All posts by nagaraj11081993

Solar Eclipse 2026: ಮೀನ ರಾಶಿಯವರ ಮೇಲೆ ವರ್ಷದ ಮೊದಲ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Solar Eclipse 2026: Astrological Effects on Pisces by Dr. Basavaraj Guruji

ಡಾ. ಬಸವರಾಜ ಗುರೂಜಿ ಅವರು 2026ರ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವು ಮೀನ ರಾಶಿಯವರ ಮೇಲೆ ಬೀರುವ ಪ್ರಭಾವದ ಕುರಿತು ಮಾಹಿತಿ ನೀಡಿದ್ದಾರೆ. ಮೀನ ರಾಶಿಯವರು ಸಾಡೇ ಸಾತಿಯ ಗರ್ಭ ಭಾಗದಲ್ಲಿರುವುದರಿಂದ ಮಿಶ್ರಫಲಗಳನ್ನು ನಿರೀಕ್ಷಿಸಬಹುದು. ಆದಾಯದಲ್ಲಿ ಏರಿಕೆ ಮತ್ತು ಉದ್ಯೋಗದಲ್ಲಿ ಶುಭ ಫಲಗಳ ಸಾಧ್ಯತೆಯಿದೆ, ಕೆಲವರಿಗೆ ಉದ್ಯೋಗ ಬದಲಾವಣೆಯ ಯೋಗವಿದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾದರೂ ಚೇತರಿಕೆ ಕಾಣುವಿರಿ.

ಮಾನಸಿಕವಾಗಿ ಆಪ್ತರಿಂದ ತಪ್ಪು ಕಲ್ಪನೆಗಳಿಗೆ ಒಳಗಾಗುವ ಸಾಧ್ಯತೆಗಳಿರುವುದರಿಂದ ಎಚ್ಚರಿಕೆ ಅಗತ್ಯ. ವ್ಯಾಪಾರದಲ್ಲಿ ಶುಭವಾಗಲಿದ್ದು, ಶಿಕ್ಷಣದಲ್ಲಿ ಕೀರ್ತಿ ಪ್ರತಿಷ್ಠೆ ದೊರೆಯುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಶುಭ ಫಲಗಳಿದ್ದು, ಕೃಷಿ ಮತ್ತು ಭೂಮಿಯಿಂದ ಲಾಭವಾಗಲಿದೆ. ಸಾಲ ವಸೂಲಿಯಾಗುವ ಸಾಧ್ಯತೆಯಿದೆ. ಆದರೆ, ಹೊಸ ಹೂಡಿಕೆ ಮತ್ತು ಪಾಲುದಾರಿಕೆಯಲ್ಲಿ ಜಾಗರೂಕರಾಗಿರುವುದು ಉತ್ತಮ. ಮಾನಸಿಕ ನೆಮ್ಮದಿ ಕಡಿಮೆಯಾಗುವ ಸಾಧ್ಯತೆಯೂ ಇರುವುದರಿಂದ, ಹನುಮನಿಗೆ ತೈಲಾಭಿಷೇಕ ಮತ್ತು ಪಂಚ ದೀಪಗಳ ದಾನ ಮಾಡುವುದು ಹಾಗೂ ವಿನಾಯಕನ ಪೂಜೆ ಮತ್ತು “ಓಂ ಗಂ ಗಣಪತಯೇ ನಮಃ” ಮಂತ್ರ ಜಪಿಸುವುದರಿಂದ ಗ್ರಹಣ ದೋಷಗಳು ನಿವಾರಣೆಯಾಗುತ್ತವೆ.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾರ್ಖಾನೆ ಸ್ಥಳಾಂತರದ ವೇಳೆ ಅವಘಡ: ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವು – Kannada News | Mandya Chemical Tank Explosion: 2 Workers Dead During Kirti Factory Relocation

ಕೆಮಿಕಲ್ ಟ್ಯಾಂಕ್ ಸ್ಫೋಟImage Credit source: Tv9 Kannada

ಮಂಡ್ಯ/ ಬೆಂಗಳೂರು, ಫೆಬ್ರವರಿ 15: ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಮಂಡ್ಯದ ಬಸರಾಳು ಸಮೀಪದ ಕಾರೆಕಟ್ಟೆ ಬಳಿಯ ಕೀರ್ತಿ ಕೆಮಿಕಲ್ ಕಾರ್ಖಾನೆಯಲ್ಲಿ ನಡೆದಿದೆ. ಬಿಹಾರ ಮೂಲದ ಕಾರ್ಮಿಕರು ಕಾರೆಕಟ್ಟೆಯಿಂದ‌ ಬೇರೆ ಕಡೆಗೆ ಕಾರ್ಖಾನೆ ಶಿಫ್ಟ್​​ ಮಾಡುತ್ತಿದ್ದ ವೇಳೆ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸ್ಥಳಾಂತರ ಕೆಲಸ ಕಳೆದ ಒಂದು ತಿಂಗಳಿಂದಲೂ ನಡೆಯುತ್ತಿತ್ತು ಎನ್ನಲಾಗಿದ್ದು, ಇಂದು ಕಾರ್ಮಿಕರು ರಾಸಾಯನಿಕ ಟ್ಯಾಂಕ್​​ ತೆರವು ಮಾಡುತ್ತಿದ್ದ ವೇಳೆ ಅವಘಡ ನಡೆದಿದೆ.

4 ವರ್ಷಗಳ ಹಿಂದೆಯೂನಡೆದಿತ್ತು ಅವಘಡ

ಘಟನೆಯಲ್ಲಿ ಮತ್ತಿಬ್ಬರು ಕಾರ್ಮಿಕರು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಇದೇ ಕಾರ್ಖಾನೆಯಲ್ಲಿ 4 ವರ್ಷಗಳ ಹಿಂದೆಯೂ ಅವಘಡ ನಡೆದಿತ್ತು. ರಾಸಾಯನಿಕ ಸೋರಿಕೆಯಾಗಿ‌ ನೂರಾರು ಎಕರೆ ಬೆಳೆ ಹಾನಿಯ ಜೊತೆಗೆ ಎರಡು ನಾಯಿಗಳು ಮೃತಪಟ್ಟಿದ್ದವು. ಬಳಿಕ ಕಾರ್ಖಾನೆ ಆರಂಭಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆ ವೇಳೆ ಹಾನಿಯಾದ ಬೆಳೆಗೆ ಮಂಡ್ಯ ಜಿಲ್ಲಾಡಳಿತ ಪರಿಹಾರ ಕೊಡಿಸಿದ್ದು, ಹೀಗಾಗಿ ಕಾರ್ಖಾನೆyನ್ನ ಸದ್ಯ ಬೇರೆಡೆ ಸ್ಥಳಾಂತರ ಮಾಡಿಸಲಾಗುತ್ತಿತ್ತು. ಆದರೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ಇದ್ದಿದ್ದರಿಂದ ಮತ್ತೆ ದುರಂತ ನಡೆದಿದೆ. ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:  ತೆಲಂಗಾಣದ ಲ್ಯಾಬ್​​​ನಲ್ಲಿ ರೇಡಿಯೇಟರ್ ಸ್ಫೋಟ; 11 ಜನರಿಗೆ ಗಾಯ

ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಸ್ಪೋಟ: ನವ ದಂಪತಿಗೆ ಗಾಯ

ಗ್ಯಾಸ್ ಸಿಲಿಂಡರ್ ಸೋರಿಕೆ ಹಿನ್ನೆಲೆ ಉಂಟಾದ ಸ್ಫೋಟದಲ್ಲಿ ಇಬ್ಬರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಯಲಹಂಕದ ಚೌಡೇಶ್ವರಿ ಲೇಔಟ್​​ನಲ್ಲಿ ನಡೆದಿದೆ. ಸ್ಪೋಟದ ತೀವ್ರತೆಗೆ ಮನೆ ಗೋಡೆ ಛಿದ್ರವಾಗಿದ್ದು, ಇತ್ತೀಚೆಗೆ ಮದುವೆಯಾಗಿದ್ದ ಬಾಗೇಪಲ್ಲಿ ಮೂಲದ ದಂಪತಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಕೃಷ್ಣಮ್ಮ ಮತ್ತು ರಾಜು ಗಾಯಾಳುಗಳಾಗಿದ್ದು, ಸ್ಥಳೀಯರು ದಂಪತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಯಲಹಂಕ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IND vs PAK ಪಂದ್ಯದ ಫಲಿತಾಂಶ ನಿರ್ಧರಿಸಲು 30 ಎಸೆತಗಳನ್ನು ಎಸೆಯಲೇಬೇಕು..! – Kannada News | India vs Pakistan: 5 overs per side are required for a result

T20 World Cup 2026: ಟಿ20 ವಿಶ್ವಕಪ್​​ನ 28ನೇ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಕೊಲಂಬೊದಲ್ಲಿ ಭಾನುವಾರ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಯಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆ ಉಂಟಾದರೆ ಫಲಿತಾಂಶ ನಿರ್ಧರಿಸಲು ಡಕ್​ವರ್ತ್ ಲೂಯಿಸ್ ನಿಯಮದ ಮೊರೆ ಹೋಗಲಿದ್ದಾರೆ.

ಆದರೆ ಡಕ್​​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲು ದ್ವಿತೀಯ ಇನಿಂಗ್ಸ್ ಆಡುವ ತಂಡವು ಕನಿಷ್ಠ 5 ಓವರ್​​ಗಳನ್ನು ಆಡಿರಲೇಬೇಕು. ಅಂದರೆ ಉಭಯ ತಂಡಗಳು ಕನಿಷ್ಠ 30 ಎಸೆತಗಳನ್ನು ಎದುರಿಸಿದರೆ ಮಾತ್ರ ಡಿಎಲ್​​​ಎಸ್​ ನಿಯಮದ ಪ್ರಕಾರ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.

  • ಕನಿಷ್ಠ ಓವರ್‌ಗಳು: ಪಂದ್ಯದ ಅಧಿಕೃತ ಫಲಿತಾಂಶ ಘೋಷಿಸಲು ಉಭಯ ತಂಡಗಳು ಕನಿಷ್ಠ ತಲಾ 5 ಓವರ್‌ಗಳನ್ನು ಆಡಲೇಬೇಕು.
  • ಪರಿಸ್ಥಿತಿ: ಮಳೆಯಿಂದಾಗಿ ಪಂದ್ಯವು ಸ್ಥಗಿತಗೊಂಡರೆ, ಎರಡನೇ ಬ್ಯಾಟಿಂಗ್ ಮಾಡುವ ತಂಡ (ಉದಾಹರಣೆಗೆ ಭಾರತ) ಕನಿಷ್ಠ 5 ಓವರ್‌ಗಳನ್ನು ಪೂರ್ಣಗೊಳಿಸಿದರೆ ಮಾತ್ರ DLS ವಿಧಾನದಡಿ ವಿಜೇತರನ್ನು ನಿರ್ಧರಿಸಲು ಸಾಧ್ಯವಾಗುತ್ತದೆ.
  • ಪಂದ್ಯ ರದ್ದು: ಒಂದು ವೇಳೆ ಮಳೆಯ ಕಾರಣದಿಂದ ಎರಡೂ ತಂಡಗಳು ತಲಾ 5 ಓವರ್‌ಗಳನ್ನು ಆಡಲು ಸಾಧ್ಯವಾಗದಿದ್ದರೆ ಮಾತ್ರ ಪಂದ್ಯವನ್ನು ‘ರದ್ದು’ ಎಂದು ಘೋಷಿಸಲಾಗುತ್ತದೆ.
  • ಮೀಸಲು ದಿನ: ಗ್ರೂಪ್ ಹಂತದ ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇರುವುದಿಲ್ಲ. ಪಂದ್ಯವನ್ನು ನಿಗದಿತ ದಿನದಂದೇ ಮುಗಿಸಬೇಕಾಗುತ್ತದೆ.
  • ಒಂದು ಅಂಕ: ಪಂದ್ಯವು ರದ್ದಾದರೆ ಉಭಯ ತಂಡಗಳು ತಲಾ ಒಂದೊಂದೇ ಅಂಕಗಳನ್ನು ಪಡೆಯಲಿದ್ದಾರೆ.

ಅಂದರೆ ಇಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದ ಫಲಿತಾಂಶ ನಿರ್ಧಾರವಾಗಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್​​ಗಳನ್ನು ಆಡಲೇಬೇಕು. ಉದಾಹರಣೆಗೆ…

ಪಾಕಿಸ್ತಾನ್ ತಂಡವು ಮೊದಲು ಬ್ಯಾಟ್ ಮಾಡಿ 20 ಓವರ್​​ಗಳಲ್ಲಿ 150 ರನ್​​ಗಳಿಸಿದೆ ಎಂದಿಕೊಟ್ಟುಕೊಳ್ಳಿ. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡವು 5 ಓವರ್​​ಗಳಲ್ಲಿ 50 ರನ್​​ ಗಳಿಸಿದ್ದಾಗ ಮಳೆ ಬಂದು ಪಂದ್ಯ ಸ್ಥಗಿತಗೊಂಡರೆ ಡಿಎಲ್​​ಎಸ್ ನಿಯಮದಡಿ ಯಾವ ತಂಡ ಹೆಚ್ಚು ರನ್​​ಗಳಿಸಿದೆ ಎಂಬ ಆಧಾರದ ಮೇಲೆ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.

ಒಂದು ವೇಳೆ ಪಾಕಿಸ್ತಾನ್ ನೀಡಿದ ಗುರಿಯನ್ನು ಬೆನ್ನತ್ತುವಾಗ ಮಳೆ ಬಂದು ದ್ವಿತೀಯ ಇನಿಂಗ್ಸ್ 4.5 ಓವರ್​​ಗಳಿಗೆ ಸೀಮಿತವಾದರೆ ಡಿಎಲ್​​ಎಸ್ ನಿಯಮವನ್ನು ಅನ್ವಯಿಸುವುದಿಲ್ಲ. ಬದಲಾಗಿ ಪಂದ್ಯವನ್ನು ಮುಂದುವರೆಸಲು ಅವಕಾಶ ಇದೆಯೇ ಎಂದು ನೋಡಲಾಗುತ್ತದೆ. ಇದಾಗ್ಯೂ ಪಂದ್ಯವನ್ನು ಮುಂದುವರೆಸಲು ಸಾಧ್ಯವಿಲ್ಲದಿದ್ದರೆ ಮಾತ್ರ ಮ್ಯಾಚ್ ಅನ್ನು ರದ್ದುಗೊಳಿಸಲಾಗುತ್ತದೆ.

ಇದನ್ನೂ ಓದಿ: ಭಲೇ ಬಟ್ಲರ್… ಅತೀ ಕಡಿಮೆ ಎಸೆತಗಳಲ್ಲಿ ವಿಶ್ವ ದಾಖಲೆ..!

ಅಂದರೆ ಇಲ್ಲಿ ಎರಡೂ ತಂಡಗಳು ಕನಿಷ್ಠ 5 ಓವರ್​ಗಳನ್ನು ಆಡಿದ್ದರೆ ಮಾತ್ರ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶವನ್ನು ನಿರ್ಧರಿಸಲು ಅವಕಾಶವಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಿದರೆ ಯಾರು ವಿಜಯಿ ಎಂದು ನಿರ್ಧಾರವಾಗಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್​​ಗಳ ಇನಿಂಗ್ಸ್ ಆಡಲೇಬೇಕು.

Source link

ಆಂಟ್ರೋಪಿಕ್ ಹಾಗೂ ಇತರ 13 ಎಐ ಕಂಪನಿಗಳೊಂದಿಗೆ ಮುಕೇಶ್ ಅಂಬಾನಿ ಅವರ ಜಿಯೋ ಮೈತ್ರಿ – Kannada News | Trusted Tech Alliance formed by 15 companies, including Jio, Anthropic, Ericsson

ನವದೆಹಲಿ, ಫೆಬ್ರುವರಿ 15: ಎಐ ಸೆಕ್ಟರ್ ಬಹಳ ವೇಗವಾಗಿ ಬೆಳವಣಿಗೆ ಹೊಂದುತ್ತಿರುವಂತೆಯೇ ಜಾಗತಿಕವಾಗಿ ಸಹಭಾಗಿತ್ವ, ಹೊಂದಾಣಿಕೆ, ಮೈತ್ರಿಗಳು ಏರ್ಪಡುವ ಟ್ರೆಂಡ್ ಶುರುವಾದಂತಿದೆ. ಜಿಯೋ ಪ್ಲಾಟ್​ಫಾರ್ಮ್ಸ್ನಿಂದ (Jio Platforms) ಹಿಡಿದು ಆಂಥ್ರೋಪಿಕ್​ವರೆಗೆ 15 ಕಂಪನಿಗಳು ಗುಂಪು ಮಾಡಿಕೊಂಡಿವೆ. ಸೆಮಿಕಂಡಕ್ಟರ್​ನಿಂದ ಹಿಡಿದು ಕ್ಲೌಡ್ ಇನ್​ಫ್ರಾಸ್ಟ್ರಕ್ಚರ್​ವರೆಗೆ ಎಐ ಸಂಬಂಧಿತ ಕ್ಷೇತ್ರಗಳಲ್ಲಿರುವ ಈ ಕಂಪನಿಗಳು ಒಟ್ಟಿಗೆ ಸೇರಿ ಟ್ರಸ್ಟೆಡ್ ಟೆಕ್ ಅಲಾಯನ್ಸ್ (Trusted Tech Alliance- ವಿಶ್ವಾಸೀ ತಂತ್ರಜ್ಞಾನ ಮೈತ್ರಿ) ಕೂಟ ರಚಿಸಿವೆ.

ಜರ್ಮನಿಯಲ್ಲಿ ನಡೆದ ಮ್ಯೂನಿಕ್ ಸೆಕ್ಯೂರಿಟಿ ಕಾನ್ಫರೆನ್ಸ್​ನಲ್ಲಿ (Munich Security Conference) ಈ ಎಐ ಮೈತ್ರಿಕೂಟ ಗುಂಪನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಏಷ್ಯಾ, ಆಫ್ರಿಕಾ ಯೂರೋಪ್ ಮತ್ತು ಉತ್ತರ ಅಮೆರಿಕದ 15 ಕಂಪನಿಗಳು ಸದ್ಯ ಈ ಹೊಂದಾಣಿಕೆ ಮಾಡಿಕೊಂಡಿವೆ.

ಇದನ್ನೂ ಓದಿ: ಫೆ. 16ರಿಂದ ಎಐ ಇಂಪ್ಯಾಕ್ಟ್ ಸಮಿಟ್; ದಕ್ಷಿಣ ದೇಶಗಳ ಪ್ರಬಲ ಉಪಸ್ಥಿತಿ; 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ

ಟ್ರಸ್ಟೆಡ್ ಟೆಕ್ ಅಲಾಯನ್ಸ್​ನ 15 ಕಂಪನಿಗಳು

  1. ಆಂಥ್ರೋಪಿಕ್, ಅಮೆರಿಕ
  2. ಅಮೇಜಾನ್ ವೆಬ್ ಸರ್ವಿಸಸ್ (ಎಡಬ್ಲ್ಯುಎಸ್), ಅಮೆರಿಕ
  3. ಕಸ್ಸಾವ ಟೆಕ್ನಾಲಜೀಸ್, ದಕ್ಷಿಣ ಆಫ್ರಿಕಾ
  4. ಕೋಹೀರ್ (Cohere), ಕೆನಡಾ
  5. ಎರಿಕ್ಸನ್, ಸ್ವೀಡನ್, ಯುರೋಪ್
  6. ಗೂಗಲ್ ಕ್ಲೌಡ್, ಅಮೆರಿಕ
  7. ಹ್ಯಾನ್​ವಾ (Hanwha), ದಕ್ಷಿಣ ಕೊರಿಯಾ
  8. ಜಿಯೋ ಪ್ಲಾಟ್​ಫಾರ್ಮ್ಸ್, ಭಾರತ
  9. ಮೈಕ್ರೋಸಾಫ್ಟ್, ಅಮೆರಿಕ
  10. ನೊಕಿಯಾ, ಫಿನ್​ಲ್ಯಾಂಡ್ (ಯೂರೋಪ್)
  11. ಎನ್​ಸ್ಕೇಲ್ (Nscale), ಯೂರೋಪ್
  12. ಎನ್​ಟಿಟಿ, ಜಪಾನ್
  13. ರಾಪಿಡಸ್, ಜಪಾನ್
  14. ಸಾಬ್, ಅಮೆರಿಕ
  15. ಎಸ್​ಎಪಿ, ಜರ್ಮನಿ

ಎಐ ಹೊಂದಾಣಿಕೆಗೆ ಐದು ಅಂಶಗಳು

ಟ್ರಸ್ಟೆಡ್ ಟೆಕ್ ಅಲಾಯನ್ಸ್ ಅಥವಾ ವಿಶ್ವಾಸೀ ತಂತ್ರಜ್ಞಾನ ಮೈತ್ರಿಗೆ ಐದು ಅಂಶಗಳು ಆಧಾರವಾಗಿರುತ್ತವೆ. ಪಾರದರ್ಶಕ ಕಾರ್ಪೊರೇಟ್ ಆಡಳಿತ ಮತ್ತು ನೈತಿಕ ನಡಾವಳಿ; ಕಾರ್ಯಾಚರಣೆಯ ಪಾರದರ್ಶಕತೆ; ಸುಭದ್ರ ಅಭಿವೃದ್ಧಿ ಮೊದಲಾದವರು ಸೇರಿವೆ.

ಇದನ್ನೂ ಓದಿ: ಹೊಸ ಐಟಿ ರೂಲ್ಸ್; ಎಐ ಸೃಷ್ಟಿದ ಕಂಟೆಂಟ್​ಗೆ ಲೇಬಲಿಂಗ್ ಕಡ್ಡಾಯ; ಫೇಸ್​ಬುಕ್, ಇನ್ಸ್​ಟಾಗಳಿಗೆ ಕಠಿಣ ನಿಯಮ

ಆಯಾ ನಾಡಿನ ಕಾನೂನು ಕಟ್ಟಳೆಗಳಿಗೆ ಗೌರವ ಕೊಡುವುದು, ಡಾಟಾ ರಕ್ಷಣೆ, ಉತ್ತಮ ಪೂರೈಕೆ ಸರಪಳಿ ನಿರ್ಮಿಸುವುದು, ಸುಭದ್ರವಾದ ಡಿಜಿಟಲ್ ಇಕೋಸಿಸ್ಟಂ ನಿರ್ಮಿಸುವುದು ಇವೇ ಮುಂತಾದ ಕಾರ್ಯಗಳಿಗೆ ಈ ಮೈತ್ರಿಕೂಟ ಆದ್ಯತೆ ಕೊಡುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Solar Eclipse 2026: ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಕುಂಭ ರಾಶಿಯ ಮೇಲೆ ಹೇಗಿರಲಿದೆ? – Kannada News | Solar Eclipse 2026: What Kumbha Rashi Can Expect, According to Dr. Basavaraj Guruji

2026ರ ರಾಹುಗ್ರಸ್ತ ಸೂರ್ಯಗ್ರಹಣವು ಕುಂಭ ರಾಶಿಯಲ್ಲಿ ಜನ್ಮ ಗ್ರಹಣವಾಗಿ ಸಂಭವಿಸುತ್ತಿದ್ದು, ಈ ರಾಶಿಯವರಿಗೆ ಡಾ. ಬಸವರಾಜ ಗುರೂಜಿ ಅವರು ಕೆಲವು ಮಹತ್ವದ ಮಾಹಿತಿಗಳನ್ನು ನೀಡಿದ್ದಾರೆ. ಧನಿಷ್ಠಾ, ಶತಭಿಷಾ, ಮತ್ತು ಪೂರ್ವಾಭಾದ್ರಾ ನಕ್ಷತ್ರದವರು, ಮಹಿಳೆಯರು ಮತ್ತು ಮಕ್ಕಳು ವಿಶೇಷವಾಗಿ ಜಾಗ್ರತರಾಗಿರಬೇಕು. ಈ ಅವಧಿಯಲ್ಲಿ ದೇಹದಲ್ಲಿ ಅನಗತ್ಯ ಬದಲಾವಣೆಗಳು, ಬೇಕಾದವರು ದೂರವಾಗುವುದು, ಆರ್ಥಿಕ ನಿರ್ಧಾರಗಳಲ್ಲಿ ಗೊಂದಲ ಮತ್ತು ಅಧಿಕಾರದಲ್ಲಿ ಹಿನ್ನಡೆ ಸಂಭವಿಸಬಹುದು. ಮಧ್ಯಾಹ್ನ 3:26 ರಿಂದ ಸಂಜೆ 7:50ರವರೆಗೆ ಪ್ರಯಾಣಿಸುವುದು ಶುಭವಲ್ಲ, ವಿಶೇಷವಾಗಿ ಗರ್ಭಿಣಿಯರು, ವೃದ್ಧರು, ಅಸಹಾಯಕರು, ಮತ್ತು ಮಾನಸಿಕ ಅಸ್ವಸ್ಥರು ಹೊರಗೆ ಹೋಗದಿರುವುದು ಉತ್ತಮ.

ಮೋಸ, ನಷ್ಟ, ಸಾಲಗಾರರ ಕಾಟ, ಕುಟುಂಬದಲ್ಲಿ ಸಣ್ಣಪುಟ್ಟ ಕಿರಿಕಿರಿ, ಮಕ್ಕಳ ವಿಷಯದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು, ಮತ್ತು ಪ್ರೇಮ ವ್ಯವಹಾರಗಳಲ್ಲಿ ಅಡ್ಡಿ ಆತಂಕಗಳು ಎದುರಾಗಬಹುದು. ಹಿತಶತ್ರುಗಳ ಕಾಟ ಮತ್ತು ವಿವಾಹ ವಿಳಂಬ ಸಾಧ್ಯತೆಯೂ ಇದೆ. ಆರೋಗ್ಯದ ವಿಚಾರದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಪರಿಹಾರವಾಗಿ, ಶಿವನ ಸ್ತೋತ್ರ, ಶಿವನಾಮ ಸ್ಮರಣೆ, ಕಾಲಭೈರವನ ಸ್ತೋತ್ರಗಳನ್ನು ಜಪಿಸಬೇಕು. ಗೋವಿನ ದರ್ಶನ, ತಾಮ್ರದ ಪದಾರ್ಥಗಳ ದಾನ, ಬೆಲ್ಲದ ಪಾಯಸ ದಾನ, ಅನ್ನದಾನ, ನವಧಾನ್ಯಗಳನ್ನು ಕೆಂಪು ವಸ್ತ್ರದಲ್ಲಿ ದೇವಸ್ಥಾನಕ್ಕೆ ನೀಡುವುದು ಶುಭ ಫಲಗಳನ್ನು ನೀಡುತ್ತದೆ. ಗುರುವಿನ ದೃಷ್ಟಿಯಿಂದ ಕಷ್ಟದ ಸಮಯದಲ್ಲಿ ನೆರವು ದೊರೆಯುತ್ತದೆ.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾಯಿಯ ಫೋಟೋ ಶೂಟ್​​ ವೇಳೆ ಅವಘಡ: ನೀರಿಗೆ ಬಿದ್ದು ಕಣ್ಮುಚ್ಚಿದ 3 ವರ್ಷದ ಕಂದಮ್ಮ – Kannada News | Tragedy During Maternity Photoshoot: Three Year Old Child Drowns After Falling into Water

ನೀರಿಗೆ ಬಿದ್ದು 3 ವರ್ಷದ ಕಂದಮ್ಮ ಸಾವುImage Credit source: Tv9 Kannada

ನೆಲಮಂಗಲ/ಚಿಕ್ಕಮಗಳೂರು, ಫೆಬ್ರವರಿ 15: ಎರಡನೇ ಮಗುವಿನ ಖುಷಿಯಲ್ಲಿದ್ದ ದಂಪತಿಯ ಮೊದಲನೇ ಮಗು ನೀರಿಗೆ ಬಿದ್ದು ದಾರುಣವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಗಿಡ್ಡೆನಹಳ್ಳಿಯಲ್ಲಿ ನಡೆದಿದೆ. ಲಕ್ಷ್ಮೀರ್ (3) ಮೃತ ಮಗುವಾಗಿದ್ದು, ತಾಯಿ ಗರ್ಭಿಣಿ ಫೋಟೊ ಶೂಟ್ ಮಾಡಿಸುತ್ತಿದ್ದ ವೇಳೆ, ಆಟವಾಡಿಕೊಂಡಿದ್ದ ಮಗು ಸ್ಥಳದಲ್ಲಿದ್ದ ಸಣ್ಣ ನೀರಿನ ಪೂಲ್​​ಗೆ ಬಿದ್ದು ಮೃತಪಟ್ಟಿದೆ. ಮಗುವಿನ ವಿಚಾರದಲ್ಲಿನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದ್ದು, ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರಗೆ ರವಾನೆ ಮಾಡಲಾಗಿದೆ.

ಲಕ್ಷ್ಮೀರ್ ಜೆ.ಪಿ. ನಗರ ನಿವಾಸಿಯಾಗಿರುವ ಸ್ವಾತಿ ಹಾಗೂ ಚರಣ್ ರಾಜ್ ದಂಪತಿಯ ಮಗುವಾಗಿದ್ದು, ಒಂದು ವಾರದ ಹಿಂದೆ ಕೆಲಸದ ನಿಮಿತ್ತ ಚರಣ್ ರಾಜ್ ವಿದೇಶಕ್ಕೆ ತೆರಳಿದ್ದರು. ಪೋಟೋ ಶೂಟ್ ಮಾಡಿಸುವುದಾಗಿ ಗಂಡನ ಬಳಿ ಹೇಳಿ ಸ್ವಾತಿ ಸ್ನೇಹಿತೆಯೊಂದಿಗೆ ಬಂದಿದ್ದರು. ಈ ವೇಳೆ ಅವಘಡ ನಡೆದಿದೆ. ಇನ್ನು ವಿದೇಶದಲ್ಲಿರುವ ಚರಣ್ ರಾಜ್ ನಾಳೆ ಬೆಂಗಳೂರಿಗೆ ಬರಲಿದ್ದು, ಈ ಹಿನ್ನೆಲೆ ಮಗುವಿನ ಮರಣೋತ್ತರ ಪರೀಕ್ಷೆ ನಾಳೆ ನಡೆಸಲಿದೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ:  ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ; ಪತಿಯ ಪ್ರೀತಿ, ಪ್ರಣಯದಾಟ ಬಿಚ್ಚಿಟ್ಟ ಪತ್ನಿ

ಇಬ್ಬರ ಶವ ಪತ್ತೆ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿದ್ದ ಪ್ರಕರಣ ಸಂಬಂಧ ಅಗ್ನಿಶಾಮಕ ಸಿಬ್ಬಂದಿ ನದಿಯಿಂದ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಕೊಡಗು ಮೂಲದ ಯೋಗೇಶ್(17), ಅಭಿಷೇಕ್(23) ಮೃತರಾಗಿದ್ದು, ಇವರ ಕುಟುಂಬ ಕಾಫಿ ತೋಟದ ಕೆಲಸಕ್ಕೆ ಬಂದಿದ್ದ ವೇಳೆ ನದಿಯಲ್ಲಿ ಈಜಲು ಇವರಿಬ್ಬರು ತೆರಳಿದ್ದರು. ಈ ವೇಳೆ ಕುಟುಂಬದವರ ಮುಂದೆಯೇ ನದಿಯಲ್ಲಿ ಮುಳುಗಿ ಪ್ರಾಣಬಿಟ್ಟಿದ್ದರು. ಮೃತ ದೇಹಗಳಿಗಾಗಿ ಹುಡುಕಾಡಿದ್ದ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಈಜು ತಜ್ಞರು ಅಂತಿಮವಾಗಿ ಅವನ್ನು ಹೊರ ತೆಗೆದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Solar Eclipse 2026: ಮಕರ ರಾಶಿಯ ಮೇಲೆ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Solar Eclipse 2026: Astrological Impact on Capricorn by Dr. Basavaraj Guruji

2026ರ ರಾಹುಗ್ರಸ್ತ ಸೂರ್ಯಗ್ರಹಣವು ಮಕರ ರಾಶಿಯವರ ಜೀವನದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರಲಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ. ಈ ಗ್ರಹಣವು ಮಕರ ರಾಶಿಯವರ ದ್ವಿತೀಯ ಸ್ಥಾನ, ಅಂದರೆ ವಾಕ್, ಧನ ಮತ್ತು ಕುಟುಂಬ ಸ್ಥಾನದಲ್ಲಿ ಸಂಭವಿಸಲಿದೆ. ಇದು ಶುಭ ಮತ್ತು ಅಶುಭ ಮಿಶ್ರಿತ ಫಲಗಳನ್ನು ನೀಡಲಿದ್ದು, 70% ಎಚ್ಚರಿಕೆ ಮತ್ತು 30% ಶುಭ ಫಲಗಳ ಸಾಧ್ಯತೆ ಇದೆ.

ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಅವಸರದ ಹೂಡಿಕೆಗಳಿಂದ ನಷ್ಟವಾಗಬಹುದು. ಮಾತಿನಿಂದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಸರ್ಕಾರಿ ನೌಕರರಿಗೆ ಉನ್ನತ ಅಧಿಕಾರಿಗಳೊಂದಿಗೆ ಸಂಬಂಧದಲ್ಲಿ ವ್ಯತ್ಯಾಸವಾಗಬಹುದು. ಆದಾಗ್ಯೂ, ಅಗೋಚರ ವ್ಯಕ್ತಿಗಳ ಬೆಂಬಲ, ವಿವಾಹ ವಿಷಯಗಳಲ್ಲಿ ಸಕಾರಾತ್ಮಕ ಬೆಳವಣಿಗೆಗಳು, ಮತ್ತು ಒಡಹುಟ್ಟಿದವರಿಂದ ಉತ್ತಮ ಬೆಂಬಲ ನಿರೀಕ್ಷಿಸಬಹುದು. ಮಕ್ಕಳಿಂದ ಶುಭವಾಗಲಿದೆ. ರೈತರಿಗೆ ಅನುಕೂಲವಾಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸಮಯ.

ಗ್ರಹಣದ ದುಷ್ಪರಿಣಾಮಗಳನ್ನು ತಗ್ಗಿಸಲು ಸುಬ್ರಹ್ಮಣ್ಯ ಸ್ವಾಮಿ ದರ್ಶನ, ಹಳದಿ ವಸ್ತ್ರ ದಾನ, “ಓಂ ಭುಜಂಗೇಶಾಯ ನಮಃ” ಮಂತ್ರ ಪಠಣ ಮತ್ತು ನವನಾಗ ಸ್ತೋತ್ರ ಹೇಳಿಕೊಳ್ಳುವುದು ಸೂಕ್ತವಾಗಿದೆ. ಹುತ್ತಕ್ಕೆ ಪೂಜೆ ಸಲ್ಲಿಸುವುದು ಸಹ ಶುಭಕರ. ಒಟ್ಟಾರೆ, ಮಕರ ರಾಶಿಯವರು ಎಚ್ಚರಿಕೆಯಿಂದ ನಡೆದುಕೊಂಡರೆ ಸಫಲತೆ ಸಾಧಿಸಬಹುದು.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫೆ. 16ರಿಂದ ಎಐ ಇಂಪ್ಯಾಕ್ಟ್ ಸಮಿಟ್; ದಕ್ಷಿಣ ದೇಶಗಳ ಪ್ರಬಲ ಉಪಸ್ಥಿತಿ; 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ – Kannada News | AI Impact Summit 2026 at Delhi’s Bharat Mandapam from Feb 16 20, key details of the event

ನವದೆಹಲಿ, ಫೆಬ್ರುವರಿ 15: ರಾಷ್ಟ್ರ ರಾಜಧಾನಿಯಲ್ಲಿ ನಾಳೆಯಿಂದ (ಫೆ. 16) ಐದು ದಿನಗಳ ಕಾಲ ಎಐ ಇಂಪ್ಯಾಕ್ಟ್ ಸಮಿಟ್ (AI Impact Summit 2026) ನಡೆಯಲಿದೆ. ಎಐ ಕುರಿತು ಅರಿವು ಮೂಡಿಸಲು ಮತ್ತು ಎಐ ಕ್ಷೇತ್ರದಲ್ಲಿ ಭಾರತದ ಯೋಜನೆಗಳನ್ನು ಜಗಜ್ಜಾಹೀರುಗೊಳಿಸಲು ಈ ಎಐ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ವಿಶ್ವದ ಅನೇಕ ದೇಶಗಳಿಂದ ಟೆಕ್ ಮುಖಂಡರು ಮತ್ತು ಕಂಪನಿಗಳು ಈ ಸಮಿಟ್​ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅದರಲ್ಲೂ ಸುಮಾರು 50 ದಕ್ಷಿಣ ದೇಶಗಳ ಉಪಸ್ಥಿತಿ ಇದರಲ್ಲಿರಲಿದೆ.

ದೆಹಲಿಯ ಭಾರತ್ ಮಂಡಪಂನಲ್ಲಿ ಎಐ ಇಂಪ್ಯಾಕ್ಟ್ ಸಮಿಟ್ ನಡೆಯಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ. ಎಐ ಎಕ್ಸಿಬಿಶನ್, ಉನ್ನತ ಮಟ್ಟದ ಸಿಇಒ ಫೋರಂ, ಚರ್ಚೆಗಳು, ಉಪನ್ಯಾಸಗಳು ಇತ್ಯಾದಿ ನಾನಾ ರೀತಿಯ ಕಾರ್ಯಕ್ರಮಗಳು ಈ ಐದು ದಿನಗಳಾದ್ಯಂತ ನಡೆಯಲಿವೆ.

ಇದನ್ನೂ ಓದಿ: ಹೊಸ ಐಟಿ ರೂಲ್ಸ್; ಎಐ ಸೃಷ್ಟಿದ ಕಂಟೆಂಟ್​ಗೆ ಲೇಬಲಿಂಗ್ ಕಡ್ಡಾಯ; ಫೇಸ್​ಬುಕ್, ಇನ್ಸ್​ಟಾಗಳಿಗೆ ಕಠಿಣ ನಿಯಮ

ಎಐನಿಂದ ಮಾನವನ ಬದುಕಿಗೆ ಯಾವ್ಯಾವ ರೀತಿಯ ಪರಿಣಾಮ ಬೀರುತ್ತದೆ, ಎಷ್ಟು ಒಳಿತು, ಎಷ್ಟು ಮಾರಕ ಎಂಬುದನ್ನು ಅರಿಯುವ ಮತ್ತು ನಿವೇದಿಸುವ ಪ್ರಯತ್ನವಾಗಲಿದೆ. ಸಮಗ್ರ ಅಭಿವೃದ್ಧಿಗೆ ಎಐ ಅನ್ನು ಹೇಗೆ ಬಳಸಬಹುದು ಎಂಬುದನ್ನು ಚರ್ಚಿಸಲಾಗುತ್ತದೆ.

ವಿಶ್ವದ ಅತ್ಯಂತ ಪ್ರಬಲ ಎಐ ಚಿಪ್​ಗಳನ್ನು ತಯಾರಿಸುವ ಎನ್​ವಿಡಿಯಾ ಕಂಪನಿಯ ಸಿಇಒ ಹುವಾಂಗ್ ಜೆನ್ಸೆನ್ ಅವರು ಈ ಸಭೆಯಲ್ಲಿ ಕಾರಣಾಂತರಗಳಿಂದ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಲಾಗಿದೆ. ಆದರೆ, ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷ ಜಯ್ ಪುರಿ ನೇತೃತ್ವದ ನಿಯೋಗವೊಂದು ಸಮಿಟ್​ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು, ಇಸ್ರೇಲ್ ದೇಶವು ಈ ಸಮಿಟ್​ನಲ್ಲಿ ಉಪಸ್ಥಿತಿ ಹೊಂದಿರುತ್ತದೆ.

ಎಐ ಇಂಪ್ಯಾಕ್ಟ್ ಸಮಿಟ್​ಗೆ ನೊಂದಾಯಿಸುವುದು ಹೇಗೆ?

  • ಶೃಂಗಸಭೆ ನಡೆಯುವ ಸ್ಥಳ: ದೆಹಲಿಯ ಭಾರತ್ ಮಂಡಪಂ
  • ದಿನಾಂಕ: ಫೆಬ್ರುವರಿ 16ರಿಂದ 20ರವರೆಗೆ
  • ಅಧಿಕೃತ ವೆಬ್​ಸೈಟ್: impact.indiaai.gov.in/
  • ನೊಂದಣಿಗೆ ಲಿಂಕ್: impact.indiaai.gov.in/registration

ಇದನ್ನೂ ಓದಿ: ಸರ್ವಮ್ ಎಐನಿಂದ ಹೊಸ ಮಾಡಲ್; ಡಾಕ್ಯುಮೆಂಟ್ ಇಂಟೆಲಿಜೆನ್ಸ್​ನಲ್ಲಿ ವಿಶ್ವಲ್ಲೇ ಬೆಸ್ಟ್; ಕಟು ಟೀಕಾಕಾರರಿಗೂ ಅಚ್ಚರಿ

ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಹೆಚ್ಚು ಜನರು ನೊಂದಾಯಿಸಿಕೊಂಡಿದ್ದಾರೆ. ರಿಜಿಸ್ಟರ್ ಮಾಡಿಕೊಂಡರೆ ಅವರಿಗೆ ಪಾಸ್ ಕೊಡಲಾಗುತ್ತದೆ. ಅಂಥವರಿಗೆ ಮಾತ್ರವೇ ಪ್ರವೇಶಾವಕಾಶ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪಾರ್ಟಿ ವೇಳೆ ಜಗಳ: ಅಕ್ಷಯ್ ಕುಮಾರ್ ಹೊಡೆತಕ್ಕೆ ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿಗೆ ಏನಾಯ್ತು? – Kannada News | When Akshay Kumar slapped a man during high profile party

ನಟ ಅಕ್ಷಯ್ ಕುಮಾರ್ (Akshay Kumar) ಅವರು ಕಳೆದ ಮೂರು ದಶಕಗಳಿಂದ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗಿನ ಒಂದು ಕಾರ್ಯಕ್ರಮದಲ್ಲಿ ಅವರು ಕೆಲವು ಇಂಟರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ. ಸ್ವಲ್ಪ ಹೆಚ್ಚು-ಕಡಿಮೆ ಆಗಿದ್ದರೂ ಅಕ್ಷಯ್ ಕುಮಾರ್ ಅವರ ಜೀವನದಲ್ಲಿ ದೊಡ್ಡ ದುರಂತ ನಡೆದುಹೋಗುತ್ತಿತ್ತು. ಪಾರ್ಟಿಯಲ್ಲಿ ನಡೆದ ಒಂದು ಜಗಳದಿಂದ ವ್ಯಕ್ತಿಯೊಬ್ಬನ ಪ್ರಾಣವೇ ಹೋಗುವ ಸಾಧ್ಯತೆ ಇತ್ತು. ಆ ದಿನವನ್ನು ಅಕ್ಷಯ್ ಕುಮಾರ್ ಅವರು ಈಗ ನೆನಪಿಸಿಕೊಂಡಿದ್ದಾರೆ.

ಇದು ಹಲವು ವರ್ಷಗಳ ಹಿಂದೆ ನಡೆದ ಘಟನೆ. ಹೈಪ್ರೊಫೈಲ್ ಪಾರ್ಟಿಯೊಂದರಲ್ಲಿ ಅಕ್ಷಯ್ ಕುಮಾರ್ ಅವರು ಸ್ನೇಹಿತರ ಜೊತೆ ಭಾಗಿ ಆಗಿದ್ದರು. ಆಗ ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬನು ಕಿರಿಕ್ ಶುರು ಮಾಡಿದ್ದ. ಅಕ್ಷಯ್ ಕುಮಾರ್ ಸ್ನೇಹಿತರ ಮೇಲೆ ಆ ವ್ಯಕ್ತಿ ಕೈ ಮಾಡಲು ಆರಂಭಿಸಿದ್ದ. ಅದರಿಂದ ಅಕ್ಷಯ್ ಕುಮಾರ್ ಅವರಿಗೆ ಕೋಪ ಬಂದಿತ್ತು.

ಕುಡಿದು ಜಗಳ ಮಾಡುತ್ತಿದ್ದ ಆ ವ್ಯಕ್ತಿಗೆ ಅಕ್ಷಯ್ ಕುಮಾರ್ ಅವರು ಹಲವು ಬಾರಿ ಎಚ್ಚರಿಕೆ ನೀಡಿದರು. ಎಷ್ಟು ಸಲ ವಾರ್ನಿಂಗ್ ಕೊಟ್ಟರೂ ಕೂಡ ಆತ ತನ್ನ ವರ್ತನೆ ನಿಲ್ಲಿಸಲೇ ಇಲ್ಲ. ಆಗ ಅಕ್ಷಯ್ ಕುಮಾರ್ ಅವರಿಗೆ ಪಿತ್ತ ನೆತ್ತಿಗೇರಿತು. ಜೋರಾಗಿ ಆತನ ಕೆನ್ನೆಗೆ ಬಾರಿಸಿದರು. ಕೂಡಲೇ ಅವನು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದ! ಆತ ಬದುಕುತ್ತಾನೋ ಇಲ್ಲವೋ ಎಂದು ಅಕ್ಷಯ್ ಕುಮಾರ್ ಅವರಿಗೆ ಚಿಂತೆ ಶುರು ಆಯಿತು.

ಆ ಕ್ಷಣದಲ್ಲಿ ಅಕ್ಷಯ್ ಕುಮಾರ್ ಅವರಿಗೆ ಹತ್ತಾರು ಆಲೋಚನೆ ಬಂದಿತ್ತು. ಆ ಘಟನೆಯಿಂದ ತನ್ನ ಕರಿಯರ್ ಮುಗಿದೇ ಹೋಯಿತು ಎಂದು ಅವರು ಭಾವಿಸಿದ್ದರು. ಅದೃಷ್ಟವಶಾತ್, ಸ್ವಲ್ಪ ಹೊತ್ತಿನ ಬಳಿಕ ಆ ವ್ಯಕ್ತಿಗೆ ಪ್ರಜ್ಞೆ ಬಂತು. ಹಾಗಾಗಿ ಅಕ್ಷಯ್ ಕುಮಾರ್ ಬಚಾವ್ ಆದರು. ಒಂದು ವೇಳೆ ಇಂದು ಅದೇ ರೀತಿ ಜಗಳ ನಡೆದರೆ ತಾವು ಆ ರೀತಿ ಪ್ರತಿಕ್ರಿಯಿಸಲ್ಲ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಅಪಘಾತಕ್ಕೆ ಒಳಗಾದ ಅಕ್ಷಯ್ ಕುಮಾರ್ ಭದ್ರತಾ ಸಿಬ್ಬಂದಿ ಕಾರು; ನಟ ಜಸ್ಟ್ ಪಾರು

ಸಿನಿಮಾ ವಿಚಾರಕ್ಕೆ ಬರೋದಾದರೆ, ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್​​ಗಳಲ್ಲಿ ಅಕ್ಷಯ್ ಕುಮಾರ್ ಅವರು ಬ್ಯುಸಿ ಆಗಿದ್ದಾರೆ. ಅವರು ನಟಿಸಿದ ‘ಭೂತ್ ಬಂಗ್ಲ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅದಲ್ಲದೇ, ‘ವೆಲ್​ಕಮ್ ಟು ದಿ ಜಂಗಲ್’ ಮತ್ತು ‘ಹೈವಾನ್’ ಸಿನಿಮಾಗಳಲ್ಲೂ ಅಕ್ಷಯ್ ಕುಮಾರ್ ಅವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಮ್ಯೂನಿಕ್ ಏರ್​​ಪೋರ್ಟ್​​ನಲ್ಲಿ ಪಾಕ್ ಆರ್ಮಿ ಮುಖ್ಯಸ್ಥ ಆಸಿಮ್ ಬಳಿ ಐಡಿ ಕೇಳಿದ ಭದ್ರತಾ ಸಿಬ್ಬಂದಿ – Kannada News | Asim Munir Briefly Halted at Munich Venue After Security Sought Identification

ಮ್ಯೂನಿಕ್, ಫೆಬ್ರವರಿ 15: ಜರ್ಮನಿಯ ಮ್ಯೂನಿಕಕ್ ಏರ್​ಪೋರ್ಟ್​​ನಲ್ಲಿ ಪಾಕ್ ಆರ್ಮಿ ಮುಖ್ಯಸ್ಥ ಆಸಿಮ್ ಮುನೀರ್ ಬಳಿ ಭದ್ರತಾ ಸಿಬ್ಬಂದಿ ಗುರುತಿಸನ ಚೀಟಿ ಕೇಳಿರುವ ವಿಡಿಯೋ ವೈರಲ್ ಆಗಿದೆ. ಫೀಲ್ಡ್ ಮಾರ್ಷಲ್ ಮುನೀರ್ ಮತ್ತು ಅವರ ತಂಡವು ಮ್ಯೂನಿಕ್ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಲು ಜರ್ಮನ್ ನಗರಕ್ಕೆ ಬಂದಿತ್ತು. ಪಾಕಿಸ್ತಾನ ಸೇನಾ ಮುಖ್ಯಸ್ಥರು ತಮ್ಮ ಗುರುತಿನ ಚೀಟಿಯನ್ನು ಮುಂಭಾಗದಲ್ಲಿ ಕಾಣುವಂತೆ ಇಡುವಂತೆ ಭದ್ರತಾ ಅಧಿಕಾರಿ ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಜರ್ಮನಿ ಮೂಲದ ಸಿಂಧಿ ರಾಜಕೀಯ ಸಂಘಟನೆಯಾದ ಜೀ ಸಿಂಧ್ ಮುತ್ತಹಿದಾ ಮಹಾಜ್ ಮುನೀರ್ ಸಮ್ಮೇಳನದಲ್ಲಿ ಪಾಲ್ಗೊಂಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದೆ. ಜೆಎಸ್‌ಎಂಎಂ ಸದಸ್ಯರು ಅಲ್ಲೇ ಪ್ರತಿಭಟನೆಯನ್ನು ಕೂಡ ನಡೆಸಿದ್ದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link