‘ವಸುದೇವ ಕುಟುಂಬ’ ಧಾರಾವಾಹಿ ಕಿರಿಕ್, ನಿರ್ಮಾಪಕರ ನಡು ರಸ್ತೆಯಲ್ಲಿ ಅಡ್ಡ ಹಾಕಿದ ಹಂಸ – Kannada News | Producer not giving remuneration actress confronted producer
‘ವಸುದೇವ ಕುಟುಂಬ’ ಧಾರಾವಾಹಿಯ (Serial) ನಟ, ನಟಿಯರು ಮತ್ತು ತಂತ್ರಜ್ಞರು ಧಾರಾವಾಹಿಯ ನಿರ್ಮಾಪಕರ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ಮಾಜಿ ಬಿಗ್ಬಾಸ್ ಸ್ಪರ್ಧಿ ಹಂಸ, ನಟಿ ಚೈತ್ರಾ, ಹಿರಿಯ ನಟ ಅವಿನಾಶ್ ಸೇರಿದಂತೆ ಕೆಲವು ಪ್ರಮುಖ ಕಲಾವಿದರು ನಟಿಸುತ್ತಿರುವ ಧಾರಾವಾಹಿ ಇದಾಗಿದ್ದು, ಸ್ಟಾರ್ ಸುವರ್ಣ ಚಾನೆಲ್ನಲ್ಲಿ ಪ್ರಸಾರ ಕಾಣುತ್ತಿದೆ. ಕೆಲವು ತಿಂಗಳುಗಳಿಂದಲೂ ಧಾರಾವಾಹಿಯ ನಿರ್ಮಾಪಕರು ಕಲಾವಿದರಿಗೆ ಸಂಭಾವನೆ ನೀಡಿಲ್ಲ ಮಾತ್ರವಲ್ಲದೆ, ಆಹಾರ, ಇನ್ನಿತರೆಗಳನ್ನು ಸರಿಯಾಗಿ ನೀಡಿಲ್ಲ ಎಂದು ಕಲಾವಿದರು ಆರೋಪಿಸಿದ್ದು, ಇಂದು (ಏಪ್ರಿಲ್ 01) ನಿರ್ಮಾಪಕರನ್ನು ನಡು…