MI vs LSG: 6,6,6,6,6,6,6.. 2ನೇ ವೇಗದ ಅರ್ಧಶತಕ ಬಾರಿಸಿದ ಪೂರನ್ – Kannada News | IPL 2026: Nicholas Pooran’s Explosive Fifty Smashes MI at Wankhede

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 47 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಪರ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ಸಿಡಿಲಬ್ಬರದ ಅರ್ಧಶತಕ ಬಾರಿಸಿದರು. ಇಡೀ ಆವೃತ್ತಿಯಲ್ಲಿ ರನ್ ಬರ ಎದುರಿಸುತ್ತಿದ್ದ ಪೂರನ್, ಮುಂಬೈ ವಿರುದ್ಧ ಅಬ್ಬರಿಸುವ ಮೂಲಕ ಈ ಆವೃತ್ತಿಯ ಮೊದಲ ಹಾಗೂ ಲಕ್ನೋ ಪರ ಎರಡನೇ ವೇಗದ ಅರ್ಧಶತಕ ಸಿಡಿಸಿದರು.

ಈ ಪಂದ್ಯದಲ್ಲಿ ಲಕ್ನೋಗೆ ಉತ್ತಮ ಆರಂಭ ಸಿಗಲಿಲ್ಲ. ಜೋಸ್ ಇಂಗ್ಲಿಸ್ ಬೇಗನೇ ಔಟಾದರು. ಆ ಬಳಿಕ ಜೊತೆಯಾದ ಪೂರನ್ ಹಾಗೂ ಮಾರ್ಷ್​ ಮುಂಬೈ ಬೌಲರ್​ಗಳ ಬೆವರಿಳಿಸಿದರು. ಅದರಲ್ಲೂ ಮೊದಲ ಎಸೆತದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದ ಪೂರನ್ ಬರೋಬ್ಬರಿ 7 ಸಿಕ್ಸರ್ ಸಹಿತ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಗೆಯೇ ಮಾರ್ಷ್​ ಅವರೊಂದಿಗೆ ಶತಕದ ಜೊತೆಯಾಟವನ್ನು ಕಟ್ಟಿದರು. ಪೂರನ್ ಅಬ್ಬರದಿಂದಾಗಿ ಲಕ್ನೋ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಪವರ್​ಪ್ಲೇನಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ದಾಖಲೆಯನ್ನು ಮಾಡಿತು. ಅಂತಿಮವಾಗಿ ಪೂರನ್ 21 ಎಸೆತಗಳಲ್ಲಿ 1 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 63 ರನ್ ಬಾರಿಸಿ ಔಟಾದರು.

Source link

Leave a Reply

Your email address will not be published. Required fields are marked *