All posts by nagaraj11081993

ಪುಟಾಣಿ ಮಕ್ಕಳಲ್ಲೂ ಹೆಚ್ಚುತ್ತಿದೆ ಕ್ಯಾನ್ಸರ್: ಆಘಾತಕಾರಿ ಅಂಕಿಅಂಶ ಬಯಲು – Kannada News | Childhood Cancer Cases Rising in Karnataka: Data Reveals 1889 Children Affected, Experts Call for More Cancer Hospitals

ಬೆಂಗಳೂರು, ಫೆಬ್ರವರಿ 13: ಕರ್ನಾಟಕದಲ್ಲಿ (Karnataka) ಪುಟಾಣಿ ಮಕ್ಕಳನ್ನೂ ಸಹ ಮಾರಕ ಕ್ಯಾನ್ಸರ್‌ ಬೆಂಬಿಡದೆ ಕಾಡುತ್ತಿರುವ ಆಘಾತಕಾರಿ ವಿಚಾರ ಬಯಲಾಗಿದೆ. ಮಕ್ಕಳಲ್ಲಿ ಕ್ಯಾನ್ಸರ್ (Cancer) ಭೀತಿ ದಿನೇ ದಿನೇ ಹೆಚ್ಚುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳಲ್ಲಿ ಪ್ರಕರಣಗಳು ದುಪ್ಪಟ್ಟಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದು ವರ್ಷದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 1,889 ಮಕ್ಕಳಲ್ಲಿ ಕ್ಯಾನ್ಸರ್ ಪತ್ತೆಯಾಗಿದ್ದು, ಇವರಲ್ಲಿ 312 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.

ರಾಜಧಾನಿ ಬೆಂಗಳೂರು ಒಂದರಲ್ಲೇ 349 ಮಕ್ಕಳಲ್ಲಿ ಕ್ಯಾನ್ಸರ್ ದೃಢಪಟ್ಟಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಈ ರೋಗದ ಪ್ರಮಾಣ ವೈದ್ಯರು ಹಾಗೂ ಪೋಷಕರಲ್ಲಿ ಚಿಂತೆ ಮೂಡಿಸಿದೆ.

ಮಕ್ಕಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್​ಗೆ ಕಾರಣ ಏನು?

ತಜ್ಞರ ಪ್ರಕಾರ ಫಾಸ್ಟ್ ಫುಡ್, ಜಂಕ್ ಆಹಾರ, ನಾನ್ ವೆಜ್, ಐಸ್ ಕ್ರೀಮ್, ಚಾಕೊಲೇಟ್‌ಗಳಿಗೆ ಮಕ್ಕಳು ಹೆಚ್ಚು ಒಲವು ತೋರಿಸುತ್ತಿರುವುದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದಾಗಿ ಕ್ಯಾನ್ಸರ್ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ ಎನ್ನಲಾಗಿದೆ.

ಪ್ರತಿ ದಿನ ಕ್ಯಾನ್ಸರ್​ನೊಂದಿಗೆ ಬರುತ್ತಿದ್ದಾರೆ 120ಕ್ಕೂ ಹೆಚ್ಚು ಮಕ್ಕಳು

ರಾಜ್ಯದ ಪ್ರಮುಖ ಕ್ಯಾನ್ಸರ್ ಚಿಕಿತ್ಸೆ ಆಸ್ಪತ್ರೆಯಾದ ಕಿದ್ವಾಯಿ ಮೆಮೊರಿಯಲ್ ಇನ್​ಸ್ಟಿಟ್ಯೂಟ್ ಆಫ್ ಆನ್ಕಾಲಜಿ ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಲ್ಲಿ 12,612 ಮಕ್ಕಳು ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇಲ್ಲಿ ಪ್ರತಿದಿನ 120 ಕ್ಕೂ ಹೆಚ್ಚು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ನಿತ್ಯ 5 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಜೊತೆಗೆ ಪ್ರತಿದಿನ ಸುಮಾರು 60 ಫಾಲೋಅಪ್ ಪ್ರಕರಣಗಳನ್ನು ವೈದ್ಯರು ಪರಿಶೀಲಿಸುತ್ತಿದ್ದಾರೆ.

ಭಾರತದಲ್ಲಿ ಪ್ರತಿ ವರ್ಷ 35 ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ ಕ್ಯಾನ್ಸರ್​

ಭಾರತದಲ್ಲಿ ಪ್ರತಿ ವರ್ಷ ಸುಮಾರು 35,240 ಮಕ್ಕಳಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ ಎಂಬ ಅಂದಾಜು ವ್ಯಕ್ತವಾಗಿದೆ. ಈ ಹಿನ್ನೆಲೆ, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ರೆಡಿಮೇಡ್ ಹಾಗೂ ಜಂಕ್ ಫುಡ್​ಗಗಳಿಂದ ದೂರವಿರಲು ತಜ್ಞರು ಪೋಷಕರಿಗೆ ಸಲಹೆ ನೀಡಿದ್ದಾರೆ. ಮಕ್ಕಳ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಕಿದ್ವಾಯಿ ವೈದ್ಯರು ಪೋಷಕರೊಂದಿಗೆ ನಿರಂತರವಾಗಿ ಸಂವಾದ ನಡೆಸುತ್ತಿದ್ದಾರೆ.

ಇನ್ನೊಂದೆಡೆ, ಕಿದ್ವಾಯಿ ಆಸ್ಪತ್ರೆಯ ಮೇಲಿನ ಒತ್ತಡವೂ ಹೆಚ್ಚಾಗಿದೆ. ಪ್ರತಿದಿನ ಒಪಿಡಿ ವಿಭಾಗಕ್ಕೆ 1,800 ರಿಂದ 2,000ಕ್ಕೂ ಹೆಚ್ಚು ರೋಗಿಗಳು ಭೇಟಿ ನೀಡುತ್ತಿದ್ದಾರೆ. ಹೊರರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಿರುವುದರಿಂದ ಆಸ್ಪತ್ರೆಯ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಮಹಿಳೆಯರಲ್ಲಿ ಕ್ಯಾನ್ಸರ್​​ ಹೆಚ್ಚಳ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಆಂಕಾಲಜಿಸ್ಟ್‌ಗಳು

ರಾಜ್ಯದಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆ ಒಂದೇ ಇರುವ ಹಿನ್ನೆಲೆ, ಮತ್ತೊಂದು ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿರುವುದರಿಂದ, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸರ್ಕಾರಿ ಮಟ್ಟದಲ್ಲಿ ಇನ್ನಷ್ಟು ಸೌಲಭ್ಯ ಒದಗಿಸುವ ಅಗತ್ಯತೆ ಎದುರಾಗಿದೆ.

ಈ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಮತ್ತೊಂದು ವಿಶೇಷ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಮಾಡುವಂತೆ ಜನರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Nandi Hills: ವ್ಯಾಲೆಂಟೈನ್ಸ್ ಡೇಗೆ ಲವರ್ಸ್‌ಗೆ ಶಾಕ್; ನಾಳೆ ನಂದಿ ಬೆಟ್ಟಕ್ಕೆ ಹೋಗೂ ಪ್ಲಾನ್ ಇದ್ದರೆ ಈ ವಿಚಾರ ಗಮನಿಸಿ

ಚಿಕ್ಕಬಳ್ಳಾಪುರ, ಫೆಬ್ರವರಿ 13: ಕರ್ನಾಟಕದಲ್ಲಿ ಪ್ರೇಮಿಗಳಿಗೆ ಫೇವರೆಟ್ ಸ್ಫಾಟ್ ಎಂದರೆ ಅದು ನಂದಿ ಬೆಟ್ಟ. ಈ ಬಾರಿಯ ಪ್ರೇಮಿಗಳ ದಿನಾಚರಣೆಯಂದು (Valentine’s Day) ನಂದಿ ಬೆಟ್ಟಕ್ಕೆ ಹೋಗೋಣ ಎಂದು ನೀವು ಯೋಚಿಸಿದ್ದರೆ, ನಿಮಗೆ ದೊಡ್ಡ ನಿರಾಶೆ ಕಾದಿದೆ. ಏಕೆಂದರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ನಾಳೆ (ಫೆಬ್ರವರಿ 14) ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿ ಆದೇಶ ಜಾರಿಗೊಳಿಸಿದೆ.

ಆತ್ಮಹತ್ಯೆಯಂತಹ ಅವಘಡ ತಪ್ಪಿಸಲು ಈ ನಿರ್ಧಾರ

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಜಿ. ಪ್ರಭು, ನಂದಿ ಹಿಲ್ಸ್​ನಲ್ಲಿ ಜನಸಂದಣಿ ನಿಯಂತ್ರಿಸಲು ಮತ್ತು ಶಾಂತಿ ಕಾಪಾಡುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದಿನ ವರ್ಷಗಳಲ್ಲಿ ಪ್ರೇಮಿಗಳ ದಿನದಂದು ಆತ್ಮಹತ್ಯೆ ಪ್ರಕರಣ ವರದಿಯಾಗಿದ್ದ ಹಿನ್ನೆಲೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೇ ಅವರ ವರದಿ ಆಧಾರವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​’ಗೆ ಹೇಳಿದ್ದಾರೆ.

ಹೊಸ ವರ್ಷದ ದಿನವನ್ನು ಹೊರತುಪಡಿಸಿ ವರ್ಷಪೂರ್ತಿ ನಂದಿ ಬೆಟ್ಟ ಪ್ರವಾಸಿಗರಿಗೆ ಮುಕ್ತವಾಗಿರುತ್ತಿತ್ತು. ಆದರೆ ಪ್ರೇಮಿಗಳ ದಿನದಂದು ಹೆಚ್ಚುವರಿ ಜನಸಂದಣಿ ಹಾಗೂ ಯಾವುದೇ ಅವಘಡವನ್ನು ತಪ್ಪಿಸಲು ಈ ನಿಷೇಧ ಜಾರಿಗೊಳಿಸಲಾಗಿದ್ದು, ಪ್ರೇಮಿಗಳಲ್ಲಿ ನಿರಾಶೆ ಮೂಡಿಸಿದೆ.

ಇದನ್ನೂ ಓದಿ Valentine Day 2026: ಪ್ರೇಮಿಗಳ ದಿನದಂದು ಯಾವ ಬಣ್ಣದ ಬಟ್ಟೆಯನ್ನು ಧರಿಸಿದರೆ ಸೂಕ್ತ?

ವರ್ಷವಿಡೀ ನಂದಿ ಹಿಲ್ಸ್​ಗೆ ಬರುವವರ ಸಂಖ್ಯೆ ಎಷ್ಟು ಗೊತ್ತಾ?

ಸಾಮಾನ್ಯ ವಾರಾಂತ್ಯಗಳಲ್ಲಿ ಸುಮಾರು 16 ಸಾವಿರದಿಂದ 18 ಸಾವಿರ ಪ್ರವಾಸಿಗರು ನಂದಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. 3,000ರಿಂದ 3,500 ಎರಡು ಚಕ್ರ ವಾಹನಗಳು ಮತ್ತು 1,500ರಿಂದ 1,700 ನಾಲ್ಕು ಚಕ್ರ ವಾಹನಗಳು ಆಗಮಿಸುತ್ತವೆ. ನಂದಿ ಬೆಟ್ಟಕ್ಕೆ ಒಂದೇ ಪ್ರವೇಶ ಮಾರ್ಗ ಇರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಸಾಮಾನ್ಯ ದಿನಗಳಲ್ಲಿಯೂ 5,000ರಿಂದ 6,000 ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, 500ರಿಂದ 700 ನಾಲ್ಕು ಚಕ್ರ ವಾಹನಗಳು ಹಾಗೂ 1,000ರಿಂದ 1,500 ಎರಡು ಚಕ್ರ ವಾಹನಗಳು ಸಂಚರಿಸುತ್ತವೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ. ಹೀಗಾಗಿ ಸಾರ್ವಜನಿಕರು ನಿರ್ಬಂಧವನ್ನು ಪಾಲಿಸಿ ಆಡಳಿತಕ್ಕೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

 

Source link

ಆ ಬದಲಾವಣೆ ಮಾಡಿದ್ದರೆ ಮಹೇಶ್ ಬಾಬು ನಟನೆಯ ಸಿನಿಮಾ ಹಿಟ್ ಆಗುತ್ತಿತ್ತು – Kannada News | Sukumar Reveals ‘One Nenokkadine’ Alternate Ending: How Mahesh Babu’s Film Could Have Succeeded

ಸುಕುಮಾರ್ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರು. ಸುಕುಮಾರ್ (Sukumar) ತಮ್ಮ ಟ್ಯಾಲೆಂಟ್​ ಮೂಲಕ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ಸನ್ನು ಗಳಿಸಿದ್ದಾರೆ. ಅವರು ‘ಜಗದಂ’ ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ‘ಆರ್ಯ’ ಸಿನಿಮಾದೊಂದಿಗೆ ಅವರು ಬ್ಲಾಕ್ಬಸ್ಟರ್ ಎನಿಸಿಕೊಂಡರು. ಅದಾದ ಬಳಿಕ, ಅವರು ಸತತವಾಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸತತವಾಗಿ ಸಿನಿಮಾಗಳನ್ನು ಮಾಡುವ ಮೂಲಕ ಯಶಸ್ಸನ್ನು ಪಡೆಯುತ್ತಿದ್ದಾರೆ. ಈಗ ಅವರು ಒಂದು ಹಳೆಯ ಸೋತ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

‘ಪುಷ್ಪ’ ಮತ್ತು ‘ಪುಷ್ಪ 2’ ಚಿತ್ರಗಳೊಂದಿಗೆ ಸುಕುಮಾರ್ ಯಶಸ್ಸನ್ನು ಸಾಧಿಸಿದ್ದಾರೆ. ಈಗ ಸುಕುಮಾರ್ ಯಾರೊಂದಿಗೆ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಈ ಮಧ್ಯೆ, ಒಂದು ಚಿತ್ರದ ಬಗ್ಗೆ ಸುಕುಮಾರ್ ಅವರ ಕಾಮೆಂಟ್‌ಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಸುಕುಮಾರ್ ನಿರ್ದೇಶನದ ಚಿತ್ರಗಳಲ್ಲಿ ಹಲವು ಉತ್ತಮ ಚಿತ್ರಗಳಿವೆ. ಅವುಗಳಲ್ಲಿ ಒಂದು ಮಹೇಶ್ ಬಾಬು ಅವರ ‘ಒನ್ ನೆನೊಕ್ಕಡಿನೆ’ ಚಿತ್ರ ಕೂಡ ಒಂದು. ಈ ಚಿತ್ರ ಬಿಸ್ನೆಸ್ ದೃಷ್ಟಿಯಿಂದ ಯಶಸ್ವಿಯಾಗದಿದ್ದರೂ, ಇದು ಅನೇಕ ಜನರಿಗೆ ನೆಚ್ಚಿನ ಚಿತ್ರವಾಗಿದೆ. ಪ್ರೇಕ್ಷಕರು ಇನ್ನೂ OTT ಮತ್ತು ಟಿವಿಯಲ್ಲಿ ಈ ಚಿತ್ರವನ್ನು ವೀಕ್ಷಿಸುತ್ತಾರೆ. ಈ ಚಿತ್ರದಲ್ಲಿ ಮಹೇಶ್ ಬಾಬು ಅವರ ನಟನೆ ಮತ್ತು ದೇವಿ ಶ್ರೀ ಪ್ರಸಾದ್ ಅವರ ಸಂಗೀತವು ಚಿತ್ರದ ಹೈಲೈಟ್‌ಗಳಾಗಿವೆ. ಸುಕುಮಾರ್ ಈ ಹಿಂದೆ ಸಂದರ್ಶನವೊಂದರಲ್ಲಿ ಈ ಚಿತ್ರದ ಬಗ್ಗೆ ಮಾತನಾಡಿದ್ದರು.

ಇದನ್ನೂ ಓದಿ: ‘ಪುಷ್ಪ 3’ ಇಲ್ಲ, ಅಲ್ಲು ಅರ್ಜುನ್ ಬದಲು ಬೇರೊಬ್ಬ ಸ್ಟಾರ್ ಜೊತೆ ಕೈ ಜೋಡಿಸಿದ ಸುಕುಮಾರ್

‘ಚಿತ್ರ ಯಶಸ್ವಿಯಾಗುವ ಅವಕಾಶವಿತ್ತು, ಆದರೆ ಅದು ಆಗಲಿಲ್ಲ. ಚಿತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿತ್ತು. ಚಿತ್ರದ ಇನ್ನೊಂದು ಆವೃತ್ತಿ ಇದೆ. ಅದರ ಪ್ರಕಾರ, ಚಿತ್ರದ ಮೊದಲ ಭಾಗದ ನಂತರ, ಮಧ್ಯಂತರದ ಸಮಯದಲ್ಲಿ, ನಾಯಕ ವಾಸ್ತವವಾಗಿ ನಾಟಕ ಆಡುತ್ತಿದ್ದಾನೆ ಮತ್ತು ಅವನಿಗೆ ಮಾನಸಿಕ ಸಮಸ್ಯೆಗಳಿಲ್ಲ ಎಂದು ಸ್ಪಷ್ಟವಾಗುತ್ತದೆ. ಆದರೆ ನಾವು ಆ ಕಥೆಯನ್ನು ಬದಲಾಯಿಸಿದ್ದೇವು’ ಎಂದಿದ್ದರು ಅವರು. ಸದ್ಯ ಅವರು ನೀಡಿದ ಹೇಳಿಕೆ ಚರ್ಚೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೆಪ್ಟಿಕ್ ಟ್ಯಾಂಕ್ ಒಳಗೆ ಕಬ್ಬಿಣದ ಟ್ರಂಕ್​ನಲ್ಲಿ ಮಹಿಳೆಯ ಶವ ಪತ್ತೆ – Kannada News | Woman’s Body Discovered in Iron Trunk Hidden Inside Septic Tank in Bhopal

ಭೋಪಾಲ್, ಫೆಬ್ರವರಿ 13: ಸೆಪ್ಟಿಕ್ ಟ್ಯಾಂಕ್ ಒಳಗೆ ಕಬ್ಬಿಣದ ಟ್ರಂಕ್​​ನಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​​ನಲ್ಲಿ ನಡೆದಿದೆ. ಭೋಪಾಲ್​​ನ ಕಮಲ್​ ನಗರದಲ್ಲಿ ಈ ಘಟನೆ ನಡೆದಿದೆ. ಖಾಲಿ ಜಾಗದಲ್ಲಿರುವ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಎಸೆಯಲಾಗಿದ್ದ ಕಬ್ಬಿಣದ ಟ್ರಂಕ್‌ನೊಳಗೆ ಶವವನ್ನು ಮರೆಮಾಡಲಾಗಿತ್ತು. ಈ ಪ್ರದೇಶವು ನಿರ್ಜನವಾಗಿದ್ದು, ಅಪರಾಧ(Crime)ವನ್ನು ಮರೆಮಾಡಲು ಈ ಸ್ಥಳವನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಪ್ರಾಥಮಿಕ ಅಂದಾಜಿನ ಪ್ರಕಾರ ಶವವು ಸುಮಾರು ಮೂರರಿಂದ ನಾಲ್ಕು ದಿನಗಳಷ್ಟು ಹಳೆಯದಾಗಿರಬಹುದು. ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಆಕೆಯ ಕೈಗಳ ಮೇಲಿನ ಹಚ್ಚೆಗಳ ಮೂಲಕ ಆಕೆಯನ್ನು ಗುರುತಿಸುವ ಪ್ರಯತ್ನ ಮಾಡಲಾಗುತ್ತಿದೆ.

ಮಹಿಳೆಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ಸೆಪ್ಟಿಕ್ ಟ್ಯಾಂಕ್‌ಗೆ ಎಸೆಯುವ ಮೊದಲು ಟ್ರಂಕ್‌ನಲ್ಲಿ ತುಂಬಿಸಲಾಗಿದೆ. ಸ್ಥಳದಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ವಿಧಿವಿಜ್ಞಾನ ತಂಡಗಳು ಸ್ಥಳವನ್ನು ಪರಿಶೀಲಿಸಿದವು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ಬಲಿಪಶುವಿನ ಗುರುತು ಮತ್ತು ಶಂಕಿತ ಅಪರಾಧಕ್ಕೆ ಕಾರಣರಾದವರನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.

ಮತ್ತಷ್ಟು ಓದಿ: ದೆಹಲಿ ಉದ್ಯಮಿಯ ಕೊಲೆ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ

ಮತ್ತೊಂದು ಘಟನೆ
ಸೆಪ್ಟಿಕ್ ಟ್ಯಾಂಕ್​​ನಲ್ಲಿ ತಲೆಬುರುಡೆ ಪತ್ತೆ
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ಘಟನೆ ಇದು. ಆಗಸ್ಟ್​ 20ರಂದು ಪ್ರಿನ್ಸ್​ ಎಂಬುವವರು ಏಕಾಏಕಿ ನಾಪತ್ತೆಯಾಗಿದ್ದರು. ಅವರು ಕಾಣೆಯಾಗಿದ್ದಾರೆಂದು ಪತ್ನಿ ತುಳಸಿ ದೂರು ನೀಡಿದ್ದರು. ಆರಂಭದಲ್ಲಿ ಪೊಲೀಸರಿಗೆ ಯಾವುದೇ ಸುಳಿವು ಸಿಗದ ಕಾರಣ ಸದ್ದಿಲ್ಲದೆ ಪ್ರಕರಣದ ವಿಚಾರಣೆ ಅಂತ್ಯ ಕಂಡಿತ್ತು. ಆದರೆ ಕುಟುಂಬದವರಿಗೆ ಮಾತ್ರ ಅನುಮಾನ ಹಾಗೇ ಮುಂದುವರೆದಿತ್ತು.

ಸೆಪ್ಟಿಕ್ ಟ್ಯಾಂಕ್​​ನಲ್ಲಿ ಸಿಕ್ಕ ತಲೆ ಬುರುಡೆ, ಮೂಳೆಗಳು ಬೇರೆಯದೇ ಕಥೆಯನ್ನು ಹೇಳಿವೆ. ಪ್ರೇಮ, ಮದುವೆ, ದ್ರೋಹದ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿವೆ. ಮಧ್ಯಪ್ರದೇಶದ ದಿಯೋರಿ ನಗರದಲ್ಲಿ ನಾಪತ್ತೆ ಪ್ರಕರಣ ದಾಖಲಾಗಿ ಆರು ತಿಂಗಳ ನಂತರ ಸತ್ಯವನ್ನು ಪೊಲೀಸರು ಬಯಲು ಮಾಡಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿ ಶೋಯೆಬ್​​ನನ್ನು ನರಸಿಂಗ್​ಪುರದಲ್ಲಿ ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ ತುಳಸಲಿ ಹಾಗೂ ಶೋಯೆಬ್​ಗೆ ಮದುವೆಗೂ ಮುಂಚೆಯೇ ಸಂಬಂಧವಿತ್ತು ಎಂಬುದು ತಿಳಿದುಬಂದಿದೆ. ಪ್ರಿನ್ಸ್​ಗೆ ಮಾದಕ ದ್ರವ್ಯ ನೀಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮದುವೆಯ ನಂತರವೂ ಅಕ್ರಮ ಸಂಬಂಧ ಮುಂದುವರೆದಿತ್ತು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

7 ಮಂದಿಯ ಬಲಿತೆಗದುಕೊಂಡ ಹೊಸಕೋಟೆ ಅಪಘಾತದ ಭೀಕರತೆ ಬಿಚ್ಚಿಟ್ಟ ಐಜಿ ಲಾಬುರಾಮ್ – Kannada News | Hoskote Accident Horror: IG Laburam Reveals Details Behind Tragic Crash That Killed 7

ದೇವನಹಳ್ಳಿ, ಫೆಬ್ರವರಿ 13: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ-ದಾಬಸ್​​ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಏಳು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಹೊಸಕೋಟೆ ತಾಲೂಕಿನ ಎಂ.ಸತ್ಯವರ ಗ್ರಾಮದ ಸಮೀಪದ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಈ ಅಪಘಾತದ ತೀವ್ರತೆ ಕುರಿತು ಐಜಿ ಲಾಬುರಾಮ್ ಮಾಹಿತಿ ನೀಡಿದ್ದು, ಸ್ಥಳದಿಂದ ವಾಹನಗಳನ್ನು ತೆರವುಗೊಳಿಸಿ, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಪೈಕಿ ಮೂವರನ್ನು ಗುರುತಿಸಲಾಗಿದ್ದು, ಅವರ ಪೋಷಕರಿಗೆ ಮತ್ತು ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಗುರುತಿಸಲ್ಪಟ್ಟ ಮೂವರು ಬೆಂಗಳೂರಿನ ನಿವಾಸಿಗಳು. ಇನ್ನುಳಿದವರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ. ಪ್ರಕರಣದ ಕುರಿತು ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸಕೋಟೆ: ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್! ಲಾಸ್ಟ್ ಡ್ರೈವ್ ಆದ ಲಾಂಗ್ ಡ್ರೈವ್ – Kannada News | Hoskote Serial Accident: PU Students’ Long Drive Turns Fatal, Overspeed and Negligence Suspected

ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್!Image Credit source: tv9

ದೇವನಹಳ್ಳಿ, ಫೆಬ್ರವರಿ 13: ಹೊಸಕೋಟೆ (Hoskote) ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ಸರಣಿ ಅಪಘಾತದ (Serial Accident) ಬಗ್ಗೆ ಸ್ಫೋಟಕ ಮಾಹಿತಿ ಈಗ ಬಯಲಾಗಿದೆ. ಬೆಂಗಳೂರಿನ ಕಾಲೇಜೊಂದರ ಪಿಯು ವಿದ್ಯಾರ್ಥಿಗಳ ಜಾಲಿ ರೈಡ್, ಅತಿ ವೇಗದ ಚಾಲನೆಯೇ ಭೀಕರ ಸರಣಿ ಅಪಘಾತಕ್ಕೆ ಕಾರಣ ಎಂಬುದು ಈಗ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಎಕ್ಸ್​ ಯುವಿ 700 ಕಾರಿನಲ್ಲಿ ಬಂದಿದ್ದ ಆರು ಮಂದಿ ವಿದ್ಯಾರ್ಥಿಗಳು ಬೆಂಗಳೂರಿನ ಕಾಲೇಜೊಂದರಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದವರು ಎಂಬುದು ಗೊತ್ತಾಗಿದೆ. ನೂತನ ಹೆದ್ದಾರಿಯಲ್ಲಿ ಲಾಂಗ್ ಡ್ರೈವ್‌ಗೆ ಬಂದಿದ್ದ ವೇಳೆ ಅತಿವೇಗವಾಗಿ ಕಾರು ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ.

ಅತಿವೇಗವಾಗಿ ಬಂದ ಕಾರು ಮೊದಲು ಗಗನ್ ಎಂಬವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಮುಂದೆ ಸಾಗುತ್ತಿದ್ದ ಕ್ಯಾಂಟರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕ್ಯಾಂಟರ್ ವಾಹನದ ಆಕ್ಸಲ್ ಕಟ್ ಆಗಿ ಅದು ಸರ್ವೀಸ್ ರಸ್ತೆಗೆ ನೆಗೆದಿದೆ. ಈ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಆಕ್ಸಲ್‌ಗೆ ಮತ್ತೊಂದು ಬ್ರೀಜಾ ಕಾರು ಡಿಕ್ಕಿ ಹೊಡೆದಿದ್ದು, ಅದರಲ್ಲಿದ್ದ ನಾಲ್ವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸರಣಿ ಅಪಘಾತದಲ್ಲಿ ಬೈಕ್ ಸವಾರ ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದು, ಪ್ರಕರಣದ ಕುರಿತು ಪೊಲೀಸರು ವಿಸ್ತೃತ ತನಿಖೆ ನಡೆಸುತ್ತಿದ್ದಾರೆ. ಅಪಘಾತಕ್ಕೆ ಅತಿವೇಗವೇ ಪ್ರಮುಖ ಕಾರಣ ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ.

ಮೃತರ ಪೈಕಿ ಬೈಕ್ ಸವಾರ ಸ್ಥಳೀಯರಾಗಿದ್ದು, ಕಾರಿನಲ್ಲಿದ್ದವರು ಬೆಂಗಳೂರಿನ ಕೊತ್ತನೂರು ಮೂಲದವರು ಎನ್ನಲಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್​​ಪಿ ಚಂದ್ರಕಾಂತ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಹೊಸಕೋಟೆ ಬಳಿ ಬೈಕ್, ಕ್ಯಾಂಟರ್ ಲಾರಿಗೆ ಕಾರು ಡಿಕ್ಕಿಯಾಗಿ ಭೀಕರ ಅಪಘಾತ: 7 ಜನ ಸಾವು

ಏತನ್ಮಧ್ಯೆ, ಹೆದ್ದಾರಿಯ ಕಳಪೆ ನಿರ್ಮಾಣ ಮತ್ತು ವಿನ್ಯಾಸದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಅತಿವೇಗದ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಮುಖ್ಯ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿಕ್ಷಕರ ನಿರ್ಲಕ್ಷ್ಯಕ್ಕೆ ಒಂದನೇ ತರಗತಿ ವಿದ್ಯಾರ್ಥಿನಿಯ ಬೆರಳುಗಳೇ ಕಟ್! ಬಿಇಓ ಸೇರಿ ನಾಲ್ವರ ವಿರುದ್ಧ ಎಫ್​ಐಆರ್ – Kannada News | Tumakuru School Tragedy: Student Loses Fingers, Parents Demand Justice

ಶಿಕ್ಷಕರ ನಿರ್ಲಕ್ಷ್ಯಕ್ಕೆ ಒಂದನೇ ತರಗತಿ ವಿದ್ಯಾರ್ಥಿನಿಯ ಬೆರಳುಗಳೇ ಕಟ್!

ತುಮಕೂರು, ಫೆಬ್ರವರಿ 13: ಜಿಲ್ಲೆಯ ತುಮಕೂರು (Tumkuru) ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಶಾಲೆಯಲ್ಲಿ ನಡೆದ ದುರಂತ ಘಟನೆ ಪೋಷಕರಲ್ಲಿ ಆತಂಕ ಮೂಡಿಸಿದೆ. ಮಧ್ಯಾಹ್ನದ ಬಿಸಿಯೂಟ ಸಮಯದಲ್ಲಿ ಒಂದನೇ ತರಗತಿಯ ವಿದ್ಯಾರ್ಥಿನಿ ಚಿನ್ಮಯಿದೇವಿ ಬಲಗೈಯ ಎರಡು ಬೆರಳುಗಳನ್ನು ಕಳೆದುಕೊಂಡ ಘಟನೆ ಇದೇ ತಿಂಗಳ 9ರಂದು ಗೂಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದ್ದು, ಬಾಲಕಿಯ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಇನ್ನೋರ್ವ ವಿದ್ಯಾರ್ಥಿನಿ ಬಾಗಿಲು ತಳ್ಳಿದ ಆರೋಪ

ಮಧ್ಯಾಹ್ನ ಸುಮಾರು ಒಂದು ಗಂಟೆ ವೇಳೆ ಬಿಸಿಯೂಟಕ್ಕಾಗಿ ಕ್ಯೂನಲ್ಲಿ ನಿಂತಿದ್ದ ಬಾಲಕಿ ಮೂರನೇ ತರಗತಿ ಕೊಠಡಿಯ ಬಾಗಿಲಿಗೆ ಕೈ ಇಟ್ಟುಕೊಂಡಿದ್ದಾಗ, ಮತ್ತೊಬ್ಬ ವಿದ್ಯಾರ್ಥಿ ಬಾಗಿಲು ತಳ್ಳಿದ ಪರಿಣಾಮ ಆಕೆಯ ಬಲಗೈಯ ಎರಡು ಬೆರಳುಗಳು ಕಟ್ ಆಗಿವೆ ಎನ್ನಲಾಗಿದೆ. ಘಟನೆ ನಂತರ ಶಿಕ್ಷಕರು ಸಮರ್ಪಕ ಚಿಕಿತ್ಸೆ ನೀಡದೆ, ಗಾಯಗೊಂಡ ಸ್ಥಳಕ್ಕೆ ನೀರು ಸುರಿದು ಬ್ಯಾಂಡೇಜ್ ಹಾಕಿದ್ದಾರೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಇದಲ್ಲದೆ ಬಾಲಕಿಯ ಪೋಷಕರಿಬ್ಬರೂ ಗಾರೆ ಕೆಲಸ ಮಾಡುವವರಾಗಿದ್ದು, ಶಿಕ್ಷಕರಿಗೆ ಘಟನೆಯ ಬಗ್ಗೆ ಕೇಳಿದಾಗ ನಿರ್ಲಕ್ಷ್ಯ ತೋರಿದ್ದಲ್ಲದೆ ಪೋಷಕರಿಗೆ 2000 ರೂ.ಗಳನ್ನು ಫೋನ್​ ಪೇ ಮೂಲಕ ಕಳುಹಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ ಹೊಸಕೋಟೆ: ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್! ಲಾಸ್ಟ್ ಡ್ರೈವ್ ಆದ ಲಾಂಗ್ ಡ್ರೈವ್

ನ್ಯಾಯ ಕೊಡಿಸುವಂತೆ ಪೋಷಕರ ಆಗ್ರಹ

ಪೋಷಕರು ಮಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಕಟ್ ಆದ ಬೆರಳುಗಳನ್ನು ತರಲು ಸೂಚಿಸಿದ್ದರು. ಆಗ ಮಾತ್ರ ಬೆರಳುಗಳನ್ನು ಮೊದಲಿಂತೆ ಕೂಡಿಸಬಹುದೆಂದು ಹೇಳಿದ್ದರು. ಆದರೆ ಶಿಕ್ಷಕರನ್ನು ಕೇಳಿದಾಗ ಶಾಲೆಯಲ್ಲಿ ಬಾಲಕಿಯ ಬೆರಳುಗಳು ಲಭ್ಯವಾಗಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಬಿಇಓ ಹನುಮಂತಪ್ಪ, ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕಿ ರೇಣುಕಮ್ಮ ಹಾಗೂ ಸಿಆರ್‌ಪಿ ವೆಂಕಟೇಶ್ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು, ನ್ಯಾಯ ದೊರಕಬೇಕು ಎಂದು ವಿದ್ಯಾರ್ಥಿನಿಯ ತಾಯಿ ಅಂಬಿಕಾ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಉಪ ಲೋಕಾಯುಕ್ತರಿಗೇ ಆನ್​​ಲೈನ್ ದೋಖಾ! ರೇಜರ್ ಬ್ಲೇಡ್‌ ಆರ್ಡರ್ ಮಾಡಿದ್ರೆ ಬಂದಿದ್ದು ಹಳೇ ಬಟ್ಟೆ ತುಂಡು – Kannada News | Online Shopping Fraud Hits Karnataka Upa Lokayukta: Razor Blade Order Turns Into Old Cloth in Bengaluru

ಬೆಂಗಳೂರು, ಫೆಬ್ರವರಿ 13: ಕರ್ನಾಟಕದ ಉಪಲೋಕಾಯುಕ್ತ ಕೆಎನ್ ಫಣೀಂದ್ರ ಅವರೇ ಆನ್‌ಲೈನ್ ಶಾಪಿಂಗ್ ಮೋಸಕ್ಕೆ ಬಲಿಯಾಗುವಂತಾಗಿದೆ. ಅವರು ಗುಡ್ ಮ್ಯಾಕ್ಸ್ ಕಂಪನಿಯ ರೇಜರ್ ಬ್ಲೇಡ್‌ಗಳನ್ನು ಆನ್​ಲೈನ್ ಮೂಲಕ ಆರ್ಡರ್ ಮಾಡಿದ್ದರು. ಶ್ಯಾಡೋಫ್ಯಾಕ್ಸ್ ಮುಖಾಂತರ ಬಂದ ಪಾರ್ಸೆಲ್ ಅನ್ನು ತೆರೆದಾಗ, ಅದರಲ್ಲಿ ರೇಜರ್ ಬ್ಲೇಡ್‌ಗಳ ಬದಲು ಹಳೆಯ ಬಟ್ಟೆಗಳು ಪತ್ತೆಯಾಗಿವೆ! ಈ ಘಟನೆಯು ಆನ್‌ಲೈನ್ ಶಾಪಿಂಗ್‌ ಪ್ಲಾಟ್‌ಫಾರ್ಮ್‌ಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಉಪಲೋಕಾಯುಕ್ತರಂತಹ ಉನ್ನತ ಹುದ್ದೆಯಲ್ಲಿರುವವರೇ ಇಂತಹ ವಂಚನೆಗೆ ಗುರಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ, ಗುಡ್ ಮ್ಯಾಕ್ಸ್ ಕಂಪನಿ, ಡೆಲಿವರಿ ಸೇವೆ ಒದಗಿಸಿದ ಶ್ಯಾಡೋಫ್ಯಾಕ್ಸ್ ಕಂಪನಿ ಹಾಗೂ ಡೆಲಿವರಿ ಬಾಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Friday the 13th: 13ನೇ ತಾರೀಕು ಶುಕ್ರವಾರ ಬಂದರೆ ಸಾಕಷ್ಟು ಜನರು ಹೆದರುವುದೇಕೆ? ಈ ದಿನ ಅಪಶಕುನನಾ? – Kannada News | Why is Friday the 13th Considered Unlucky? Checkout more details here

ಪ್ರಪಂಚದಾದ್ಯಂತ ಅನೇಕ ಧರ್ಮಗಳು, ಸಂಸ್ಕೃತಿಗಳು ಮತ್ತು ನಂಬಿಕೆಗಳು ಇದ್ದು, ಒಂದೇ ವಿಷಯವನ್ನು ಕೆಲವರು ಶುಭವೆಂದು ನೋಡಿದರೆ ಮತ್ತೊಬ್ಬರು ಅಶುಭವೆಂದು ಪರಿಗಣಿಸುವುದು ಸಾಮಾನ್ಯ. ಅಂತಹ ವಿಚಿತ್ರ ನಂಬಿಕೆಗಳಲ್ಲಿ ಬಹಳ ಪ್ರಸಿದ್ಧವಾದದ್ದು “ಶುಕ್ರವಾರದ 13ನೇ ತಾರೀಕು”. ಈ ದಿನವನ್ನು ಅನೇಕ ಪಾಶ್ಚಾತ್ಯ ದೇಶಗಳಲ್ಲಿ ದುರಾದೃಷ್ಟಕರ ದಿನವೆಂದು ಭಯದಿಂದ ನೋಡಲಾಗುತ್ತದೆ. ಆದರೆ ಈ ನಂಬಿಕೆ ಹುಟ್ಟಿದ್ದು ಹೇಗೆ? ನಿಜವಾಗಿಯೂ ಈ ದಿನ ಅಶುಭವೇ? ಎಂಬುದನ್ನು ತಿಳಿದುಕೊಳ್ಳುವುದು ಆಸಕ್ತಿದಾಯಕವಾಗಿದೆ.

ವಾಸ್ತವವಾಗಿ, 13 ನೇ ಶುಕ್ರವಾರದಂದು ಇತಿಹಾಸದಲ್ಲಿ ಹಲವಾರು ಭಯಾನಕ ಘಟನೆಗಳು ನಡೆದಿವೆ. ಸಾವಿರಾರು ಜನರು ಸಾವನ್ನಪ್ಪಿದ್ದಾರೆ, ಯುದ್ಧಗಳು ಭುಗಿಲೆದ್ದಿವೆ, ನೈಸರ್ಗಿಕ ವಿಕೋಪಗಳು ಸಂಭವಿಸಿವೆ ಮತ್ತು ಅನೇಕ ವಿಶ್ವ ನಿಯಮಗಳು ಬದಲಾಗಿವೆ. ಅದಕ್ಕಾಗಿಯೇ ಈ ದಿನದಂದು ಜನರು ಹೆದರುತ್ತಾರೆ.

ಕ್ರೈಸ್ತ ಧರ್ಮದ ಪರಂಪರೆಯ ಪ್ರಕಾರ, ಯೇಸು ಕ್ರಿಸ್ತನ ಜೀವನಕ್ಕೆ ಸಂಬಂಧಿಸಿದ ಕೆಲವು ಘಟನೆಗಳು ಈ ನಂಬಿಕೆಗೆ ಕಾರಣವೆಂದು ಹೇಳಲಾಗುತ್ತದೆ. ಬೈಬಲ್ ಕಥೆಗಳ ಪ್ರಕಾರ ಯೇಸು ಕ್ರಿಸ್ತನು ಶಿಲುಬೆಗೆ ಹಾಕಲ್ಪಟ್ಟ ದಿನ ಶುಕ್ರವಾರವಾಗಿತ್ತು. ಅದಕ್ಕೂ ಮೊದಲು ನಡೆದ ‘ಅಂತಿಮ ಭೋಜನ’ದಲ್ಲಿ ಯೇಸುವಿನೊಂದಿಗೆ ಒಟ್ಟು 13 ಮಂದಿ ಇದ್ದರು. ಅವರಲ್ಲಿ ಒಬ್ಬನ ದ್ರೋಹವೇ ನಂತರದ ದುರಂತಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತದೆ. ಈ ಕಾರಣದಿಂದ 13 ಸಂಖ್ಯೆಯೂ, ಶುಕ್ರವಾರವೂ ಒಂದೇ ದಿನ ಬಂದಾಗ ಜನರು ಅದನ್ನು ಅಶುಭದ ಸಂಕೇತವೆಂದು ಪರಿಗಣಿಸಲು ಆರಂಭಿಸಿದರು.

ಇತಿಹಾಸದಲ್ಲೂ ಈ ನಂಬಿಕೆಗೆ ಬಲ ನೀಡಿದ ಕೆಲವು ಘಟನೆಗಳಿವೆ. 1307ರ ಅಕ್ಟೋಬರ್ 13ರಂದು, ಶುಕ್ರವಾರದಂದು ಫ್ರಾನ್ಸ್‌ನ ರಾಜನ ಆದೇಶದಂತೆ ‘Knights Templar’ ಸಂಘದ ಸದಸ್ಯರನ್ನು ಬಂಧಿಸಿ ಶಿಕ್ಷಿಸಲಾಯಿತು. ಈ ಘಟನೆಯು “Friday the 13th” ಬಗ್ಗೆ ಮತ್ತಷ್ಟು ಭಯವನ್ನು ಹುಟ್ಟಿಸಿತು. ಕಾಲಕ್ರಮೇಣ ಈ ನಂಬಿಕೆ ಯುರೋಪ್ ಮತ್ತು ಅಮೆರಿಕಾ ದೇಶಗಳಲ್ಲಿ ಹೆಚ್ಚು ಪ್ರಚಾರಕ್ಕೆ ಬಂತು.

ಈ ಭಯದ ಪರಿಣಾಮವಾಗಿ ಇಂದಿಗೂ ಹಲವಾರು ಕಟ್ಟಡಗಳಲ್ಲಿ 13ನೇ ಮಹಡಿಯನ್ನು ಸೂಚಿಸುವ ಸಂಖ್ಯೆ ಕಾಣಿಸದು. ಕೆಲವು ಹೋಟೆಲ್‌ಗಳು, ವಿಮಾನಗಳ ಸೀಟು ಸಂಖ್ಯೆಗಳು, ಆಸ್ಪತ್ರೆಗಳು 13 ಸಂಖ್ಯೆಯನ್ನು ತಪ್ಪಿಸುವುದು ಸಾಮಾನ್ಯವಾಗಿದೆ. ಕೆಲವರು ಆ ದಿನ ಪ್ರಯಾಣವನ್ನೇ ಮುಂದೂಡುತ್ತಾರೆ. ಈ ಭಯಕ್ಕೆ “Triskaidekaphobia” ಎಂಬ ಹೆಸರು ಕೂಡ ಇದೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಆದರೆ ವಿಜ್ಞಾನ ಅಥವಾ ಗಣಿತದ ದೃಷ್ಟಿಯಿಂದ ನೋಡಿದರೆ, 13 ಎಂಬುದು ಕೇವಲ ಒಂದು ಸಂಖ್ಯೆ ಮಾತ್ರ. 12 ಅನ್ನು ಪೂರ್ಣತೆಯ ಸಂಕೇತವೆಂದು ನೋಡಲಾಗುತ್ತದೆ – 12 ತಿಂಗಳು, 12 ಗಂಟೆಗಳು, 12 ರಾಶಿಗಳು. ಇದರ ನಂತರ ಬರುವ 13 ಅಸಮತೋಲನ ತರುತ್ತದೆ ಎಂಬ ಕಲ್ಪನೆಯೇ ಈ ನಂಬಿಕೆಗೆ ಕಾರಣವಾಗಿದೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:19 am, Fri, 13 February 26

Source link

Video: ನಾನಂತೂ ಇಲ್ಲಿಂದ ಹೋಗೋಕೆ ಬಿಡಲ್ಲ, ಫುಟ್ಪಾತ್​​ ಮೇಲೆ ಬಂದ ಬೈಕ್​ಗೆ ಅಡ್ಡವಾಗಿ ನಿಂತ ದಿಟ್ಟ ಮಹಿಳೆ – Kannada News | Footpath Face Off: Woman Challenges Rider, Sparks Applause Online

ಕೇರಳ, ಫೆಬ್ರವರಿ 13: ಅಷ್ಟು ದೊಡ್ಡ ರಸ್ತೆಗಳಿದ್ದರೂ ಜನರು ಫುಟ್ಪಾತ್​​ನಲ್ಲಿ ಬೈಕ್ ಓಡಿಸುವ ಛಾಳಿ ಬಿಡುತ್ತಿಲ್ಲ. ವರ್ಷಕ್ಕೆ ಒಂದು ಬಾರಿ ಫುಟ್ಪಾತ್ ಮಾಡಿದರೂ ಕೂಡ ಕೆಲವೇ ತಿಂಗಳುಗಳಲ್ಲಿ ವಾಹನಗಳ ಓಡಾಟದಿಂದ ಹಾಳಾಗುತ್ತಿವೆ. ಫುಟ್ಪಾತ್​​ನಲ್ಲಿ ಬಂದ ಬೈಕ್ ಅನ್ನು ಮಹಿಳೆಯೊಬ್ಬರು ಹೋಗದಂತೆ ತಡೆದು ನಿಲ್ಲಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ. ನಾನಂತೂ ಇಲ್ಲಿಂದ ಹೋಗೋಕೆ ಬಿಡಲ್ಲ, ಬೇಕಿದ್ದರೆ ನೀವು ರಸ್ತೆಯಲ್ಲಿ ಹೋಗಿ ಎಂದು ಮಹಿಳೆಯೊಬ್ಬರು ಫುಟ್ಪಾತ್​ನಲ್ಲಿ ಅಡ್ಡವಾಗಿ ನಿಂತು ಧೈರ್ಯದಿಂದ ಗದರಿಸಿದ್ದಾರೆ. ಕೋಳಿಕ್ಕೋಡ್​​ನಲ್ಲಿ ಈ ಘಟನೆ ನಡೆದಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link