All posts by nagaraj11081993

ವಿಡಿಯೋ ಕಾಲ್ ಮಾಡಿ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಅಲ್ಲು ಅರ್ಜುನ್ – Kannada News | Allu Arjun Surprises A Sick Little Fan With A Video Call; Recites Iconic Pushpa Dialogues

ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರು ಮತ್ತೊಮ್ಮೆ ತಮ್ಮ ಉದಾರತೆ ಹಾಗೂ ದೊಡ್ಡ ಗುಣದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಮಾರಕ ಕಾಯಿಲೆಯಿಂದ ಬಳಲುತ್ತಿರುವ ಶ್ರದ್ಧಾ ಎಂಬ ತಮ್ಮ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸುವ ಮೂಲಕ ಆಕೆಯ ಕಣ್ಣುಗಳಲ್ಲಿ ಸಂತೋಷದ ಕಣ್ಣೀರು ತರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

‘ಮೇಕ್ ಎ ವಿಶ್’ ಮೂಲಕ ತಲುಪಿದ ಆಸೆ:

ಮಾರಕ ಮತ್ತು ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಮಕ್ಕಳ ಆಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ‘ಮೇಕ್ ಎ ವಿಶ್ ಫೌಂಡೇಶನ್’ ಕೆಲಸ ಮಾಡುತ್ತದೆ. ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಪುಟ್ಟ ಬಾಲಕಿ ಶ್ರದ್ಧಾ, ತನಗೆ ನಟ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಳು. ಈ ವಿಷಯವನ್ನು ಫೌಂಡೇಶನ್‌ನವರು ಅಲ್ಲು ಅರ್ಜುನ್ ಗಮನಕ್ಕೆ ತಂದ ತಕ್ಷಣವೇ ಸ್ಪಂದಿಸಿದ ‘ಬನ್ನಿ’, ಶ್ರದ್ಧಾಗೆ ವಿಡಿಯೋ ಕಾಲ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ.

‘ಪುಷ್ಪ ಅಂದ್ರೆ ಫ್ಲವರ್ ಅನ್ಕೊಂಡ್ರಾ.. ಫೈರ್!’

ವಿಡಿಯೋ ಕಾಲ್‌ನಲ್ಲಿ ಶ್ರದ್ಧಾ ಜೊತೆ ತುಂಬಾ ಹೊತ್ತು ಮೋಜಿನ ಹರಟೆ ಹೊಡೆದ ಅಲ್ಲು ಅರ್ಜುನ್, ತಮ್ಮ ಸೂಪರ್ ಹಿಟ್ ಚಿತ್ರ ‘ಪುಷ್ಪ’ ಚಿತ್ರದ ಸಂಭಾಷಣೆಗಳನ್ನು ಹೇಳಿ ಮಗುವನ್ನು ರಂಜಿಸಿದರು. ‘ಪುಷ್ಪ ಹೂವಲ್ಲ, ಬೆಂಕಿ’ ಎಂದು ಸಿನಿಮಾದ ಸ್ಟೈಲ್‌ನಲ್ಲೇ ಡೈಲಾಗ್ ಹೊಡೆದು ಮಗುವಿನ ಮುಖದಲ್ಲಿ ನಗು ತರಿಸಿದರು. ಇದೇ ವೇಳೆ ಮಗು ಶೀಘ್ರದಲ್ಲೇ ಗುಣಮುಖಳಾಗಲಿ ಎಂದು ಹಾರೈಸಿದ ಬನ್ನಿ, ತಾನು ವೈದ್ಯೆಯಾಗಬೇಕೆಂಬ ಕನಸು ಹೊಂದಿರುವುದಾಗಿ ಹೇಳಿದ ಶ್ರದ್ಧಾಳನ್ನು ಶೀಘ್ರದಲ್ಲೇ ಹೈದರಾಬಾದ್‌ಗೆ ಬರುವಂತೆ ಪ್ರೀತಿಯಿಂದ ಆಹ್ವಾನಿಸಿದರು. ಬಾಲಕಿಯ ಬಳಿಕ ಆಕೆಯ ಪೋಷಕರೊಂದಿಗೂ ಮಾತನಾಡಿದ ನಟ, ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಧೈರ್ಯ ತುಂಬಿದರು. ಸದ್ಯ ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟಿಜನ್‌ಗಳು ಅಲ್ಲು ಅರ್ಜುನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಡಿಸಿಎಂ ಪವನ್ ಕಲ್ಯಾಣ್​​ರ ಭೇಟಿಯಾದ ನಟ ಅಲ್ಲು ಅರ್ಜುನ್: ಕಾರಣ?

ಅಲ್ಲು ಅರ್ಜುನ್ ಅವರ ಮುಂಬರುವ ಸಿನಿಮಾಗಳ ವಿಷಯಕ್ಕೆ ಬಂದರೆ, ಸದ್ಯ ಬಹುನಿರೀಕ್ಷಿತ ‘ಪುಷ್ಪ 2’ ಚಿತ್ರದ ಬೆನ್ನಲ್ಲೇ ಅವರು ‘ರಾಕಾ’ ಎಂಬ ಬೃಹತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಾಲಿವುಡ್‌ನ ಸ್ಟಾರ್ ನಿರ್ದೇಶಕ ಅಟ್ಲೀ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸಿದ್ಧ ತಮಿಳು ನಿರ್ಮಾಣ ಸಂಸ್ಥೆ ‘ಸನ್ ಪಿಕ್ಚರ್ಸ್’ ಸುಮಾರು 800 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ಇದರ ಜೊತೆಗೆ, ತಮಿಳಿನ ಮತ್ತೊಬ್ಬ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ನಿರ್ದೇಶನದಲ್ಲೂ ಅಲ್ಲು ಅರ್ಜುನ್ ಒಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದು, ಈ ಚಿತ್ರದ ಕುರಿತ ಹೆಚ್ಚಿನ ಅಪ್ಡೇಟ್‌ಗಳು ಶೀಘ್ರದಲ್ಲೇ ಹೊರಬರಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಹಾದೇವನ ಆ ಏಕೈಕ ಧಾಮ: ಇಲ್ಲಿ ಶಿವಲಿಂಗವಿಲ್ಲ, ಬದಲಿಗೆ ಮಲಗಿರುವ ಮುದ್ರೆಯಲ್ಲಿದ್ದಾನೆ ಶಿವ; ಕಾರಣ ತಿಳಿದರೆ ಆಶ್ಚರ್ಯ ಪಡುತ್ತೀರಿ! – Kannada News | Surutapalli Shiva Temple: Reclining Neelkanta in Parvati’s Lap – Pallikondeswarar

ಸಾಮಾನ್ಯವಾಗಿ ಯಾವುದೇ ಶಿವನ ದೇವಸ್ಥಾನಕ್ಕೆ ಹೋದರೂ, ಗರ್ಭಗುಡಿಯಲ್ಲಿ ಪವಿತ್ರವಾದ ಶಿವಲಿಂಗ ಅಥವಾ ಶಿವನ ದರ್ಶನವಾಗುತ್ತದೆ. ಆದರೆ ಭಾರತದಲ್ಲಿ ಮಹಾದೇವನಿಗೆ ಸಂಬಂಧಿಸಿದ ಇಂತಹ ಒಂದು ವಿಶಿಷ್ಟ ದೇವಸ್ಥಾನವಿದೆ, ಅಲ್ಲಿ ಶಿವನು ಲಿಂಗದ ರೂಪದಲ್ಲಾಗಲಿ ಅಥವಾ ನಿಂತಿರುವ ಭಂಗಿಯಲ್ಲಾಗಲಿ ಇಲ್ಲ, ಬದಲಿಗೆ ಮಲಗಿರುವ ಮುದ್ರೆಯಲ್ಲಿ (ಶಯನ ಮುದ್ರೆ) ದರ್ಶನ ನೀಡುತ್ತಾನೆ. ಸ್ಥಳೀಯ ಭಾಷೆಗಳಲ್ಲಿ ಈ ರೂಪವನ್ನು ‘ಭೋಗಾನ್’ ಎಂದು ಕರೆಯಲಾಗುತ್ತದೆ. ಇಲ್ಲಿ ಮಹಾದೇವನು ಮಾತಾ ಪಾರ್ವತಿಯ ಮಡಲಿನಲ್ಲಿ ತಲೆಯಿಟ್ಟು ವಿಶ್ರಮಿಸುತ್ತಿದ್ದಾನೆ. ಈ ಅದ್ಭುತ ದೇವಸ್ಥಾನ ಮತ್ತು ಇದರ ಹಿಂದಿರುವ ಪೌರಾಣಿಕ ರಹಸ್ಯವನ್ನು ಇಲ್ಲಿ ತಿಳಿದುಕೊಳ್ಳಿ.

ಎಲ್ಲಿದೆ ಈ ವಿಶಿಷ್ಟ ದೇವಸ್ಥಾನ?

ಭಗವಾನ್ ಶಿವನ ಈ ಅಪರೂಪದ ದೇವಸ್ಥಾನವು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸುರುಟಪಲ್ಲಿ ಎಂಬ ಗ್ರಾಮದಲ್ಲಿದೆ. ಇದನ್ನು ‘ಪಳ್ಳಿಕೊಂಡೇಶ್ವರರ್ ದೇವಸ್ಥಾನ’ ಅಥವಾ ‘ಸುರುಟಪಲ್ಲಿ ದೇವಸ್ಥಾನ’ ಎಂದೂ ಕರೆಯಲಾಗುತ್ತದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿಭಾಗಕ್ಕೆ ಹತ್ತಿರವಿರುವ ಕಾರಣ, ದೇಶದ ಮೂಲೆ ಮೂಲೆಗಳಿಂದ ಭಕ್ತರು ಮಹಾದೇವನ ಈ ವಿಶಿಷ್ಟ ಶಯನ ರೂಪವನ್ನು ಕಣ್ಣುಂಬಿಕೊಳ್ಳಲು ಬರುತ್ತಾರೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಹರಿಹರ ಬುಕ್ಕರಾಯರಿಂದ ಈ ದೇವಸ್ಥಾನವನ್ನು ಕ್ರಿ.ಶ. 1344 ರಿಂದ 1377 ರ ನಡುವೆ ನಿರ್ಮಿಸಲಾಯಿತು ಎಂದು ಇತಿಹಾಸ ಹೇಳುತ್ತದೆ.

ಈ ದೇವಸ್ಥಾನದ ಹಿಂದಿರುವ ಪೌರಾಣಿಕ ಕಥೆ ಏನು?

‘ಸ್ಥಳ ಪುರಾಣ’ದ ಪ್ರಕಾರ (ಯಾವುದೇ ಒಂದು ನಿರ್ದಿಷ್ಟ ತೀರ್ಥಕ್ಷೇತ್ರ, ದೇವಸ್ಥಾನ ಮತ್ತು ಅಲ್ಲಿನ ದೇವತೆಗಳ ಮಹಾತ್ಮೆಯನ್ನು ವರ್ಣಿಸುವ ಪುರಾಣ), ಈ ಕ್ಷೇತ್ರದ ಕಥೆಯು ಸಮುದ್ರ ಮಂಥನಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ದೇವತೆಗಳು ಮತ್ತು ಅಸುರರು ಅಮರತ್ವವನ್ನು ಪಡೆಯಲು ಮಂದರಾಚಲ ಪರ್ವತ ಮತ್ತು ವಾಸುಕಿ ನಾಗನ ಸಹಾಯದಿಂದ ಸಮುದ್ರ ಮಂಥನವನ್ನು ಪ್ರಾರಂಭಿಸಿದಾಗ, ಅತಿಯಾದ ಒತ್ತಡವನ್ನು ತಡೆದುಕೊಳ್ಳಲಾರದೆ ವಾಸುಕಿ ಸರ್ಪವು ತನ್ನ ಬಾಯಿಯಿಂದ ಭೀಕರವಾದ ವಿಷವನ್ನು (ಹಾಲಾಹಲ) ಉಗುಳಿತು. ವಿಷದ ಜ್ವಾಲೆಯಿಂದ ಇಡೀ ಸೃಷ್ಟಿಯನ್ನು ರಕ್ಷಿಸಲು ದೇವತೆಗಳು ಮತ್ತು ರಾಕ್ಷಸರು ಶಿವನ ಮೊರೆ ಹೋದರು. ಆಗ ದಯಾಮಯಿ ಶಿವನು ‘ವಿಷಭಕರಣ ಮೂರ್ತಿ’ ರೂಪವನ್ನು ಧರಿಸಿ ಆ ಭೀಕರ ವಿಷವನ್ನು ತಾನೇ ಕುಡಿದನು.

ಪಾರ್ವತಿಯ ಮಡಲಿನಲ್ಲಿ ಶಿವ:

ವಿಷವನ್ನು ಸೇವಿಸಿದ ನಂತರ ಮಹಾದೇವನಿಗೆ ಸ್ವಲ್ಪ ತಲೆಸುತ್ತು ಬಂದು ಆಯಾಸವಾಯಿತು. ಆಗ ಅವನು ಅಲ್ಲೇ ಮಲಗಿಕೊಂಡನು. ಇದನ್ನು ಕಂಡ ಪತ್ನಿ ಮಾತಾ ಪಾರ್ವತಿಯು ಮಹಾದೇವನ ತಲೆಯನ್ನು ತನ್ನ ಮಡಲಿನಲ್ಲಿಟ್ಟುಕೊಂಡು, ಆ ಭೀಕರ ವಿಷವು ದೇಹದೊಳಗೆ ಇಳಿಯದಂತೆ ಶಿವನ ಕಂಠವನ್ನು (ಕುತ್ತಿಗೆಯನ್ನು) ಮೆಲ್ಲಗೆ ಒತ್ತಿ ಹಿಡಿದಳು. ವಿಷವು ಗಂಟಲಿನಲ್ಲೇ ಉಳಿದ ಕಾರಣ ಶಿವನ ಕಂಠವು ನೀಲ (ನೀಲಿ) ಬಣ್ಣಕ್ಕೆ ತಿರುಗಿತು. ಈ ಘಟನೆಯ ನಂತರವೇ ಭಗವಾನ್ ಶಿವನಿಗೆ ‘ನೀಲಕಂಠ’ ಎಂಬ ಹೆಸರು ಬಂದಿತು.

‘ಸುರುಟಪಲ್ಲಿ’ ಎಂಬ ಹೆಸರು ಬರಲು ಕಾರಣವೇನು?

ಭಗವಾನ್ ಶಿವನು ದೇವಿ ಪಾರ್ವತಿಯ ಮಡಲಿನಲ್ಲಿ ವಿಶ್ರಮಿಸುತ್ತಿದ್ದಾಗ, ಬ್ರಹ್ಮದೇವ ಸೇರಿದಂತೆ ಎಲ್ಲಾ ದೇವತೆಗಳು, ಮಹರ್ಷಿಗಳು ಮತ್ತು ನವಗ್ರಹಗಳು ಶಿವನ ಆರೋಗ್ಯವನ್ನು ವಿಚಾರಿಸಲು ಅಲ್ಲಿಗೆ ಬಂದು ಒಟ್ಟುಗೂಡಿದರು. ದೇವತೆಗಳ ಆ ಮಹಾ ಸಮೂಹ ಅಲ್ಲಿ ಉಂಟಾದ ಕಾರಣ ಈ ಸ್ಥಳಕ್ಕೆ ‘ಸುರುಟಪಲ್ಲಿ’ ಎಂಬ ಹೆಸರು ಬಂದಿತು (ಸೂರುತ್ ಎಂದರೆ ದೇವತೆಗಳ ಸಮೂಹ).

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ತ್ರಯೋದಶಿ, ಪ್ರದೋಷ ಕಾಲ ಮತ್ತು ಈ ದೇವಸ್ಥಾನದ ನಂಟು:

ಸಮುದ್ರ ಮಂಥನದ 13 ನೇ ದಿನದಂದು (ತ್ರಯೋದಶಿ ತಿಥಿ) ಭಗವಾನ್ ವಿಷ್ಣುವು ಅಮೃತ ಕಳಶದೊಂದಿಗೆ ಪ್ರಕಟನಾದನು. ಅಮೃತವನ್ನು ಪಡೆದ ದೇವತೆಗಳು ಅತ್ಯಂತ ಸಂತೋಷಗೊಂಡು, ತಮ್ಮನ್ನು ರಕ್ಷಿಸಿದ ಭಗವಾನ್ ಶಿವನ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಲು ಸುರುಟಪಲ್ಲಿಗೆ ಧಾವಿಸಿದರು. ದೇವತೆಗಳೆಲ್ಲರೂ ಶಿವನ ಬಳಿಗೆ ಬಂದ ಈ ಘಟನೆಯು ಸಾಯಂಕಾಲದ ಸಮಯದಲ್ಲಿ ನಡೆದಿತ್ತು ಎಂದು ನಂಬಲಾಗಿದೆ. ಇದನ್ನೇ ಪ್ರದೋಷ ಕಾಲ ಎನ್ನಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ಸಮಯವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ‘ಪ್ರದೋಷ’ ಎಂದರೆ ನಮ್ಮೊಳಗಿನ ಎಲ್ಲಾ ನಕಾರಾತ್ಮಕತೆ ಮತ್ತು ಪಾಪಗಳಿಂದ ಮುಕ್ತಿ ಪಡೆಯುವುದು ಎಂದರ್ಥ.

ದೇವಸ್ಥಾನದ ಮೂರ್ತಿಗಳು ಮತ್ತು ಇತರ ಹೆಸರುಗಳು:

ಈ ಪವಿತ್ರ ದೇವಸ್ಥಾನದ ಗರ್ಭಗುಡಿಯಲ್ಲಿರುವ ಮುಖ್ಯ ಮೂರ್ತಿಯನ್ನು ‘ಸರ್ವಮಂಗಳ ಸಮೇತ ಶ್ರೀ ಪಳ್ಳಿಕೊಂಡೇಶ್ವರ ಸ್ವಾಮಿ’ ಎಂದು ಕರೆಯಲಾಗುತ್ತದೆ. ಶಿವನ ಈ ಅಪರೂಪದ ಶಯನ ರೂಪದ ಕಾರಣದಿಂದಾಗಿ ಸ್ಥಳೀಯರು ಈ ದೇವಸ್ಥಾನವನ್ನು ಇನ್ನೂ ಕೆಲವು ಹೆಸರುಗಳಿಂದ ಕರೆಯುತ್ತಾರೆ.

ಇಡೀ ಬ್ರಹ್ಮಾಂಡದಲ್ಲೇ ಬೇರೆಲ್ಲೂ ಕಾಣಸಿಗದ ಮಹಾದೇವನ ಈ ವಿಶಿಷ್ಟ ಮತ್ತು ಶಾಂತ ರೂಪವನ್ನು ನೋಡಲು, ನೀವು ಒಮ್ಮೆಯಾದರೂ ಆಂಧ್ರಪ್ರದೇಶದ ಈ ಸುರುಟಪಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಲೇಬೇಕು. ಭಕ್ತಿಯಿಂದ ಇಲ್ಲಿಗೆ ಬರುವ ಭಕ್ತರ ಸಕಲ ಕಷ್ಟಗಳೂ ದೂರಾಗುತ್ತವೆ ಎಂಬುದು ಇಲ್ಲಿನ ನಂಬಿಕೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:27 am, Sat, 20 June 26

Source link

2008ರ ಆರ್ಥಿಕ ಹಿಂಜರಿತದಂತೆ ಕಾಡಲಿದೆಯೇ ಕೃತಕ ಬುದ್ಧಿಮತ್ತೆ?: ಜಾಗತಿಕ ಎಐ ಹೂಡಿಕೆಯ ಕುರಿತು ಆತಂಕ ವ್ಯಕ್ತಪಡಿಸಿದ ಪ್ರೊ. ಅಶ್ವತ್ ದಾಮೋದರನ್ – Kannada News | Prof. Damodaran: AI Market Crash Risk from Debt, Unlike Dot Com Bubble

ನ್ಯೂಯಾರ್ಕ್, ಜೂ.20: 2000ರಲ್ಲಿ ಸಂಭವಿಸಿದ ಜಾಗತಿಕ ಇಂಟರ್ನೆಟ್ ಕ್ರಾಂತಿಯ (Dot-com Bubble) ಕುಸಿತಕ್ಕೂ ಮತ್ತು ಪ್ರಸ್ತುತ ಜಗತ್ತನ್ನು ಆಳುತ್ತಿರುವ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಹೂಡಿಕೆಯ ಅತಿಯಾದ ಉತ್ಸಾಹಕ್ಕೂ ದೊಡ್ಡ ವ್ಯತ್ಯಾಸವಿದೆ. ಇತಿಹಾಸವನ್ನು ಗಮನಿಸಿದರೆ ಎಐ ಮಾರುಕಟ್ಟೆಯೂ ಒಂದು ದಿನ ಕುಸಿತ (Bust) ಕಾಣುವುದು ಖಚಿತ. ಆದರೆ, ಆ ಕುಸಿತದ ತೀವ್ರತೆ ಇಡೀ ಸಮಾಜಕ್ಕೆ ದೊಡ್ಡ ಮಟ್ಟದ ಆರ್ಥಿಕ ಪೆಟ್ಟು ನೀಡಲಿದೆ ಎಂದು ಖ್ಯಾತ ವ್ಯಾಲ್ಯೂಯೇಷನ್ ತಜ್ಞ ಪ್ರೊ. ಅಶ್ವತ್ ದಾಮೋದರನ್ ಎಚ್ಚರಿಸಿದ್ದಾರೆ.

ಡಾಟ್-ಕಾಮ್ ಉಲ್ಬಣದ ಸಮಯದಲ್ಲಿ ಕಂಪನಿಗಳು ದೊಡ್ಡ ಮಟ್ಟದ ಸಾಂಪ್ರದಾಯಿಕ ಬಂಡವಾಳ ವೆಚ್ಚ ಅಥವಾ ಸಂಶೋಧನೆ ಮತ್ತು ಅಭಿವೃದ್ಧಿ ಮಾಡಿರಲಿಲ್ಲ. ಜನರು ಕೇವಲ ವೆಬ್‌ಸೈಟ್ ಮತ್ತು ಆಪ್‌ಗಳನ್ನು ಪ್ರಾರಂಭಿಸಿ ವ್ಯವಹಾರ ನಡೆಸುತ್ತಿದ್ದರು. ಆದರೆ, ಇಂದಿನ ಎಐ ಯುಗವು ಇತಿಹಾಸದಲ್ಲೇ ಕಾಣದ ಅತಿ ದೊಡ್ಡ ಮೂಲಸೌಕರ್ಯ ವೆಚ್ಚಕ್ಕೆ ಸಾಕ್ಷಿಯಾಗಿದೆ. 100 ವರ್ಷಗಳ ಹಿಂದೆ ಆಟೋಮೊಬೈಲ್ ಉದ್ಯಮದಲ್ಲಿ ಆದ ಹೂಡಿಕೆಗೆ ಇದನ್ನು ಹೋಲಿಸಬಹುದು. ಎಐಗಾಗಿ ಜಾಗತಿಕವಾಗಿ ಹರಿದುಬರುತ್ತಿರುವ ಬಂಡವಾಳ ಅಪಾರವಾಗಿದ್ದು, ಒಮ್ಮೆ ಮಾರುಕಟ್ಟೆ ತಿದ್ದುಪಡಿ ಅಥವಾ ಕುಸಿತ ಸಂಭವಿಸಿದರೆ, ಅದರ ನಷ್ಟ ಅತ್ಯಂತ ತೀವ್ರವಾಗಿರುತ್ತದೆ.

ಡಾಟ್-ಕಾಮ್ ಬಬಲ್ ಸಂಪೂರ್ಣವಾಗಿ ಈಕ್ವಿಟಿ ಆಧಾರಿತ ಹೂಡಿಕೆಯಾಗಿತ್ತು. 2000ರಲ್ಲಿ ಮಾರುಕಟ್ಟೆ ಕುಸಿದಾಗ ಶೇರುದಾರರು ತಮ್ಮ ಶೇ. 60 ರಿಂದ ಶೇ. 90 ರಷ್ಟು ಹಣವನ್ನು ಕಳೆದುಕೊಂಡರು. ಹೂಡಿಕೆದಾರರಿಗೆ ಭಾರಿ ನಷ್ಟವಾದರೂ, ಆ ಆರ್ಥಿಕ ಹೊಡೆತ ಕೇವಲ ಶೇರು ಮಾರುಕಟ್ಟೆಯ ಹೂಡಿಕೆದಾರರಿಗೆ ಮಾತ್ರ ಸೀಮಿತವಾಗಿತ್ತು. ಇಡೀ ಸಮಾಜದ ಮೇಲೆ ಅದರ ನೇರ ಪ್ರಭಾವ ಬೀರಲಿಲ್ಲ.

ಇಲ್ಲಿದೆ ನೋಡಿ ವಿಡಿಯೋ:

ಪ್ರಸ್ತುತ ಎಐ ಕ್ರಾಂತಿಯ ದೊಡ್ಡ ಸಮಸ್ಯೆಯೆಂದರೆ, ಇದಕ್ಕಾಗಿ ಹರಿದುಬರುತ್ತಿರುವ ಬೃಹತ್ ಬಂಡವಾಳವು ಕೇವಲ ಶೇರು ಮಾರುಕಟ್ಟೆಯಿಂದ ಬಂದದ್ದಲ್ಲ, ಬದಲಿಗೆ ದೊಡ್ಡ ಪ್ರಮಾಣದ ಸಾಲದ ರೂಪದಲ್ಲಿದೆ. ಅತ್ಯಂತ ಆತಂಕಕಾರಿ ವಿಷಯವೆಂದರೆ, ಈ ಸಾಲವನ್ನು ಬ್ಯಾಂಕುಗಳು ನೀಡುತ್ತಿಲ್ಲ, ಬದಲಿಗೆ ಖಾಸಗಿ ಬಂಡವಾಳ ಸಂಸ್ಥೆಗಳು ನೀಡುತ್ತಿವೆ. ಒಂದು ವೇಳೆ ಎಐ ಮಾರುಕಟ್ಟೆಯಲ್ಲಿ ಸಣ್ಣ ಹಿನ್ನಡೆಯಾಗಿ ಕಂಪನಿಗಳು ನಷ್ಟ ಅನುಭವಿಸಲು ಆರಂಭಿಸಿದರೆ, ಅವರು ಸಾಲ ಮರುಪಾವತಿಸಲು ಸಾಧ್ಯವಾಗದೆ ಸುಸ್ತಿದಾರರಾಗುತ್ತಾರೆ. ಈ ಸಾಲದ ಬಿಕ್ಕಟ್ಟು ಕೇವಲ ಕಂಪನಿಗಳಿಗೆ ಸೀಮಿತವಾಗದೆ ಇಡೀ ಸಮಾಜಕ್ಕೆ ಹರಡಲಿದೆ.

ಇದನ್ನೂ ಓದಿ: ರಿಲಯನ್ಸ್​ನ ಸೆಲ್ ಮತ್ತು ಬೆಸ್ ತಯಾರಿಕೆಯ ಸಾಮರ್ಥ್ಯ 120 GWhಕ್ಕೆ; ಬೆಸ್ ಯಾಕೆ ಮುಖ್ಯ?

ಇದು ಹೂಡಿಕೆದಾರರ ಶೇರು ಬೆಲೆ ಶೇ. 90 ರಷ್ಟು ಕುಸಿದು ಸುಮ್ಮನಾಗುವ ಬಿಕ್ಕಟ್ಟಲ್ಲ. ಸಾಲ ನೀಡುವವರು ಮಿತಿಮೀರಿ, ಕಡಿಮೆ ಬಡ್ಡಿದರದಲ್ಲಿ ಹಣವನ್ನು ಹರಿಸಿದಾಗ ಏನಾಗುತ್ತದೆ ಎಂಬುದಕ್ಕೆ 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟೇ ಸಾಕ್ಷಿ. ಸಾಲಗಾರರು ಹಣ ಮರುಪಾವತಿಸಲು ವಿಫಲವಾದಾಗ ಅದರ ನೋವು ಇಡೀ ಸಮಾಜದ ಮೇಲೆ ವ್ಯಾಪಿಸುತ್ತದೆ. ಎಐ ಮಾರುಕಟ್ಟೆಯ ಈ ಭ್ರಮೆಯು ಭವಿಷ್ಯದಲ್ಲಿ ಸಮಾಜ ಪಾವತಿಸಬೇಕಾದ ಭಾರಿ ಸಾಲದ ವೆಚ್ಚವಾಗಿ ಪರಿಣಮಿಸಬಹುದು ಎಂದು ದಾಮೋದರನ್ ಕಳವಳ ವ್ಯಕ್ತಪಡಿಸಿದ್ದಾರೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

NEET Exam: ನೀಟ್ ಎಡವಟ್ಟು; ನಾಗ್ಪುರದಲ್ಲಿರೋ ಅಭ್ಯರ್ಥಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ! – Kannada News | NEET Re Exam 2026: NTA Blunder Allots Abu Dhabi Exam Centre To Nagpur Student Without Passport

ಮುಂಬೈ, ಜೂನ್ 20: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET UG) ಮರುಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆಯ ಬೆನ್ನಲ್ಲೇ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಮತ್ತೊಂದು ವಿವಾದಕ್ಕೆ ಸಿಲುಕಿದೆ. ಮಹಾರಾಷ್ಟ್ರದ ನಾಗ್ಪುರ ನಗರದ ನಿವಾಸಿಯಾದ 18 ವರ್ಷದ ನೀಟ್ ಅಭ್ಯರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಎಂಬಾತನಿಗೆ ಎನ್‌ಟಿಎ ಜೂನ್ 14 ರಂದು ಜನರೇಟ್ ಮಾಡಿರುವ ಪ್ರವೇಶ ಪತ್ರದಲ್ಲಿ ಅಬುಧಾಬಿಯ ‘ಅಬುಧಾಬಿ ಇಂಡಿಯನ್ ಸ್ಕೂಲ್’ ಅನ್ನು ಪರೀಕ್ಷಾ ಕೇಂದ್ರವಾಗಿ ನಿಯೋಜಿಸಿದೆ! ತನಗಿಷ್ಟ ಬಂದ ಮೂರು ಸ್ಥಳೀಯ ಜಿಲ್ಲಾ ಕೇಂದ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗೆ ಇದ್ದಕ್ಕಿದ್ದಂತೆ 2,500 ಕಿ.ಮೀ ದೂರದ ವಿದೇಶಿ ಕೇಂದ್ರ ಸಿಕ್ಕಿರುವುದು ಇಡೀ ಕುಟುಂಬಕ್ಕೆ ಆಘಾತ ನೀಡಿದೆ.

ಮುಖ್ಯಾಂಶಗಳು

  • ಪಾಸ್‌ಪೋರ್ಟ್ ಇಲ್ಲದ ವಿದ್ಯಾರ್ಥಿಗೆ ವಿದೇಶಿ ಕೇಂದ್ರ
  • ಹಾಲ್ ಟಿಕೆಟ್ ಕಂಡು ಕಂಗಾಲಾದ ಕುಟುಂಬ
  • ಎನ್‌ಟಿಎ ತಾಂತ್ರಿಕ ಲೋಪಕ್ಕೆ ವ್ಯಾಪಕ ಆಕ್ರೋಶ

ಪಾಸ್‌ಪೋರ್ಟ್ ಇಲ್ಲದೆ ವಿಮಾನ ಟಿಕೆಟ್‌ಗೆ ಹುಡುಕಾಟ

ಸಾಮಾನ್ಯವಾಗಿ ಅನಿವಾಸಿ ಭಾರತೀಯರು (NRI) ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಮಾತ್ರ ಎನ್‌ಟಿಎ ವಿದೇಶಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನೀಡುತ್ತದೆ. ಆದರೆ ಸ್ಥಳೀಯ ವಿದ್ಯಾರ್ಥಿ ಅಬ್ದುಲ್ಲಾಗೆ ಅಬುಧಾಬಿ ಕೇಂದ್ರ ಸಿಕ್ಕಿರುವುದರಿಂದ ಪೋಷಕರು ತಕ್ಷಣವೇ ಎನ್‌ಟಿಎ ಸಹಾಯವಾಣಿಯನ್ನು ಸಂಪರ್ಕಿಸಿದ್ದಾರೆ. ತಪ್ಪು ಸರಿಪಡಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ, ಪರೀಕ್ಷೆಗೆ ಕೇವಲ ಎರಡು ದಿನಗಳು ಬಾಕಿ ಇರುವವರೆಗೂ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಅನಿವಾರ್ಯ ಪರಿಸ್ಥಿತಿ ಬಂದರೆ ವಿದೇಶಕ್ಕಾದರೂ ಕಳುಹಿಸೋಣ ಎಂದು ತುರ್ತು ಪಾಸ್‌ಪೋರ್ಟ್ ಪ್ರಕ್ರಿಯೆ ಮತ್ತು ವಿಮಾನ ಟಿಕೆಟ್‌ಗಳ ವ್ಯವಸ್ಥೆ ಮಾಡಲು ಓಡಾಡುವಂತಾಯಿತು. ಈಗಾಗಲೇ ನೀಟ್ ಪೇಪರ್ ಲೀಕ್ ಪ್ರಕರಣದಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದ ಅಬ್ದುಲ್ಲಾಗೆ ಈ ಹಾಲ್ ಟಿಕೆಟ್ ಯಡವಟ್ಟು ಮತ್ತಷ್ಟು ಆಘಾತ ನೀಡಿದೆ.

ಕೇಂದ್ರಗಳ ಬದಲಾವಣೆಯಿಂದ ಪೋಷಕರು ಕಷ್ಟಕ್ಕೆ

ಕಳೆದ ತಿಂಗಳು ನೀಟ್ ಪರೀಕ್ಷೆ ರದ್ದಾದ ನಂತರ ಎನ್‌ಟಿಎ ಪೋಷಕರ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ, ಹಳೆಯ ಕೇಂದ್ರವನ್ನೇ ಉಳಿಸಿಕೊಳ್ಳುತ್ತೀರಾ ಅಥವಾ ಹೊಸ ಕೇಂದ್ರ ಬೇಕೇ ಎಂದು ಕೇಳಿತ್ತು. ಆದರೆ ನಾಗ್ಪುರ ವ್ಯಾಪ್ತಿಯಲ್ಲೇ ಹಳೆಯ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದ ಹಲವು ವಿದ್ಯಾರ್ಥಿಗಳಿಗೆ ಈಗ ಹೊಸ ಹಾಲ್ ಟಿಕೆಟ್‌ನಲ್ಲಿ ದೂರದ ಜಿಲ್ಲೆಗಳ ಮತ್ತು ಗ್ರಾಮಾಂತರ ಪ್ರದೇಶಗಳ ಕೇಂದ್ರಗಳನ್ನು ಹಂಚಿಕೆ ಮಾಡಲಾಗಿದೆ. ಪೋಷಕರು ಕೇಳದಿದ್ದರೂ ಕೇಂದ್ರಗಳನ್ನು ಬದಲಾಯಿಸಿರುವುದು ಮತ್ತು ಪರೀಕ್ಷಾ ಶುಲ್ಕದ ಮರುಪಾವತಿಗೆ ಬ್ಯಾಂಕ್ ವಿವರಗಳನ್ನು ಪಡೆದು ಗೊಂದಲ ಸೃಷ್ಟಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ನೀಟ್ ಮರು ಪರೀಕ್ಷೆಗೂ ಮುನ್ನ ‘ಟೆಲಿಗ್ರಾಮ್’ ನಿಷೇಧ ಮುಂದುವರಿಕೆ: ಕೇಂದ್ರದ ನಿರ್ಧಾರ ಎತ್ತಿಹಿಡಿದ ದೆಹಲಿ ಹೈಕೋರ್ಟ್

ಡೇಟಾಬೇಸ್ ಅಪ್ಡೇಟ್ ಮಾಡುವಾಗ ಉಂಟಾಗಿರುವ ತಾಂತ್ರಿಕ ದೋಷವೇ ಇದಕ್ಕೆ ಕಾರಣ ಎನ್ನಲಾಗಿದ್ದು, ಸದ್ಯ ಅಧಿಕಾರಿಗಳು ವಿದ್ಯಾರ್ಥಿಗೆ ನಾಗ್ಪುರದಲ್ಲೇ ಹೊಸ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ.

ಶಿಕ್ಷಣ ಸಂಬಂಧಿತ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:09 am, Sat, 20 June 26

Source link

‘ಯಶ್ ಫೆನಾಮಿನಲ್ ಆ್ಯಕ್ಟರ್, ಅವರ ಜೊತೆ ನಟಿಸಿದ್ದು ಅದ್ಭುತ ಅನುಭವ’; ಕಾಜಲ್ – Kannada News | Ramayana: Kajal Aggarwal Hails Yash as ‘Phenomenal Actor’ in Epic Saga

ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ (Ramayana Movie) ರಾಕಿಂಗ್ ಸ್ಟಾರ್ ಯಶ್ ಅವರು ನಟಿಸಿದ್ದಾರೆ. ರಣಬೀರ್​ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ದೊಡ್ಡ ಅಭಿಮಾನಿ ಬಳಗವೇ ಚಿತ್ರದಲ್ಲಿ ಇದೆ. ಈ ಕಾರಣದಿಂದಲೇ ದಕ್ಷಿಣದವರಿಗೆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಈ ಚಿತ್ರದಲ್ಲಿ ನಟಿಸಿರುವ ಸೌತ್ ಸಿನಿರಂಗದ ಸ್ಟಾರ್ ನಟಿ ಕಾಜಲ್ ಅಗರ್ವಾಲ್, ಅವರ ನಟನಾ ಕೌಶಲ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಯಶ್ ಅವರನ್ನು ಒಬ್ಬ ‘ಫೆನಾಮಿನಲ್ ಆ್ಯಕ್ಟರ್’ ಎಂದು ಕರೆದಿರುವ ಕಾಜಲ್, ಅವರ ಜೊತೆ ಕೆಲಸ ಮಾಡಿದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ನಿಖಿಲ್ ದ್ವಿವೇದಿ ನಿರ್ಮಾಣದ ಹಾಗೂ ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯ ಆಧಾರಿತ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಲಂಕಾಧಿಪತಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟಿ ಕಾಜಲ್ ಅಗರ್ವಾಲ್ ಅವರು ರಾವಣನ ಪತ್ನಿ ಮಂಡೋದರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಮೊದಲ ಭಾಗದ ಶೂಟಿಂಗ್ ಕಂಪ್ಲೀಟ್!

ಚಿತ್ರದ ಪ್ರಗತಿಯ ಬಗ್ಗೆ ಮಾತನಾಡಿರುವ ಕಾಜಲ್ ಅಗರ್ವಾಲ್, ‘ಯಶ್ ನಿಜಕ್ಕೂ ಒಬ್ಬ ಅದ್ಭುತ ನಟ. ನಾವು ಈಗಾಗಲೇ ಸಿನಿಮಾದ ಮೊದಲ ಭಾಗದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದೇವೆ. ಸದ್ಯಕ್ಕೆ ಫಸ್ಟ್ ಪಾರ್ಟ್ ಮಾತ್ರ ಶೂಟ್ ಆಗಿದ್ದು, ಎರಡನೇ ಭಾಗದ ಶೂಟಿಂಗ್ ಇನ್ನಷ್ಟೇ ಆರಂಭವಾಗಬೇಕಿದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ‘ರಾಮಾಯಣ’, ‘ವಾರಣಾಸಿ’ ಚಿತ್ರಗಳ ಬಜೆಟ್ ಒಂದು ಗಿಮಿಕ್ ಎಂದ ಮನೋಜ್ ಬಾಜಪೇಯಿ

ರಾವಣ ಹಾಗೂ ಮಂಡೋದರಿಯಾಗಿ ಯಶ್ ಮತ್ತು ಕಾಜಲ್ ಜೋಡಿ ತೆರೆಮೇಲೆ ಹೇಗೆ ಅಬ್ಬರಿಸಲಿದೆ ಎಂದು ನೋಡಲು ಸಿನಿರಸಿಕರು ಈಗಿನಿಂದಲೇ ಕಾತುರರಾಗಿದ್ದಾರೆ. ರಾವಣನ ಭಾಗದ ದೃಶ್ಯಗಳು ಎರಡನೇ ಪಾರ್ಟ್​​​ನಲ್ಲಿ ಹೆಚ್ಚಾಗಿ ಬರಲಿವೆ. ಹೀಗಾಗಿ, ಯಶ್​-ಕಾಜಲ್ ಕಾಂಬಿನೇಷನ್ ‘ರಾಮಾಯಣ 2’ ಚಿತ್ರದಲ್ಲಿ ಹೆಚ್ಚಾಗಿ ಇರಲಿದೆ. ಭಾರಿ ಬಜೆಟ್‌ನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರವು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಿನಿಮಾಗಳಲ್ಲಿ ಒಂದಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:54 am, Sat, 20 June 26

Source link

ಯುದ್ಧ-ಸಂಘರ್ಷದಿಂದ ದೂರ, ವ್ಯವಹಾರದಲ್ಲಿ ಚತುರ: ಪ್ರಧಾನಿ ಮೋದಿ ಶ್ರೇಷ್ಠ ನಾಯಕನೆಂದು ಹೊಗಳಿದ ಡೊನಾಲ್ಡ್ ಟ್ರಂಪ್ – Kannada News | US President Donald Trump Admires PM Narendra Modi and Xi Jinping, Calls Modi a Great Leader and Smart Politician

ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್Image Credit source: PTI

ನವದೆಹಲಿ, ಜೂನ್ 20: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಜಗತ್ತಿನ ಅತ್ಯಂತ ಶ್ರೇಷ್ಠ ನಾಯಕರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ. ‘ದಿ ಆಕ್ಸಿಯೋಸ್ ಶೋ’ ಕಾರ್ಯಕ್ರಮದಲ್ಲಿ ಪ್ರಪಂಚದ ಶಕ್ತಿಶಾಲಿ ಮತ್ತು ಅತ್ಯುತ್ತಮ ನಾಯಕರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಪ್ರಧಾನಿ ಮೋದಿ ಅವರನ್ನು ವಿಭಿನ್ನ ಹಾಗೂ ಅತ್ಯಂತ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಧೀರ ನಾಯಕ (Tough Cookie) ಎಂದು ಕರೆದಿದ್ದಾರೆ. ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಸಂಪೂರ್ಣ ವ್ಯವಹಾರಿಕ ನಾಯಕ ಎಂದಿದ್ದಾರೆ. ಜಾಗತಿಕ ವಹಿವಾಟಿನಲ್ಲಿ, ಅದರಲ್ಲಿಯೂ ಅಮೆರಿಕದೊಂದಿಗಿನ ವ್ಯವಹಾರದಲ್ಲಿ ಈ ಹಿಂದೆ ಭಾರತಕ್ಕೇ ಹೆಚ್ಚು ಪ್ರಯೋಜನವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಮುಖ್ಯಾಂಶಗಳು

  • ಮೋದಿ ಅತ್ಯಂತ ಕಠಿಣ ನಿರ್ಧಾರಗಳ ನಾಯಕ.
  • ಯುದ್ಧದಿಂದ ದೂರವಿರುವುದು ಭಾರತದ ಜಾಣ್ಮೆ.
  • ಅಮೆರಿಕದ ಜತೆಗಿನ ವ್ಯವಹಾರದಲ್ಲಿ ಭಾರತಕ್ಕೇ ಹೆಚ್ಚು ಲಾಭವಾಗ್ತಿತ್ತೆಂದ ಟ್ರಂಪ್.

ಭಾರತದಲ್ಲಿ ಪ್ರತಿಪಕ್ಷಗಳು ‘ಟ್ರಂಪ್ ತಾಳಕ್ಕೆ ತಕ್ಕಂತೆ ಮೋದಿ ಕುಣಿಯುತ್ತಾರೆ’ ಎಂಬ ಆರೋಪಗಳನ್ನು ಮಾಡುತ್ತಿರುವ ಹೊತ್ತಿನಲ್ಲೇ, ಅಮೆರಿಕ ಅಧ್ಯಕ್ಷರೇ ಮೋದಿ ಕಠಿಣ ನಾಯಕ ಎಂದಿದ್ದಾರೆ. ಅಲ್ಲದೆ, ಉಭಯ ದೇಶಗಳ ನಡುವಣ ಈವರೆಗಿನ ವ್ಯವಹಾರದಲ್ಲಿ ಭಾರತಕ್ಕೇ ಹೆಚ್ಚು ಪ್ರಯೋಜನವಾಗಿದೆ ಎಂದಿರುವುದು ಅಚ್ಚರಿ ಮೂಡಿಸಿದೆ.

ಮೋದಿ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

‘ಮೋದಿ ಅತ್ಯಂತ ಸಮರ್ಥ ನಾಯಕ. ಭಾರತವು ಇಂದು 150 ಕೋಟಿ ಜನಸಂಖ್ಯೆ ಹೊಂದಿರುವ ವಿಶ್ವದ ಅತಿ ದೊಡ್ಡ ದೇಶವಾಗಿದೆ. ಇಷ್ಟು ದೊಡ್ಡ ದೇಶವನ್ನು ಮುನ್ನಡೆಸುತ್ತಿರುವ ಮೋದಿ ಅವರು ಜಾಗತಿಕ ಯುದ್ಧ ಮತ್ತು ಸಂಘರ್ಷಗಳಿಂದ ಭಾರತವನ್ನು ದೂರ ಇಟ್ಟಿದ್ದಾರೆ, ಇದು ಅತ್ಯಂತ ಜಾಣ್ಮೆಯ ನಿರ್ಧಾರ’ ಎಂದು ಟ್ರಂಪ್ ಹೇಳಿದ್ದಾರೆ.

ಮೋದಿ ಬಗ್ಗೆ ಟ್ರಂಪ್ ಮಾತಿನ ವಿಡಿಯೋ: ಅಮಿತ್ ಮಾಳವೀಯ ಎಕ್ಸ್ ಸಂದೇಶ

ಸಂದರ್ಶನದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧಗಳ ಬಗ್ಗೆಯೂ ಮಾತನಾಡಿದ ಟ್ರಂಪ್, ‘ಇಂದು ನಾವು ಭಾರತದೊಂದಿಗೆ ನ್ಯಾಯೋಚಿತ ನಿಯಮಗಳ ಅಡಿಯಲ್ಲಿ ಬೃಹತ್ ಪ್ರಮಾಣದ ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿದ್ದೇವೆ. ಈ ಹಿಂದೆ ಅಮೆರಿಕದ ರಾಜಕಾರಣಿಗಳ ತಪ್ಪು ನಿರ್ಧಾರಗಳಿಂದಾಗಿ ಭಾರತವು ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಿತ್ತು. ಈಗ ಮಾಡಿಕೊಂಡಿರುವ ಹೊಸ ನಿಯಮಾವಳಿಗಳು ಭಾರತಕ್ಕೆ ಮೊದಲಿನಷ್ಟು ಹೆಚ್ಚಿನ ಲಾಭ ತರದಿದ್ದರೂ, ಉಭಯ ದೇಶಗಳ ನಡುವಿನ ಉದ್ಯಮ ಅತ್ಯಂತ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಅವರ ಸಕಾರಾತ್ಮಕ ನೇತೃತ್ವವೇ ಕಾರಣ’ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ವಿಶ್ವದ ಅತ್ಯಂತ ದುರ್ಬಲ ನಾಯಕರು ಯಾರು ಎಂಬ ಪ್ರಶ್ನೆಗೆ ಉತ್ತರಿಸಲು ಟ್ರಂಪ್ ನಿರಾಕರಿಸಿದ್ದಾರೆ. ಜಿ7 ಶೃಂಗಸಭೆಯಿಂದ ಹಿಂದಿರುಗಿದ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷರು ಈ ವಿಶೇಷ ಸಂದರ್ಶನ ನೀಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Virat Kohli: ಕಿಂಗ್ ಕೊಹ್ಲಿ ಕಂಬ್ಯಾಕ್ ಯಾವಾಗ? – Kannada News | When will Virat Kohli return to Team India?

ಅಫ್ಘಾನಿಸ್ತಾನ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಮತ್ತೆ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದು ಯಾವಾಗ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಸದ್ಯ ಸಿಕ್ಕಿರುವ ಉತ್ತರ ಜುಲೈ 14. ಅಂದರೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಿಂಗ್ ಕೊಹ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಐಪಿಎಲ್ ಫೈನಲ್ ಪಂದ್ಯದ ವೇಳೆ ಸಂಭವಿಸಿದ ಮಂಡಿರಜ್ಜು ಗಾಯದ ಸಮಸ್ಯೆಯ ಕಾರಣ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಅವರ ಬದಲಿಗೆ ಯಶಸ್ವಿ ಜೈಸ್ವಾಲ್ ಅವರನ್ನು ಅಫ್ಘಾನ್ ಸರಣಿಗೆ ಆಯ್ಕೆ ಮಾಡಲಾಗಿತ್ತು.

ಇದೀಗ ವಿರಾಟ್ ಕೊಹ್ಲಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಮುಂದಿನ ತಿಂಗಳ ಮೊದಲ ವಾರದೊಳಗೆ ಸಂಪೂರ್ಣ ಫಿಟ್​ನೆಸ್ ಸಾಧಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಗಾಯದಲ್ಲಿ ಗಮನಾರ್ಹ ಪ್ರಗತಿ:

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ವಿರಾಟ್ ಕೊಹ್ಲಿ ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ . ಕೊಹ್ಲಿ ಈಗಾಗಲೇ ತಮ್ಮ ಫಿಟ್​ನೆಸ್ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದು, ಗಾಯವು ನಿರೀಕ್ಷೆಗಿಂತ ವೇಗವಾಗಿ ಗುಣವಾಗುತ್ತಿದೆ.

ಅಲ್ಲದೆ ಶೀಘ್ರದಲ್ಲೇ ಅವರು ತಮ್ಮ ಫಿಟ್​ನೆಸ್ ಮೌಲ್ಯಮಾಪನ ಮತ್ತು ಕ್ಲಿಯರೆನ್ಸ್‌ಗಾಗಿ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ವರದಿ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಅಂದರೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಸಂಪೂರ್ಣ ಫಿಟ್ ಆಗಲಿದ್ದಾರೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಆಶಾವಾದ ಹೊಂದಿದ್ದಾರೆ.  ಹೀಗಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಕೊಹ್ಲಿಯನ್ನೂ ಕೂಡ ಆಯ್ಕೆ ಮಾಡಲಿದ್ದಾರೆ.

ಭಾರತ vs ಇಂಗ್ಲೆಂಡ್ ಸರಣಿ ಯಾವಾಗ?

ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯು ಜುಲೈ 1 ರಿಂದ ಶುರುವಾಗಲಿದೆ. ಈ ಸಿರೀಸ್​ನಲ್ಲಿ ಮೊದಲಿಗೆ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಾಗುತ್ತದೆ. ಇದಾದ ಬಳಿಕ ಏಕದಿನ ಸರಣಿ ಶುರುವಾಗಲಿದೆ. ಅದರಂತೆ ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಭಾರತ vs ಇಂಗ್ಲೆಂಡ್ ಟಿ20 ಸರಣಿ ವೇಳಾಪಟ್ಟಿ:

ಪಂದ್ಯ  ದಿನಾಂಕ (2026) ಮೈದಾನ / ಸ್ಥಳ
1ನೇ ಟಿ20 ಜುಲೈ 1 (ಬುಧವಾರ) ಚೆಸ್ಟರ್-ಲೆ-ಸ್ಟ್ರೀಟ್
2ನೇ ಟಿ20 ಜುಲೈ 4 (ಶನಿವಾರ) ಮ್ಯಾಂಚೆಸ್ಟರ್
3ನೇ ಟಿ20 ಜುಲೈ 7 (ಮಂಗಳವಾರ) ನಾಟಿಂಗ್ಹ್ಯಾಮ್
4ನೇ ಟಿ20 ಜುಲೈ 9 (ಗುರುವಾರ) ಬ್ರಿಸ್ಟಲ್
5ನೇ ಟಿ20 ಜುಲೈ 11 (ಶನಿವಾರ) ಸೌತಾಂಪ್ಟನ್

ಭಾರತ vs ಇಂಗ್ಲೆಂಡ್ ಏಕದಿನ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ (2026) ಮೈದಾನ / ಸ್ಥಳ
1ನೇ ಏಕದಿನ ಜುಲೈ 14 (ಮಂಗಳವಾರ) ಬರ್ಮಿಂಗ್ಹ್ಯಾಮ್
2ನೇ ಏಕದಿನ ಜುಲೈ 16 (ಗುರುವಾರ) ಕಾರ್ಡಿಫ್
3ನೇ ಏಕದಿನ ಜುಲೈ 19 (ಭಾನುವಾರ) ಲಂಡನ್ (ಲಾರ್ಡ್ಸ್)

ಇದನ್ನೂ ಓದಿ: ಟೀಮ್ ಇಂಡಿಯಾದ ಹೆಲ್ಮೆಟ್ ಧರಿಸಿ ಕಣಕ್ಕಿಳಿದ ಕುಮಾರ್ ಸಂಗಕ್ಕಾರ

ಸದ್ಯ ಫಿಟ್​ನೆಸ್​ನತ್ತ ಗಮನ ಕೇಂದ್ರೀಕರಿಸಿರುವ ವಿರಾಟ್ ಕೊಹ್ಲಿ ಜುಲೈ 14 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂಲಕ ಕಂಬ್ಯಾಕ್ ಮಾಡಲಿದ್ದಾರೆ. ಈ ಕಂಬ್ಯಾಕ್​ನೊಂದಿಗೆ ಕಿಂಗ್ ಕೊಹ್ಲಿಯ ದಾಖಲೆಯ ನಾಗಾಲೋಟ ಮುಂದುವರೆಯುವುದನ್ನು ಎದುರು ನೋಡಬಹುದು.

Source link

Spiritual Growth: ಸರಳ ಆದರೆ ಅತ್ಯಂತ ಪ್ರಭಾವಶಾಲಿ; ‘ಓಂ ನಮಃ ಶಿವಾಯ’ ಮಂತ್ರದ ರಹಸ್ಯ ಇಲ್ಲಿದೆ – Kannada News | Discover Om Namah Shivaya Mantra: Its Significance, Chanting and Benefits

ಭಾರತೀಯ ಸಂಸ್ಕೃತಿಯಲ್ಲಿ, ಆಧ್ಯಾತ್ಮಿಕ ಸಾಧನೆಯಲ್ಲಿ ಮಂತ್ರಗಳಿಗೆ ಅತ್ಯುನ್ನತ ಸ್ಥಾನವಿದೆ. ಮಂತ್ರೋಚ್ಚಾರಣೆಯಿಂದ ಹೊರಹೊಮ್ಮುವ ಶಬ್ದ ತರಂಗಗಳು ದೇಹದಲ್ಲಿ ಮತ್ತು ಸುಪ್ತ ಮನಸ್ಸಿನಲ್ಲಿ ಅದ್ಭುತವಾದ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತವೆ ಎಂದು ಶಾಸ್ತ್ರಗಳು ಸಾರುತ್ತವೆ. ಶಿವನ ಆರಾಧಕರು ಮತ್ತು ಗೃಹಸ್ಥರು ನಿತ್ಯವೂ ಜಪಿಸುವ ಪರಮ ಪವಿತ್ರವಾದ ಮಹಾಮಂತ್ರವೇ ‘ಓಂ ನಮಃ ಶಿವಾಯ’.

ಸಾಮಾನ್ಯವಾಗಿ ಕಠಿಣವಾದ ಮಂತ್ರ ಸಾಧನೆಗಳಿಗೆ ನಿರ್ದಿಷ್ಟ ತಿಥಿ, ನಕ್ಷತ್ರ, ಶುಭ ಮುಹೂರ್ತ ಅಥವಾ ಕಠೋರವಾದ ನಿಯಮಗಳ ಅಗತ್ಯವಿರುತ್ತದೆ. ಆದರೆ ಈ ಶಿವ ಮಂತ್ರಕ್ಕೆ ಅಂತಹ ಯಾವುದೇ ಸಂಕೀರ್ಣ ನಿಯಮಗಳಿಲ್ಲದಿರುವುದೇ ಇದನ್ನು ವಿಶ್ವವ್ಯಾಪಿಯನ್ನಾಗಿ ಮಾಡಿದೆ. ಶತಮಾನಗಳಿಂದ ಲಕ್ಷಾಂತರ ಜನರು ತಮ್ಮ ಆಧ್ಯಾತ್ಮಿಕ ಪ್ರಯಾಣದ ಮೊದಲ ಹೆಜ್ಜೆಯಾಗಿ ಭಾವಿಸುವ ಈ ಮಹಾಮಂತ್ರದ ಅಂತರಾರ್ಥ ಮತ್ತು ವಿಶಿಷ್ಟತೆಯನ್ನು ಇಲ್ಲಿ ತಿಳಿದುಕೊಳ್ಳಿ.

‘ಓಂ ನಮಃ ಶಿವಾಯ’ ಮಂತ್ರ ಏಕೆ ಅಷ್ಟು ವಿಶೇಷ?

ಸರಳತೆ ಮತ್ತು ಸಾರ್ವತ್ರಿಕತೆ:

ಈ ಮಂತ್ರದ ಅತಿ ದೊಡ್ಡ ವಿಶೇಷತೆಯೆಂದರೆ ಇದರ ಸರಳತೆ. ಓದಲು ಮತ್ತು ಉಚ್ಚರಿಸಲು ತುಂಬಾ ಸುಲಭವಾಗಿರುವುದರಿಂದ, ಸಾಮಾನ್ಯ ಗೃಹಸ್ಥನಿಂದ ಹಿಡಿದು ಹಿಮಾಲಯದ ಸಾಧಕರವರೆಗೆ ಯಾರು ಬೇಕಾದರೂ ಇದನ್ನು ಸುಲಭವಾಗಿ ಜಪಿಸಬಹುದು. ಧಾರ್ಮಿಕ ಗ್ರಂಥಗಳ ಪ್ರಕಾರ, ಈ ಮಂತ್ರವನ್ನು ಪಠಿಸಲು ಯಾವುದೇ ವಿಶೇಷ ದಿನಗಳು ಅಥವಾ ಕಟ್ಟುನಿಟ್ಟಿನ ಸಮಯದ ನಿರ್ಬಂಧಗಳಿಲ್ಲ. ಯಾವುದೇ ಸಮಯದಲ್ಲಿ, ಯಾವುದೇ ಸ್ಥಿತಿಯಲ್ಲಾದರೂ ಭಕ್ತಿಶ್ರದ್ಧೆಗಳಿಂದ ಇದನ್ನು ಸ್ಮರಿಸಬಹುದು.

ಪಂಚಾಕ್ಷರಿ ಶಕ್ತಿ (ಸೃಷ್ಟಿಯ ರಹಸ್ಯ):

‘ನ-ಮ-ಶಿ-ವಾ-ಯ’ ಎಂಬ ಐದು ಅಕ್ಷರಗಳು ಸೃಷ್ಟಿಯ ಐದು ಮೂಲಸ್ತಂಭಗಳಾದ ಪಂಚಭೂತಗಳನ್ನು ಸೂಚಿಸುತ್ತವೆ ಎಂದು ಆಧ್ಯಾತ್ಮಿಕ ತಜ್ಞರು ವಿವರಿಸುತ್ತಾರೆ. ಪೃಥ್ವಿ (ಭೂಮಿ, ನೀರು, ತೇಜಸ್ಸು (ಅಗ್ನಿ), ವಾಯು (ಗಾಳಿ), ಆಕಾಶ. ಇದಕ್ಕೆ ಪ್ರಣವ ನಾದವಾದ ‘ಓಂ’ ಸೇರುವುದರಿಂದ ಇದು ಷಡಕ್ಷರಿ ಮಂತ್ರವಾಗಿ ಬದಲಾಗುತ್ತದೆ ಮತ್ತು ವಿಶ್ವದ ಸಕಲ ಶಕ್ತಿಗಳನ್ನು ಸಾಧಕನ ಮನಸ್ಸಿಗೆ ಜೋಡಿಸುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಮಂತ್ರ ಸಿದ್ಧಿ ಎಂದರೆ ನಿಜವಾದ ಅರ್ಥವೇನು?

ನಮ್ಮಲ್ಲಿ ಅನೇಕರು ಮಂತ್ರ ಸಿದ್ಧಿ ಎಂದರೆ ಯಾವುದೋ ತಕ್ಷಣದ ಪವಾಡ ನಡೆಯುವುದು ಅಥವಾ ಆಸೆಗಳು ತಕ್ಷಣವೇ ಈಡೇರುವುದು ಎಂದು ಭಾವಿಸುತ್ತಾರೆ. ಆದರೆ ಆಧ್ಯಾತ್ಮಿಕ ಪರಿಭಾಷೆಯಲ್ಲಿ ಮಂತ್ರ ಸಿದ್ಧಿ ಎಂದರೆ ಆ ಮಂತ್ರದಲ್ಲಿ ಮನಸ್ಸು ಸಂಪೂರ್ಣವಾಗಿ ಲೀನವಾಗುವುದು. ಕ್ರಮಬದ್ಧವಾದ ಸಾಧನೆ ಮತ್ತು ಅತ್ಯುನ್ನತ ಮಾನಸಿಕ ಏಕಾಗ್ರತೆಯನ್ನು ಸಾಧಿಸುವುದೇ ನಿಜವಾದ ಸಿದ್ಧಿ. ನಿರಂತರ ಜಪದ ಮೂಲಕ ಮಾತ್ರ ಈ ಉನ್ನತ ಸ್ಥಿತಿಯನ್ನು ತಲುಪಲು ಸಾಧ್ಯ.

ಧಾರ್ಮಿಕ ಸಂಪ್ರದಾಯಗಳ ಪ್ರಕಾರ, ಯಾವುದೇ ಮಂತ್ರವೂ ತಕ್ಷಣದ ಪವಾಡಗಳನ್ನು ಸೃಷ್ಟಿಸುವುದಿಲ್ಲ. ಮಂತ್ರ ಸಾಧನೆ ಎಂಬುದು ಒಂದು ಸುದೀರ್ಘವಾದ ಆಂತರಿಕ ಪ್ರಕ್ರಿಯೆ. ಇದರ ಪ್ರಭಾವವು ಒಂದೇ ದಿನದಲ್ಲಿ ಕಾಣಿಸದೆ, ಜೀವನದಲ್ಲಿ ಕ್ರಮೇಣವಾಗಿ ಬರುವ ಸಕಾರಾತ್ಮಕ ಬದಲಾವಣೆಗಳ ರೂಪದಲ್ಲಿ ವ್ಯಕ್ತವಾಗುತ್ತದೆ.

ಈ ಮಂತ್ರ ಜಪದಿಂದ ಸಿಗುವ ಅದ್ಭುತ ಪ್ರಯೋಜನಗಳು:

ನಿರಂತರವಾಗಿ ‘ಓಂ ನಮಃ ಶಿವಾಯ’ ಜಪಿಸುವುದರಿಂದ ಮಾನಸಿಕ ಒತ್ತಡ, ಆತಂಕಗಳು ದೂರವಾಗಿ ಮನಸ್ಸಿಗೆ ಅದ್ಭುತವಾದ ಶಾಂತಿ ಸಿಗುತ್ತದೆ. ಇದಲ್ಲದೇ ಗೊಂದಲಗಳನ್ನು ನಿವಾರಿಸಿ, ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಿರುವ ಬುದ್ಧಿಯ ಸ್ಥಿರತೆಯನ್ನು ನೀಡುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:16 am, Sat, 20 June 26

Source link

World Refugee Day 2026: ಜೂನ್‌ 20 ರಂದು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ – Kannada News | World Refugee Day 2026: Know the history and significance of World Refugee Day

ವಿಶ್ವ ನಿರಾಶ್ರಿತರ ದಿನImage Credit source: Pinterest

ಯುದ್ಧ, ಆರ್ಥಿಕ ಬಿಕ್ಕಟ್ಟು, ರಾಜಕೀಯ ಗಲಭೆ, ಪ್ರಾಕೃತಿಕ ವಿಕೋಪ ಹಾಗೂ ಹಿಂಸಾಚಾರ ಹೀಗೆ ನಾನಾ ಕಾರಣಗಳಿಂದ ಊರು, ದೇಶ ಬಿಟ್ಟು ಹೋಗುವವರೇ ಹೆಚ್ಚು. ಹೀಗೆ ಊರು ಬಿಟ್ಟು ಬೇರೆ ಕಡೆಗೆ ಹೋದವರು ಬದುಕು ಕಟ್ಟಿಕೊಳ್ಳಲು ಒದ್ದಾಡುತ್ತಿದ್ದಾರೆ. ಅವರ ಬದುಕು ದಿನನಿತ್ಯ ಹೋರಾಟವಾಗಿದೆ. ಹೀಗಾಗಿ ಅಂತಹವರಿಗೆ ಮೂಲಸೌಕರ್ಯ ಹಾಗೂ ನಿರಾಶ್ರಿತರ ಸಮಸ್ಯೆಗಳನ್ನು ಆಲಿಸಲು, ಪುನರ್‌ವಸತಿಯ ಬಗ್ಗೆ ಜಾಗೃತಿ ಮೂಡಿಸಲು ಜೂನ್ 20 ರಂದು ವಿಶ್ವ ನಿರಾಶ್ರಿತರ ದಿನವನ್ನು (World Refugee Day) ಆಚರಿಸಲಾಗುತ್ತಿದೆ.

ವಿಶ್ವ ನಿರಾಶ್ರಿತರ ದಿನದ ಇತಿಹಾಸವೇನು?

ವಿಶ್ವಸಂಸ್ಥೆಯು ಡಿಸೆಂಬರ್ ತಿಂಗಳ ಜೂನ್ 20, 2000 ದಂದು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸಲು ನಿರ್ಧರಿಸಿತು. ಅಂದಿನಿಂದ ಪ್ರತಿವರ್ಷ ಜೂನ್‌ 20 ರಂದು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ವಿಶ್ವಸಂಸ್ಥೆಯಲ್ಲಿ ಪ್ರತ್ಯೇಕ ಸಂಘಟನೆಯನ್ನು ರಚಿಸಲಾಗಿದೆ. ಈ ಸಂಘಟನೆಯನ್ನು ದಿ ಯುನೈಟೆಡ್‌ ನೇಷನ್ಸ್‌ ಹೈ ಕಮಿಷನರ್ ಎಂದು ಹೆಸರಿಡಲಾಗಿದೆ. ಈ ಸಂಸ್ಥೆಯು ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಸಹಾಯ ಮಾಡಲು, ಅವರಿಗೆ ಬದುಕು ಕಟ್ಟಿಕೊಡಲು ಕಾರ್ಯ ನಿರ್ವಹಿಸುತ್ತಿದೆ.

ಇದನ್ನೂ ಓದಿ: International Picnic Day 2026: ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಪಿಕ್ನಿಕ್‌ ಹೋಗುವ ಖುಷಿಯೇ ಬೇರೆ

ವಿಶ್ವ ನಿರಾಶ್ರಿತರ ದಿನದ ಮಹತ್ವವೇನು?

ವಿಶ್ವ ನಿರಾಶ್ರಿತರ ದಿನದಂದು ಈಗಾಗಲೇ ಲಕ್ಷಾಂತರ ನಿರ್ಗತಿಕರು ಆಹಾರ, ಬಟ್ಟೆ, ವಸತಿ, ಕುಟುಂಬ, ಶಿಕ್ಷಣ, ಮತ್ತು ಬದುಕುವ ಹಕ್ಕನ್ನೇ ಕಳೆದುಕೊಂಡವರ ಮೇಲೆ ಬೆಳಕು ಚೆಲ್ಲುವುದು. ನಿರಾಶ್ರಿತರ ಸ್ಥಿತಿಗತಿಗಳ ಬಗ್ಗೆ ಅರಿವು ಮೂಡಿಸುವುದು ಈ ದಿನ ಮೂಲ ಉದ್ದೇಶವಾಗಿದೆ. ಈ ದಿನದಂದು ಜಾಗೃತಿ ಕಾರ್ಯಾಗಾರಗಳು, ಶಿಬಿರಗಳು ಸೇರಿದಂತೆ ಇನ್ನಿತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರು ಮೃಗಾಲಯಕ್ಕೆ ಕಳಿಸಿದ್ದೇವೆ ಎಂದಿದ್ದ ನರಭಕ್ಷಕ ಚಿರತೆ ಹನೂರು ಕಾಡಿನಲ್ಲಿ ಪತ್ತೆ; ಅಧಿಕಾರಿಗಳ ವಿರುದ್ಧ ಸೋಲಿಗರು ಗರಂ – Kannada News | Chamarajanagar: Forest Dept’s Man Eater Leopard Release Angers Soliga Tribals

ಚಾಮರಾಜನಗರ, ಜೂ.20: ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿಯ ನಡೆಗೆ ಆದಿವಾಸಿ ಸೋಲಿಗರು ಹಾಗೂ ಸ್ಥಳೀಯ ಗ್ರಾಮೀಣ ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಬೇರೆಡೆ ಸೆರೆ ಹಿಡಿದಿದ್ದ ನರಭಕ್ಷಕ ಚಿರತೆಯೊಂದನ್ನು ತಂದು ಪಾಲಾರ್ ಹಾಗೂ ಪೊನ್ನಾಚಿ ಕಾಡಿನ ಮಧ್ಯೆ ಬಿಟ್ಟಿರುವುದು ಈಗ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪೊನ್ನಾಚಿ ಬಳಿಯ ಕಕ್ಕೆಹೊಲ ಗ್ರಾಮದಲ್ಲಿ ಹಸು, ಮೇಕೆ ಹಾಗೂ ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಬೋನು ಇಟ್ಟಿತ್ತು. ತಡರಾತ್ರಿ ಈ ಚಿರತೆ ಬೋನಿನಲ್ಲಿ ಲಾಕ್ ಆಗಿದೆ. ಆದರೆ, ಬೋನಿಗೆ ಬಿದ್ದ ಚಿರತೆಯ ಕತ್ತನ್ನು ಪರಿಶೀಲಿಸಿದಾಗ ಸಾರ್ವಜನಿಕರು ಮತ್ತು ಅಧಿಕಾರಿಗಳಿಗೆ ಶಾಕ್ ಕಾದಿತ್ತು. ಅದರ ಕತ್ತಿನಲ್ಲಿ ಕಾಲರ್ ಐಡಿ ಪತ್ತೆಯಾಗಿದೆ.

ಈ ಹಿಂದೆ ತಾಳಬೆಟ್ಟದ ಬಳಿ ಮಂಡ್ಯ ಮೂಲದ ಪಾದಯಾತ್ರಿ ಪ್ರವೀಣ್ ಎಂಬುವವರನ್ನು ಕೊಂದು ತಿಂದಿದ್ದ ನರಭಕ್ಷಕ ಚಿರತೆ ಇದೇ ಆಗಿದೆ. ಈ ಚಿರತೆಯನ್ನು ಈ ಹಿಂದೆ ರಂಗಸ್ವಾಮಿವೊಡ್ಡು ಬಳಿ ಸೆರೆ ಹಿಡಿದು, ಅದರ ಕತ್ತಿಗೆ ಕಾಲರ್ ಐಡಿ ಅಳವಡಿಸಲಾಗಿತ್ತು. ಅರಣ್ಯಾಧಿಕಾರಿಗಳು ಈ ನರಭಕ್ಷಕ ಚಿರತೆಯನ್ನು ಮೈಸೂರಿನ ಚಾಮುಂಡಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು. ಆದರೆ, ಅಧಿಕಾರಿಗಳು ಸಾರ್ವಜನಿಕರಿಗೆ ಸುಳ್ಳು ಹೇಳಿ, ಅದೇ ನರಭಕ್ಷಕ ಚಿರತೆಯನ್ನು ಗುಟ್ಟಾಗಿ ತಂದು ಪಾಲಾರ್ ಮತ್ತು ಪೊನ್ನಾಚಿ ಕಾಡಿನ ಮಧ್ಯೆ, ಅಂದರೆ ಆದಿವಾಸಿಗಳ ಹಾಡಿಗಳು ಇರುವ ಸೂಕ್ಷ್ಮ ಪ್ರದೇಶದಲ್ಲಿ ಬಿಟ್ಟಿದ್ದಾರೆ ಎಂಬ ಅಸಲಿ ಸತ್ಯ ಈಗ ಬಯಲಾಗಿದೆ.

ಇದನ್ನೂ ಓದಿ: ಹಳಿಗಳ ಮೇಲೆ ಓಡೋ ಲಕ್ಸುರಿ ಹೋಟೆಲ್!: ವೈರಲ್ ಆಯ್ತು ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ‘ಫಸ್ಟ್ ಎಸಿ’ ಲುಕ್

ಅರಣ್ಯ ಇಲಾಖೆಯ ಈ ಅಪಾಯಕಾರಿ ನಡೆಗೆ ಕಕ್ಕೆಹೊಲ ಗ್ರಾಮದ ಹಾಗೂ ಸುತ್ತಮುತ್ತಲಿನ ಹಾಡಿಗಳ ಆದಿವಾಸಿ ಸೋಲಿಗರು ಕೆಂಡಾಮಂಡಲವಾಗಿದ್ದಾರೆ. “ನರಭಕ್ಷಕ ಚಿರತೆಯನ್ನು ತಂದು ನಮ್ಮ ಜಾಗದಲ್ಲಿ ಬಿಡುವ ಮೂಲಕ ಅರಣ್ಯ ಸಿಬ್ಬಂದಿ ನಮ್ಮ ಪ್ರಾಣದ ಜೊತೆ ಚೆಲ್ಲಾಟವಾಡಿದ್ದಾರೆ. ಇವರ ಬೇಜವಾಬ್ದಾರಿತನದಿಂದಾಗಿ ನಮ್ಮ ಜಾನುವಾರುಗಳು ಬಲಿಯಾಗಿವೆ, ನಮಗೂ ಪ್ರಾಣಭಯ ಎದುರಾಗಿತ್ತು” ಎಂದು ಆದಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥ ಅರಣ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link