ಜೂನ್ 10 ರಂದು ಒಂದು ಅದ್ಭುತ ವಿದ್ಯಮಾನ ಘಟಿಸಲಿದೆ. ದೃಕ್ ಪಂಚಾಂಗದ ಪ್ರಕಾರ, ಅಂದು ಜ್ಞಾನದ ಕಾರಕ ಗುರು ಮತ್ತು ಐಶ್ವರ್ಯದ ಕಾರಕ ಶುಕ್ರ ಒಂದೇ ಮಟ್ಟದಲ್ಲಿ ಸಂಧಿಸಲಿದ್ದಾರೆ. ಈ ಇಬ್ಬರು ಶುಭ ಗ್ರಹಗಳ ನಿಕಟ ಸಂಯೋಗದಿಂದಾಗಿ ಅತ್ಯಂತ ಶಕ್ತಿಶಾಲಿ ‘ಗಜಲಕ್ಷ್ಮಿ ರಾಜಯೋಗ’ ನಿರ್ಮಾಣವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರುವು ವಿಸ್ತರಣೆ ಮತ್ತು ಜ್ಞಾನವನ್ನು ಪ್ರತಿನಿಧಿಸಿದರೆ, ಶುಕ್ರನು ಸುಖ-ಸಂತೋಷ ಮತ್ತು ಆಕರ್ಷಣೆಯನ್ನು ನೀಡುತ್ತಾನೆ. ಈ ಇಬ್ಬರ ಮಿಲನವು ವೃತ್ತಿ, ವ್ಯವಹಾರ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದೆ.
ಯಾವ ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ?
ವೃಷಭ ರಾಶಿ:
ವೃಷಭ ರಾಶಿಯವರಿಗೆ ಈ ಯೋಗವು ಆರ್ಥಿಕವಾಗಿ ಭರ್ಜರಿ ಲಾಭ ತರಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು, ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದ್ದು, ಪ್ರೀತಿಪಾತ್ರರ ಜೊತೆಗಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ.
ಕರ್ಕಾಟಕ ರಾಶಿ:
ವೃತ್ತಿ ರಂಗದಲ್ಲಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿಗಳು ಸಿಗುವುದರ ಜೊತೆಗೆ ಆರ್ಥಿಕ ಸ್ಥಿರತೆ ಲಭಿಸಲಿದೆ. ವೈಯಕ್ತಿಕ ಜೀವನದಲ್ಲಿ ಸಂಗಾತಿಯೊಂದಿಗೆ ಉತ್ತಮ ಸಾಮರಸ್ಯ ಮೂಡಲಿದ್ದು, ನೆಮ್ಮದಿಯ ವಾತಾವರಣವಿರುತ್ತದೆ.
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಇದು ಸುವರ್ಣ ಕಾಲ. ಸ್ಥಗಿತಗೊಂಡಿದ್ದ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳಲಿವೆ. ಸಮಾಜದಲ್ಲಿ ಗೌರವ-ಮನ್ನಣೆ ಹೆಚ್ಚಾಗಲಿದ್ದು, ದೂರದ ಪ್ರಯಾಣಗಳು ಲಾಭದಾಯಕವಾಗಿರಲಿವೆ. ಹೊಸ ಅನುಭವಗಳು ನಿಮ್ಮ ವ್ಯಕ್ತಿತ್ವವನ್ನು ಇನ್ನಷ್ಟು ಮೆರುಗುಗೊಳಿಸಲಿವೆ.
ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ
ತುಲಾ ರಾಶಿ:
ಪಾಲುದಾರಿಕೆ ವ್ಯವಹಾರದಲ್ಲಿರುವವರಿಗೆ ಈ ರಾಜಯೋಗವು ಅತ್ಯುತ್ತಮ ಫಲ ನೀಡಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಇದು ಸಕಾಲ. ವೈಯಕ್ತಿಕ ಸಂಬಂಧಗಳಲ್ಲಿ ಪರಸ್ಪರ ತಿಳುವಳಿಕೆ ಹೆಚ್ಚಾಗಲಿದ್ದು, ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ.
ಧನು ರಾಶಿ:
ಧನು ರಾಶಿಯವರಿಗೆ ಶಿಕ್ಷಣ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಜಯ ಸಿಗಲಿದೆ. ಹೊಸ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಇದು ಸಕಾಲ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಯಿದ್ದು, ಮಕ್ಕಳ ಕಡೆಯಿಂದ ಉತ್ತಮ ಸುದ್ದಿಯನ್ನು ನಿರೀಕ್ಷಿಸಬಹುದು.
ಹೂಡಿಕೆ ಮತ್ತು ನಿರ್ಧಾರಗಳಿಗೆ ಶುಭ ಸಮಯ:
ಗುರು ಮತ್ತು ಶುಕ್ರರ ಈ ಯುಗಲಬಂದಿಯು ಸಮತೋಲಿತ ಜೀವನಕ್ಕೆ ನಾಂದಿ ಹಾಡಲಿದೆ. ನೀವು ಹೊಸ ಉದ್ಯಮ ಆರಂಭಿಸಲು ಅಥವಾ ದೊಡ್ಡ ಮಟ್ಟದ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಸಮಯವು ಅನುಕೂಲಕರ ಫಲಿತಾಂಶಗಳನ್ನು ನೀಡಲಿದೆ ಎಂದು ಜ್ಯೋತಿಷ್ಯ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
