ಮಲಯಾಳಂ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಕೇವಲ ಕಂಟೆಂಟ್ ಇಂದಲೇ ಗೆಲ್ಲುತ್ತಿವೆ. ಅಂಥಹಾ ಸಿನಿಮಾಗಳ ಸಾಲಿಗೆ ಸೇರುತ್ತದೆ ‘ಆಡು 3’. ಈ ಮಲಯಾಳಂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗಿತ್ತು. ಇದೀಗ ಒಟಿಟಿಗೆ ಬಂದಿದ್ದು, ಜೀ5ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಶರ್ವಾನಂದ ಅವರ ಬಹು ನಿರೀಕ್ಷಿತ ಸಿನಿಮಾ ‘ಬೈಕರ್’ ಕೆಲ ವಾರಗಳ ಹಿಂದಷ್ಟೆ ಈ ಸಿನಿಮಾ ಬಿಡುಗಡೆ ಆಗಿತ್ತು. ‘ಬೈಕರ್’ ಸಿನಿಮಾದ ಮೇಲೆ ಶರ್ವಾನಂದಗೆ ಭಾರಿ ನಂಬಿಕೆ ಇತ್ತು. ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಕಂಡಿತು. ಸಿನಿಮಾ ಇದೀಗ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಬಿಡುಗಡೆ ಆಗುವ ಸಮಯದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿದ್ದ ‘ದಿ ಕೇರಳ ಸ್ಟೋರಿ 2’ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಈ ಸಿನಿಮಾ ಜೀ5ನಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.
ಇಬ್ಬರು ಬಾಲ್ಯದ ಗೆಳೆಯರ ಕತೆಯನ್ನ ಒಳಗೊಂಡಿರುವ ಸಿನಿಮಾ ‘ಮುಸ್ತಫಾ-ಮುಸ್ತಫಾ. ಇದೊಂದು ಹಾಸ್ಯಮಯ ಸಿನಿಮಾ ಆಗಿದ್ದು, ಸಿನಿಮಾ ಇದೀಗ ಆಹಾ ಒಟಿಟಿಯಲ್ಲಿ ಬಿಡುಗಡೆ ಆಗಿದೆ.
ಚಿರಂಜೀವಿ ಕುಟುಂಬದ ಮಗಳು ನಿಹಾರಿಕಾ ಕೊನಿಡೇಲ ನಿರ್ಮಾಣ ಮಾಡಿ, ಮಹಿಳಾ ನಿರ್ದೇಶಕಿ ಮಾನಸ ಶರ್ಮಾ ನಿರ್ದೇಶನ ಮಾಡಿರುವ ಸಿನಿಮಾ ‘ರಾಕಾಸ’ ಹಾರರ್ ಕಾಮಿಡಿ ಜಾನರ್ನ ಸಿನಿಮಾ ಆಗಿದ್ದು, ಈ ಸಿನಿಮಾ ಇದೀಗ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ.
‘ಸ್ವಾಪ್ಡ್’ ಭಾರಿ ಬಜೆಟ್ನ ಹಾಲಿವುಡ್ ಅನಿಮೇಷನ್ ಸಿನಿಮಾ. ಆಸ್ಕರ್ ವಿಜೇತ ಮೈಖಲ್ ಜೋರ್ಡನ್ ಧ್ವನಿ ನೀಡಿರುವ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು ಮಾಡಿತ್ತು. ಇದೀಗ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ.
ಇದೊಂದು ಭಿನ್ನ ಮಾದರಿಯ ಕತೆಯುಳ್ಳ ಸಿನಿಮಾ ಜೊತೆಗೆ ತಮಿಳುನಾಡಿನ ಚಿತ್ರರಂಗ ಮತ್ತು ರಾಜಕೀಯವನ್ನು ಹಾಸ್ಯದ ಮೂಲಕ ಟೀಕೆ ಮಾಡುವ ಸಿನಿಮಾ, ಬೀಡಾ ಅಂಗಡಿಯವ ಸಿನಿಮಾ ಸ್ಟಾರ್ ಆಗಿ, ರಾಜಕೀಯ ನಾಯಕ ಆಗುವ ಕತೆ ಹೊಂದಿರುವ ಸಿನಿಮಾ ಇದು. ಸಿನಿಮಾ ಆಹಾನಲ್ಲಿದೆ.
