Kannada News | Bengaluru: Special wishes from kids on school bus to newlywed couple in Bengaluru

ಬೆಂಗಳೂರು, ಫೆಬ್ರವರಿ 18: ಮದುವೆಯಾಗುವ ಪ್ರತಿಯೊಬ್ಬ ಹೆಣ್ಣು ಗಂಡಿಗೂ ಒಂದಷ್ಟು ಆಸೆ ಆಕಾಂಕ್ಷೆಯಿರುವುದು ಸಹಜ. ಮದುವೆಯ (marriage) ಬಗ್ಗೆ ಸಾಕಷ್ಟು ಕನಸು ಕಾಣುತ್ತಾರೆ. ಆದರೆ ಕೆಲವು ಘಟನೆಗಳು ಹೊಸ ಜೀವನಕ್ಕೆ ಕಾಲಿಟ್ಟ ಕ್ಷಣವನ್ನು ನೆನಪಿನಲ್ಲಿ ಬುತ್ತಿಯಲ್ಲಿ ಶಾಶ್ವತವಾಗಿರುವಂತೆ ಮಾಡುತ್ತದೆ. ಬೆಂಗಳೂರಿನಲ್ಲಿ ನವವಿವಾಹಿತ ದಂಪತಿಗೆ ಶಾಲಾ ಬಸ್ಸಿನಲ್ಲಿದ್ದ ಮಕ್ಕಳು (children) ಶುಭಾಶಯಗಳನ್ನು ಕೋರಿದ್ದಾರೆ. ಮಕ್ಕಳ ಅನಿರೀಕ್ಷಿತ ಶುಭಾಶಯಗಳು ದಂಪತಿಗಳ ಮೊಗದಲ್ಲಿ ನಗು ಮೂಡಿಸಿದೆ. ಈ ಹೃದಯಸ್ಪರ್ಶಿ ಕ್ಷಣದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಖುಷಿ ಪಟ್ಟಿದ್ದಾರೆ.

ಹಿಮಾ ಜಿ (Hima G) ಎಂಬ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋದ ಶೀರ್ಷಿಕೆಯಲ್ಲಿ ಯಾದೃಚ್ಛಿಕವಾಗಿ ಶಾಲಾ ಬಸ್ ಆಶೀರ್ವಾದವಾಗಿ ಬದಲಾದಾಗ. ಮದುವೆ ಮಂಟಪಕ್ಕೆ ಹೋಗುವ ದಾರಿಯಲ್ಲಿ, ಒಂದು ಶಾಲಾ ಬಸ್ ಹಾದುಹೋಯಿತು. ಇದ್ದಕ್ಕಿದ್ದಂತೆ ಇಡೀ ಬಸ್ ನಲ್ಲಿದ್ದ ಮಕ್ಕಳು ‘ಹ್ಯಾಪಿ ಮ್ಯಾರೇಜ್ಡ್ ಲೈಫ್!’ ಎಂದು ಕೂಗಲು ಪ್ರಾರಂಭಿಸಿದರು. ಜೋರಾದ ಧ್ವನಿಯಲ್ಲಿ ತುಂಬಾನೇ ಶುದ್ಧವಾಗಿತ್ತು. ಹಾಗೂ ಅನಿರೀಕ್ಷಿತವಾಗಿತ್ತು. ನಾನು ಅದನ್ನು ರೆಕಾರ್ಡ್ ಮಾಡಲು ಸಹ ಸಾಧ್ಯವಾಗಲಿಲ್ಲ. ಆದರೆ ಆ ಕ್ಷಣ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಶುದ್ಧ ಆಶೀರ್ವಾದಗಳು ನಿಜವಾಗಿಯೂ ಪುಟ್ಟ ಹೃದಯಗಳಿಂದ ಬರುತ್ತವೆ. ನೀವಿಬ್ಬರೂ ನಿಜವಾಗಿಯೂ ಧನ್ಯರು … ಪ್ರತಿಯೊಬ್ಬರೂ ತಮ್ಮ ಪ್ರಮುಖ ದಿನದಂದು ಅಂತಹ ಶುದ್ಧ, ಮುಗ್ಧ ಆಶೀರ್ವಾದಗಳನ್ನು ಪಡೆಯುವುದಿಲ್ಲ ಎಂದು ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ನವ ಜೋಡಿಯೂ ತಮ್ಮ ಮದುವೆ ಮಂಟಪದ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ. ಆ ಸಮಯದಲ್ಲಿ ಅದೇ ಮಾರ್ಗದಲ್ಲಿ ಹಾದುಹೋಗುತ್ತಿದ್ದ ಶಾಲಾ ಬಸ್‌ನಲ್ಲಿದ್ದ ಮಕ್ಕಳು ಈ ನವಜೋಡಿಗೆ ಶುಭಾಶಯ ಕೋರಿದ್ದಾರೆ. ಬಸ್ಸಿನೊಳಗಿದ್ದ ಮಕ್ಕಳು “ಹ್ಯಾಪಿ ಮ್ಯಾರೇಜ್ ಲೈಫ್!” ಎಂದು ಒಂದೇ ಸಮನೇ ಕೂಗಲು ಪ್ರಾರಂಭಿಸಿದ್ದಾರೆ. ಮುಗ್ಧ ಮನಸ್ಸಿನ ಮಕ್ಕಳು ಮನಸಾರೆ ಶುಭಾಶಯ ಕೋರಿದ್ದನ್ನು ನೋಡಿ ಮದುಮಗನು ಖುಷಿಯಲ್ಲಿ ನಗುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಡಲ್ ಥೆರಪಿ ಟ್ರೆಂಡ್: ಇಲ್ಲಿ ಅಪ್ಪಿಕೊಳ್ಳುತ್ತಾರೆ, ಕೈ ಹಿಡಿಯುತ್ತಾರೆ, ಗಂಟೆಗೆ 5,000 ರೂ.

ಈ ವಿಡಿಯೋ ಮೂರು ಮಿಲಿಯನ್ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ, ಇದು ಹಣದಿಂದ ಖರೀದಿಸಲು ಸಾಧ್ಯವಾಗದ ಆಶೀರ್ವಾದ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮಕ್ಕಳು ಶುದ್ಧ ಮನಸ್ಸಿನಿಂದ ಆಶೀರ್ವಾದ ಮಾಡಿದ್ದಾರೆ, ನಿಮಗೆ ಒಳ್ಳೆಯದು ಆಗಲಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ಶಾಶ್ವತವಾಗಿ ನೆನಪಿಸಿಕೊಳ್ಳುವ ಕ್ಷಣಗಳು” ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ್​ಜೆನ್ ಎಐನಿಂದ ಸ್ಕೈಏರ್​ವರೆಗೂ ದೆಹಲಿ ಶೃಂಗಸಭೆಯಲ್ಲಿ ಭಾರತೀಯರ ಎಐ ಶಕ್ತಿ ಪ್ರದರ್ಶನ – Kannada News | India AI Impact Summit, several innovations from Bharat Gen to Sky Air are on display

ನವದೆಹಲಿ, ಫೆಬ್ರುವರಿ 18: ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ (AI Impact Summit) ಜಾಗತಿಕವಾಗಿ ಅಭಿವೃದ್ಧಿಯಾಗಿರುವ, ಅಭಿವೃದ್ಧಿಯಾಗುತ್ತಿರುವ ಎಐ ತಂತ್ರಜ್ಞಾನಗಳು, ನಾವೀನ್ಯತೆ, ಆವಿಷ್ಕಾರಗಳ ಪ್ರದರ್ಶನವಾಗುತ್ತಿದೆ. ಭಾರತದ ವತಿಯಿಂದ ನೂರಾರು ಸ್ಟಾಲ್​ಗಳಲ್ಲಿ ದೇಶದ ಎಐ ಭವಿಷ್ಯದ ದಿಗ್ಸೂಚಿಯನ್ನು ಕಾಣಬಹುದಾಗಿದೆ. ದೇಶೀಯವಾಗಿ ಅಭಿವೃದ್ಧಿಯಾದ ಎಐ ಫೌಂಡೇಶನಲ್ ಮಾಡಲ್​ಗಳಿಂದ ಹಿಡಿದು ರೋಬೋಟಿಕ್ಸ್​ವರೆಗೆ ನೂರಾರು ಇನ್ನೋವೇಶನ್​ಗಳನ್ನು ಭಾರತೀಯರು ಜಗತ್ತಿಗೆ ತೋರ್ಪಡಿಸಿದ್ದಾರೆ. ಮುಂಬರುವ ವರ್ಷಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಎಐ ಆವಿಷ್ಕಾರಗಳು ನಡೆಯುವುದು ನಿಶ್ಚಿತವೆನಿಸಿದೆ.

ದೆಹಲಿಯ ಗಲ್ಗೋಟಿಯಾ ಯೂನಿವರ್ಸಿಟಿ ಇದೇ ಶೃಂಗಸಭೆಯಲ್ಲಿ ಸ್ಟಾಲ್ ಸ್ಥಾಪಿಸಿ, ಚೀನಾ ನಿರ್ಮಿತ ರೋಬೋನಾಯಿಯನ್ನು ಆವಿಷ್ಕರಿಸಿದ್ದು ತಾನೆಂದು ಹೇಳಿಕೊಂಡು ವಿವಾದ ಹುಟ್ಟುಹಾಕಿದೆ. ಈ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಗಲ್ಗೋಟಿಯಾ ಯೂನಿವರ್ಸಿಟಿಯ ಒಂದು ಪ್ರಮಾದ ಇಟ್ಟುಕೊಂಡು ಭಾರತದ ಎಐ ಸಾಧನೆಗಳನ್ನು ಹೀಗಳೆಯುವುದು ಸರಿಯಲ್ಲ ಎನ್ನುವ ವಾದ ಇದೆ. ಪತ್ರಕರ್ತ ತಪಸ್ ಭಟ್ಟಾಚಾರಿ ಅವರು ಸಮಿಟ್​ನಲ್ಲಿ ಪ್ರದರ್ಶನಗೊಂಡಿರುವ ಭಾರತದ ಇತರ ಎಐ ಆವಿಷ್ಕಾರಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಕೆಲ ಮಹತ್ವದ ಎಐ ಆವಿಷ್ಕಾರಗಳು ಈ ಕೆಳಕಂಡಂತಿವೆ:

ಇದನ್ನೂ ಓದಿ: ಎಐ ಸಮಿಟ್​​ನಲ್ಲಿ ರಾರಾಜಿಸಿದ ಜಿಯೋ ಸ್ಟಾಲ್; ವಿವಿಧ ಮಾಡಲ್​ಗಳನ್ನು ಪ್ರಧಾನಿಗಳೆದುರು ತೆರೆದಿಟ್ಟ ಆಕಾಶ್ ಅಂಬಾನಿ

ಭಾರತ್ ಜೆನ್ ಎಐ

ಭಾರತ್ ಜೆನ್ ಸಂಸ್ಥೆ 22 ಭಾರತೀಯ ಭಾಷೆಗಳನ್ನು ಬೆಂಬಲಿಸುವಂತಹ 17 ಬಿಲಿಯನ್ ಪ್ಯಾರಾಮೀಟರ್​ನ ಮಲ್ಟಿಲಿಂಗ್ವಲ್ ಮಾಡಲ್ ಆದ ಪರಮ್ 27ಬಿ ಅನ್ನು ಅನಾವರಣಗೊಳಿಸಿದೆ. ಭಾರತದ ದತ್ತಾಂಶ ಬಳಸಿ ನಿರ್ಮಿತವಾಗಿರುವ ಈ ಎಐ ಮಾಡಲ್, ಆರೋಗ್ಯ, ಫಿನ್​ಟೆಕ್, ಆಡಳಿತ ಇತ್ಯಾದಿ ಕ್ಷೇತ್ರಗಳಲ್ಲಿ ಎಐ ಅಳವಡಿಕೆಯನ್ನು ಸುಲಭಗೊಳಿಸುತ್ತದೆ.

ParadigmIT ಸೋವರಿನ್ ಎಐ ಬಾಕ್ಸ್

ಪ್ಯಾರಾಡಿಗಮ್​ಐಟಿ ಕಂಪನಿಯ ಸೋವರಿನ್ ಎಐ ಬಾಕ್ಸ್ ಬಹುತೇಕ ದೇಶೀಯವಾಗಿ ನಿರ್ಮಿತಗೊಂಡ ಮಾಡಲ್. ಇದಕ್ಕೆ ಬೇಕಾಗುವ ದತ್ತಾಂಶವೆಲ್ಲವೂ ಭಾರತದ ಒಳಗೆಯೇ ಇರುತ್ತದೆ. ಸೂಕ್ಷ್ಮ ದತ್ತಾಂಶದ ರಕ್ಷಣೆ ಆಗುತ್ತದೆ.

ತಪಸ್ ಭಟ್ಟಾಚಾರಿ ಅವರ ಎಕ್ಸ್ ಪೋಸ್ಟ್

ಸ್ಕೈ ಏರ್ ಮೊಬಿಲಿಟಿ

ಸ್ಕೈ ಏರ್, ಅರೈವ್ ಎಐ ಮತ್ತು ಆಟ್ಟೋನಮಿ ಕಂಪನಿಗಳು ಜೊತೆಯಾಗಿ ಸೇರಿ ವಿಶ್ವದ ಮೊದಲ ಎಂಡ್-ಟು-ಎಂಡ್ ಆಟೊನಾಮಸ್ ಕಾಮರ್ಸ್ ಡೆಲಿವರಿ ಸಿಸ್ಟಂ ಅನ್ನು ನಿರ್ಮಿಸಿವೆ. ಇದರಲ್ಲಿ ಡ್ರೋನ್​ಗಳು ಪಾರ್ಸಲ್​ಗಳನ್ನು ಮನೆಬಾಗಿಲಿಗೆ ಸಾಗಿಸಬಲ್ಲವು. ಪ್ರಯೋಗಾವಧಿಯಲ್ಲಿ 36 ಲಕ್ಷಕ್ಕೂ ಅಧಿಕ ಡೋರ್ ಡೆಲಿವರಿ ಮಾಡಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಸ್ಕೈ ಏರ್ ಮೊಬಿಲಿಟಿ ಭಾರತೀಯ ಮೂಲದ ಕಂಪನಿಯಾಗಿದೆ. ಆಟ್ಟೋನಮಿ ಅಮೆರಿಕನ್ ಕಂಪನಿಯಾದರೂ ಭಾರತೀಯ ಮೂಲದವರು ಕಟ್ಟಿದ ಸಂಸ್ಥೆ.

ಇದನ್ನೂ ಓದಿ: ಭಾರತದಲ್ಲಿ ಬರಲಿವೆ 50ಕ್ಕೂ ಹೆಚ್ಚು ಡೀಪ್​ಟೆಕ್ ಕಂಪನಿಗಳು: ಅಶ್ವಿನಿ ವೈಷ್ಣವ್

ತಾರಕರಾಮ್ ಮಾರಂ

ತಾರಕರಾಮ್ ಮಾರಮ್ ನೇತೃತ್ವದ ವಿಶನ್ ಡಿಜಿಟಲ್ ಇಂಡಿಯಾದಿಂದ ಭಾರತದ ಮೊದಲ ಎಐ ಟ್ರೈನರ್ ಮೆಷೀನ್ ಅನಾವರಣಗೊಂಡಿದೆ. ಇಂಟೆಲ್ ನೆರವಿನಿಂದ ನಿರ್ಮಿಸಲಅದ ಎಐ ಲ್ಯಾಬ್ ಇದಾಗಿದೆ.

ಹಾಗೆಯೇ, ಸ್ಟಾರ್ಟಪ್ ಸನಾತನ ಎನ್ನುವ ಬೆಂಗಳೂರು ಮೂಲದ ಸಂಸ್ಥೆಯು ಭಾರತದ ಸಾಂಸ್ಕೃತಿಕ ಪರಂಪರೆ ರಕ್ಷಿಸಲು ಎಐ ಅಳವಡಿಕೆ ಮಾಡುತ್ತಿದೆ. ಇದೂ ಕೂಡ ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ ಗಮನ ಸೆಳೆದ ಆವಿಷ್ಕಾರವಾಗಿದೆ.

ಅಗ್ನೀವ ಮತ್ತು ಆದಿತ್ಯ ಎನ್ನುವ ಯುವ ವಿದ್ಯಾರ್ಥಿಗಳು ಸ್ಥಾಪಿಸಿದ ಡ್ರುಬ್ಲೆಟ್ ಇನ್ನೋವೇಶನ್ ಪ್ರೈ ಲಿ ಸಂಸ್ಥೆಯ ರೋಬೋಟಿಕ್ಸ್ ತಂತ್ರಜ್ಞಾನ, ಸರ್ವಮ್ ಎಐನ ಭಾರತೀಯ ಭಾಷೆಗಳ ಎಐ ಮಾಡಲ್​ಗಳು, ರಿಲಾಯನ್ಸ್ ಜಿಯೋದ ವಿವಿಧ ಎಐ ಆವಿಷ್ಕಾರಗಳು ಹೀಗೆ ನೂರಾರು ಭಾರತೀಯರ ಎಐ ಸಾಧನೆಗಳು ಸಮಿಟ್​ನಲ್ಲಿ ಅನಾವರಣಗೊಂಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಧಿಕಾರಿಗಳು ಎಷ್ಟೇ ಕಷ್ಟಪಟ್ಟು ಓದಿದ್ರೂ, ಹೆಬ್ಬೆಟ್ಟು ಹಾಕುವ ಮಂತ್ರಿಗಳ ಮಾತು ಕೇಳಲೇಬೇಕು: ಕಾಂಗ್ರೆಸ್​​ ಸಚಿವೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಸ್ಥಾನಮಾನ ಮತ್ತು ಅಧಿಕಾರಿಗಳ ಕಾರ್ಯವೈಖರಿಯ ನಡುವಿನ ಸಮರ ಹೊಸದೇನಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಒಂದು ಮಾತು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. “ರಾಜಕೀಯದಲ್ಲಿ ಹೆಬ್ಬೆಟ್ಟು ಮುಖ್ಯಮಂತ್ರಿಯಾಗಬಹುದು, ಆದರೆ ಎಷ್ಟೇ ಓದಿ ಅಧಿಕಾರಿಗಳಾದರೂ ಅವರು ನಮ್ಮ ಕೆಳಗೆ ಕೆಲಸ ಮಾಡಬೇಕು ಎಂದು ತೆಲಂಗಾಣದ ಸಚಿವೆ ಕೊಂಡ ಸುರೇಖಾ ಹೇಳಿದ್ದಾರೆ. ಮುಲುಗಿನ ಅರಣ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (FCRI) ನೆನ್ನೆ (ಫೆ. 17) ನಡೆದ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ. ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳಾಗುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಅತೀವವಾಗಿ ಶ್ರಮಪಡಬೇಕು, ಹಗಲು-ರಾತ್ರಿ ಓದಬೇಕು. ಅಷ್ಟೆಲ್ಲಾ ಕಷ್ಟಪಟ್ಟು ಅಧಿಕಾರಿಗಳಾದ ಮೇಲೂ, ಅಂತಿಮವಾಗಿ ಅವರು ನಮ್ಮ (ರಾಜಕಾರಣಿಗಳ) ನಿರ್ದೇಶನದಂತೆ ನಡೆಯಬೇಕು” ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ‘ಬಿಗ್ ಬ್ಯಾಷ್ ಲೀಗ್’

ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಆಯೋಜಿಸುವ ಟಿ20 ಟೂರ್ನಿ ಬಿಗ್ ಬ್ಯಾಷ್ ಲೀಗ್​ ಸೀಸನ್-16ರ ಮೊದಲ ಪಂದ್ಯವನ್ನು ಭಾರತದಲ್ಲಿ ಆಯೋಜಿಸಲು ಪ್ಲ್ಯಾನ್ ರೂಪಿಸಲಾಗುತ್ತಿದೆ. ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ (ಚೆಪಾಕ್) ಈ ಪಂದ್ಯಕ್ಕೆ ಅತಿಥ್ಯ ವಹಿಸುವ ಸಾಧ್ಯತೆಯಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳು ಈಗಾಗಲೇ ಚೆನ್ನೈಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಬಿಗ್ ಬ್ಯಾಷ್​ ಲೀಗ್​ ಪಂದ್ಯವನ್ನು ಭಾರತದಲ್ಲಿ ಆಯೋಜಿಸುತ್ತಿರುವುದೇಕೆ?

ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ ಕಳೆದ 15 ಸೀಸನ್​ಗಳನ್ನು ಆಸ್ಟ್ರೇಲಿಯಾದಲ್ಲೇ ಆಯೋಜಿಸಿದ್ದರು. ಇದೀಗ ಟೂರ್ನಿಯ ಉದ್ಘಾಟನಾ ಪಂದ್ಯವನ್ನು ಭಾರತದಲ್ಲಿ ಆಯೋಜಿಸಲು ಯೋಜನೆ ರೂಪಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣಗಳು ಈ ಕೆಳಗಿನಂತಿವೆ…

ಹೂಡಿಕೆದಾರರ ಸೆಳೆತ: ಬಿಬಿಎಲ್‌ನ ಕೆಲವು ಫ್ರಾಂಚೈಸಿಗಳನ್ನು (ತಂಡಗಳನ್ನು) ಖಾಸಗೀಕರಣಗೊಳಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಯೋಜಿಸಿದೆ. ಭಾರತದಲ್ಲಿ ಪಂದ್ಯ ಆಯೋಜಿಸುವ ಮೂಲಕ ಐಪಿಎಲ್ ತಂಡಗಳ ಮಾಲೀಕರು ಅಥವಾ ಭಾರತೀಯ ಉದ್ಯಮಿಗಳನ್ನು ಈ ಲೀಗ್‌ನಲ್ಲಿ ಹೂಡಿಕೆ ಮಾಡಲು ಆಕರ್ಷಿಸುವುದು ಇದರ ಮುಖ್ಯ ಉದ್ದೇಶ.

ಮಾರುಕಟ್ಟೆ ವಿಸ್ತರಣೆ: ಭಾರತವು ವಿಶ್ವದ ಅತಿದೊಡ್ಡ ಕ್ರಿಕೆಟ್ ಮಾರುಕಟ್ಟೆಯಾಗಿದೆ. ಇಲ್ಲಿನ ಅಪಾರ ಅಭಿಮಾನಿ ಬಳಗವನ್ನು ತಲುಪುವ ಮೂಲಕ ಲೀಗ್‌ನ ಜನಪ್ರಿಯತೆ ಮತ್ತು ಪ್ರಸಾರ ಹಕ್ಕುಗಳ ಮೌಲ್ಯವನ್ನು ಹೆಚ್ಚಿಸಲು ಆಸ್ಟ್ರೇಲಿಯಾ ಬಯಸಿದೆ.

ಜಾಗತಿಕ ಪೈಪೋಟಿ: ಪ್ರಸ್ತುತ ಸೌತ್ ಆಫ್ರಿಕಾ ಟಿ20 ಲೀಗ್ (SA20) ಮತ್ತು ಇಂಟರ್​ನ್ಯಾಷನಲ್ ಲೀಗ್ ಟಿ20 (ILT20-ಯುಎಇ) ಲೀಗ್‌ಗಳು ಭಾರತೀಯ ಉದ್ಯಮಿಗಳ ಹೂಡಿಕೆಯಿಂದಾಗಿ ವೇಗವಾಗಿ ಬೆಳೆಯುತ್ತಿವೆ. ಈ ಲೀಗ್‌ಗಳಿಗೆ ಪೈಪೋಟಿ ನೀಡಲು ಮತ್ತು ಐಪಿಎಲ್ ನಂತರದ ವಿಶ್ವದ 2ನೇ ಶ್ರೇಷ್ಠ ಲೀಗ್ ಎನಿಸಿಕೊಳ್ಳಲು ಬಿಗ್ ಬ್ಯಾಷ್ ಲೀಗ್​ ಹೊಸ ಪ್ರಯತ್ನಕ್ಕೆ ಕೈ ಹಾಕಲು ಮುಂದಾಗಿದೆ.

ಈಗಾಗಲೇ ಹಾಲಿ ಚಾಂಪಿಯನ್ ಪರ್ತ್ ಸ್ಕಾಚರ್ಸ್ ತಂಡವು ಭಾರತದಲ್ಲಿ ಉದ್ಘಾಟನಾ ಪಂದ್ಯವಾಡಲು ಒಪ್ಪಿಗೆ ಸೂಚಿಸಿದೆ. ಇತ್ತ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ನ ಅಧಿಕಾರಿಗಳು​ ಎಂ.ಎ. ಚಿದಂಬರಂ ಸ್ಟೇಡಿಯಂ (ಚೆಪಾಕ್)  ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.

ಇದಾಗ್ಯೂ ಬಿಗ್ ಬ್ಯಾಷ್ ಲೀಗ್​ನ ಮೊದಲ ಪಂದ್ಯಕ್ಕೆ ಬಿಸಿಸಿಐ ಅನುಮತಿ ನೀಡಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ಐಪಿಎಲ್​ನ ಜನಪ್ರಿಯತೆ ಕುಗ್ಗ ಬಾರದೆಂಬ ಕಾರಣಕ್ಕೆ ಬಿಸಿಸಿಐ ಭಾರತೀಯ ಪುರುಷ ಆಟಗಾರರು ವಿದೇಶಿ ಲೀಗ್​ಗಳಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ಹೇರಿದೆ.

ಇದೀಗ ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯಲು ಬಿಗ್ ಬ್ಯಾಷ್ ಲೀಗ್ ಭಾರತದಲ್ಲೇ ಪಂದ್ಯ ಆಯೋಜಿಸಲು ಪ್ಲ್ಯಾನ್ ರೂಪಿಸುತ್ತಿದೆ. ಇದಕ್ಕೆ ಬಿಸಿಸಿಐ ಒಪ್ಪಿಗೆ ಸೂಚಿಸಲಿದ್ದಾರಾ ಎಂಬುದೇ ಈಗ ಕುತೂಹಲ.

 

Source link