All posts by nagaraj11081993

ಮದ್ವೆಗೆಂದು ಹೋಗಿ ಗಂಡನ ಸ್ನೇಹಿತನ ಮನೇಲಿ ಸಿಕ್ಕಿಬಿದ್ದ ಆಂಟಿ: ಶಾಕಿಂಗ್ ಕಾರಣ ಬಿಚ್ಚಿಟ್ಟ SP – Kannada News | Hassan SP Talks about Tumakuru Lady Priyanaka Found with Her Lover

ಹಾಸನ, (ಫೆಬ್ರವರಿ 15): ಮದುವೆಗೆಂದು ಹಾಸನಕ್ಕೆ ಹೋಗಿದ್ದ ತುಮಕೂರು ಮೂಲದ ಪ್ರಿಯಾಂಕಾ ನಾಪತ್ತೆ ಪ್ರಕರಣವು ರೋಚಕ ತಿರುವು ಪಡೆದಿದ್ದು, ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು. ಆದರೆ, ಬೇಲೂರಿನ ಪೊಲೀಸರ ತನಿಖೆಯಿಂದ ಆಕೆ ತನ್ನ ಪ್ರಿಯಕರ ಡೇವಿಡ್ ಮನೆಯಲ್ಲಿ ಪತ್ತೆಯಾಗಿದ್ದು, ಇಬ್ಬರನ್ನೂ ವಶಕ್ಕೆ ಪಡೆದುಕೊಂಡು ಹಾಸನದ ಡಿವೈಎಸ್ಪಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಿಯಾಂಕಾ ನಾಪತ್ತೆಯಾದಾಗ ಆಕೆ ಕೊಲೆಯಾಗಿರಬಹುದು ಅಥವಾ ಅಪಹರಣಕ್ಕೊಳಗಾಗಿರಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು. ಆದರೆ, ಕತೆ ಕಟ್ಟಿದ್ದ ಆಕೆ ಪತಿಯ ಸ್ನೇಹಿತನ ಜೊತೆಗೆ ಕಳೆದ ಎರಡುದಿನಗಳಿಂದ ಇದ್ದಿದ್ದು ತನಿಖೆ ವೇಳೆ ಬಯಲಾಗಿದೆ. ಇನ್ನು ಈ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಾಸ್ಟೆಲ್ ರೂಂ ಬಾಗಿಲು ಲಾಕ್, ಕರೆಗಳಿಗೆ ಉತ್ತರವಿಲ್ಲ, ನೇಣು ಬಿಗಿದ ಸ್ಥಿತಿಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಪತ್ತೆ – Kannada News | MBBS Student Found Dead in Locked Hostel Room in West Bengal

ಕೋಲ್ಕತ್ತಾ, ಫೆಬ್ರವರಿ 13: ಹಾಸ್ಟೆಲ್(Hostel) ಕೋಣೆಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಯಾಗಿದ್ದ ಲಾವನ್ಯ ಪ್ರತಾಪ್ ಸಾವನ್ನಪ್ಪಿದ್ದಾರೆ. ಹಾಸ್ಟೆಲ್ ಕೋಣೆಯ ಬಾಗಿಲ್ ಲಾಕ್ ಆಗಿತ್ತು, ಸ್ನೇಹಿತರು ಕರೆ ಮಾಡಿದರೂ ಆಕೆ ಉತ್ತರಿಸದ ಕಾರಣ ಅನುಮಾನ ಬಂದು ಬಾಗಿಲು ಒಡೆದು ನೋಡಿದಾಗ ಆತ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.

ಮಾಹಿತಿ ಪಡೆದ ನಂತರ ದುರ್ಗಾಪುರ ಪೊಲೀಸ್ ಠಾಣೆಯ ಪೊಲೀಸರು ಕ್ಯಾಂಪಸ್‌ಗೆ ತಲುಪಿ ಹಾಸ್ಟೆಲ್ ಕೊಠಡಿಯಿಂದ ಶವವನ್ನು ವಶಪಡಿಸಿಕೊಂಡರು. ಆಸ್ಪತ್ರೆಯಲ್ಲಿ ಇರಿಸಿ ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಭಾನುವಾರದ ಹೊತ್ತಿಗೆ ಕ್ಯಾಂಪಸ್​​ನಲ್ಲಿ ನೀರವ ಮೌನ ಆವರಿಸಿಕೊಂಡಿತ್ತು. ಪ್ರತಾಪ್ ತಂದೆ ಅನಿಲ್ ಕುಮಾರ್, ಕಾಲೇಜು ಆಡಳಿತದ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದು, ಘಟನೆಯ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿರಲಿಲ್ಲ ಎಂದು ಆರೋಪಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಮೃತರನ್ನು ಬಿಹಾರದ ಪಾಟ್ನಾ ನಿವಾಸಿ ಲಾವಣ್ಯ ಪ್ರತಾಪ್ ಎಂದು ಗುರುತಿಸಲಾಗಿದೆ. ಅವರು ವೈದ್ಯಕೀಯ ಅಧ್ಯಯನ ಮಾಡುವಾಗ ಕಾಲೇಜು ಹಾಸ್ಟೆಲ್‌ನಲ್ಲಿ ತಂಗಿದ್ದರು. ಕಳೆದ ಕೆಲವು ಸೆಮಿಸ್ಟರ್‌ಗಳಲ್ಲಿ ಅನುತ್ತೀರ್ಣರಾದ ನಂತರ ವಿದ್ಯಾರ್ಥಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎಂದು ಅವರ ಸ್ನೇಹಿತರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಸಾವು ಆತ್ಮಹತ್ಯೆಯೇ ಅಥವಾ ಬೇರೆ ಯಾವುದೇ ಅಂಶಗಳು ಒಳಗೊಂಡಿವೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಮತ್ತಷ್ಟು ಓದಿ: Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ

ಶನಿವಾರ ರಾತ್ರಿ ಸಹ ವಿದ್ಯಾರ್ಥಿಗಳು ಹಾಸ್ಟೆಲ್ ಶೌಚಾಲಯದಲ್ಲಿ ನೇತಾಡುತ್ತಿರುವ ಅವರ ಶವವನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿತು. ದುರ್ಗಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತಲುಪಿ, ಶವವನ್ನು ಹೊರತೆಗೆದು, ಭಾನುವಾರ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಕಳೆದ ವರ್ಷ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಘಟನೆ ಇದೇ ಕಾಲೇಜಿನಲ್ಲಿ ನಡೆದಿತ್ತು. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಈ ಪ್ರಕರಣವು ಆ ಸಮಯದಲ್ಲಿ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IND vs PAK: ಮಳೆ ಬಂದರೆ ಭಾರತಕ್ಕೆ ನೀಡಲಾಗುವ ಟಾರ್ಗೆಟ್ ಎಷ್ಟು? – Kannada News | IND vs PAK Estimated DLS Targets for Team India

ಭಾರತ ಮತ್ತು ಪಾಕಿಸ್ತಾನ್ (India vs Pakistan) ನಡುವಣ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಕೊಲಂಬೊ ಭಾಗದಲ್ಲಿ ಭಾನುವಾರ ಮಧ್ಯಾಹ್ನ ಮತ್ತು ಸಂಜೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೆ ಪಂದ್ಯದ ವೇಳೆ ಸುಮಾರು 60% ರಿಂದ 80% ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯವು ತಡವಾಗಿ ಆರಂಭವಾಗಬಹುದು ಅಥವಾ ಓವರ್‌ಗಳನ್ನು ಕಡಿತಗೊಳಿಸಿ (DLS ನಿಯಮದಡಿ) ಪಂದ್ಯವನ್ನು ನಡೆಸಬಹುದು.

ಒಂದು ವೇಳೆ ಪಾಕಿಸ್ತಾನ್ ಅಥವಾ ಭಾರತ ತಂಡವು 20 ಓವರ್​​ಗಳನ್ನು ಆಡಿ 200 ರನ್​​ಗಳಿಸಿದ ಬಳಿಕ ಮಳೆ ಬಂದರೆ, ಓವರ್‌ಗಳು ಕಡಿತಗೊಂಡು ಭಾರತ ಅಥವಾ ಪಾಕಿಸ್ತಾನಕ್ಕೆ ನೀಡಲಾಗುವ ಅಂದಾಜು DLS (Duckworth-Lewis-Stern) ಗುರಿಗಳು ಈ ಕೆಳಗಿನಂತಿರುತ್ತವೆ…

  • 15 ಓವರ್‌ಗಳಲ್ಲಿ- 166 ರಿಂದ 168 ರನ್​​​ಗಳ ಗುರಿ ನೀಡಬಹುದು.
  • 12 ಓವರ್‌ಗಳಲ್ಲಿ- 140 ರಿಂದ 142 ರನ್​​ಗಳ ಗುರಿ ನೀಡಬಹುದು.
  • 10 ಓವರ್‌ಗಳಲ್ಲಿ- 122 ರಿಂದ 124 ರನ್​​ಗಳ ಗುರಿ ನೀಡಬಹುದು.
  • 5 ಓವರ್‌ಗಳಲ್ಲಿ 71 ರಿಂದ 74 ರನ್​​ಗಳ ಗುರಿ ನೀಡಬಹುದು.

ಇನ್ನು ಈ ಪಂದ್ಯವು 10 ಓವರ್​​ಗಳಿಗೆ ಸೀಮಿತವಾಗಿ ಮೊದಲು ಬ್ಯಾಟ್ ಮಾಡಿದ ತಂಡವು 10 ಓವರ್​ಗಳಲ್ಲಿ 125 ರನ್​​ಗಳಿಸಿತು ಎಂದಿಟ್ಟುಕೊಳ್ಳಿ. ಇದಾದ ಬಳಿಕ ಮಳೆ ಬಂದು ಓವರ್ ಕಡಿತವಾದರೆ ಡಿಎಲ್​​ಎಸ್​ ನಿಯಮದ ಪ್ರಕಾರ ಈ ಕೆಳಗಿನಂತೆ ಗುರಿ ನೀಡಲಾಗುತ್ತದೆ…

  • 8 ಓವರ್​​ಗಳಲ್ಲಿ- 105 ರಿಂದ 110 ರನ್​​​ಗಳ ಗುರಿ ನೀಡಬಹುದು.
  • 5 ಓವರ್​​​ಗಳಲ್ಲಿ- 75 ರಿಂದ 110 ರನ್​​ಗಳ ಗುರಿ ನೀಡಬಹುದು.

DLS ಗುರಿ ಏಕೆ ಹೆಚ್ಚಾಗುತ್ತದೆ?

ಮೊದಲ ಇನಿಂಗ್ಸ್ ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸುವ ತಂಡದ ಬಳಿ ಇನ್ನೂ 10 ವಿಕೆಟ್‌ಗಳು ಬಾಕಿ ಇರುವುದರಿಂದ, ಕಡಿಮೆ ಓವರ್‌ಗಳಲ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಆಡಲು ಅವಕಾಶವಿರುತ್ತದೆ. ಆದ್ದರಿಂದ, ಓವರ್‌ಗಳು ಕಡಿಮೆಯಾದಂತೆ ರನ್ ರೇಟ್ ಮತ್ತು ಗುರಿಯನ್ನು DLS ನಿಯಮದಡಿ ಹೆಚ್ಚಿಸಲಾಗುತ್ತದೆ.

ಇದನ್ನೂ ಓದಿ: ಮೂರೇ 3 ಎಸೆತಗಳಿಂದ ವಿಶ್ವ ದಾಖಲೆ ತಪ್ಪಿಸಿಕೊಂಡ ಸೌತ್ ಆಫ್ರಿಕಾ

ಅದರಂತೆ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಿದರೆ, ಓವರ್​ಗಳ ಕಡಿತದೊಂದಿಗೆ ಮೇಲೆ ನೀಡಿದಂತೆ ಗುರಿಗಳನ್ನು ನಿಗದಿ ಮಾಡಲಿದ್ದಾರೆ. ಅಂದರೆ ಇಲ್ಲಿ ಮಳೆ ಬರುವ ಸಾಧ್ಯತೆ ಇರುವುದರಿಂದ ದ್ವಿತೀಯ ಇನಿಂಗ್ಸ್ ಆಡುವ ತಂಡಕ್ಕೆ ಅನುಕೂಲ ಹೆಚ್ಚು. ಹೀಗಾಗಿ ಈ ಪಂದ್ಯದಲ್ಲಿ ಟಾಸ್ ಗೆಲ್ಲುವ ತಂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.

5 ಓವರ್​ ಆಡಲೇಬೇಕು:

ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯವು ಮಳೆಗೆ ಆಹುತಿಯಾದರೆ ಡಕ್​ ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲು ಉಭಯ ತಂಡಗಳು ಕನಿಷ್ಠ 5 ಓವರ್​ಗಳನ್ನು ಆಡಿರಲೇಬೇಕು.

ಉದಾಹರಣೆಗೆ, ಪಾಕಿಸ್ತಾನ್ ತಂಡ ಮೊದಲು ಬ್ಯಾಟ್ ಮಾಡಿ 20 ಓವರ್​ಗಳಲ್ಲಿ 150 ರನ್​ ಕಲೆಹಾಕಿದೆ ಎಂದಿಟ್ಟುಕೊಳ್ಳಿ. ಈ ಗುರಿಯನ್ನು ಬೆನ್ನತ್ತುವಾಗ ಮಳೆ ಬಂದು ಪಂದ್ಯ ಸ್ಥಗಿತಗೊಂಡರೆ, ಡಿಎಲ್​​ಎಸ್ ನಿಯಮದಡಿ ಫಲಿತಾಂಶ ನಿರ್ಧರಿಸಲು ಟೀಮ್ ಇಂಡಿಯಾ ಕನಿಷ್ಠ 5 ಓವರ್​ ಆಡಿರಬೇಕಾಗುತ್ತದೆ.

ಅಂದರೆ ದ್ವಿತೀಯ ಇನಿಂಗ್ಸ್ ಆಡುವ ತಂಡಕ್ಕೆ ಕನಿಷ್ಠ 5 ಓವರ್​ಗಳನ್ನು ಆಡುವ ಅವಕಾಶ ಇರದಿದ್ದರೆ ಮಾತ್ರ ಪಂದ್ಯವನ್ನು ರದ್ದುಪಡಿಸಲಾಗುತ್ತದೆ. ಇನ್ನು ಪಂದ್ಯ ರದ್ದಾದರೆ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಳ್ಳಲಿದೆ.

Source link

‘ರಕ್ಕಸಪುರದೋಳ್’ ವಿಲನ್ ಅನಿರುದ್ಧ್ ಭಟ್ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳು – Kannada News | Rakkasapuradhol movie Villain Anirudh Bhat Profile Age Filmography and Family

Raj B. Shetty, Anirudh Bhat

ಜನಮೆಚ್ಚುಗೆ ಪಡೆದಿರುವ ‘ರಕ್ಕಸಪುರದೋಳ್’ (Rakkasapuradhol) ಸಿನಿಮಾದಿಂದ ನಟ ಅನಿರುದ್ಧ್ ಭಟ್ ಅವರ ಖ್ಯಾತಿ ಹೆಚ್ಚಾಗಿದೆ. ಈ ಸಿನಿಮಾ ನೋಡಿದ ಎಲ್ಲರೂ ಕೂಡ ಅನಿರುದ್ಧ್ ಭಟ್ ಅವರ ನಟನೆಯನ್ನು ಹೊಗಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅನಿರುದ್ಧ್ ಭಟ್ ಅವರು ವಿಲನ್ ಪಾತ್ರ ಮಾಡಿದ್ದರೂ ಕೂಡ ಹೀರೋ ರೀತಿಯೇ ಮಿಂಚುತ್ತಿದ್ದಾರೆ. ಪ್ರೇಕ್ಷಕರು ಅವರನ್ನು ಆ ಪರಿ ಇಷ್ಟಪಟ್ಟಿದ್ದಾರೆ. ಬಣ್ಣದ ಲೋಕಕ್ಕೆ ಅನಿರುದ್ಧ್ ಭಟ್ (Anirudh Bhat) ಅವರು ತುಂಬ ಹೊಸಬರೇನೂ ಅಲ್ಲ. ‘ಟಿವಿ9 ಡಿಜಿಟಲ್’ ಜೊತೆ ಮಾತನಾಡಿರುವ ಅವರು ತಮ್ಮ ಹಿನ್ನೆಲೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸುಳ್ಯದ ಹುಡುಗ: ಅನಿರುದ್ಧ್ ಭಟ್ ಅವರು ಮೂಲತಃ ಸುಳ್ಯದವರು. ಅಲ್ಲಿ ಜನಿಸಿದ ಅವರು ನಂತರ ಕುಶಾಲನಗರದಲ್ಲಿ 10ನೇ ತರಗತಿ ತನಕ ಓದಿದರು. ಉಡುಪಿಯಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು. ಬೆಂಗಳೂರಿಗೆ ಬಂದು ಬಿಎಸ್ಸಿ ಅಗ್ರಿಕಲ್ಚರ್ ಡಿಗ್ರಿ ಪಡೆದುಕೊಂಡರು. ವಿದ್ಯಾಭ್ಯಾಸದ ಜೊತೆಯಲ್ಲೇ ಅವರಿಗೆ ಕಿರುಚಿತ್ರಗಳಲ್ಲಿ ಆಸಕ್ತಿ ಬೆಳೆಯಿತು. ಒಂದಷ್ಟು ಕಿರುಚಿತ್ರಗಳಿಗೆ ಅವರೇ ನಿರ್ದೇಶನ ಮಾಡಿ, ನಟಿಸಿದ್ದಾರೆ.

ಕಿರುಚಿತ್ರಗಳು: ‘ಸದ್ದಿಲ್ಲದೇ’, ‘ಬುದ್ಧಿವಂತ ದಡ್ಡರು’, ‘ಸರ್ಪ್ರೈಸ್ ಡಿನ್ನರ್’, ‘ಅಹಂ’, ‘ಡೋಂಟ್ ಲುಕ್ ಬ್ಯಾಕ್’ ಮುಂತಾದ ಕಿರುಚಿತ್ರಗಳನ್ನು ಅನಿರುದ್ಧ್ ಭಟ್ ಮಾಡಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಮೂಲಕ ಕೆಲವು ಕಿರುಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ನಂತರ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು.

ಈವರೆಗಿನ ಸಿನಿಮಾಗಳು: ಅನಿರುದ್ಧ್ ಭಟ್ ಅವರು ನಟಿಸಿದ ಮೊದಲ ಸಿನಿಮಾ ‘ಗುರುದೇವ ಹೊಯ್ಸಳಾ’. ಆ ಬಳಿಕ ಅವರು ‘ಇಬ್ಬನಿ ತಬ್ಬಿದ ಇಳೆಯಲಿ’ ಮತ್ತು ‘ಮ್ಯಾಕ್ಸ್’ ಸಿನಿಮಾದಲ್ಲಿ ಅಭಿನಯಿಸಿದರು. ಆದರೆ ಅವರಿಗೆ ಅತಿ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿದ್ದು 4ನೇ ಸಿನಿಮಾ ‘ರಕ್ಕಸಪುರದೋಳ್’.

Anirudh Bhat

ಎಡಿಟರ್ ಕೂಡ ಹೌದು: ಅನಿರುದ್ಧ್ ಭಟ್ ಅವರು ಆ್ಯಕ್ಟರ್ ಮಾತ್ರವಲ್ಲ, ಎಡಿಟರ್ ಕೂಡ ಹೌದು. ಜಾಹೀರಾತುಗಳು ಹಾಗೂ ವೆಡ್ಡಿಂಗ್ ವಿಡಿಯೋ ಸಂಕಲನ ಮಾಡುತ್ತಾರೆ. ಇದರಿಂದ ಅವರು ಹಣ ಸಂಪಾದನೆ ಮಾಡುತ್ತಾರೆ. ಉತ್ತಮ ನಟ ಆಗಬೇಕಿದ್ದರೆ ಸಿನಿಮಾದ ವಿವಿಧ ವಿಭಾಗಗಳ ಅರಿವು ಇರಬೇಕು ಎಂಬುದು ಅವರ ಬಲವಾದ ನಂಬಿಕೆ.

ಹೀರೋ ಆಗಬೇಕಿತ್ತು: ಎಲ್ಲರಂತೆ ಅನಿರುದ್ಧ್ ಅವರು ಕೂಡ ಹೀರೋ ಆಗಬೇಕು ಅಂತ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ ಆರಂಭದಿಂದಲೂ ಅವರಿಗೆ ನೆಗೆಟಿವ್ ಶೇಡ್ ಇರುವ ಪಾತ್ರಗಳೇ ಸಿಕ್ಕಿವೆ. ಆದರೆ ಮುಂದಿನ ದಿನಗಳಲ್ಲಿ ಹೀರೋ ಸೇರಿದಂತೆ ಎಲ್ಲ ಬಗೆಯ ಪಾತ್ರಗಳನ್ನು ಮಾಡಲು ಅವರು ಸಿದ್ಧವಾಗಿದ್ದಾರೆ.

ಇದನ್ನೂ ನೋಡಿ: ‘ರಕ್ಕಸಪುರದೋಳ್’ ನೋಡಲು ಬಂದ ಉಪೇಂದ್ರ

ನಟನೆ ಕಲಿತಿದ್ದು ಹೀಗೆ: ಅನಿರುದ್ಧ್ ಭಟ್ ಅವರು ಯಾವುದೇ ನಟನಾ ಶಾಲೆಗೆ ಹೋಗಿಲ್ಲ. ರಂಗಭೂಮಿಯಲ್ಲೂ ಅವರು ಕೆಲಸ ಮಾಡಿಲ್ಲ. ಕಿರುಚಿತ್ರಗಳನ್ನು ಮಾಡುತ್ತಾ, ಸಿನಿಮಾಗಳನ್ನು ನೋಡುತ್ತಲೇ ಅವರು ನಟನೆ ಕಲಿತಿದ್ದಾರೆ ಎಂಬುದು ವಿಶೇಷ.

ಅನಿರುದ್ಧ್ ಭಟ್ ವಯಸ್ಸು: 1997ರ ನವೆಂಬರ್ 30ರಂದು ಜನಿಸಿದ ಅನಿರುದ್ಧ್ ಭಟ್ ಅವರಿಗೆ ಈಗ 28 ವರ್ಷ ವಯಸ್ಸು. ಇನ್ನು 5-6 ವರ್ಷಗಳ ಕಾಲ ತಮಗೆ ಮದುವೆ ಬಗ್ಗೆ ಆಲೋಚನೆ ಇಲ್ಲ ಎಂದಿದ್ದಾರೆ. 6.1 ಅಡಿ ಎತ್ತರ ಇರುವ ಅವರ ಕಂಠ ಕೂಡ ಖಡಕ್ ಆಗಿದೆ.

6 ಭಾಷೆ ಬಲ್ಲವರು: ಅಪ್ಪಟ ಕನ್ನಡದ ಈ ಪ್ರತಿಭಾವಂತನಿಗೆ ಕನ್ನಡದ ಜೊತೆ ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ ಭಾಷೆಗಳು ಕೂಡ ಗೊತ್ತಿವೆ. ಹಾಗಾಗಿ ಪರಭಾಷೆಯಿಂದ ಉತ್ತಮ ಅವಕಾಶಗಳು ಸಿಕ್ಕರೆ ನಟಿಸುವ ಹಂಬಲ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಕ್ಲು ಶಿವ ಕೊಲೆ ಕೇಸ್​​: ಶಾಸಕ ಬೈರತಿ ಬಸವರಾಜ್​​ ಫೆ.21ರವರೆಗೆ ಸಿಐಡಿ ಕಸ್ಟಡಿಗೆ – Kannada News | Biklu Shiva Murder Case: MLA Byrathi Basavaraj Remanded to CID Custody Till February 21

ಬೆಂಗಳೂರು, ಫೆಬ್ರವರಿ 15: ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಶಾಸಕ ಬೈರತಿ ಬಸವರಾಜ್​​ರನ್ನು ಫೆ.21ರವರೆಗೆ ಸಿಐಡಿ ಕಸ್ಟಡಿಗೆ ನೀಡಿ 42ನೇ ಎಸಿಜೆಎಂ ಕೋರ್ಟ್​ ಜಡ್ಜ್ ಆದೇಶಿಸಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ವಿವಿಧ ಪರೀಕ್ಷೆಗಳ ಬಳಿಕ ಕೋರಮಂಗಲದಲ್ಲಿರುವ 42ನೇ ಎಸಿಜೆಎಂ ಕೋರ್ಟ್​ ಜಡ್ಜ್ ನಿವಾಸಕ್ಕೆ ಶಾಸಕರನ್ನು ಹಾಜರುಪಡಿಸಲಾಗಿತ್ತು. ಸಿಐಡಿ ಪೊಲೀಸರ ಪರ ಎಸ್​ಪಿಪಿ ಅಶೋಕ್ ನಾಯ್ಕ್ ಈ ವೇಳೆ ಹಾಜರಿದ್ದರು. ಶಾಸಕರು ಹೃದಯ ಸಂಬಂಧಿ ಸಮಸ್ಯೆ ಬಗ್ಗೆ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಸಿಐಡಿಗೆ ಈ ಹಿಂದೆ ಸೂಚಿಸಿತ್ತು.

ಜಡ್ಜ್ ನಿವಾಸದ ಬಳಿ ಎಸ್​ಪಿಪಿ ಅಶೋಕ್ ನಾಯ್ಕ್ ಪ್ರತಿಕ್ರಿಯೆ ನೀಡಿದ್ದು, ಬೈರತಿ ಬಸವರಾಜ್​​ ಅವರ ಬಂಧನದ ಬಳಿಕ ಮೆಡಿಕಲ್ ಟೆಸ್ಟ್​ಗೆ ಹಾಜರುಪಡಿಸಲಾಗಿತ್ತು. ಟೆಸ್ಟ್ ವೇಳೆ ಹೃದಯ ಸಂಬಂಧಿ ಕಾಯಿಲೆ ಇರುವುದು ಗೊತ್ತಾಗಿದ್ದ ಹಿನ್ನೆಲೆ ಜಯದೇವ ಆಸ್ಪತ್ರೆಗೆ ದಾಖಲಿಸಲು ಬೌರಿಂಗ್ ವೈದ್ಯರು ತಿಳಿಸಿದ್ದರು. ವೈದ್ಯರ ವರದಿ ಆಧರಿಸಿ ಚಿಕಿತ್ಸೆಗೆ ನ್ಯಾಯಾಧೀಶರು ಕೂಡ ಸೂಚನೆ ನೀಡಿದ್ದರು. ಸದ್ಯ ಬೈರತಿ ಬಸವರಾಜ್​ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ, ಬಹುತೇಕ ಎಲ್ಲವೂ ನಾರ್ಮಲ್ ಎಂದು ವೈದ್ಯಕೀಯ ವರದಿ ಬಂದಿದೆ. ಹಾಗಾಗಿ ನ್ಯಾ.ಶಿವಕುಮಾರ್ ಅವರ ಮುಂದೆ ಶಾಸಕರನ್ನು ಹಾಜರುಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್​ನಲ್ಲಿ ಶಾಸಕ ಭೈರತಿ ಬಸವರಾಜ್​​ ಪೊಲೀಸರ ವಶಕ್ಕೆ

ಬೈರತಿ ಬಸವರಾಜ್ ನಿವಾಸಕ್ಕೆ ಬಿಜೆಪಿ ನಾಯಕರ ತಂಡ ಭೇಟಿ

ಕೊಲೆ ಕೇಸ್​ನಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಬೈರತಿ ಬಸವರಾಜ್ ನಿವಾಸಕ್ಕೆ ಬಿಜೆಪಿ ನಾಯಕರ ತಂಡ ಭೇಟಿ ನೀಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ವರ್ತೂರು ಪ್ರಕಾಶ್​, ಬೆಂಗಳೂರು ಉತ್ತರ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ಎಸ್.ಹರೀಶ್ ಒಳಗೊಂಡ ತಂಡ ಬೈರತಿ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿದೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿರುವ ವಿಜಯೇಂದ್ರ, ಬಿಎಸ್​ವೈ ಬಗ್ಗೆ ಭೈರತಿ ಇಟ್ಟ ವಿಶ್ವಾಸಕ್ಕೆ ನಾವು ಬೆಲೆ ಕಟ್ಟಲು ಆಗಲ್ಲ. ಎಲ್ಲವೂ ಕೂಡ ನಮ್ಮ ಪರೀಕ್ಷೆಯ ಸಮಯ. ತಂದೆ, ಕುಟುಂಬದ ಮೇಲೆ ಹಾಕಿದ್ದ 25-30 ಕೇಸ್ ಎದುರಿಸಿದ್ದೇನೆ. ರಾಜಕೀಯ ಷಡ್ಯಂತ್ರಗಳು ಹೇಗೆ ನಡೆಯುತ್ತವೆ ಎಂಬುದು ಗೊತ್ತಿದೆ. ಯಾರೂ ಕೂಡ ತಾಳ್ಮೆ ಕಳೆದುಕೊಳ್ಳಬಾರದು. ನಾನು, ಯಡಿಯೂರಪ್ಪ, ಪಕ್ಷ ಅವರ ಜೊತೆ ಇದ್ದೇ ಇರುತ್ತೇವೆ. ರಾಜಕೀಯವಾಗಿಯೂ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ವರದಿ: ಪ್ರದೀಪ್​​ ಚಿಕ್ಕಾಟೆ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Optical Illusion: ಹಚ್ಚ ಹಸಿರಿನ ಮರದಲ್ಲಿ ಅಡಗಿ ಕುಳಿತಿರುವ ಹಮ್ಮಿಂಗ್ ಬರ್ಡ್‌ನ್ನು ಕಂಡು ಹಿಡಿಯುವಿರಾ – Kannada News | Optical illusion: If you find this hummingbird, it means you have eagle eyes.

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಆಪ್ಟಿಕಲ್‌ ಇಲ್ಯೂಷನ್‌ (optical illusion) ಹಾಗೂ ಬ್ರೈನ್ ಟೀಸರ್ ಚಿತ್ರಗಳು ನಿಮ್ಮನ್ನು ಗೊಂದಲಕ್ಕೀಡು ಮಾಡಬಹುದು. ಆದರೆ ನಿಮ್ಮ ಬುದ್ಧಿವಂತಿಕೆ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ. ಹೀಗಾಗಿ ಹೆಚ್ಚಿನವರು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳತ್ತ ಗಮನ ಹರಿಸುತ್ತಾರೆ. ಈ ಚಿತ್ರಗಳಲ್ಲಿ ಕೆಲವೊಂದು ಟ್ರಿಕ್ಕಿಯಾಗಿದ್ದು, ಬಿಡಿಸಲು ಸಾಧ್ಯವಾಗದೇ ಇರಬಹುದು. ಇದೀಗ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ವೈರಲ್‌ ಆಗಿದೆ. ಹಚ್ಚ ಹಸಿರಿನಿಂದ ಕೂಡಿದ ಕೊಂಬೆಗಳಲ್ಲಿ ಹಮ್ಮಿಂಗ್ ಬರ್ಡ್‌ವೊಂದು ಅಡಗಿ ಕುಳಿತಿದೆ. ಹತ್ತು ಸೆಕೆಂಡುಗಳಲ್ಲಿ ಈ ಪಕ್ಷಿಯನ್ನು ಹುಡುಕಲು ಸಾಧ್ಯವೇ ಎಂದು ನೋಡಿ.

ಈ ಚಿತ್ರ ನೋಡಿದಾಗ ಏನು ಕಾಣಿಸಿತು?

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಚಿತ್ರವು ನಿಮ್ಮ ಮೆದುಳಿಗೆ ಕೆಲಸ ನೀಡಿದೆ. ಈ ಫೋಟೋದಲ್ಲಿ ಹಚ್ಚ ಹಸಿರಿನಿಂದ ಕೂಡಿದ ಮರವನ್ನು ಕಾಣಬಹುದು. ಇದು ಸಂಪೂರ್ಣವಾಗಿ ಎಲೆಗಳು ಹಾಗೂ ಕೊಂಬೆಗಳಿಂದ ಆವೃತವಾಗಿದೆ. ಈ ಮರದ ಮೇಲೆ ಹಮ್ಮಿಂಗ್ ಬರ್ಡ್ ಕೂಡ ಇದೆ. 10 ಸೆಕೆಂಡುಗಳಲ್ಲಿ ಈ ಪಕ್ಷಿಯನ್ನು ಗುರುತಿಸುವ ಚಾಲೆಂಜ್ ನಿಮ್ಮ ಮುಂದಿದೆ.

ಇದನ್ನೂ ಓದಿ: ಅಡುಗೆ ಮನೆಯಲ್ಲಿ ಅಡಗಿ ಕುಳಿತಿರುವ ಕಳ್ಳ ಬೆಕ್ಕನ್ನು ಗುರುತಿಸುವಿರಾ

ಹಮ್ಮಿಂಗ್ ಬರ್ಡ್ ನಿಮ್ಮ ಕಣ್ಣಿಗೆ ಕಾಣಿಸಿತೇ?

ಭ್ರಮೆಯನ್ನು ಉಂಟು ಮಾಡುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ನೀವು ನೋಡಿದ್ದೀರಿ. ಆದರೆ ಇದರಲ್ಲಿರುವ ಹಮ್ಮಿಂಗ್ ಬರ್ಡ್ ನಿಮ್ಮ ಕಣ್ಣಿಗೆ ಕಾಣಿಸಿಲ್ಲವೇ, ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ನೀವು ಕೆಳಗಿನ ಫೋಟೋವನ್ನು ನೋಡಿ.. ಮರದ ಮೇಲಿರುವ ಹಮ್ಮಿಂಗ್ ಬರ್ಡ್ ನಿಮ್ಮ ಕಣ್ಣಿಗೆ ಕಾಣಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಲ್ಲಿಕಾರ್ಜುನ ಖರ್ಗೆ ಮಾತಿಗೂ ಡೋಂಟ್​​ ಕೇರ್​: ‘ಕೈ’ ಮನೆಯಲ್ಲಿ ನಿಲ್ಲದ ಬಣಗಳ ವಾರ್ – Kannada News | Karnataka Congress Faction War: Kharge’s Unity Call Ignored Amid CM Race

ರಾಜ್ಯ ಕಾಂಗ್ರೆಸ್​​ನಲ್ಲಿ ಬಣ ಬೇಗುದಿ

ಬೆಂಗಳೂರು, ಫೆಬ್ರವರಿ 15: ​ನಾಯಕತ್ವ ವಿಚಾರವಾಗಿ ಬಹಿರಂಗ ಹೇಳಿಕೆಗಳನ್ನು ನೀಡದಂತೆ ಹೈಕಮಾಂಡ್​​ ಸೂಚನೆಯ ಬಳಿಕವೂ ರಾಜ್ಯ ಕಾಂಗ್ರೆಸ್​​ನಲ್ಲಿ ಬಣಗಳ ನಡುವಿನ ಸಂಘರ್ಷ ಮುಂದುವರಿದಿದೆ. ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್, ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್ ಎಂದಿದ್ದಾರೆ. ನಮಗೆ ಹೈಕಮಾಂಡ್ ನೋಟಿಸ್ ಕೊಡಬಹುದು, ಆದ್ರೆ ಹೈಕಮಾಂಡ್​ಗೆ‌ ನಾವು ನೋಟಿಸ್ ಕೊಡಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಯತೀಂದ್ರ ನಮ್ಮ ಹೈಕಮಾಂಡ್ ಅಂತಾ ಡಿಸಿಎಂ ಡಿ.ಕೆ. ಶಿವಕುಮಾರ್​​ ಅವರೇ ಹೇಳಿದ್ದಾರೆ. ಹೀಗಾಗಿ ನಾನೂ ಅದನ್ನೇ ಹೇಳುತ್ತೇನೆ, ಯತೀಂದ್ರ ನಮ್ಮ ಹೈಕಮಾಂಡ್ ಅನ್ನೋದನ್ನ ನೂರಕ್ಕೆ ನೂರರಷ್ಟು ಒಪ್ಪಿಕೊಳ್ತೇವೆ. ಯಾರೂ ಸ್ಟೇಟ್​ಮೆಂಟ್ ಕೊಡಬೇಡಿ ಅಂತ ನಾಲ್ಕು ಬಾರಿ ಹೇಳಿದ್ರು. ಆದ್ರೂ ಸ್ಟೇಟ್​ಮೆಂಟ್ ಕೊಡ್ತಿದ್ದಾರೆ ಅಂದ್ರೆ‌ ಅವರೇ ಸುಪ್ರೀಂ. ಖರ್ಗೆಗಿಂತ ಜಾಸ್ತಿನಾ, ಡಿಕೆಗಿಂತ ಕಡಿಮೆನಾ ಅಂತಾ ಹೇಳಲು ಆಗಲ್ಲ. ಬೇಡ ಅಂದ್ರೂ ಮಾತನಾಡುತ್ತಿದ್ದಾರೆ ಅಂದ್ರೆ ಪವರ್​ಫುಲ್ ಮ್ಯಾನ್ ಎಂದು ಹೇಳುವ ಮೂಲಕ ಪರೋಕ್ಷವಾಗಿ ಯತೀಂದ್ರ ವಿರುದ್ಧ ಗಣಿಗ ರವಿಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಬಜೆಟ್​ ಮಂಡನೆಗೆ ಸಿಎಂ ಸಜ್ಜು, ಪಟ್ಟದ ಪಟ್ಟು ಮತ್ತಷ್ಟು ಗಟ್ಟಿಗೊಳಿಸಿದ ಡಿಕೆಶಿ; ದೂರ ಉಳಿದ ಮಲ್ಲಿಕಾರ್ಜುನ ಖರ್ಗೆ

ಡಿ.ಕೆ.ಶಿವಕುಮಾರ್ ಸಿಎಂ ಆಗಲೇಬೇಕು ಎಂದಿರುವ ಅವರು, ಡಿಕೆಶಿ, ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಡಿ.ಕೆ.ಶಿವಕುಮಾರ್​ಗೆ ರಾಜಕೀಯ ತಂತ್ರಗಾರಿಕೆ, ‌ಚಾಣಾಕ್ಷತನ ಇದೆ. ಯಾವಾಗ ಯಾವ ಪಾನ್ ಮೂವ್​ ಮಾಡಿದ್ರೆ ಗೇಮ್ ಗೆಲ್ಲಬಹುದೆಂದು ಗೊತ್ತಿದೆ. ಬುದ್ಧಿವಂತಿಕೆ ಇರುವುದಕ್ಕೆ ಸೈಲೆಂಟಾಗಿ ಕಾಯಿನ್ ಮೂವ್ ಮಾಡ್ತಿದ್ದಾರೆ. ರಾಜಕಾರಣ ಅಂದಮೇಲೆ ಆಟ ಇರಲೇಬೇಕು, ಆಟ ಬಿಡಲು ಆಗಲ್ಲ. ನಮ್ಮದು ಐರ್ಲೆಂಡ್ ಟೀಂ ಅಲ್ಲ, ಬಲಿಷ್ಠ ಭಾರತ ಟೀಂ. ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಡಿ.ಕೆ.ಶಿವಕುಮಾರ್​ಗೆ ಇದ್ದು, ಪ್ರಶ್ನೆಗಳಿಗೆ ಅತೀ ಶೀಘ್ರದಲ್ಲೇ ಉತ್ತರ ಬರಲಿದೆ ಎಂದಿದ್ದಾರೆ.

ನಾಯಕತ್ವ ಗೊಂದಲದ ನಡುವೆ ಎಐಸಿಸಿ ಅಧ್ಯಕ್ಷ ಖರ್ಗೆ ನಾವೆಲ್ಲಾ ಜೊತೆಯಾಗಿ, ಒಗ್ಗಟ್ಟಾಗಿ ಹೋಗಬೇಕು ಎಂದು ಪಾಠ ಮಾಡಿದ್ದರು. ಭೀಮಣ್ಣ ಖಂಡ್ರೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಭೀಮಣ್ಣ ಖಂಡ್ರೆ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಿದ್ದರು. ಆದ್ರೆ ಪಕ್ಷ ಬಿಟ್ಟು ಹೋದ್ರು ಅವರ ತತ್ವ, ಸಿದ್ಧಾಂತ ಒಂದೇಯಾಗಿತ್ತು. ಹೀಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಬಸವಣ್ಣನ ವಚನ ಹೇಳುವ ಮೂಲಕ ಸಂದೇಶ ನೀಡಿದ್ದರು. ಆದ್ರೆ ಸದ್ಯ ರಾಜ್ಯ ಕಾಂಗ್ರೆಸ್​​ ನಾಯಕರು ಹೈಕಮಾಂಡ್​​ ಸೂಚನೆಯನ್ನೂ ಮೀರಿ ಮಾತಾಡುತ್ತಿರೋದು ಬಣ ಬಡಿದಾಟವನ್ನು ಇಮ್ಮಡಿಗೊಳಿಸಿದೆ. ವಿಪಕ್ಷಗಳಿಗೂ ಆಹಾರವಾಗ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್ – Kannada News | How Urban Challenge Fund can help cities become economic growth engine

ನವದೆಹಲಿ, ಫೆಬ್ರುವರಿ 15: ನಗರಗಳನ್ನು ಆರ್ಥಿಕ ಅಭಿವೃದ್ಧಿ ಎಂಜಿನ್ ಆಗಿ ಮಾರ್ಪಡಿಸಲು ಕೇಂದ್ರ ಸಂಪುಟವು ಅರ್ಬನ್ ಚಾಲೆಂಜ್ ಫಂಡ್ (Urban Challenge Fund) ಅನ್ನು ಆರಂಭಿಸಿದೆ. ಇದಕ್ಕಾಗಿ ಒಂದು ಲಕ್ಷ ಕೋಟಿ ರೂ ಮೀಸಲಿರಿಸಿದೆ. ಮುಂದಿನ ಐದು ವರ್ಷಕ್ಕೆ ಈ ಫಂಡ್ ಬಳಕೆಯಾಗಲಿದ್ದು, ದೇಶದ ವಿವಿಧ ನಗರಗಳಲ್ಲಿ ಒಟ್ಟಾರೆ ನಾಲ್ಕು ಲಕ್ಷ ಕೋಟಿ ರೂ ಹೂಡಿಕೆ ಆಗಲಿದೆ. ಗಮನಿಸಬೇಕಾದ ಸಂಗತಿ ಎಂದರೆ, ಈ ಫಂಡಿಂಗ್ ಸಾಂಪ್ರದಾಯಿಕ ಅನುದಾನ ಆಧಾರಿತವಾಗಿರುವುದಿಲ್ಲ. ಮಾರುಕಟ್ಟೆ ಮತ್ತು ಸುಧಾರಣೆ ಆಧಾರಿತವಾದ ನಗರ ಅಭಿವೃದ್ಧಿ ಮಾದರಿಯನ್ನು ಅನುಸರಿಸಲಾಗುತ್ತದೆ.

ನಗರಗಳಲ್ಲಿನ ಯೋಜನೆಗಳು ಸರ್ಕಾರಿ ಅನುದಾನಗಳ ಮೇಲೆ ಅವಲಂಬಿತವಾಗಿರುವುದನ್ನು, ಮತ್ತು ಅನುಷ್ಠಾನದಲ್ಲಿ ಶಿಸ್ತಿನ ಕೊರತೆ ಇರುವುದನ್ನು ತಪ್ಪಿಸಲು ಈ ಹೊಸ ಮಾದರಿ ಕಂಡುಕೊಳ್ಳಲಾಗಿದೆ. ಸುಧಾರಣೆ, ಸ್ವಾವಲಂಬನೆಯನ್ನು ಉತ್ತೇಜಿಸಲಾಗುತ್ತದೆ. ನಗರ ಮೂಲಸೌಕರ್ಯ ಯೋಜನೆಗಳಲ್ಲಿ ಖಾಸಗಿ ಹೂಡಿಕೆಗೂ ಉತ್ತೇಜಿಸಲಾಗುತ್ತದೆ.

ಇದನ್ನೂ ಓದಿ: ಆಂಟ್ರೋಪಿಕ್ ಹಾಗೂ ಇತರ 13 ಎಐ ಕಂಪನಿಗಳೊಂದಿಗೆ ಮುಕೇಶ್ ಅಂಬಾನಿ ಅವರ ಜಿಯೋ ಮೈತ್ರಿ

ಕೇಂದ್ರದಿಂದ ಶೇ. 25 ಫಂಡಿಂಗ್; ಉಳಿದವು?

ಹತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳು ಅರ್ಬನ್ ಚಾಲೆಂಜ್ ಫಂಡ್ ಪಡೆಯಲು ಅರ್ಹವಾಗಿರುತ್ತವೆ.

ಆಯ್ಕೆಯಾಗುವ ಯೋಜನೆಗಳಿಗೆ ಶೇ. 25ರಷ್ಟು ಫಂಡಿಂಗ್ ಅನ್ನು ಕೇಂದ್ರ ಒದಗಿಸುತ್ತದೆ. ಮುನಿಸಿಪಾಲ್ ಬಾಂಡ್, ಬ್ಯಾಂಕ್ ಸಾಲ, ಪಬ್ಲಿಕ್-ಪ್ರೈವೇಟ್ ಪಾಲುದಾರಿಕೆಗಳ ಮೂಲಕ ಕನಿಷ್ಠ ಶೇ. 50ರಷ್ಟು ಫಂಡಿಂಗ್ ಅನ್ನು ನಗರಗಳು ಸೃಷ್ಟಿಸಿಕೊಳ್ಳಬೇಕು. ಇನ್ನುಳಿದ ಹಣವನ್ನು ರಾಜ್ಯಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಇತರರ ಮೂಲಕ ಪಡೆಯಬೇಕು.

ಪ್ರಾಜೆಕ್ಟ್​ಗಳಿಗೆ ಸುಮ್ಮನೆ ಫಂಡಿಂಗ್ ಸಿಕ್ಕೋದಿಲ್ಲ

ಪ್ರಾಜೆಕ್ಟ್​ಗಳಿಗೆ ಸುಮ್ಮನೆ ಫಂಡಿಂಗ್ ಸಿಕ್ಕೋದಿಲ್ಲ. ಯೋಜನೆಯಿಂದ ಆರ್ಥಿಕ ಪರಿಣಾಮ, ಸುಸ್ಥಿರತೆ, ಹವಾಮಾನ ಭದ್ರತೆ, ಸುಧಾರಣಾ ಕ್ರಮಗಳ ಅನುಷ್ಠಾನ, ದೀರ್ಘಾವಧಿ ಹಣಕಾಸು ಸ್ವಾವಲಂಬನೆ ಹೇಗೆ ಸಾಧಿಸಲಾಗುತ್ತದೆ ಎಂಬುದನ್ನು ಮನವರಿಕೆ ಮಾಡುವ ಪ್ರಾಜೆಕ್ಟ್​ಗಳಿಗೆ ಫಂಡಿಂಗ್ ಸಿಗುತ್ತದೆ. ಅದರಲ್ಲೂ ಪ್ರಾಜೆಕ್ಟ್​ನ ಬೆಳವಣಿಗೆ ಹೇಗೆ ಆಗುತ್ತಿದೆ ಎಂದು ನೋಡಿಕೊಂಡು ಹಂತ ಹಂತವಾಗಿ ಫಂಡಿಂಗ್ ಕೊಡಲಾಗುತ್ತದೆ. ಸುಧಾರಣೆಗಳನ್ನು ಅಳವಡಿಸಿಕೊಳ್ಳಲು ವಿಫಲವಾಗುವ ನಗರಗಳಿಗೆ ಮತ್ತಷ್ಟು ಫಂಡಿಂಗ್ ಸಿಕ್ಕೋದಿಲ್ಲ.

ಇದನ್ನೂ ಓದಿ: ಫೆ. 16ರಿಂದ ಎಐ ಇಂಪ್ಯಾಕ್ಟ್ ಸಮಿಟ್; ದಕ್ಷಿಣ ದೇಶಗಳ ಪ್ರಬಲ ಉಪಸ್ಥಿತಿ; 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ

ನಗರ ಸ್ಥಳೀಯ ಸಂಸ್ಥೆಗಳಿಗೆ ಯಾರು ಕೊಡುತ್ತಾರೆ ಸಾಲ?

ನಗರ ಸ್ಥಳೀಯ ಸಂಸ್ಥೆಗಳು ಹೆಚ್ಚಾಗಿ ಸರ್ಕಾರಿ ಅನುದಾನ ಪಡೆದು ಜೀವಂತವಾಗಿರುವಂತಹವು. ಇವುಗಳಿಗೆ ಕ್ರೆಡಿಟ್ ಹಿಸ್ಟರಿ ಇಲ್ಲದಿರುವುದರಿಂದ ಹಣಕಾಸು ಸಂಸ್ಥೆಗಳಿಂದ ಸಾಲ ಸಿಗುವುದು ಕಷ್ಟ. ಅದಕ್ಕಾಗಿ ಕೇಂದ್ರ ಸಂಪುಟವು 5,000 ರೂಗಳ ಕ್ರೆಡಿಟ್ ರೀಪೇಮೆಂಟ್ ಗ್ಯಾರಂಟಿ ಸ್ಕೀಮ್ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಳೆದ ವರ್ಷ ಮಳೆಗೆ ಕೊಚ್ಚಿ ಹೋಗಿದ್ದ ಸೇತುವೆಗೆ ಡಿಕ್ಕಿ ಹೊಡೆದ ಬೈಕ್, ಮೂವರು ಸಾವು – Kannada News | Three Die After Motorcycle Plunges Off Washed Out Bridge in Madhya Pradesh

ಮಧ್ಯಪ್ರದೇಶ, ಫೆಬ್ರವರಿ 15: ಕಳೆದ ವರ್ಷ ಮಳೆಗೆ ಕೊಚ್ಚಿ ಹೋಗಿದ್ದ ಸೇತುವೆ(Bridge)ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ಡನೆದಿದೆ. ತಡರಾತ್ರಿ ಮೂವರು ಮದುವೆ ಸಮಾರಂಭದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮೃತರು ರಾಹ್ಲಿ ವಿಧಾನಸಭಾ ಕ್ಷೇತ್ರದ ನಿವಾಸಿಗಳಾಗಿದ್ದು, ತೆಂಡುಖೇಡಾದಿಂದ ಝಾಪನ್‌ಗೆ ಪ್ರಯಾಣಿಸುತ್ತಿದ್ದರು. ಝಾಪನ್ ಬಳಿ, ಬೈರ್ಮಾ ನದಿಯ ಮೇಲೆ ನಿರ್ಮಿಸಲಾದ ಸೇತುವೆಯು ಕಳೆದ ವರ್ಷ ಸುರಿದ ಭಾರೀ ಮಳೆಯ ಸಮಯದಲ್ಲಿ ತೀವ್ರವಾಗಿ ಹಾನಿಗೊಳಗಾಗಿ ಭಾಗಶಃ ಕೊಚ್ಚಿಹೋಗಿತ್ತು.

ಮುರಿದ ಸೇತುವೆ ಮೇಲೆ ಪ್ರವೇಶಿಸದಂತೆ ವಾಹನಗಳ ಸಂಚಾರವನ್ನು ತಡೆಯಲು ಯಾವುದೇ ಬ್ಯಾರಿಕೇಡಿಂಗ್ ಅಥವಾ ಎಚ್ಚರಿಕೆ ಫಲಕವನ್ನು ಅಳವಡಿಸಿರಲಿಲ್ಲ. ಕತ್ತಲೆಯಲ್ಲಿ ಸೇತುವೆ ಹಾನಿಗೊಳಗಾಗಿರುವುದನ್ನು ಅರಿಯದ ಅವರು, ಅತಿ ವೇಗದಲ್ಲಿ ಬೈಕ್ ಚಲಾಯಿಸಿಕೊಂಡು ಹೋಗಿ ನೇರವಾಗಿ ಮುರಿದ ಭಾಗಕ್ಕೆ ಡಿಕ್ಕಿ ಹೊಡೆದು ಬಿದ್ದಿದ್ದಾರೆ. ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ, ಮೋಟಾರ್ ಸೈಕಲ್ ಸೇತುವೆಯ ಕುಸಿದ ಭಾಗದ ಕೆಳಗೆ ಸಿಲುಕಿಕೊಂಡಿತ್ತು. ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನು 21 ವರ್ಷದ ಅಜಯ್ ಘೋಸಿ, 21 ವರ್ಷದ ಅಮಿತ್ ಕುರ್ಮಿ ​​ಮತ್ತು 22 ವರ್ಷದ ಪವನ್ ಕುರ್ಮಿ ​​ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಅಪಘಾತದ ನಂತರ ಮೂವರು ಸ್ಥಳದಲ್ಲೇ ಸಾಕಷ್ಟು ಸಮಯದವರೆಗೆ ಇದ್ದರು ಮತ್ತು ಜನರು ಅವರನ್ನು ಗಮನಿಸುವ ಹೊತ್ತಿಗೆ ಅವರು ಆಗಲೇ ಮೃತಪಟ್ಟಿದ್ದರು.

ಮತ್ತಷ್ಟು ಓದಿ: ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಯ 3,030 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ

ಈ ಘಟನೆಯು ಆಡಳಿತಾತ್ಮಕ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಳೆದ ವರ್ಷದ ಮಳೆಯಲ್ಲಿ ಸೇತುವೆ ಹಾನಿಗೊಳಗಾಗಿದ್ದರೂ, ಅಧಿಕಾರಿಗಳು ಮಾರ್ಗವನ್ನು ಮುಚ್ಚಲಿಲ್ಲ ಅಥವಾ ಬ್ಯಾರಿಕೇಡ್‌ಗಳು ಅಥವಾ ಎಚ್ಚರಿಕೆ ಫಲಕಗಳನ್ನು ಅಳವಡಿಸಿರಲಿಲ್ಲ ಏಕೆ ಎಂಬುದು ಪ್ರಶ್ನೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಹಿಳೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​​: ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ – Kannada News | Twists in Hassan Missing Case: Priyanka and David Under Police Custody After Elopement

ಹಾಸನ/ ತುಮಕೂರು, ಫೆಬವರಿ 15: ಮದುವೆಗೆಂದು ತೆರಳಿ ನಾಪತ್ತೆಯಾಗಿದ್ದ ಮಹಿಳೆ ಪ್ರಿಯಾಂಕಾಳನ್ನು ಪರಪುರುಷನ ಜೊತೆ ಪತ್ತೆ ಮಾಡಿರುವ ಪೊಲೀಸರು, ಪ್ರಿಯಾಂಕಾ ಮತ್ತು ಡೇವಿಡ್ ಇಬ್ಬರನ್ನೂ ವಶಕ್ಕೆ ಪಡೆದು ಹಾಸನದ ಡಿವೈಎಸ್ಪಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಿಯಾಂಕಾ ನಾಪತ್ತೆಯಾದಾಗ ಆಕೆ ಕೊಲೆಯಾಗಿರಬಹುದು ಅಥವಾ ಅಪಹರಣಕ್ಕೊಳಗಾಗಿರಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು. ಆದರೆ, ಕತೆ ಕಟ್ಟಿದ್ದ ಆಕೆ ಪತಿಯ ಸ್ನೇಹಿತನ ಜೊತೆಗೆ ಕಳೆದ ಎರಡುದಿನಗಳಿಂದ ಇದ್ದಿದ್ದು ತನಿಖೆ ವೇಳೆ ಬಯಲಾಗಿದೆ. ತ್ತೊಂದೆಡೆ ಊರಿಗೆ ಏಕಪತ್ನಿ ವ್ರತಸ್ಥನಾಗಿ ಕಂಡವನ ಮನೆಯಲ್ಲಿಯೇ ಪ್ರಿಯಾಂಕಾ ಪತ್ತೆಯಾಗಿರೋದು ಸ್ಥಳೀಯರು ಹೌಹಾರುವಂತೆ ಮಾಡಿದೆ. ಸ್ವಾರಿ ಗರ್ಲ್ಸ್​, ನನ್ನ ಹೆಂಡತಿ ಫುಲ್ ಸ್ಟ್ರಿಕ್ಟ್ ಎಂದು ಬೈಕ್​​ ಮೇಲೆ ಸ್ಟಿಕ್ಕರ್​​ ಹಾಕಿಸಿಕೊಂಡಿದ್ದ ಈತ, ಅದರ ಟ್ಯಾಂಕ್​​ ಮೇಲೆ ಡಾರ್ಲಿಂಗ್​​ ಅಂತಲೂ ಬರೆಸಿದ್ದ. ಖುದ್ದು ಮನೆ ಮಾಲೀಕ ಹೇಳುವಂತೆ ಬೆಕ್ಕಿನಂತೆ ಓಡಾಡುತಿದ್ದ ಈತನ ಮನೆಯಲ್ಲಿ ಮಹಿಳೆ ಪ್ರಿಯಾಂಕಾ ಸೇರಿದ್ದೇಗೆ ಎಂಬ ಗೊಂದಲ ಮುಂದುವರಿದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸತ್ಯ ಇನ್ನಷ್ಟೇ ಹೊರ ಬರಬೇಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link