‘ಈ ಸಿನಿಮಾ ನಿಜಕ್ಕೂ ಗೆಲ್ಲುತ್ತಾ’ ಎಂದು ಪ್ರಶ್ನೆ ಮಾಡಿದವರಿಗೆಲ್ಲ ‘ಕೆಡಿ’ ಚಿತ್ರ ಸರಿಯಾದ ಉತ್ತರವನ್ನೇ ನೀಡಿದೆ. ಧ್ರುವ ಸರ್ಜಾ ವೃತ್ತಿ ಜೀವನಕ್ಕೆ ಮತ್ತೊಂದು ಗೆಲುವು ಸಿಕ್ಕಿದೆ. ಪ್ರೇಮ್ ಅವರು ನಿರ್ದೇಶನದಲ್ಲಿ ತಾವು ಗ್ರಿಪ್ ಕಳೆದುಕೊಂಡಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ‘ಕೆಡಿ’ ಸಿನಿಮಾ (KD Movie) ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಗುರುವಾರದಿಂದ ಭಾನುವಾರದವರೆಗೆ ಸಿನಿಮಾ ಗೆದ್ದು ಬೀಗಿದೆ. ಸೋಮವಾರದ ಪರೀಕ್ಷೆಯಲ್ಲೂ ಸಿನಿಮಾ ಮೆಚ್ಚುಗೆ ಪಡೆದಿದೆ. ಈ ಮೂಲಕ ಸಿನಿಮಾ ಗೆದ್ದಿದೆ ಎಂಬ ಅಭಿಪ್ರಾಯವನ್ನು ಬಾಕ್ಸ್ ಆಫೀಸ್ ಪಂಡಿತರು ಹೊರಹಾಕುತ್ತಿದ್ದಾರೆ.
ಬಾಕ್ಸ್ ಆಫೀಸ್ ಲೆಕ್ಕ ನೀಡುವ ‘ಸ್ಯಾಕ್ನಿಲ್ಕ್’ ವರದಿ ಪ್ರಕಾರ ‘ಕೆಡಿ’ ಸಿನಿಮಾ ಸೋಮವಾರದ ಪರೀಕ್ಷೆಯಲ್ಲಿ ಪಾಸ್ ಆಗಿದೆ. ಸಾಮಾನ್ಯವಾಗಿ ಕಲೆಕ್ಷನ್ ವಿಷಯದಲ್ಲಿ ವೀಕೆಂಡ್ನಲ್ಲಿ ಉತ್ತಮ ಗಳಿಕೆ ಆದರೂ ವಾರದ ದಿನಗಳಲ್ಲಿ ಸಿನಿಮಾ ಮಂಕಾಗುತ್ತದೆ. ಆದರೆ, ‘ಕೆಡಿ’ ಚಿತ್ರದ ವಿಷಯದಲ್ಲಿ ಹಾಗಾಗಿಲ್ಲ. ವಾರದ ದಿನವೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ.
ಏಪ್ರಿಲ್ 30ರಂದು ಸಿನಿಮಾ 4.10 ಕೋಟಿ ರೂಪಾಯಿ ಗ್ರಾಸ್ ಹಾಗೂ 3.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಓಪನಿಂಗ್ ದಿನ ಆಗಿದ್ದರಿಂದ ಸಿನಿಮಾ ಉತ್ತಮ ಗಳಿಕೆ ಮಾಡಿದೆ. ಅಂದು ಈ ಚಿತ್ರಕ್ಕೆ ಸಿಕ್ಕಿದ್ದು 845 ಶೋಗಳು. ಎರಡನೇ ದಿನವೂ ಮೊದಲ ದಿನದಷ್ಟೇ ಕಲೆಕ್ಷನ್ ಆಗಿದೆ. ಶನಿವಾರ ಹಾಗೂ ಭಾನುವಾರ ಅನುಕ್ರಮವಾಗಿ 2.40 ಕೋಟಿ ರೂಪಾಯಿ ಹಾಗೂ 2.75 ಕೋಟಿ ರೂಪಾಯಿ ಗಳಿಕೆ ಆಗಿದೆ. ಸೋಮವಾರ ಸಿನಿಮಾ 2.93 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿ ಆಗಿದೆ. ಈ ಮೂಲಕ ಚಿತ್ರದ ಗಳಿಕೆ 16.27 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. 13.95 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ.
ಇದನ್ನೂ ಓದಿ: ದಯವಿಟ್ಟು ಆ ವಿಡಿಯೋ ಹಾಕಬೇಡಿ: ಜನರಿಗೆ ‘ಕೆಡಿ’ ನಿರ್ದೇಶಕ ಪ್ರೇಮ್ ಮನವಿ
‘ಕೆಡಿ’ ಸಿನಿಮಾದ ಗೆದ್ದಿದ್ದು ಒಂದು ಕಡೆಯಾದರೆ, ವಿಜಯ್ ಅವರು ಸಿಎಂ ಆಗುತ್ತಿದ್ದಾರೆ ಎಂಬುದು ಮತ್ತೊಂದು ಕಡೆ. ಈ ವಿಷಯ ಕೆವಿಎನ್ ಸಂಸ್ಥೆಯ ಖುಷಿ ಹೆಚ್ಚಿಸಿದೆ. ಒಂದೇ ದಿನ ಎರಡೆರಡು ಖುಷಿ ಸುದ್ದಿಗಳು ಸಿನಿಮಾಗೆ ಸಿಕ್ಕಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 7:10 am, Tue, 5 May 26
