ಸೂರ್ಯ ಮುಳುಗಿದ ಮೇಲೆ ನಾವೇ ಗೆಲ್ಲುತ್ತೇವೆ! ಬೆಂಬಲಿಗರಿಗೆ ಮಮತಾ ಬ್ಯಾನರ್ಜಿ ‘ಅರ್ಜೆಂಟ್’ ಕರೆ – Kannada News | West Bengal Election Results 2026: Mamata Banerjee Urges TMC Workers to Stay Vigilant
ಬೆಂಗಳೂರು, ಮೇ 04: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಚಿತ್ರಣ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಟ್ರೆಂಡ್‌ಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಎಣಿಕೆ ಏಜೆಂಟ್‌ಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ತಮ್ಮ ಎಕ್ಸ್ (X) ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಎಣಿಕೆ ಕೇಂದ್ರದಿಂದ ಯಾರೂ ಹೊರಬರಬೇಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅವರು ತಮ್ಮ ವೀಡಿಯೋದಲ್ಲಿ ನಮ್ಮ ಎಲ್ಲಾ ಮತ ಎಣಿಕೆ ಏಜೆಂಟ್‌ಗಳು ಮತ್ತು ಅಭ್ಯರ್ಥಿಗಳಲ್ಲಿ ನನ್ನದೊಂದು…