ನಿರ್ದೇಶಕ ಜೋಗಿ ಪ್ರೇಮ್ ಅವರು ‘ಕೆಡಿ’ ಸಿನಿಮಾದ (KD Movie) ಸೆಲೆಬ್ರಿಟಿ ಶೋ ಬಳಿಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸಿನಿಮಾ ನೋಡಿದ ಅನೇಕ ಪ್ರೇಕ್ಷಕರು ಚಿತ್ರದ ಕೆಲವು ಮುಖ್ಯ ದೃಶ್ಯಗಳನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಅದರಿಂದ ಸಿನಿಮಾದ ಸಸ್ಪೆನ್ಸ್ ಹಾಳಾಗುತ್ತದೆ. ಆ ಬಗ್ಗೆ ಪ್ರೇಮ್ ಮಾತನಾಡಿದ್ದಾರೆ. ‘ಆನ್ಲೈನ್ನಲ್ಲಿ ಕೆಲವರು ವಿಡಿಯೋ ಹಾಕುತ್ತಿದ್ದೀರಿ. ಕೈ ಮುಗಿದು ಬೇಡುತ್ತೇನೆ, ದಯವಿಟ್ಟು ಹಾಗೆ ಮಾಡಬೇಕು’ ಎಂದು ಪ್ರೇಮ್ (Jogi Prem) ಅವರು ಮನವು ಮಾಡಿಕೊಂಡಿದ್ದಾರೆ.
‘ನನಗೆ ಗೊತ್ತು, ಆ ವಿಡಿಯೋಗಳನ್ನು ನೀವು ಉದ್ದೇಶಪೂರ್ವಕವಾಗಿ ಹಾಕುತ್ತಿಲ್ಲ. ಧ್ರುವ ಎಂಟ್ರಿ ಹೀಗಿದೆ, ಸುದೀಪ್ ಎಂಟ್ರಿ ಹೀಗಿದೆ, ರಮೇಶ್ ಪಾತ್ರ ಹೀಗಿದೆ ಎಂಬ ಖುಷಿಯಲ್ಲಿ ಅದನ್ನು ಹಂಚಿಕೊಳ್ಳುತ್ತಿದ್ದೀರಿ. ಆದರೆ ದಯವಿಟ್ಟು ಆ ತುಣುಕುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಬೇಡಿ. ಚಿತ್ರಕ್ಕಾಗಿ ತುಂಬ ಶ್ರಮಪಟ್ಟಿದ್ದೇವೆ. ಕೆವಿಎನ್ ಸಂಸ್ಥೆ ದೊಡ್ಡ ಮಟ್ಟದಲ್ಲಿ ನಮಗೆ ಬೆಂಬಲ ನೀಡಿದೆ’ ಎಂದು ಪ್ರೇಮ್ ಅವರು ಹೇಳಿದ್ದಾರೆ.
‘ಇಡೀ ಕನ್ನಡ ಚಿತ್ರರಂಗ ನಮಗೆ ಸಪೋರ್ಟ್ ಮಾಡಿದ್ದಾರೆ. ಹಾಗಾಗಿ ನಾವು ಎಲ್ಲರನ್ನೂ ಕರೆದು ಒಂದು ಸೆಲೆಬ್ರಿಟಿ ಶೋ ಆಯೋಜನೆ ಮಾಡಿದ್ದೇವೆ. ಚಿತ್ರರಂಗದ ನನ್ನ ಎಲ್ಲ ಸ್ನೇಹಿತರಿಗೆ ಧನ್ಯವಾದಗಳು. ಎಲ್ಲರೂ ಈ ಚಿತ್ರವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಾರೆ. ಮುಂದಿನ ವಾರ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬಿಡುಗಡೆ ಆಗಲಿದೆ. ಅಲ್ಲಿ ಸೆನ್ಸಾರ್ ಆಗುವುದು ಬಾಕಿ ಇದೆ’ ಎಂದಿದ್ದಾರೆ ಪ್ರೇಮ್.
‘ಸಿನಿಮಾದ ಕೊನೇ ಹಂತದಲ್ಲಿ ನನಗೆ ಆತಂಕ ಆಗಿತ್ತು. ಆದರೆ ನಿರ್ಮಾಪಕರು ಕರೆದು ನನಗೆ ಒಂದು ಮಾತು ಹೇಳಿದರು. ಎಷ್ಟು ಬೇಗ ಮಾಡಲು ಸಾಧ್ಯವೋ ಅಷ್ಟು ಬೇಗ ಮಾಡಿ ಎಂದರು. ಅವರು ನನ್ನನ್ನು ನಂಬಿದ್ದಾರೆ. ಅವರಿಗೆ ನಾವು ನೋವು ಮಾಡಬಾರದು. ಎಷ್ಟೇ ಒತ್ತಡ ಇದ್ದರೂ ಕೆವಿಎನ್ ಅವರು ನಮ್ಮ ಬೆನ್ನ ಹಿಂದೆ ನಿಂತುಕೊಂಡರು’ ಎಂದು ಪ್ರೇಮ್ ಹೇಳಿದ್ದಾರೆ.
ಇದನ್ನೂ ಓದಿ: KD Movie Review: ಧ್ರುವ ಸರ್ಜಾ ಅಭಿಮಾನಿಗಳಿಗೆ ಇಷ್ಟ ಆಗುವ ರಕ್ತದೋಕುಳಿಯ ‘ಕೆಡಿ’ ಕಹಾನಿ
‘ಎಲ್ಲರೂ ಈ ಸಿನಿಮಾವನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಯಾರೂ ಕೂಡ ನೆಗೆಟಿವ್ ಮಾತನಾಡುತ್ತಿಲ್ಲ. ಎಲ್ಲರೂ ಪಾಸಿಟಿವ್ ಆಗಿ ಹೇಳುತ್ತಿದ್ದಾರೆ. ಅದಕ್ಕಾಗಿ ಎಲ್ಲರಿಗೂ ನಮಸ್ಕಾರ ಮಾಡುತ್ತೇನೆ’ ಎಂದು ಪ್ರೇಮ್ ಅವರು ಧನ್ಯವಾದ ತಿಳಿಸಿದ್ದಾರೆ. ಧ್ರುವ ಸರ್ಜಾ ಅವರಿಗೆ ಈ ಸಿನಿಮಾದಿಂದ ಗೆಲುವು ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 1:46 pm, Sun, 3 May 26
