All posts by nagaraj11081993

ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ತಮ್ಮದೇ ಸರ್ಕಾರದ ವಿರುದ್ಧ ಕೈ ಶಾಸಕ ಅಸಮಾಧಾನ – Kannada News | Congress MLA Prasad Abbayya Un Happy On Hubballi dharwad Police

ಹುಬ್ಬಳ್ಳಿ, (ಮೇ 03): ಹುಬ್ಬಳ್ಳಿ ಧಾರವಾಡ (Hubballi And Dharwad) ಅವಳಿ ನಗರ ವ್ಯಾಪಾರ ಮತ್ತು ಶಿಕ್ಷಣ ದಿಂದ ಸುಪ್ರಸಿದ್ದಿಯನ್ನು ಪಡೆದಿವೆ. ಧಾರವಾಡಕ್ಕೆ ವಿದ್ಯಾರ್ಜನೆಗಾಗಿ ರಾಜ್ಯದ ವಿವಿಧಡೆಯಿಂದ ಸಾವಿರಾರು ವಿದ್ಯಾರ್ಥಿಗಳು ಆಗಮಿಸಿದ್ರೆ ಹುಬ್ಬಳ್ಳಿ ಗೆ ವ್ಯಾಪರಕ್ಕೆ ದೇಶದ ವಿವಿದಡೆಯಿಂದ ಜನ ಬರ್ತಾರೆ. ಇಂತಹ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆಗಾಗಿ ಪೊಲೀಸ ಕಮಿಷನರೇಟ್ ಇದ್ದು ಪೊಲೀಸ ಕಮಿಷನರ್, ಡಿಸಿಪಿ,ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀಸ ಸಿಬ್ಬಂದಿ ಇದ್ದಾರೆ. ಆದ್ರೆ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಸ್ವತಃ ಪೊಲೀಸರ ವಸೂಲಿ ಮಾಡೋದು, ರೌಡಿ ಸೀಟರ್ ಗಳಿಗೆ ನೆರವಾಗೋದು ಸೇರಿದಂತೆ ಅನೇಕ ಕಾನೂನು ಬಾಹಿರ ಕೆಲಸಗಳನ್ನು ಮಾಡ್ತಿರೋ ಆರೋಪ ಕೇಳಿ ಬರ್ತಿವೆ. ಈ ಬಗ್ಗೆ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಅಸಮಾಧಾನ ಹೊರಹಾಕಿದ್ದಾರೆ.

ಪೊಲೀಸರ ವರ್ತನೆಗೆ ಕೈ ಶಾಸಕ ಅಸಮಾಧಾನ

ಅದರಲ್ಲೂ ಧಾರವಾಡದಲ್ಲಿ ವಿದ್ಯಾರ್ಥಿಯೋರ್ವ‌ ಪೊಲೀಸರು ಹಣಕ್ಕಾಗಿ ಪೀಡಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ‌ ನಂತರ ಪೊಲೀಸರ ಮೇಲೆ ಹೆಚ್ಚಿನ ಆರೋಪಗಳು ಕೇಳಿ ಬರ್ತಿವೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸೋದು, ಅನ್ಯಾಯ, ಅಕ್ರಮ ಮಾಡಿದವರನ್ನು ಕಂಬಿ ಹಿಂದೆ ಕಳುಹಿಸಬೇಕಿದ್ದ ಪೊಲೀಸರೇ ಹಣಕ್ಕಾಗಿ ಅನ್ಯಾಯದ ಮಾರ್ಗ ಹಿಡದಿದ್ದಾರೆ ಅಂತ ಅನೇಕ ಬಿಜೆಪಿ ಶಾಸಕರು ಆರೋಪಿಸಿದ್ದರು. ಇದೀಗ ಸ್ವತ ಆಡಳಿತ ಪಕ್ಷದ ಶಾಸಕರು ಕೂಡಾ ಅವಳಿ ನಗರದ ಪೊಲೀಸರ ವರ್ತನೆಗೆ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಧಾರವಾಡ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಮೂವರು ಪೇದೆ ಬೆನ್ನಲ್ಲೇ ಇನ್ಸ್​​ಪೆಕ್ಟರ್​​ ತಲೆದಂಡ

ದಕ್ಷ ಮತ್ತು ಪ್ರಮಾಣಿಕ ಅಧಿಕಾರಿಗಳು ಬೇಕು

ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ, ಪೊಲೀಸರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅವಳಿ ನಗರದಲ್ಲಿ ಪೊಲೀಸ ಇಲಾಖೆಯಲ್ಲಿ ಯಾವುದು ಸರಿಯಿಲ್ಲ. ಪೊಲೀಸರೇ ರಿಯಲ್ ಎಸ್ಟೇಟ್ ದಂಧೆ ಮಾಡೋದು, ಅಕ್ರಮ ದಂಧೆ ಮಾಡೋರಿಗೆ ಸಹಾಯ ಮಾಡೋದು ಸೇರಿದಂತೆ ಅನೇಕ ಆರೋಪಗಳು ಕೇಳಿ ಬರ್ತಿವೆ. ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿ ಹೋಗ್ತಿದೆ. ಹೀಗಾಗಿ ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ದಕ್ಷ ಮತ್ತು ಪ್ರಮಾಣಿಕ ಅಧಿಕಾರಿಗಳನ್ನು ಹುಬ್ಬಳ್ಳಿ ಧಾರವಾಡ ಕ್ಕೆ ಹಾಕುವಂತೆ ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ. ಸಿಎಂ ಭೇಟಿ ಮಾಡಿ ಕೂಡಾ ಈ ಬಗ್ಗೆ ಮನವಿ ಸಲ್ಲಿಸುತ್ತೇನೆ. ಆದಷ್ಟು ಬೇಗನೆ ಅವಳಿ ನಗರದಲ್ಲಿರೋ ಅಧಿಕಾರಿಗಳ ವರ್ಗಾವಣೆ ಗ್ಯಾರಂಟಿ ಅಂತ ಹೇಳಿದ್ದಾರೆ.

ಹುಬ್ಬಳ್ಳಿ ಧಾರವಾಡ ಕೆಲ ಪೊಲೀಸರು ಹಣಕ್ಕಾಗಿ ಜನರನ್ನು ಪೀಡಿಸೋ ಆರೋಪಗಳು ಹೆಚ್ಚಾಗುತ್ತಿವೆ. ಗುಂಡಾಗಳು ಪೊಲೀಸ ಠಾಣೆಗಳಲ್ಲಿ ಯಾರ ಅಂಜಿಕೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳು, ಅಕ್ರಮ ಅಕ್ಕಿ ಸಾಗಾಟ ಪ್ರಕರಣಗಳು ಪೊಲೀಸರ ಮೂಗಿನ ನೇರದಲ್ಲಿ ನಡೆದ್ರು ಅವರ ವಿರುದ್ಧ ಕಠಿಣ ಕ್ರಮವಾಗುತ್ತಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ನ್ಯಾಯ ಕೇಳಿಕೊಂಡು ಠಾಣೆಗೆ ಹೋದ್ರು ಅವರಿಂದ ಕೂಡಾ ಕೆಲವರು ಹಣ ವಸೂಲಿ ಮಾಡುತ್ತಿದ್ದಾರೆ. ಇನ್ನು ಅವಳಿ ನಗರದಲ್ಲಿ ಈ ಹಿಂದೆ ಪೊಲೀಸ ಕಮಿಷನರ್ ರೌಡಿ ಪರೇಡ್ ಮಾಡಿ ರೌಡಿಗಳಿಗೆ ಬಿಸಿ ಮುಟ್ಟಿಸಿದ್ದರು. ಡ್ರಗ್ಸ್ ಪೆಡ್ಲರ್ ಗಳನ್ನು ಮಟ್ಟ ಹಾಕೋ ಕೆಲಸಕ್ಕೆ ಕೂಡಾ ಮುಂದಾಗಿದ್ದರು. ಆದ್ರೆ ಇವುಗಳಲ್ಲಿ ಕೂಡಾ ಕೆಲ ಅಧಿಕಾರಿಗಳು ಹಣ ಮಾಡಲು ಹೋಗಿದ್ದು ಗುಟ್ಟಾಗಿ ಉಳಿದಿಲ್ಲ.

ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕೆಲ ದಕ್ಷ ಮತ್ತು ಪ್ರಮಾಣಿಕ ಪೊಲೀಸರು, ಪೊಲೀಸ ಅಧಿಕಾರಿಗಳು ಇದ್ದಾರೆ. ಆದ್ರೆ ಕೆಲ ಪೊಲೀಸರು ಹಣಕ್ಕಾಗಿ ಅಡ್ಡದಾರಿ ಹಿಡಿದಿದ್ದರಿಂದ ಇಲಾಖೆಗೆ ಕೆಟ್ಟು ಹೆಸರು ಬರ್ತಿದೆ. ಹೀಗಾಗಿ ಗೃಹ ಇಲಾಖೆ ಅವಳಿ ನಗರದ ಪೊಲೀಸರ ಮೇಲೆ ಯಾವ ಕ್ರಮ ಕೈಗೊಳ್ಳುತ್ತದೆ, ಯಾರೆಲ್ಲರ ವರ್ಗಾವಣೆ ಯಾಗುತ್ತದೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿಯಲ್ಲಿ 9 ಮಂದಿ ಬಲಿತೆಗೆದ ಎಸಿ ಸ್ಫೋಟ; ಏರ್ ಕಂಡೀಷನರ್ ಸ್ಫೋಟಕ್ಕೆ ಕಾರಣವೇನು, ನಿಯಂತ್ರಣ ಹೇಗೆ? – Kannada News | AC Blasts: What Caused Delhi’s Tragedy? Essential Safety Tips & Prevention Guide

ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ಇತ್ತೀಚೆಗೆ ಎಸಿ ಸ್ಫೋಟಗೊಂಡು ಉಂಟಾದ ಭೀಕರ ಬೆಂಕಿಯಿಂದಾಗಿ 9 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸ್ಫೋಟ (AC blast) ಹೇಗಾಯಿತು, ಏನು ಕಾರಣ ಎಂದು ಇನ್ನೂವರೆಗೆ ಗೊತ್ತಾಗಿಲ್ಲ. ಎಸಿ ಯೂನಿಟ್​ನೊಳಗೆ ಶಾರ್ಟ್ ಸರ್ಕ್ಯೂಟ್ ಆಗಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ತಜ್ಞರ ಪ್ರಕಾರ, ಬೇಸಿಗೆಯ ಧಗೆಯಲ್ಲಿ ಏರ್ ಕಂಡೀಷನರ್​ಗಳು ಸ್ಫೋಟಗೊಳ್ಳುವ ಅಪಾಯ ಹೆಚ್ಚಿರುತ್ತದೆ. ಬೇಸಿಗೆಯ ತೀವ್ರ ಶಾಖದಿಂದಾಗಿ ಎಸಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಇಂತಹ ಸ್ಫೋಟಗಳು ಸಂಭವಿಸುತ್ತಿವೆ ಎಂದು ಹೇಳಲಾಗುತ್ತಿದೆ.

ಎಸಿ ಸ್ಫೋಟಕ್ಕೆ ಸಂಭಾವ್ಯ ಕಾರಣಗಳೇನು?

  • ಅತಿಯಾದ ಬಳಕೆ: ಬೇಸಿಗೆಯಲ್ಲಿ ದಿನವಿಡೀ ಎಸಿಗಳನ್ನು ಚಾಲನೆಯಲ್ಲಿಡುವುದರಿಂದ ಅವುಗಳಲ್ಲಿ ಅತಿಯಾದ ಉಷ್ಣತೆ (Overheating) ಉಂಟಾಗುತ್ತದೆ.
  • ಕಳಪೆ ನಿರ್ವಹಣೆ: ಸರಿಯಾದ ಸಮಯದಲ್ಲಿ ಸರ್ವಿಸ್ ಮಾಡಿಸದಿರುವುದು, ಫಿಲ್ಟರ್‌ಗಳಲ್ಲಿ ಧೂಳು ತುಂಬಿಕೊಳ್ಳುವುದು ಗಾಳಿಯ ಸಂಚಾರಕ್ಕೆ ಅಡ್ಡಿಯುಂಟುಮಾಡುತ್ತದೆ.
  • ವೈರಿಂಗ್ ದೋಷ: ಹಳೆಯ ವೈರಿಂಗ್ ಅಥವಾ ಶಾರ್ಟ್ ಸರ್ಕ್ಯೂಟ್ ಸ್ಫೋಟಕ್ಕೆ ಪ್ರಮುಖ ಕಾರಣವಾಗುತ್ತದೆ.
  • ಅಸಮರ್ಪಕ ಗ್ಯಾಸ್ ಒತ್ತಡ: ಕಂಪ್ರೆಸರ್‌ನಲ್ಲಿ ಗ್ಯಾಸ್ ಲೀಕ್ ಆಗುವುದು ಅಥವಾ ಒತ್ತಡದಲ್ಲಿ ಏರುಪೇರಾಗುವುದು ಅಪಾಯಕಾರಿ.

ಇದನ್ನೂ ಓದಿ: ಬಿಸಿಲ ಬೇಗೆಯ ನಡುವೆ ತಂಪು ಸುದ್ದಿ: ಮೇ ಮಧ್ಯಭಾಗದಲ್ಲೇ ಮುಂಗಾರು ಎಂಟ್ರಿ!

ಅನಾಹುತ ತಡೆಯಲು ಮುನ್ನೆಚ್ಚರಿಕೆ ಕ್ರಮಗಳು

  • ನಿಯಮಿತ ಸರ್ವಿಸ್: ವರ್ಷಕ್ಕೆ ಕನಿಷ್ಠ ಎರಡು ಬಾರಿ ಪರಿಣಿತರಿಂದ ಎಸಿ ಸರ್ವಿಸ್ ಮಾಡಿಸಿ. ಮುಖ್ಯವಾಗಿ ಬೇಸಿಗೆ ಶುರುವಾಗುವ ಮೊದಲು ತಪಾಸಣೆ ಮಾಡುವುದು ಅತ್ಯಗತ್ಯ.
  • ಬ್ರೇಕ್ ನೀಡಿ: ಎಸಿಯನ್ನು ಸತತವಾಗಿ ಗಂಟೆಗಟ್ಟಲೆ ಓಡಿಸಬೇಡಿ. ಮಧ್ಯದಲ್ಲಿ ಸ್ವಲ್ಪ ಸಮಯ ಸ್ವಿಚ್ ಆಫ್ ಮಾಡುವ ಮೂಲಕ ಕಂಪ್ರೆಸರ್‌ಗೆ ವಿಶ್ರಾಂತಿ ನೀಡಿ.
  • ಸರಿಯಾದ ವೋಲ್ಟೇಜ್: ಎಸಿಗೆ ಸ್ಥಿರವಾದ ವಿದ್ಯುತ್ ಪೂರೈಕೆ ಇರಲಿ. ವೋಲ್ಟೇಜ್ ಸ್ಟೆಬಿಲೈಸರ್ ಬಳಸುವುದು ಸುರಕ್ಷಿತ.
  • ಧೂಳು ಸ್ವಚ್ಛಗೊಳಿಸಿ: ಹದಿನೈದು ದಿನಕ್ಕೊಮ್ಮೆ ಎಸಿಯ ಫಿಲ್ಟರ್‌ಗಳನ್ನು ನೀವೇ ಸ್ವಚ್ಛಗೊಳಿಸಿ.
  • ಹಳೆಯ ಎಸಿಗಳ ಬದಲಾವಣೆ: ನಿಮ್ಮ ಎಸಿ ತುಂಬಾ ಹಳೆಯದಾಗಿದ್ದರೆ (10 ವರ್ಷಕ್ಕಿಂತ ಹೆಚ್ಚು), ಅದನ್ನು ಬದಲಿಸುವುದು ಉತ್ತಮ. ಹಳೆಯ ಕಂಪ್ರೆಸರ್‌ಗಳು ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚು.

ಎಸಿ ಸ್ಫೋಟಗೊಳ್ಳುವ ಸಾಧ್ಯತೆಗೆ ಎಚ್ಚರಿಕೆ ಸಂಕೇತಗಳು

  • ಎಸಿಯಿಂದ ವಿಚಿತ್ರವಾದ ಶಬ್ದ ಬರುವುದು.
  • ಸುಟ್ಟ ವಾಸನೆ ಬರುವುದು.
  • ಕೂಲಿಂಗ್ ದಿಢೀರನೆ ಕಡಿಮೆಯಾಗುವುದು.
  • ವೈರಿಂಗ್‌ನಲ್ಲಿ ಬಿಸಿಯಾಗುವುದು ಅಥವಾ ಕಿಡಿ ಕಂಡುಬರುವುದು.

ಇದನ್ನೂ ಓದಿ: ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಭಾರತ-ನ್ಯೂಜಿಲೆಂಡ್; ದೇಶಕ್ಕಾಗುವ ಪ್ರಯೋಜನಗಳೇನು?

ಇಂತಹ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಎಸಿ ಆಫ್ ಮಾಡಿ ತಂತ್ರಜ್ಞರನ್ನು ಸಂಪರ್ಕಿಸುವುದು ಜೀವ ಉಳಿಸಲು ಸಹಕಾರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನೂರಾರು ಜೀವ ಉಳಿಸಿದ ವೈದ್ಯನಿಗೆ ಸಿಗಲಿಲ್ಲ ಚಿಕಿತ್ಸೆ; ಡಾಕ್ಟರ್ ದುರಂತ ಸಾವು – Kannada News | Doctor Dies Due to Lack of Medical Care in Remote Uttara Kannada Village

ಕಾರವಾರ, ಮೇ 03: ನೂರಾರು ರೋಗಿಗಳ ಜೀವ ಉಳಿಸಿದ್ದ ವೈದ್ಯರೊಬ್ಬರು (doctor) ಕೊನೆಗಳಿಗೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ತಿವ್ರ ಎದೆ ನೋವಿನಿಂದ ಅಸುನೀಗಿರುವ (death) ಹೃದಯವಿದ್ರಾವಕ ಘಟನೆ ಕರ್ನಾಟಕ ಗೋವಾ ಗಡಿಯಲ್ಲಿರುವ ಡಿಗ್ಗಿ ಎಂಬ ಗ್ರಾಮದಲ್ಲಿ ನಡೆದಿದೆ. ಡಾ.ಲೆನ್ವರ್ ಲೋಬೋ ಮೃತ ವೈದ್ಯ. ಸದ್ಯ ಇಡೀ ಡಿಗ್ಗಿ ಗ್ರಾಮವೇ ಡಾ. ಲೋಬೋ ಮರಣ ಹಿನ್ನೆಲೆ ಕಂಬನಿ ಮಿಡಿದಿದೆ.

ನಡೆದಿದ್ದೇನು?

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಡಿಗ್ಗಿ ಕೂಗ್ರಾಮ. ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಹೀಗಾಗಿ ಈ ಡಿಗ್ಗಿ ಗ್ರಾಮಕ್ಕೆ ಹೋಗಲು ಕೆಲವರು ಹಿಂದೇಟು ಹಾಕುತ್ತಾರೆ. ಹೀಗಿರುವಾಗ ಕಳೆದ ಮೂರು ವರ್ಷಗಳಿಂದ ಡಾ.ಲೆನ್ವರ್ ಲೋಬೋ ಕೆಲಸ ಮಾಡುತ್ತಿದ್ದರು. ಶಿರಸಿಯ ಸ್ಕೋಡಾ ವೇಸ್ ಸಂಸ್ಥೆ ಕರಾರಿನ ಮೇಲೆ ಗ್ರಾಮದಲ್ಲಿ ಆಸ್ಪತ್ರೆ ನಡೆಸುತಿತ್ತು. ಚಿಕಿತ್ಸೆ ಪಡೆಯಲು ಗೋವಾ ರಾಜ್ಯದ ಕೂಗ್ರಾಮದಿಂದ ಜನರು ಬರುತ್ತಿದ್ದರು. ಡಾ.ಲೋಬೋ ಚಿಕಿತ್ಸೆಯಿಂದ ಅದೆಷ್ಟೋ ಜನರು ಗುಣಮುಖರಾಗಿದ್ದಾರೆ. ಅವರ ಕಾರ್ಯಕ್ಕೆ ಇಡೀ ಡಿಗ್ಗಿ ಗ್ರಾಮಕ್ಕೆ ಗ್ರಾಮವೇ ಶ್ಲಾಘಿಸುತ್ತಿತ್ತು. ಆದರೆ ದುರ್ವಿದಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: 13 ವರ್ಷದ 7ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ರಾತ್ರಿ ವೇಳೆ ವೈದ್ಯ ಲೋಬೋ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಆದರೆ ಆಸ್ಪತ್ರೆಗೆ ಹೋಗಲು ವಾಹನ ಹಾಗೂ ಮೊಬೈಲ್ ನೆಟವರ್ಕ್ ಕೂಡ ಇರಲಿಲ್ಲ. ಹೀಗಾಗಿ ಬೆಳಗಿನ ಜಾವ ವಾಹನ ತರಿಸಿಕೊಂಡು ಜೋಯಿಡಾ ಕಡೆಗೆ ಹೊರಟ್ಟಿದ್ದರು. ಈ ವೇಳೆ ಎದೆನೋವು ಮತ್ತಷ್ಟು ಹೆಚ್ಚಳವಾಗಿ ಸೂಕ್ತ ಚಿಕಿತ್ಸೆ ಸಿಗದೇ ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ಬಿಸಿಲಿನ ತಾಪಕ್ಕೆ ಕುಸಿದುಬಿದ್ದು ವ್ಯಕ್ತಿ ಸಾವು

ಚಿತ್ರದುರ್ಗ ಜಿಲ್ಲೆಯ ಜಗಳೂರು ಮೂಲದ ವ್ಯಕ್ತಿ ಬಿಸಿಲಿನ ತಾಪಕ್ಕೆ ಕುಸಿದುಬಿದ್ದು ಆಂಧ್ರಪ್ರದೇಶದಲ್ಲಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಐಎಂ ಫಯಾಜ್(45) ಮೃತ ವ್ಯಕ್ತಿ. ಜಗಳೂರಿನ ನಿವೃತ್ತ ಶಿಕ್ಷಕ ಇಬ್ರಾಹಿಂ ಸಾಬ್ ಅವರ ಪುತ್ರ ಫಯಾಜ್. ಟಿವಿ9ಗೆ ಮೃತ ಐಎಂ ಫಯಾಜ್ ಕುಟುಂಬ ಸದಸ್ಯರಿಂದ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ದಾಂಡೇಲಿ: ಶೌಚಕ್ಕೆ ಕುಳಿತಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ; ಸ್ಥಳೀಯರ ಸಮಯಪ್ರಜ್ಞೆಯಿಂದ ಬಚಾವ್!

ಫಯಾಜ್ ಕುಟುಂಬಸ್ಥರ ಜೊತೆಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅದೋನಿಯ ಗುಡಿಕಲ್​​ ದರ್ಗಾದ ಉರುಸ್​ಗೆ ತೆರಳಿದ್ದರು. ಉರುಸ್ ಮುಗಿಸಿಕೊಂಡು ವಾಪಸಾಗುವಾಗ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

19 ಕೆಜಿ ಕಮರ್ಷಿಯಲ್ ಗ್ಯಾಸ್​ ಸಿಲಿಂಡರ್​ಗೆ ಎಷ್ಟು ಖರ್ಚು ಆಗುತ್ತೆ ಗೊತ್ತಾ? – Kannada News | Mysuru Congress Leader M Laxman Revels how much expenditure commercial gas cylinder

ಮೈಸೂರು, (ಮೇ 03): ವಾಣಿಜ್ಯ ಸಿಲಿಂಡರ್ ಗ್ಯಾಸ್ ಬೆಲೆ ಏರಿಕೆಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಕೇಂದ್ರ ಸರ್ಕಾರವ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಕಚ್ಚಾ ತೈಲಗೆ 19 ಕೆಜಿಗೆ ಎಷ್ಟು ಖರ್ಚು? 19 ಕೆ.ಜಿ ಗ್ಯಾಸ್ ಸಿಲಿಂಡರ್​​ ತಯಾರಿಕೆಗೆ ಎಷ್ಟು ಖರ್ಚಾಗುತ್ತೆ ಎನ್ನುವುದನ್ನು ಎಳೆ ಎಳೆಯಾಗಿಬಿಚ್ಚಿಟ್ಟಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎಂ ಲಕ್ಷ್ಮಣ್, ಕಚ್ಚಾ ತೈಲಗೆ 19 ಕೆಜಿಗೆ 1900 ಖರ್ಚು ಬೀಳುತ್ತದೆ. ಸಿಪ್ಪಿಂಗ್, ಟ್ರಾನ್ಸ್ಫರ್ಟ್ ,ರೀಫೈನ್ ಡೀಲರ್ ಕಮಿಷನ್ ಸೇರಿ ಒಟ್ಟು 2370 ರೂ ಖುರ್ಚು ಬೀಳುತ್ತದೆ. ಕೇಂದ್ರ ಸರ್ಕಾರ ಈಗ ಮಾರಾಟ ಮಾಡುತ್ತಿರುವುದು 3155 ರೂಪಾಯಿಗೆ. ಇದರ ಜೊತೆ ಜಿಎಸ್‌ಟಿ ಬೇರೆ ಇರುತ್ತದೆ ಎಂದರು.

ಮೇ 1 ರಂದು ಕೇಂದ್ರ ಸರ್ಕಾರ ಏಕಾಏಕಿ 993 ರೂ ಗ್ಯಾಸ್ ಏರಿಕೆ ಮಾಡುವ ಮೂಲಕ ಜನರಿಗೆ ಶಾಕ್ ನೀಡಿದೆ
ಈ ವರ್ಷದಲ್ಲೇ ಗ್ಯಾಸ್ ಬೆಲೆ ಐದು ಬಾರಿ ಜಾಸ್ತಿ ಮಾಡಿದ್ದಾರೆ. 2026 ಜನವರಿ ಆರಂಭದಲ್ಲಿ 1774 ರೂ ಇತ್ತು
ಇಂದು ಜಿಎಸ್‌ಟಿ ಸೇರಿ 4000 ರೂಗೆ ತಲುಪಿದೆ. ಗ್ಯಾಸ್ ಸಿಲಿಂಡರ್ ಗಳ ಕೃತಕ ಅಭಾವ ಸೃಷ್ಟಿ ಮಾಡಿದ್ದೇ ಕೇಂದ್ರ ಸರ್ಕಾರ. ಗೃಹ ಬಳಕೆ ಸಿಲಿಂಡರ್ ಬೆಲೆ ಕೂಡ ಶೀಘ್ರದಲ್ಲೇ ಜಾಸ್ತಿ ಮಾಡುತ್ತಾರೆ. ಈಗಾಗಲೇ ವೈಟ್ ಪೆಟ್ರೋಲ್ ಬೆಲೆ 7 ರೂ ಜಾಸ್ತಿ ಮಾಡಿದ್ದಾರೆ. ಎಕ್ಸ್ಪೋರ್ಟ್ ಪೆಟ್ರೋಲ್ ಗೆ 23 ರೂ ಕಡಿಮೆ ಮಾಡಿದ್ದಾರೆ. ಯುದ್ದ ಶುರುವಾದ ಮೇಲೆ ನಿಜವಾಗಿಯೂ ಲಾಸ್ ಆಗ್ತಾ ಇದೆಯಾ ? ಎಂದು ಪ್ರಶ್ನಿಸಿದರು.

ಯುದ್ದ ಆರಂಭವಾದ ಬಳಿಕ ದೇಶದ 35 ಸಾವಿರ ಕೋಟಿ ರೂ. ನಷ್ಟ ಆಗಿದೆ. 14 ಕೆ.ಜಿ ಸಿಲಿಂಡರ್ 915 ರೂ ಇದೆ. ಜಿಎಸ್‌ಟಿ 18% ಹಾಕುತ್ತಾರೆ. ಬಿಜೆಪಿ ಸರ್ಕಾರ ಬಡವರ ರಕ್ತವನ್ನು ಹೀರುತ್ತಿದೆ. ಕಾಂಗ್ರೆಸ್ ಸರ್ಕಾರ 1,2 ರೂ ಏರಿಕೆ ಮಾಡಿದ್ದಾರೆ ಬಾಯಿ ಬಡಿದುಕೊಳ್ಳುತ್ತಾರೆ. ರಾಜ್ಯ ಸರ್ಕಾರದ ವಿರುದ್ಧ ಮಾತಾಡೋರು ಕೇಂದ್ರ ಸರ್ಕಾರದ ವಿರುದ್ದ ಏಕೆ ಧ್ವನಿ ಎತ್ತುತ್ತಿಲ್ಲ? ಎಂದು ವಾಗ್ದಾಳಿ ನಡೆಸಿದರು.

Source link

ಮಂಡ್ಯ ವಿವಿ ಮುಚ್ಚಿಸಿದ್ರೆ ಬೆಂಕಿ ಹಚ್ಚಿಸುತ್ತೇವೆ: ಸ್ವ ಪಕ್ಷದ ಸಚಿವರ ವಿರುದ್ಧ ಗುಡುಗಿದ ಕೈ ಶಾಸಕ‌ – Kannada News | MLA Ravikumar Gowda Ganiga Warns His Government And Minister for Mandya VV close

ಮಂಡ್ಯ, (ಮೇ 03): ಮಂಡ್ಯ ವಿಶ್ವವಿದ್ಯಾಯಲಯ (Mandya University) ಮುಚ್ಚುಲು ಮುಂದಾಗಿರುವ ತಮ್ಮದೇ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಕೆಂಡಾಮಂಡಲರಾಗಿದ್ದಾರೆ. ಮಂಡ್ಯ ವಿವಿ ಮುಚ್ಚಿಸಿದ್ರೆ ಬೆಂಕಿ ಹಚ್ಚಿಸುತ್ತೇವೆ. ಸಚಿವನ್ನು ಮಂಡ್ಯ ರಸ್ತೆಯಲ್ಲಿ ಓಡಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಡ್ಯ ವಿವಿ ಯುವ ಸಂಭ್ರಮದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ರವಿ ಗಣಿಗ, ನಾನು ಶಾಸಕನಾಗಿ ಇರ್ತೀನೋ ಇಲ್ಲವೋ. ಆದ್ರೆ ಮಂಡ್ಯ ವಿವಿ ಮುಚ್ಚಲು ಬಿಡಲ್ಲ‌‌. ನಾವು ಮೈಸೂರಿನ ಗುಲಾಮರಾಗಿ ಇರುವುದು ಬೇಡ. ನಮಗೆ ಸ್ವಂತ ವಿವಿ ಬೇಕು,ಇದು ಮಂಡ್ಯದ ಸ್ವಾಭಿಮಾನ ಎಂದು ಗುಡುಗಿದರು

ಕೆಲ ದಿನಗಳ ಹಿಂದೆ‌ ಮಂಡ್ಯ ಸೇರಿದಂತೆ ರಾಜ್ಯದ ಹೊಸ ವಿವಿಗಳನ್ನ ಮುಚ್ಚುವ ಬಗ್ಗೆ ಉನ್ನತ್ತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಪ್ರಸ್ತಾಪ ಮಾಡಿದ್ದರು. . ಆದರೆ ಮಂಡ್ಯಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಬೇಕು ಎಂದು ಹಲವು ವರ್ಷಗಳಿಂದ ಹೋರಾಟ ನಡೆದಿತ್ತು. ಅದಾದ ಬಳಿಕ ಕಳೆದ ಸರ್ಕಾರದ ಅವಧಿಯಲ್ಲಿ ಮಂಡ್ಯ ವಿವಿ ಘೋಷಣೆಯಾಗಿತ್ತು. ಆದ್ರೆ ಹಣಕಾಸ ವಿಚಾರದಿಂದ ಮಂಡ್ಯ ವಿವಿ ಮುಚ್ಚುವ ಪ್ರಸ್ತಾವನೆ ಸರ್ಕಾರದ ಮುಂದಿಡಲಾಗಿತ್ತು. ಇದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಸ್ವಪಕ್ಷದ ಶಾಸಕ ಸಚಿವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

Source link

ಮುಂಬೈ ಇಂಡಿಯನ್ಸ್ ತಂಡದ ಪತನಕ್ಕೆ ಇದುವೇ ಕಾರಣ..! – Kannada News | Key Reasons for Mumbai Indians’ Struggles

ಐದು ಬಾರಿ ಟ್ರೋಫಿ ಗೆದ್ದಿರುವ ಅತ್ಯಂತ ಯಶಸ್ವಿ ತಂಡ ‘ಮುಂಬೈ ಇಂಡಿಯನ್ಸ್‘ಗೆ 2026ರ ಆವೃತ್ತಿಯು ಒಂದು ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ. ‘ಚಾಂಪಿಯನ್ಸ್ ಆಫ್ ಚಾಂಪಿಯನ್ಸ್’ ಎಂದು ಕರೆಸಿಕೊಳ್ಳುವ ತಂಡವು ಈ ಬಾರಿ ಆಡಿದ ಮೊದಲ 9 ಪಂದ್ಯಗಳಲ್ಲಿ 7 ರಲ್ಲಿ ಸೋಲೊಪ್ಪಿಕೊಂಡಿರುವುದು ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲದೆ, ಕ್ರೀಡಾ ವಿಶ್ಲೇಷಕರಿಗೂ ಆಶ್ಚರ್ಯ ತಂದಿದೆ.

ಮೈದಾನದ ಒಳಗೆ ಆಟಗಾರರ ಫಾರ್ಮ್ ಕೊರತೆ ಮತ್ತು ಮೈದಾನದ ಹೊರಗೆ ಪ್ರಮುಖ ಆಟಗಾರರ ಗಾಯದ ಸಮಸ್ಯೆಗಳು ತಂಡವನ್ನು ಕಂಗೆಡಿಸಿವೆ. ಮುಂಬೈ ತಂಡದ ಈ ಅನಿರೀಕ್ಷಿತ ಕುಸಿತಕ್ಕೆ ಕಾರಣವಾದ ತಾಂತ್ರಿಕ ಅಂಶಗಳು, ನಾಯಕತ್ವದ ವೈಫಲ್ಯ ಮತ್ತು ಬದಲಾದ ಪರಿಸ್ಥಿತಿಗಳ ಕುರಿತಾದ ಸಮಗ್ರ ವಿಶ್ಲೇಷಣೆ ಈ ವರದಿಯಲ್ಲಿದೆ.

ನಾಯಕತ್ವದ ಬದಲಾವಣೆ ಮತ್ತು ಗೊಂದಲ: ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಿದ್ದು ತಂಡದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರಿದೆ. ಅಭಿಮಾನಿಗಳ ಆಕ್ರೋಶ ಮತ್ತು ತಂಡದೊಳಗಿನ ಭಿನ್ನಾಭಿಪ್ರಾಯಗಳು ಆಟದ ಮೇಲೆ ಒತ್ತಡ ಹೇರಿವೆ.

ಜಸ್‌ಪ್ರೀತ್ ಬುಮ್ರಾ ಮೇಲೆ ಅತಿಯಾದ ಅವಲಂಬನೆ: ಬೌಲಿಂಗ್ ವಿಭಾಗದಲ್ಲಿ ಬುಮ್ರಾ ಒಬ್ಬರೇ ಹೋರಾಡುತ್ತಿದ್ದಾರೆ. ಅವರಿಗೆ ಸಾಥ್ ನೀಡಲು ಇತರ ಬೌಲರ್‌ಗಳು (ವಿಶೇಷವಾಗಿ ವಿದೇಶಿ ವೇಗಿಗಳು) ವಿಫಲರಾಗುತ್ತಿದ್ದು, ರನ್ ಬಿಟ್ಟುಕೊಡುತ್ತಿದ್ದಾರೆ.

ಬ್ಯಾಟಿಂಗ್ ವೈಫಲ್ಯ: ತಂಡದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರಲ್ಲಿ ಸ್ಥಿರತೆಯ ಕೊರತೆ ಎದ್ದು ಕಾಣುತ್ತಿದೆ. ಪವರ್‌ಪ್ಲೇನಲ್ಲಿ ಬೇಗನೆ ವಿಕೆಟ್ ಕಳೆದುಕೊಳ್ಳುವುದು ತಂಡಕ್ಕೆ ಮುಳುವಾಗುತ್ತಿದೆ.

ತಪ್ಪು ಹರಾಜು ಪ್ರಕ್ರಿಯೆ: ಮೆಗಾ ಹರಾಜಿನಲ್ಲಿ ಕೆಲವೇ ಆಟಗಾರರಿಗೆ ಅತಿ ಹೆಚ್ಚು ಹಣ ವ್ಯಯಿಸಿ, ಸಮತೋಲಿತ ತಂಡವನ್ನು ಕಟ್ಟುವಲ್ಲಿ ಮ್ಯಾನೇಜ್‌ಮೆಂಟ್ ಎಡವಿದೆ. ಇದರಿಂದಾಗಿ ಬೌಲಿಂಗ್ ಮತ್ತು ಆಲ್‌ರೌಂಡ್ ವಿಭಾಗ ದುರ್ಬಲಗೊಂಡಿದೆ.

ಮಧ್ಯಮ ಕ್ರಮಾಂಕದ ಕುಸಿತ: ಈ ಹಿಂದೆ ಇದ್ದ ಕೀರನ್ ಪೊಲಾರ್ಡ್ ಅವರಂತಹ ಪಂದ್ಯವನ್ನು ಗೆಲ್ಲಿಸಿಕೊಡುವ ಫಿನಿಶರ್‌ಗಳ ಕೊರತೆ ತಂಡವನ್ನು ಕಾಡುತ್ತಿದೆ. ಅಂತಿಮ ಓವರ್‌ಗಳಲ್ಲಿ ರನ್ ವೇಗ ಹೆಚ್ಚಿಸಲು ತಂಡ ಪರದಾಡುತ್ತಿದೆ.

ಕಳಪೆ ಫೀಲ್ಡಿಂಗ್: ನಿರ್ಣಾಯಕ ಹಂತಗಳಲ್ಲಿ ಕ್ಯಾಚ್‌ಗಳನ್ನು ಕೈಬಿಡುವುದು ಮತ್ತು ರನ್ ಬಿಟ್ಟುಕೊಡುವುದು ಪಂದ್ಯದ ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ಹಳೆಯ ಆಟಗಾರರ ಮೇಲೆ ಅತಿಯಾದ ಅವಲಂಬನೆ: ಮುಂಬೈ ಇಂಡಿಯನ್ಸ್​ ತಂಡವು ತನ್ನ ಹಳೆಯ ಸ್ಟಾರ್ ಆಟಗಾರರನ್ನೇ ನೆಚ್ಚಿಕೊಂಡಿದೆ. ಆದರೆ ಹೊಸ ಪ್ರತಿಭೆಗಳನ್ನು ಹುಡುಕಿ ಬೆಳೆಸುವಲ್ಲಿ  ಈ ಹಿಂದೆ ಇದ್ದ ಚಾಕಚಕ್ಯತೆ ಈಗ ಕಡಿಮೆಯಾದಂತೆ ಕಾಣುತ್ತಿದೆ.

ಗಾಯದ ಸಮಸ್ಯೆಗಳು: ರೋಹಿತ್ ಶರ್ಮಾ ಅವರಂತಹ ಪ್ರಮುಖ ಆಟಗಾರರು ಗಾಯದ ಕಾರಣದಿಂದ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದು ತಂಡದ ಸಂಯೋಜನೆಯ ಮೇಲೆ ಹೊಡೆತ ನೀಡಿದೆ.

ಡೆತ್ ಓವರ್‌ಗಳಲ್ಲಿ ದುಬಾರಿ: ಜಸ್‌ಪ್ರೀತ್ ಬುಮ್ರಾ ಆರ್ಥಿಕವಾಗಿ ಬೌಲಿಂಗ್ ಮಾಡಿದರೂ, ಅವರಿಗೆ ಸಾಥ್ ನೀಡಬೇಕಾದ ಟ್ರೆಂಟ್ ಬೌಲ್ಟ್ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಬೌಲರ್‌ಗಳು ಡೆತ್ ಓವರ್‌ಗಳಲ್ಲಿ ಓವರ್‌ಗೆ 12ಕ್ಕೂ ಹೆಚ್ಚು ರನ್ ಬಿಟ್ಟುಕೊಡುತ್ತಿದ್ದಾರೆ.

ಹಳೆಯ ಮಾದರಿಯ ಆಟ: ಇಂದಿನ ಟಿ20 ಕ್ರಿಕೆಟ್‌ನಲ್ಲಿ ಆರಂಭದ 6 ಓವರ್‌ಗಳಲ್ಲಿ (ಪವರ್‌ಪ್ಲೇ) ಕನಿಷ್ಠ 70+ ರನ್ ಗಳಿಸುವುದು ಸಾಮಾನ್ಯವಾಗಿದೆ. ಆದರೆ ಮುಂಬೈ ಇಂಡಿಯನ್ಸ್​ ತಂಡವು ತನ್ನ ತವರು ಮೈದಾನ ವಾಂಖೆಡೆಯಲ್ಲೇ ಈ ವೇಗಕ್ಕೆ ಹೊಂದಿಕೊಳ್ಳಲು ಪರದಾಡುತ್ತಿದೆ. 2025-26ರ ಸೀಸನ್‌ಗಳಲ್ಲಿ ತಂಡವು ಕೇವಲ ಎರಡು ಬಾರಿ ಮಾತ್ರ ಪವರ್‌ಪ್ಲೇನಲ್ಲಿ 70ರ ಗಡಿ ದಾಟಿದೆ.

ಮಾನಸಿಕ ಮತ್ತು ದೈಹಿಕ ಆಯಾಸ: ಆರ್. ಅಶ್ವಿನ್ ಅಂತಹ ಹಿರಿಯ ಕ್ರಿಕೆಟಿಗರ ವಿಶ್ಲೇಷಣೆಯಂತೆ, ನಿರಂತರ ಅಂತರಾಷ್ಟ್ರೀಯ ಕ್ರಿಕೆಟ್ ಮತ್ತು ವಿಶ್ವಕಪ್‌ನಂತಹ ದೊಡ್ಡ ಟೂರ್ನಿಗಳ ನಂತರ ಉಂಟಾದ ಆಟಗಾರರ ದೈಹಿಕ ಮತ್ತು ಮಾನಸಿಕ ಆಯಾಸವು  ಮೈದಾನದಲ್ಲಿ ಅವರ ಚುರುಕುತನವನ್ನು ಕಡಿಮೆ ಮಾಡಿದೆ.

ಇದನ್ನೂ ಓದಿ: ಐಪಿಎಲ್ ತಂಡಗಳಿಗೆ ಬಿಸಿಸಿಐ ಕಡೆಯಿಂದ ಖಡಕ್ ಎಚ್ಚರಿಕೆ!

ಒಟ್ಟಾರೆಯಾಗಿ ಹೇಳುವುದಾದರೆ, ಮುಂಬೈ ಇಂಡಿಯನ್ಸ್ ತಂಡದ ಪ್ರಸ್ತುತ ಸ್ಥಿತಿಗೆ ಕೇವಲ ಒಬ್ಬ ಆಟಗಾರ ಅಥವಾ ನಾಯಕ ಕಾರಣವಲ್ಲ. ನಾಯಕತ್ವದ ಬದಲಾವಣೆಯಿಂದ ಉಂಟಾದ ಅಸ್ಥಿರತೆ, ಪ್ರಮುಖ ಬೌಲರ್‌ಗಳ ಫಾರ್ಮ್ ಕೊರತೆ ಮತ್ತು ಹರಾಜಿನಲ್ಲಿ ಸರಿಯಾದ ಆಟಗಾರರನ್ನು ಆರಿಸುವಲ್ಲಿ ಮಾಡಿದ ತಪ್ಪುಗಳು ತಂಡವನ್ನು ಸಂಕಷ್ಟಕ್ಕೆ ದೂಡಿವೆ. ಇದಾಗ್ಯೂ ಮುಂಬೈ ಇಂಡಿಯನ್ಸ್ ತಂಡ ತನ್ನ ಕೊನೆಯ 5 ಪಂದ್ಯಗಳಲ್ಲಿ ಜಯಿಸಿ ಪ್ಲೇಆಫ್​ಗೇರಲಿದೆಯಾ ಕಾದು ನೋಡಬೇಕಿದೆ.

Source link

ಕಾರ್ಮಿಕರಿಗೆ ಸಿಹಿ ಸುದ್ದಿ: ದೊಡ್ಡಬಳ್ಳಾಪುರದ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ಲೋಕಾರ್ಪಣೆ! – Kannada News | Doddaballapura ESI Hospital Inaugurated: 100 Bed Facility Opens After 3 Year Wait

ದೊಡ್ಡಬಳ್ಳಾಪುರದ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ಲೋಕಾರ್ಪಣೆ!

ದೊಡ್ಡಬಳ್ಳಾಪುರ, ಮೇ 03: ಕಳೆದ ಮೂರು ವರ್ಷಗಳಿಂದ ಉದ್ಘಾಟನೆಗಾಗಿ ಕಾಯುತ್ತಿದ್ದ ದೊಡ್ಡಬಳ್ಳಾಪುರದ ನೂತನ ಇಎಸ್ಐ (ESI) ಆಸ್ಪತ್ರೆಯು ಕೊನೆಗೂ ಲೋಕಾರ್ಪಣೆಗೊಂಡಿದೆ. ತಾಲೂಕಿನ ಹೊರವಲಯದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲಾದ ಈ ನೂರು ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು (Hospital) ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್ ಮಾಂಡವೀಯ ಅವರು ಇಂದು ಅಧಿಕೃತವಾಗಿ ಉದ್ಘಾಟಿಸಿದ್ದಾರೆ.

101.14 ಕೋಟಿ ರೂ. ವೆಚ್ಚದ ಯೋಜನೆ

ಕೇಂದ್ರ ಸರ್ಕಾರದ ವತಿಯಿಂದ ಸುಮಾರು 101.14 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ಈ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಲಾಗಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡು ಮೂರು ವರ್ಷಗಳೇ ಕಳೆದಿದ್ದರೂ, ವಿವಿಧ ಕಾರಣಗಳಿಂದ ಉದ್ಘಾಟನೆ ಭಾಗ್ಯ ಕಂಡಿರಲಿಲ್ಲ. ಇಂದು ಅಧೀಕೃತವಾಗಿ ಲೋಕಾರ್ಪಣೆಗೊಳ್ಳುವ ಮೂಲಕ ಕಾರ್ಮಿಕರ ಚಿಕಿತ್ಸೆಗೆ ಹಾದಿ ಸುಗಮವಾಗಿದೆ.

ಕಾರ್ಮಿಕರಿಗೆ ವರದಾನ

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದು, ತುರ್ತು ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಈಗ ಸ್ಥಳೀಯವಾಗಿ ಸುಸಜ್ಜಿತ ಆಸ್ಪತ್ರೆ ಲಭ್ಯವಿರುವುದರಿಂದ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗಲಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಮತ್ತು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಗುಣಮಟ್ಟದ ಚಿಕಿತ್ಸೆ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಈ ಆಸ್ಪತ್ರೆ ದೊಡ್ಡಬಳ್ಳಾಪುರ ತಾಲೂಕಿನ ಮೈಲಿಗಲ್ಲಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕೆಡಿ’ ರೀತಿ ಸಿನಿಮಾ ಮಾಡೋಕೆ ತುಂಬಾ ತಾಕತ್ತು ಬೇಕು: ಆರ್. ಚಂದ್ರು ಮೆಚ್ಚುಗೆ – Kannada News | R Chandru shares his review after watching KD Movie Jogi Prem Dhruva Sarja

‘ಕೆಡಿ’ ಸಿನಿಮಾದ (KD Movie) ಸೆಲೆಬ್ರಿಟಿ ಶೋ ನಡೆದಿದೆ. ಚಿತ್ರ ನೋಡಿದ ಅನೇಕರು ಭೇಷ್ ಎಂದಿದ್ದಾರೆ. ಆರ್. ಚಂದ್ರು, ಪ್ರಮೋದ್ ಶೆಟ್ಟಿ, ಉಪೇಂದ್ರ, ತರುಣ್ ಸುಧೀರ್, ಮಿಲನಾ ನಾಗರಾಜ್, ಮಾನ್ವಿತಾ ಹರೀಶ್, ಪಿ. ರವಿಶಂಕರ್, ಎಸ್. ಮಹೇಂದರ್ ಮುಂತಾದವರು ಸೆಲೆಬ್ರಿಟಿ ಶೋನಲ್ಲಿ ಭಾಗಿಯಾಗಿದ್ದಾರೆ. ಆರ್. ಚಂದ್ರು ಅವರು ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ‘ಈ ರೀತಿಯ ಸಿನಿಮಾ ಮಾಡೋಕೆ ತುಂಬಾ ಗುಂಡಿಗೆ ಬೇಕು. ಅಷ್ಟು ದೊಡ್ಡ ದೃಶ್ಯಕಾವ್ಯವನ್ನು ಕಟ್ಟಿಕೊಡುವುದು ಸುಲಭ ಅಲ್ಲ. ಅದಕ್ಕೆ ಎಷ್ಟು ಶ್ರಮ ಇದೆ ಅಂತ ನನಗೆ ಗೊತ್ತಿದೆ. ಇದು ನಮ್ಮ ಕನ್ನಡದ ಹೆಮ್ಮೆ. ಎಲ್ಲರೂ ಬಂದು ಸಿನಿಮಾ ನೋಡಬೇಕು. ಈ ರೀತಿ ಸಿನಿಮಾ ಮಾಡೋಕೆ ತುಂಬಾ ತಾಕತ್ತು ಬೇಕು. ಪಾರ್ಟ್ 2 ನೋಡಲು ಕಾಯುತ್ತಿದ್ದೇನೆ’ ಎಂದು ಆರ್. ಚಂದ್ರು (R Chandru) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತದ ವಿದೇಶ ವಿನಿಮಯ ಮೀಸಲು ನಿಧಿಯಲ್ಲಿ ಚಿನ್ನದ ಪಾಲು ಗಣನೀಯ ಏರಿಕೆ – Kannada News | India forex reserves down by 4 billion USD, while gold share in forex reserves rises to 16pc

ನವದೆಹಲಿ, ಮೇ 3: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex Reserves) ಮತ್ತೆ 700 ಬಿಲಿಯನ್ ಡಾಲರ್ ಮಟ್ಟಕ್ಕಿಂತ ತುಸು ಕೆಳಗೆ ಇಳಿದಿದೆ. ಆರ್​ಬಿಐ ಮೊನ್ನೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಏಪ್ರಿಲ್ 24ರಂದು ಅಂತ್ಯಗೊಂಡ ವಾರದಲ್ಲಿ (ಏಪ್ರಿಲ್ 18-24) 4.82 ಬಿಲಿಯನ್ ಡಾಲರ್​ನಷ್ಟು ಕುಸಿದಿದೆ. ಇದರೊಂದಿಗೆ ಒಟ್ಟು ಫಾರೆಕ್ಸ್ ರಿಸರ್ವ್ಸ್ 698.49 ಬಿಲಿಯನ್ ಡಾಲರ್ ಆಗಿದೆ. ಫಾರೆಕ್ಸ್ ರಿಸರ್ವ್ಸ್​ನ ಎಲ್ಲಾ ಭಾಗಗಳೂ ಇಳಿದಿವೆ. ಫಾರೀನ್ ಕರೆನ್ಸಿ ಅಸೆಟ್​ಗಳು 2.84 ಬಿಲಿಯನ್ ಡಾಲರ್​ನಷ್ಟು ಕಡಿಮೆ ಆದರೆ, ಚಿನ್ನದ ನಿಧಿ 1.90 ಬಿಲಿಯನ್ ಡಾಲರ್ ತಗ್ಗಿದೆ. ಎಸ್​ಡಿಆರ್ ಮತ್ತು ಐಎಂಎಫ್ ಪಾಲು ಕೂಡ ಕಡಿಮೆಗೊಂಡಿವೆ.

ಭಾರತದ ಫಾರೆಕ್ಸ್ ರಿಸರ್ವ್ಸ್ (ಏಪ್ರಿಲ್ 24ಕ್ಕೆ)

ಒಟ್ಟು ಫಾರೆಕ್ಸ್ ರಿಸರ್ವ್ಸ್: 698.49 ಬಿಲಿಯನ್ ಡಾಲರ್

  • ವಿದೇಶೀ ಕರೆನ್ಸಿ: 554.62 ಬಿಲಿಯನ್ ಡಾಲರ್
  • ಚಿನ್ನದ ನಿಧಿ: 120.24 ಬಿಲಿಯನ್ ಡಾಲರ್
  • ಎಸ್​ಡಿಆರ್: 18.77 ಬಿಲಿಯನ್ ಡಾಲರ್
  • ಐಎಂಎಫ್ ನಿಧಿ: 4.85 ಬಿಲಿಯನ್ ಡಾಲರ್

ಇದನ್ನೂ ಓದಿ: ಆರ್​ಬಿಐ ಉಪ ಗವರ್ನರ್ ಆಗಿ ರೋಹಿತ್ ಜೈನ್ ನೇಮಕ

ಫಾರೆಕ್ಸ್ ನಿಧಿಯಲ್ಲಿ ಚಿನ್ನದ ಪಾಲು ಹೆಚ್ಚಳ

ಆರ್​ಬಿಐ ಬಿಡುಗಡೆ ಮಾಡಿದ ಮತ್ತೊಂದು ವರದಿ ಪ್ರಕಾರ ಫಾರೆಕ್ಸ್ ರಿಸರ್ವ್ಸ್​ನಲ್ಲಿ ಚಿನ್ನದ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. 2026ರ ಮಾರ್ಚ್ 31ಕ್ಕೆ ಫಾರೆಕ್ಸ್ ನಿಧಿಯಲ್ಲಿ ಚಿನ್ನದ ಪಾಲು ಶೇ. 16.7ಕ್ಕೆ ಏರಿದೆ. ಆರು ತಿಂಗಳ ಹಿಂದೆ (2025ರ ಸೆಪ್ಟೆಂಬರ್) ಇದು ಶೇ. 13.92ರಷ್ಟು ಇತ್ತು. ಆರ್​ಬಿಐ ಸತತವಾಗಿ ಚಿನ್ನದ ಖರೀದಿ ಮಾಡುತ್ತಿರುವುದು ಇದಕ್ಕೆ ಕಾರಣ. ಜಾಗತಿಕ ರಾಜಕೀಯ ಅನಿಶ್ಚಿತ ಪರಿಸ್ಥಿತಿ ಹಿನ್ನೆಲೆಯಲ್ಲಿ ಆರ್​ಬಿಐ ಮಾತ್ರವಲ್ಲ ಹೆಚ್ಚಿನ ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿ ಮಾಡುತ್ತಿರುವುದು ಗಮನಾರ್ಹ ಸಂಗತಿ.

ಭಾರತದ ಗೋಲ್ಡ್ ರಿಸರ್ವ್​ಗಳಲ್ಲಿ ಹೆಚ್ಚಿನವು ದೇಶದೊಳಗೆಯೇ ಇದೆ. ಆರ್​ಬಿಐ ಬಳಿ 880.52 ಮೆಟ್ರಿಕ್ ಟನ್ ಚಿನ್ನ ಇದೆ. ಇದರಲ್ಲಿ 680 ಮೆಟ್ರಿಕ್ ಟನ್​ಗಳಷ್ಟು ಚಿನ್ನವನ್ನು ದೇಶದೊಳಗೆಯೇ ಇರಿಸಿಕೊಳ್ಳಲಾಗಿದೆ. ಉಳಿದವು ವಿದೇಶಗಳಲ್ಲಿ ಇವೆ.

ಇದನ್ನೂ ಓದಿ: ಆರ್​ಬಿಐನಿಂದ ಹೊಸ ಇ-ಮ್ಯಾಂಡೇಟ್ ಫ್ರೇಮ್​ವರ್ಕ್; 15,000 ರೂವರೆಗಿನ ರಿಕರಿಂಗ್ ಪೇಮೆಂಟ್ಸ್​ಗೆ ಒಟಿಪಿ ಬೇಕಿಲ್ಲ

ಭಾರತ ಚಿನ್ನವನ್ನು ಯಾಕೆ ತರುತ್ತಿದೆ?

ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಎರಡು ವರ್ಷಗಳಿಂದ ಸದ್ದುಗದ್ದಲವಿಲ್ಲದೆ ಸಾಕಷ್ಟು ಚಿನ್ನವನ್ನು ಭಾರತಕ್ಕೆ ಸಾಗಿಸುತ್ತಿದೆ. ಸಾಮಾನ್ಯವಾಗಿ ಆರ್​ಬಿಐ ತಾನು ಖರೀದಿಸಿದ ಚಿನ್ನವನ್ನು ವಿದೇಶಗಳಲ್ಲಿ ಇರಿಸುತ್ತದೆ. ಆದರೆ, ಜಾಗತಿಕ ರಾಜಕೀಯ ಅನಿಶ್ಚಿತತೆ ಇರುವ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಚಿನ್ನವನ್ನು ಇರಿಸುವುದು ಸುರಕ್ಷಿತ ಎನಿಸುವುದಿಲ್ಲ. ಹೀಗಾಗಿ, ಭಾರತವು ತನ್ನ ಪಾಲಿನ ಚಿನ್ನವನ್ನು ತನ್ನ ದೇಶದೊಳಗೆಯೇ ಇರಿಸಿಕೊಳ್ಳಲು ಯತ್ನಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ತಂಡಗಳಿಗೆ ಬಿಸಿಸಿಐ ಕಡೆಯಿಂದ ಖಡಕ್ ಎಚ್ಚರಿಕೆ! – Kannada News | Did Punjab Police Approach BCCI After Riyan Parag Vaping Incident?

ಐಪಿಎಲ್ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ (ವೇಪಿಂಗ್) ಸೇವಿಸಿದ ಘಟನೆಗೆ ಸಂಬಂಧಿಸಿದಂತೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕಠಿಣ ಎಚ್ಚರಿಕೆ ನೀಡಿದ್ದಾರೆ. ಆಟಗಾರರು ಮತ್ತು ಅಧಿಕಾರಿಗಳು ಮೈದಾನದ ಒಳಗೆ ಮತ್ತು ಹೊರಗೆ ಕ್ರೀಡೆಯ ಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಖಡಕ್ ಆಗಿ ಸೂಚಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಇತ್ತೀಚೆಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪಿಂಗ್ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಭಾರತದಲ್ಲಿ ಇ-ಸಿಗರೇಟ್ ನಿಷೇಧಿತ ವಸ್ತುವಾಗಿದ್ದು, ಕ್ರೀಡಾಂಗಣದ ನಿಯಮಗಳನ್ನೂ ಇದು ಮೀರಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಪರಾಗ್‌ಗೆ ಪಂದ್ಯದ ಸಂಭಾವನೆಯ ಶೇ. 25ರಷ್ಟು ದಂಡ ವಿಧಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಲ್ ಆಟಗಾರರಿಗೆ ಬಿಸಿಸಿಐ ಖಡಕ್ ಎಚ್ಚರಿಕೆ ನೀಡಿದೆ.

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಹೇಳಿಕೆಯ ಮುಖ್ಯಾಂಶಗಳು:

  • ಪೊಲೀಸ್ ಹಸ್ತಕ್ಷೇಪವಿಲ್ಲ: ಈ ವಿಷಯವಾಗಿ ಪಂಜಾಬ್ ಪೊಲೀಸರು ಬಿಸಿಸಿಐ ಅನ್ನು ಇದುವರೆಗೆ ಸಂಪರ್ಕಿಸಿಲ್ಲ ಎಂದು ಸೈಕಿಯಾ ಸ್ಪಷ್ಟಪಡಿಸಿದ್ದಾರೆ.
  •  ಶಿಸ್ತು ಕ್ರಮ: ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.21 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲಾಗುವುದು.
  • ತಂಡಗಳಿಗೆ ಎಚ್ಚರಿಕೆ: ಕೇವಲ ಆಟಗಾರರಷ್ಟೇ ಅಲ್ಲದೆ, ನಿಯಮ ಉಲ್ಲಂಘಿಸುವ ತಂಡಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ.

ಇದನ್ನೂ ಓದಿ: ಸಿಕ್ಸರ್‌ನಿಂದ ಗಾಯಗೊಂಡ ಅಭಿಮಾನಿಗೆ ಭರ್ಜರಿ ಗಿಫ್ಟ್​ ನೀಡಿದ ಪಂಜಾಬ್ ಕಿಂಗ್ಸ್

ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ಕೂಡ ಡಗೌಟ್‌ನಲ್ಲಿ ಮೊಬೈಲ್ ಬಳಸಿದ ಕಾರಣಕ್ಕೆ ದಂಡಕ್ಕೊಳಗಾಗಿದ್ದು, ಈ ಸರಣಿ ಘಟನೆಗಳಿಂದಾಗಿ ತಂಡದ ಶಿಸ್ತಿನ ಬಗ್ಗೆ ಪ್ರಶ್ನೆಗಳು ಎದ್ದಿವೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ನಡೆದರೆ ಆಟಗಾರರ ಮೇಲೆ ನಿಷೇಧ ಹೇರುವಂತಹ ಕಠಿಣ ಆಯ್ಕೆಗಳನ್ನೂ ಬಿಸಿಸಿಐ ಮುಕ್ತವಾಗಿರಿಸಿಕೊಂಡಿದೆ.

Source link