ಪ್ರಧಾನಿ ಮೋದಿ ಹಾಗೂ ವಿಜಯ್Image Credit source: PTI
ನವದೆಹಲಿ, ಮೇ 5: ದೇಶವೇ ಕುತೂಹಲದಿಂದ ಕಾಯುತ್ತಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ (Assembly Election Results 2026) ಪ್ರಕಟವಾಗಿದ್ದು, ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಸುದೀರ್ಘ ಆಡಳಿತಕ್ಕೆ ಅಂತ್ಯ ಹಾಡಿರುವ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಇತ್ತ ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಡಿಎಂಕೆ ಮತ್ತು ಎಐಎಡಿಎಂಕೆ ಭದ್ರಕೋಟೆಯನ್ನು ಪುಡಿಗಟ್ಟುವ ಮೂಲಕ ಇತಿಹಾಸ ನಿರ್ಮಿಸಿದೆ.
ಪಶ್ಚಿಮ ಬಂಗಾಳ: ದೀದಿ ಕೋಟೆ ಧೂಳೀಪಟ
ಬಂಗಾಳದ ರಣಕಣದಲ್ಲಿ ಮೋದಿ-ಶಾ ಜೋಡಿಯ ತಂತ್ರಗಾರಿಕೆಗೆ ಮಮತಾ ಬ್ಯಾನರ್ಜಿ ಸೋತು ಸುಣ್ಣವಾಗಿದ್ದಾರೆ. ಒಟ್ಟು 293 ಸ್ಥಾನಗಳಲ್ಲಿ ಬಿಜೆಪಿ 206 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದ್ವಿಶತಕ ಬಾರಿಸಿದೆ. ಆಡಳಿತಾರೂಢ ಟಿಎಂಸಿ ಕೇವಲ 81 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವ ಮೂಲಕ ಅಧಿಕಾರ ಕಳೆದುಕೊಂಡಿದೆ.
- ಒಟ್ಟು ಸ್ಥಾನಗಳು: 293
- ಬಿಜೆಪಿ: 206 ಸ್ಥಾನಗಳು (ಸ್ಪಷ್ಟ ಬಹುಮತ)
- ಟಿಎಂಸಿ: 81 ಸ್ಥಾನಗಳು
- ಕಾಂಗ್ರೆಸ್: 02 ಸ್ಥಾನಗಳು
- ಇತರೆ: 03 ಸ್ಥಾನಗಳು
- ವಿಶೇಷ: ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಅವರಿಗೆ ಸೋಲು ಎದುರಾಗಿದೆ.
ತಮಿಳುನಾಡು: ದಳಪತಿ ವಿಜಯ್ ಆರ್ಭಟ
ದ್ರಾವಿಡ ನಾಡಿನಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಸುಂಟರಗಾಳಿ ಎಬ್ಬಿಸಿದೆ. 234 ಕ್ಷೇತ್ರಗಳ ಪೈಕಿ ಟಿವಿಕೆ 107 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಬಾಬು ವಿರುದ್ಧ ಸೋಲೊಪ್ಪಿಕೊಂಡಿರುವುದು ಡಿಎಂಕೆ ಪಾಲಿಗೆ ಭಾರಿ ಹಿನ್ನಡೆಯಾಗಿದೆ.
- ಒಟ್ಟು ಸ್ಥಾನಗಳು: 234
- ಟಿವಿಕೆ (ವಿಜಯ್): 107 ಸ್ಥಾನಗಳು
- ಡಿಎಂಕೆ: 60 ಸ್ಥಾನಗಳು
- AIADMK: 47 ಸ್ಥಾನಗಳು
- ಕಾಂಗ್ರೆಸ್: 05 ಸ್ಥಾನಗಳು
- ಇತರೆ: 04 ಸ್ಥಾನಗಳು
- ವಿಶೇಷ: ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ಕೊಳತ್ತೂರು ಕ್ಷೇತ್ರದಲ್ಲಿ ಸೋಲಿನ ಆಘಾತವಾಗಿದೆ.
ಕೇರಳದಲ್ಲಿ ಕಾಂಗ್ರೆಸ್ ಜಯಭೇರಿ: ಎಲ್ಡಿಎಫ್ನ 21 ಸಚಿವರಿಗೇ ಸೋಲು!
ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಆಡಳಿತಕ್ಕೆ ಮತದಾರರು ಬ್ರೇಕ್ ಹಾಕಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದೆ.
- ಒಟ್ಟು ಸ್ಥಾನಗಳು: 140
- ಯುಡಿಎಫ್ (ಕಾಂಗ್ರೆಸ್ ಮೈತ್ರಿ): 102 ಸ್ಥಾನಗಳು
- ಎಲ್ಡಿಎಫ್ (ಎಡಪಕ್ಷಗಳು): 35 ಸ್ಥಾನಗಳು
- ಎನ್ಡಿಎ (ಬಿಜೆಪಿ ಮೈತ್ರಿ): 03 ಸ್ಥಾನಗಳು
- ವಿಶೇಷ: ಕೇರಳ ಸಂಪುಟದ 21 ಸಚಿವರಿಗೆ ಈ ಚುನಾವಣೆಯಲ್ಲಿ ಸೋಲಾಗಿದೆ.
ಅಸ್ಸಾಂನಲ್ಲಿ ಬಿಜೆಪಿಗೆ ಹ್ಯಾಟ್ರಿಕ್
ಅಸ್ಸಾಂನಲ್ಲಿ ಸಿಎಂ ಹಿಮಂತ್ ಬಿಸ್ವಾ ಶರ್ಮಾ ನೇತೃತ್ವದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. 126 ಕ್ಷೇತ್ರಗಳ ಪೈಕಿ ಬಿಜೆಪಿ 82 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.
- ಒಟ್ಟು ಸ್ಥಾನಗಳು: 126
- ಬಿಜೆಪಿ: 82 ಸ್ಥಾನಗಳು
- ಕಾಂಗ್ರೆಸ್: 19 ಸ್ಥಾನಗಳು
- ಇತರೆ: 22 ಸ್ಥಾನಗಳು
ಪುದುಚೇರಿಯಲ್ಲಿ ಎನ್ಡಿಎಗೆ ಮತ್ತೆ ಅಧಿಕಾರ
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಎನ್ಡಿಎ ಮಿತ್ರಕೂಟ 16 ಸ್ಥಾನಗಳೊಂದಿಗೆ ಮತ್ತೆ ಅಧಿಕಾರ ಹಿಡಿದಿದೆ.
- ಒಟ್ಟು ಸ್ಥಾನಗಳು: 30
- ಬಿಜೆಪಿ+ (ಎನ್ಡಿಎ): 16 ಸ್ಥಾನಗಳು
- ಡಿಎಂಕೆ: 05 ಸ್ಥಾನಗಳು
- ಕಾಂಗ್ರೆಸ್: 03 ಸ್ಥಾನಗಳು
- ಟಿವಿಕೆ: 02 ಸ್ಥಾನಗಳು
ಚುನಾವಣಾ ಫಲಿತಾಂಶದ ಹೈಲೈಟ್ಸ್ಗಾಗಿ ಇಲ್ಲಿ ಕ್ಲಿಕ್ ಮಾಡಿ
