All posts by nagaraj11081993

ಇನ್ನಷ್ಟು ಕುಸಿತ ಕಾಣುತ್ತಾ ಚಿನ್ನದ ದರ; ಎಲ್ಲಿಯವರೆಗೆ ಇಳಿಯಬಹುದು ಬಂಗಾರದ ಬೆಲೆ? – Kannada News | Gold rates may come down drastically to Rs 10,000, know the probable reasons for this decline

ನವದೆಹಲಿ, ಫೆಬ್ರುವರಿ 17: ಚಿನ್ನ ಮತ್ತು ಬೆಳ್ಳಿ ಬೆಲೆ ಕಳೆದ ತಿಂಗಳು (ಜನವರಿ) ಯದ್ವಾತದ್ವಾ ಏರಿಕೆ ಕಂಡಿವೆ. ಈ ಅಮೂಲ್ಯ ಲೋಹಗಳ ಬೆಲೆ ಏರಿಕೆಗೆ ಕಡಿವಾಣವೇ ಇಲ್ಲ ಎನ್ನುವಂತೆ ನಾಗಾಲೋಟ ನಡೆದಿತ್ತು. ಈಗ ಏರಿದಷ್ಟೇ ವೇಗವಾಗಿ ಕುಸಿತವೂ ಆಗುತ್ತಿದೆ. ಬೆಲೆ ಏರಿದಷ್ಟೂ ಕಂಗಾಲಾದ ಜನಸಾಮಾನ್ಯರು, ದುಬಾರಿ ಬೆಲೆಯಲ್ಲೂ ಆಭರಣ ಖರೀದಿಸಲು ಮುಗಿಬಿದ್ದದ್ದು ವಿಪರ್ಯಾಸ ಎನಿಸಿತ್ತು. ಸದ್ಯ ಚಿನ್ನದ ಬೆಲೆ (Gold Rate) ಇಳಿಕೆ ಆಗುತ್ತಿರುವುದು ಬಹಳಷ್ಟು ಭಾರತೀಯ ಜನಸಾಮಾನ್ಯರಿಗೆ ಉಸಿರು ಸಿಕ್ಕಂತಾಗಿದೆ.

ಜನವರಿ 29ರಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗರಿಷ್ಠ ಮಟ್ಟ ಮುಟ್ಟಿದ್ದವು. ಚಿನ್ನದ ಬೆಲೆ 24 ಕ್ಯಾರಟ್​ನದ್ದು 17,885 ರೂ ತಲುಪಿತ್ತು. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 16,395 ರೂಗೆ ಏರಿತ್ತು. ಇವತ್ತು ಈ ಆಭರಣ ಚಿನ್ನದ ಬೆಲೆ 14,200 ರೂಗೆ ಇಳಿದಿದೆ. ಮುಂದಿನ ದಿನಗಳಲ್ಲೂ ಬಂಗಾರದ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ತಜ್ಞರು.

ಇದನ್ನೂ ಓದಿ: Gold Rate Today: ಮುಂದುವರಿದಿದೆ ಚಿನ್ನ, ಬೆಳ್ಳಿ ಬೆಲೆಗಳ ಕುಸಿತ

ಚಿನ್ನದ ಬೆಲೆ ಇಳಿಕೆಯಾಗುತ್ತಿರುವುದು ಯಾಕೆ?

ಚಿನ್ನದ ಬೆಲೆ ಇಳಿಯುತ್ತಿರುವುದು ಯಾಕೆ ಎಂದು ತಿಳಿಯುವ ಮೊದಲು ಅದರ ಬೆಲೆ ಏರಿದ್ದು ಯಾಕೆ ಎಂದು ತಿಳಿಯುವುದು ಮುಖ್ಯ. ಜಾಗತಿಕ ರಾಜಕೀಯ ಅನಿಶ್ಚಿತ ಪರಿಸ್ಥಿತಿಯಿಂದಾಗಿ ಬಹಳಷ್ಟು ಹೂಡಿಕೆದಾರರು ಗೋಲ್ಡ್ ಮತ್ತು ಸಿಲ್ವರ್ ಇಟಿಎಫ್​ಗಳಲ್ಲಿ ಹೂಡಿಕೆ ಮಾಡಿದ್ದರು. ಜೊತೆಗೆ, ವಿವಿಧ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿಗೆ ಮುಗಿಬಿದ್ದಿದ್ದವು. ಇವೆರಡು ಪ್ರಮುಖ ಕಾರಣಗಳು ಬಂಗಾರ ದುಬಾರಿಯಾಗಲು.

ಇನ್ನು, ಚಿನ್ನದ ಬೆಲೆ ಈಗ ಇಳಿಯಲೂ ಕೆಲ ಕಾರಣಗಳಿವೆ. ಗೋಲ್ಡ್ ಇಟಿಎಫ್​ಗಳಲ್ಲಿ ಹೂಡಿಕೆ ಮಾಡಿದ್ದವರು ಪ್ರಾಫಿಟ್ ಬುಕ್ ಮಾಡುತ್ತಿರುವುದು ಒಂದು ಕಾರಣ. ಹಾಗೆಯೇ, ರಷ್ಯಾ ದೇಶವು ಅಮೆರಿಕದ ಕೆಲ ಅಣತಿಗಳನ್ನು ಪಾಲಿಸಲು ಮನಸ್ಸು ಮಾಡಿದೆ. ರಷ್ಯಾ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಡಬಹುದು ಎನ್ನುವ ಸುದ್ದಿ ಇದೆ. ಇವು ಚಿನ್ನದ ಬೆಲೆ ಇಳಿಯಲು ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ: ಹೂಡಿಕೆಗಳು ಎತ್ತ..? ಕುಗ್ಗಿದ ಈಕ್ವಿಟಿ ಮ್ಯೂಚುವಲ್ ಫಂಡ್​ಗಳು; ಹಿಗ್ಗಿದ ಗೋಲ್ಡ್ ಇಟಿಎಫ್​ಗಳು

10,000 ರೂಗೆ ಇಳಿಯುತ್ತಾ ಚಿನ್ನದ ಬೆಲೆ?

ಡಾಲರ್​ಗಳಲ್ಲಿ ವಹಿವಾಟು ನಡೆಸಲು ಒಪ್ಪದಿದ್ದ ರಷ್ಯಾ ಇದೀಗ ತನ್ನ ನಿಲುವು ಬದಲಿಸಿದೆ. ತನ್ನಲ್ಲಿರುವ ಚಿನ್ನವನ್ನು ಮಾರಿ ಡಾಲರ್ ಕರೆನ್ಸಿಯನ್ನು ಖರೀದಿಸಲು ರಷ್ಯಾ ಮುಂದಾಗಬಹುದು ಎನ್ನುವ ಸುದ್ದಿ ಇದೆ. ಅಮೆರಿಕ ಮತ್ತು ರಷ್ಯಾ ನಡುವೆ ವ್ಯಾಪಾರ ಒಪ್ಪಂದ ಏರ್ಪಡುವ, ಮತ್ತು ರಷ್ಯಾ ಉಕ್ರೇನ್ ಯುದ್ಧ ಕೊನೆಗೊಳ್ಳುವ ಸಾಧ್ಯತೆ ಎಲ್ಲೋ ಕಾಣುತ್ತಿದೆ. ಇವೇನಾದರೂ ನಿಜವೇ ಆದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತೀವ್ರ ಕುಸಿತ ಕಾಣಬಹುದು. ಚಿನ್ನದ ಬೆಲೆ ಗ್ರಾಮ್​ಗೆ 10,000 ರೂಗೆ ಇಳಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೀನಿನ ವಾಸನೆ ತೊಡೆದು ಹಾಕಲು ಈ ಕ್ಲೀನಿಂಗ್‌ ಟಿಪ್ಸ್‌ ಫಾಲೋ ಮಾಡಿ – Kannada News | To prevent bad smell of fish, clean it using this method

ನಾನ್‌ ವೆಜ್‌ ಪ್ರಿಯರಿಗೆ ಅದರಲ್ಲೂ ಕರಾವಳಿ ಭಾಗದವರಿಗೆ ಸಮುದ್ರಾಹಾರವಾಗಿರುವ ಮೀನು (fish) ಅಂದ್ರೆ ಸಖತ್‌ ಇಷ್ಟ. ಮೀನು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಆರೋಗ್ಯಕರ. ಹೌದು ಮೀನು ಹೆಚ್ಚು ಪೌಷ್ಟಿಕಾಂಶದ ಗಣಿಯಾಗಿದ್ದು, ಇದು ಕಡಿಮೆ ಕೊಬ್ಬಿನಂಶವನ್ನು ಹೊಂದಿದೆ. ಅಲ್ಲದೆ ಇದರಲ್ಲಿ ವಿಟಮಿನ್‌ ಡಿ, ಒಮೆಗಾ-3 ಕೊಬ್ಬಿನಾಮ್ಲವಿದ್ದು ,  ಇದು ಹೃದಯದ ಆರೋಗ್ಯಕ್ಕೆ, ಸ್ಮರಣ ಶಕ್ತಿಯನ್ನು ಹೆಚ್ಚಿಸಲು, ಕೂದಲಿನ ಆರೋಗ್ಯ, ಕಣ್ಣುಗಳು ಮತ್ತು ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ.  ಅಲ್ಲದೆ ಇದಯ ಸಕ್ಕರೆ ಮತ್ತು ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಣದಲ್ಲಿಡುತ್ತದೆ, ಕ್ಯಾನ್ಸರ್‌ನಂತಹ ಮಾರಕ ಕಾಯಿಗಳನ್ನು ದೂರವಿಡುತ್ತದೆ. ಹೀಗೆ ಒಟ್ಟಾರೆ ಆರೋಗ್ಯಕ್ಕೆ ಮೀನು ತುಂಬಾ ಪ್ರಯೋಜನಕಾರಿ. ಆದರೆ ಮೀನು ವಾಸನೆ ಬರುತ್ತೆ ಅನ್ನೋ ಕಾರಣಕ್ಕೆ ಒಂದಷ್ಟು ಜನ ಇದನ್ನು ಸೇವನೆ ಮಾಡಲು ಹಿಂದೇಟು ಹಾಕುತ್ತಾರೆ. ಸರಿಯಾದ ರೀತಿಯಲ್ಲಿ ಮೀನು ತೊಳೆದರೆ, ಕ್ಲೀನ್‌ ಮಾಡಿದ ಮೇಲೂ ಮೀನು ಒಂದು ಚೂರು ವಾಸನೇ ಬರೋಲ್ಲ, ಅದಕ್ಕಾಗಿ ಮೀನು ತೊಳೆಯಲು ಈ ಟಿಪ್ಸ್‌ ಪಾಲಿಸಿ.

ಮೀನಿನ ವಾಸನೆಯನ್ನು ಹೋಗಲಾಡಿಸಲು ಈ ಟಿಪ್ಸ್‌ ಪಾಲಿಸಿ:

ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಮತ್ತು ಉಪ್ಪು: ಮೀನಿನ ವಾಸನೆಯನ್ನು ತೆಗೆದುಹಾಕಲು, ಮೀನು ಕ್ಲೀನ್‌ ಮಾಡಿದ ನಂತರ ಅದಕ್ಕೆ ಉಪ್ಪು ಮತ್ತು ಶುಂಠಿ ಪೇಸ್ಟ್‌ ಹಾಕಿ ಮಿಶ್ರಣ ಮಾಡಿ 5-10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಅದನ್ನು ಎರಡು ಮೂರು ಬಾರಿ ನೀರಿನಿಂದ ತೊಳೆಯಿರಿ. ಇದು ವಾಸನೆಯನ್ನು ಉಂಟುಮಾಡುವ ಸಂಯುಕ್ತಗಳನ್ನು ಹೋಗಲಾಡಿಸುತ್ತದೆ.

ಉಪ್ಪು ಮತ್ತು ಅರಶಿನ: ಮೀನನ್ನು ಕಟ್‌ ಮಾಡಿದ ನಂತರ ಉಪ್ಪು ಮತ್ತು ಅರಶಿನದಲ್ಲಿ ಮೀನನ್ನು ನೆನೆಸಿಡಿ. ಈ ಎರಡು ಪದಾರ್ಥಗಳೂ ನೈಸರ್ಗಿಕವಾಗಿ ಮೀನಿನಿಂದ ಸೂಕ್ಷ್ಮ ಜೀವಿಗಳು, ಬ್ಯಾಕ್ಟೀರಿಯಾ ಮತ್ತು ವಾಸನೆಯನ್ನು ತೆಗೆದುಹಾಕುತ್ತವೆ.

ಉಪ್ಪು ನೀರು: ಮೀನಿನ ವಾಸನೆ ಮತ್ತು ಜಿಡ್ಡಿನಾಂಶವನ್ನು ತೆಗೆದುಹಾಕಲು ಉಪ್ಪು ನೀರನ್ನು ಬಳಸಬಹುದು. ಇದಕ್ಕಾಗಿ ಮೊದಲು ಮೀನನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಒಂದು ಪಾತ್ರೆಗೆ ಉಪ್ಪು ನೀರನ್ನು ಹಾಕಿ ಅದರಲ್ಲಿ ಮೀನನ್ನು ಸೇರಿಸಿ, ಸ್ವಲ್ಪ ಸಮಯದವರೆಗೆ ಹಾಗೆಯೇ ಬಿಡಿ, ನಂಯರ ಶುದ್ಧ ನೀರಿನಿಂದ ಮೀನನ್ನು ಎರಡರಿಂದ ಮೂರು ಬಾರಿ ತೊಳೆದರೆ ಮೀನಿನ ವಾಸನೆ ಸಂಪೂರ್ಣವಾಗಿ ಮಾಯವಾಗುತ್ತದೆ.

ವಿನೆಗರ್:‌ ಉಪ್ಪು ನೀರಿನಲ್ಲಿ ಮೀನನ್ನು ಕ್ಲೀನ್‌ ಮಾಡುವಂತೆಯೇ ನೀರಿಗೆ ಸ್ವಲ್ಪ ವಿನೆಗರ್‌ ಸೇರಿಸಿ ಆ ನೀರಿನಲ್ಲಿ ಮೀನನ್ನು ಕ್ಲೀನ್‌ ಮಾಡಬಹುದು. ಇದು ಕೂಡ ಮೀನಿನ ವಾಸನೆಯನ್ನು ಹೋಗಲಾಡಿಸಲು ಸಹಕಾರಿ. ಇದಲ್ಲದೆ, ನಿಂಬೆ ರಸ ಅಥವಾ ವಿನೆಗರ್‌ನಲ್ಲಿ ಮೀನನ್ನು 10 ನಿಮಿಷಗಳ ಕಾಲ ನೆನೆಸಿಟ್ಟು ನಂತರ ಸ್ವಚ್ಛ ನೀರಿನಿಂದ ಮೀನನ್ನು ತೊಳೆಯಬಹುದು.

ಇದನ್ನೂ ಓದಿ: ನೊಣಗಳ ಕಾಟದಿಂದ ಮುಕ್ತಿ ಪಡೆಯಲು ಸಿಂಪಲ್‌ ಮನೆಮದ್ದುಗಳನ್ನು ಪ್ರಯತ್ನಿಸಿ

ಹಿಟ್ಟು ಮತ್ತು ನಿಂಬೆರಸ: ಕ್ಲೀನ್‌ ಮಾಡಿಟ್ಟ ಮೀನಿಗೆ ಎರಡು ಚಮಚ  ಕಾರ್ನ್‌ ಫ್ಲೋರ್, ಅರ್ಧ ನಿಂಬೆ ರಸ ಮತ್ತು ಒಂದು ಚಮಚ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮೀನಿಗೆ ಲೇಪಿಸಿ ಎರಡು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಎರಡರಿಂದ ಮೂರು ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಇದು ಮೀನಿನ ವಾಸನೆಯನ್ನು ಸಂಪೂರ್ಣವಾಗಿ ಹೋಗಲಾಡಿಸುತ್ತದೆ.

ಹಾಲು: ಮೀನನ್ನು 25 ರಿಂದ 30 ನಿಮಿಷಗಳ ಕಾಲ ಹಾಲಿನಲ್ಲಿ ನೆನೆಸಿಡುವುದರಿಂದಲೂ  ವಾಸನೆ ಹೋಗಲಾಡಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಕೆಲಸದ ನಡುವೆ ಬಿಡುವಿನ ಸಮಯವನ್ನು ಓದಿಗಾಗಿ ಬಳಸಿಕೊಂಡ ಮಹಿಳಾ ಬಸ್ ಕಂಡಕ್ಟರ್ – Kannada News | Woman bus conductor uses free time between work to study

ಕೆಲವರಿಗೆ ಓದಲು ಬೇಕಾದ ಎಲ್ಲಾ ಸವಲತ್ತುಗಳಿದ್ದರೂ ಆದರೆ ಓದುವ ಮನಸ್ಸಿರುವುದಿಲ್ಲ. ಇನ್ನು ಕೆಲವರು ಓದುವ ಮನಸ್ಸಿದ್ದರೂ ಸಣ್ಣ ವಯಸ್ಸಿನಲ್ಲಿ ಮನೆಯ ಜವಾಬ್ದಾರಿಗೆ ಹೆಗಲು ಕೊಟ್ಟು ಕೆಲಸಕ್ಕೆ ಹೋಗುತ್ತಾರೆ. ಆದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಮಾತ್ಇರ ಹಾಗೆಯೇ ಇರುತ್ತದೆ ಎನ್ನುವುದಕ್ಕೆ ಈ ಮಹಿಳಾ ಬಸ್ ಕಂಡಕ್ಟರ್ (Woman bus conductor) ಸಾಕ್ಷಿ.ಕರ್ತವ್ಯದ ನಡುವೆ ಅಧ್ಯಯನದಲ್ಲಿ ನಿರತರಾಗಿದ್ದ ಮಹಿಳಾ ಬಸ್ ಕಂಡಕ್ಟರ್‌ರನ್ನು ಪ್ರಯಾಣಿಕರೊಬ್ಬರು (passenger) ಗಮನಿಸಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ತಮಗಾದ ಈ ವಿಶೇಷ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

Singfromuniverse ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವರ್ಷಿಣಿ ಎಂಬವರು ವಿಡಿಯೋ ಹಂಚಿಕೊಂಡು ತಮಗಾದ ವಿಶಿಷ್ಟ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಅವಳು ಎಲ್ಲವನ್ನೂ ಆಯ್ಕೆ ಮಾಡಲು ಸಾಧ್ಯವಾದರೆ ಅವಳು ಎಂದಿಗೂ ನಿಲ್ಲುವುದಿಲ್ಲ ಎಂಬ ಸಂಕೇತ. ನಾನು ಆಫೀಸಿನಿಂದ ಬರುವಾಗ ತುಂಬಾ ಸುಸ್ತಾಗಿದ್ದೆ. ಆದರೆ ಬಸ್ಸಿನಲ್ಲಿ ಮಹಿಳಾ ಕಂಡಕ್ಟರ್ ಓದುವುದನ್ನು ನೋಡಿದೆ. ಕಾರಣಗಳನ್ನು ನೀಡುವ ಮೂಲಕ ಅವಳು ಯಾವುದನ್ನು ಬಿಟ್ಟುಕೊಡಲಿಲ್ಲ. ಆಕೆಯೂ ಆಯ್ಕೆ ಮಾಡಿಕೊಂಡಿದ್ದನ್ನು ನೋಡಿ ನನಗೆ ನಿಜವಾಗಿಯೂ ಸ್ಫೂರ್ತಿ ಸಿಕ್ಕಿತು. ನಾನು ಅವಳ ಗೌಪ್ಯತೆಯನ್ನು ಗೌರವಿಸುತ್ತೇನೆ. ಅವಳ ಮುಖವನ್ನು ತೋರಿಸಿಲ್ಲ, ಇದನ್ನು ಪೋಸ್ಟ್ ಮಾಡುವ ನನ್ನ ಉದ್ದೇಶವು ನಾನು ಸ್ಫೂರ್ತಿ ಪಡೆದಂತೆಯೇ ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುವುದೆಂದು ಎಂದು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್‌ನಲ್ಲಿ ಮಹಿಳಾ ಬಸ್ ಕಂಡಕ್ಟರ್ ತಮ್ಮ ಕೆಲಸದ ನಡುವೆ ಸಿಗುವ ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದರಲ್ಲಿ ಮುಳುಗಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ನಿಲುಗಡೆಗಳು ಹಾಗೂ ಜವಾಬ್ದಾರಿಗಳ ನಡುವೆ, ಅವಳು ಇನ್ನೂ ತನ್ನ ಕನಸುಗಳನ್ನು ಆರಿಸಿಕೊಳ್ಳುತ್ತಾಳೆ ಎಂದು ಬರೆಯಲಾಗಿದೆ.

ಇದನ್ನೂ ಓದಿ: ರಸ್ತೆಯಲ್ಲಿ ಬಿದ್ದಿದ್ದ ಗುಬ್ಬಚ್ಚಿಗೆ ನೀರು ಕುಡಿಸಿ ಬಾಯಾರಿಕೆ ನೀಗಿಸಿದ ಕರ್ತವ್ಯ ನಿರತ ಪೊಲೀಸ್

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಸಮರ್ಪಣೆ ಅಂದ್ರೆ ಇದುವೇ ಎಂದಿದ್ದಾರೆ. ಇನ್ನೊಬ್ಬರು, ಪ್ರತಿ ಬಿಡುವಿನ ನಿಮಿಷವನ್ನು ಬಳಸಿಕೊಂಡಿದ್ದಕ್ಕಾಗಿ ಅವರಿಗೆ ನನ್ನದೊಂದು ಸಲಾಂ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂದಿನ ಯುವಕ ಯುವತಿಯರಿಗೆ ಸ್ಫೂರ್ತಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ಹಸಿರು ಹೈಡ್ರೋಜನ್ ಬೆಲೆ ದಾಖಲೆಯ ಮಟ್ಟಕ್ಕೆ ಇಳಿಕೆ; ಮುಂಬೈನಲ್ಲಿ ಪ್ರಲ್ಹಾದ್ ಜೋಶಿ ಹೇಳಿಕೆ – Kannada News | Union Minister Pralhad Joshi Addressed at the Mumbai Climate Week

ಮುಂಬೈ, ಫೆಬ್ರವರಿ 17: ಭಾರತದಲ್ಲಿ ಹಸಿರು ಹೈಡ್ರೋಜನ್ ಬೆಲೆ ಐತಿಹಾಸಿಕ ಮಟ್ಟಕ್ಕೆ ಇಳಿಕೆ ಕಂಡಿದೆ. 279 ರೂ. ದರದೊಂದಿಗೆ ಭಾರತ ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ಹೊಸ ಜಾಗತಿಕ ಮಾನದಂಡ ಸ್ಥಾಪಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಘೋಷಿಸಿದ್ದಾರೆ.

ಮುಂಬೈಯಲ್ಲಿ ಇಂದು ಆಯೋಜಿಸಿದ್ದ “ಹವಾಮಾನ ಸಪ್ತಾಹ 2026” ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಹಸಿರು ಹೈಡ್ರೋಜನ್ ಬೆಲೆ ಪ್ರತಿ ಕೆಜಿಗೆ 279 ರೂ. ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದಿದ್ದಾರೆ.

ಸೂರ್ಯಘರ್ ಯೋಜನೆಯಡಿ ಭಾರತ ಪ್ರಸ್ತುತ 30 ಲಕ್ಷ ಮನೆಗಳಿಗೆ ಸೌರ ವಿದ್ಯುತ್ ಕಲ್ಪಿಸುವ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಮನೆಗಳಿಗೆ ಸೌರ ಮೇಲ್ಛಾವಣಿ ಮೂಲಕ ಉಚಿತ ವಿದ್ಯುತ್ ಕಲ್ಪಿಸಿದೆ. ಜಾಗತಿಕ ಹವಾಮಾನ ಸುಸ್ಥಿರತೆಯಲ್ಲಿ ಭಾರತ ಪ್ರಬಲ ಇಂಜಿನ್ ಆಗಿ ಕಾರ್ಯ ಸಾಧಿಸುತ್ತಿದ್ದು, ‘ಪಿಎಂ ಸೂರ್ಯಘರ್’ ಮತ್ತು ‘ಪಿಎಂ ಕುಸುಮ್’ ನಮ್ಮ ಸೌರ ಶಕ್ತಿಯ ಡಬಲ್ ಇಂಜಿನ್ ಆಗಿವೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ: ಮುಂದಿನ 25 ವರ್ಷಕ್ಕೆ ಭಾರತದ ಬೆಳವಣಿಗೆಗೆ ಬುನಾದಿ ಹಾಕಿದೆ ಈ ಬಜೆಟ್: ಸಚಿವ ಪ್ರಲ್ಹಾದ್ ಜೋಶಿ

ಪಿಎಂ ಕುಸುಮ್ ಮತ್ತು ಪಿಎಂ ಸೂರ್ಯಘರ್ ಅಳವಡಿಕೆ ಮೂಲಕ, ರೈತರು ಮತ್ತು ಸಾಮಾನ್ಯ ಕುಟುಂಬಗಳು ಸಹ ದೇಶದ ಶುದ್ಧ ಇಂಧನ ಪರಿವರ್ತನೆ ಪ್ರಯಾಣದಲ್ಲಿ ಸಕ್ರಿಯರಾಗುತ್ತಿದ್ದಾರೆಂದು ಪ್ರಲ್ಹಾದ್ ಜೋಶಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಭಾರತ ಇಂದು ಹವಾಮಾನದ ಕುರಿತಾದ ಜಾಗತಿಕ ಸಪ್ತಾಹ, ಸಮಾವೇಶ ಆಯೋಜಿಸುವ ಮಟ್ಟಕ್ಕೆ ಬೆಳೆದಿದೆ. ಮುಂಬೈಯಲ್ಲಿ ಆಯೋಜಿಸಿರುವ ಇದು ಮೊದಲ ಜಾಗತಿಕ ದಕ್ಷಿಣ ಸಮಾವೇಶವಾಗಿದೆ. ಇದಕ್ಕಾಗಿ ಮಹಾರಾಾಷ್ಟ್ರ ತಂಡವನ್ನು ಅಭಿನಂದಿಸುತ್ತೇನೆ. ಕರ್ನಾಟಕ ಮತ್ತು ಮಹಾರಾಷ್ಟ್ರ ವಿಶೇಷವಾಗಿ ಆರ್ಥಿಕತೆಯ ಚಾಲಕವಾಗಿವೆ. ಆರ್ಥಿಕತೆ ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ದೇಶವೇ ಅನುಸರಿಸುತ್ತದೆ. ಮುಂಬೈ ನಮ್ಮ ಆರ್ಥಿಕ ಚಟುವಟಿಕೆಯ ಪ್ರಮುಖ ಕೇಂದ್ರವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ, ಸಿದ್ದರಾಮಯ್ಯ ಡ್ರಾಮಾ ಬಿಟ್ಟು ವಾಸ್ತವತೆ ಒಪ್ಪಿಕೊಳ್ಳಲಿ; ಪ್ರಲ್ಹಾದ್ ಜೋಶಿ ತಿರುಗೇಟು

ದೊಡ್ಡ ದೇಶವಾಗಿದ್ದರೂ ಭಾರತ ಈ ಹಿಂದೆ ಹವಾಮಾನ ಸಪ್ತಾಹ, ಹವಾಮಾನ ಸಮಾವೇಶ ಅಥವಾ ಸುಸ್ಥಿರ ಸಮಾವೇಶದಂತಹ ಕಾರ್ಯಕ್ರಮ ಆಯೋಜಿಸಿರಲಿಲ್ಲ. ಆದರೀಗ ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಹವಾಮಾನ ಸುಸ್ಥಿರತೆಯಲ್ಲಿ ದೇಶದಲ್ಲೀಗ ಮಹತ್ತರ ಬದಲಾವಣೆ ಆಗುತ್ತಿದೆ ಎಂದು ಪ್ರಲ್ಹಾದ್ ಜೋಶಿ ಪ್ರತಿಪಾದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ, ನಾಯಕತ್ವದಲ್ಲಿ ಭಾರತ ಜಾಗತಿಕ ಹವಾಮಾನ ಸುಸ್ಥಿರತೆಯಲ್ಲಿ ನಿರ್ಣಾಯಕ ಹೆಜ್ಜೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಮಹಾರಾಷ್ಟ್ರದಲ್ಲಿ ಸೌರಶಕ್ತಿ ಒಂದು ಜನಾಂದೋಲನ ರೀತಿ ರೂಪಾಂತರಗೊಳ್ಳುತ್ತಿದೆ. ಪರಿಣಾಮ ಫಲಿತಾಂಶಗಳು ಗಮನಾರ್ಹವಾಗಿವೆ. ಮಹಾರಾಷ್ಟ್ರ ಇಂದು ಕೈಗಾರಿಕಾ ಮತ್ತು ಗೃಹಬಳಕೆ ವಿದ್ಯುತ್ ದರ ಅತ್ಯಂತ ಕಡಿಮೆ ಇರುವ ಭಾರತದ ಮೊದಲ ರಾಜ್ಯವಾಗಿ ನಿಂತಿದೆ. ಇದು ಭಾರತದ ಶುದ್ಧ ಇಂಧನ ಕ್ರಾಂತಿಗೆ ಸಾಕ್ಷಿಯಾಗಿದೆ ಎಂದು ಪ್ರಲ್ಹಾದ್ ಜೋಶಿ ಸಂತಸ ವ್ಯಕ್ತಪಡಿಸಿದರು.

ಈ ಹವಾಮಾನ ಸುಸ್ಥಿರತೆ ಸಮಾವೇಶದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಸಚಿವರು, ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆಗಾಗಿ ಕಾಯುತ್ತಿದ್ದ ಕೋಗಿಲು ನಿವಾಸಿಗಳಿಗೆ ಬಿಗ್ ಶಾಕ್: ಸಿಡಿದೆದ್ದ ಹೋರಾಟ ಸಮಿತಿ – Kannada News | Kogilu layout Slum Residents Union Protest Warns to Government For denied New House

ಬೆಂಗಳೂರು, (ಫೆಬ್ರವರಿ 17): ಕೋಗಿಲು ಲೇಔಟ್​​ (Kogilu layout) ನಿರಾಶ್ರಿತರು ಮನೆಗಾಗಿ ಕಾಯುತ್ತಿದ್ದರು. ಆದರೆ ಇದೀಗ ಮನೆ ಸಿಗುವುದು ಡೌಟ್​​ ಎನ್ನಲಾಗುತ್ತಿದೆ. ಯಾರಿಗೂ ಮನೆ ಕೊಡಕ್ಕೆ ಆಗಲ್ಲ ಅಂತ ಸಿಎಂ ಸಿದ್ದರಾಮಯ್ಯಗೆ ಅಧಿಕಾರಿಗಳು ತಿಳಿಸಿರುವ ಬಗ್ಗೆ ಮಾಹತಿ ಲಭ್ಯವಾಗಿದೆ. ಹೀಗಾಗಿ ಮನೆಗಾಗಿ ಕಾಯುತ್ತಿರುವ ಕೋಗಿಲು ಲೇಔಟ್​​ ನಿರಾಶ್ರಿತರಿಗೆ ಆಘಾತ ಎದುರಾಗಿದೆ. ಹೀಗಾಗಿ ಕೋಗಿಲು ಸ್ಲಂ ನಿವಾಸಿಗಳ ಹೋರಾಟ ಸಮಿತಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಕೋಗಿಲು ಸ್ಲಂ ನಿವಾಸಿಗಳ ಹೋರಾಟ ಸಮಿತಿ ಸಂಚಾಲಕಿ ಗೌರಮ್ಮ ಟಿವಿ9ಗೆ ಪ್ರತಿಕ್ರಿಯಿಸಿದ್ದು,
ಎಲ್ಲಾ ನಿರಾಶ್ರಿತರಿಗೆ ಮನೆ ಕೊಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಹೊಸ ವರ್ಷಕ್ಕೆ ಗಿಫ್ಟ್ ಕೊಡುತ್ತೇವೆ ಅಂತ ಭರವಸೆ ನೀಡಿತ್ತು. ವಿಪಕ್ಷಗಳು ಅಲ್ಲಿಗೆ ಹೋಗುವ ಸುಳ್ಳು ಆರೋಪ ಮಾಡಿದ್ದರು. ಕೊನೆಗೂ ಮೊದಲ ಹಂತದಲ್ಲಿ 26 ಕುಟುಂಬಗಳಿಗೆ ಮನೆ ಸಿಗುವ ಸಾಧ್ಯತೆ ಇತ್ತು . ಈಗ ಯಾರಿಗೂ ಮನೆ ಸಿಗಲ್ಲ, ಅರ್ಹರು ಯಾರೂ ಇಲ್ಲ ಎಂಬ ವದಂತಿ ಹರಿದಾಡುತ್ತಿದೆ.ನಾವು ಕೃಷ್ಣ ಬೈರೇಗೌಡ ಹಾಗೂ ಜಮೀರ್ ಅವರನ್ನು ಭೇಟಿ ಮಾಡಿದ್ದೆವು, ಆಗ ಸಕಾರಾತ್ಮಕವಾಗಿ ಸ್ಪಂದಿಸಿದರು. ಮನೆಗಳನ್ನು ಕೆಡವಿ ಎರಡು ತಿಂಗಳಾಗುತ್ತಾ ಬಂದರೂ ಯಾರಿಗೂ ಮನೆ ಸಿಕ್ಕಿಲ್ಲ.ಅಲ್ಲಿ ಯಾರೂ ಕೂಡ ಅಕ್ರಮ ವಾಸ ಮಾಡುತ್ತಿಲ್ಲ. ಪುನರ್ ವಸತಿ ಕೊಡೋದು ಸರ್ಕಾರದ ಜವಾಬ್ದಾರಿ . ಸರ್ಕಾರ ಕೊಟ್ಟ ಮಾತಿನಂತೆ ನಡೆಯದೆ ಹೋದರೆ ಹೋರಾಟ ಸಮಿತಿ ಸುಮ್ಮನೆ ಕೂರಲ್ಲ ಎಂದು ಎಚ್ಚರಿಕೆ ನೀಡಿದರು.

Source link

Samudrika Shastra: ನಿಮ್ಮ ಅಂಗೈಯಲ್ಲಿ ಈ ವಿಶೇಷ ರೇಖೆ ಇದೆಯೇ? ಹಾಗಿದ್ರೆ ಹಣಕ್ಕೆಂದೂ ಕೊರತೆಯಾಗದು! – Kannada News | Palmistry and Wealth: Decode Financial Success from Your Hand Lines

ಭಾರತೀಯ ಜ್ಯೋತಿಷ್ಯ ಪರಂಪರೆಯಲ್ಲಿ “ಹಸ್ತಸಾಮುದ್ರಿಕ ಶಾಸ್ತ್ರ” ಎಂದು ಕರೆಯಲ್ಪಡುವ ಈ ವಿದ್ಯೆ, ಕೈಯಲ್ಲಿನ ರೇಖೆಗಳು ಮತ್ತು ಚಿಹ್ನೆಗಳ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ಭಾಗ್ಯ ಮತ್ತು ಆರ್ಥಿಕ ಸ್ಥಿತಿಯನ್ನು ವಿವರಿಸುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈಯಲ್ಲಿನ ಮೂರು ಮುಖ್ಯ ರೇಖೆಗಳು ಆರ್ಥಿಕ ಪ್ರಗತಿಯೊಂದಿಗೆ ಸಂಬಂಧ ಹೊಂದಿವೆ .ಸೂರ್ಯ ರೇಖೆ, ವಿಧಿ ರೇಖೆ ಮತ್ತು ಸಂಪತ್ತಿಗೆ ಸಂಬಂಧಿಸಿದ ಕೆಲವು ವಿಶೇಷ ಚಿಹ್ನೆಗಳು.

ಆದರೆ ಮೊದಲು ಯಾವ ಕೈಯನ್ನು ನೋಡಬೇಕು? ಒಂದು ಮುಖ್ಯ ಪ್ರಶ್ನೆ ಮೂಡುತ್ತದೆ. ಶಾಸ್ತ್ರಗಳ ಪ್ರಕಾರ, ಬಲಗೈ ಸಾಮಾನ್ಯವಾಗಿ ವ್ಯಕ್ತಿಯ ಕರ್ಮ ಮತ್ತು ಪ್ರಸ್ತುತ ಜೀವನದ ಪ್ರತಿಬಿಂಬವಾಗಿದೆ (ಬಲಗೈಯರು ಇದ್ದಲ್ಲಿ). ಎಡಗೈ ಸಹಜ ಪ್ರವೃತ್ತಿ, ಜನ್ಮಸಿದ್ಧ ಗುಣಗಳು ಮತ್ತು ಒಳಗಿನ ಸಾಮರ್ಥ್ಯವನ್ನು ಸೂಚಿಸುತ್ತದೆ ಎಂದು ನಂಬಲಾಗುತ್ತದೆ. ಆದ್ದರಿಂದ ನಿಖರವಾದ ವಿಶ್ಲೇಷಣೆಗೆ ಎರಡೂ ಕೈಗಳನ್ನು ಒಟ್ಟಿಗೆ ಪರಿಶೀಲಿಸುವುದು ಉತ್ತಮವೆಂದು ಹೇಳಲಾಗುತ್ತದೆ.

ಸೂರ್ಯ ರೇಖೆ, ಇದನ್ನು ಅಪೊಲೊ ರೇಖೆ ಎಂದೂ ಕರೆಯಲಾಗುತ್ತದೆ, ಉಂಗುರದ ಬೆರಳಿನ ಕೆಳಭಾಗದ ಕಡೆಗೆ ನೇರವಾಗಿ ಏರಿರುವ ಲಂಬ ರೇಖೆಯಾಗಿರುತ್ತದೆ. ಈ ರೇಖೆ ಸ್ಪಷ್ಟವಾಗಿದ್ದು, ಮಧ್ಯದಲ್ಲಿ ಮುರಿದು ಹೋಗದೆ, ಗಾಢವಾಗಿ ಕಾಣಿಸಿಕೊಂಡಿದ್ದರೆ, ಅದನ್ನು ಗೌರವ, ಖ್ಯಾತಿ ಮತ್ತು ಆರ್ಥಿಕ ಸಮೃದ್ಧಿಯ ಸೂಚಕವೆಂದು ಪರಿಗಣಿಸಲಾಗುತ್ತದೆ. ಇಂತಹ ರೇಖೆಯುಳ್ಳವರು ತಮ್ಮ ಪ್ರತಿಭೆಯಿಂದ ಹೆಸರು ಮತ್ತು ಹಣ ಗಳಿಸುವ ಸಾಧ್ಯತೆ ಹೊಂದಿರುತ್ತಾರೆ ಎಂದು ಶಾಸ್ತ್ರಗಳು ಹೇಳುತ್ತವೆ.

ವಿಧಿ ರೇಖೆ ಸಾಮಾನ್ಯವಾಗಿ ಮಣಿಕಟ್ಟಿನ ಭಾಗದಿಂದ ಆರಂಭವಾಗಿ ಕೈಯ ಮಧ್ಯಭಾಗದ ಕಡೆಗೆ ಏರುತ್ತದೆ. ಈ ರೇಖೆ ಸ್ಪಷ್ಟವಾಗಿದ್ದರೆ, ಅದನ್ನು ವೃತ್ತಿಜೀವನದಲ್ಲಿ ಸ್ಥಿರತೆ, ಪ್ರಗತಿ ಮತ್ತು ಉನ್ನತ ಸ್ಥಾನಮಾನಗಳ ಸೂಚಕವೆಂದು ಕಾಣಲಾಗುತ್ತದೆ. ಕೆಲವೊಮ್ಮೆ ಈ ರೇಖೆ ಮಧ್ಯದಲ್ಲಿ ತುಂಡಾಗಿದ್ದರೆ ಅಥವಾ ದುರ್ಬಲವಾಗಿದ್ದರೆ, ಜೀವನದಲ್ಲಿ ಏರಿಳಿತಗಳು ಅಥವಾ ವೃತ್ತಿಯಲ್ಲಿ ಬದಲಾವಣೆಗಳ ಸಾಧ್ಯತೆಗಳಿವೆ ಎಂದು ವಿವರಿಸಲಾಗುತ್ತದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಅಂಗೈಯ ಕೆಳಭಾಗದಲ್ಲಿ ಹಲವಾರು ಸಮಾನಾಂತರ ಲಂಬ ರೇಖೆಗಳು ಕಂಡುಬಂದರೆ, ಹಸ್ತಸಾಮುದ್ರಿಕ ಶಾಸ್ತ್ರವು ಅದನ್ನು ಆದಾಯದ ಹಲವು ಮೂಲಗಳ ಸಂಕೇತವೆಂದು ವ್ಯಾಖ್ಯಾನಿಸುತ್ತದೆ. ಅಂದರೆ, ಒಂದೇ ವೃತ್ತಿಯಲ್ಲದೆ, ವಿವಿಧ ಮಾರ್ಗಗಳಿಂದ ಹಣ ಸಂಪಾದಿಸುವ ಅವಕಾಶಗಳು ದೊರಕಬಹುದು ಎಂಬ ಅರ್ಥ. ಆದರೆ ರೇಖೆಗಳು ತುಂಬಾ ಹಗುರವಾಗಿದ್ದರೆ, ಮುರಿದು ಹೋಗಿದ್ದರೆ ಅಥವಾ ಸ್ಪಷ್ಟತೆಯಿಲ್ಲದೆ ಇದ್ದರೆ, ಫಲಿತಾಂಶಗಳು ದುರ್ಬಲವಾಗಬಹುದು ಎಂದು ಹೇಳಲಾಗುತ್ತದೆ.

ಆದರೆ ಇಲ್ಲಿ ಒಂದು ಮುಖ್ಯ ಅಂಶವನ್ನು ಮರೆಯಬಾರದು. ಶಾಸ್ತ್ರಗಳ ಪ್ರಕಾರ “ಸಂಪತ್ತು” ಎಂದರೆ ಕೇವಲ ಹಣವಲ್ಲ, ಅದು ಗೌರವ, ಸ್ಥಾನಮಾನ, ಸೌಕರ್ಯ ಮತ್ತು ಸಾಮಾಜಿಕ ಮಾನ್ಯತೆಗಳನ್ನು ಕೂಡ ಒಳಗೊಂಡಿದೆ. ಕೈಯಲ್ಲಿನ ರೇಖೆಗಳು ಕೇವಲ ಸಾಧ್ಯತೆಯನ್ನು ಸೂಚಿಸುತ್ತವೆ. ಅವು ನಿಮ್ಮ ಒಳಗಿನ ಸಾಮರ್ಥ್ಯ ಮತ್ತು ಪ್ರವೃತ್ತಿಗಳ ಪ್ರತಿಬಿಂಬ ಮಾತ್ರ. ನಿಜವಾದ ಯಶಸ್ಸು ಮತ್ತು ಐಶ್ವರ್ಯವು ನಿಮ್ಮ ಕಠಿಣ ಪರಿಶ್ರಮ, ಸಮಯೋಚಿತ ನಿರ್ಧಾರಗಳು ಮತ್ತು ಧೈರ್ಯದ ಫಲವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಅಪಘಾತದಿಂದ ಯುವಕ-ಯುವತಿ ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಬಾರದ ಆಂಬುಲೆನ್ಸ್ – Kannada News | Vapasandra accident exposes emergency service failure public saves lives

ಚಿಕ್ಕಬಳ್ಳಾಪುರ, ಫೆ.17: ಜಿಲ್ಲೆಯ ವಾಪಸಂದ್ರ ಬಳಿ ಇಂದು (ಫೆ.17) ನಡೆದ ಭೀಕರ ರಸ್ತೆ ಅಪಘಾತವೊಂದು ತುರ್ತು ಸೇವೆಗಳ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಅಪಘಾತವಾಗಿ ಗಂಟೆ ಕಳೆದರೂ ಆಂಬುಲೆನ್ಸ್ ಮತ್ತು ಪೊಲೀಸರು ಸ್ಥಳಕ್ಕೆ ಬಂದಿಲ್ಲ. ಕೊನೆಗೆ ಸಾರ್ವಜನಿಕರೇ ಮಾನವೀಯತೆ ಮೆರೆದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.ಈಶಾ ಫೌಂಡೇಷನ್‌ನಿಂದ ಬೆಂಗಳೂರು ಕಡೆಗೆ ಕೆಎ 05 ಎಲ್‌ವಿ 9152 ಸಂಖ್ಯೆಯ ಬೈಕ್‌ನಲ್ಲಿ ಯುವಕ ಮತ್ತು ಯುವತಿ ತೆರಳುತ್ತಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೈಲುಗಲ್ಲಿಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಉರುಳಿ ಬಿದ್ದು ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದರು. ಅಪಘಾತವಾದ ಕೂಡಲೇ ಸ್ಥಳೀಯರು ಆಂಬುಲೆನ್ಸ್ ಮತ್ತು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಗಂಟೆ ಕಳೆದರೂ ಯಾವುದೇ ತುರ್ತು ವಾಹನ ಸ್ಥಳಕ್ಕೆ ಆಗಮಿಸಿಲ್ಲ. ಗಾಯಾಳುಗಳ ಸ್ಥಿತಿ ಗಂಭೀರವಾಗುತ್ತಿರುವುದನ್ನು ಕಂಡು ಸಾರ್ವಜನಿಕರೇ ಆಸ್ಪತ್ರೆಗೆ ಸೇರಿಸಿದ್ದಾರೆ. ನಂತರ ತುರ್ತು ಸೇವೆಗಳ ವೈಫಲ್ಯದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಇಬ್ಬರ ಸ್ಥಿತಿಯೂ ಗಂಭೀರವಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಸಕಾಲದಲ್ಲಿ ಬಾರದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​​ಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ – Kannada News | French President Emmanuel Macron meets PM Narendra Modi at Mumbai’s Lok Bhavan with a hug

ಮುಂಬೈ, ಫೆಬ್ರವರಿ 17: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) 3 ದಿನಗಳ ಭಾರತ ಭೇಟಿಯಲ್ಲಿದ್ದಾರೆ. ಸೋಮವಾರ ರಾತ್ರಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ್ ಬರಮಾಡಿಕೊಂಡರು. ಇಂದು ಪ್ರಧಾನಿ ಮೋದಿ ಮುಂಬೈನ ಲೋಕ ಭವನದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಅಪ್ಪುಗೆಯೊಂದಿಗೆ ಸ್ವಾಗತಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru: ಬಾಡಿಗೆ ಮನೆ ಹುಡುಕಲು ಹೋದಾಗ ಕಳ್ಳತನ ನಡೆಸಿ ಸಿಕ್ಕಿಬಿದ್ದ ಫೋಟೋಗ್ರಾಫರ್​​ – Kannada News | Bengaluru Photographer Arrested for 55 Lakh Gold Theft During Rental House Search

ಬೆಂಗಳೂರು, ಫೆಬ್ರವರಿ 17: ಬಾಡಿಗೆ ಮನೆ ಹುಡುಕಲು ಹೋದ ವ್ಯಕ್ತಿಯೊಬ್ಬ 55 ಲಕ್ಷ ಮೌಲ್ಯದ 348 ಗ್ರಾಂ ಚಿನ್ನಾಭರಣ ಕಳ್ಳತನ ನಡೆಸಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ವೃತ್ತಿಯಲ್ಲಿ ಫೋಟೋಗ್ರಾಫರ್​ ಆಗಿರುವ ವೈಟ್ ಫೀಲ್ಡ್ ನಿವಾಸಿ ಕಿರಣ್​​ ಬಂಧಿತ ಆರೋಪಿಯಾಗಿದ್ದು, ಮಲೆಮಹದೇಶ್ವರನ ದರ್ಶನ ಮಾಡಿ ಹಿಂದಿರುಗಿದ್ದ ಆರೋಪಿಯನ್ನು ಪೊಲೀಸರು ಲಾಕ್​​ ಮಾಡಿದ್ದಾರೆ. ಫೋಟೋ ಸ್ಟುಡಿಯೋ ನಡೆಸುತ್ತಿದ್ದ ಕಿರಣ್​, ಕೋವಿಡ್​​ ವೇಳೆ ನಷ್ಟ ಉಂಟಾದ ಕಾರಣ ಅದನ್ನು ಮುಚ್ಚಿದ್ದ. ಕ್ಯಾಮರಾ ಇದ್ದ ಕಾರಣ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ನಂಬಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ.

ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗೊಂಡನಹಳ್ಳಿಯಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದ ಕಿರಣ್, ಸಾಫ್ಟ್ ವೇರ್ ಎಂಜಿನಿಯರ್ ಜಗದೀಶ್​​ ಎಂಬವರ ಮನೆ ಬಳಿ ಮನೆ ಬಾಡಿಗೆಗೆ ಇದೆ ಎಂಬ ಬೋರ್ಡ್​​ ನೋಡಿದ್ದಾನೆ. ಈ ಹಿನ್ನೆಲೆ ವಿಚಾರಿಸಲೆಂದು ಮನೆ ಬಳಿ ಹೋದಾಗ ಶೂ ರ್ಯಾಕ್​​ನಲ್ಲಿ ಮನೆಯ ಬೀಗ ಆತನಿಗೆ ಕಂಡಿದೆ. ಅದನ್ನು ಬಳಸಿ ಮನೆಯ ಬಾಗಿಲು ಓಪನ್​​ ಮಾಡಿ ಒಳಗೆ ಹೋಗಿದ್ದ ಈತ, ಮನೆಯಲ್ಲಿದ್ದ ಚಿನ್ನಾಭರಣ ಕದ್ದಿದ್ದ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಳ್ಳತನ ನಡೆದಿರುವ ಬಗ್ಗೆ ಮನೆ ಮಾಲೀಕ ಜಗದೀಶ್​ ಪೊಲೀಸರಿಗೆ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿ ಆರೋಪಿಯನ್ನ ಖಾಕಿ ಪತ್ತೆ ಮಾಡಿದೆ.

ಇದನ್ನೂ ಓದಿ: ಪೊಲೀಸರ ಸೋಗಲ್ಲಿ ಉದ್ಯಮಿ ಮನೆಗೆ ನುಗ್ಗಿ 20 ಲಕ್ಷ ನಗದು, ಅರ್ಧ ಕೆಜಿ ಚಿನ್ನಾಭರಣ ದರೋಡೆ

ಕಳ್ಳತನ ನಡೆಸಿ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಆರೋಪಿ

ಬಾಡಿಗೆ ಮನೆ ಬಗ್ಗೆ ವಿಚಾರಿಸಲು ಹೋಗಿ ಕಳ್ಳತನ ನಡೆಸಿದ್ದ ಆರೋಪಿ ಕಿರಣ್​​ಗೆ ತಾನು ಮಾಡಿದ ಕೆಲಸದ ಬಗ್ಗೆ ಬಳಿಕ ಪಾಪಪ್ರಜ್ಞೆ ಕಾಡಿತ್ತು. ಹೀಗಾಗಿ ಆ ಬಳಿಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನವನ್ನು ಈತ ಮಾಡಿದ್ದ. ಅದಾಗಲೇ ಆರೋಪಿಯ ಜಾಡು ಪತ್ತೆ ಮಾಡಿದ್ದ ಪೊಲೀಸರು ಈತ ಮಲೆಮಹದೇಶ್ವರ ಬೆಟ್ಟದಿಂದ ಬರುತ್ತಿದ್ದಂತೆ ಖೆಡ್ಡಾಗೆ ಕಡೆವಿದ್ದಾರೆ. ಮಾಡಬಾರದ್ದನ್ನು ಮಾಡಲು ಹೋದ ಫೋಟೋಗ್ರಾಪರ್​​ ಈಗ ಖಾಕಿ ಕೈಲಿ ತಗಲಾಕಿಕೊಂಡಿದ್ದು, ಘಟನೆ ಬಗ್ಗೆ ಆರೋಪಿಯ ವಿಚಾರಣೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಟಿಯ ಅನುಮಾನಾಸ್ಪದ ಸಾವು: 23 ವರ್ಷಗಳ ಆರೋಪಿಗೆ ಶಿಕ್ಷೆ – Kannada News | Prathyusha death case: Court verdict after 23 years

‘ಸ್ನೇಹಮಂಟೆ ಇದೆರ’, ‘ರಾಯುಡು’, ‘ಕಲಸುಕೋವಾಲನಿ’ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳಲ್ಲಿ (Cinema) ಆಗಿನ ಸ್ಟಾರ್ ನಟರುಗಳ ಜೊತೆಗೆ ನಾಯಕಿಯಾಗಿ ನಟಿಸಿದ್ದ ನಟಿ ಪ್ರತ್ಯುಷ, ಸ್ಟಾರ್ ನಟಿಯಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ 2002ರ ಫೆಬ್ರವರಿ 22 ರಂದು ನಟಿ ಅನುಮಾನಾಸ್ಪದವಾಗಿ ನಿಧನ ಹೊಂದಿದರು. ಅವರ ಸಾವು ಆಗ ಅವಿಭಜಿತ ಆಂಧ್ರ ಪ್ರದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೀಗ 24 ವರ್ಷಗಳ ಬಳಿಕ ನಟಿಯ ಸಾವಿನ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದೆ. ಪ್ರತ್ಯುಷ ಸಾವಿನ ಪ್ರಕರಣದಲ್ಲಿ ನಟಿಯ ಗೆಳೆಯನಾಗಿದ್ದ ಸಿದ್ಧಾರ್ಥ್ ರೆಡ್ಡಿ ದೋಷಿ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದೆ.

ಸಾವಿಗೀಡಾಗಿರುವ ನಟಿ ಪ್ರತ್ಯುಷ ಹಾಗೂ ಈಗ ಶಿಕ್ಷೆಗೆ ಗುರಿಯಾಗಿರುವ ಸಿದ್ಧಾರ್ಥ್ ಪರಸ್ಪರ ಪ್ರೀತಿಸುತ್ತಿದ್ದು, ಇಬ್ಬರ ಮದುವೆಗೆ ಸಿದ್ಧಾರ್ಥ್ ರೆಡ್ಡಿ ಕುಟುಂಬದವರು ಒಪ್ಪಲಿಲ್ಲವೆಂದು ಇಬ್ಬರೂ ಸಹ ಕೂಲ್​​ಡ್ರಿಂಕ್ಸ್​​ನಲ್ಲಿ ವಿಷ ಬೆರೆಸಿ ಕುಡಿದಿದ್ದು, ಪ್ರತ್ಯುಷ ಸಾವಿಗೀಡಾದರೆ, ಸಿದ್ಧಾರ್ಥ್ ರೆಡ್ಡಿ ಬದುಕಿ ಉಳಿದಿದ್ದರು ಎನ್ನಲಾಗಿತ್ತು. ಆದರೆ ಇದನ್ನು ಒಪ್ಪದ ಪ್ರತ್ಯುಷ ತಾಯಿ ಸರೋಜಿನಿ ನ್ಯಾಯಾಲಯಗಳ ಮೂಲಕ ಸತತ ಹೋರಾಟ ಮಾಡಿ ಇದೀಗ ಕೊನೆಗೂ ಸಿದ್ಧಾರ್ಥ್​​ಗೆ ಶಿಕ್ಷೆ ಆಗುವಂತೆ ಮಾಡಿದ್ದಾರೆ.

ಪ್ರತ್ಯುಷ ತಾಯಿ ಹೇಳಿದ್ದಂತೆ, ಪ್ರತ್ಯುಷಗೆ ‘ಜಯಂ’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತಂತೆ. ಆ ಖುಷಿಯಲ್ಲಿದ್ದ ಪ್ರತ್ಯುಷ ಗೆಳತಿಯ ಜೊತೆಗೆ ಪಾರ್ಲರ್​​ಗೆ ಹೋಗಿದ್ದರಂತೆ. ಅಲ್ಲಿಗೆ ಬಂದ ಸಿದ್ಧಾರ್ಥ್ ರೆಡ್ಡಿ ಪ್ರತ್ಯುಷರನ್ನು ಕರೆದುಕೊಂಡು ಹೋಗಿದ್ದಾನೆ. ಆ ಬಳಿಕ ಗೆಳತಿ, ಪ್ರತ್ಯುಷಗೆ ಕರೆ ಮಾಡಿದ್ದಾಳೆ, ಆಗಲೂ ಸಹ ಪ್ರತ್ಯುಷ ಕೆಲವೇ ನಿಮಿಷಗಳಲ್ಲಿ ಬರುವುದಾಗಿ ಹೇಳಿದ್ದಾರೆ. ಆದರೆ ಅದಾದ ಕೆಲವೇ ನಿಮಿಷಗಳ ಬಳಿಕ ಪ್ರತ್ಯುಷಳನ್ನು ಸ್ವತಃ ಸಿದ್ಧಾರ್ಥ್ ಆಸ್ಪತ್ರೆಗೆ ದಾಖಲಿಸಿದ್ದ. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.

ಇದನ್ನೂ ಓದಿ:ಒಟ್ಟೊಟ್ಟಿಗೆ ಐದು ಸಿನಿಮಾ ಹಿಡಿದು ಬಂದ ರಕ್ಷಿತ್ ಶೆಟ್ಟಿ

ಸಿದ್ಧಾರ್ಥ್ ನೀಡಿರುವ ಹೇಳಿಕೆಯಂತೆ ಇಬ್ಬರೂ ಸಹ ಕೂಲ್​​ಡ್ರಿಂಕ್ಸ್​​ನಲ್ಲಿ ವಿಷ ಬೆರೆಸಿ ಕುಡಿದಿದ್ದರು. ಆದರೆ ಪ್ರತ್ಯುಷ ಅಲ್ಲಿಯೇ ನಿಧನ ಹೊಂದಿದರು. ಸಿದ್ಧಾರ್ಥ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬದುಕುಳಿದಿದ್ದರು. ಈ ಹಿಂದೆಯೇ ಮೆಟ್ರೊಪಾಲಿಟಿನ್ ಕೋರ್ಟ್, ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಸಿದ್ಧಾರ್ಥ್​​ಗೆ ಐದು ವರ್ಷಗಳ ಸಜೆ ನೀಡಿತ್ತು. ಅದಾದ ಬಳಿಕ ಸಿದ್ಧಾರ್ಥ್ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದರು. ಅಲ್ಲಿ ಆತನಿಗೆ ಎರಡು ವರ್ಷಗಳ ಸಾದಾ ಸಜೆ ವಿಧಿಸಲಾಯ್ತು. ಬಳಿಕ ಪ್ರತ್ಯುಷ ತಾಯಿ ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಹಲವು ವರ್ಷಗಳ ವಿಚಾರಣೆ ಬಳಿಕ ಇದೀಗ ತೀರ್ಪು ಹೊರಬಿದ್ದಿದೆ.

ಪ್ರಕರಣದಲ್ಲಿ ಸಿದ್ಧಾರ್ಥ್ ಅನ್ನು ಆತ್ಮಹತ್ಯೆಗೆ ಪ್ರಚೋದನೆ, ಆತ್ಮಹತ್ಯೆಗೆ ಸಹಾಯ ಮಾಡಿದ ಆರೋಪಗಳಿಗೆ ಸುಪ್ರೀಂಕೋರ್ಟ್ ದೋಷಿ ಎಂದು ಪರಿಗಣಿಸಿದ್ದು, ಸಿದ್ಧಾರ್ಥ್ ರೆಡ್ಡಿ ಇನ್ನು ನಾಲ್ಕು ವಾರಗಳಲ್ಲಿ ಪೊಲೀಸರಿಗೆ ಶರಣಾಗಬೇಕು ಎಂದಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಇನ್ನೂ ಪ್ರಕಟಿಸಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:12 pm, Tue, 17 February 26

Source link