All posts by nagaraj11081993

ರಜನೀಕಾಂತ್​ರ ಭೇಟಿಯಾಗಿ ಪತಿ ಚಿರು ಸರ್ಜಾರ ನೆನೆದ ಮೇಘನಾ – Kannada News | Meghana Raj remembers her late husband Chiru Sarja

ಚಿರಂಜೀವಿ ಸರ್ಜಾ (Chiranjeevi Sarja) ನಿಧನರಾಗಿ ಆರು ವರ್ಷಗಳಾಗುತ್ತಾ ಬಂತು. 2020ರ ಜೂನ್ ತಿಂಗಳಲ್ಲಿ ಹಠಾತ್ತನೆ ಕಣ್ಣು ಮುಚ್ಚಿದರು ಚಿರಂಜೀವಿ ಸರ್ಜಾ. ಪತ್ನಿ ಮೇಘನಾ ಅವರನ್ನು ಅಗಲಿ, ಹುಟ್ಟಲಿದ್ದ ಮಗುವನ್ನು ಸಹ ಕಾಣದೆ ಹೊರಟು ಹೋದರು. ಆದರೆ ಮೇಘನಾ ಅವರು ಮಗನಿಗಾಗಿ ಬದುಕುತ್ತಿದ್ದಾರೆ. ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಅವರು ರಜನೀಕಾಂತ್ ಜೊತೆ ಸಿನಿಮಾನಲ್ಲಿ ನಟಿಸಿದ್ದಾರೆ. ರಜನೀಕಾಂತ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿರುವ ಮೇಘನಾ, ಪತಿ ಚಿರು ಸರ್ಜಾ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

ಇಂದು (ಮೇ 2) ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮದುವೆಯಾದ ದಿನ. ಅವರಿಬ್ಬರ ವಿವಾಹ ವಾರ್ಷಿಕೋತ್ಸವ. ಪತಿಯೊಟ್ಟಿಗೆ ಕೆಲವು ಹಳೆಯ ಚಿತ್ರಗಳನ್ನು ಹಂಚಿಕೊಂಡಿರುವ ಮೇಘನಾ ರಾಜ್, ‘ನಾವು ಒಟ್ಟಿಗೆ ಕಂಡಿದ್ದ ಕನಸೊಂದು ನನಸಾಗಿದೆ’ ಎಂದಿದ್ದಾರೆ. ಮಾತ್ರವಲ್ಲದೆ, ‘ಆ ಕನಸನ್ನು ನನಸು ಮಾಡಿರುವ ಶಕ್ತಿ ನೀನೇ’ ಎಂದಿದ್ದಾರೆ ಸಹ.

ಚಿರಂಜೀವಿ ಸರ್ಜಾ, ರಜನೀಕಾಂತ್​​ರ ಮಹಾನ್ ಅಭಿಮಾನಿ ಆಗಿದ್ದರು. ರಜನೀಕಾಂತ್ ಅವರೊಟ್ಟಿಗೆ ಚಿರು ಸರ್ಜಾ ಅವರ ಚಿತ್ರವನ್ನು ಹಂಚಿಕೊಂಡಿರುವ ನಟಿ ಮೇಘನಾ, ರಜನೀಕಾಂತ್ ಅವರ ಸಹಿ ಮಾಡಿಕೊಟ್ಟ ಪುಟ್ಟ ರಜನೀ ಚಿತ್ರದೊಟ್ಟಿಗೆ ಚಿರು ತೆಗೆದುಕೊಂಡಿದ್ದ ಸೆಲ್ಫಿಯನ್ನು ಸಹ ಹಂಚಿಕೊಂಡಿದ್ದಾರೆ. ಜೊತೆಗೆ ಈಗ ತಾವು ರಜನೀ ಜೊತೆ ನಟಿಸುವಾಗ ಅವರೊಟ್ಟಿಗೆ ಕೆಲವು ಚಿತ್ರಗಳನ್ನು ತೆಗೆದುಕೊಂಡಿದ್ದು ಅವರನ್ನೂ ಸಹ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಜನೀಕಾಂತ್ ಅವರು ಚಿರು ಸರ್ಜಾ-ಮೇಘನಾರ ಪುತ್ರನನ್ನು ಮುದ್ದಿಸುತ್ತಿರುವ ಚಿತ್ರವನ್ನು ಸಹ ಮೇಘನಾ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಚಿರಂಜೀವಿ ಸರ್ಜಾ ಪುಣ್ಯತಿಥಿ: ಪತಿ ಅಗಲಿಕೆ ಬಳಿಕ ಮೇಘನಾ ರಾಜ್ ವೈಯಕ್ತಿಕ ಜೀವನದ ಬಗ್ಗೆ ಕೇಳಿ ಬಂದಿತ್ತು ದೊಡ್ಡ ವದಂತಿ

ಚಿರು ಮತ್ತು ಮೇಘನಾ ಅವರಿಗೆ ರಜನೀಕಾಂತ್ ಅವರೊಟ್ಟಿಗೆ ನಟಿಸುವ ಆಸೆ ಇತ್ತಂತೆ. ಇದೀಗ ಮೇಘನಾ ರಾಜ್ ಅವರು ರಜನೀಕಾಂತ್ ಅವರೊಟ್ಟಿಗೆ ನಟಿಸಿದ್ದಾರೆ. ರಜನೀಕಾಂತ್ ಅವರ ಹೊಸ ಸಿನಿಮಾ ‘ಜೈಲರ್ 2’ನಲ್ಲಿ ಮೇಘನಾ ರಾಜ್ ಅವರಿಗೆ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಅನ್ನು ನೆಲ್ಸನ್ ನಿರ್ದೇಶಿಸಿದ್ದು, ಇದೇ ಸಿನಿಮಾನಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಸಹ ನಟಿಸಿದ್ದಾರೆ.

ಮೇಘನಾ ರಾಜ್ ಅವರು ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಬುದ್ಧಿವಂತ 2’ ಸಿನಿಮಾ ಮುಗಿಸಿದ್ದಾರೆ. ‘ಒಟ್ಟಕುಂಬನ್’ ಹೆಸರಿನ ಮಲಯಾಳಂ ಸಿನಿಮಾನಲ್ಲಿ ಮೇಘನಾ ನಟಿಸಿದ್ದು, ಆ ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಬಲಿಷ್ಠ ಪಂಜಾಬ್ ತಂಡಕ್ಕೆ ಮತ್ತೊಬ್ಬ ಸ್ಟಾರ್ ಆಟಗಾರನ ಆಗಮನ

Source link

ಛತ್ತೀಸ್‌ಗಢದಲ್ಲಿ ಐಇಡಿ ನಿಷ್ಕ್ರಿಯಗೊಳಿಸುವಾಗ ಸ್ಫೋಟ; ನಾಲ್ವರು ಭದ್ರತಾ ಸಿಬ್ಬಂದಿ ಸಾವು – Kannada News | 4 DRG personnel killed in IED Blast during demining operation in Chhattisgarh

ನವದೆಹಲಿ, ಮೇ 2: ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಇಂದು ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡು ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ)ಯ ನಾಲ್ವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇನ್ನೋರ್ವ ಸೈನಿಕ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಂಡವು ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾಗ ಬಾಂಬ್ ಸ್ಫೋಟ ಸಂಭವಿಸಿದೆ.

ಇದು ಮಾರ್ಚ್ 31ರಂದು ಭಾರತ ದೇಶವನ್ನು ಸಶಸ್ತ್ರ ಮಾವೋವಾದಿಗಳಿಂದ ಮುಕ್ತವೆಂದು ಘೋಷಿಸಿದ ನಂತರ ಛತ್ತೀಸ್​ಗಢ ರಾಜ್ಯದಲ್ಲಿ ನಕ್ಸಲೀಯರಿಗೆ ಸಂಬಂಧಿಸಿದ ಹಿಂಸಾಚಾರದ ಮೊದಲ ಘಟನೆಯಾಗಿದೆ. ಚೊಟೆಬೆಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಪುರ ಜಿಲ್ಲೆಯ ಗಡಿಗೆ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ನಕ್ಸಲೀಯರು ಈ ಹಿಂದೆ ಇಟ್ಟಿದ್ದ ಐಇಡಿಗಳನ್ನು ಪತ್ತೆಹಚ್ಚಲು ಮತ್ತು ತಟಸ್ಥಗೊಳಿಸಲು ಡಿಆರ್‌ಜಿ ಘಟಕವು ಬಾಂಬ್ ನಿರ್ಮೂಲನ ಕಾರ್ಯಾಚರಣೆಯನ್ನು ನಡೆಸುತ್ತಿದ್ದರು. ಅದನ್ನು ತಟಸ್ಥಗೊಳಿಸಲು ಪ್ರಯತ್ನಿಸುವಾಗ ಐಇಡಿ ಸ್ಫೋಟಗೊಂಡಿದೆ.

ಇದನ್ನೂ ಓದಿ: ಛತ್ತೀಸ್‌ಗಢದ ಸುಕ್ಮಾದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ; ಹಿರಿಯ ಪೊಲೀಸ್ ಅಧಿಕಾರಿ ಸಾವು, ಹಲವರಿಗೆ ಗಾಯ

ಬಸ್ಟರ್ ರೇಂಜ್‌ನ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಟ್ಟಿಲಿಂಗಂ ಈ ಬಗ್ಗೆ ಮಾತನಾಡಿದ್ದು, ಶರಣಾದ ಮಾವೋವಾದಿ ಕಾರ್ಯಕರ್ತರ ಮಾಹಿತಿ ಸೇರಿದಂತೆ ಇತ್ತೀಚಿನ ತಿಂಗಳುಗಳಲ್ಲಿ ಸಂಗ್ರಹಿಸಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಭದ್ರತಾ ಪಡೆಗಳು ಕಂಕೇರ್‌ನಂತಹ 7 ಜಿಲ್ಲೆಗಳಲ್ಲಿ ನೂರಾರು ಐಇಡಿಗಳನ್ನು ವಶಪಡಿಸಿಕೊಂಡು ನಿಷ್ಕ್ರಿಯಗೊಳಿಸಿವೆ. ಆದರೆ, ಇಂದಿನ ದುರದೃಷ್ಟಕರ ಘಟನೆಯಲ್ಲಿ, ಕಂಕೇರ್ ಜಿಲ್ಲಾ ಪೊಲೀಸ್ ತಂಡವು ಅದನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತಿರುವಾಗ ಐಇಡಿ ಆಕಸ್ಮಿಕವಾಗಿ ಸ್ಫೋಟಗೊಂಡಿದೆ ಎಂದು ಹೇಳಿದರು.

ಮಾರ್ಚ್ 2026ರಲ್ಲಿ ಭಾರತ ನಕ್ಸಲ್ ಮುಕ್ತ ಎಂದು ಘೋಷಿಸಿತ್ತು. ಮಾರ್ಚ್ 30ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತವನ್ನು ನಕ್ಸಲ್ ಮುಕ್ತ ಎಂದು ಘೋಷಿಸಿದ್ದರು.

ಇದನ್ನೂ ಓದಿ: Video: ಐಇಡಿ ನಿಷ್ಕ್ರಿಯ, ದೀಪಾವಳಿ ಸಮಯದಲ್ಲಿ ತಪ್ಪಿದ ದೊಡ್ಡ ಅನಾಹುತ, ಶೋಪಿಯಾನ್​ನಲ್ಲಿ ಭಯೋತ್ಪಾದಕ ದಾಳಿ ವಿಫಲ

ಇನ್ಸ್‌ಪೆಕ್ಟರ್ ಸುಖ್‌ರಾಮ್ ವಟ್ಟಿ, ಕಾನ್‌ಸ್ಟೆಬಲ್ ಕೃಷ್ಣ ಕೊಮ್ರಾ ಮತ್ತು ಕಾನ್‌ಸ್ಟೆಬಲ್ ಸಂಜಯ್ ಗಢ್‌ಪಾಲೆ ಎಂಬ ಮೂವರು ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಾನ್‌ಸ್ಟೆಬಲ್ ಪರಮಾನಂದ ಕೊಮ್ರಾ ಅವರನ್ನು ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

World Press Freedom Day 2026: ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸುವುದರ ಉದ್ದೇಶವೇನು ಗೊತ್ತಾ? – Kannada News | World Press Freedom Day 2026: For what purpose was Press Freedom Day started, know the history of this day

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನImage Credit source: Getty Images

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಷ್ಟೇ ಪ್ರಬಲವಾದ ಶಕ್ತಿ ಪತ್ರಿಕಾ ರಂಗಕ್ಕಿದೆ. ಅದಕ್ಕಾಗಿಯೇ ಪತ್ರಿಕೋದ್ಯಮವನ್ನು ಸಂವಿಧಾನದ (constitution) ನಾಲ್ಕನೇ ಸ್ತಂಭವೆಂದು ಪರಿಗಣಿಸಲಾಗಿದೆ. ಇದು ಸರ್ಕಾರ ಮತ್ತು ಜನರನ್ನು ಸಂಪರ್ಕಿಸುವ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಪತ್ರಿಕೋದ್ಯಮವು ಜನರ ಅಭಿಪ್ರಾಯಗಳ ಮೇಲೆ ಪ್ರಭಾವ ಬೀರುವಲ್ಲಿ, ಸರ್ಕಾರದ ಕಾರ್ಯವೈಖರಿಗಳ ಜೊತೆಗೆ ಹುಳುಕುಗಳನ್ನು ಜನರಿಗೆ  ವಸ್ತುನಿಷ್ಠವಾಗಿ ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ ಕೆಲವೊಮ್ಮೆ ಆದರೆ ಕೆಲವೊಮ್ಮೆ ಮಾಧ್ಯಮಗಳು ಬೆದರಿಕೆ, ಸೆನ್ಸಾರ್ಶಿಪ್‌, ಹಿಂಸೆಗಳಂತಹ ಸವಾಲುಗಳನ್ನು ಎದರಿಸುತ್ತವೆ. ಹೀಗಾಗಿ ಪತ್ರಕರ್ತರಿಗೆ ನ್ಯಾಯಮಾರ್ಗದಲ್ಲಿ ತಮ್ಮ ಕರ್ತವ್ಯವವನ್ನು ನಿರ್ವಹಿಸಲು ಪೂರಕ ವಾತಾವರಣವನ್ನು ಕಲ್ಪಿಸಲು, ಮಾಧ್ಯಮದ ಕೊಡುಗೆಗಳನ್ನು ಸ್ಮರಿಸಲು ಮಾಧ್ಯಮ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಜನರಿಗೆ ತಿಳಿಸಲು ಹಾಗೂ ಪತ್ರಕರ್ತರ ಸುರಕ್ಷತೆಗಾಗಿ ಧ್ವನಿ ಎತ್ತಲು ಪ್ರತಿವರ್ಷ ಮೇ 03 ರಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಇತಿಹಾಸವೇನು?

1991 ರಲ್ಲಿ, ಆಫ್ರಿಕನ್ ಪತ್ರಕರ್ತರು ಮೊದಲ ಬಾರಿಗೆ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದರು. ಮೇ 3 ರಂದು, ಈ ಪತ್ರಕರ್ತರು ಪತ್ರಿಕಾ ಸ್ವಾತಂತ್ರ್ಯದ ತತ್ವಗಳ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದರು, ಇದನ್ನು ವಿಂಡ್‌ಹೋಕ್ ಘೋಷಣೆ ಎಂದೂ ಕರೆಯುತ್ತಾರೆ. ಬಳಿಕ ಪತ್ರಿಕಾ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಮತ್ತು ಕರ್ತವ್ಯದ ಸಂದರ್ಭದಲ್ಲಿ ಪ್ರಾಣವನ್ನು ಕಳೆದುಕೊಂಡ ಪತ್ರಕರ್ತರನ್ನು ಸ್ಮರಿಸುವ ಮತ್ತು ಗೌರವಿಸುವ ಉದ್ದೇಶದಿಂದ 1991 ರಲ್ಲಿ ಯುನೆಸ್ಕೋದ ಸಾಮಾನ್ಯ ಸಭೆಯ ಶಿಫಾರಸ್ಸಿನ ನಂತರ 1993 ರಲ್ಲಿ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸುವ ನಿರ್ಣಯವನ್ನು ಮಾಡಲಾಗಿತು. ನಂತರ 1994 ರಲ್ಲಿ ಮೊದಲ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಏಕೆ ಆಚರಿಸಲಾಗುತ್ತದೆ? 

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವು ಪತ್ರಿಕಾ ಸ್ವಾತಂತ್ರ್ಯ ಅಥವಾ ಮಾಧ್ಯಮ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಮತ್ತು ಗೌರವಿಸುವ ಬದ್ಧತೆಯನ್ನು ಒತ್ತಿಹೇಳುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಮತ್ತು ಪುನಃಸ್ಥಾಪಿಸುವಲ್ಲಿ ಮಾಧ್ಯಮ ವಹಿಸುವ ನಿರ್ಣಾಯಕ ಪಾತ್ರವನ್ನು ಇದು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: ಕಾರ್ಮಿಕರು ದೇಶದ ಪ್ರಗತಿ, ಏಳಿಗೆಯ ನಿಜವಾದ ಬೆನ್ನೆಲುಬು

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಮಹತ್ವವೇನು?

  • ಬೆದರಿಕೆಗಳು, ಹಿಂಸೆ ಮತ್ತು ಸೆನ್ಸಾರ್‌ಶಿಪ್ ಸೇರಿದಂತೆ ಪ್ರಪಂಚದಾದ್ಯಂತ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪತ್ರಿಕಾ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಅಂತರರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ್ಯ ದಿನದ ಮುಖ್ಯ ಉದ್ದೇಶವಾಗಿದೆ.
  • ಈ ದಿನವು ಪತ್ರಿಕಾ ಸ್ವಾತಂತ್ರ್ಯದ ಮಹತ್ವವನ್ನು ನಮಗೆ ನೆನಪಿಸುತ್ತದೆ ಮತ್ತು ಪತ್ರಕರ್ತರ ಸುರಕ್ಷತೆಗಾಗಿ ನಮ್ಮ ಧ್ವನಿಯನ್ನು ಎತ್ತಲು ನಮಗೆ ಸ್ಫೂರ್ತಿ ನೀಡುತ್ತದೆ.
  • ಈ ಸಂದರ್ಭದಲ್ಲಿ, ಪತ್ರಕರ್ತರು ಎದುರಿಸುತ್ತಿರುವ ಕಿರುಕುಳವನ್ನು ಎತ್ತಿ ತೋರಿಸಲು ಅವರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಲವು ಕಾಂಗ್ರೆಸ್ ನಾಯಕರು, ಅಭ್ಯರ್ಥಿಗಳನ್ನು ಬಿಜೆಪಿ ಸಂಪರ್ಕಿಸಿದೆ; ಅಸ್ಸಾಂನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ – Kannada News | Karnataka DCM DK Shivakumar claims BJP offered several Assam Congress candidates

ಗುವಾಹಟಿ, ಮೇ 2: ಅಸ್ಸಾಂ ವಿಧಾನಸಭಾ ಚುನಾವಣೆಯ (Assam Assembly Elections) ಕಾಂಗ್ರೆಸ್ ಪಕ್ಷದ ಹಿರಿಯ ವೀಕ್ಷಕರಾದ ಕರ್ನಾಟಕದ ಡಿಸಿಎಂ ಡಿ.ಕೆ ಶಿವಕುಮಾರ್, ಭೂಪೇಶ್ ಬಘೇಲ್ ಮತ್ತು ಜಿತೇಂದ್ರ ಸಿಂಗ್ ಇಂದು ಅಸ್ಸಾಂನಲ್ಲಿ ಮೈತ್ರಿಕೂಟದ ಪಾಲುದಾರರೊಂದಿಗೆ ಸಭೆ ನಡೆಸಿದರು. ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಅಸ್ಸಾಂನ ಇತರ 5 ಪಕ್ಷಗಳಾದ ರೈಜೋರ್ ದಳ, ಅಸ್ಸಾಂ ರಾಷ್ಟ್ರೀಯ ಪರಿಷತ್ (AJP), ಸಿಪಿಐಎಂ (CPIM), ಎಪಿಎಚ್​ಎಲ್​ಸಿ (APHLC) ಮತ್ತು ಸಿಪಿಐಎಂಎಲ್ (CPIML) ಜೊತೆ ಮೈತ್ರಿ ಮಾಡಿಕೊಂಡಿದೆ.

ಈ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ತಳ್ಳಿಹಾಕಿದರು. “ಅಸ್ಸಾಂನಲ್ಲಿ ನಮ್ಮ ತಂಡ ಬಲಿಷ್ಠವಾಗಿದೆ, ಒಗ್ಗಟ್ಟಾಗಿದೆ ಮತ್ತು ಆತ್ಮವಿಶ್ವಾಸದಿಂದ ಕೂಡಿದೆ. ನಾವು ಚುನಾವಣೆಯಲ್ಲಿ ಚೆನ್ನಾಗಿ ಹೋರಾಡಿದ್ದೇವೆ. ಮಾಧ್ಯಮಗಳು ಎಕ್ಸಿಟ್ ಪೋಲ್ ಬಗ್ಗೆ ಏನೇ ವರದಿ ಮಾಡಿದರೂ ವೈಯಕ್ತಿಕವಾಗಿ ನಾನು ಅದನ್ನು ನಂಬುವುದಿಲ್ಲ. ಅಸ್ಸಾಂನ ಮತದಾರರಲ್ಲಿ ದೊಡ್ಡ ಭಯವಿದೆ. ಬಿಜೆಪಿಯೊಂದಿಗೆ ಗುರುತಿಸಿಕೊಳ್ಳದವರಿಗೆ ಉಚಿತ ಕೊಡುಗೆಗಳನ್ನು ಸಹ ನೀಡಿಲ್ಲ. ಪರಿಸ್ಥಿತಿ ಹೀಗಿರುವಾಗ, ಯಾರು ಯಾರಿಗೆ ಮತ ಹಾಕಿದ್ದಾರೆಂದು ಹೇಳಲು ಯಾರು ಮುಂದೆ ಬರುತ್ತಾರೆ? ಈ ಮತದಾನೋತ್ತರ ಸಮೀಕ್ಷೆಗಳೆಲ್ಲ ಬರೀ ಸುಳ್ಳು” ಎಂದಿದ್ದಾರೆ.

ಇದನ್ನೂ ಓದಿ: ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯ

“ನಮ್ಮದೇ ಆದ ಆಂತರಿಕ ಸಮೀಕ್ಷೆಯಲ್ಲಿ ನಮಗೆ ವಿಶ್ವಾಸವಿದೆ. ಈ ಮಧ್ಯೆ ಬಿಜೆಪಿ ಕಡೆಯಿಂದಲೂ ನಾವು ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿದ್ದೇವೆ. ಶಾಸಕರು ಮತ್ತು ಸಚಿವರು ಸೇರಿದಂತೆ ಬಿಜೆಪಿ ಅಭ್ಯರ್ಥಿಗಳನ್ನು ನಾವು ಭೇಟಿ ಮಾಡಿದ್ದೇವೆ. ಅವರು ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ ಎಂಬ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಅವರಲ್ಲಿ ಕೆಲವರು ನಮ್ಮ ನಾಯಕರು, ಅಭ್ಯರ್ಥಿಗಳು ಮತ್ತು ಸಹಚರರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: 5 State Assembly Election Exit Poll Results 2026: ಅಸ್ಸಾಂ, ಬಂಗಾಳದಲ್ಲಿ ಬಿಜೆಪಿಗೆ ಭರ್ಜರಿ ಜಯ, ಕೇರಳ, ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವು; ಎಕ್ಸಿಟ್ ಪೋಲ್ ಸಮೀಕ್ಷೆ ಇಲ್ಲಿದೆ

ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ತಿಳಿಸಿವೆ. ಆಕ್ಸಿಸ್ ಮೈ ಇಂಡಿಯಾ 126 ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 88ರಿಂದ 100 ಸ್ಥಾನಗಳನ್ನು ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ 24ರಿಂದ 36 ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜಿಸಿದೆ. ಅಸ್ಸಾಂ ಚುನಾವಣೆಗೆ ಮತ ಎಣಿಕೆ ಮೇ 4ರಂದು ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:01 pm, Sat, 2 May 26

Source link

ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ: ಮತಗಳಿರುವ ಬಾಕ್ಸ್​ ಸೀಲ್ ಓಪನ್ ಆರೋಪಕ್ಕೆ ಸ್ಪಷ್ಟನೆ ನೀಡಿದ ರಾಜೇಗೌಡ – Kannada News | MLA TD Rajegowda Clarifies Allegations of Tampering in Sringeri Postal Ballot Recount

ಚಿಕ್ಕಮಗಳೂರು, ಮೇ 02: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಕಾಂಗ್ರೆಸ್​ ಶಾಸಕ ಟಿಡಿ ರಾಜೇಗೌಡ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆ ಇನ್ನು ಬಾಕಿ ಇದೆ. ಆದರೆ ಇಂದು ಬೆಳಿಗ್ಗೆ ಮತಗಳ ಮರು ಎಣಿಕೆ ವೇಳೆ ಮತಗಳಿರುವ ಬಾಕ್ಸ್​ ಸೀಲ್ ಓಪನ್ ಮಾಡಲಾಗಿತ್ತು. ಹೀಗಾಗಿ ಶಾಸಕ ಟಿಡಿ ರಾಜೇಗೌಡ ಟ್ಯಾಂಪರ್ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಾತನಾಡಿರುವ ಅವರು, ಬಿಜೆಪಿ ಅಭ್ಯರ್ಥಿ 40, 42 ಮತಗಳಿಂದ ಗೆಲುವು ನಮ್ಮದೆ ಎಂದು ಹೇಳಿದ್ದರು. ಹಾಗಾಗಿ ನನಗೆ ಅನುಮಾನ ಬಂದಿತ್ತು. ಸದ್ಯ ಚುನಾವಣಾ ಅಧಿಕಾರಿಗಳು ಈ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಎರಡೂ ಕಡೆಯಿಂದಲೂ ದೂರನ್ನು ನೀಡಲಾಗಿದೆ. ಯಾವುದೇ ಮತಪತ್ರ ಟ್ಯಾಂಪರ್ ಕಂಡುಬಂದರೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂಬ ಭರವಸೆ ಬಳಿಕ ಮತ ಎಣಿಕೆ ಮುಂದುವರೆಯಿತು ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

CSK vs MI IPL 2026 Live Score: ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್ ಆಯ್ಕೆ – Kannada News | Chennai Super Kings vs Mumbai Indians IPL 2026 Live Cricket Score CSK vs MI Match on 2nd May latest news in Kannada

ಐಪಿಎಲ್ 2026 ರ 19 ನೇ ಸೀಸನ್ ಮೇ 2 ರ ಶನಿವಾರದಂದು ಎರಡು ಯಶಸ್ವಿ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿದೆ. ಮೊದಲ ಮುಖಾಮುಖಿಯಲ್ಲಿ ಮುಂಬೈ ವಿರುದ್ಧ ಸಿಎಸ್​ಕೆ ಭರ್ಜರಿ ಜಯ ಸಾಧಿಸಿತ್ತು. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದರೆ, ರುತುರಾಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ.

Source link

Chanakya Niti: ಗಂಡನಾದವನು ತನ್ನ ಹೆಂಡತಿಯ ಬಳಿ ಆಡುವ ಈ ಮಾತುಗಳು ಸುಂದರ ಸಂಬಂಧವನ್ನೇ ಹಾಳು ಮಾಡುತ್ತದೆ – Kannada News | Chanakya Niti: Chanakya says a husband should not say these words to his wife

ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಮಾತಿನಂತೆ ಕೆಲವೊಂದು ಮಾತುಗಳಿಂದಲೇ ಸಂಬಂಧ ಹಾಳಾಗುತ್ತದೆ. ಹೌದು ಕೆಲವೊಂದು ಕಠೋರ ಮಾತುಗಳು ಸಂಬಂಧದ ಅಡಿಪಾಯವನ್ನೇ ಅಲುಗಾಡಿಸುತ್ತದೆ. ಅದರಲ್ಲೂ ಗಂಡನಾದವನು (Husband) ತನ್ನ ಹೆಂಡತಿಗೆ ಈ ಕೆಲವೊಂದು ಮಾತುಗಳನ್ನಾಡಿದರೆ ಸುಂದರ ದಾಂಪತ್ಯ ಜೀವನವೇ ಹಾಳಾಗಿ ಹೋಗುವ ಸಾಧ್ಯತೆ ಇರುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ದಾಂಪತ್ಯ ಜೀವನದಲ್ಲಿ ಸದಾ ಸಂತೋಷ ನೆಲೆಸಲು, ಗಂಡ ಹೆಂಡತಿ ನೆಮ್ಮದಿಯಿಂದ ಸಂಸಾರ ಸಾಗಿಸಲು ಗಂಡನಾದವನು ಹೆಂಡತಿಯ ಬಳಿ ಯಾವೆಲ್ಲ ಮಾತುಗಳನ್ನು ಆಡಬಾರದು, ಈ ಮಾತುಗಳ ಕಾರಣದಿಂದ ಸಂಸಾರದಲ್ಲಿ ಏನೆಲ್ಲಾ ತೊಂದರೆಗಳು ಉದ್ಭವಿಸುತ್ತದೆ ಎಂಬುದನ್ನು ನೋಡೋಣ ಬನ್ನಿ.

ಹೆಂಡತಿಯ ಬಳಿ ಎಂದಿಗೂ ಈ ಮಾತುಗಳನ್ನಾಡಬೇಡಿ:

ಸಾಮರ್ಥ್ಯ ಮತ್ತು ಸೌಂದರ್ಯವನ್ನು ಪ್ರಶ್ನಿಸುವುದು: ಆಚಾರ್ಯ ಚಾಣಕ್ಯರು ಹೇಳುವಂತೆವ್ಯಕ್ತಿಯ ಆತ್ಮವಿಶ್ವಾಸವೇ ಅವರ ದೊಡ್ಡ ಆಸ್ತಿ. ಗಂಡ ತನ್ನ ಹೆಂಡತಿಯ ನೋಟ, ಅಡುಗೆ ಶೈಲಿ ಅಥವಾ ಮಕ್ಕಳ ಪಾಲನೆಯನ್ನು ಪದೇ ಪದೇ ಟೀಕಿಸಿದರೆ, ಅದು ಅವಳ ಸ್ವಾಭಿಮಾನಕ್ಕೆ ತೀವ್ರ ಹಾನಿ ಮಾಡುತ್ತದೆ. ನಿರಂತರ ಟೀಕೆಗಳು ಹೆಂಡತಿಯ ಮನಸ್ಸನ್ನು ಘಾಸಿ ಮಾಡುತ್ತದೆ ಮತ್ತು  ಮನೆಯಲ್ಲಿ  ತಾನು ಹೊರಗಿನವಳಂತೆ ಭಾವಿಸುವಂತೆ ಮಾಡುತ್ತದೆ, ಇದು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಬಹುದು. ಆದ್ದರಿಂದ ಹೆಂಡತಿಯ ಸಾಮರ್ಥ್ಯ ಮತ್ತು ಸೌಂದರ್ಯದ ಬಗ್ಗೆ ಋಣಾತ್ಮಕ ಮಾತುಗಳನ್ನಾಡಬೇಡಿ.

ಇತರ ಮಹಿಳೆಯರೊಂದಿಗೆ ಹೆಂಡತಿಯನ್ನು ಹೋಲಿಸಿ ಮಾತನಾಡುವುದು: ಯಾವುದೇ ಕಾರಣಕ್ಕೂ ಹೆಂಡತಿಯನ್ನು ಬೇರೊಬ್ಬ ಮಹಿಳೆಯೊಂದಿಗೆ ಹೋಲಿಸಿ ಮಾತನಾಡಬೇಡಿ. ಅದು ಸ್ನೇಹಿತರಾಗಿರಲಿ, ಸಂಬಂಧಿಕರಾಗಿರಲಿ ಅಥವಾ ಸೆಲೆಬ್ರಿಟಿಯಾಗಿರಲಿ, ನಿಮ್ಮ ಹೆಂಡತಿಯನ್ನು ಬೇರೆಯವರೊಂದಿಗೆ ಎಂದಿಗೂ ಹೋಲಿಸಬೇಡಿ. ಪ್ರತಿಯೊಬ್ಬ ವ್ಯಕ್ತಿಗೂ ಅವರದೇ ಆದ ವಿಶಿಷ್ಟ ಗುಣಗಳಿರುತ್ತದೆ. ಹಾಗಾಗಿ ಹೋಲಿಕೆ ಮಾಡುವುದರಿಂದ  ನಿಮ್ಮ ಹೆಂಡತಿಯಲ್ಲಿ ಅಭದ್ರತೆಯ ಭಾವನೆಯನ್ನು ಮೂಡಿಸುತ್ತದೆ ಮತ್ತು ಅಸಮಾಧಾನವನ್ನು ಉಂಟುಮಾಡುತ್ತವೆ, ಇದು ನಿಧಾನವಾಗಿ ಆಕೆಗೆ ನಿಮ್ಮ ಮೇಲಿರುವ ಪ್ರೀತಿಯನ್ನು ನಾಶಪಡಿಸುತ್ತದೆ ಎಂದು ಹೇಳಿದ್ದಾರೆ ಚಾಣಕ್ಯ.

ನಿಂದನೀಯ ಪದಗಳ ಬಳಕೆ: ನಿಂದನೀಯ ಪದ ಬಳಕೆ, ನಿನ್ನ ಕೈಯಿಂದ ಯಾವ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಿಲ್ಲ ಅಂತೆಲ್ಲಾ ಭಾವನಾತ್ಮಕ ಹಿಂಸೆ ನೀಡಿದರೆ ಸಂಬಂಧ ಹಳಸಿ ಹೋಗುತ್ತದೆ. ಮನೆಯ ಶಾಂತಿ ನೆಮ್ಮದಿಯೂ ಹಾಳಾಗುತ್ತದೆ. ಆದ್ದರಿಂದ ಗಂಡನಾದವನು ಯಾವುದೇ ಕಾರಣಕ್ಕೂ ಹೆಂಡತಿಗೆ ನಿಂದನೀಯ ಪದಗಳಿಂದ ಮಾತನಾಡಬಾರದು.

ಇದನ್ನೂ ಓದಿ: ಪದೇ ಪದೇ ಹಣವನ್ನು ಸಾಲ ಪಡೆಯುವುದರಿಂದ ಏನಾಗುತ್ತದೆ ಗೊತ್ತಾ?

ಅಭಿಪ್ರಾಯಗಳು ಮತ್ತು ತೀರ್ಪುಗಳನ್ನು ನಿರ್ಲಕ್ಷಿಸುವುದು: ದಾಂಪತ್ಯ ಜೀವನದಲ್ಲಿ ಗಂಡ ಹೆಂಡತಿ ಇಬ್ಬರೂ ಸಮಾನರೇ. ಹೀಗಿರುವಾಗ ಗಂಡನು ಹೆಂಡತಿಯ ಆಲೋಚನೆಗಳು, ಭಾವನೆಗಳು ಅಥವಾ ನಿರ್ಧಾರಗಳನ್ನು ನಿರಂತರವಾಗಿ ನಿರ್ಲಕ್ಷಿಸಿದರೆ, ಸಂಬಂಧವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಹಾಗಾಗಿ ಗಂಡನಾದವನು ಹೆಂಡತಿಯ ನಿರ್ಧಾರ, ಮಾತುಗಳಿಗೆ ಗೌರವ ನೀಡಬೇಕು.

ವಿಷಾದ ವ್ಯಕ್ತಪಡಿಸುವುದು: ಕೋಪದಲ್ಲಿ ನಿನ್ನನ್ನು ಯಾಕಾದ್ರೂ ಮಾದುವೆಯಾದ್ನೋ, ಮನೆ ಬಿಟ್ಟು ಹೋಗು ಇಂತಹ ಅಪಾಯಕಾರಿ ಮಾತುಗಳನ್ನಾಡುವುದರಿಂದ ಖಂಡಿತವಾಗಿಯೂ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಹಾಗಾಗಿ ಎಷ್ಟೇ ಕೋಪಗೊಂಡರೂ ಸರಿ ಗಂಡ ತನ್ನ ಹೆಂಡತಿಯ ಮುಂದೆ ಇಂತಹ ಕಠೋರ ಮಾತುಗಳನ್ನಾಡಬಾರದು. ಚಾಣಕ್ಯರ ಪ್ರಕಾರ, ತಾಳ್ಮೆ, ಪ್ರೀತಿ ವಿಶ್ವಾಸ, ನಂಬಿಕೆ, ಹಿತವಾದ ಮಾತು, ಮಾತಿನ ಮೇಲಿನ ಹಿಡಿತ ಇವೆಲ್ಲವೂ ಗಂಡ ಹೆಂಡತಿಯ ಸಂಬಂಧವನ್ನು ಬಲಪಡಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಗ್ರ ಟಿ. ನಾಸೀರ್ ಬಿಡುಗಡೆಗೆ ಸ್ಕೆಚ್: ತಪ್ಪೊಪ್ಪಿಕೊಂಡ ಆರೋಪಿ ಚೋಟಾ ಉಸ್ಮಾನ್​ಗೆ 7 ವರ್ಷ ಜೈಲು ಶಿಕ್ಷೆ – Kannada News | Bengaluru Terror Conspiracy: NIA Court Sentences Chota Usman to 7 Years Jail for Plotting Release of LeT Terrorist T Nasir

ಬೆಂಗಳೂರು, ಮೇ 2: ಬೆಂಗಳೂರು ಸರಣಿ ಸ್ಫೋಟದ ಮಾಸ್ಟರ್ ಮೈಂಡ್, ಎಲ್ಇಟಿ ಉಗ್ರ ಟಿ. ನಾಸೀರ್‌ನನ್ನು ಕಾನೂನುಬಾಹಿರವಾಗಿ ಜೈಲಿನಿಂದ ಬಿಡಿಸಿಕೊಳ್ಳಲು ಸಂಚು ರೂಪಿಸಿದ್ದ ಪ್ರಕರಣದ ಒಂಬತ್ತನೇ ಆರೋಪಿ (A9) ವಿಕ್ರಮ್ ಕುಮಾರ್ ಅಲಿಯಾಸ್ ಚೋಟಾ ಉಸ್ಮಾನ್‌ಗೆ (Chota Usman) ಎನ್ಐಎ (NIA) ವಿಶೇಷ ನ್ಯಾಯಾಲಯವು 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಆರೋಪಿಯು ನ್ಯಾಯಾಲಯದ ಮುಂದೆ ತಪ್ಪು ಒಪ್ಪಿಕೊಂಡಿದ್ದ.

ಇಸ್ಲಾಂಗೆ ಮತಾಂತರಗೊಂಡು ಚೋಟಾ ಉಸ್ಮಾನ್ ಆಗಿದ್ದ ವಿಕ್ರಮ್ ಕುಮಾರ್

ನೂರ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿಕ್ರಮ್ ಕುಮಾರ್, ಅಲ್ಲಿ ಬೆಂಗಳೂರು ಸರಣಿ ಸ್ಫೋಟದ ಆರೋಪಿ ಟಿ. ನಾಸೀರ್ ಸಂಪರ್ಕಕ್ಕೆ ಬಂದಿದ್ದ. ನಾಸೀರ್ ಪ್ರಭಾವಕ್ಕೊಳಗಾಗಿದ್ದ ವಿಕ್ರಮ್, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಚೋಟಾ ಉಸ್ಮಾನ್ ಎಂದು ಬದಲಾಯಿಸಿಕೊಂಡಿದ್ದ. ಜೈಲಿನಿಂದ ಬಿಡುಗಡೆಯಾದ ನಂತರವೂ ನಾಸೀರ್ ಹಾಗೂ ಇತರ ಉಗ್ರಗಾಮಿ ಸಂಘಟನೆಗಳ ಸದಸ್ಯರೊಂದಿಗೆ ಸತತ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

ಸಂಚು ರೂಪಿಸಿದ್ದು ಹೇಗೆ?

ಬೆಂಗಳೂರು ಸರಣಿ ಸ್ಫೋಟದ ಆರೋಪಿ ಟಿ. ನಾಸೀರ್ ಹಾಗೂ ಇತರ ಉಗ್ರರನ್ನು ಜೈಲಿನಿಂದ ಬಿಡಿಸಿಕೊಳ್ಳಲು ಆರೋಪಿಗಳು ಸಿನಿಮೀಯ ಮಾದರಿಯ ಸ್ಕೆಚ್ ಹಾಕಿದ್ದರು. ನೂರ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಎ9 ಆರೋಪಿ ವಿಕ್ರಮ್ ಕುಮಾರ್ (ಚೋಟಾ ಉಸ್ಮಾನ್), ಅಲ್ಲಿ ಟಿ. ನಾಸೀರ್ ಸಂಪರ್ಕಕ್ಕೆ ಬಂದು ಆತನಿಂದ ತೀವ್ರವಾಗಿ ಪ್ರಭಾವಿತನಾಗಿದ್ದ. ನಾಸೀರ್ ಸೂಚನೆಯಂತೆ ಜೈಲಿನಿಂದ ಹೊರಬಂದ ವಿಕ್ರಮ್, ಇತರ ಆರೋಪಿಗಳಾದ ಜುನೈದ್ ಅಹ್ಮದ್ ಮತ್ತು ಸಲ್ಮಾನ್ ಖಾನ್ ಜೊತೆ ಸೇರಿ ಸ್ಫೋಟಕಗಳನ್ನು ಸಂಗ್ರಹಿಸಲು ಶುರುಮಾಡಿದ್ದ.

ಇದನ್ನೂ ಓದಿ: ಉಗ್ರ ನಾಸೀರ್ ಜೈಲಿನಿಂದ ತಪ್ಪಿಸಿಕೊಳ್ಳಲು ನಡೆದಿತ್ತು ಸಿನಿಮೀಯ ರೀತಿ ಸಂಚು! ಎನ್​ಐಎ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲು

ಉಗ್ರರನ್ನು ನ್ಯಾಯಾಲಯದ ವಿಚಾರಣೆಗೆ ಅಥವಾ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿ, ಗ್ರೆನೇಡ್ ಎಸೆದು ಪೊಲೀಸರನ್ನು ಹತ್ಯೆ ಮಾಡಿ ನಾಸೀರ್‌ನನ್ನು ಅಪಹರಿಸುವುದು ಇವರ ಮುಖ್ಯ ಉದ್ದೇಶವಾಗಿತ್ತು. ಇದಕ್ಕಾಗಿ ಹರಿಯಾಣದ ಅಂಬಾಲಾದಿಂದ ಗ್ರೆನೇಡ್‌ಗಳನ್ನು ತರಿಸಿಕೊಳ್ಳಲಾಗಿತ್ತು. ಕೇವಲ ಗ್ರೆನೇಡ್ ಅಷ್ಟೇ ಅಲ್ಲದೆ, ದಾಳಿಗೆ ಅಗತ್ಯವಾದ ಮಾರಕಾಸ್ತ್ರಗಳು ಮತ್ತು ವಾಹನಗಳ ವ್ಯವಸ್ಥೆಯನ್ನೂ ಈ ಗ್ಯಾಂಗ್ ಮಾಡಿಕೊಂಡಿತ್ತು ಎಂಬ ಆಘಾತಕಾರಿ ವಿಷಯ ಎನ್​ಐಎ ತನಿಖೆಯಲ್ಲಿ ಬಯಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಂಚ ರಾಜ್ಯ ಫಲಿತಾಂಶಕ್ಕೆ ಮುಂಚೆ ಅಮಿತ್ ಶಾರ ಭೇಟಿಯಾದ ರಿಷಬ್ ಶೆಟ್ಟಿ – Kannada News | Rishab Shetty met Amit Shah shared photos on Social Media

ಸಿನಿಮಾ (Cinema) ಮತ್ತು ರಾಜಕೀಯ ಭಾರತದಲ್ಲಿ ಜೊತೆ-ಜೊತೆಯಾಗಿಯೇ ಸಾಗುತ್ತದೆ. ಸಿನಿಮಾ ತಾರೆಯರು ರಾಜಕಾರಣಕ್ಕೆ ಬರುವುದು ಭಾರತದಲ್ಲಿ ಬಹಳ ಸಾಮಾನ್ಯ. ಈಗಲೂ ಸಹ ಹಲವಾರು ಮಂದಿ ಸಿನಿಮಾ ತಾರೆಯರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ರಾಜಕಾರಣಿಗಳು ಸಹ ತಮ್ಮ ಪಕ್ಷದ ಪ್ರಚಾರಕ್ಕೆ, ಪಕ್ಷದ ನೀತಿಗಳ ಪ್ರಚಾರಕ್ಕೆ ದಶಕಗಳಿಂದಲೂ ಸಿನಿಮಾಗಳನ್ನು ಬಳಸಿಕೊಂಡೇ ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ, ಜನಪ್ರಿಯ ನಟ-ನಟಿಯರು ರಾಜಕಾರಣಿಗಳ ಭೇಟಿ ಆಗುವುದು ಸಾಮಾನ್ಯ ಮತ್ತು ಕುತೂಹಲಕಾರಿಯೂ ಹೌದು. ಇದೀಗ ಕನ್ನಡ ಚಿತ್ರರಂಗದ ಜನಪ್ರಿಯ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಕೇಂದ್ರ ಗೃಹ ಮಂತ್ರಿ, ರಾಷ್ಟ್ರೀಯ ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಭೇಟಿ ಆಗಿದ್ದಾರೆ.

ರಿಷಬ್ ಶೆಟ್ಟಿ ಅವರು, ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಮಿತ್ ಶಾ ಜೊತೆಗಿನ ಭೇಟಿಯ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಅಮಿತ್ ಶಾ ಮತ್ತು ರಿಷಬ್ ಶೆಟ್ಟಿ ಅವರು ನಗುತ್ತಾ ಚರ್ಚಿಸುತ್ತಿರುವುದು ಕಾಣುತ್ತಿದೆ. ಚಿತ್ರ ಹಂಚಿಕೊಂಡಿರುವ ರಿಷಬ್ ಶೆಟ್ಟಿ, ‘ಗೌರವಾನ್ವಿತ ಗೃಹ ಸಚಿವ ಶ್ರೀ ಅಮಿತ್ ಶಾ ಅವರನ್ನು ಭೇಟಿಯಾಗುವ ಸೌಭಾಗ್ಯ ಸಿಕ್ಕಿತು. ಅವರು ಕಾಂತಾರ ಮತ್ತು ಕಾಂತಾರ ಅಧ್ಯಾಯ 1 ಸಿನಿಮಾಗಳ ಬಗ್ಗೆ ತಮ್ಮ ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡರು. ಅದು ನನ್ನ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಯಿತು. ನನ್ನ ಮುಂಬರುವ ಸಿನಿಮಾಗಳ ಬಗ್ಗೆ ಕೇಳಿ ಮಾಹಿತಿ ಪಡೆದರು. ಅವರು ನಮ್ಮ ಇತಿಹಾಸ, ಸಂಸ್ಕೃತಿ, ಕಲೆ ಮತ್ತು ಚಲನಚಿತ್ರ ನಿರ್ಮಾಣದ ಬಗ್ಗೆ ತಮ್ಮ ಆಳವಾದ ಜ್ಞಾನ ಮತ್ತು ತಿಳುವಳಿಕೆಯನ್ನು ಹೊಂದಿದ್ದಾರೆ. ಇಬ್ಬರೂ ಸಹ ಈ ಬಗ್ಗೆ ಚರ್ಚಿಸಿದ್ದು ಬಹಳ ಸಂತೋಷ ಎನಿಸಿತು’ ಎಂದಿದ್ದಾರೆ.

ಇದನ್ನೂ ಓದಿ:ಸದ್ದಿಲ್ಲದೆ ತೆಲುಗಿನಲ್ಲಿ ರಿಲೀಸ್ ಆಗೋಕೆ ರೆಡಿ ಆಯ್ತು ರಿಷಬ್ ಶೆಟ್ಟಿ ಸಿನಿಮಾ

ರಿಷಬ್ ಶೆಟ್ಟಿ ಅವರು 2023 ರಲ್ಲಿ ಪ್ರಧಾನಿ ಮೋದಿ ಅವರನ್ನು ಸಹ ಭೇಟಿ ಆಗಿದ್ದರು. ಮೋದಿ ಅವರು ಕರ್ನಾಟಕಕ್ಕೆ ಬಂದಾಗ ಯಶ್, ರಿಷಬ್ ಶೆಟ್ಟಿ ಅವರುಗಳನ್ನು ಭೇಟಿ ಆಗಿದ್ದರು. ಆ ವೇಳೆ ಮೋದಿ ಅವರ ಭೇಟಿ ಬಗ್ಗೆ ಮಾತನಾಡಿದ್ದ ನಟ ರಿಷಬ್ ಶೆಟ್ಟಿ, ‘ಪ್ರಧಾನಿ ಮೋದಿ ಅವರನ್ನು ನಾನು ಒಬ್ಬ ಮಹಾನ್ ನಾಯಕ ಎಂದು ಪರಿಗಣಿಸುತ್ತೇನೆ ಮತ್ತು ಅವರನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷವಾಗಿದೆ. ಅವರು ಕನ್ನಡ ಚಲನಚಿತ್ರೋದ್ಯಮದ ಬಗ್ಗೆ, ಚಿತ್ರರಂಗದಲ್ಲಿ ಏನು ನಡೆಯುತ್ತಿದೆ ಮತ್ತು ನಮಗೆ ಯಾವ ವಿಷಯಗಳ ಅಗತ್ಯ ಇದೆ. ಇತ್ಯಾದಿಗಳ ಬಗ್ಗೆ ಕೇಳಿದರು ಮತ್ತು ಅವರು ಏನು ಮಾಡಬಹುದು ಎಂಬುದನ್ನು ಸಹ ಹೇಳಿದರು. ಅವರು ಕಾಂತಾರ ಚಿತ್ರವನ್ನು ಶ್ಲಾಘಿಸಿದರು’ ಎಂದಿದ್ದರು.

ರಿಷಬ್ ಶೆಟ್ಟಿ ಅವರು ಸಿನಿಮಾ ಮಂದಿಯ ಜೊತೆಗೆ ಮಾತ್ರವೇ ಅಲ್ಲದೆ ಹಲವಾರು ರಾಜಕಾರಣಿಗಳ ಜೊತೆಗೂ ಆಪ್ತ ನಂಟು ಹೊಂದಿದ್ದಾರೆ. ವಿಶೇಷವಾಗಿ ಬಿಜೆಪಿ ಮುಖಂಡರುಗಳ ಜೊತೆಗೆ ರಿಷಬ್ ಶೆಟ್ಟಿ ಅವರಿಗೆ ಆಪ್ತ ನಂಟು ಇದೆ. ಕೆಲ ವರ್ಷಗಳ ಬಳಿಕ ರಿಷಬ್ ಶೆಟ್ಟಿ ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡಿದರೂ ಆಶ್ಚರ್ಯವಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link