All posts by nagaraj11081993

ಜೈಲು ಸೇರಿದ ರಾಜ್​ಪಾಲ್ ಯಾದವ್​​ಗೆ ತಾತ್ಕಾಲಿಕ ಬಿಡುಗಡೆ: ಕಾರಣವೇನು? – Kannada News | Rajpal Yadav got interim release from jail on condition

ಬಾಲಿವುಡ್​ನ (Bollywood) ಖ್ಯಾತ ನಟ ರಾಜ್​​ಪಾಲ್ ಯಾದವ್ 9 ಕೋಟಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು ಈಗಾಗಲೇ ಅವರು ಜೈಲು ಪಾಲಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಸೋನು ಸೂದ್ ಸೇರಿದಂತೆ ಇನ್ನೂ ಕೆಲವರು ರಾಜ್​ಪಾಲ್ ಯಾದವ್ ಅವರ ನೆರವಿಗೆ ಧಾವಿಸಿದ್ದು, ರಾಜ್​ಪಾಲ್ ಯಾದವ್ ಅವರ ಸಾಲದ ಹಣ ನೀಡಿ ಅವರನ್ನು ಬಿಡಿಸಿಕೊಳ್ಳಲು ಮುಂದಾಗಿದ್ದಾರೆ. ಇವುಗಳ ನಡುವೆ ರಾಜ್​​ಪಾಲ್ ಯಾದವ್ ಅವರಿಗೆ ನ್ಯಾಯಾಲಯದಿಂದಲೇ ತಾತ್ಕಾಲಿಕ ಬಿಡುಗಡೆ ದೊರಕಿದೆ.

ರಾಜ್​ಪಾಲ್ ಯಾದವ್ ಅವರ ಸಹೋದರನ ಪುತ್ರಿಯ ಮದುವೆ ಇದ್ದು, ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್​ಪಾಲ್ ಯಾದವ್ ಅವರು ತಾತ್ಕಾಲಿಕ ಬಿಡುಗಡೆಯನ್ನು ಕೋರಿದ್ದರು. ಅದರಂತೆ ಇದೀಗ ನ್ಯಾಯಾಲಯವು ರಾಜ್​ಪಾಲ್ ಯಾದವ್ ಅವರಿಗೆ ತಾತ್ಕಾಲಿಕ ಬಿಡುಗಡೆ ಮಂಜೂರು ಮಾಡಿದ್ದು, ಮಾರ್ಚ್ 18 ರ ವರೆಗೆ ಅವರು ಜೈಲಿನಿಂದ ಹೊರಗೆ ಇರಲಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಮತ್ತೆ ತಿಹಾರ್ ಜೈಲು ಸೇರಿಕೊಳ್ಳಬೇಕಿದೆ. ರಾಜ್​ಪಾಲ್ ಯಾದವ್ ಅವರಿಗೆ ಹಲವು ಷರತ್ತುಗಳ ಮೇಲೆ ಈ ಮಧ್ಯಂತರ ಜಾಮೀನು ನೀಡಲಾಗಿದೆ.

ಜೈಲಿಂದ ಹೊರಬಂದ ಬಳಿಕ ಮಾಧ್ಯಮಗಳ ಬಳಿ ಮಾತನಾಡಿರುವ ರಾಜ್​ಪಾಲ್ ಯಾದವ್, ‘ನನಗೆ ಬೆಂಬಲವಾಗಿ ನಿಂತಿರುವ ಎಲ್ಲರಿಗೂ ಧನ್ಯವಾದ, ನನ್ನ ದೇಶದ ಜನ ಮತ್ತು ಬಾಲಿವುಡ್ ಮಂದಿ ನನ್ನನ್ನು ಪ್ರೀತಿಸಿದ್ದಾರೆ. ಅವರ ಪ್ರೀತಿಯಿಂದಲೇ ನಾನು ಧೈರ್ಯವಾಗಿದ್ದೇನೆ. ಕಳೆದ ಹತ್ತು ವರ್ಷಗಳಿಂದಲೂ ನಾನು ನ್ಯಾಯಾಲಯವನ್ನು ಗೌರವಿಸುತ್ತಾ ಬಂದಿದ್ದೇನೆ. ಎಲ್ಲೆಲ್ಲಿ ನ್ಯಾಯಾಲಯ ಆದೇಶಿಸಿದೆಯೋ ಅಲ್ಲೆಲ್ಲ ನಾನು ಹಾಜರಿ ಹಾಕಿದ್ದೇನೆ. ಈಗ ನನ್ನ ಮನವಿಯನ್ನು ಪುರಸ್ಕರಿಸಿ ನನಗೆ ಅವಕಾಶವಿತ್ತ ಹೈಕೋರ್ಟ್​​ಗೆ ಧನ್ಯವಾದ’ ಎಂದಿದ್ದಾರೆ ರಾಜ್​ಪಾಲ್ ಯಾದವ್.

ಇದನ್ನೂ ಓದಿ:ದಕ್ಷಿಣದ ಆ ನಟ ನಟಿಯರನ್ನು ತೆರೆಮೇಲೂ ಕೀಳಾಗಿ ಕಾಣಲು ಇಷ್ಟಪಡಲ್ಲ; ಬಾಲಿವುಡ್ ನಟಿ

2010 ರಲ್ಲಿ ರಾಜ್​ಪಾಲ್ ಯಾದವ್ ಅವರು ಸಿನಿಮಾ ನಿರ್ಮಾಣಕ್ಕಾಗಿ ದೆಹಲಿ ಮುರಳಿ ಪ್ರಾಜೆಕ್ಟ್ ಲಿಮಟೆಡ್ ವತಿಯಿಂದ ಐದು ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದರು. ಆದರೆ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು, ಭಾರಿ ಮೊತ್ತದ ಹಣ ನಷ್ಟವಾಯ್ತು. ರಾಜ್​ಪಾಲ್ ಯಾದವ್ ಸಾಲ ಮರುಪಾವತಿ ಮಾಡಲಾಗಲಿಲ್ಲ, ಅವರು ಫೈನ್ಯಾನ್ಸಿಯರ್​​ಗೆ ಕೊಟ್ಟಿದ್ದ ಚೆಕ್​​ಗಳು ಬೌನ್ಸ್ ಆದವು. ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 9 ಕೋಟಿ ರೂಪಾಯಿ ಹಣ ಮರುಪಾವತಿಸಬೇಕು ಅಥವಾ ಜೈಲು ಶಿಕ್ಷೆ ಅನುಭವಿಸಬೇಕು ಎಂದಾಯ್ತು. ಆದರೆ ತಮ್ಮ ಬಳಿ ಅಷ್ಟೋಂದು ಹಣ ಇಲ್ಲ ಎಂದ ರಾಜ್​ಪಾಲ್ ಯಾದವ್ ಜೈಲು ಸೇರಿದ್ದರು. ಈಗ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಂದು ತಿಂಗಳು ಮಧ್ಯಂತರ ಜಾಮೀನು ಸಿಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Source link

ಟಿವಿಯಲ್ಲಿ ಬರ್ತಿದೆ ‘45’ ಸಿನಿಮಾ; ಯಾವಾಗ? ಎಲ್ಲಿ?

ಅರ್ಜುನ್ ಜನ್ಯ ನಿರ್ದೇಶನದ ಮೊದಲ ಸಿನಿಮಾ ಜೀ ಕನ್ನಡದಲ್ಲಿ ಪ್ರಸಾರ ಕಾಣಲು ರೆಡಿ ಆಗಿದೆ. ರಾಜ್ ಬಿ ಶೆಟ್ಟಿ, ಉಪೇಂದ್ರ ಹಾಗೂ ಶಿವರಾಜ್​​ಕುಮಾರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಥಿಯೇಟರ್​​​ನಲ್ಲಿ ಡಿಸೆಂಬರ್ 25ರಂದು ತೆರೆಗೆ ಬಂತು. ಆ ಬಳಿಕ ಒಟಿಟಿಗೆ ಕಾಲಿಟ್ಟಿತು. ಈಗ ಟಿವಿಯಲ್ಲಿ ಪ್ರಸಾರ ಕಾಣುವ ಸಮಯ. ಫೆಬ್ರವರಿ 22 (ಭಾನುವಾರ )ಸಂಜೆ 4:30ಕ್ಕೆ ಈ ಧಾರಾವಾಹಿ ಪ್ರಸಾರ ಕಾಣಲಿದೆ. ಕಿರುತೆರೆ ಪ್ರೇಕ್ಷಕರು ಈ ಸಿನಿಮಾನ ವೀಕ್ಷಿಸಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.

Source link

ಸ್ಕೂಬಿ ಡೂ ಪಾತ್ರಧಾರಿಗಳ ವೇಷ ತೊಟ್ಟು ಕಳ್ಳತನ ಮಾಡುತ್ತಿದ್ದವರ ಸ್ಕ್ವಿಡ್ ಗೇಮ್ ಪಾತ್ರಧಾರಿಯಂತೆ ಬಂದು ಹಿಡಿದ ಪೊಲೀಸ್ – Kannada News | Undercover as Scooby Doo Gang, Brazilian Cops Nab Phone Snatchers at Carnival

ಬ್ರೆಜಿಲ್, ಫೆಬ್ರವರಿ 18: ಕಾರ್ಟೂನ್(Cartoon) ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರಿಗೂ ಅಚ್ಚುಮೆಚ್ಚು. ಹಾಗೆಯೇ ಸ್ಕೂಬಿ ಡೂ ಕಾರ್ಟೂನ್ ಕೂಡ ಬಹುತೇಕರಿಗೆ ಇಷ್ಟ ಅದರಲ್ಲಿ ಬರುವ ಸ್ಕೂಬಿ ಡೂ, ಶಾಗ್ಗಿ, ವೆಲ್ಮಾ, ಫ್ರೆಡ್ ಮತ್ತು ಡ್ಯಾಫ್ನೆ ಪಾತ್ರವಂತೂ ಇಷ್ಟಪಡದವರಿಲ್ಲ. ಆದರೆ ಈ ಪಾತ್ರವನ್ನು ಜನರು ಕಳ್ಳತನಕ್ಕೆ ಬಳಸಿಕೊಂಡಿರುವುದು ವಿಶಾದದ ಸಂಗತಿ.

ಈ ಪಾತ್ರಧಾರಿಗಳ ವೇಷತೊಟ್ಟು ಕಳ್ಳರು ಮೊಬೈಲ್ ಕಳ್ಳತನಕ್ಕಿಳಿದಿದ್ದರು. ಅಂಡರ್ ಕವರ್ ಪೊಲೀಸರು ಇವರ ಮೇಲೆ ನಿಗಾ ಇಟ್ಟಿದ್ದರು. ಅಂತೂ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪೊಲೀಸ್ ಅಧಿಕಾರಿ ಇವರನ್ನು ಹಿಡಿಯಲು ನೆಟ್​ಫ್ಲಿಕ್ಸ್​​ನಲ್ಲಿ ಬಂದಿದ್ದ ಫೇಮಸ್ ಸೀರೀಸ್ ಸ್ಕ್ವಿಡ್ ಗೇಮ್​​ನಲ್ಲಿ ಬರುವ ಪಾತ್ರಧಾರಿಯಂತೆ ವೇಷ ತೊಟ್ಟು ಹಿಡಿದಿರುವುದೇ ವಿಶೇಷ. ಈ ಘಟನೆ ಬ್ರೆಜಿಲ್​​ನಲ್ಲಿ ನಡೆದಿದೆ.

ನ್ಯೂಯಾರ್ಕ್ ಪೋಸ್ಟ್​ ವರದಿ ಪ್ರಕಾರ, ಪೊಲೀಸರು ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಬಂಧಿಸಿದ್ದಾರೆ. ಈ ಕಳ್ಳರಲ್ಲಿ ಒಬ್ಬೊಬ್ಬರ ಬಳಿ ಕನಿಷ್ಠವೆಂದರೂ ಎಂಟು ಫೋನ್​ಗಳು ಪತ್ತೆಯಾಗಿವೆ. ಹೆಚ್ಚಿನ ತನಿಖೆಗಾಗಿ ಸಾವೊ ಪಾಲೊ ಪೊಲೀಸ್ ಠಾಣೆಗೆ ಕಳ್ಳರನ್ನು ಕರೆದೊಯ್ಯುವ ಮೊದಲು ಪೊಲೀಸ್ ಅಧಿಕಾರಿಗಳು ಸಾಧನಗಳನ್ನು ಅವುಗಳ ನಿಜವಾದ ಮಾಲೀಕರಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಓದಿ: Nobuyo Oyama: ಡೋರೆಮಾನ್ ಕಾರ್ಟೂನ್ ಪಾತ್ರಕ್ಕೆ ಧ್ವನಿಯಾಗಿದ್ದ ಮಹಿಳೆ ನಿಧನ

ಪೊಲೀಸರ ಪ್ರಕಾರ, ಕಳ್ಳತನ ಮತ್ತು ದರೋಡೆಗಳಲ್ಲಿ ಪರಿಣತಿ ಹೊಂದಿರುವ ಗ್ಯಾಂಗ್‌ಗಳು ವಿಶೇಷ ಹಬ್ಬಗಳ ಸಮಯದಲ್ಲಿ ಹೆಚ್ಚಿನ ಜನಸಂದಣಿಯನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿದ್ದರು. ಕಳೆದ ವರ್ಷ ಮಾರ್ಚ್‌ನಲ್ಲಿ, ಪವರ್ ರೇಂಜರ್‌ಗಳಂತೆ ವೇಷ ಧರಿಸಿದ ಪೊಲೀಸರು ಸಾವೊ ಪಾಲೊದ ಇಬಿರಾಪುಯೆರಾ ಪಾರ್ಕ್ ಬಳಿ ಕಳ್ಳನನ್ನು ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದರು.

ಅದೇ ರೀತಿ, ಪ್ರೇಮಿಗಳ ದಿನದಂದು, ಪೆರುವಿನ ರಾಜಧಾನಿ ಲಿಮಾದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕ್ಯಾಪಿಬರಾ ವೇಷ ಧರಿಸಿ ಮಾದಕವಸ್ತು ದಾಳಿ ನಡೆಸಿ 1,700 ಪ್ಯಾಕೆಟ್ ಕೊಕೇನ್ ಮತ್ತು ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಹತ್ತಿಕ್ಕಲು ಹೊರಟ ಸರ್ಕಾರ – Kannada News | Karnataka govt restricts media access at Vidhana Soudha; opposition slams move as attack on press freedom

ಬೆಂಗಳೂರು, ಫೆಬ್ರವರಿ 18: ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಕಾರ್ಯವ್ಯಾಪ್ತಿಯನ್ನು ನಿರ್ಬಂಧಿಸುವ ಕುರಿತು ವಾರ್ತಾ ಇಲಾಖೆಗೆ ಪತ್ರ ಬರೆದಿದೆ. ಈ ಪತ್ರದ ಪ್ರಕಾರ, ಮಾಧ್ಯಮಗಳು ರಾಜಕೀಯ ನಾಯಕರ ಪ್ರತಿಕ್ರಿಯೆಗಳನ್ನು (ಬೈಟ್) ಪೋರ್ಟಿಕೋ ಅಥವಾ ಕೆಂಗಲ್ ಗೇಟ್ ಬಳಿಯ ನಿಗದಿತ ಸ್ಥಳದಲ್ಲಿ ಮಾತ್ರ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಅಥವಾ ಶಾಸಕರನ್ನು ವಿಧಾನಸೌಧದ ಇತರ ಯಾವುದೇ ಸ್ಥಳದಲ್ಲಿ ಹಿಂಬಾಲಿಸಿ ಪ್ರತಿಕ್ರಿಯೆ ಪಡೆಯುವುದನ್ನು ನಿಷೇಧಿಸಬೇಕು ಎಂದು ಹೇಳಲಾಗಿದೆ.

ಈ ನಡೆ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಖಂಡಿಸಿದ್ದಾರೆ. ಮಾಧ್ಯಮಗಳು ಜನರ ಮತ್ತು ಸರ್ಕಾರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಕಳೆದ ವಾರ ವಿಧಾನಸೌಧದಲ್ಲಿ ನಡೆದ ಭದ್ರತಾ ಲೋಪಗಳನ್ನು (ಚಿನ್ನ ಕಳ್ಳತನದಂತಹ ಘಟನೆಗಳು) ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ನೆಪವಾಗಿ ಬಳಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಸರ್ಕಾರವು ತನ್ನ ಲೋಪಗಳನ್ನು ಸರಿಪಡಿಸಿಕೊಳ್ಳುವ ಬದಲು ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುತ್ತಿರುವುದು ಸರಿಯಲ್ಲ ಎಂದು ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು. ಇದು ಕಾಂಗ್ರೆಸ್ ಪಕ್ಷವು ತುರ್ತು ಪರಿಸ್ಥಿತಿಯ ಸಮಯದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಿದ ಇತಿಹಾಸವನ್ನು ನೆನಪಿಸುತ್ತದೆ ಎಂದು ಅವರು ಉಲ್ಲೇಖಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದೇಶಕ್ಕೆ ಹೋಗುವುದನ್ನು ನಾವು ಸಿಎಂಗೇ ಹೇಳಿಲ್ಲ, ಇನ್ನು ಡಿಸಿಎಂಗೆ ಹೇಳ್ತೇವಾ: ಕಾಂಗ್ರೆಸ್​ ಶಾಸಕ ಪುಟ್ಟರಂಗಶೆಟ್ಟಿ – Kannada News | Congress MLAs Australia Trip: A Personal Visit for Agricultural Study or Group Tour?

ಬೆಂಗಳೂರು, ಫೆ.18: ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸ ಹೋಗಿದ್ದಾರೆ. ಈ ವೇಳೆ ಮಾಧ್ಯಮಗಳ ಜತೆಗೆ ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿದ್ದಾರೆ. “ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಿದ್ದೇನೆ, ನನ್ನ ಜತೆಗೆ ಯಾರು ಬರುತ್ತಿದ್ದಾರೆ ಎಂದು ಗೊತ್ತಿಲ್ಲ, ನಾನಂತೂ ಹೋಯ್ತೀನಿ” ಎಂದು ಹೇಳಿದ್ದಾರೆ.”ನಾನು ಮೋಜು ಮಾಡಲು ಹೋಗುತ್ತಿಲ್ಲ. ರೈತರು, ಹೈನುಗಾರಿಕೆ ಹಾಗೂ ಕೃಷಿ ಅಧ್ಯಯನ ಮಾಡಲು ಹೋಗುತ್ತಿದ್ದೇನೆ. ಕೆಲವರು ಅಧ್ಯಯನ ಮಾಡಲಿಕ್ಕೆ ಹೋಗುತ್ತಾರೆ, ಕೆಲವರು ಎಂಜಾಯ್ ಮಾಡಲಿಕ್ಕೆ ಹೋಗುತ್ತಾರೆ, ನಾವು ಎಂಜಾಯ್ ಮಾಡಲು ಹೋಗೋದಲ್ಲ. ಅಗ್ರಿಕಲ್ಚರ್ ಮತ್ತು ಅನಿಮಲ್ ಹಸ್ಬೆಂಡ್ರಿಗೆ ಸಂಬಂಧಿಸಿದ ವಿಷಯಗಳನ್ನು ನೋಡಲು ಹೋಗುತ್ತಿದ್ದೇನೆ” ಎಂದು ಹೇಳಿದ್ದಾರೆ. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಈ ಪ್ರವಾಸ ಅನಿವಾರ್ಯವೇ ಎಂಬ ಮಾಧ್ಯಮಗಳ ಪ್ರಶ್ನೆಗೆ, “ಬಜೆಟ್ ನಾನೇನು ಮಾಡುವುದಿಲ್ಲ, ಸಿದ್ದರಾಮಯ್ಯನವರು ಮಂಡಿಸುತ್ತಾರೆ. ಮಂಡಿಸಿದ ನಂತರ ಬಂದುಬಿಡುತ್ತೇನೆ” ಎಂದು ಹೇಳಿದ್ದಾರೆ. ಈ ಪ್ರವಾಸಕ್ಕೆ ಹೈಕಮಾಂಡ್ ಅನುಮತಿ ನೀಡಿದ್ದೀಯಾ ೆಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಅದೆಲ್ಲ ಯಾತಕ್ಕೆ ಬೇಕು ನಾವು ಹೋಗೋದಕ್ಕೆ?” ಎಂದು ಹೇಳಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಲಾಗುತ್ತಿದೆ ಎಂದು ಪ್ರಶ್ನಿಸಿದಾಗ, “ಅದು ನನಗೆ ಗೊತ್ತಿಲ್ಲ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೇ ಹೇಳಿಲ್ಲ, ಇನ್ನು ಡಿಕೆ ಶಿವಕುಮಾರ್‌ಗೆ ಎಲ್ಲಿ ಹೇಳುತ್ತೇವೆ?” ಎಂದು ಹೇಳಿದ್ದಾರೆ. ಇದು ನನ್ನ ವೈಯಕ್ತಿಕ ಪ್ರವಾಸ. ಖರ್ಚು ವೆಚ್ಚ ಎಲ್ಲ ನನ್ನದೇ” ಎಂದು ಶಾಸಕರು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Rajya Sabha Election: 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್​ 16ರಂದು ಚುನಾವಣೆ: ಚುನಾವಣಾ ಆಯೋಗ ಘೋಷಣೆ – Kannada News | Election Commission of India Announces March 16 Polls for 37 Rajya Sabha Seats

ನವದೆಹಲಿ, ಫೆಬ್ರವರಿ 18: ಹತ್ತು ರಾಜ್ಯಗಳ 37 ರಾಜ್ಯಸಭಾ(Rajya Sabha) ಸ್ಥಾನಗಳಿಗೆ ಮಾರ್ಚ್​ 16ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಇಂದು ಘೋಷಿಸಿದೆ. ಮಹಾರಾಷ್ಟ್ರ, ತಮಿಳುನಾಡು, ಬಿಹಾರ ಸೇರಿದಂತೆ 10 ರಾಜ್ಯಗಳ 37 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಫೆಬ್ರವರಿ 26ರಂದು ಚುನಾವಣಾ ಆಯೋಗದಿಂದ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಮಾರ್ಚ್​ 5ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರಲಿದೆ. ಮಾರ್ಚ್​ 6ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ.

ಮಾರ್ಚ್​ 16ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾರ್ಚ್​ 16ರಂದು ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. ಮಹಾರಾಷ್ಟ್ರದ 7, ತಮಿಳುನಾಡಿನ 6 ಹಾಗೂ ಬಿಹಾರದ 5 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಅಸ್ಸಾಂ, ಹರಿಯಾಣ, ಛತ್ತೀಸ್​ಗಢ ಮತ್ತು ತೆಲಂಗಾಣದಲ್ಲೂ ತೆರವಾಗಲಿರುವ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಮಾರ್ಚ್ 20ರ ಒಳಗೆ ಇಡೀ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗದ ಗಡುವು ನೀಡಿದೆ. ಮತಪತ್ರದಲ್ಲಿ ಆದ್ಯತೆ ಗುರುತಿಸಲು ಚುನಾವಣಾಧಿಕಾರಿ ನೀಡುವ ವಿಶೇಷ ವೈಲೆಟ್ ಪೆನ್ ಬಳಕೆ ಕಡ್ಡಾಯವಾಗಿರಲಿದೆ. 37 ರಾಜ್ಯಸಭಾ ಸದಸ್ಯರ ಅವಧಿ ಏಪ್ರಿಲ್ 2026 ರಲ್ಲಿ ಮುಕ್ತಾಯಗೊಳ್ಳಲಿದ್ದು, ಚುನಾವಣೆ ಅನಿವಾರ್ಯವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Budha Dosha: ಜಾತಕದಲ್ಲಿ ಬುಧ ದೋಷವಿದ್ದರೆ ಕಂಡುಬರುವ ಲಕ್ಷಣಗಳಿವು; ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Budha Dosha: Symptoms, Effects and Powerful Astrological Remedies for Mercury Weakness

ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿ ಗ್ರಹಗಳ ಸ್ಥಾನವು ಜೀವನದ ದಿಕ್ಕನ್ನು ನಿರ್ಧರಿಸುತ್ತದೆ. ಬುಧ ಈ ಗ್ರಹಗಳಲ್ಲಿ ಒಂದಾಗಿದೆ. ಬುಧವು ಬುದ್ಧಿವಂತಿಕೆ ಮತ್ತು ಸಂವಹನ ಕೌಶಲ್ಯಕ್ಕೆ ನೇರವಾಗಿ ಸಂಬಂಧಿಸಿದೆ. ಬುಧನು ಶುಭ ಸ್ಥಾನದಲ್ಲಿದ್ದರೆ, ಒಬ್ಬ ವ್ಯಕ್ತಿಯು ತನ್ನ ಮಾತುಗಳಿಂದ ಹೃದಯಗಳನ್ನು ಗೆಲ್ಲುತ್ತಾನೆ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಾನೆ. ಆದಾಗ್ಯೂ, ಬುಧ ಜಾತಕದಲ್ಲಿ ದುರ್ಬಲ ಸ್ಥಾನದಲ್ಲಿದ್ದರೆ, ಸುಸ್ಥಾಪಿತವಾದ ಕೆಲಸಗಳು ಸಹ ತಪ್ಪಾಗಲು ಪ್ರಾರಂಭಿಸುತ್ತವೆ. ಜಾತಕದಲ್ಲಿ ಬುಧ ದೋಷವು ಹೇಗೆ ರೂಪುಗೊಳ್ಳುತ್ತದೆ, ಅದರ ಲಕ್ಷಣಗಳು ಮತ್ತು ಅದನ್ನು ತೆಗೆದುಹಾಕಲು ಜ್ಯೋತಿಷ್ಯ ಪರಿಹಾರಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬುಧ ದೋಷ ಇರುವವರಲ್ಲಿ ಕೆಲವು ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಜ್ಯೋತಿಷ್ಯ ಹೇಳುತ್ತದೆ. ತಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ಹೇಳಲಾಗದಿರುವುದು, ಮಾತಿನಲ್ಲಿ ತೊದಲುವಿಕೆ ಅಥವಾ ಸಂವಹನದ ಸಮಸ್ಯೆಗಳು ಎದುರಾಗಬಹುದು. ಕೆಲವರು ಎಷ್ಟು ಶ್ರಮಿಸಿದರೂ ವ್ಯವಹಾರದಲ್ಲಿ ನಷ್ಟ ಅನುಭವಿಸುವುದು ಅಥವಾ ಸಾಲದ ಒತ್ತಡ ಹೆಚ್ಚಾಗುವುದು ಕಂಡುಬರುತ್ತದೆ. ಓದಿದ ವಿಷಯಗಳನ್ನು ಮರೆತುಬಿಡುವುದು, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಕಷ್ಟಪಡುವುದು ಮುಂತಾದವು ದುರ್ಬಲ ಬುಧನ ಸೂಚನೆಗಳಾಗಿವೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಕೆಲವು ಸಂದರ್ಭಗಳಲ್ಲಿ ಬುಧ ದೋಷದ ಪರಿಣಾಮವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಈ ರೀತಿಯ ಸಮಸ್ಯೆಗಳನ್ನು ನಿವಾರಿಸಲು ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಅನುಸರಿಸುವಂತೆ ಸೂಚಿಸಲಾಗುತ್ತದೆ. ಬುಧ ದೋಷ ನಿವಾರಣೆಗೆ ಗಣೇಶನ ಆರಾಧನೆ ಅತ್ಯಂತ ಶ್ರೇಷ್ಠ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಬುಧವಾರದಂದು ಗಣೇಶನಿಗೆ ದೂರ್ವಾ ಅರ್ಪಿಸಿ ಪ್ರಾರ್ಥನೆ ಸಲ್ಲಿಸುವುದು ಶುಭಕರ. ಬುಧನೊಂದಿಗೆ ಹಸಿರು ಬಣ್ಣ ಸಂಬಂಧಪಟ್ಟಿರುವುದರಿಂದ ಬುಧವಾರ ಹಸಿರು ವಸ್ತ್ರ ಧರಿಸುವುದು ಅಥವಾ ಹಸಿರು ವಸ್ತುವನ್ನು ತಮ್ಮ ಬಳಿಯಲ್ಲಿ ಇಡುವುದು ಒಳ್ಳೆಯದು ಎಂದು ನಂಬಲಾಗುತ್ತದೆ. ಅದೇ ದಿನ ಹಸಿರು ತರಕಾರಿಗಳು, ಬೇಳೆಕಾಳು ಅಥವಾ ಹಸಿರು ಬಟ್ಟೆಗಳನ್ನು ಅಗತ್ಯವಿರುವವರಿಗೆ ದಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ.

ಬುಧ ಗ್ರಹವನ್ನು ಬಲಪಡಿಸಲು “ಓಂ ಬಂ ಬುಧಾಯ ನಮಃ” ಮಂತ್ರವನ್ನು 108 ಬಾರಿ ಜಪಿಸುವುದು ಸಹ ಶ್ರೇಯಸ್ಕರ. ಜೊತೆಗೆ ತುಳಸಿ ಗಿಡವನ್ನು ನೆಟ್ಟು ಅದರ ಆರೈಕೆ ಮಾಡುವುದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಲ್ಲು ತಂದೆ ಆರೋಗ್ಯ ಸ್ಥಿತಿ ಗಂಭೀರ? ಮೆದುಳು ಭಾಗದಲ್ಲಿ ಸರ್ಜರಿ – Kannada News | Salim Khan Hospitalized: Salman Khan’s Father in ICU with Brain Hemorrhage

ನಟ ಸಲ್ಮಾನ್ ಖಾನ್ ಅವರ ತಂದೆ ಮತ್ತು ಹಿರಿಯ ಕಥೆ ಬರಹಗಾರ ಸಲೀಂ ಖಾನ್ (Salim Khan) ಅವರನ್ನು ಮಂಗಳವಾರ (ಫೆಬ್ರವರಿ 17)ಅನಾರೋಗ್ಯದ ಕಾರಣ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಬೆಳಿಗ್ಗೆ ಅವರ ಸ್ಥಿತಿ ಹದಗೆಟ್ಟ ನಂತರ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಅವರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಆರಂಭಿಸಲಾಯಿತು. 90 ವರ್ಷದ ಸಲೀಂ ಖಾನ್ ಅವರ ರಕ್ತದೊತ್ತಡ ಹಠಾತ್ತನೆ ಹೆಚ್ಚಾಯಿತು. ಇದರಿಂದಾಗಿ ಅವರ ಮೆದುಳಿನ ಬಲಭಾಗದಲ್ಲಿ ಆಂತರಿಕ ರಕ್ತಸ್ರಾವವಾಗಿದೆ. ಇದರಿಂದಾಗಿ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಇಂದು (ಫೆಬ್ರವರಿ 18) ಶಸ್ತ್ರಚಿಕಿತ್ಸೆ ನಡೆಯಲಿದೆ.

ಮಾಧ್ಯಮಗಳ ವರದಿಯ ಪ್ರಕಾರ, ಅಧಿಕ ರಕ್ತದೊತ್ತಡದಿಂದಾಗಿ ಅವರ ಮೆದುಳಿನ ಬಲಭಾಗದಲ್ಲಿರುವ ರಕ್ತನಾಳಗಳು ಛಿದ್ರಗೊಂಡು ಆಂತರಿಕ ರಕ್ತಸ್ರಾವಕ್ಕೆ ಕಾರಣವಾಯಿತು. ಶಸ್ತ್ರಚಿಕಿತ್ಸೆ ಮಾಡುವ ಮೂಲಕ ರಕ್ತಸ್ರಾವವನ್ನು ನಿಲ್ಲಿಸಲು ವೈದ್ಯರು ಪ್ರಯತ್ನಿಸಲಿದ್ದಾರೆ. ಮಂಗಳವಾರ ಸಂಜೆ ವೈದ್ಯಕೀಯ ಬುಲೆಟಿನ್ ಬಿಡುಗಡೆ ಮಾಡಲಾಗಿದ್ದು, ಸಲೀಂ ಖಾನ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಸಲ್ಮಾನ್ ಖಾನ್ ಮಂಗಳವಾರ ಆಸ್ಪತ್ರೆಗೆ ಧಾವಿಸಿದರು. ಅದಾದ ನಂತರ, ಸಲೀಂ ಖಾನ್ ಅವರ ಮೊದಲ ಪತ್ನಿ ಸಲ್ಮಾ ಮತ್ತು ಎರಡನೇ ಪತ್ನಿ ಹೆಲೆನ್ ಕೂಡ ಆಸ್ಪತ್ರೆಗೆ ಬಂದರು. ಅರ್ಬಾಜ್ ಖಾನ್, ಅಲ್ವಿರಾ ಮತ್ತು ಅರ್ಪಿತಾ ಖಾನ್, ಅಳಿಯ ಆಯುಷ್ ಶರ್ಮಾ, ಮೊಮ್ಮಕ್ಕಳಾದ ನಿರ್ವಾಣ ಮತ್ತು ಅರ್ಹಾನ್ ಎಲ್ಲರೂ ಆಸ್ಪತ್ರೆಯಲ್ಲಿದ್ದರು. ಸಂಜಯ್ ದತ್ ಕೂಡ ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ: ಹೇಗಿದೆ ಸಲೀಂ ಖಾನ್ ಆರೋಗ್ಯ ಸ್ಥಿತಿ? ಸಲ್ಮಾನ್ ಖಾನ್ ತಂದೆಗೆ ಐಸಿಯುನಲ್ಲಿ ಚಿಕಿತ್ಸೆ

ಸಲೀಂ ಖಾನ್ ಬಾಲಿವುಡ್ ಉದ್ಯಮದಲ್ಲಿ ಪ್ರಸಿದ್ಧ ಚಿತ್ರಕಥೆಗಾರ. ಜಾವೇದ್ ಅಖ್ತರ್ ಅವರ ಜೋಡಿ ಬಹಳ ಪ್ರಸಿದ್ಧವಾಗಿತ್ತು. ಅವರನ್ನು ಸಲೀಂ-ಜಾವೇದ್ ಎಂದು ಕರೆಯಲಾಗುತ್ತಿತ್ತು. ಅವರು ಇತ್ತೀಚೆಗೆ ತಮ್ಮ 61 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಸಲೀಂ ಖಾನ್ 1964 ರಲ್ಲಿ ಸಲ್ಮಾ ಅವರನ್ನು ವಿವಾಹವಾದರು. ಇಬ್ಬರಿಗೆ ಸಲ್ಮಾನ್, ಅರ್ಬಾಜ್, ಸೊಹೈಲ್ ಮತ್ತು ಅಲ್ವಿರಾ ಎಂಬ ನಾಲ್ಕು ಮಕ್ಕಳಿದ್ದಾರೆ. ನಂತರ 1981 ರಲ್ಲಿ ಅವರು ನಟಿ ಹೆಲೆನ್ ಅವರನ್ನು ವಿವಾಹವಾದರು. ಸಲೀಂ ಅವರು ಅರ್ಪಿತಾ ಅವರನ್ನು ದತ್ತು ಪಡೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೈಲೆನ್ಸರ್​ಗಳ ಮೇಲೆ ರೋಡ್ ರೋಲರ್ ಹತ್ತಿಸಿದ್ರು ಪೊಲೀಸರು!

ಮೈಸೂರು, ಫೆಬ್ರವರಿ 18: ನಗರ ಸಂಚಾರಿ ಪೊಲೀಸರು ದೋಷಪೂರಿತ ಬೈಕ್ ಸೈಲೆನ್ಸರ್‌ಗಳ ವಿರುದ್ಧ ವಿನೂತನ ರೀತಿಯಲ್ಲಿ ಸಮರ ಸಾರಿದ್ದಾರೆ. ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಮತ್ತು ಅತಿಯಾದ ಶಬ್ದ ಮಾಲಿನ್ಯಕ್ಕೆ ಕಾರಣವಾಗಿದ್ದ ಇಂತಹ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ನಾಶಪಡಿಸಿದ್ದಾರೆ. ನಗರದ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ, ಕರ್ಕಶವಾಗಿ ಸದ್ದು ಮಾಡುತ್ತಾ ಜನರಿಗೆ ತೊಂದರೆ ನೀಡುತ್ತಿದ್ದ ಒಟ್ಟು 378 ದ್ವಿಚಕ್ರ ವಾಹನಗಳನ್ನು ಮೈಸೂರು ಪೊಲೀಸರು ವಶಕ್ಕೆ ಪಡೆದಿದ್ದವು. ಈ ಬೈಕ್‌ಗಳಲ್ಲಿ ಅಳವಡಿಸಲಾಗಿದ್ದ ದೋಷಪೂರಿತ ಸೈಲೆನ್ಸರ್‌ಗಳು, ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದವು. ಈ ಎಲ್ಲಾ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ರೋಡ್ ರೋಲರ್ ಹತ್ತಿಸುವ ಮೂಲಕ ಸಂಪೂರ್ಣವಾಗಿ ನಾಶಪಡಿಸಲಾಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಬರೋಬ್ಬರಿ 4,352 ದಿನಗಳ ಬಳಿಕ ಇತಿಹಾಸ ನಿರ್ಮಿಸಿದ ನೇಪಾಳ – Kannada News | Nepal end 12 year wait in T20 World Cup 2026

ಬರೋಬ್ಬರಿ 4,352 ದಿನಗಳ ಬಳಿಕ ನೇಪಾಳ ತಂಡವು ಟಿ20 ವಿಶ್ವಕಪ್​ನಲ್ಲಿ ಪಂದ್ಯ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ವಿಶ್ವಕಪ್ ಇತಿಹಾಸದಲ್ಲೇ ದೀರ್ಘಾವಧಿಯ ಬಳಿಕ ಮ್ಯಾಚ್ ಗೆದ್ದ ತಂಡವೆಂಬ ದಾಖಲೆಯೊಂದನ್ನು ನೇಪಾಳ ತನ್ನದಾಗಿಸಿಕೊಂಢಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ 33ನೇ ಪಂದ್ಯದಲ್ಲಿ ನೇಪಾಳ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 170 ರನ್​ ಕಲೆಹಾಕಿತು.

ಈ ಗುರಿಯನ್ನು ನೇಪಾಳ ತಂಡ 19.3 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ವಿಶೇಷ ಎಂದರೆ ಇದು ನೇಪಾಳ ತಂಡದ ಮೂರನೇ ವಿಶ್ವಕಪ್ ಗೆಲುವು.

ಇದಕ್ಕೂ ಮುನ್ನ 2014 ರಲ್ಲಿ ನಡೆದ ಟಿ20 ವಿಶ್ವಕಪ್​ನ ಮೊದಲ ಸುತ್ತಿನಲ್ಲಿ ನೇಪಾಳ ತಂಡವು 2 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ಮತ್ತೊಮ್ಮೆ ಜಯ ಸಾಧಿಸಲು ಬರೋಬ್ಬರಿ 4352 ದಿನಗಳನ್ನು ತೆಗೆದುಕೊಂಡಿದೆ.

ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ದೀರ್ಘಾವಧಿಯ ಬಳಿಕ ಪಂದ್ಯ ಗೆದ್ದ ಹಿರಿಮೆಯನ್ನು ನೇಪಾಳ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಈ ದಾಖಲೆ ಐರ್ಲೆಂಡ್ ತಂಡದ ಹೆಸರಿನಲ್ಲಿತ್ತು.

2014 ರಲ್ಲಿ ಪಂದ್ಯ ಗೆದ್ದಿದ್ದ ಐರ್ಲೆಂಡ್ ತಂಡವು ಮತ್ತೊಂದು ವಿಶ್ವಕಪ್ ಗೆಲುವು ದಾಖಲಿಸಲು 2021 ರವರೆಗೆ ಕಾದಿದ್ದರು. ಅಂದರೆ ಬರೋಬ್ಬರಿ 2770 ದಿನಗಳ ಬಳಿಕ ಟಿ20 ವಿಶ್ವಕಪ್​ನಲ್ಲಿ ಗೆಲುವಿನ ನಗೆ ಬೀರಿದ್ದರು.

ಇದೀಗ 2014 ರಲ್ಲಿ ಗೆದ್ದು ಬರೋಬ್ಬರಿ 12 ವರ್ಷಗಳ ಬಳಿಕ, ಅಂದರೆ 4,352 ದಿನಗಳ ನಂತರ ನೇಪಾಳ ತಂಡವು ಗೆಲುವು ದಾಖಲಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ದೀರ್ಘಾವಧಿಯ ಕಾಯುವಿಕೆಯ ಬಳಿಕ ಗೆಲುವು ದಾಖಲಿಸಿದ ತಂಡವೆಂಬ ದಾಖಲೆಯನ್ನು ನೇಪಾಳ ತನ್ನದಾಗಿಸಿಕೊಂಡಿದೆ.

 

Source link