ನಾನು ಅಷ್ಟೊಂದು ಹೆದರಿದ್ದೆ… ಕೈಲ್ ಜೇಮಿಸನ್ ಬಹಿರಂಗ ಹೇಳಿಕೆ – Kannada News | Kyle Jamieson Shaken by 15 Year Old Vaibhav Sooryavanshi
ವಯಸ್ಸು ಜಸ್ಟ್ ನಂಬರ್ ಅಷ್ಟೇ… ಎಂಬುದನ್ನು ವೈಭವ್ ಸೂರ್ಯವಂಶಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಐಪಿಎಲ್ ಇತಿಹಾಸದ ಅತ್ಯಂತ ಕಿರಿಯ ಆಟಗಾರನ ಆಕ್ರಮಣಕಾರಿ ಆಟಕ್ಕೆ ಬೆಚ್ಚಿಬಿದ್ದಿರುವ ಕೈಲ್ ಜೇಮಿಸನ್, ವೈಭವ್ರನ್ನು ನೋಡಿ ತಾನು ಭಯಭೀತನಾಗಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಕುತೂಹಲಕಾರಿ ವಿಷಯ ಎಂದರೆ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಯ ವಿಕೆಟ್ ಅನ್ನು ಜೇಮಿಸನ್ ಅವರೇ ಪಡೆದಿದ್ದರು. ಇದೀಗ ವಿಕೆಟ್ ಪಡೆದಿದ್ದಕ್ಕಿಂತ ಹೆಚ್ಚಾಗಿ, ವೈಭವ್ ಸೂರ್ಯವಂಶಿ ಬಗ್ಗೆ ನೀಡಿದ ಹೇಳಿಕೆ ಈಗ ಎಲ್ಲೆಡೆ ವೈರಲ್ ಆಗಿದೆ….