SRH vs KKR: ಸುನಿಲ್ ನರೈನ್ ‘ಡಬಲ್ ಸೆಂಚುರಿ’; ಐಪಿಎಲ್ನಲ್ಲಿ ಈ ಸಾಧನೆ ಮಾಡಿದ ಮೊದಲ ವಿದೇಶಿಗ
ಐಪಿಎಲ್ 2026 ರ 45ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೆಕೆಆರ್ ತಂಡದ ಸ್ಟಾರ್ ಸ್ಪಿನ್ನರ್ ಸುನಿಲ್ ನರೈನ್ ಐಪಿಎಲ್ ಇತಿಹಾಸದಲ್ಲಿ ಬೇರೆ ಯಾವುದೇ ವಿದೇಶಿ ಬೌಲರ್ ಸಾಧಿಸದ ವಿಶಿಷ್ಟ ದಾಖಲೆಯನ್ನು ಸೃಷ್ಟಿಸಿದರು. ಸನ್‌ರೈಸರ್ಸ್ ವಿರುದ್ಧದ ಈ ಪಂದ್ಯದಲ್ಲಿ, ಸುನಿಲ್ ನರೈನ್ 4 ಓವರ್ ಬೌಲಿಂಗ್ ಮಾಡಿ, 31 ರನ್ ನೀಡಿ, 2 ವಿಕೆಟ್ ಪಡೆದರು. ಅವರು ಸಾಹಿಲ್ ಅರೋರಾ ಮತ್ತು ಇಶಾನ್ ಕಿಶನ್ ಅವರನ್ನು…