All posts by nagaraj11081993

ನೀವು ಇತಿಹಾಸ ಸೃಷ್ಟಿ ಮಾಡಿದ್ರಿ: ಟಿವಿಕೆ ಗೆಲುವಿನ ಬಳಿಕ ವಿಜಯ್​ಗೆ ಸೆಲೆಬ್ರಿಟಿಗಳ ಅಭಿನಂದನೆ – Kannada News | Celebrities congratulate Thalapathy Vijay after TVK win in Tamil Nadu Assembly Election 2026

ನಟ ದಳಪತಿ ವಿಜಯ್ (Thalapathy Vijay) ಅವರು ರಾಜಕೀಯದ ಅಖಾಡಕ್ಕೆ ಇಳಿದು ಮೊದಲ ಪ್ರಯತ್ನದಲ್ಲೇ ಜಯಭೇರಿ ಬಾರಿಸಿದ್ದಾರೆ. ಅವರ ಟಿವಿಕೆ (TVK) ಪಕ್ಷವು ತಮಿಳುನಾಡಿನಲ್ಲಿ ಭಾರಿ ಮುನ್ನಡೆ ಸಾಧಿಸಿದೆ. ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲೂ ವಿಜಯ್ ಅವರು ಜಯ ಸಾಧಿಸಿದ್ದಾರೆ. ವಿಜಯ್ ಅವರ ಈ ಗೆಲುವಿಗಾಗಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ದಳಪತಿ ವಿಜಯ್ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಚಿಯಾನ್ ವಿಕ್ರಮ್ (Chiyaan Vikram), ನಾನಿ, ವಿಜಯ್ ದೇವರಕೊಂಡ, ಕಾಜಲ್ ಅಗರ್​ವಾಲ್ ಸೇರಿದಂತೆ ಹಲವರು ಶುಭಾಶಯ ತಿಳಿಸಿದ್ದಾರೆ.

ಚುನಾವಣೆ ವೇಳೆ ಚಿಯಾನ್ ವಿಕ್ರಮ್ ಅವರು ಟಿವಿಕೆ ಡ್ರೆಸ್ ಕೋಡ್ ಧರಿಸಿ ಬಂದು ಮತದಾನ ಮಾಡಿದ್ದರು. ಈಗ ದಳಪತಿ ವಿಜಯ್ ವಿನ್ ಆಗಿದ್ದು, ಅವರ ಜೊತೆಗಿರುವ ಫೋಟೋವನ್ನು ವಿಕ್ರಮ್ ಹಂಚಿಕೊಂಡಿದ್ದಾರೆ. ‘ಅಭಿನಂದನೆಗಳು ಗೆಳಯ ವಿಜಯ್. ನೀನು ಇಂದು ಇತಿಹಾಸ ಸೃಷ್ಟಿಸಿದೆ’ ಎಂದು ಚಿಯಾನ್ ವಿಕ್ರಮ್ ಅವರು ಪೋಸ್ಟ್ ಮಾಡಿದ್ದಾರೆ.

ತೆಲುಗು ನಟ ನಾನಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ‘ವಿಜಯ್ ಸರ್ ನಿಮಗೆ ಅಭಿನಂದನೆಗಳು. ತಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿದ ತಮಿಳುನಾಡು ಜನರಿಗೆ ಒಳ್ಳೆಯದೇ ಆಗುತ್ತದೆ ಎಂಬ ಭರವಸೆ ಇದೆ’ ಎಂದು ನಾನು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ವಿಜಯ್ ಅವರಿಗೆ ಅಭಿನಂದನೆ. ಈ ಗೆಲುವು ಭಾರಿ ದೊಡ್ಡದು. ಇದು ಐತಿಹಾಸಿಕ ವಿಜಯ’ ಎಂದು ಜಿವಿ ಪ್ರಕಾಶ್ ಕಮಾರ್ ಅವರು ಟ್ವೀಟ್ ಮಾಡಿದ್ದಾರೆ. ‘ಈ ರೀತಿ ಆಗುತ್ತದೆ ಎಂದು ನಾನು ನಿಜವಾಗಿಯೂ ನಂಬಿದ್ದೆ. ಈ ದೊಡ್ಡ ಗೆಲುವಿಗಾಗಿ ವಿಜಯ್ ಅವರಿಗೆ ಅಭಿನಂದನೆಗಳು. ನಿಮ್ಮ ಈ ಹೊಸ ಅಧ್ಯಾಯಕ್ಕೆ ಒಳ್ಳೆಯದಾಗಲಿ. ಯಾವಾಗಲೂ ಮುಂದಾಳು ಆಗಿರಿ’ ಎಂದು ನಟ ರವಿ ತೇಜ ಅವರು ಪೋಸ್ಟ್ ಮಾಡಿದ್ದಾರೆ.

‘ತಮಿಳುನಾಡು ರಾಜಕೀಯದಲ್ಲಿ ಈ ಹೊಸ ಮುಖ ಮತ್ತು ಹೊಸ ಅಧ್ಯಾಯ ನೋಡಲು ಉತ್ಸುಕನಾಗಿದ್ದೇನೆ. ಜನರಿಗೆ ಮತ್ತು ಹೊಸ ಮುಖ್ಯಮಂತ್ರಿಗೆ ಒಳ್ಳೆಯದಾಗಲಿ’ ಎಂದು ವಿಜಯ್ ದೇವರಕೊಂಡ ಅವರು ಶುಭ ಹಾರೈಸಿದ್ದಾರೆ. ಅಭಿಮಾನಿಗಳಿಂದ ಸಾವಿರಾರು ಸಂದೇಶಗಳು ಬರುತ್ತಿವೆ.

‘ತಮಿಳುನಾಡಿನ ಜನರು ಅತ್ಯಂತ ಹೆಮ್ಮೆಯಿಂದ, ಸ್ಪಷ್ಟವಾಗಿ ಮತ್ತು ಗಟ್ಟಿಯಾಗಿ ತಮ್ಮ ತೀರ್ಪನ್ನು ನೀಡಿದ್ದಾರೆ. ಇದು ಕೇವಲ ಗೆಲುವಲ್ಲ, ಇದು ಲಕ್ಷಾಂತರ ಜನರೊಂದಿಗಿನ ಆಳವಾದ ಮತ್ತು ಶಕ್ತಿಯುತವಾದ ಒಡನಾಟದ ಸಂಭ್ರಮವಾಗಿದೆ. ನೀವು ಈ ಪ್ರೇರಣಾದಾಯಕ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ನಿಮಗೆ ಅಪಾರ ಶಕ್ತಿ ಮತ್ತು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಅನೇಕ ಜನರು ನಿರೀಕ್ಷಿಸುತ್ತಿರುವ ಬದಲಾವಣೆಯನ್ನು ನೀವು ತರುವಂತಾಗಲಿ’ ಎಂದು ನಟಿ ಕಾಜಲ್ ಅಗರ್​ವಾಲ್ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಜಯಭೇರಿ ಬಾರಿಸಿದ ಟಿವಿಕೆ: ದಳಪತಿ ವಿಜಯ್ ಮನೆ ಎದುರು ಪೊಲೀಸ್ ಬಿಗಿ ಭದ್ರತೆ

‘ಮೊದಲ ಚುನಾವಣೆಯಲ್ಲಿ ಜನರ ಮೇಲೆ ಇಂಥ ದೊಡ್ಡ ಪರಿಣಾಮ ಬೀರಿದ್ದಕ್ಕಾಗಿ ಮತ್ತು ಈ ಬಹುದೊಡ್ಡ ಗೆಲುವಿಗಾಗಿ ವಿಜಯ್ ಅವರಿಗೆ ಅಭಿನಂದನೆಗಳು. ಜನಸೇವೆಯ ನಿಮ್ಮ ಕೆಲಸಕ್ಕೆ ಒಳಿತಾಗಲಿ’ ಎಂದು ಶಿವಕಾರ್ತಿಕೇಯನ್ ಅವರು ವಿಶ್ ಮಾಡಿದ್ದಾರೆ. ಬಾಲಿವುಡ್ ನಟ ಟೈಗರ್ ಶ್ರಾಫ್, ನಟಿ ರಂಭಾ, ಕೆವಿಎನ್ ಪ್ರೊಡಕ್ಷನ್ಸ್ ಸೇರಿದಂತೆ ಹಲವರು ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಂಚರಾಜ್ಯ ಚುನಾವಣೆ ಫಲಿತಾಂಶ: ಪ್ರಧಾನಿ ಮೋದಿ ಸರಣಿ ಟ್ವೀಟ್ ಮೂಲಕ ಕಾರ್ಯಕರ್ತರು, ಮತದಾರರಿಗೆ ಧನ್ಯವಾದ – Kannada News | PM Narendra Modi series of tweets hailing NDA performance in five states assembly elections

ನವದೆಹಲಿ, ಮೇ 4: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಐದು ರಾಜ್ಯಗಳ ಪೈಕಿ ಎನ್​ಡಿಎ ಮೈತ್ರಿಕೂಟ ಮೂರರಲ್ಲಿ ಅಧಿಕಾರ ಪಡೆಯಲಿದೆ. ಪಶ್ಚಿಮ ಬಂಗಾಳ, ಅಸ್ಸಾಮ್ ಮತ್ತು ಪುದುಚೆರಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಎನ್​ಡಿಎ ನಿಚ್ಚಳ ಬಹುಮತ ಪಡೆಯುತ್ತಿದೆ. ಕೇರಳದಲ್ಲೂ 3 ಸ್ಥಾನ ಗೆದ್ದು ತನ್ನ ಇರುವಿಕೆಯನ್ನ ಬಲಪಡಿಸಿಕೊಂಡಿದೆ. ತಮಿಳುನಾಡಿನಲ್ಲಿ ಎನ್​ಡಿಎ ಒಂದಷ್ಟು ಸ್ಥಾನ ಕಳೆದುಕೊಂಡರೂ ಪ್ರಬಲ ಉಪಸ್ಥಿತಿ ಹೊಂದಿದೆ. ಬಹುಮತ ಪಡೆದಿರುವ ಮೂರು ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದ ಗೆಲುವು ಬಿಜೆಪಿಗೆ ಐತಿಹಾಸಿಕವಾದುದು. ಇಲ್ಲಿ ಅದರ ಚೊಚ್ಚಲ ಗೆಲುವು. ಅಸ್ಸಾಮ್ ಮತ್ತು ಪುದುಚೇರಿಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಯಶಸ್ವಿಯಾಗಿದೆ. ಒಟ್ಟಾರೆ ಈ ಪಂಚರಾಜ್ಯ ಚುನಾವಣೆಗಳು ಬಿಜೆಪಿಗೆ ಸಕಾರಾತ್ಮಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹಜವಾಗಿಯೇ ಎನ್​ಡಿಎ ಸಾಧನೆಯನ್ನು ಪ್ರಶಂಸಿಸಿ ಸರಣಿ ಟ್ವೀಟ್​ಗಳನ್ನು ಮಾಡಿದ್ದಾರೆ.

ಬಂಗಾಳದಲ್ಲಿ ಅರಳಿದ ಕಮಲ

‘ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಅವಿಸ್ಮರಣೀಯವಾಗಿ ಉಳಿಯಲಿದೆ. ಜನರ ಅಧಿಕಾರ ಉಳಿದಿದೆ. ಬಿಜೆಪಿಯ ಉತ್ತಮ ಆಡಳಿತದ ರಾಜಕಾರಣಕ್ಕೆ ಗೆಲುವಾಗಿದೆ. ಬಂಗಾಳದ ಪ್ರತಿಯೊಬ್ಬ ವ್ಯಕ್ತಿಗೂ ತಲೆಬಾಗುತ್ತೇನೆ. ಬಿಜೆಪಿಗೆ ಅದ್ಬುತ ಜನಾದೇಶ ಸಿಕ್ಕಿದೆ. ಜನರ ಆಶೋತ್ತರ ಈಡೇರಿಸಲು ಸಾಧ್ಯವಾದ ಎಲ್ಲವನ್ನೂ ನಮ್ಮ ಪಕ್ಷ ಮಾಡುತ್ತದೆ’ ಎಂದು ನರೇಂದ್ರ ಮೋದಿ ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Assam Assembly Election Results: ಅಸ್ಸಾಂನಲ್ಲಿ ಮತ್ತೆ ಅಧಿಕಾರಕ್ಕೇರಲಿರುವ ಬಿಜೆಪಿ ನೀಡಿದ ಭರವಸೆಗಳೇನು?

ತಮಿಳುನಾಡಿಲ್ಲಿ ಮತದಾರರಿಗೆ ಮೋದಿ ಧನ್ಯವಾದ

ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದ ಎನ್​ಡಿಎ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಆದರೂ ನರೇಂದ್ರ ಮೋದಿ ಅವರು ಎನ್​​ಡಿಎಗೆ ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಅತಿಹೆಚ್ಚು ಸ್ಥಾನ ಪಡೆದ ಟಿವಿಕೆ ಪಕ್ಷಕ್ಕೆ ಧನ್ಯವಾದಹೇಳಿದ್ದಾರೆ. ತಮಿಳುನಾಡನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕೇಂದ್ರ ಪ್ರಯತ್ನ ನಿಲ್ಲಿಸದು ಎಂದೂ ಅವರು ಭರವಸೆ ನೀಡಿದ್ದಾರೆ.

ಪುದುಚೇರಿಯಲ್ಲಿ ಎನ್​ಡಿಎ ಕಾರ್ಯಕರ್ತರ ಪರಿಶ್ರಮಕ್ಕೆ ಮೋದಿ ಮೆಚ್ಚುಗೆ

ತಮಿಳುನಾಡಿಗೆ ಅಂಟಿಕೊಂಡಿರುವ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಎನ್​ಡಿಎ ಅಧಿಕಾರ ಉಳಿಸಿಕೊಂಡಿದೆ. ಮೋದಿ ಈ ಸಂಬಂಧ ಟ್ವೀಟ್ ಮಾಡಿದ್ದು, ಪುದುಚೇರಿಯಲ್ಲಿ ಎನ್​ಡಿಎ ಕಾರ್ಯಕರ್ತರ ಪರಿಶ್ರಮವನ್ನು ಮೆಚ್ಚಿಕೊಂಡಿದ್ದಾರೆ.

ಕೇರಳದಲ್ಲಿ ಎನ್​ಡಿಎ ಬೆಂಬಲಿಸಿದ ಮತದಾರರಿಗೆ ಮೋದಿ ಧನ್ಯವಾದ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 3 ಸ್ಥಾನ ಗೆಲ್ಲಲು ಯಶಸ್ವಿಯಾಗಿದೆ. ಕಳೆದ ಬಾರಿ ಶೂನ್ಯ ಇತ್ತು. ಈ ಬಾರಿ ಎನ್​ಡಿಎಗೆ ಮತ ಚಲಾಯಿಸಿ ಮತದಾರರಿಗೆ ಮೋದಿ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಬಹುಮತ ಪಡೆದ ಯುಡಿಎಫ್ ಅನ್ನೂ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಜನನಾಯಗನ್ ‘ಸೇಡು’?; ಬಿಜೆಪಿ ಕಾರಣಕ್ಕೆ ಎಐಎಡಿಎಂಕೆ ಬೇಡ ಅಂತಾರಾ ವಿಜಯ್?; ದಳಪತಿ ಮುಂದಿರುವ ಆಯ್ಕೆಗಳೇನು?

ಅಸ್ಸಾಮ್​ನಲ್ಲಿ ಬಿಜೆಪಿ ಗೆಲುವು; ಕಾರ್ಯಕರ್ತರಿಗೆ ಮೋದಿ ಧನ್ಯವಾದ

ಅಸ್ಸಾಮ್​ನಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ನಿಚ್ಚಳ ಬಹುಮತ ಪಡೆದಿದೆ. ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನ ಗಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎನ್​ಡಿಎ ಸಾಧನೆಯನ್ನು ಶ್ಲಾಘಿಸಿದ್ದಾರೆ. ಉತ್ತಮ ಆಡಳಿತವು ಜನರ ಬೆಂಬಲ ಪಡೆದಿದೆ ಎಂಬುದನ್ನು ಎತ್ತಿ ತೋರಿಸಿ ಟ್ವೀಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಪಂಚರಾಜ್ಯ ಚುನಾವಣೆಗಳು ಬಿಜೆಪಿ ಪಾಲಿಗೆ ಸಕಾರಾತ್ಮಕವಾಗಿವೆ. ಎಡಪಕ್ಷಗಳ ಕೈಯಲ್ಲಿದ್ದ ಇದ್ದ ಒಂದೇ ಒಂದು ರಾಜ್ಯವು ಕೈತಪ್ಪಿದೆ. ಕಾಂಗ್ರೆಸ್ ಅಧಿಕಾರದ ರಾಜ್ಯಗಳ ಸಂಖ್ಯೆಯಲ್ಲಿ ಒಂದು ಹೆಚ್ಚಿದೆ. ಬಿಜೆಪಿಯದ್ದೂ ಒಂದು ಹೆಚ್ಚಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

MI vs LSG Playing XI: ಮುಂಬೈ ತಂಡದಲ್ಲಿ ನಾಯಕ ಸೇರಿದಂತೆ ನಾಲ್ಕು ಬದಲಾವಣೆ – Kannada News | MI vs LSG Playing XI Mumbai Indians vs Lucknow Super Giants Today IPL 2026 match Confirmed playing 11 details with name in Kannada

ಐಪಿಎಲ್ 2026 (IPL 2026) ರ 47 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (MI vs LSG) ನಡುವೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇದುವರೆಗೆ ಈ ಆವೃತ್ತಿಯಲ್ಲಿ ಉಭಯ ತಂಡಗಳ ಪ್ರದರ್ಶನ ನಿರಸವಾಗಿದೆ. ಏಕೆಂದರೆ ಮುಂಬೈ ಆಡಿರುವ 9 ಪಂದ್ಯಗಳಲ್ಲಿ 7 ರಲ್ಲಿ ಸೋತಿದ್ದರೆ, ಇತ್ತ ಲಕ್ನೋ ಆಡಿರುವ 8 ಪಂದ್ಯಗಳಲ್ಲಿ 6 ರಲ್ಲಿ ಸೋತಿದೆ. ಇದರರ್ಥ ಮುಂಬೈ ಲೀಗ್ ಹಂತದಲ್ಲೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸುವುದು ಭಾಗಶಃ ಖಚಿತವಾಗಿದೆ. ಇತ್ತ ಲಕ್ನೋ ಮುಂದಿನ ಸುತ್ತಿಗೆ ಅರ್ಹತೆ ಪಡೆಯಬೇಕಾದರೆ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ. ಹೀಗಾಗಿ ಈ ಪಂದ್ಯ ಲಕ್ನೋಗೆ ಬಹಳ ಮುಖ್ಯವಾಗಿದೆ.

ಟಾಸ್ ಗೆದ್ದ ಮುಂಬೈ

ಈ ಪಂದ್ಯಕ್ಕೆ ಮುಂಬೈ ತಂಡದ ನಾಯಕನನ್ನು ಬದಲಿಸಲಾಗಿದೆ. ಗಾಯದ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ ಈ ಪಂದ್ಯವನ್ನು ಆಡುತ್ತಿಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಸೂರ್ಯಕುಮಾರ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ಲಕ್ನೋ ತಂಡ ಮೊದಲು ಬ್ಯಾಟಿಂಗ್‌ ಮಾಡಲಿದೆ. ಇದರ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.

ಅದರಂತೆ ಮುಂಬೈ ತಂಡದಲ್ಲಿ ನಾಯಕ ಸೇರಿದಂತೆ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಗಾಯದ ಕಾರಣದಿಂದಾಗಿ ಕೆಲವು ಪಂದ್ಯಗಳಿಗೆ ಗೈರಾಗಿದ್ದ ಮಾಜಿ ನಾಯಕ ರೋಹಿತ್ ಶರ್ಮಾ ಈ ಪಂದ್ಯದಿಂದ ತಂಡದಲ್ಲಿ ಆಡುತ್ತಿದ್ದಾರೆ. ಹಾಗೆಯೇ ಹಾರ್ದಿಕ್ ಪಾಂಡ್ಯ ಬದಲಿಗೆ ದೀಪಕ್ ಚಾಹರ್ ಆಡುತ್ತಿದ್ದರೆ, ಟ್ರೆಂಟ್ ಬೌಲ್ಟ್ ಬದಲಿಗೆ ಕಾರ್ಬಿನ್ ಬಾಷ್ ಆಡಲಿದ್ದಾರೆ. ಇತ್ತ ಲಕ್ನೋ ತಂಡದಲ್ಲೂ ಮೂರು ಬದಲಾವಣೆಗಳನ್ನು ಮಾಡಲಾಗಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ಮುಂಬೈ ಇಂಡಿಯನ್ಸ್: ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್), ನಮನ್ ಧೀರ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ವಿಲ್ ಜಾಕ್ಸ್, ರಾಜ್ ಬಾವಾ (ರಾಬಿನ್ ಮಿಂಜ್ ಬದಲಿಗೆ), ಕಾರ್ಬಿನ್ ಬಾಷ್ (ಟ್ರೆಂಟ್ ಬೌಲ್ಟ್ ಬದಲಿಗೆ), ದೀಪಕ್ ಚಹಾರ್ (ಹಾರ್ದಿಕ್ ಪಾಂಡ್ಯ ಬದಲಿಗೆ), ಜಸ್ಪ್ರೀತ್ ಬುಮ್ರಾ, ಎಎಮ್ ಗಜನ್ಫರ್, ಮತ್ತು ರಘು ಶರ್ಮಾ (ಕ್ರಿಶ್ ಭಗತ್ ಬದಲಿಗೆ).

ಇಂಪ್ಯಾಕ್ಟ್ ಪ್ಲೇಯರ್ಸ್​: ರೋಹಿತ್ ಶರ್ಮಾ, ಮಯಾಂಕ್ ರಾವತ್, ರಾಬಿನ್ ಮಿಂಜ್, ಶಾರ್ದೂಲ್ ಠಾಕೂರ್ ಮತ್ತು ಟ್ರೆಂಟ್ ಬೌಲ್ಟ್.

ಲಕ್ನೋ ಸೂಪರ್​ಜೈಂಟ್ಸ್: ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್ (ಆಯುಷ್ ಬಡೋನಿ ಬದಲಿಗೆ), ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ರಿಷಭ್ ಪಂತ್ (ನಾಯಕ), ಅಕ್ಷತ್ ರಘುವಂಶಿ (ಮುಕುಲ್ ಚೌಧರಿ ಬದಲಿಗೆ), ಹಿಮ್ಮತ್ ಸಿಂಗ್ (ದಿಗ್ವೇಶ್ ಸಿಂಗ್ ಬದಲಿಗೆ), ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್, ಅವೇಶ್ ಖಾನ್, ಮತ್ತು ಪ್ರಿನ್ಸ್ ಯಾದವ್.

ಇಂಪ್ಯಾಕ್ಟ್ ಪ್ಲೇಯರ್ಸ್​: ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ಸಿಂಗ್, ಮಯಾಂಕ್ ಯಾದವ್, ಶಹಬಾಜ್ ಅಹಮದ್ ಮತ್ತು ಅಬ್ದುಲ್ ಸಮದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:25 pm, Mon, 4 May 26

Source link

ಬಂಗಾಳಿ ಧೋತಿ ಧರಿಸಿ ಬಿಜೆಪಿ ಕಚೇರಿಗೆ ಭರ್ಜರಿ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ – Kannada News | PM Modi arrives at BJP headquarters in Delhi wearing a Bengali dhoti for victory speech

ನವದೆಹಲಿ, ಮೇ 4: ಪಶ್ಚಿಮ ಬಂಗಾಳ (West Bengal Elections) ಮತ್ತು ಅಸ್ಸಾಂನಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಪ್ರಧಾನಿ ಮೋದಿ (PM Modi Speech) ಆಗಮಿಸಿದ್ದಾರೆ. ತಾವು ಹೋಗುವ ರಾಜ್ಯಗಳಲ್ಲಿ ಅಲ್ಲಿನ ಸಾಂಪ್ರದಾಯಿಕ ಉಡುಗೆ ತೊಡುವ ಮೂಲಕ ಗಮನ ಸೆಳೆಯುವ ಪ್ರಧಾನಿ ಮೋದಿ ಬಂಗಾಳದ ಐತಿಹಾಸಿಕ ಗೆಲುವನ್ನು ಸಂಭ್ರಮಿಸಲು ಮತ್ತು ಬಂಗಾಳದ ಜನತೆಗೆ ತಮ್ಮ ಕೃತಜ್ಞತೆ ಸಲ್ಲಿಸಲು ಇಂದಿನ ಭಾಷಣಕ್ಕೆ ಬಂಗಾಳಿ ಧೋತಿಯನ್ನು ಧರಿಸಿ ಆಗಮಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಉಡುಗೆ-ತೊಡುಗೆಗಳ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ ಇಂದು ಅವರು ಬಂಗಾಳಿ ಶೈಲಿಯಲ್ಲಿ ಧೋತಿ-ಕುರ್ತಾ ಧರಿಸಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ಆಗಮಿಸಿದರು. ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳು ಪದೇಪದೇ ಬೀಳುವುದರಿಂದ ಮೆದುಳಿಗೆ ಅಪಾಯವಾಗುತ್ತದೆಯೇ? ವೈದ್ಯರನ್ನು ಯಾವಾಗ ಸಂಪರ್ಕ ಮಾಡಬೇಕು? – Kannada News | When Is Frequent Falling in Kids a Medical Concern? Doctor’s Guide

ಮಕ್ಕಳು ಆಟವಾಡುವಾಗ ಬೀಳುವುದು ಸಾಮಾನ್ಯ ಸಂಗತಿಯೇ ಸರಿ. ಅವರು ಹೊಸ ಕೌಶಲ್ಯಗಳನ್ನು ಕಲಿಯುವ ಹಂತದಲ್ಲಿರುವುದರಿಂದ ಈ ರೀತಿ ಆಗುವುದು ಸಹಜ. ಆದರೆ ಮಗು ಪದೇಪದೇ ಬೀಳುತ್ತಿರುವುದನ್ನು ಪೋಷಕರು ಗಮನಿಸಿದರೆ, ಅದು ಕೇವಲ ಆಟದ ಭಾಗವೇ ಅಥವಾ ಆರೋಗ್ಯ ಸಮಸ್ಯೆಯ ಸೂಚನೆಯೇ ಎಂಬುದನ್ನು ಅರಿಯುವುದು ಅಗತ್ಯವಾಗಿದೆ. ಹೌದು, ತಜ್ಞರು ಹೇಳುವ ಪ್ರಕಾರ, ಸಾಮಾನ್ಯವಾಗಿ ಬಿದ್ದಾಗ ಸಣ್ಣಪುಟ್ಟ ಗಾಯವಾಗುವುದರಿಂದ ಯಾವುದೇ ತೊಂದರೆಯಿಲ್ಲ ಇದರಿಂದ ಗಂಭೀರ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಮಗು ತಲೆ ಭಾಗಕ್ಕೆ ಆಗಾಗ ಹೊಡೆತ ಬೀಳುತ್ತಿದ್ದರೆ ಅಥವಾ ಬಿದ್ದಾಗ ತಲೆಯ ಭಾಗಕ್ಕೆ ಹೆಚ್ಚು ಪೆಟ್ಟಾಗುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ಪದೇ ಪದೇ ತಲೆಯ ಭಾಗದಲ್ಲಿ ಗಾಯ ಅಥವಾ ನೋವು ಕಂಡುಬಂದರೆ ಅದು ಮೆದುಳಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿಯೊಂದು ಘಟನೆಯನ್ನು ಗಮನದಿಂದ ಪರಿಗಣಿಸುವುದು ಮುಖ್ಯವಾಗಿದೆ. ಹಾಗಾದರೆ ಪದೇಪದೇ ಬೀಳುವುದರಿಂದ ಮೆದುಳಿಗೆ (Brain Health) ಯಾವ ರೀತಿಯ ಸಮಸ್ಯೆಯಾಗುತ್ತದೆ, ಈ ರೀತಿಯಾದಾಗ ವೈದ್ಯರ ಸಂಪರ್ಕ ಮಾಡಬೇಕಾಗುತ್ತದೆಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಎಚ್ಚರಿಕೆ ಸೂಚನೆಗಳು ಯಾವುವು?

ಮಗು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಪದೇಪದೇ ಬೀಳುತ್ತಿದ್ದರೆ ಅದು ಗಮನಿಸಬೇಕಾದ ವಿಷಯ. ಜೊತೆಗೆ ತಲೆಸುತ್ತು, ದೌರ್ಬಲ್ಯ, ನಡೆಯುವಲ್ಲಿ ಅಸ್ಥಿರತೆ ಅಥವಾ ಸಮತೋಲನ ಕಳೆದುಕೊಳ್ಳುವ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಬಿದ್ದ ನಂತರ ಮಗು ಅಸಹಜವಾಗಿ ಮೌನವಾಗುವುದು, ಹೆಚ್ಚು ಅಳುವುದು ಅಥವಾ ವರ್ತನೆಯಲ್ಲಿ ಬದಲಾವಣೆ ಕಾಣಿಸುವುದೂ ಕೂಡ ಎಚ್ಚರಿಕೆ ಸೂಚನೆಗಳಾಗಬಹುದು.

ಇದನ್ನೂ ಓದಿ: ಈ ಅಭ್ಯಾಸಗಳು ನಿಮ್ಮ ಮೆದುಳಿಗೆ ಹಾನಿ ಮಾಡಬಹುದು!

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಮಗು ಪದೇಪದೇ ಬೀಳುತ್ತಿದ್ದು ಪ್ರತೀ ಸಲ ತಲೆಗೆ ಗಾಯವಾಗುತ್ತಿದ್ದರೆ ಅಥವಾ ಬಿದ್ದ ಬಳಿಕ ವಾಂತಿ, ತೀವ್ರ ತಲೆನೋವು ಮುಂತಾದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಸಹಾಯ ಅಗತ್ಯ. ಜೊತೆಗೆ ಮಗು ನಡೆಯುವ ರೀತಿಯಲ್ಲಿ ಬದಲಾವಣೆ ಕಂಡುಬಂದರೂ ತಜ್ಞರ ಸಲಹೆ ಪಡೆಯಬೇಕು. ಮಕ್ಕಳು ಬೀಳುವುದು ಸಾಮಾನ್ಯವಾದರೂ, ಪದೇಪದೇ ಬೀಳುವುದು ಅಥವಾ ತಲೆಗಾಯಗಳಾಗುವುದು ಗಂಭೀರ ಸಮಸ್ಯೆಯಾಗಿರಬಹುದು. ಪೋಷಕರು ಎಚ್ಚರಿಕೆಯಿಂದ ಗಮನಿಸಿ, ಅಗತ್ಯವಿದ್ದರೆ ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸುವುದು ಮಗುವಿನ ಆರೋಗ್ಯ ಕಾಪಾಡಲು ಸಹಕಾರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಮತಾ ಬ್ಯಾನರ್ಜಿ ನಿವಾಸದ ಹೊರಗೆ ಬಿಜೆಪಿ ಬೆಂಬಲಿಗರಿಂದ ಜೈ ಶ್ರೀ ರಾಮ್ ಘೋಷಣೆ – Kannada News | BJP workers raised Jai Shree Ram Slogans Outside West Bengal CM Mamata Banerjee Residence in Kolkata

ಕೊಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದಲ್ಲಿ (West Bengal Election Results) ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚಿಸಲು ಸಜ್ಜಾಗಿದೆ. 15 ವರ್ಷಗಳ ಕಾಲ ಬಂಗಾಳದ ಮುಖ್ಯಮಂತ್ರಿಯಾಗಿ ಮೆರೆದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಈ ಬಾರಿಯ ಚುನಾವಣೆಯಲ್ಲಿ ನೆಲ ಕಚ್ಚಿದೆ. ಈ ನಡುವೆ ಬಿಜೆಪಿಯ ಗೆಲುವನ್ನು ಬಿಜೆಪಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದು, ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮನೆಯ ಹೊರಗೆ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸುತ್ತಿರುವುದರಿಂದ ಕಾರ್ಯಕರ್ತರು ಕೊಲ್ಕತ್ತಾದಾದ್ಯಂತ ವಿಜಯೋತ್ಸವ ಆಚರಿಸುತ್ತಿದ್ದಾರೆ. ಜೈ ಶ್ರೀರಾಮ್ ಘೋಷಣೆ ಕೂಗಿದ ಕಾರ್ಯಕರ್ತರನ್ನು ಪೊಲೀಸರು ಮಮತಾ ಬ್ಯಾನರ್ಜಿ ಮನೆಯ ಎದುರಿನಿಂದ ಹೊರಹೋಗುವಂತೆ ಸೂಚಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಮನೂರ ಮನೆತನದ 3ನೇ‌ ಪೀಳಿಗೆ ವಿಧಾನಸಭೆಗೆ:ತಂದೆ ರೀತಿ ಚಿಕ್ಕ ವಯಸ್ಸಿನಲ್ಲಿಯೇ ಸಮರ್ಥ ಶಾಸಕ – Kannada News | Davanagere South Assembly By Poll Result: No more Shamanur Family Member Entered to vidhana soudha

ದಾವಣಗೆರೆ, (ಮೇ 04): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ (Davanagere South Assembly By Poll Result) ಕಾಂಗ್ರೆಸ್​ ಅಭ್ಯರ್ಥಿ ಸಮರ್ಥ್ ಶಾಮನೂರು (Samarth Shamanur) ಗೆಲುವು ಸಾಧಿಸಿದ್ದಾರೆ. ತೀವ್ರ ಪೈಪೋಟಿ ನಡುವೆಯೂ ಅವರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್​ ದಾಸಕರಿಯಪ್ಪ ಅವರ ವಿರುದ್ಧ 5,708 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಈ ಮೂಲಕ ಅಜ್ಜ ಶಾಮನೂರು ಶಿವಶಂಕರಪ್ಪನವರ ಗೆಲುವಿನ ಹಾದಿಯನ್ನು ಮೊಮ್ಮಗ ಸಮರ್ಥ ಮುಂದುವರಿಸಿದ್ದು, ಶಾಮನೂರು ಮನೆತನದ ಮೂರನೇ ಪೀಳಿಗೆ ವಿಧಾನಸಭೆ ಪ್ರವೇಶ ಮಾಡಿದಂತಾಗಿದೆ. ಈ ನಡುವೆ ಅಚ್ಚರಿಯ ಬೆಳವಣಿಗೆಯಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದಾಖಲೆಯ ಮತಗಳಿಸಿದೆ. ಈ ಮೂಲಕ ಕಾಂಗ್ರೆಸ್ ಭರ್ಜರಿ ಸಂದೇಶವನ್ನು ಮುಸ್ಲಿಂ ಸಮುದಾಯ ನೀಡಿದೆ.

ತಂದೆ ರೀತಿ ಮಗ ಚಿಕ್ಕ ವಯಸ್ಸಿನಲ್ಲೇ ಶಾಸಕ

ಅಜ್ಜ ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ ವಿಧಾಸಭೆಗೆ ನಡೆದ ಉಪಚುನಾವಣೆಯಲ್ಲಿ ಮೊಮ್ಮಗ ಸಮರ್ಥ ಶಾಮನೂರು ಗೆದ್ದು ಬೀಗಿದ್ದು, ಇದರೊಂದಿಗೆ ಶಾಮನೂರು ಮನೆತನದ ಮೂರನೇ ಪೀಳಿಗೆ ವಿಧಾನಸಭೆ ಪ್ರವೇಶ ಮಾಡಿದೆ. ಇನ್ನು ತಂದೆ ಮಲ್ಲಿಕಾರ್ಜುನ ರೀತಿ ಪುತ್ರ ಸಮರ್ಥ ಸಹ ಚಿಕ್ಕ ವಯಸ್ಸಿನಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಲಿ ಸಚಿವರಾಗಿರುವ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್​​ಎಸ್​​ ಮಲ್ಲಿಕಾರ್ಜುನ ಅವರು 28ನೇ ವಯಸ್ಸಿನಲ್ಲಿ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು. ಅದರಂತೆ ಇದೀಗ ಪುತ್ರ ಸಮರ್ಥ ಸಹ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ತಂದೆ ರೀತಿಯಲ್ಲೇ ಚಿಕ್ಕ ವಯಸ್ಸಿನಲ್ಲೇ ಅಂದರೆ 27ನೇ ವಯಸ್ಸಿಗೆ ಗೆದ್ದು ವಿಧಾನಸಭೆಗೆ ಪ್ರವೇಶಿಸಿದ್ದಾರೆ.

ಇದನ್ನೂ ಓದಿ: ಬಂಡಾಯ ಮಣಿಸಿ ದಾವಣಗೆರೆ ಬೈ ಎಲೆಕ್ಷನ್​ ಗೆದ್ದ ಸಮರ್ಥ್ ಶಾಮನೂರು

ಕಾಂಗ್ರೆಸ್ ಎಚ್ಚರಿಕೆ ಸಂದೇಶ

ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್‌ ಶಾಮನೂರು 68619 ಮತಗಳೊಂದಿಗೆ ಕೇವಲ 5 ಸಾವಿರ ಮತಗಳ ಅಂತರದಿಂದ ಪ್ರಯಾಸದ ಗೆಲುವು ಸಾಧಿಸಿದ್ದಾರೆ.  ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ 63746 ಮತಗಳನ್ನು ಪಡೆದುಕೊಂಡರೆ, ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್‌ ಕೊಡ್ಲಿಪೇಟೆ 18,485 ಮತಗಳನ್ನು ಪಡೆದಿದ್ದಾರೆ. ಈ ಮೂಲಕ 3ನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದಾರೆ.  ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರು ಎಸ್‌ಡಿಪಿಐ ಬೆಂಬಲಿಸಿದ್ದು, ಆ ಪಕ್ಷ 18 ಸಾವಿರ ಮತಗಳನ್ನು ಪಡೆದು ಅಚ್ಚರಿ ಮೂಡಿಸಿದೆ. ಮುಸ್ಲಿಂ ಮತಗಳ ಈ ವಿಭಜನೆ ಕಾಂಗ್ರೆಸ್‌ಗೆ ಆತಂಕ ತಂದಿದೆ. ಈ ಮೂಲಕ  ಮುಸ್ಲಿಂ ಸಮುದಾಯ  ಕಾಂಗ್ರೆಸ್ ಎಚ್ಚರಿಗೆ ಸಂದೇಶ ರವಾನಿಸಿದೆ.

ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡಲಿಲ್ಲ ಎಂಬ ಕಾರಣಕ್ಕೆ ಮುಸ್ಲಿಮರು ಎಸ್‌ಡಿಪಿಐ ಬೆಂಬಲಿಸಿರುವುದು ಸ್ಪಷ್ಟವಾಗಿದೆ. ಈ ಅಂಶವೇ ಕಾಂಗ್ರೆಸ್‌ಗೆ ಮತಗಳ ಸಂಖ್ಯೆ ತಗ್ಗಿಸಿ ಪ್ರಭಲ ಪೈಪೋಟಿಗೆ ಕಾರಣವಾಯಿತು. ತಂದೆ ಸಚಿವ, ತಾಯಿ ಸಂಸದೆ ಹಾಗೂ ತಾತ ಮುತ್ಸದ್ದಿ ರಾಜಕಾರಣಿಯಾದರೂ ಸಮರ್ಥ್ ಶಾಮನೂರು ಜಸ್ಟ್‌ ಪಾಸ್‌ ಎಂಬಂತೆ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಈ ಉಪಚುನಾವಣೆ ಫಲಿತಾಂಶವು ಸಾಂಪ್ರದಾಯಿಕ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿ ಎಂದು ಭಾವಿಸಲಾಗಿದ್ದ ಕಣದಲ್ಲಿ, ಎಸ್‌ಡಿಪಿಐ ಸುಮಾರು ದಾಖಲೆಯ ಮತಗಳನ್ನು ಪಡೆಯುವ ಮೂಲಕ ಪ್ರಬಲ ಪೈಪೋಟಿ ನೀಡಿದೆ. ಈ ಬೆಳವಣಿಗೆ ಇದೀಗ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

MI vs LSG IPL 2026 Live Score: ಟಾಸ್ ಗೆದ್ದ ಸೂರ್ಯ ಬೌಲಿಂಗ್ ಆಯ್ಕೆ – Kannada News | Mumbai Indians vs Lucknow Super Giants IPL 2026 Live Cricket Score MI vs LSG Match on 4th May latest news in Kannada

ಐಪಿಎಲ್ 2026 ರ 47 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯುತ್ತಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ಮುಂಬೈಗೆ 10 ನೇ ಪಂದ್ಯವಾಗಿದ್ದರೆ, ಲಕ್ನೋಗೆ ಒಂಬತ್ತನೇ ಪಂದ್ಯವಾಗಿದೆ. ಎರಡೂ ತಂಡಗಳು ಈ ಆವೃತ್ತಿಯಲ್ಲಿ ಅತ್ಯಂತ ನಿರಾಶಾದಾಯಕ ಪ್ರದರ್ಶನ ನೀಡಿವೆ. ಮುಂಬೈ 9 ಪಂದ್ಯಗಳಲ್ಲಿ 7 ರಲ್ಲಿ ಸೋತಿದ್ದರೆ, ಲಕ್ನೋ ಕೂಡ ಇದೇ ರೀತಿಯ ಪರಿಸ್ಥಿತಿಯಲ್ಲಿದೆ.

Source link

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಅರಳಿದ ಕಮಲ; ಬಿಜೆಪಿಯ ಗೆಲುವಿಗೆ ಟೊಂಕ ಕಟ್ಟಿ ನಿಂತ ಮೋದಿ-ಅಮಿತ್ ಶಾ ಜೋಡಿ – Kannada News | PM Modis Guarantee and Amit Shahs political strategy changed the game in West Bengal Assembly Elections

ಕೊಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದಲ್ಲಿ (West Bengal Assembly Elections) ಬಿಜೆಪಿ ಜಯಭೇರಿ ಬಾರಿಸಿದೆ. ಪ್ರಧಾನಿ ಮೋದಿಯವರ (PM Modi) ಗ್ಯಾರಂಟಿ ಮತ್ತು ಅಮಿತ್ ಶಾ (Amit Shah) ಅವರ ಚುನಾವಣಾ ತಂತ್ರದಿಂದಾಗಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಪಕ್ಷವು ಮಮತಾ ಬ್ಯಾನರ್ಜಿಯವರ 15 ವರ್ಷಗಳ ಆಡಳಿತವನ್ನು ಉರುಳಿಸಿ ರಾಜ್ಯದಲ್ಲಿ ತನ್ನ ಮೊದಲ ಸರ್ಕಾರವನ್ನು ಸ್ಥಾಪಿಸಿದೆ. ಸಾರ್ವಜನಿಕ ಕಲ್ಯಾಣ ಯೋಜನೆಗಳು, ಒಳನುಸುಳುವಿಕೆ ವಿರೋಧಿ ನಿಲುವು ಮತ್ತು ಬಲವಾದ ಬೂತ್ ನಿರ್ವಹಣೆಯು ಮತದಾರರ ವಿಶ್ವಾಸವನ್ನು ಗಳಿಸಿತು. ಇದು ಬಿಜೆಪಿಯ ನಿರ್ಣಾಯಕ ಗೆಲುವಿಗೆ ಕಾರಣವಾಯಿತು ಎನ್ನಬಹುದು.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಸ್ಪಷ್ಟ ಬಹುಮತದ ಸರ್ಕಾರವನ್ನು ರಚಿಸಲು ಸಜ್ಜಾಗಿದೆ. ಇದು ರಾಜ್ಯದಲ್ಲಿ ಬಿಜೆಪಿಯ ಮೊದಲ ಸರ್ಕಾರವಾಗಿದೆ. ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಿರುವುದು ಇದೇ ಮೊದಲು. ಇದು ಬಂಗಾಳದಲ್ಲಿ 15 ವರ್ಷಗಳ ಮಮತಾ ಬ್ಯಾನರ್ಜಿ ಸರ್ಕಾರದ ಅಂತ್ಯವನ್ನು ಸೂಚಿಸುತ್ತದೆ.

ಈ ಬಾರಿ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಜೆಪಿಯನ್ನು ಗೆಲ್ಲಿಸಲೇಬೇಕೆಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಖುದ್ದಾಗಿ ಅಖಾಡಕ್ಕೆ ಇಳಿದಿದ್ದರು. ಕಳೆದ 2 ತಿಂಗಳಲ್ಲಿ ಅನೇಕ ಬಾರಿ ನರೇಂದ್ರ ಮೋದಿ ಬಂಗಾಳಕ್ಕೆ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಅಮಿತ್ ಶಾ ಬಂಗಾಳದಲ್ಲೇ ಬೀಡುಬಿಟ್ಟು ರಾಜ್ಯದ ಬಿಜೆಪಿ ನಾಯಕರಿಗೆ ಸಲಹೆ-ಸೂಚನೆಗಳನ್ನು ನೀಡುತ್ತಾ ಬಂಗಾಳದಲ್ಲಿ ಬಿಜೆಪಿ ಪರ ಅಲೆ ಮೂಡಲು ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ, ಈ ಗೆಲುವು ಸಿಗಲು ಪಶ್ಚಿಮ ಬಂಗಾಳ ರಾಜ್ಯದ ಬಿಜೆಪಿ ನಾಯಕರಿಗಿಂತ ಹೆಚ್ಚಾಗಿ ಹೈಕಮಾಂಡ್ ನಾಯಕರ ಪರಿಶ್ರಮವೇ ಕಾರಣ ಎನ್ನಬಹುದು. ಹೀಗಾಗಿ, ಬಂಗಾಳದಲ್ಲಿ ಕೂಡ ಬಿಜೆಪಿ ಪ್ರಧಾನಿ ಮೋದಿಯ ಹೆಸರು ಮತ್ತು ಖ್ಯಾತಿಯನ್ನು ಬಳಸಿಕೊಂಡು ಚುನಾವಣೆ ಗೆದ್ದಿದೆ.

ಇದನ್ನೂ ಓದಿ: ಬಂಗಾಳದಲ್ಲಿ ದೀದಿ ಸಾಮ್ರಾಜ್ಯ ಪತನ! ಕೊನೆಗೂ ಮಮತಾರನ್ನು ಸೋಲಿಸಿದ್ಹೇಗೆ ಬಿಜೆಪಿ? ಇಲ್ಲಿವೆ ಕೆಲವು ಇಂಟರೆಸ್ಟಿಂಗ್ ಮಾಹಿತಿ

ಚುನಾವಣಾ ಪ್ರಚಾರದ ಸಮಯದಲ್ಲಿ, ಪ್ರಧಾನಿ ಮೋದಿ ಹಲವಾರು ಸಾರ್ವಜನಿಕ ರ್ಯಾಲಿಗಳನ್ನು ನಡೆಸಿ ರಾಜ್ಯದಲ್ಲಿ ಬದಲಾವಣೆಗೆ ಕರೆ ನೀಡಿದರು. ಬಂಗಾಳದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿದರು. ಹಾಗೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸುಮಾರು 15 ದಿನಗಳ ಕಾಲ ಬಂಗಾಳದಲ್ಲಿಯೇ ಇದ್ದು, ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಭೆಗಳನ್ನು ನಡೆಸಿ, ಪ್ರತಿ ವಿಧಾನಸಭಾ ಸ್ಥಾನಕ್ಕೆ ಪ್ರತ್ಯೇಕ ಕಾರ್ಯತಂತ್ರ ರೂಪಿಸಿದರು. ಈ ಕಾರ್ಯತಂತ್ರವು ಈಗ ಚುನಾವಣಾ ಫಲಿತಾಂಶಗಳಲ್ಲಿ ಗೋಚರಿಸುತ್ತಿದೆ.

ಬಿಜೆಪಿ 82,000 ಬೂತ್‌ಗಳಲ್ಲಿ 71,000 ಬೂತ್‌ಗಳ ಮೇಲೆ ನಿಯಂತ್ರಣ ಸಾಧಿಸಿದೆ. ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳನ್ನು ಹೊರತುಪಡಿಸಿ, ಪ್ರತಿಯೊಂದು ಬೂತ್‌ನಲ್ಲಿ ಸಂಘಟನೆಯನ್ನು ಬಲಪಡಿಸಲಾಗಿದೆ. ಹಿಂಸಾಚಾರಕ್ಕೆ ಬಲಿಯಾದ ಕಾರ್ಯಕರ್ತರನ್ನು ಪುನಃ ಸಕ್ರಿಯಗೊಳಿಸುವ ಮೂಲಕ ಬಿಜೆಪಿ ತುಳಿತಕ್ಕೆ ಒಳಗಾದವರನ್ನು ತನ್ನ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಂಡಿತು. ಅಮಿತ್ ಶಾ ಅವರ ಮೇಲ್ವಿಚಾರಣೆಯಲ್ಲಿ ಕೇಂದ್ರ ನಾಯಕರಿಗೆ ಸ್ಥಾನವಾರು ಜವಾಬ್ದಾರಿಗಳನ್ನು ವಹಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್​) ಡ್ರಾಯಿಂಗ್ ರೂಮ್ ಸಭೆಗಳು ಮನೆ ಮನೆಗೆ ಬಿಜೆಪಿ ತಲುಪಲು ಕಾರಣವಾಯಿತು. ಇದಕ್ಕೆ ಆರ್​ಎಸ್​ಎಸ್​ ಕಾರ್ಯಕರ್ತರು ಕೈಜೋಡಿಸಿದ್ದರಿಂದ ಬಿಜೆಪಿಗೆ ಬಹಳ ಸಹಾಯವಾಯಿತು. ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಟಾಲಿವುಡ್ ತಾರೆಯರು ಮತ್ತು ಕಳಂಕಿತ ರಾಜಕಾರಣಿಗಳನ್ನು ದೂರವಿಡಲಾಯಿತು.

ಇದನ್ನೂ ಓದಿ: Election Commission of India Results 2026: ಅಸ್ಸಾಂ, ಪಶ್ಚಿಮ ಬಂಗಾಳ ಸೇರಿ 5 ರಾಜ್ಯಗಳ ಫಲಿತಾಂಶ ಆನ್‌ಲೈನ್‌ನಲ್ಲಿ ನೋಡುವುದು ಹೇಗೆ? ಇಲ್ಲಿವೆ ಸಿಂಪಲ್ ಸ್ಟೆಪ್ಸ್!

ಪೂರ್ವಾಂಚಲಿ, ಮಾರ್ವಾರಿ ಸಮುದಾಯ ಮತ್ತು ಸ್ಥಳೀಯ ಫುಟ್ಬಾಲ್ ಕ್ಲಬ್‌ಗಳನ್ನು ತಲುಪುವ ಮೂಲಕ ಹೊಸ ಮತ ಬ್ಯಾಂಕ್ ಅನ್ನು ರಚಿಸಲಾಯಿತು. ಜೈ ಶ್ರೀ ರಾಮ್, ಒಳನುಸುಳುವಿಕೆ, ಮಹಿಳಾ ಸುರಕ್ಷತೆ – ಇವುಗಳನ್ನು ಒಟ್ಟುಗೂಡಿಸಿ ಬಲವಾದ ಸೈದ್ಧಾಂತಿಕ ಚೌಕಟ್ಟನ್ನು ರಚಿಸಲಾಯಿತು. ಇದು ಬಿಜೆಪಿಯತ್ತ ಜನರು ಒಲವು ತೋರಲು ಕಾರಣವಾಯಿತು.

ಮಮತಾ ಬ್ಯಾನರ್ಜಿ ಅವರ ಪ್ರಣಾಳಿಕೆ ವರ್ಸರ್ ಪ್ರಧಾನಿ ಮೋದಿ ಅವರ ಭರವಸೆ:

  • 3,000 ರೂ. ವರ್ಸಸ್ 1,500 ರೂ. ಆಫರ್: ಟಿಎಂಸಿ 1,500 ರೂ. ನಿರುದ್ಯೋಗ ಭತ್ಯೆಯನ್ನು ನೀಡಿದರೆ, ಬಿಜೆಪಿ ಅದನ್ನು 3,000 ರೂ.ಗೆ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತು.
  • ಮಹಿಳೆಯರಿಗೆ ಡಬಲ್ ಡೋಸ್: ಮಮತಾ ಬ್ಯಾನರ್ಜಿಯವರ ಲಕ್ಷ್ಮಿ ಭಂಡಾರ್ 1,500 ರೂ.ಗೆ ಹೋಲಿಸಿದರೆ, ಬಿಜೆಪಿ ಪ್ರತಿ ಮಹಿಳೆಗೆ ತಿಂಗಳಿಗೆ 3,000 ರೂ. ನೀಡುವುದಾಗಿ ಭರವಸೆ ನೀಡಿತು. ಇದು ಮಹಿಳೆಯರನ್ನು ತನ್ನತ್ತ ಸೆಳೆಯಲು ಬಿಜೆಪಿಗೆ ಸಹಾಯವಾಯಿತು.
  • ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ: ಟಿಎಂಸಿ ವಿರುದ್ಧ ಡಿಎ ಮತ್ತು ವೇತನ ವ್ಯತ್ಯಾಸದ ಆರೋಪ ಮಾಡಿತು. ಅಧಿಕಾರಕ್ಕೆ ಬಂದ 45 ದಿನಗಳಲ್ಲಿ 7ನೇ ವೇತನ ಆಯೋಗವನ್ನು ಜಾರಿಗೆ ತರುವುದಾಗಿ ಬಿಜೆಪಿ ಭರವಸೆ ನೀಡಿದೆ.
  • ಸರ್ಕಾರಿ ಉದ್ಯೋಗಗಳಲ್ಲಿ 33% ಮಹಿಳಾ ಮೀಸಲಾತಿಯ ಭರವಸೆ: ಹಣಕಾಸಿನ ನೆರವು ಮಾತ್ರವಲ್ಲದೆ, ಉದ್ಯೋಗದಲ್ಲಿ ಕೂಡ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯ ಭರವಸೆಯನ್ನು ಬಿಜೆಪಿ ನೀಡಿದೆ.
  • ಏಕರೂಪ ನಾಗರಿಕ ಸಂಹಿತೆಯ ಭರವಸೆ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಬಿಜೆಪಿ ಇದನ್ನು ಎಲ್ಲರಿಗೂ ಒಂದೇ ಕಾನೂನು ಎಂದು ಪ್ರಸ್ತುತಪಡಿಸಿತು. ಇದು ಟಿಎಂಸಿ ನಿರೂಪಣೆಗಿಂತ ಭಿನ್ನವಾಗಿದೆ.
  • ಒಳನುಸುಳುವಿಕೆಗೆ ಶೂನ್ಯ ಸಹಿಷ್ಣುತೆ: ಪಶ್ಚಿಮ ಬಂಗಾಳದಲ್ಲಿ ಒಳನುಸುಳುವವರನ್ನು ಹೊರಹಾಕಲಾಗುವುದು ಎಂದು ಬಿಜೆಪಿ ಸ್ಪಷ್ಟವಾಗಿ ಹೇಳಿದೆ.
  • ಕೈಗಾರಿಕೆ ಮತ್ತು ಸಿಂಗೂರ್ ಪುನರುಜ್ಜೀವನ: ಸಿಂಗೂರ್ ಅನ್ನು ಮತ್ತೆ ಕೈಗಾರಿಕಾ ಕೇಂದ್ರವನ್ನಾಗಿ ಮಾಡುವ ಭರವಸೆಯನ್ನು ಬಿಜೆಪಿ ನೀಡಿದೆ. ಇದು ಉದ್ಯೋಗ ಮತ್ತು ಹೂಡಿಕೆಗೆ ಅನುಕೂಲ ನೀಡುತ್ತದೆ.
  • ಕೇಂದ್ರ ಯೋಜನೆಗಳ ಸಂಪೂರ್ಣ ಲಾಭ: ಬಂಗಾಳದಲ್ಲಿ ಆಯುಷ್ಮಾನ್ ಭಾರತ್ ನಂತಹ ಯೋಜನೆಗಳನ್ನು ಸಂಪೂರ್ಣವಾಗಿ ಜಾರಿಗೆ ತರುವ ಭರವಸೆ ನೀಡಲಾಗಿದೆ.

ಈ ಬಾರಿ ಪಶ್ಚಿಮ ಬಂಗಾಳವು ಸ್ವಾತಂತ್ರ್ಯದ ನಂತರ ಅತಿ ಹೆಚ್ಚು ಮತದಾನವನ್ನು ದಾಖಲಿಸಿದೆ. ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ಶೇ. 91.66ರಷ್ಟು ಮತದಾನವಾಗಿದೆ. ಮೊದಲ ಹಂತದ ಚುನಾವಣೆಯಲ್ಲಿ ಶೇ.93.19ರಷ್ಟು ಜನರು ಮತದಾನದಲ್ಲಿ ಭಾಗವಹಿಸಿದ್ದು, ಒಟ್ಟಾರೆ ಮತದಾನದ ಪ್ರಮಾಣ ಶೇ.92.47ಕ್ಕೆ ತಲುಪಿದೆ.

2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು 294 ಸ್ಥಾನಗಳಲ್ಲಿ 213 ಸ್ಥಾನಗಳನ್ನು ಗೆದ್ದು ಸುಮಾರು ಶೇ.48ರಷ್ಟು ಮತಗಳನ್ನು ಗಳಿಸಿ ನಿರ್ಣಾಯಕ ಬಹುಮತ ಗಳಿಸಿತು. ಆದರೆ ಬಿಜೆಪಿ 77 ಸ್ಥಾನಗಳನ್ನು ಅಂದರೆ ಸರಿಸುಮಾರು ಶೇ.38ರಷ್ಟು ಮತಗಳನ್ನು ಗಳಿಸಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಈ ಬಾರಿ ಬಿಜೆಪಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:51 pm, Mon, 4 May 26

Source link

ಚಿಕ್ಕಮಗಳೂರಲ್ಲಿ ಘೋರ ದುರಂತ: ನಾಲ್ಕು ಮಕ್ಕಳು ಜಲಸಮಾಧಿ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಚಿಕ್ಕಮಗಳೂರು, ಮೇ 04: ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವನ್ನಪ್ಪಿರುವಂತಹ ಘಟನೆ ಚಿಕ್ಕಮಗಳೂರಿನ ಅರಳುಗುಪ್ಪೆ ಗ್ರಾಮದಲ್ಲಿ ನಡೆದಿದೆ. ಅಬ್ದುಲ್ ರೆಹಮಾನ್ (9), ನಯಾಜ್(12), ಮದಿನಾ ಬಾನು(9), ಆರುನ್​​​(8) ಮೃತರು. ಕೆರೆಯಲ್ಲಿ ಆಟವಾಡಲು ತೆರಳಿದ್ದಾಗ ದುರಂತ ಸಂಭವಿಸಿದೆ. ಅರ್ಮನ್​​ ಎಂಬಾ  ಬದುಕುಳಿದಿದ್ದು, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್​ ಆಗಲಿದೆ.

Source link