All posts by nagaraj11081993

ಮಕ್ಕಳ ಮುದ್ದಾದ ಪ್ರಶ್ನೆಗೆ ಗಿಲ್ಲಿಯ ತಮಾಷೆಯ ಉತ್ತರ: ವಿಡಿಯೋ – Kannada News | Bigg Boss Kannada Winner Gilli Nata attended a school function

ಬಿಗ್​​ಬಾಸ್ (Bigg Boss) ವಿನ್ನರ್ ಆದ ಬಳಿಕ ಗಿಲ್ಲಿ ನಟ ಅವರಿಗೆ ಬಿಡುವೇ ಇಲ್ಲದಾಗಿದೆ. ರಾಜ್ಯದಾದ್ಯಂತ ಸಂಚರಿಸುತ್ತಿರುವ ಗಿಲ್ಲಿ ವಿವಿಧ ಕಾರ್ಯಕ್ರಮಗಳು, ಉತ್ಸವಗಳಿಗೆ ಅತಿಥಿಯಾಗಿ ಹಾಜರಾಗುತ್ತಿದ್ದಾರೆ. ಇತ್ತೀಚೆಗಷ್ಟೆ ಗಿಲ್ಲಿ ಶಾಲಾ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಸಹ ಹೋಗಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಗಿಲ್ಲಿ ನಟ ತಮ್ಮ ಮಾತುಗಳಿಂದ ನೆರೆದಿದ್ದವರನ್ನು ರಂಜಿಸಿದರು. ಇದೇ ವೇಳೆ ಕೆಲವು ಪುಟ್ಟ ಮಕ್ಕಳು ಗಿಲ್ಲಿಗೆ ಕೆಲವು ಪ್ರಶ್ನೆಗಳನ್ನು ಸಹ ಕೇಳಿದರು. ಗಿಲ್ಲಿ ಕೊಟ್ಟ ಉತ್ತರ ಏನು? ವಿಡಿಯೋ ನೋಡಿ ನೀವೇ ತಿಳಿಯಿರಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಮನಗರದ ಬಿಡದಿ ಬಳಿ ಹಳಿತಪ್ಪಿದ ಗೂಡ್ಸ್​​ ರೈಲು, ತಪ್ಪಿದ ಭಾರಿ ದುರಂತ – Kannada News | Goods Train Derails Near Bidadi in Ramanagara; Bengaluru–Mysuru Train Services Affected

ರಾಮನಗರ, ಫೆಬ್ರವರಿ 17: ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬಿಡದಿ ಬಳಿ ನಡೆದಿದೆ. ವಾಹನ ಸಾಗಿಸುತ್ತಿದ್ದ ಗೂಡ್ಸ್ ರೈಲಿನ 1 ಬೋಗಿ ಹಳಿ ತಪ್ಪಿದ್ದು, ಕೆಲ ಕಿಲೋ ಮೀಟರ್‌ವರೆಗೂ ಹಳಿ ಬಿಟ್ಟು ರೈಲು ಚಲಿಸಿದೆ. ಬಿಡದಿ ರೈಲ್ವೆ ನಿಲ್ದಾಣ ದಾಟಿದ ಬಳಿಕ ಘಟನೆ ನಡೆದಿದ್ದು, ಬೆಂಗಳೂರು-ಮೈಸೂರು ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆಸ್ಟ್ರೇಲಿಯಾಕ್ಕೆ ಬಿಗ್​​​ ಶಾಕ್: ಸೂಪರ್ 8ಕ್ಕೆ ಏರಿದ ಜಿಂಬಾಬ್ವೆ – Kannada News | Australia OUT! T20 World Cup 2026 Super 8 Sees Zimbabwe Qualify After Rain Washout

ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರಲ್ಲಿ (ICC T20 World Cup 2026) ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದು, ಇದೀಗ ಆಸ್ಟ್ರೇಲಿಯಾ ತಂಡವು ಟೂರ್ನಿಯಿಂದ ಹೊರಬಿದ್ದಿದೆ. ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯವು ಸತತ ಮಳೆಯಿಂದಾಗಿ ರದ್ದಾಗಿದೆ. ಪಂದ್ಯ ರದ್ದಾದ ಕಾರಣ ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು. ಇದರಿಂದ ಜಿಂಬಾಬ್ವೆ ಒಟ್ಟು 5 ಅಂಕಗಳನ್ನು ಗಳಿಸಿ ‘ಬಿ’ ಗುಂಪಿನಿಂದ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದೆ.

ಆಸ್ಟ್ರೇಲಿಯಾ ತಂಡವು ಈ ಬಾರಿಯ ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದು, . ಆಸ್ಟ್ರೇಲಿಯಾ ಸದ್ಯ 3 ಪಂದ್ಯಗಳಿಂದ ಕೇವಲ 2 ಅಂಕಗಳನ್ನು ಹೊಂದಿದ್ದು, ಮುಂದಿನ ಓಮನ್ ವಿರುದ್ಧದ ಪಂದ್ಯ ಗೆದ್ದರೂ ಗರಿಷ್ಠ 4 ಅಂಕಗಳನ್ನು ಮಾತ್ರ ಪಡೆಯಲು ಸಾಧ್ಯ. ಜಿಂಬಾಬ್ವೆ ಈಗಾಗಲೇ 5 ಅಂಕ ತಲುಪಿರುವುದರಿಂದ ಆಸ್ಟ್ರೇಲಿಯಾಕ್ಕೆ ಅವಕಾಶ ಇರುವುದಿಲ್ಲ. ಶ್ರೀಲಂಕಾ ಈಗಾಗಲೇ ಸೂಪರ್ 8ಕ್ಕೆ ಅರ್ಹತೆ ಪಡೆದಿದೆ. ಜಿಂಬಾಬ್ವೆ 5 ಅಂಕಗಳೊಂದಿಗೆ ಸೂಪರ್ 8ಕ್ಕೆ ಅರ್ಹತೆ ಪಡೆದಿದೆ. ಆಸ್ಟ್ರೇಲಿಯಾ 2 ಅಂಕ ಪಡೆದಿರುವ ಕಾರಣ ಟೂರ್ನಿಯಿಂದ ಹೊರಕ್ಕೆ ಹೋಗಿದೆ. ಐರ್ಲೆಂಡ್ ಕೂಡ 2 ಅಂಕ ಪಡೆದಿರುವ ಕಾರಣ ಅದು ಟೂರ್ನಿಯಿಂದ ಹೊರಕ್ಕೆ.

ಈ ಫಲಿತಾಂಶವು ಕ್ರಿಕೆಟ್ ಲೋಕದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ನೆಚ್ಚಿನ ತಂಡವಾಗಿದ್ದ ಆಸ್ಟ್ರೇಲಿಯಾ ಹೊರಕ್ಕೆ ಹೋಗುವ ಕಾರಣ ಅಭಿಮಾನಿಗಳಿಗೆ ಆಘಾತ ತಂದಿದೆ. ಜಿಂಬಾಬ್ವೆ ತಂಡವು ಮುಂದಿನ ಹಂತದಲ್ಲಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಎದುರಿಸಲಿದೆ.

ಇದನ್ನೂ ಓದಿ: ದೃಷ್ಟಿ ಕಳೆದುಕೊಂಡ ಇಮ್ರಾನ್ ಖಾನ್: ಸೂಕ್ತ ಚಿಕಿತ್ಸೆ ನೀಡುವಂತೆ ಪಾಕ್ ಸರ್ಕಾರಕ್ಕೆ ಕಪಿಲ್ ದೇವ್, ಸುನಿಲ್ ಗವಾಸ್ಕರ್ ಮನವಿ

ಸೂಪರ್ 8 ಹಂತದಲ್ಲಿ ಭಾರತ ಮತ್ತು ಜಿಂಬಾಬ್ವೆ

ಟಿ20 ವಿಶ್ವಕಪ್ 2026ರ ಸೂಪರ್ 8 ಹಂತದಲ್ಲಿ ಭಾರತ ಮತ್ತು ಜಿಂಬಾಬ್ವೆ ಮುಖಾಮುಖಿಯಾಗುವುದು ಈಗ ಬಹುತೇಕ ಖಚಿತವಾಗಿದೆ. ಆಸ್ಟ್ರೇಲಿಯಾ ತಂಡ ಹೊರ ಹೋಗಿರುವ ಕಾರಣ ಈ ಸ್ಥಾನವನ್ನು ಜಿಂಬಾಬ್ವೆ ತುಂಬಾಲಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:26 pm, Tue, 17 February 26

Source link

ಈ ಊರಲ್ಲಿ ದೇವಿ‌ ಜಾತ್ರೆ ಮಾಡಬೇಕಂದ್ರೆ ಜನ ಐದು ದಿನ ಮನೆ ಖಾಲಿಮಾಡಬೇಕು!: ಕಾರಣ ಇಲ್ಲಿದೆ – Kannada News | Villagers Vacate Homes for 5 Days During Unique Gramadevi Fair in Kalaghatagi, Dharwad

ಮನೆಗಳಿಗೆ ಬೀಗ, ಊರಿಗೆ ಊರೇ ಖಾಲಿ ಖಾಲಿImage Credit source: Tv9 Kannada

ಹುಬ್ಬಳ್ಳಿ, ಫೆಬ್ರವರಿ 17: ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಎಲ್ಲಿ ನೋಡಿದ್ರೂ ಜನರು ಹೆಂಡತಿ ಮಕ್ಕಳನ್ನು ಕರೆದುಕೊಂಡು ಮನೆ ತೊರೆಯುತ್ತಿರುವ ದೃಶ್ಯಗಳು ಕಂಡು ಬರ್ತಿವೆ. ಅಷ್ಟಕ್ಕೂ ಊರಿಗೇನು ಯಾವುದೇ ಸಾಂಕ್ರಾಮಿಕ ರೋಗ ಲಗ್ಗೆ ಇಟ್ಟಿಲ್ಲ. ಹೀಗಿದ್ರೂ ಪಟ್ಟಣಕ್ಕೆ ಪಟ್ಟಣವೇ ಬಂದ್​​ ಆಗಿದೆ. ಇದಕ್ಕೆ ಕಾರಣ ದೇವಿಯ ಜಾತ್ರೆ. ಹೌದು, ದೇವಿ ಜಾತ್ರೆ ನಡೆಯಬೇಕಾದ್ರೆ ಐದು ದಿನ ಜನರು ಮನೆ ಖಾಲಿ ಮಾಡಬೇಕು. ಹಿಂದೂಗಳು ಮಾತ್ರವಲ್ಲದೆ ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಸರ್ವ ಧರ್ಮದವರು ಇಂತಹದೊಂದು ಆಚರಣೆಯನ್ನು ಪಾಲನೆ ಮಾಡಬೇಕು.

ಕಲಘಟಗಿಯ ಗ್ರಾಮದೇವಿ ಜಾತ್ರೆ ಉತ್ತರ ಕರ್ನಾಟಕದ ಅತಿದೊಡ್ಡ ಜಾತ್ರೆಗಳಲ್ಲಿ ಒಂದು. ರಾಜ್ಯ ಮತ್ತು ಹೊರರಾಜ್ಯಗಳಿಂದ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ ಮತ್ತು ಜಾತ್ರೆಯ ವೈಭವಕ್ಕೆ ಸಾಕ್ಷಿಯಾಗುತ್ತಾರೆ. ಮೂರು ವರ್ಷಗಳಿಗೊಮ್ಮೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಗ್ರಾಮದೇವಿಯ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತೆ. ಈ ಬಾರಿ ಇದೇ ಫೆಬ್ರವರಿ 25ರಿಂದ ಜಾತ್ರೆ ಆರಂಭವಾಗಲಿದೆ. ಜಾತ್ರೆ ಹಿನ್ನೆಲೆ ಕಲಘಟಗಿ ಸೇರಿದಂತೆ ಸುತ್ತಲಿನ ಐದು ಹಳ್ಳಿಗಳ ಜನರು ವಿಶಿಷ್ಟವಾದ ಪದ್ಧತಿಯನ್ನು ಆಚರಿಸುತ್ತಾರೆ. ಸಾವಿರಾರು ಜನರು ಕುಟುಂಬ ಸಮೇತ ತಮ್ಮ ಮನೆಗಳಿಗೆ ಬೀಗ ಹಾಕಿ ಪಟ್ಟಣದಿಂದ ಹೊರ ಹೋಗುತ್ತಾರೆ. ಕಲಘಟಗಿ, ದಾಸ್ತಿಕೊಪ್ಪ ಕಲಕುಂಡಿ, ಬೆಂಡಿಗೇರಿ, ಮಾಚಾಪುರ ಗ್ರಾಮಗಳಲ್ಲಿ ಹೊರವಾರ ಪದ್ಧತಿಯನ್ನು ಆಚರಿಸುತ್ತಾರೆ. ಈ ಐದು ಹಳ್ಳಿಗಳಲ್ಲಿ ಬರುವ ಯುಗಾದಿಯವರೆಗೆ ಮದುವೆ, ನಿಶ್ಚಿತಾರ್ಥ, ನಾಮಕರಣ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನೂ ಮಾಡುವುದಿಲ್ಲ. ಈ ವರ್ಷದ ಹೋಳಿ ಹುಣ್ಣಿಮೆಯಂದು ಬಣ್ಣದೋಕುಳಿಯನ್ನು ಸಹ ಆಚರಿಸುವುದಿಲ್ಲ. ಜನರು ಮೂರು ಮಂಗಳವಾರ, ಎರಡು ಶುಕ್ರವಾರ ಸೇರಿ ಐದು ದಿನಗಳ ಕಾಲ ಮನೆಗಳನ್ನು ಖಾಲಿ ಮಾಡುತ್ತಾರೆ. ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ಮನೆಯಿಂದ ದೂರವಿರುತ್ತಾರೆ. ಜಾತ್ರೆಗೆ ಮೊದಲು ಐದು ವಾರಗಳ ಆಚರಣೆ ನಡೆಯುತ್ತೆ.

ಇದನ್ನೂ ಓದಿ: ಹುಬ್ಬಳ್ಳಿಯ ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ; ಎತ್ತ ನೋಡಿದ್ರೂ ಜನವೋ ಜನ

ಇನ್ನು ಮನೆ ಬಿಟ್ಟು ತೆರಳುವ ಜನರು ಉದ್ಯಾನ, ಗದ್ದೆಗಳಲ್ಲಿ ಮತ್ತು ಪಟ್ಟಣದ ಹೊರಗಿನ ಮರಗಳ ಕೆಳಗೆ ದಿನ ಕಳೆಯುತ್ತಾರೆ. ಆಹಾರದ ಬುತ್ತಿಗಳನ್ನು ಕಟ್ಟಿಕೊಂಡು ಹೋಗಿ ಒಟ್ಟಾಗಿ ಊಟ ಮಾಡುತ್ತಾರೆ. ಈ ಐದು ದಿನ ಅಂಗಡಿ- ಮುಂಗಟ್ಟು ಮುಚ್ಚಿರುತ್ತೆ. ವ್ಯಾಪಾರ ವಹಿವಾಟುಗಳು ಸ್ಥಗಿತವಾಗುತ್ತವೆ. ಗ್ರಾಮದೇವಿ ಈ ಸಂದರ್ಭದಲ್ಲಿ ಊರಲ್ಲಿ ಸಂಚರಿಸುತ್ತಾಳೆ. ಅವಳು ದುಷ್ಟ ಶಕ್ತಿಗಳನ್ನು ಕೊಲ್ಲುತ್ತಾಳೆ ಎಂಬುದು ಜನರ ನಂಬಿಕೆ. ಹೊರವಾರ ಆಚರಣೆ ಮಾಡೋ ದಿನದಲ್ಲಿ ಮುಂಜಾನೆ ಹತ್ತು ಗಂಟೆಗೆ ಮನೆಯ ಹೊರಗಡೆ ಒಂದು ಚೊಂಬು ನೀರು ತುಂಬಿ ಇಟ್ಟು ಬರೋ ಜನರು, ಸಂಜೆ ಮನೆಗೆ ಹೋಗಿ ನೀರನ್ನು ಪೂಜೆ ಮಾಡಿ ಮನೆಯೊಳಗೆ ಇಡ್ತಾರೆ. ಜಾತ್ರೆ ಸಮಯದಲ್ಲಿ ಒಟ್ಟು ಐದು ದಿನಗಳ ಕಾಲ ಇಂತಹದೊಂದು ಸಂಪ್ರದಾಯವನ್ನು ನೂರಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬರಲಾಗ್ತಿದೆ. ಹೊರವಾರದ ದಿನ ಮನೆಯಲ್ಲಿದ್ದರೆ ಕೆಡಕಾಗುತ್ತೆ ಅನ್ನೋ ನಂಬಿಕೆ ಜನರಲ್ಲಿದ್ದು, ಹೀಗಾಗಿ ಎಲ್ಲಾ ಧರ್ಮೀಯರು ಇಂತಹದೊಂದು ಆಚರಣೆಯನ್ನು ಕಟ್ಟುನಿಟ್ಟಾಗಿ ಮಾಡುತ್ತಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜೂ ಎನ್​​ಟಿಆರ್​ ಹಳೆ ಸಿನಿಮಾ ಸೀಕ್ವೆಲ್​​ಗೆ ಕತೆ ರೆಡಿ, ಆದರೆ ನಟಿಸುತ್ತಾರಾ ನಟ? – Kannada News | Adhurs 2 first half story is ready will Jr NTR accepted the movie

ಜೂ ಎನ್​​ಟಿಆರ್ (Jr NTR) ಈಗ ಪ್ಯಾನ್ ಇಂಡಿಯಾ ನಟ. ಮೊದಲಿನಿಂದಲೂ ಅವರಿಗೆ ಮಾಸ್ ಇಮೇಜಿದೆ. ಈಗಲೂ ಸಹ ಅವರು ಮಾಸ್, ಕಮರ್ಶಿಯನ್ ಸಿನಿಮಾಗಳಲ್ಲಿಯೇ ನಟಿಸುತ್ತಾರೆ, ಯಾವುದೇ ಹೆಚ್ಚಿನ ಪ್ರಯೋಗಕ್ಕೆ ಒಡ್ಡಿಕೊಳ್ಳುವುದಿಲ್ಲ. ಅವರು 2010ರಲ್ಲಿ ನಟಿಸಿದ್ದ ಹಿಟ್ ಸಿನಿಮಾ ‘ಅಧುರ್ಸ್’ ತುಸು ಭಿನ್ನವಾದ ಸಿನಿಮಾ ಆಗಿತ್ತು. ಸಿನಿಮಾನಲ್ಲಿ ಅಪ್ಪಟ ಹಾಸ್ಯ ಪಾತ್ರವೊಂದರಲ್ಲಿ ಜೂ ಎನ್​​ಟಿಆರ್ ನಟಿಸಿದ್ದರು. ಈಗ ಅದೇ ಸಿನಿಮಾದ ಸೀಕ್ವೆಲ್​​ನ ಕತೆಯನ್ನು ಕತೆಗಾರ ಕೋನ ವೆಂಕಟ್ ರೆಡಿ ಮಾಡಿದ್ದಾರೆ. ಆದರೆ ಜೂ ಎನ್​​ಟಿಆರ್ ನಟಿಸುತ್ತಾರಾ ಎಂಬುದೇ ಪ್ರಶ್ನೆ.

2010ರಲ್ಲಿ ಬಿಡುಗಡೆ ಆಗಿದ್ದ ‘ಅಧುರ್ಸ್’ ಸಿನಿಮಾನಲ್ಲಿ ಜೂ ಎನ್​​ಟಿಆರ್ ಬ್ರಾಹ್ಮಣ ಪೂಜಾರಿಯ ಪಾತ್ರದಲ್ಲಿ ನಟಿಸಿದ್ದರು. ಬ್ರಹ್ಮಾನಂದಂ ಶಿಷ್ಯನಾಗಿ ಸಖತ್ ಆಗಿ ನಟಿಸಿದ್ದರು. ತಮ್ಮ ಅದ್ಭುತ ಟೈಮಿಂಗ್, ಭಿನ್ನ ರೀತಿಯ ಹಾವ-ಭಾವ ತುಂಬಿದ ನಟನೆಯಿಂದ ಪ್ರೇಕ್ಷಕರನ್ನು ಭರಪೂರ ನಗಿಸಿದ್ದರು. ಸಿನಿಮಾನಲ್ಲಿ ಜೂ ಎನ್​​ಟಿಆರ್ ಅವರದ್ದು ದ್ವಿಪಾತ್ರವಾಗಿತ್ತು, ಒಂದು ಪಾತ್ರ ಹಾಸ್ಯಮಯ ಪಾತ್ರವಾಗಿದ್ದರೆ ಮತ್ತೊಂದು ಮಾಸ್ ಹೀರೋ ರೀತಿಯ ಪಾತ್ರ. ಎರಡನ್ನೂ ಅದ್ಭುತವಾಗಿ ಜೂ ಎನ್​​ಟಿಆರ್ ನಿಭಾಯಿಸಿದ್ದರು.

ಆ ಸಿನಿಮಾಕ್ಕೆ ಕೋನ ವೆಂಕಟ್ ಕತೆ, ಚಿತ್ರಕತೆ ಬರೆದಿದ್ದರು. ವಿವಿ ವಿನಾಯಕ್ ನಿರ್ದೇಶನ ಮಾಡಿದ್ದರು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಕೋನ ವೆಂಕಟ್, ‘ಅಧುರ್ಸ್ 2’ ಸಿನಿಮಾದ ಅರ್ಧ ಚಿತ್ರಕತೆ ಮುಗಿಸಿದ್ದೇನೆ. ಸಿನಿಮಾದ ಕತೆ ಪೂರ್ಣವಾದ ಬಳಿಕ ಜೂ ಎನ್​​ಟಿಆರ್​​ಗೆ ಕತೆ ಹೇಳುವಂತೆ ವಿವಿ ವಿನಾಯಕ್ ಹೇಳಿದ್ದಾರೆ ಎಂದು ಸಹ ಕೋನ ಹೇಳಿದ್ದಾರೆ. ಆದರೆ ಈಗ ಜೂ ಎನ್​​ಟಿಆರ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಮಾಸ್ ಅಪೀಲ್ ಇರುವ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಿದ್ದಾರೆ. ಈಗ ಅವರು ಹಾಸ್ಯ ಪಾತ್ರದಲ್ಲಿ ನಟಿಸುತ್ತಾರಾ ಎಂಬುದೇ ಪ್ರಶ್ನೆ.

ಇದನ್ನೂ ಓದಿ:ವಾರ್ 2 ಟ್ವಿಟ್ಟರ್ ವಿಮರ್ಶೆ: ಹೇಗಿದೆ ಜೂ ಎನ್​ಟಿಆರ್-ಹೃತಿಕ್ ರೋಷನ್ ಜುಗಲ್​ಬಂಧಿ

ಜೂ ಎನ್​ಟಿಆರ್ ಪ್ರಸ್ತುತ, ಪ್ರಶಾಂತ್ ನೀಲ್ ಜೊತೆಗೆ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಯಶ್ ರಾಜ್ ನಿರ್ಮಾಣದ ಹೊಸ ಹಿಂದಿ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ತ್ರಿವಿಕ್ರಮ್ ಸಹ ಕತೆಯೊಂದನ್ನು ಜೂ ಎನ್​​ಟಿಆರ್ ಅವರಿಗೆ ಹೇಳಿದ್ದು, ಆ ಸಿನಿಮಾನಲ್ಲಿಯೂ ಜೂ ಎನ್​​ಟಿಆರ್ ನಟಿಸಬೇಕಿದೆ. ಇವುಗಳ ನಡುವೆ ಹಾಸ್ಯ ಪ್ರಧಾನ ಸಿನಿಮಾವನ್ನು ಜೂ ಎನ್​​ಟಿಆರ್ ಒಪ್ಪಿಕೊಳ್ಳುತ್ತಾರಾ ಎಂಬ ಅನುಮಾನ ಇದೆ. ಅಲ್ಲದೆ, ಈಗ ಜಾತಿಗಳ ಬಗ್ಗೆ ಹೆಚ್ಚಿನ ಸೂಕ್ಷ್ಮತೆ ಇರುವ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ಹಾಸ್ಯ ಪಾತ್ರವನ್ನು ಜನ ಒಪ್ಪಿಕೊಳ್ಳುತ್ತಾರಾ ಎಂಬ ಪ್ರಶ್ನೆಯೂ ಇದೆ.

ಆದರೆ ಜೂ ಎನ್​​ಟಿಆರ್​​ಗೆ ‘ಅಧುರ್ಸ್’ ಸಿನಿಮಾ ಬಗ್ಗೆ ವಿಶೇಷ ಪ್ರೀತಿ ಇದೆ. ಜೂ ಎನ್​​ಟಿಆರ್ ಮಾತ್ರವಲ್ಲ, ಎಸ್​ಎಸ್ ರಾಜಮೌಳಿ ಅವರಿಗೂ ಸಹ ‘ಅಧುರ್ಸ್’ ಮೆಚ್ಚಿನ ಸಿನಿಮಾ, ‘ಅಧುರ್ಸ್’ ಸಿನಿಮಾಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಇದನ್ನೆಲ್ಲ ಪರಿಗಣಿಸಿ, ಜೂ ಎನ್​​ಟಿಆರ್ ‘ಅಧುರ್ಸ್ 2’ ಸಿನಿಮಾಕ್ಕೆ ಓಕೆ ಹೇಳಿದರೂ ಅಚ್ಚರಿ ಏನಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗ್ಲೋಯಿಂಗ್ ಸ್ಕಿನ್‌ ನಿಮ್ಮದಾಗಲು ತಪ್ಪದೇ ಈ ಆಹಾರಗಳನ್ನು ಸೇವನೆ ಮಾಡಿ – Kannada News | What foods should be consumed to increase skin radiance?

ಪ್ರತಿಯೊಬ್ಬರೂ  ತಮ್ಮ ತ್ವಚೆಯನ್ನು ಆರೋಗ್ಯಕರ ಮತ್ತು ಕಾಂತಿಯುತವಾಗಿಡಲು (glowing skin) ಬಯಸುತ್ತಾರೆ. ಇದಕ್ಕಾಗಿ ದುಬಾರಿ ಉತ್ಪನ್ನಗಳ ಮೊರೆ ಹೋಗ್ತಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ  ಕ್ರೀಮ್‌ಗಳು, ಔಷಧಿಗಳು ಮತ್ತು ಸೌಂದರ್ಯವರ್ಧಕಗಳು ಚರ್ಮಕ್ಕೆ ತಾತ್ಕಾಲಿಕ ಹೊಳಪನ್ನು ನೀಡಬಹುದು, ಆದರೆ ಇವು ಹೆಚ್ಚು ಪರಿಣಾಮಕಾರಿಯಲ್ಲ. ಹಾಗಾಗಿ ರಾಸಾಯನಿಕ ಉತ್ಪನ್ನಗಳ ಮೇಲೆ ಹೆಚ್ಚು ಅವಲಂಬಿತರಾಗುವ ಬದಲು, ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಜಲಸಂಚಯನದಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವ ಮೂಲಕ ತ್ವಚೆಯ ಕಾಂತಿ, ಆರೋಗ್ಯ ಎರಡನ್ನೂ ಹೆಚ್ಚಿಸಬಹುದು.

ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಯಾವ ಆಹಾರಗಳನ್ನು ಸೇವಿಸಬೇಕು?

ದುಬಾರಿ ಉತ್ಪನ್ನಗಳಿಗೆ ಖರ್ಚು ಮಾಡುವ ಬದಲು ಸರಿಯಾದ ಆಹಾರ ಕ್ರಮವನ್ನು ಪಾಲಿಸುವ ಮೂಲಕ ನಾವು ನಮ್ಮ ಚರ್ಮಕ್ಕೆ ಪ್ರತಿದಿನ ಸಾಕಷ್ಟು ಮತ್ತು ಸೂಕ್ತವಾದ ಪೋಷಣೆಯನ್ನು ಒದಗಿಸಬಹುದು.

ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳು: ವಿಟಮಿನ್ ಸಿ ಚರ್ಮಕ್ಕೆ ಅತ್ಯಂತ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳಲ್ಲಿ ಒಂದಾಗಿದೆ. ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ವರ್ಣದ್ರವ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ಬಿಸಿಲಿನ ಶಾಖದಿಂದ ರಕ್ಷಿಸುತ್ತದೆ. ಹಾಗಾಗಿ ನೀವು  ಕಿತ್ತಳೆ, ಕಿವಿ, ಪಪ್ಪಾಯಿ, ಸ್ಟ್ರಾಬೆರಿ ಮತ್ತು ಪೇರಳೆಯಂತಹ ವಿಟಮಿನ್‌ ಸಿ ಯಲ್ಲಿ ಸಮೃದ್ಧವಾಗಿರುವ ಹಣ್ಣುಗಳನ್ನು ಸೇವನೆ ಮಾಡಿ.

ಡ್ರೈಫ್ರೂಟ್ಸ್:‌ ಬಾದಾಮಿ, ವಾಲ್‌ನಟ್ಸ್, ಅಗಸೆ ಬೀಜಗಳು ಮತ್ತು ಚಿಯಾ ಬೀಜಗಳು ಚರ್ಮವನ್ನು ಮೃದುವಾಗಿಡಲು ಮತ್ತು ಶುಷ್ಕತೆಯನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿದೆ.  ಏಕೆಂದರೆ ಅವುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ಸಮೃದ್ಧವಾಗಿವೆ. ಹಾಗಾಗಿ ಅಗತ್ಯ ಪ್ರಮಾಣದಲ್ಲಿ ಈ ಡ್ರೈಫ್ರೂಟ್ಸ್‌ಗಳನ್ನು ಸೇವನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

ಹಸಿರು ಎಲೆ ತರಕಾರಿಗಳು: ಪಾಲಕ್, ಮೆಂತ್ಯ, ಬ್ರೊಕೊಲಿಯಂತಹ ಹಸಿರು ತರಕಾರಿಗಳು ಕಬ್ಬಿಣ, ಫೋಲೇಟ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಅವು ದೇಹವನ್ನು ನಿರ್ವಿಷಗೊಳಿಸುತ್ತವೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತವೆ ಮತ್ತು ಮುಖ್ಯವಾಗಿ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತವೆ. ಹಾಗಾಗಿ ಇವುಗಳನ್ನು ಸೇವನೆ ಮಾಡಿ.

ಸಿಹಿ ಗೆಣಸು: ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ಚರ್ಮವನ್ನು ಒಳಗಿನಿಂದ ಪೋಷಿಸುತ್ತವೆ. ಸಿಹಿ ಗೆಣಸನ್ನು ನಿಯಮಿತವಾಗಿ ತಿನ್ನುವುದರಿಂದ, ತ್ವಚೆಯ ಕಾಂತಿ ಹೆಚ್ಚಾಗುತ್ತದೆ ಮತ್ತು ಸುಕ್ಕುಗಳು ಹೋಗಲಾಡುತ್ತವೆ.

ಇದನ್ನೂ ಓದಿ: ತಾಜಾ ಮೆಂತ್ಯ ಸೊಪ್ಪು ಸಿಕ್ರೆ ಮನೆಯಲ್ಲಿಯೇ ರೀತಿ ಕಸೂರಿ ಮೇಥಿ ತಯಾರಿಸಿ

ದಾಳಿಂಬೆ: ದಾಳಿಂಬೆ ಆರೋಗ್ಯದ ಖಜಾನೆ ಮಾತ್ರವಲ್ಲ, ಸುಂದರವಾದ ಚರ್ಮದ ರಹಸ್ಯವೂ ಹೌದು. ದಾಳಿಂಬೆಯ ನಿಯಮಿತ ಸೇವನೆಯು ಚರ್ಮವನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡುತ್ತದೆ.

ಪಪ್ಪಾಯಿ: ಪಪ್ಪಾಯಿ ರುಚಿಕರ ಮಾತ್ರವಲ್ಲದೆ ನಮ್ಮ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಕಿಣ್ವಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಯನ್ನು ಸ್ವಚ್ಛವಾಗಿಡುತ್ತದೆ. ಪಪ್ಪಾಯಿ ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಇದು ನಮ್ಮ ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತದೆ.

ಹೈಡ್ರೇಟಿಂಗ್ ಆಹಾರಗಳು, ಮೊಸರು: ಸೌತೆಕಾಯಿ, ಕಲ್ಲಂಗಡಿ ನೀರಿನಲ್ಲಿ ಸಮೃದ್ಧವಾಗಿದ್ದು, ಇವು ದಿನವಿಡೀ ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿಡುತ್ತವೆ. ಮತ್ತು  ಮೊಸರಿನಂತಹ ಪ್ರೋಬಯಾಟಿಕ್ ಆಹಾರಗಳು ಕರುಳು ಸೇರಿದಂತೆ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತವೆ, ಅಲ್ಲದೆ ಇವು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತವೆ, ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ಬರಲಿವೆ 50ಕ್ಕೂ ಹೆಚ್ಚು ಡೀಪ್​ಟೆಕ್ ಕಂಪನಿಗಳು: ಅಶ್ವಿನಿ ವೈಷ್ಣವ್ – Kannada News | Expecting arrival of over 50 deep tech Indian companies, says Ashwini Vaishnaw at India AI Impact Summit

ನವದೆಹಲಿ, ಫೆಬ್ರುವರಿ 17: ‘ಕ್ರಿಯೇಟ್ ಇನ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿ ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ 50ಕ್ಕೂ ಹೆಚ್ಚು ಡೀಪ್-ಟೆಕ್ ಕಂಪನಿಗಳು ತಲೆ ಎತ್ತುವ ನಿರೀಕ್ಷೆ ಇದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಡಾ. ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ದೆಹಲಿಯಲ್ಲಿ ನಿನ್ನೆಯಿಂದ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯ ಭಾಗವಾಗಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಎಐ ಆವಿಷ್ಕಾರಗಳಿಗೆ ಪೂರಕವಾಗಿ ಭಾರತದ ಸೆಮಿಕಂಡಕ್ಟರ್ ಮಿಷನ್ನ ಹಾದಿ ಸಾಗುತ್ತದೆ ಎಂದಿದ್ದಾರೆ. ಹಾಗೆಯೇ, ಮಿಷನ್​ನ ಮುಂದಿನ ಹಂತದಲ್ಲಿ ಚಿಪ್ ಡಿಸೈನ್ ಮೇಲೆ ಪ್ರಧಾನ ಗಮನ ಇರುತ್ತದೆ ಎಂದು ವಿವರಿಸಿದ್ದಾರೆ.

ಇದೇ ವೇಳೆ, ಭಾರತದಲ್ಲಿ 38,000 ಜಿಪಿಯುಗಳಿದ್ದು, ಈಗ ಮತ್ತಷ್ಟು 20,000 ಜಿಪಿಯುಗಳು ಸೇರ್ಪಡೆಯಾಗಲಿವೆ. ಇದರಿಂದ ದೇಶದ ಎಐ ಕಂಪ್ಯೂಟ್ ಇನ್​ಫ್ರಾಸ್ಟ್ರಕ್ಚರ್ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿ: AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

ಕೌಶಲ್ಯ ಮರುಪೂರಣಕ್ಕೆ ಕ್ರಮ

‘ಭಾರತದ ಐಟಿ ಸೆಕ್ಟರ್ ನಮ್ಮ ಪಾಲಿಗೆ ಮಹತ್ವದ ಆಸ್ತಿ ಎನಿಸಿದೆ. ಯಾವುದೇ ತಂತ್ರಜ್ಞಾನ ಪರಿವರ್ತನೆಯ ಸಂದರ್ಭದಲ್ಲಿ ಉದ್ಯಮ, ಶೈಕ್ಷಣಿಕ ಮತ್ತು ಸರ್ಕಾರದ ನಡುವೆ ಸಹಭಾಗಿತ್ವ ಸಾಧಿಸುವುದು ಅಗತ್ಯ. ಈಗಿರುವ ಕೆಲಸಗಾರರಿಗೆ ಕೌಶಲ್ಯ ಮರುಪೂರಣ, ಕೌಶಲ್ಯ ಅಭಿವೃದ್ಧಿ, ಹೊಸ ಪ್ರತಿಭೆಗಳ ಬೆಳವಣಿಗೆ, ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಭವಿಷ್ಯದ ತಲೆಮಾರುಗಳನ್ನು ಸಜ್ಜುಗೊಳಿಸುವುದು, ಈ ಮೂರು ಕ್ಷೇತ್ರಗಳಲ್ಲಿ ಉದ್ಯಮ ಮತ್ತು ಶಿಕ್ಷಣ ವಲಯದ ಜೊತೆ ಸಹಭಾಗಿತ್ವ ಮಾಡಿಕೊಳ್ಳುತ್ತಿದ್ದೇವೆ’ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಐದನೇ ಕೈಗಾರಿಕಾ ಕ್ರಾಂತಿ ಇದು…

ಎಐ ಅಳವಡಿಕೆಯ ಕಾರ್ಯವನ್ನು ಅಶ್ವಿನಿ ವೈಷ್ಣವ್ ಅವರು ಐದನೇ ಕೈಗಾರಿಕಾ ಕ್ರಾಂತಿ ಎಂದು ಬಣ್ಣಿಸಿದ್ದಾರೆ. ‘ಎಲ್ಲಾ ಸೆಕ್ಟರ್​ನಲ್ಲೂ ಎಐ ಅಳವಡಿಕೆ ಆಗುತ್ತಿದೆ. ಇದು ಐದನೇ ಕೈಗಾರಿಕಾ ಕ್ರಾಂತಿಯ ದ್ಯೋತಕವಾಗಿದೆ. ಆರ್ಥಿಕತೆ ಮತ್ತು ಸಮಾಜದ ಪ್ರತಿಯೊಂದು ಅಂಶದ ಮೇಲೂ ಇದರ ಪ್ರಭಾವ ಇರುತ್ತದೆ. ಎಐನಿಂದ ಪರಿವರ್ತನಾತ್ಮಕ ಪರಿಹಾರಗಳನ್ನು ಕಾಣುತ್ತಿದ್ದೇವೆ. ಹೆಲ್ತ್​ಕೇರ್ ಸೇವೆಗಳು ಎಐನಿಂದ ಅಗ್ಗದ ಬೆಲೆಗೆ ಸಿಗುವಂತಾಗುತ್ತದೆ. ಶಿಕ್ಷಣದಲ್ಲಿ ಎಐ ಅಳವಡಿಕೆಯಿಂದ ಪ್ರತೀ ವಿದ್ಯಾರ್ಥಿಯ ಅಗತ್ಯಕ್ಕೆ ತಕ್ಕಂತೆ ಕಲಿಕೆ ಕೊಡಬಹುದು’ ಎಂದು ಎಐನ ಬಹು ಉಪಯುಕ್ತತೆಯ ಸಾಧ್ಯತೆಗಳನ್ನು ಸಚಿವರು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಸ್ತುವೇ ಕಳ್ಳತನ; ಹುಮ್ಮಸ್ಸಿನಲ್ಲಿದ್ದ ಬೆಂಗಳೂರು ಸ್ಟಾರ್ಟಪ್ ಸ್ಥಾಪಕನಿಗೆ ಶಾಕ್

ವಿದ್ಯುತ್ ತಯಾರಿಕೆಯ ಸಾಮರ್ಥ್ಯ

ಎಐ ಅಭಿವೃದ್ಧಿಗೆ ಬೇಕಾದ ಇನ್​ಫ್ರಾಸ್ಟ್ರಕ್ಚರ್ ಅಗತ್ಯಗಳಲ್ಲಿ ವಿದ್ಯುತ್ ಪೂರೈಕೆಯೂ ಒಂದು. ಭಾರತದಲ್ಲಿ ವಿದ್ಯುತ್ ತಯಾರಿಕೆಗೆ ರಿನಿವಬಲ್ ಎನರ್ಜಿ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಈ ವಿಚಾರವನ್ನು ಸಚಿವ ಎ ವೈಷ್ಣವ್ ಪ್ರಸ್ತಅಪಿಸಿದ್ದಾರೆ. ಭಾರತದಲ್ಲಿ ಶೇ. 51ರಷ್ಟು ವಿದ್ಯುತ್ ಉತ್ಪಾದನೆಯು ನವೀಕರಣ ಶಕ್ತಿ ಮೂಲಗಳಿಂದ ಬರುತ್ತಿರುವುದನ್ನು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ ಸ್ವೀಕಾರ – Kannada News | Tarique Rahman takes oath as Bangladesh New Prime Minister

ಢಾಕಾ, ಫೆಬ್ರವರಿ 17: ಬಿಎನ್​ಪಿ ನಾಯಕ ತಾರಿಕ್ ರೆಹಮಾನ್ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ತಾರಿಕ್ ರೆಹಮಾನ್ ಎಲ್ಲಾ ಚುನಾಯಿತ ಬಿಎನ್‌ಪಿ ಸಂಸದರೊಂದಿಗೆ ಇಂದು ಢಾಕಾದ ರಾಷ್ಟ್ರೀಯ ಸಂಸತ್ ಕಟ್ಟಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಫೆಬ್ರವರಿ 12ರಂದು ನಡೆದ 13ನೇ ಸಂಸತ್ ಚುನಾವಣೆಯ ನಂತರ ಈ ಮಹತ್ವದ ಸಮಾರಂಭ ನಡೆಯಿತು. ಬಾಂಗ್ಲಾದೇಶದಲ್ಲಿ ಈ ಬಾರಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಭರ್ಜರಿ ಜಯ ಸಾಧಿಸಿತ್ತು.

ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ತಾರಿಕ್ ರೆಹಮಾನ್ ಮತ್ತು ಅವರ ನೂತನ ಸಚಿವ ಸಂಪುಟಕ್ಕೆ ಪ್ರಮಾಣವಚನ ಬೋಧಿಸಿದರು. ಈ ಸಮಾರಂಭವು ರಾಷ್ಟ್ರೀಯ ಸಂಸತ್ತಿನ ಸಂಕೀರ್ಣದ ದಕ್ಷಿಣ ಪ್ಲಾಜಾದಲ್ಲಿ ನಡೆಯಿತು. ಸುಮಾರು 1,200 ಜನ ಅತಿಥಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) 25 ಚುನಾಯಿತ ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಹೊಸದಾಗಿ ಆಯ್ಕೆಯಾದ 24 ಇತರ ಸಂಸದರು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಫೆ.17ರಂದು ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ, ಪ್ರಧಾನಿ ಮೋದಿಗೆ ಆಹ್ವಾನ

ರೆಹಮಾನ್ ಅವರ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (BNP) 297 ಸ್ಥಾನಗಳಲ್ಲಿ 209 ಸ್ಥಾನಗಳನ್ನು ಗೆದ್ದಿದೆ. 13ನೇ ಸಂಸತ್ ಚುನಾವಣೆಯಲ್ಲಿ ರೆಹಮಾನ್ ಅವರ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (BNP) 297 ಸ್ಥಾನಗಳಲ್ಲಿ 209 ಸ್ಥಾನಗಳನ್ನು ಗೆದ್ದಿದೆ. ಬಲಪಂಥೀಯ ಪಕ್ಷವಾದ ಜಮಾತ್-ಇ-ಇಸ್ಲಾಮಿ 68 ಸ್ಥಾನಗಳನ್ನು ಗಳಿಸಿದೆ. ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಈ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿಷೇಧ ಹೇರಲಾಗಿತ್ತು.

ಇದನ್ನೂ ಓದಿ: ಬಾಂಗ್ಲಾದೇಶದ ಚುನಾವಣಾ ಗೆಲುವಿನ ಬಳಿಕ ಭಾರತದ ಬಗ್ಗೆ ತಾರಿಕ್ ರೆಹಮಾನ್ ಮೊದಲ ಹೇಳಿಕೆಯೇನು?

ಭಾರತದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತಾರಿಕ್ ರೆಹಮಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಿದರು. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಕೂಡ ಬಿರ್ಲಾ ಅವರೊಂದಿಗೆ ತೆರಳಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

3 ಹೆಸರಲ್ಲಿ ಪ್ರೀತಿ, ಮದ್ವೆ ನಾಟಕ: ಯುವಕರಿಗೆ ಗಾಳ ಹಾಕುತ್ತಿದ್ದವಳು ಮಾಡಿದ್ದೇನು ಗೊತ್ತಾ? – Kannada News | A Woman Cheating Youths On Love And Marriage Name at Dharwad

ಧಾರವಾಡ, (ಫೆಬ್ರವರಿ 17): ಯುವತಿಯೋರ್ವಳು ಮೂರ್ಮೂರು ಹೆಸರಿಟ್ಟುಕೊಂಡು ಯುವಕರನ್ನು ವಂಚಿಸಿದ್ದಾಳೆ ಎನ್ನುವ ಆರೋಪ (Accusation) ಕೇಳಿ ಬಂದಿದೆ. ಶ್ರೀಮಂತ ಹುಡುಗರಿಗೆ ಗಾಳ ಹಾಕ್ತಿದ್ದ ಐಶ್ವರ್ಯ ಎನ್ನುವ ಯುವತಿ, ಪ್ರೀತಿ (Love) ನಾಟಕವಾಡಿ ಯುವಕರಿಂದ ಹಣ ಪಡೆದು ವಂಚಿಸಿದ್ದಾಳಂತೆ. ಅದರಂತೆ ಐಶ್ವರ್ಯ, ಯುವಕನನ್ನು ಮದ್ವೆಯಾಗುವುದಾಗಿ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾಳೆ. ಐಶ್ವರ್ಯ, ರೇಣುಕಾ, ಆರೋಹಿ ಎಂಬ ಮೂರು ವಿಭಿನ್ನ ಹೆಸರಿನಲ್ಲಿ ಯುವಕರನ್ನು ಪರಿಚಯಿಸಿಕೊಂಡಿದ್ದ ಯುವತಿ, ಆರ್ಥಿಕವಾಗಿ ಸಹಾಯ ಮಾಡುವ ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದಳಂತೆ. ಸಂಜು ದೊಡಮನಿ ಹಾಗೂ ಗುರು ವಕ್ಕುಂದ ಸೇರಿದಂತೆ ಮೂವರು ಯುವಕರಿಗೆ ಮದುವೆಯ ಭರವಸೆ ನೀಡಿ ಹಣ ಪಡೆದುಕೊಂಡಿದ್ದಾಳೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ರೊಚ್ಚಿಗೆದ್ದ ಸ್ಥಳೀಯರು ರಸ್ತೆಯಲ್ಲೇ ಐಶ್ವರ್ಯಗೆ ಧರ್ಮದೇಟು ಕೊಟ್ಟಿದ್ದಾರೆ. ಈ ಘಟನೆ ಧಾರವಾಡ (Dharwad) ಉಪನಗರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಶ್ರೀಮಂತ ಹುಡುಗರೇ ಈಕೆಯ ಟಾರ್ಗೆಟ್! ಪ್ರೀತಿಯ ನಾಟಕವಾಡಿ ಈಕೆ ಮಾಡಿದ್ದು ಏನು ಗೊತ್ತಾ?

Source link

ರಿಷಬ್ ಶೆಟ್ಟಿ ಜೊತೆ ನಟಿಸಲಿರುವ ‘ಬಾಹುಬಲಿ’ಯ ‘ಸಹೋದರ’ – Kannada News | Rana Daggubati joins Rishab Shetty’s Jai Hanuman movie

ರಿಷಬ್ ಶೆಟ್ಟಿ (Rishab Shetty) ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ಅಭೂತಪೂರ್ವ ಗೆಲುವು ಕಂಡಿದ್ದಾರೆ. ‘ಕಾಂತಾರ 1’ ಸಿನಿಮಾದ ಬಳಿಕ ಇದೀಗ ರಿಷಬ್ ತಮ್ಮ ಹೊಸ ಪ್ರಾಜೆಕ್ಟ್​ನಲ್ಲಿ ತೊಡಗಿಸಿಕೊಳ್ಳುವ ಸಮಯ ಬಂದಾಗಿದೆ. ‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಮಾಡುತ್ತಿರುವಾಗಲೇ ಅವರಿಗೆ ತೆಲುಗಿನ ‘ಜೈ ಹನುಮಾನ್’ ಸಿನಿಮಾದ ಆಫರ್ ಬಂದಿತ್ತು, ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿದೆ. ಕೆಲವೇ ದಿನಗಳಲ್ಲಿ ಸಿನಿಮಾದ ಚಿತ್ರೀಕರಣವೂ ಪ್ರಾರಂಭ ಆಗಲಿದೆ. ಇದೀಗ ಸ್ಟಾರ್ ನಟರೊಬ್ಬರು ರಿಷಬ್ ಜೊತೆಗೆ ನಟಿಸಲಿರುವ ಸುದ್ದಿ ಹೊರಬಿದ್ದಿದೆ.

‘ಬಾಹುಬಲಿ’ ಸಿನಿಮಾನಲ್ಲಿ ಬಹಳ ಪವರ್​​ಫುಲ್ ಆಗಿರುವ ಪ್ರತಿ ನಾಯಕ ಬಲ್ಲಾಳದೇವನ ಪಾತ್ರದಲ್ಲಿ ನಟಿಸಿದ್ದ ರಾಣಾ ದಗ್ಗುಬಾಟಿ ಅವರು ರಿಷಬ್ ಶೆಟ್ಟಿ ಜೊತೆಗೆ ‘ಜೈ ಹನುಮಾನ್’ ಸಿನಿಮಾನಲ್ಲಿ ನಟಿಸಲಿದ್ದಾರೆ. ಆದರೆ ರಾಣಾ ದಗ್ಗುಬಾಟಿ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಇನ್ನೂ ಖಾತ್ರಿ ಆಗಿಲ್ಲ. ‘ಜೈ ಹನುಮಾನ್’ ಸಿನಿಮಾನಲ್ಲಿ ರಾಣಾ ರಾಮನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ, ಇನ್ನು ಕೆಲವು ವರದಿಗಳಲ್ಲಿ ರಾಣಾ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ರಾಣಾ ದಗ್ಗುಬಾಟಿ ಯಾವ ರೀತಿಯ ಪಾತ್ರಕ್ಕಾದರೂ ಫಿಟ್ ಆಗುವ ನಟ. ಹೀರೋ ನಟಿಸಬೇಕು ಎಂಬ ಗಡಿ ಹಾಕಿಕೊಳ್ಳದ ಅವರು ವಿಲನ್ ಆಗಿ, ಪ್ರಮುಖ ಪೋಷಕ ಪಾತ್ರದಲ್ಲಿ, ಅತಿಥಿ ಪಾತ್ರಗಳಲ್ಲಿ ಸಹ ನಟಿಸಿದ್ದಾರೆ. ಇದೀಗ ರಿಷಬ್ ಶೆಟ್ಟಿ ಜೊತೆಗೆ ನಟಿಸಲು ಎಸ್ ಎಂದಿದ್ದಾರೆ. ಅಂದಹಾಗೆ ಈ ಹಿಂದೆ ರಾಣಾ ದಗ್ಗುಬಾಟಿ ಅವರು ತಮ್ಮ ಟಾಕ್ ಶೋ ಒಂದಕ್ಕಾಗಿ ರಿಷಬ್ ಅವರ ಊರಾದ ಕೆರಾಡಿಗೆ ಬಂದು ರಿಷಬ್ ಅವರ ಸಂದರ್ಶನ ಸಹ ಮಾಡಿದ್ದರು. ಇಬ್ಬರ ನಡುವೆ ಒಳ್ಳೆಯ ಗೆಳೆತನ ಇದೆ. ಹಾಗಾಗಿ ಇಬ್ಬರೂ ಒಟ್ಟಿಗೆ ನಟಿಸುವುದು ಇಬ್ಬರಿಗೂ ಹೆಚ್ಚು ಕಂಫರ್ಟ್ ಆಗಿರಲಿದೆ.

ಇದನ್ನೂ ಓದಿ:ಟಿವಿ9 ನವನಕ್ಷತ್ರ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ ಭಾವುಕ ಮಾತು

‘ಜೈ ಹನುಮಾನ್’ ಸಿನಿಮಾ ಹೆಸರೇ ಸೂಚಿಸುತ್ತಿರುವಂತೆ ಹನುಮಂತ ದೇವರ ಕುರಿತಾದ ಕತೆಯನ್ನು ಹೊಂದಿರಲಿದೆ. ಈ ಹಿಂದೆ ‘ಹನುಮ್ಯಾನ್’ ಹೆಸರಿನ ಫ್ಯಾಂಟಸಿ ಸೂಪರ್ ಹೀರೋ ಮಾದರಿಯ ಸಿನಿಮಾ ನಿರ್ದೇಶಿಸಿದ್ದ ಪ್ರಶಾಂತ್ ವರ್ಮಾ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಟಿ-ಸೀರೀಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಫೆಬ್ರವರಿ 22 ರಂದು ಸಿನಿಮಾದ ಮುಹೂರ್ತ ಹಂಪಿಯಲ್ಲಿ ಬಲು ಅದ್ಧೂರಿಯಾಗಿ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link