All posts by nagaraj11081993

Weekly Horoscope 2026: ವಾರ ಭವಿಷ್ಯ; ಫೆಬ್ರವರಿ ಮೂರನೇ ವಾರ, 12 ರಾಶಿಗಳ ಫಲಾಫಲ ಹೀಗಿದೆ..! – Kannada News | February 2026 Weekly Horoscope: Your Zodiac Forecast for Love, Career and Finance

2026ರ ಫೆಬ್ರವರಿಯ ಮೂರನೇ ವಾರ ಇದಾಗಿದ್ದು ಆದಷ್ಟು ಹೆಜ್ಜೆಯನ್ನು ಇಡುವಾಗ ಎಚ್ಚರಿಕೆ ಬೇಕು. ಆದಾಯದ ಬಗ್ಗೆ ಧೈರ್ಯ ತಾಳುವುದು ಅನಿವಾರ್ಯವಾಗಲಿದೆ. ಯಾರನ್ನೋ ನಂಬಿ ಬೇಸರಿಸಬೇಕಾಗುವುದು. ಒತ್ತಡ ಉದ್ವೇಗಕ್ಕೆ ಶಾಂತವಾಗಿ ಇರುವುದು ನಿಮ್ಮ ಕೈಯಲ್ಲಿದೆ. ಒಳ್ಳೆಯದಾಗಲಿ ಸಕಲರಿಗೂ.

​ಮೇಷ:

ಲಾಭಸ್ಥಾನದ ಶನಿ-ಸೂರ್ಯನಿಂದ ಕನಕ ಯೋಗ. ನಿಮ್ಮ ಶ್ರಮಕ್ಕೆ ಈಗ ಪೂರ್ಣವಿರಾಮ ಸಿಕ್ಕಿ, ಪ್ರತಿಫಲದ ಪರ್ವ ಆರಂಭವಾಗಲಿದೆ. ರಾಜಕೀಯ ಅಥವಾ ಆಡಳಿತ ರಂಗದಲ್ಲಿರುವವರಿಗೆ ಪಟ್ಟಾಭಿಷೇಕದಂತಹ ಗೌರವ ಸಿಗಲಿದೆ.

ವೃಷಭ:

ದಶಮದಲ್ಲಿ ಕರ್ಮಾದಿಪತಿಗಳ ಯುದ್ಧ. ವೃತ್ತಿಯಲ್ಲಿ ಸಿಂಹಾಸನ ಏರುವ ಕಾಲ. ಮೇಲಧಿಕಾರಿಗಳ ಕೆಂಗಣ್ಣು ಈಗ ಪ್ರೀತಿಯಾಗಿ ಬದಲಾಗಲಿದೆ. ಹೊಸ ಉದ್ಯಮ ಆರಂಭಿಸಲು ಈ ವಾರಕ್ಕಿಂತ ಶ್ರೇಷ್ಠ ಸಮಯ ಮತ್ತೊಂದಿಲ್ಲ.

​ಮಿಥುನ:

​ಭಾಗ್ಯಸ್ಥಾನದಲ್ಲಿ ಗ್ರಹಗಳ ನರ್ತನ. ಅತೀಂದ್ರಿಯ ಶಕ್ತಿ ಅಥವಾ ದೈವಬಲ ನಿಮ್ಮನ್ನು ಕಾಪಾಡಲಿದೆ. ಸ್ಥಗಿತಗೊಂಡಿದ್ದ ವಿದೇಶಿ ಪ್ರಯಾಣ ಅಥವಾ ಉನ್ನತ ಶಿಕ್ಷಣದ ಹಾದಿ ಈಗ ಸುಗಮವಾಗಲಿದೆ. ಅದೃಷ್ಟದ ಬಾಗಿಲು ತೆರೆಯುವ ವಾರವಿದು.

ಕರ್ಕಾಟಕ:

​ಅಷ್ಟಮದಲ್ಲಿ ಸೂರ್ಯ-ಶನಿ, ಮೃತ್ಯುಂಜಯ ಜಪದ ಅಗತ್ಯ. ಸಂಕಷ್ಟಗಳ ಸುಳಿಯಿದ್ದರೂ ಅನಿರೀಕ್ಷಿತ ವಿಮೆ ಅಥವಾ ಪಿತ್ರಾರ್ಜಿತ ಆಸ್ತಿಯಿಂದ ದೊಡ್ಡ ಮೊತ್ತದ ಹಣ ಕೈ ಸೇರಲಿದೆ. ಗುಪ್ತ ಶತ್ರುಗಳು ತಾವಾಗಿಯೇ ಬಲೆಗೆ ಬೀಳುವರು.

ಸಿಂಹ:

​ಸಪ್ತಮ ಭಾವದಲ್ಲಿ ರಾಶ್ಯಾಧಿಪತಿ, ಸೌಭಾಗ್ಯ ಯೋಗ. ದಾಂಪತ್ಯದ ಬಿರುಕು ಮಾಯವಾಗಿ ಪ್ರೇಮ ಚಿಗುರಲಿದೆ. ಸಾರ್ವಜನಿಕ ಜೀವನದಲ್ಲಿ ನಿಮ್ಮ ವರ್ಚಸ್ಸು ಸೂರ್ಯನಂತೆ ಬೆಳಗಲಿದೆ. ಹೊಸ ಒಪ್ಪಂದಗಳು ನಿಮ್ಮ ಬದುಕಿನ ದಿಕ್ಕನ್ನೇ ಬದಲಿಸಲಿವೆ.

ಕನ್ಯಾ:

ಷಷ್ಠ ಭಾವದಲ್ಲಿ ಶತ್ರುನಾಶಕ ಯೋಗ. ಎದುರಾಳಿಗಳು ನಿಮ್ಮ ಮುಂದೆ ಮಂಡಿಯೂರುವರು. ಸಾಲದ ಸುಳಿಯಿಂದ ಮುಕ್ತಿ ಸಿಗಲಿದೆ. ಆರೋಗ್ಯದ ದೃಷ್ಟಿಯಿಂದ ಈ ವಾರ ಸಂಜೀವಿನಿಯಂತೆ ಕೆಲಸ ಮಾಡಲಿದೆ.

ತುಲಾ:

​ಪಂಚಮದಲ್ಲಿ ಸೃಜನಶೀಲತೆಯ ಉತ್ತುಂಗ. ನಿಮ್ಮ ಬುದ್ಧಿವಂತಿಕೆಗೆ ದೊಡ್ಡ ವೇದಿಕೆ ಸಿಗಲಿದೆ. ಪ್ರೇಮ ವ್ಯವಹಾರಗಳು ಹಸೆಮಣೆಯವರೆಗೆ ಸಾಗುವ ಸಂಕೇತಗಳಿವೆ. ಮಕ್ಕಳಿಂದ ಕುಲಕ್ಕೆ ಕೀರ್ತಿ ಬರಲಿದೆ.

​ವೃಶ್ಚಿಕ:

ಚತುರ್ಥದಲ್ಲಿ ಸುಖ ಸೌಕರ್ಯಗಳ ವೃದ್ಧಿ. ನವ ಗೃಹ ನಿರ್ಮಾಣ ಅಥವಾ ವಾಹನ ಯೋಗ ಬಲವಾಗಿದೆ. ತಾಯಿಯ ಕಡೆಯಿಂದ ಆಶೀರ್ವಾದದ ರೂಪದಲ್ಲಿ ಆಸ್ತಿ ಲಭಿಸಲಿದೆ. ಎದೆಯಲ್ಲಿದ್ದ ಆತಂಕ ದೂರವಾಗಿ ನೆಮ್ಮದಿ ನೆಲೆಸಲಿದೆ.

ಧನುಸ್ಸು:

ಈ ವಾರ ​ತೃತೀಯ ಭಾವದಲ್ಲಿ ಪರಾಕ್ರಮದ ಅಲೆ. ನಿಮ್ಮ ಮಾತು ಈಗ ಮಂತ್ರವಾಗಲಿದೆ. ಸೋದರರಿಂದ ಬೆಂಬಲ ಸಿಕ್ಕಿ ಕಠಿಣ ಕೆಲಸಗಳು ಸುಲಭವಾಗಲಿವೆ. ಕಿರು ಪ್ರವಾಸಗಳು ದೊಡ್ಡ ಮಟ್ಟದ ವ್ಯವಹಾರಕ್ಕೆ ನಾಂದಿ ಹಾಡಲಿವೆ.

ಮಕರ:

ದ್ವಿತೀಯದಲ್ಲಿ ಧನ ಭಂಡಾರ ತುಂಬುವ ಕಾಲ. ಕುಬೇರನ ಕೃಪೆ ನಿಮ್ಮ ಮೇಲಿರಲಿದೆ. ಕಠಿಣ ಶ್ರಮಕ್ಕೆ ತಕ್ಕಂತೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಕೌಟುಂಬಿಕ ಕಲಹಗಳು ಮಾತುಕತೆಯ ಮೂಲಕ ಶಾಂತವಾಗಲಿವೆ.

​ಕುಂಭ:

ಈ ವಾರ ಜನ್ಮ ರಾಶಿಯಲ್ಲಿ ಶನಿ-ಸೂರ್ಯ ಯುತಿ, ಪರೀಕ್ಷೆಯ ಕಾಲ. ಬೆಂಕಿಯಲ್ಲಿ ಬೆಂದ ಚಿನ್ನದಂತೆ ನೀವು ಪುಟಕ್ಕೇಳುವಿರಿ. ದೊಡ್ಡ ಜವಾಬ್ದಾರಿಗಳು ಹೆಗಲೇರಲಿವೆ. ಸಮಾಜದಲ್ಲಿ ಹೊಸ ಗುರುತು ಮತ್ತು ಗೌರವ ಪ್ರಾಪ್ತಿಯಾಗಲಿದೆ.

​ಮೀನ:

ದ್ವಾದಶದಲ್ಲಿ ಅಧ್ಯಾತ್ಮ ಮತ್ತು ಮುಕ್ತಿ. ಭೌತಿಕ ಸುಖಕ್ಕಿಂತ ಮಾನಸಿಕ ಶಾಂತಿಗೆ ಆದ್ಯತೆ ನೀಡುವಿರಿ. ದೂರದ ದೇಶಗಳಿಂದ ಶುಭ ವಾರ್ತೆ ಬರಲಿದೆ. ದಾನದ ಮೂಲಕ ನಿಮ್ಮ ಪಾಪಕರ್ಮಗಳು ಕರಗಿ ಪುಣ್ಯ ಲಭಿಸಲಿದೆ.

-ಲೋಹಿತ ಹೆಬ್ಬಾರ್ – 8762924271 (what’s app only)

Source link

Video: ಮಕ್ಕಳು ಬೀಚ್​​ನಲ್ಲಿ ಆಟವಾಡುತ್ತಿದ್ದಾಗ ಬಂದೇ ಬಿಡ್ತು ಭಯಾನಕ ಅಲೆ – Kannada News | Sudden Tidal Surge Sweeps Children Off Their Feet on Indonesian Beach

ಇಂಡೋನೆಷ್ಯಾ, ಫೆಬ್ರವರಿ 15: ಮಕ್ಕಳು ಬೀಚ್​​ನಲ್ಲಿ ಆಟವಾಡುತ್ತಿದ್ದಾಗ ಭಯಾನಕ ಅಲೆ ಬಂದೇ ಬಿಟ್ಟಿತ್ತು. ಕೂಡಲೇ ಎಚ್ಚೆತ್ತ ಮೂವರು ಕಡಲತೀರದಲ್ಲಿ ಓಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹಠಾತ್ ಉಬ್ಬರವಿಳಿತವು ಸಾಮಾನ್ಯ ಅಲೆಗಳಿಗಿಂತ ಹೆಚ್ಚು ಬಲವಾಗಿತ್ತು ಮತ್ತು ವೇಗವಾಗಿತ್ತು. ನೀರಿನ ಬಲವು ಹುಡುಗರನ್ನು ಹಿಂದಿಕ್ಕಿತ್ತು ಮಾತ್ರವಲ್ಲದೆ ಅವರನ್ನು ಸುಮಾರು ಮೂರು ಮೀಟರ್ ಎತ್ತರಕ್ಕೆ ಎತ್ತಿ ಬಿಸಾಕಿತ್ತು. ವೀಡಿಯೊದಲ್ಲಿ ಕಂಡ ಆ ಕ್ಷಣವು ನಿಜವಾಗಿಯೂ ಭಯಾನಕವಾಗಿತ್ತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಾಪತ್ತೆಯಾಗಿದ್ದ ಮಹಿಳೆ ಪರಪುರುಷನ ಜೊತೆ ಪತ್ತೆ: ಬಾಡಿಗೆ ಮನೆ ಮಾಲೀಕನ ಶಾಕಿಂಗ್​​ ಹೇಳಿಕೆ – Kannada News | Hassan Missing Woman Found with a men in Kunigal: House Owners Shocking Revelation

ಹಾಸನ, ಫೆಬ್ರವರಿ 15: ಮದುವೆಗೆ ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣ ಸಂಬಂಧ ಆಕೆ ತಂಗಿದ್ದ ಪತಿಯ ಸ್ನೇಹಿತ ಡೇವಿಡ್​​ ಎಂಬಾತನ ಬಾಡಿಗೆ ಮನೆಯ ಮಾಲೀಕ ಘಟನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮನೆ ಮಾಲೀಕ ಶಿವಣ್ಣ ಅವರು, ತಮ್ಮ ಬಾಡಿಗೆದಾರ ಡೇವಿಡ್ ಮನೆಯಲ್ಲಿ ಮಹಿಳೆ ಇದ್ದ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ. ಪೊಲೀಸರು ಬಂದು ಇಬ್ಬರನ್ನೂ ಕರೆದೊಯ್ದ ನಂತರವೇ ಈ ವಿಚಾರ ತಿಳಿದುಬಂದಿದೆ ಎಂದು ಹೇಳಿದ್ದಾರೆ. ಡೇವಿಡ್ ಸುಮಾರು ಒಂದು ವರ್ಷದಿಂದ ಶಿವಣ್ಣ ಅವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ. ಮೊದಲು ಹೆಂಡತಿ ಎಂದು ಹೇಳಿ ಒಬ್ಬ ಮಹಿಳೆಯೊಂದಿಗೆ ಡೇವಿಡ್ ವಾಸವಿದ್ದ ಎನ್ನಲಾಗಿದ್ದು, ಆ ಮಹಿಳೆ ಆರು-ಏಳು ತಿಂಗಳ ಹಿಂದೆ ಅಪ್ಪ-ಅಮ್ಮನಿಗೆ ಹುಷಾರಿಲ್ಲವೆಂದು ಹೋದವಳು ನಂತರ ಮರಳಿ ಬಂದಿರಲಿಲ್ಲ. ಅಂದಿನಿಂದ ಡೇವಿಡ್ ಒಬ್ಬನೇ ವಾಸವಾಗಿದ್ದ ಎಂದು ಶಿವಣ್ಣ ವಿವರಿಸಿದ್ದಾರೆ.

ಪೊಲೀಸರು ರಾತ್ರಿ 9:30ರ ಸುಮಾರಿಗೆ ಆಗಮಿಸಿ ನೇರವಾಗಿ ಡೇವಿಡ್ ಇದ್ದ ಕೊಠಡಿಗೆ ಹೋಗಿ ಮಹಿಳೆ ಮತ್ತು ಆತನನ್ನು ಕರೆದುಕೊಂಡು ಹೋಗಿದ್ದಾರೆ. ಯಾರೂ ವಿಚಾರಿಸಲಿಲ್ಲ ಅಥವಾ ಯಾವುದೇ ಮಾಹಿತಿ ಪಡೆಯಲು ಪ್ರಯತ್ನಿಸಲಿಲ್ಲ. ಮಹಿಳೆ ನಾಪತ್ತೆಯಾಗಿರುವುದು, ಕೆರೆಯಲ್ಲಿ ಶವಕ್ಕಾಗಿ ಹುಡುಕಾಡುತ್ತಿರುವ ವಿಚಾರ ಟಿವಿ ಮತ್ತು ಮೊಬೈಲ್ ಮೂಲಕ ತಿಳಿದಿತ್ತು. ಆದರೆ, ಆ ಮಹಿಳೆಯೇ ತಮ್ಮ ಮನೆಯಲ್ಲಿ ಇದ್ದರು ಎಂಬುದು ತಿಳಿದಾಗ ತಮಗೆ ತೀವ್ರ ಆಘಾತವಾಯಿತು ಎಂದು ಶಿವಣ್ಣ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಛಾವ’ ಸಿನಿಮಾಗೆ ಒಂದು ವರ್ಷ: ನೆನಪಿನ ಪುಟ ತೆರೆದ ರಶ್ಮಿಕಾ ಮಂದಣ್ಣ – Kannada News | Vicky Kaushal and Rashmika Mandanna celebrate one year of Chhaava

‘ಛಾವ’ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರು ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರ ಮಾಡಿದ್ದರೆ, ರಶ್ಮಿಕಾ ಮಂದಣ್ಣ ಅವರು ಯೇಸುಬಾಯಿ ಪಾತ್ರವನ್ನು ಮಾಡಿ ಅಭಿಮಾನಿಗಳ ಮನ ಗೆದ್ದರು.

Source link

IND vs PAK: ಪಾಕಿಗಳ ಜೊತೆ ಟೀಮ್ ಇಂಡಿಯಾ ಶೇಕ್ ಹ್ಯಾಂಡ್ ಮಾಡಲಿದ್ಯಾ? – Kannada News | T20 World Cup 2026: Will India Shake Hands with Pakistan?

T20 World Cup 2026: ಟಿ20 ವಿಶ್ವಕಪ್​​ನ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಕೊಲಂಬೊದ ಆರ್​​. ಪ್ರೇಮದಾಸ ಸ್ಟೇಡಿಯಂನಲ್ಲಿ ಇಂದು (ಫೆ.15) ನಡೆಯಲಿರುವ ಟಿ20 ವಿಶ್ವಕಪ್​​ನ 28ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಈ ಪಂದ್ಯದ ವೇಳೆ ಉಭಯ ತಂಡಗಳ ಆಟಗಾರರು ಹ್ಯಾಂಡ್ ಮಾಡಲಿದ್ದಾರಾ ಎಂಬುದೇ ಈಗ ಕುತೂಹಲ.

ಏಕೆಂದರೆ ಕಳೆದ ವರ್ಷ ಭಾರತದ ಮೇಲೆ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಯ ಬಳಿಕ ಟೀಮ್ ಇಂಡಿಯಾ ಆಟಗಾರರು ಪಾಕಿಸ್ತಾನ್ ಆಟಗಾರರೊಂದಿಗೆ ಹಸ್ತಲಾಘವ ಮಾಡಿಲ್ಲ. ಅದರಲ್ಲೂ ಕಳೆದ ಏಷ್ಯಾ ಕಪ್ 2025 ರ ಸಮಯದಲ್ಲಿ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಹಸ್ತಲಾಘವ ಮಾಡದೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಾರಿಯೂ ಅದೇ ನಿಲುವು ಮುಂದುವರಿಯುತ್ತದೆಯೇ ಎಂಬುದು ಕುತೂಹಲ.

ಈ ಬಗ್ಗೆ ಉಭಯ ತಂಡಗಳ ನಾಯಕರುಗಳು ಹೇಳಿದ್ದೇನು?

ಫೆಬ್ರವರಿ 14 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಉಭಯ ತಂಡಗಳ ನಾಯಕರು ಈ ಹಸ್ತಲಾಘವ ಮಾಡುವ ಬಗ್ಗೆ ಸ್ಪಷ್ಟ ಉತ್ತರ ನೀಡಿಲ್ಲ.

  • ಸೂರ್ಯಕುಮಾರ್ ಯಾದವ್ (ಭಾರತ ತಂಡದ ನಾಯಕ): ಹಸ್ತಲಾಘವದ ಬಗ್ಗೆ ಕೇಳಿದ ಪ್ರಶ್ನೆಗೆ, “ಇನ್ನು 24 ಗಂಟೆ ಕಾಯಿರಿ, ನಿಮಗೇ ತಿಳಿಯುತ್ತದೆ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
  • ಸಲ್ಮಾನ್ ಅಲಿ ಅಘಾ (ಪಾಕಿಸ್ತಾನ್ ತಂಡದ ನಾಯಕ): “ನಾಳೆ ಏನಾಗುತ್ತದೆ ಎಂದು ನೋಡೋಣ” ಎನ್ನುತ್ತಲೇ, ಪಂದ್ಯವು ಕ್ರೀಡಾ ಮನೋಭಾವದಿಂದ ನಡೆಯಲಿ ಎಂದು ಆಶಿಸಿದ್ದಾರೆ.

ಐಸಿಸಿ ನಿಲುವೇನು?

ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯನ್ನು ಇತ್ತೀಚೆಗಷ್ಟೇ ಐಸಿಸಿ ಮನವೊಲಿಸಿತ್ತು. ಈ ವೇಳೆ ಪಿಸಿಬಿ ಕೆಲ ಬೇಡಿಕೆಗಳನ್ನು ಮುಂದಿಟ್ಡಿದ್ದರು. ಈ ಬೇಡಿಕೆಗಳಲ್ಲಿ ಹ್ಯಾಂಡ್ ಶೇಕ್ ಕಡ್ಡಾಯ ಮಾಡಬೇಕೆಂದು ತಿಳಿಸಲಾಗಿತ್ತು.

ಕ್ರೀಡೆಯಲ್ಲಿ ರಾಜಕೀಯ ಬೆರೆಸಬಾರದು. ಭಾರತ ಮತ್ತು ಪಾಕಿಸ್ತಾನ್ ಆಟಗಾರರು ಹಸ್ತಲಾಘವ ಮಾಡುವುದನ್ನು ಕಡ್ಡಾಯ ಮಾಡಬೇಕೆಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಗ್ರಹಿಸಿತ್ತು. ಇದಕ್ಕೆ ಐಸಿಸಿ ಕೂಡ ಸಮ್ಮತಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಭರ್ಜರಿ ಚೇಸಿಂಗ್… ವಿಶ್ವಕಪ್​​ನಲ್ಲಿ ಹೊಸ ವಿಶ್ವ ದಾಖಲೆ ಬರೆದ ನೇಪಾಳ

ಹೀಗಾಗಿ ಐಸಿಸಿಯ ಶಿಷ್ಟಾಚಾರವನ್ನು ಮೀರದಂತೆ ಎರಡೂ ತಂಡಗಳ ನಾಯಕರುಗಳಿಗೆ ಐಸಿಸಿ ತಾಕೀತು ಮಾಡುವ ಸಾಧ್ಯತೆಯಿದೆ. ಅದರಂತೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದ ಟಾಸ್ ವೇಳೆ ಸೂರ್ಯಕುಮಾರ್ ಯಾದವ್ ಹಾಗೂ ಸಲ್ಮಾನ್ ಅಲಿ ಅಘಾ ಹ್ಯಾಂಡ್ ಶೇಕ್ ಮಾಡವು ಸಾಧ್ಯತೆ ಹೆಚ್ಚಿದೆ.

Source link

ದೋಸ್ತಿ ನಾಯಕರ ನಡುವೆ ದಂಗಲ್​: ಜಿಬಿಎ ಎಲೆಕ್ಷನ್​​ಗೆ ಜೆಡಿಎಸ್ ಪ್ರತ್ಯೇಕ ಸ್ಪರ್ಧೆ?; ಕುತೂಹಲ ಮೂಡಿಸಿದ ಹೆಚ್​​ಡಿಕೆ ನಡೆ – Kannada News | Clash Between Alliance Leaders: Will JD(S) Contest GBA Elections Independently?

ಮೈತ್ರಿಯಲ್ಲಿ ಮುಂದುವರಿದ ಗೊಂದಲImage Credit source: Tv9 Kannada

ಬೆಂಗಳೂರು, ಫೆಬ್ರವರಿ 15: ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ಮೈತ್ರಿ ನಾಯಕರಲ್ಲಿ ಗೊಂದಲದ ನಡುವೆ ಜಿಬಿಎ ಎಲೆಕ್ಷನ್​​ಗೆ ಜೆಡಿಎಸ್ ತಯಾರಿ ನಡೆಸಿದೆ. ಸೀಟು ಹಂಚಿಕೆಯಲ್ಲಿ ಸಮನ್ವಯತೆ ಮೂಡದಿದ್ರೂ ಏನು ಮಾಡಬೇಕೆಂಬ ಬಗ್ಗೆ ಪ್ಲ್ಯಾನ್ ಎ ಮತ್ತು ಪ್ಲ್ಯಾನ್ ಬಿ ಸಿದ್ಧವಾಗಿದ್ದು, 85ರಿಂದ 100 ವಾರ್ಡ್​ಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ಹೆಚ್​​.ಡಿ. ಕುಮಾರಸ್ವಾಮಿ ತಯಾರಿ ನಡೆಸಿದ್ದಾರೆ. ಅದಕ್ಕೆ ಪೂರಕವಾಗಿ ಎರಡು ಸಭೆ ಮಾಡಿರುವ ಕೇಂದ್ರ ಸಚಿವ, ಸೀಟು ಹಂಚಿಕೆ ವೇಳೆ ಬಿಜೆಪಿ ಬಳಿ ಕನಿಷ್ಠ 70ರಿಂದ 80 ಸೀಟ್​ ಕೇಳಲು ನಿರ್ಧರಿಸಿದ್ದಾರೆ. ಅಷ್ಟು ಕ್ಷೇತ್ರ ಬಿಟ್ಟುಕೊಟ್ಟರೆ ಮೈತ್ರಿಯಾಗಿ ಚುನಾವಣಾ ಹೋರಾಟ, ಇಲ್ಲದಿದ್ದರೆ ಪ್ರತ್ಯೇಕವಾಗಿ ಸ್ಪರ್ಧೆಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 5 ಪಾಲಿಕೆಗಳ 369 ವಾರ್ಡ್​ಗಳಲ್ಲಿ ಸಿದ್ಧತೆ ನಡೆಸಲು ಬೆಂಗಳೂರಿನ ಜೆಡಿಎಸ್​ ಮುಖಂಡರು ಮತ್ತು ಕಾರ್ಯಕರ್ತರಿಗೆ ಹೆಚ್​ಡಿಕೆ ಕರೆ ನೀಡಿದ್ದು, ಮೈತ್ರಿ ನಾಯಕರ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಮತ್ತೊಂದೆಡೆ ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಎರಡುವರೆ ವರ್ಷಗಳು ಬಾಕಿ ಇರುವಾಗಲೇ, 2028ರ ಮುಖ್ಯಮಂತ್ರಿ ಹುದ್ದೆಗಾಗಿ ಮೈತ್ರಿ ಪಡೆಯಲ್ಲಿ ಪೈಪೋಟಿ ಶುರುವಾಗಿದೆ. ವಿಧಾನಸಭೆ ಚುನಾವಣಾ ಮೈತ್ರಿ ಬಗ್ಗೆಯೂ ಇನ್ನೂ ಯಾವುದೇ ನಿರ್ಧಾರವಾಗಿಲ್ಲದಿದ್ದರೂ, ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಕೂಟದಲ್ಲಿ 2028ರ ಸಿಎಂ ಪಟ್ಟಕ್ಕಾಗಿ ಹೋರಾಟ ಆರಂಭವಾಗಿದೆ. ಇತ್ತೀಚೆಗೆ ಹಾಸನದಲ್ಲಿ ಮಾತನಾಡಿದ್ದ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಯಾರಿಗೂ ಯಾರೂ ಅನಿವಾರ್ಯ ಅಲ್ಲ. 113 ಸೀಟು ಯಾರಿಗೆ ಬರುತ್ತೋ ಅವರ ಪಕ್ಷದವರೇ ಮುಖ್ಯಮಂತ್ರಿ. ಜೆಡಿಎಸ್‌ಗೆ ಬಂದರೆ ಹೆಚ್​​ಡಿಕೆ ಸಿಎಂ ಆಗಲು ಅಭ್ಯಂತರವಿಲ್ಲ ಎಂದಿದ್ದರು. ಆದರೆ ಅವರ ಈ ಹೇಳಿಕೆ ಕೇಂದ್ರ ಸಚಿವ ಮತ್ತು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ರಾಜ್ಯ ರಾಜಕಾರಣಕ್ಕೆ ಮಾಜಿ ಕೇಂದ್ರ ಸಚಿವ ಅನಂತ್​​ ಕುಮಾರ್​​ ಹೆಗಡೆ? ಯತ್ನಾಳ್​​ ಸ್ಫೋಟಕ ಹೇಳಿಕೆ

ಮತ್ತೊಂದೆಡೆ ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ, 2028ಕ್ಕೆ ಬಿ.ವೈ. ವಿಜಯೇಂದ್ರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ವಿಜಯೇಂದ್ರರವರು ಮುಖ್ಯಮಂತ್ರಿ ಆಗುವುದು ಕೂಡ ಅಷ್ಟೇ ಸತ್ಯ ಎಂದು ಶಾಂತಗೌಡ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಮೈತ್ರಿ ಪಡೆಯಲ್ಲಿನ ತಿಕ್ಕಾಟವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿಂದೆ ಕೆಲ ಬಿಜೆಪಿ ನಾಯಕರು ಸ್ಥಳೀಯ ಸಂಸ್ಥೆ ಚುನಾವಣೆಗೆ ಜೆಡಿಎಸ್​​ ಜೊತೆ ಮೈತ್ರಿ ಬೇಡ ಎಂದು ಆಗ್ರಹಿಸಿದ್ದು ಕೂಡ ಪಕ್ಷಗಳ ನಡುವಿನ ಸಮನ್ವಯತೆಯ ಕೊರತೆಯನ್ನು ಬಹಿರಂಗಪಡಿಸಿತ್ತು. ದೋಸ್ತಿಗಳ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಭೀತು ಮಾಡಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IND vs PAK: ಟಾಸ್ ಗೆದ್ದರೆ ಭಾರತ ಏನನ್ನು ಆಯ್ಕೆ ಮಾಡಬೇಕು? – Kannada News | India vs Pakistan Toss and Pitch Analysis

T20 World Cup 2026: ಟಿ20 ವಿಶ್ವಕಪ್​ನ 28ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ಇಂದು (ಫೆ.15) ನಡೆಯಲಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡದ ಆಯ್ಕೆ ಏನಾಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಅದರಲ್ಲೂ ಟೀಮ್ ಇಂಡಿಯಾ ಟಾಸ್ ಗೆದ್ದರೆ ಏನನ್ನು ಆಯ್ಕೆ ಮಾಡಬೇಕೆಂಬುದರ ವಿಶ್ಲೇಷಣೆ ಇಲ್ಲಿದೆ…

ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದರೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಏಕೆಂದರೆ ಕೊಲಂಬೊದ ಆರ್‌ ಪ್ರೇಮದಾಸ ಸ್ಟೇಡಿಯಂನ ಇತಿಹಾಸ ಮತ್ತು ಪ್ರಸ್ತುತ ಟೂರ್ನಿಯ ಟ್ರೆಂಡ್ ಗಮನಿಸಿದರೆ, ಇಲ್ಲಿ ಮೊದಲು ಬೌಲಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭವಿದೆ. ಚೇಸಿಂಗ್ (ಗುರಿ ಬೆನ್ನಟ್ಟುವುದು) ಇಲ್ಲಿ ಹೆಚ್ಚು ಸುಲಭ ಎಂದು ಅಂದಾಜಿಸಲಾಗಿದೆ.

  • ಈ ಮೈದಾನದಲ್ಲಿ ಆಡಲಾದ 62 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿರುವುದು ಕೇವಲ 26 ಬಾರಿ ಮಾತ್ರ.
  • ದ್ವಿತೀಯ ಇನಿಂಗ್ಸ್​ ಅಂದರೆ ಚೇಸಿಂಗ್ ಮಾಡಿದ ತಂಡವು 35 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಒಂದು ಮ್ಯಾಚ್ ಟೈನಲ್ಲಿ ಅಂತ್ಯಗೊಂಡಿತ್ತು.

ಅಂದರೆ ಇಲ್ಲಿ ಟಾಸ್ ಗೆದ್ದರೆ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಇದಾಗ್ಯೂ ಮೊದಲು ಬ್ಯಾಟ್ ಮಾಡಿದ ತಂಡವು 26 ಬಾರಿ ಗೆಲುವು ದಾಖಲಿಸಿದೆ ಇತಿಹಾಸವಿದೆ. ಹೀಗಾಗಿ ಟಾಸ್ ಸೋತರೂ ಬೃಹತ್ ಮೊತ್ತ ಪೇರಿಸಲು ಪ್ರಯತ್ನಿಸಬೇಕಾಗುತ್ತದೆ.

ಬಳಸಿದ ಪಿಚ್:

ಈ ಪಂದ್ಯಕ್ಕೆ ‘ಬಳಸಿದ ಪಿಚ್’ ನೀಡಲಾಗುತ್ತಿದೆ. ಅಂದರೆ ಈ ಹಿಂದೆ ಪಂದ್ಯಗಳನ್ನಾಡಲಾದ ಪಿಚ್​​ನಲ್ಲೇ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಇಂತಹ ಪಿಚ್​ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗಲಿದ್ದು, ಪಂದ್ಯ ಮುಂದುವರಿದಂತೆ ಪಿಚ್ ನಿಧಾನವಾಗಬಹುದು.

ಇದರ ಸಂಪೂರ್ಣ ಲಾಭವನ್ನು ಸ್ಪಿನ್ನರ್​​​ಗಳು ಪಡೆದುಕೊಳ್ಳಬಹುದು. ಇನ್ನು ದ್ವಿತೀಯ ಇನಿಂಗ್ಸ್ ವೇಳೆ ಇಬ್ಬನಿ ಪ್ರಭಾವ ಬೀರಬಹುದಾದ್ದರಿಂದ ಚೇಸಿಂಗ್ ಮಾಡುವ ತಂಡಕ್ಕೆ ಬ್ಯಾಟಿಂಗ್ ಸುಲಭವಾಗಲಿದೆ.

‘ವರುಣ’ನ ಲೆಕ್ಕಾಚಾರ:

ಇವೆಲ್ಲಕ್ಕಿಂತ ಮುಖ್ಯವಾಗಿ ಈ ಪಂದ್ಯದ ವೇಳೆ ಮಳೆಯಾಗುವ ಮುನ್ಸೂಚನೆ ಇದೆ. ಇದರಿಂದ ದ್ವಿತೀಯ ಇನಿಂಗ್ಸ್​ ಆಡುವ ತಂಡಕ್ಕೆ ಡಕ್​ವರ್ತ್​ ಲೂಯಿಸ್ (DLS) ನಿಯಮ ಅನ್ವಯವಾಗುವ ಸಾಧ್ಯತೆ ಹೆಚ್ಚು.

ಈ ಎಲ್ಲಾ ಕಾರಣಗಳಿಂದಾಗಿ ಟಾಸ್ ಗೆಲ್ಲುವ ತಂಡ ಬೌಲಿಂಗ್ ಆಯ್ದುಕೊಳ್ಳುವುದು ಸೂಕ್ತ. ಅದರಂತೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದಲ್ಲಿ ಯಾರು ಟಾಸ್ ಗೆಲ್ಲಲಿದ್ದಾರೆ? ಯಾರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.

  • ಟಾಸ್ ಸಮಯ: ಸಂಜೆ 6:30 (IST)
  • ಪಂದ್ಯ ಪ್ರಾರಂಭ: ರಾತ್ರಿ 7:00 (IST)

ಪಾಕಿಸ್ತಾನ್ ಟಿ20 ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಫಖರ್ ಝಮಾನ್, ಖ್ವಾಜಾ ಮೊಹಮ್ಮದ್ ನಫಾಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ಸಲ್ಮಾನ್ ಮಿರ್ಝ, ನಸೀಮ್ ಶಾ, ಸಾಹಿಬ್​ಝಾದ ಫರ್ಹಾನ್ (ವಿಕೆಟ್ ಕೀಪರ್), ಸೈಮ್ ಅಯ್ಯೂಬ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ತಾರಿಖ್, ಶಾದಾಬ್​ ಖಾನ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್).

ಇದನ್ನೂ ಓದಿ: ಮೂರೇ 3 ಎಸೆತಗಳಿಂದ ವಿಶ್ವ ದಾಖಲೆ ತಪ್ಪಿಸಿಕೊಂಡ ಸೌತ್ ಆಫ್ರಿಕಾ

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Source link

Video: ಚಿತ್ತೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನ ಮೇಲೆ ಮಗುಚಿ ಬಿದ್ದ ಲಾರಿ, ಟೆಕ್ಕಿ ಸಾವು – Kannada News | Software Engineer Dies After Container Topples Onto Car on Chittoor Bengaluru Highway

ಚಿತ್ತೂರು, ಫೆಬ್ರವರಿ 15: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಕಾರಿನ ಮೇಲೆ ಲಾರಿ ಮಗುಚಿ ಬಿದ್ದ ಪರಿಣಾಮ ಟೆಕ್ಕಿ ಸಾವನ್ನಪ್ಪಿದ್ದಾರೆ. ಚಿತ್ತೂರು-ಬೆಂಗಳೂರು ಹೈವೇಯಲ್ಲಿ ಘಟನೆ ನಡೆದಿದೆ. ಗುಡಿಪಾಲ ಮಂಡಲದ ರಾಮಪುರಂ ಗ್ರಾಮದ ನಿವಾಸಿ ಡಿ ಅನುದೀಪಕ್ ಅವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೈಕ್​ಗೆ ಆಗುತ್ತಿದ್ದ ಡಿಕ್ಕಿ ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ. ಎದುರಿನಿಂದ ಬರುತ್ತಿದ್ದ ಲಾರಿ ಕಾರಿನ ಮೇಲೆ ಮಗುಚಿ ಬಿದ್ದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಟೆಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನೆಲಮಂಗಲ ಬಳಿ ಬಸ್​​ಗೆ ಕಾರು ಗುದ್ದಿ ಐವರ ಸಾವು: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ – Kannada News | Horrific Nelamangala Car Bus Collision Claims Lives; Bus Driver Describes Traumatic Incident

ಬೆಂಗಳೂರು, ಫೆಬ್ರವರಿ 15: ನೆಲಮಂಗಲದ ಜಿಂದಾಲ್ ಬಳಿ ಸಂಭವಿಸಿದ ಬಸ್​​ ಮತ್ತು ಕಾರು ನಡುವಿನ ಅಪಘಾತದಲ್ಲಿ ಐವರು ಅಸುನೀಗಿರುವ ಘಟನೆಯ ಭೀಕರತೆಯನ್ನು ಕೆಎಸ್​ಆರ್​ಟಿಸಿ ಬಸ್ ಚಾಲಕ ಕೆಂಪರಾಜು ವಿವರಿಸಿದ್ದಾರೆ. ಕಾರು ಅತಿ ವೇಗದಲ್ಲಿ ಡಿವೈಡರ್ ಹಾರಿ ಬಸ್‌ಗೆ ಡಿಕ್ಕಿ ಹೊಡೆದಾಗ ಜೋರಾದ ಸದ್ದು ಕೇಳಿಸಿತು. ಅಪಘಾತದ ತೀವ್ರತೆಗೆ ಬಸ್‌ನ ಗಾಜುಗಳು ಒಡೆದು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್‌ನಲ್ಲಿ 43 ಪ್ರಯಾಣಿಕರಿದ್ದು, ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ. ಅಪಘಾತವಾದ ಕಾರಿನಲ್ಲಿ ಐವರು ಇದ್ದರು. ಆ ಪೈಕಿ ಎಲ್ಲರೂ ಮೃತಪಟ್ಟಿದ್ದಾರೆ. ಬಸ್ ಅಪಘಾತಕ್ಕೀಡಾದ ನಂತರ, ಪ್ರಯಾಣಿಕರನ್ನು ಹುಬ್ಬಳ್ಳಿಗೆ ತೆರಳುತ್ತಿದ್ದ ಸಂಸ್ಥೆಯ ಬೇರೆ ಬಸ್‌ಗಳಲ್ಲಿ ಕಳುಹಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕ್ಯಾಲಿಫೋರ್ನಿಯಾದಲ್ಲಿ 6 ದಿನಗಳ ಹಿಂದೆ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶವವಾಗಿ ಪತ್ತೆ – Kannada News | Saketh Srinivasayya: Missing Karnataka Student Found Dead in California, Indian Student Safety Concerns

ಕ್ಯಾಲಿಫೋರ್ನಿಯಾ, ಫೆಬ್ರವರಿ 15: ಅಮೆರಿಕದಲ್ಲಿ ಓದುವ ಕನಸು ಕಾಣುತ್ತಿರುವ ಭಾರತೀಯ ವಿದ್ಯಾರ್ಥಿ(Student)ಗಳಿಗೆ ಮತ್ತೊಮ್ಮೆ ಆತಂಕಕಾರಿ ಸುದ್ದಿ ಹೊರಬಿದ್ದಿದೆ.ಕ್ಯಾಲಿಫೋರ್ನಿಯಾದಲ್ಲಿ ಆರು ದಿನಗಳಿಂದ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಶವವಾಗಿ ಪತ್ತೆಯಾಗಿದ್ದಾರೆ. ಭಾರತೀಯ ವಿದ್ಯಾರ್ಥಿಯ ಶವ ಪತ್ತೆಯಾಗಿರುವುದು ಅವರ ಕುಟುಂಬವನ್ನು ಮಾತ್ರವಲ್ಲದೆ ಇಡೀ ಭಾರತೀಯ ವಿದ್ಯಾರ್ಥಿ ಸಮುದಾಯವನ್ನು ಆಘಾತಗೊಳಿಸಿದೆ.

ಕರ್ನಾಟಕದ 22 ವರ್ಷದ ಸಾಕೇತ್ ಶ್ರೀನಿವಾಸಯ್ಯ, ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಮತ್ತು ಜೈವಿಕ ಅಣು ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು. ಫೆಬ್ರವರಿ 9 ರಂದು ಕ್ಯಾಂಪಸ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಅವರನ್ನು ಕೊನೆಯ ಬಾರಿಗೆ ನೋಡಲಾಯಿತು, ಮತ್ತು ಅಂದಿನಿಂದ ಅವರ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ.

ಸಾಕೇತ್ ಕಣ್ಮರೆಯಾದ ನಂತರ, ಲೇಕ್ ಅಂಜಾ, ಬರ್ಕ್ಲಿ ಹಿಲ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಟಿಲ್ಡೆನ್ ಪ್ರಾದೇಶಿಕ ಉದ್ಯಾನವನದ ಬಳಿಯ ಮನೆಯ ಬಳಿ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಹೊಂದಿದ್ದ ಬ್ಯಾಗ್ ಪತ್ತೆಯಾಗಿತ್ತು. ಇದು ಪ್ರಕರಣವನ್ನು ಮತ್ತಷ್ಟು ಜಟಿಲಗೊಳಿಸಿತ್ತು.

ಮತ್ತಷ್ಟು ಓದಿ: ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆ

ಸಾಕೇತ್ ಅವರ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ದೂತಾವಾಸವು ದೃಢಪಡಿಸಿದೆ. ಮೃತದೇಹವನ್ನು ಭಾರತಕ್ಕೆ ತ್ವರಿತವಾಗಿ ತಲುಪಿಸಲು ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುವುದು ಮತ್ತು ಈ ಕಷ್ಟದ ಸಮಯದಲ್ಲಿ ಕುಟುಂಬದೊಂದಿಗೆ ತನ್ನ ಸಂತಾಪವನ್ನು ವ್ಯಕ್ತಪಡಿಸುವುದಾಗಿ ದೂತಾವಾಸವು ಹೇಳಿಕೆ ನೀಡಿದೆ.

ಸಾಕೇತ್ ಈ ಹಿಂದೆ ಐಐಟಿ ಮದ್ರಾಸ್‌ನಲ್ಲಿ ಅಧ್ಯಯನ ಮಾಡಿದ್ದರು ಮತ್ತು ಹೈಪರ್‌ಲೂಪ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪೇಟೆಂಟ್‌ನ ಭಾಗವಾಗಿದ್ದರು. ಈ ಘಟನೆಯು ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ. ಲೋಕಸಭೆಯಲ್ಲಿ ಅಸಾದುದ್ದೀನ್ ಓವೈಸಿ ಈ ವಿಷಯವನ್ನು ಪ್ರಸ್ತಾಪಿಸಿದರು, ಇದಕ್ಕೆ ವಿದೇಶಾಂಗ ಸಚಿವಾಲಯವು ಭಾರತೀಯ ರಾಯಭಾರ ಕಚೇರಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ ಮತ್ತು ಅಪಾಯಗಳ ಬಗ್ಗೆ ಅವರಿಗೆ ಶಿಕ್ಷಣ ನೀಡುತ್ತಿವೆ ಎಂದು ಹೇಳಿದೆ.

ಇದು ಅಪಘಾತವೋ, ಮಾನಸಿಕ ಒತ್ತಡದ ಪ್ರಕರಣವೋ ಅಥವಾ ಇನ್ನಾವುದೇ ಕಾರಣವೋ? ತನಿಖೆ ಪೂರ್ಣಗೊಳ್ಳುವವರೆಗೆ ಸತ್ಯ ಬಹಿರಂಗಗೊಳ್ಳುವುದಿಲ್ಲ, ಆದರೆ ಈ ಘಟನೆಯು ವಿದೇಶದಲ್ಲಿ ಕಲಿಯುತ್ತಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳಿಗೆ ಖಂಡಿತವಾಗಿಯೂ ಎಚ್ಚರಿಕೆ ನೀಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link