ದೇವರ ಮನೆಯಲ್ಲಿ ಯಾವಾಗಲೂ ದೀಪ ಉರಿಯುತ್ತಿರಬೇಕು ಯಾಕೆ? ಎಂದು ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿಯೂ ದೇವರ ಕೋಣೆ ಅಥವಾ ಪೂಜಾ ಸ್ಥಳವು ಸಕಾರಾತ್ಮಕ ಶಕ್ತಿಗಳ ಆಗರವಾಗಬೇಕೆಂಬ ಆಶಯವಿರುತ್ತದೆ. ಈ ನಿಟ್ಟಿನಲ್ಲಿ ಅಖಂಡ ಜ್ಯೋತಿ ಅಥವಾ ನಿರಂತರ ದೀಪಕ್ಕೆ ನಮ್ಮ ಸಂಪ್ರದಾಯದಲ್ಲಿ ಮಹತ್ವದ ಸ್ಥಾನವಿದೆ. 24 ಗಂಟೆಯೂ ದೀಪ ಉರಿಯುವುದರಿಂದ ಮನೆಯಲ್ಲಿ ಧನಾತ್ಮಕ ಭಾವನೆಗಳು ಹೆಚ್ಚಿ, ಯಾವುದೇ ಕಷ್ಟಗಳಿದ್ದರೂ ಅವುಗಳ ತೀವ್ರತೆ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.
ಆದರೆ, ಎಣ್ಣೆ ದೀಪ ಅಥವಾ ತುಪ್ಪದ ದೀಪಗಳನ್ನು ನಿರಂತರವಾಗಿ ಉರಿಸುವುದು ಅಷ್ಟು ಸುಲಭವಲ್ಲ. ಅವು ಕೆಲವು ಗಂಟೆಗಳ ನಂತರ ಆರಿಹೋಗಬಹುದು. ಹೀಗಾಗಿ, ದೀಪಾರತಿ ಮಾಡುವಾಗ ಎಣ್ಣೆ ದೀಪದ ಜೊತೆಗೆ ದೇವರ ಮನೆಯಲ್ಲಿ ಮಂದವಾದ ಜೀರೋ ಕ್ಯಾಂಡಲ್ ಬಲ್ಬ್ ಅನ್ನು ನಿರಂತರವಾಗಿ ಉರಿಸುವುದು ಉತ್ತಮ ಪರಿಹಾರವಾಗಿದೆ ಎಂದು ಗುರೂಜಿ ವಿವರಿಸಿದ್ದಾರೆ.
