All posts by nagaraj11081993

Video: ಟ್ರಕ್ ಚಾಲಕ ಬ್ರೇಕ್ ಹಾಕದೇ ಇದ್ದಿದ್ರೆ ಥಾರ್ ಮೇಲೆ ಕುಳಿತು ಪುಂಡಾಟ ಮಾಡುತ್ತಿದ್ದವರ ಪ್ರಾಣವೇ ಹೋಗ್ತಿತ್ತು – Kannada News | Truck Driver’s Timely Brake Saves Youths Riding Atop Moving SUV in Haryana

ಹರಿಯಾಣ, ಫೆಬ್ರವರಿ 11: ಎದುರಿದ್ದ ಟ್ರಕ್ ಬ್ರೇಕ್ ಹಾಕಿಲ್ಲವೆಂದಾದರೆ ಮೂವರ ಪ್ರಾಣವೂ ಹೋಗಿರೋದು. ಒಂದಷ್ಟು ಯುವಕರು ಮಹಿಂದ್ರಾ ಥಾರ್ ಒಳಗೆ ಉಳಿದ ಮೂವರು ಥಾರ್ ಮೇಲೆ ಕುಳಿತಿದ್ದರು.  ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕ ಎದುರು ಬರುತ್ತಿದ್ದ ಟ್ರಕ್​ ನೋಡಿ ಎಡಕ್ಕೆ ಗಾಡಿ ತಿರುಗಿಸಿದ್ದಾನೆ. ಕೂಡಲೇ ಥಾರ್ ಮೇಲಿದ್ದ ಮೂವರು ಯುವಕರು ನೆಲಕ್ಕೆ ಬಿದ್ದಿದ್ದಾರೆ. ಆ ಸಮಯಕ್ಕೆ ಸರಿಯಾಗಿ ಟ್ರಕ್ ಚಾಲಕ ಕೂಡ ಬ್ರೇಕ್ ಹಾಕಿದ ಪರಿಣಾಮ ಮೂವರ ಜೀವ ಉಳಿದಿದೆ. ಇಲ್ಲವಾದಲ್ಲಿ ಎಲ್ಲಾ ಮೂವರ ತಲೆ ಮೇಲೆ ಟ್ರಕ್​ ಚಕ್ರ ಹತ್ತುವುದಂತೂ ಪಕ್ಕಾ ಆಗಿತ್ತು. ಅಪಘಾತದ ವಿಡಿಯೋ ಇಲ್ಲಿದೆ ನೊಡಿ. ಹರಿಯಾಣ ನೋಂದಣಿಯ ವಾಹನ ಅದಾಗಿತ್ತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

2 ಕಂತು ಇಎಂಐ ಕಟ್ಟಿಲ್ಲವೆಂದು ಜೆಸಿಬಿಯನ್ನೇ ಹರಾಜು ಹಾಕಿದ ಬ್ಯಾಂಕ್: 10 ದಿನಗಳಿಂದ ಧರಣಿ ನಡೆಸುತ್ತಿರುವ ತಾಯಿ-ಮಗ – Kannada News | Mother and Son Protest Outside HDFC Bank in Chikkamagaluru After JCB Seized and Auctioned Over EMI Default

ಬ್ಯಾಂಕ್ ಎದುರು ಧರಣಿ ನಡೆಸುತ್ತಿರುವ ತಾಯಿ-ಮಗImage Credit source: tv9

ಚಿಕ್ಕಮಗಳೂರು, ಫೆಬ್ರವರಿ 11: ಕೇವಲ ಎರಡು ಕಂತು ಇಎಂಐ (EMI) ತಡವಾದ ಕಾರಣ ಜೆಸಿಬಿ ವಾಹನವನ್ನು ಸೀಜ್ ಮಾಡಿ ಹರಾಜು ಮಾಡಲಾಗಿದೆ ಎಂದು ಆರೋಪಿಸಿ ತಾಯಿ ಮತ್ತು ಮಗ ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಲ್ಲಿರುವ ಹೆಚ್​ಡಿಎಫ್​ಸಿ (HDFC) ಬ್ಯಾಂಕ್ ಮುಂದೆ ಹತ್ತಿ ದಿನಗಳಿಂದ ನಿರಂತರ ಧರಣಿ ನಡೆಸುತ್ತಿದ್ದಾರೆ. ಚಿಕ್ಕಮಗಳೂರು (Chikkamagaluru) ತಾಲೂಕಿನ ಗೌಡನಹಳ್ಳಿ ಗ್ರಾಮದ ಮಂಜುನಾಥ್ ಅವರು ಜೆಸಿಬಿ ಖರೀದಿಸಲು ಐದು ವರ್ಷಗಳ ಅವಧಿಗೆ HDFC ಬ್ಯಾಂಕ್‌ನಿಂದ ಸುಮಾರು 29 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ವೇಳೆ 7 ಲಕ್ಷ ರೂಪಾಯಿ ಮುಂಗಡವಾಗಿ ಪಾವತಿಸಿ, ಉಳಿದ ಹಣವನ್ನು ತಿಂಗಳ EMI ರೂಪದಲ್ಲಿ ಕಟ್ಟುತ್ತಿದ್ದರು. ಸುಮಾರು ಒಂದು ವರ್ಷ ಆರು ತಿಂಗಳು ನಿಯಮಿತವಾಗಿ ಕಂತು ಕಟ್ಟಿದ ಬಳಿಕ, ಎರಡು ತಿಂಗಳು ಕಂತು ತಡವಾದ ಹಿನ್ನೆಲೆ ಮೂರನೇ ತಿಂಗಳಲ್ಲಿ ಬ್ಯಾಂಕ್ ಜೆಸಿಬಿಯನ್ನು ಸೀಜ್ ಮಾಡಿದೆ ಎಂದು ಆರೋಪಿಸಲಾಗಿದೆ.

ಸಾಲದ ಅವಧಿ ಬಾಕಿ ಇರುವಾಗಲೇ ಬ್ಯಾಂಕ್ ಜೆಸಿಬಿಯನ್ನು ಹರಾಜು ಮೂಲಕ ಮಾರಾಟ ಮಾಡಿರುವುದಾಗಿ ಮಂಜುನಾಥ್ ಆರೋಪಿಸಿದ್ದಾರೆ. ಸಂಪೂರ್ಣ ಬಾಕಿ ಇರುವ 22.5 ಲಕ್ಷ ರೂಪಾಯಿ ಪಾವತಿಸಿ ವಾಹನವನ್ನು ಪಡೆದುಕೊಳ್ಳಬಹುದು ಎಂದು ಬ್ಯಾಂಕ್ ಹೇಳಿದ್ದರೂ, ಹಣ ತೆಗೆದುಕೊಂಡು ಹೋದಾಗಲೇ ಜೆಸಿಬಿ ಮಾರಾಟವಾಗಿದೆ ಎಂದು ಆರೋಪಿಸಲಾಗಿದೆ.

ಜೆಸಿಬಿ ಮಾರಾಟವಾದ ಬಳಿಕವೂ ಬ್ಯಾಂಕ್‌ಗೆ ಇನ್ನೂ 1.75 ಲಕ್ಷ ರೂಪಾಯಿ ಬಾಕಿ ಇದ್ದು ಅದನ್ನು ಪಾವತಿಸುವಂತೆ ಸಿಬ್ಬಂದಿ ತಿಳಿಸಿದ್ದಾರೆ ಎಂದು ಮಂಜುನಾಥ್ ಕುಟುಂಬ ಆರೋಪಿಸಿದೆ. ಸಂಪೂರ್ಣ ಹಣ ಪಾವತಿಸಲು 15 ದಿನಗಳ ಅವಧಿ ನೀಡಿದರೂ, ಆ ಅವಧಿ ಪೂರ್ಣಗೊಳ್ಳುವ ಮುನ್ನವೇ ಜೆಸಿಬಿಯನ್ನು ಮಾರಾಟ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಸಿಬಿಯೇ ತಮ್ಮ ಜೀವನಕ್ಕೆ ಆಧಾರವಾಗಿದ್ದು, ಅದನ್ನು ವಾಪಸ್ ನೀಡುವಂತೆ ಒತ್ತಾಯಿಸಿ ಮಂಜುನಾಥ್ ಹಾಗೂ ಅವರ ತಾಯಿ ಕಳೆದ 10 ದಿನಗಳಿಂದ ಬ್ಯಾಂಕ್ ಮುಂದೆ 24 ಗಂಟೆಗಳೂ ಧರಣಿ ನಡೆಸುತ್ತಿದ್ದಾರೆ. ರಾತ್ರಿ ವೇಳೆ ಸಹ ಬ್ಯಾಂಕ್ ಮುಂದೆ ಮಲಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಮದುವೆ ನೆಪದಲ್ಲಿ 9 ಯುವತಿಯರ ಬಾಳಲ್ಲಿ ಚೆಲ್ಲಾಟವಾಡಿದ್ದ ‘ಮ್ಯಾಟ್ರಿಮೋನಿ ಮನ್ಮಥ’, ನಕಲಿ ಮಾವ ಪೊಲೀಸ್ ಬಲೆಗೆ

ಜೆಸಿಬಿಯ ಮೌಲ್ಯಕ್ಕಿಂತ ಕಡಿಮೆ ದರಕ್ಕೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿರುವ ಕುಟುಂಬ, ತಮ್ಮ ಜೆಸಿಬಿಯನ್ನು ವಾಪಸ್ ನೀಡಿ ಬಾಕಿ ಹಣವನ್ನು ಕಟ್ಟಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ HDFC ಬ್ಯಾಂಕ್ ವಿರುದ್ಧ ಸ್ಥಳೀಯರಲ್ಲೂ ಆಕ್ರೋಶ ವ್ಯಕ್ತವಾಗಿದ್ದು, ಪ್ರಕರಣ ಸದ್ಯ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕ ವಿರುದ್ಧ ಸ್ಪಿನ್ನಾಸ್ತ್ರ ಬಳಸಿದ ಪಾಕಿಸ್ತಾನ್ – Kannada News | T20 World Cup 2026: Pakistan Beat USA First Time

ಟಿ20 ವಿಶ್ವಕಪ್​ನ 12ನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಜಯ ಸಾಧಿಸಿದೆ. ಕೊಲಂಬೊದ ಎಸ್​ಎಸ್​ಸಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್​ಎ ತಂಡದ ನಾಯಕ ಮೊನಾಂಕ್ ಪಟೇಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕ್ ಪರ ಸಾಹಿಬ್​ಝಾದ ಫರ್ಹಾನ್ 41 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 6 ಫೋರ್​ ಒಳಗೊಂಡಂತೆ ಒಟ್ಟು 73 ರನ್ ಚಚ್ಚಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 190 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಯುಎಸ್​ಎ ತಂಡವನ್ನು ಕಟ್ಟಿ ಹಾಕಲು ಪಾಕಿಸ್ತಾನ್ ಸ್ಪಿನ್ನಾಸ್ತ್ರ ಬಳಸಿದ್ದು ವಿಶೇಷ. ಅಂದರೆ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ 20 ಓವರ್​ಗಳಲ್ಲಿ 16 ಓವರ್​ಗಳನ್ನು ಸ್ಪಿನ್ನರ್​ಗಳಿಂದಲೇ ಹಾಕಿಸಿದ್ದರು. ಈ ಮೂಲಕ ಯುಎಸ್​ಎ ತಂಡವನ್ನು 20 ಓವರ್​ಗಳಲ್ಲಿ 158 ರನ್​ಗಳಿಗೆ ನಿಯಂತ್ರಿಸುವಲ್ಲಿ ಪಾಕಿಸ್ತಾನ್ ಯಶಸ್ವಿಯಾಗಿದ್ದಾರೆ.

ವಿಶೇಷ ಎಂದರೆ ಪಾಕಿಸ್ತಾನ್ ತಂಡವು ಟಿ20 ಪಂದ್ಯದಲ್ಲಿ 16 ಓವರ್​ಗಳನ್ನು ಸ್ಪಿನ್ನರ್​ನಿಂದ ಹಾಕಿಸುತ್ತಿರುವುದು ಇದು 2ನೇ ಬಾರಿ. ಇದಕ್ಕೂ ಮುನ್ನ 2012 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಪಿನ್ನರ್​ಗಳಿಂದ 18 ಓವರ್​ಗಳನ್ನು ಮಾಡಿಸಲಾಗಿತ್ತು. ಇದೀಗ 14 ವರ್ಷಗಳ ಬಳಿಕ ಮತ್ತೊಮ್ಮೆ ಪಾಕ್ ತಂಡವು ಸ್ಪಿನ್ನಾಸ್ತ್ರ ಪ್ರಯೋಗಿಸಿದ್ದಾರೆ. ಈ ಸ್ಪಿನ್ನಾಸ್ತ್ರದ ಮೂಲಕ ಯುಎಸ್​ಎ ವಿರುದ್ಧ 32 ರನ್​ಗಳ ಜಯ ಸಾಧಿಸಿದೆ.

 

Source link

ಜನ ಒಳಗಿದ್ದಾಗಲೇ ಪುರಸಭೆ ಕಟ್ಟಡಕ್ಕೆ ಬೀಗ ಜಡಿದು ಹೋದ ನೌಕರ: ಸಿಬ್ಬಂದಿ ಒಳಗೇ ಲಾಕ್! – Kannada News | Udupi Planning Authority Staff Locked Inside Kapu Municipal Office After Door Shut by Mistake

ಉಡುಪಿ, ಫೆಬ್ರವರಿ 11: ಉಡುಪಿ ಜಿಲ್ಲೆಯ ಕಾಪು ಪುರಸಭೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಜನಾ ಪ್ರಾಧಿಕಾರದ ಸಿಬ್ಬಂದಿಯನ್ನು ಕಚೇರಿ ಒಳಗೆಯೇ ಲಾಕ್ ಮಾಡಿದ ಅಚಾತುರ್ಯ ಮಂಗಳವಾರ ಸಂಜೆ ನಡೆದಿದೆ. ಇದರಿಂದಾಗಿ ಕೆಲಕಾಲ ಆತಂಕ ಹಾಗೂ ಗೊಂದಲ ಉಂಟಾಯಿತು. ಕಾಪು ಪುರಸಭೆ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿರುವ ಯೋಜನಾ ಪ್ರಾಧಿಕಾರದ ಕಚೇರಿಗೆ ತೆರಳಲು ಒಂದೇ ದ್ವಾರ ಇದ್ದು, ಪ್ರತಿದಿನ ಸಂಜೆ 5.30ರಿಂದ 6 ಗಂಟೆಯೊಳಗೆ ಪುರಸಭೆ ಸಿಬ್ಬಂದಿ ಬಾಗಿಲಿಗೆ ಬೀಗ ಹಾಕುವ ಪದ್ಧತಿ ಇದೆ. ಸಾಮಾನ್ಯವಾಗಿ ಬೀಗ ಹಾಕುವ ಮೊದಲು ಒಳಗೆ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಮಾಹಿತಿ ನೀಡಲಾಗುತ್ತದೆ.

ಆದರೆ, ನಿಯಮಿತವಾಗಿ ಬೀಗ ಹಾಕುವ ನೌಕರ ಮಂಗಳವಾರ ಅನಾರೋಗ್ಯದಿಂದ ರಜೆ ಮಾಡಿದ್ದ ಹಿನ್ನೆಲೆ ಮತ್ತೊಬ್ಬ ಸಿಬ್ಬಂದಿ ಬೀಗ ಹಾಕಿದ್ದಾನೆ. ಈ ವೇಳೆ ಪ್ರಥಮ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಯೋಜನಾ ಪ್ರಾಧಿಕಾರದ ಸಿಬ್ಬಂದಿ ಇರುವುದನ್ನು ಗಮನಿಸದೆ ಮುಖ್ಯದ್ವಾರಕ್ಕೆ ಬೀಗ ಹಾಕಲಾಗಿದೆ. ಕೆಲಸ ಮುಗಿಸಿ ಹೊರಬರಲು ಬಂದ ಸಿಬ್ಬಂದಿ ಮುಖ್ಯದ್ವಾರದ ಬಳಿ ಬೀಗ ಹಾಕಿರುವುದನ್ನು ಕಂಡು ಬೆಚ್ಚಿಬಿದ್ದರು. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ, ಪುರಸಭೆ ಮುಖ್ಯಾಧಿಕಾರಿಗೂ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪುರಸಭೆ ನೌಕರರು ಸ್ಥಳಕ್ಕೆ ಬಂದು ಬೀಗ ತೆರೆಯುವ ಮೂಲಕ ಒಳಗಿದ್ದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಮಗಳನ್ನು ಆಶೀರ್ವದಿಸಲು ಚಿಟ್ಟೆಯ ರೂಪದಲ್ಲಿ ಬಂದ ತಂದೆ, ಮುಂದೇನಾಯ್ತು ನೋಡಿ – Kannada News | Father disguised as a butterfly to greet daughter at wedding

ತಾಯಿಯು ತನ್ನ ಮಗುವನ್ನು ಒಂಬತ್ತು ತಿಂಗಳು ಗರ್ಭದಲ್ಲಿಟ್ಟುಕೊಂಡರೆ, ತಂದೆ (father) ತನ್ನ ಹೆಗಲ ಮೇಲೆ ಕೂರಿಸಿಕೊಂಡು ಪ್ರಪಂಚವನ್ನು ತೋರಿಸುತ್ತಾನೆ. ಅಪ್ಪ ಅಂದ್ರೆನೇ ಆಕಾಶನೇ. ತಂದೆಗೂ ತನ್ನ ಮಗಳೆಂದರೆ ಜೀವಕ್ಕಿಂತಲೂ ಹೆಚ್ಚು. ತಂದೆ ಇಲ್ಲದ ಮಗಳು ತನ್ನ ಮದುವೆಯ ದಿನ ಅಪ್ಪನು ಹೇಳಿದ ಮಾತಿನಂತೆ ನಡೆದದ್ದನ್ನು ಕಂಡು ಭಾವುಕಳಾಗಿದ್ದಾಳೆ. ಈ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಿಮ್ಮನ್ನು ಹಾರೈಸಲು ಬಂದಿದ್ದಾರೆ ಎಂದು ಕಾಮೆಂಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಸೈನ್ಸ್ ಗರ್ಲ್’ (@sciencegirl) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ಗೆ ‘ಪ್ರೀತಿ ಎಂಬುದು ಕಣ್ಣಿಗೆ ಕಾಣದ ರೂಪದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಶೀರ್ಷಿಕೆ ನೀಡಲಾಗಿದೆ.

ವೈರಲ್‌ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಹೊಸದಾಗಿ ಮದುವೆಯಾದ ಜೋಡಿ ವೇದಿಕೆಯ ಮೇಲೆ ನಿಂತಿರುವುದನ್ನು ಕಾಣಬಹುದು. ಹಾರಿಬಂದ ಚಿಟ್ಟೆಯೊಂದು ವಧುವಿನ ಸುತ್ತಲೂ ಸುಳಿದು, ಆಕೆಯ ಕೈಯಲ್ಲಿದ್ದ ಹೂವಿನ ಬೊಕ್ಕೆಯ ಮೇಲೆ ಕುಳಿತಿದೆ.. ಆ ಬಳಿಕ ತಲೆಯ ಮೇಲೆ ಧರಿಸಿದ್ದ ದುಪಟ್ಟಾದ ಮೇಲೆ ಕುಳಿತು ಆಶೀರ್ವಾದ ಮಾಡಿದ್ದಂತೆ ಕಾಣಿಸುತ್ತಿದೆ. ಇದೇ ವೇಳೆ ಚಿಟ್ಟೆಯ ರೂಪದಲ್ಲಿ ತಂದೆ ಬಂದಿದ್ದಾರೆ ಎಂದು ನೆನೆದು ವಧು ಭಾವುಕಳಾಗಿದ್ದಾಳೆ. ಆಕೆಯ ಪತಿಯೂ ಚಿಟ್ಟೆಯನ್ನು ಓಡಿಸುತ್ತಿರುವ ದೃಶ್ಯವನ್ನು ಕಾಣಬಹುದು

ಇದನ್ನೂ ಓದಿ: ಮಗಳ ಭವಿಷ್ಯಕ್ಕಾಗಿ ತಂದೆಯ ಹೋರಾಟ; ತನ್ನ ಆಟೋದಲ್ಲಿ ಮಗಳನ್ನು ಮಲಗಿಸಿ ಆಟೋ ಓಡಿಸುವ ವ್ಯಕ್ತಿ

ಈ ವಿಡಿಯೋ ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡಿದ್ದು, ಒಬ್ಬ ಬಳಕೆದಾರ, ದೈಹಿಕವಾಗಿ ಅಪ್ಪ ಇಲ್ಲದಿದ್ದರೂ ಮಾನಸಿಕವಾಗಿ ಅಪ್ಪ ಜೀವಂತ ಎಂದು ಹೇಳಿದ್ದಾರೆ. ಇನ್ನೊಬ್ಬರು, ಅಪ್ಪನ ಆಗಮನ ಮಗಳಿಗೆ ಎಷ್ಟು ಖುಷಿ ತಂದಿದ್ದೆ ಎನ್ನುವುದನ್ನು ಆಕೆಯ ಕಣ್ಣೀರೇ ಹೇಳುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅಪ್ಪನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಂಚ ಪಡೆಯುವಾಗ ರೆಡ್​ ಹ್ಯಾಂಡೆಡ್ ಲೋಕಾಯುಕ್ತ ಬಲೆಗೆ ಬಿದ್ದ ಪಿಡಬ್ಲ್ಯುಡಿ ಅಧಿಕಾರಿಗಳು! – Kannada News | Vijayanagara PWD Officials Trapped by Lokayukta for rs 1 Lakh Bribe

ವಿಜಯನಗರ, ಫೆಬ್ರವರಿ 11: ಕಾಮಗಾರಿ ಬಿಲ್ ಮಂಜೂರು ಮಾಡಲು 1 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕೋಪಯೋಗಿ ಇಲಾಖೆ (PWD) ಎಕ್ಸಿಕ್ಯೂಟಿವ್ ಎಂಜಿನಿಯರ್ ದೇವದಾಸ್ ಮತ್ತು ಅಕೌಂಟೆಂಟ್ ಮಾರುತಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆಯ ಪಿಡಬ್ಲ್ಯುಡಿ ಕಚೇರಿಯಲ್ಲಿ ಈ ಟ್ರ್ಯಾಪ್ ಕಾರ್ಯಾಚರಣೆ ನಡೆದಿದೆ.

ಹೂವಿನ ಹಡಗಲಿಯ ಮಹೇಶ್ ಹಲಗೇರಿ ಎಂಬ ಗುತ್ತಿಗೆದಾರರು ಲೋಕೋಪಯೋಗಿ ಇಲಾಖೆಯ ಕಾಮಗಾರಿ ಟೆಂಡರ್ ಪಡೆದು ಕೆಲಸ ಪೂರ್ಣಗೊಳಿಸಿದ್ದರು. ಆದರೆ ಕಾಮಗಾರಿಯ ಬಿಲ್ ಬಿಡುಗಡೆ ಮಾಡಲು ದೇವದಾಸ್ ಹಾಗೂ ಅಕೌಂಟೆಂಟ್ ಮಾರುತಿ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸತ್ತ ಮಹೇಶ್ ಹಲಗೇರಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಎಸ್ ಛಲವಾದಿ ನೇತೃತ್ವದಲ್ಲಿ ಪಿಐಗಳಾದ ರಾಜೇಶ್ ಲಮಾಣಿ, ಅಮರೇಶ್ ಹುಬ್ಬಳ್ಳಿ ಹಾಗೂ ಸಿಬ್ಬಂದಿ ಟ್ರ್ಯಾಪ್ ನಡೆಸಿ, ಲಂಚದ ಹಣ ಸ್ವೀಕರಿಸುವಾಗ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಈ ಮೊದಲೂ ಲಂಚ ಪಡೆಯುತ್ತಾ ರೆಡ್​ಹ್ಯಾಂಡೆಡ್ ಆಗಿ ಸಿಕ್ಕಿದ್ದ ಅಧಿಕಾರಿಗಳು

ಕಳೆದ ತಿಂಗಳು ಕಲಬುರಗಿಯಲ್ಲಿ ಕಮಲಾಪುರ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಶಶಿಕುಮಾರ್ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಂದ ಬಂಧಿಸಲ್ಪಟ್ಟಿದ್ದರು. ಜಮೀನು ದಾಖಲೆಗಳನ್ನು ನೀಡುವ ವಿಚಾರದಲ್ಲಿ ಪುಟ್ಟ ಕಿಶನ್ ರಾಥೋಡ್ ಅವರಿಂದ 20,000 ರೂ.ಗಿಂತ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿತ್ತು. ಈ ಕುರಿತು ಕಿಶನ್ ನೀಡಿದ ದೂರಿನ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಹಣ ಸ್ವೀಕರಿಸುವ ಕ್ಷಣದಲ್ಲೇ ಶಶಿಕುಮಾರ್ ಅವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದರು.

ಇದನ್ನೂ ಓದಿ ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ಕೈಗೆ ಸಿಕ್ಕಿಬಿದ್ದ ಎಫ್​ಡಿಎ!

ಇನ್ನೊಂದು ಪ್ರಕರಣದಲ್ಲಿ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು 4 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಚೀಟಿ ವ್ಯವಹಾರ ಪ್ರಕರಣದಲ್ಲಿ ಬೆದರಿಕೆ ಹಾಕಿ ಒಟ್ಟು 5 ಲಕ್ಷ ರೂ. ಬೇಡಿಕೆ ಇಟ್ಟಿದ್ದರೆಂದು ದೂರಿನಲ್ಲಿ ಉಲ್ಲೇಖವಾಗಿತ್ತು. ಈಗಾಗಲೇ 1 ಲಕ್ಷ ರೂ. ಪಡೆದಿದ್ದ ಅವರು, ಉಳಿದ ಹಣ ಸ್ವೀಕರಿಸುವಾಗ ಟ್ರ್ಯಾಪ್ ಆಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮದುವೆಯಾಗಿ ಇಬ್ಬರು ಮಕ್ಕಳಿರೋದನ್ನು ಮುಚ್ಚಿಟ್ಟು ಯುವಕನೊಂದಿಗೆ ವಿವಾಹವಾದ ಮಹಿಳೆ! ಆಮೇಲೇನಾಯ್ತು ಗೊತ್ತೇ?

Source link

ಭಾರತೀಯರ ಬ್ಯಾಟ್​​ನಲ್ಲಿ ರಬ್ಬರ್ ಇದೆ: ಹೊಸ ಚರ್ಚೆ ಹುಟ್ಟುಹಾಕಿದ ಲಂಕಾ ಕ್ರಿಕೆಟಿಗ – Kannada News | Indian players using rubber coated Bat: Bhanuka Rajapaksa

ಭಾರತೀಯರು ಬಳಸುವ ಬ್ಯಾಟ್​ಗೆ ರಬ್ಬರ್ ಪದರ ಅನ್ವಯಿಸಲಾಗುತ್ತಿದೆ. ಇದರಿಂದ ಅವರು ಸುಲಭವಾಗಿ ರನ್​ಗಳಿಸುತ್ತಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟಿಗ ಭಾನುಕಾ ರಾಜಪಕ್ಸೆ ಗಂಭೀರ ಆರೋಪ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಭಾನುಕಾ, ಭಾರತೀಯ ಆಟಗಾರರು ಬಳಸುವ ಬ್ಯಾಟ್ ವಿಶೇಷವಾಗಿರುತ್ತದೆ. ಅಂತಹ ಬ್ಯಾಟ್​ಗಳು ಎಲ್ಲೂ ಸಿಗುವುದಿಲ್ಲ ಎಂಬುದೇ ಅಚ್ಚರಿ.

ಭಾರತೀಯ ಆಟಗಾರರ ಬಳಿ ಇರುವ ಬ್ಯಾಟ್‌ಗಳು ನಾವು ಖರೀದಿಸುವ ಅತ್ಯುತ್ತಮ ಬ್ಯಾಟ್‌ಗಳಿಗಿಂತ ಬಹಳ ಶ್ರೇಷ್ಠವಾಗಿರುತ್ತವೆ. ಅದರ ಮೇಲೆ ರಬ್ಬರ್ ಪದರವನ್ನು ಅನ್ವಯಿಸಿದಂತೆ ಭಾಸವಾಗುತ್ತದೆ. ಅದು ಹೇಗೆ ಸಾಧ್ಯ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಅಂತಹ ಬ್ಯಾಟ್​ಗಳು ಇತರರಿಗೆ ಸಿಗುವುದಿಲ್ಲ. ಈ ವಿಚಾರ ಎಲ್ಲರಿಗೂ ತಿಳಿದಿದೆ ಎಂದು ಭಾನುಕಾ ರಾಜಪಕ್ಸೆ ಹೇಳಿದ್ದಾರೆ.

ಟೀಮ್ ಇಂಡಿಯಾ ಆಟಗಾರರ ಬ್ಯಾಟ್ ಮೇಲೆ ರಬ್ಬರ್ ಪದರ ಇರುವುದರಿಂದ ಅವರು ಸುಲಭವಾಗಿ ರನ್​ಗಳಿಸುತ್ತಿದ್ದಾರೆ. ಅಂತಹ ಬ್ಯಾಟ್​ಗಳು ಇತರೆ ದೇಶದ ಆಟಗಾರರಿಗೆ ಸಿಗುವುದಿಲ್ಲ. ಅಲ್ಲದೆ ಅಂತಹ ಬ್ಯಾಟ್​​ಗಳನ್ನು ಇತರರು ಖರೀದಿಸಲು ಸಹ ಸಾಧ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟಿಗ ಹೇಳಿದ್ದಾರೆ.

ಭಾನುಕಾ ರಾಜಪಕ್ಸೆಯ ಈ ಹೇಳಿಕೆಯು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಅದರಲ್ಲೂ ಪರೋಕ್ಷವಾಗಿ ಭಾರತೀಯರು ನಿಯಮಬಾಹಿರ ಬ್ಯಾಟ್​ಗಳನ್ನು ಬಳಸುತ್ತಿದ್ದಾರೆ ಎಂದು ರಾಜಪಕ್ಸೆ ಆರೋಪಿಸಿದ್ದಾರೆ. ಹೀಗಾಗಿಯೇ ಈ ವಿಷಯವು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಇತ್ತ ತನ್ನ ಹೇಳಿಕೆಯು ಮಹತ್ವ ಪಡೆದುಕೊಳ್ಳುತ್ತಿದ್ದಂತೆ ಭಾನುಕಾ ರಾಜಪಕ್ಸೆ ಯೂಟರ್ನ್ ಹೊಡೆದಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿರುವ ಅವರು, ಸಂದರ್ಶನದಲ್ಲಿನ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಅನುವಾದದಲ್ಲಿ ವ್ಯತ್ಯಾಸಗಳಾಗಿವೆ.

ನನ್ನ ಮಾತು ಹೊಗಳಿಕೆಯ ಉದ್ದೇಶವಾಗಿತ್ತು. ಭಾರತೀಯ ಕ್ರಿಕೆಟ್, ಅದರ ವ್ಯವಸ್ಥೆಗಳು ಮತ್ತು ಮೂಲಸೌಕರ್ಯದಿಂದ ಅದರ ಸಲಕರಣೆಗಳ ಮಾನದಂಡಗಳವರೆಗೆ ನಂಬಲಾಗದಷ್ಟು ಮುಂದುವರೆದಿದೆ. ಅವರ ಬ್ಯಾಟ್ ತಯಾರಕರು ನಿಜವಾಗಿಯೂ ವಿಶ್ವದ ಅತ್ಯುತ್ತಮ ತಯಾರಕರಲ್ಲಿ ಒಬ್ಬರು. ಇದನ್ನೇ  ನಾನು ಭಾರತೀಯರು ಬಳಸುವ ಬ್ಯಾಟ್​ ಅತ್ಯುತ್ತಮವಾಗಿದೆ ಅಂದಿರುವುದು. ಇದನ್ನು ಬೇರೆ ಅರ್ಥದಲ್ಲಿ ಅನುವಾದಿಸಲಾಗಿದೆ ಎಂದು ಭಾನುಕಾ ರಾಜಪಕ್ಸೆ ಸ್ಪಷ್ಟೀಕರಣ ನೀಡಿದ್ದಾರೆ.

ಐಸಿಸಿ ನಿಯಮ ಹೇಳುವುದೇನು?

ಅಂತರಾಷ್ಟ್ರೀಯ ಕ್ರಿಕೆಟ್ ನಿಯಮಗಳ ಪ್ರಕಾರ ಬ್ಯಾಟ್ ತಯಾರಿಕೆಯಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮಗಳಿವೆ. ಆ ನಿಯಮಗಳಾವುವು ಎಂದು ನೋಡುವುದಾದರೆ…

  • ಬ್ಯಾಟ್‌ಗಳನ್ನು ಕೇವಲ ಮರದಿಂದ ಮಾತ್ರ ತಯಾರಿಸಬೇಕು. ಒಳಗೆ ರಬ್ಬರ್ ಅಥವಾ ಇತರ ಯಾವುದೇ ಶಕ್ತಿ ವರ್ಧಕ ವಸ್ತುಗಳನ್ನು ಬಳಸುವುದು ನಿಯಮಬಾಹಿರ.
  • ಪಂದ್ಯದ ಅಧಿಕಾರಿಗಳು ನಿಯಮಿತವಾಗಿ ಆಟಗಾರರ ಕ್ರೀಡಾ ಸಲಕರಣೆಗಳನ್ನು ತಪಾಸಣೆ ಮಾಡುತ್ತಾರೆ. ಈ ವೇಳೆ ಬ್ಯಾಟ್ ಅನ್ನು ಸಹ ಪರಿಶೀಲಿಸಲಾಗುತ್ತದೆ.

ಇದನ್ನೂ ಓದಿ: ಅಲೆನ್ ಆರ್ಭಟಕ್ಕೆ ಅಭಿಷೇಕ್ ವಿಶ್ವ ದಾಖಲೆ ಉಡೀಸ್

ಇನ್ನು ಭಾರತೀಯ ಆಟಗಾರರು ಬಳಸುವ SG, SS ನಂತಹ ಬ್ರ್ಯಾಂಡ್‌ಗಳ ಬ್ಯಾಟ್​ಗಳನ್ನು ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಲ್ಪಟ್ಟಿರುತ್ತವೆಯೇ ಹೊರತು ಅವುಗಳಲ್ಲಿ ಯಾವುದೇ ಕಾನೂನುಬಾಹಿರ ಮಾರ್ಪಾಡುಗಳಿರುವುದಿಲ್ಲ.

ಅಲ್ಲದೆ SG, SS ಮತ್ತು MRF ಬ್ಯಾಟ್​ಗಳಿಗಾಗಿ ಅತ್ಯುನ್ನತ ದರ್ಜೆಯ ‘ಗ್ರೇಡ್ 1’ ಇಂಗ್ಲಿಷ್ ವಿಲೋ ಮರವನ್ನು ಬಳಸಲಾಗುತ್ತದೆ. ಈ ಮರವು ನೈಸರ್ಗಿಕವಾಗಿಯೇ ಹೆಚ್ಚು “ಪಿಂಗ್” (ಚೆಂಡು ತಗುಲಿದಾಗ ಚಿಮ್ಮುವ ಶಕ್ತಿ) ಹೊಂದಿರುತ್ತದೆ.

ಹಾಗೆಯೇ ಅತ್ಯುತ್ತಮ ಪ್ರೆಸ್ಸಿಂಗ್​ನೊಂದಿಗೆ ಬ್ಯಾಟ್​ನ ಪಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತದೆ. ಇದು ನೋಡುಗರಿಗೆ ರಬ್ಬರ್ ತರಹದ ಎಫೆಕ್ಟ್ ನೀಡಬಹುದು. ಇದೇ ಕಾರಣದಿಂದಾಗಿ ಭಾನುಕಾ ರಾಜಪಕ್ಸೆ ಕೂಡ ಭಾರತೀಯರ ಬ್ಯಾಟ್​ ಮೇಲೆ ರಬ್ಬರ್ ಕೋಟಿಂಗ್ ಇರುವಂತೆ ಭಾಸವಾಗುತ್ತದೆ ಎಂದಿರುವುದು.

Source link

Mahalakshmi Rajayoga: ಜೀವನವನ್ನೇ ಬದಲಾಯಿಸುವ ಮಹಾನ್ ಶಕ್ತಿ ಮಹಾಲಕ್ಷ್ಮೀ ರಾಜಯೋಗದ ಬಗ್ಗೆ ಮಾಹಿತಿ ಇಲ್ಲಿದೆ – Kannada News | Mahalakshmi Rajayoga: Unlocking Wealth and Success in Vedic Astrology

ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನ ಮತ್ತು ಸಂಚಾರಗಳು ವ್ಯಕ್ತಿಯ ಜೀವನದ ಮೇಲೆ ಮಹತ್ವದ ಪ್ರಭಾವ ಬೀರುತ್ತವೆ ಎಂದು ನಂಬಲಾಗುತ್ತದೆ. ಒಂಬತ್ತು ಗ್ರಹಗಳು ಕಾಲಕ್ರಮೇಣ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುವಾಗ ವಿವಿಧ ಶುಭ ಹಾಗೂ ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಅವುಗಳಲ್ಲಿ ಅತ್ಯಂತ ಶುಭಕರ ಮತ್ತು ಶಕ್ತಿಶಾಲಿ ಯೋಗಗಳಲ್ಲಿ ಒಂದು ಮಹಾಲಕ್ಷ್ಮಿ ರಾಜಯೋಗ. ಈ ಯೋಗವು ಬಹಳ ವಿರಳವಾಗಿ ಕೆಲವೇ ಜಾತಕಗಳಲ್ಲಿ ಕಾಣಿಸಿಕೊಳ್ಳುವುದರಿಂದ, ಅದನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಯೋಗ ಹೊಂದಿರುವವರ ಜೀವನದಲ್ಲಿ ಧನ, ವೈಭವ, ಗೌರವ ಮತ್ತು ಸಾಮಾಜಿಕ ಪ್ರತಿಷ್ಠೆ ಸ್ವಾಭಾವಿಕವಾಗಿ ಲಭಿಸುತ್ತವೆ.

ಮಹಾಲಕ್ಷ್ಮಿ ರಾಜಯೋಗವು ಲಗ್ನ ಜಾತಕದಲ್ಲಿ ಮಂಗಳ (ಕುಜ) ಮತ್ತು ಚಂದ್ರ ಒಂದೇ ಭಾವದಲ್ಲಿ ಸೇರುವುದರಿಂದ ರೂಪುಗೊಳ್ಳುತ್ತದೆ. ವಿಶೇಷವಾಗಿ ಈ ಸಂಯೋಗ ಎರಡನೇ, ಒಂಬತ್ತನೇ, ಹತ್ತನೇ ಅಥವಾ ಹನ್ನೊಂದನೇ ಭಾವಗಳಲ್ಲಿ ಇದ್ದರೆ, ಯೋಗದ ಪರಿಣಾಮ ಮತ್ತಷ್ಟು ಬಲವಾಗುತ್ತದೆ ಎಂದು ಹೇಳಲಾಗುತ್ತದೆ. ಈ ಗ್ರಹಗಳ ಸಂಯೋಗ ವ್ಯಕ್ತಿಯ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ನೀಡುವ ಜೊತೆಗೆ ಜೀವನದಲ್ಲಿ ಆರ್ಥಿಕ ಸ್ಥಿರತೆ ಮತ್ತು ಯಶಸ್ಸನ್ನು ತರಲು ಸಹಾಯಕವಾಗುತ್ತದೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಈ ಯೋಗದ ಪ್ರಭಾವ ಇರುವವರು ಕಡಿಮೆ ಪ್ರಯತ್ನದಲ್ಲೇ ಹೆಚ್ಚಿನ ಸಾಧನೆಗಳನ್ನು ಗಳಿಸುವ ಸಾಧ್ಯತೆ ಹೊಂದಿರುತ್ತಾರೆ. ಅವರಿಗೆ ಆರ್ಥಿಕ ಸಂಕಷ್ಟಗಳು ಕಡಿಮೆಯಾಗಿದ್ದು, ಉದ್ಯೋಗ, ವ್ಯಾಪಾರ, ಹೂಡಿಕೆ ಅಥವಾ ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ನಿರಂತರ ಪ್ರಗತಿ ಸಾಧಿಸುತ್ತಾರೆ. ಜೊತೆಗೆ ಸಮಾಜದಲ್ಲಿ ಗೌರವ ಮತ್ತು ಪ್ರಭಾವ ಹೆಚ್ಚಾಗಿ, ನಾಯಕತ್ವ ಗುಣಗಳು ಬೆಳೆಯುತ್ತವೆ.

ಒಟ್ಟಾರೆ, ಮಹಾಲಕ್ಷ್ಮಿ ರಾಜಯೋಗವು ಲಕ್ಷ್ಮೀ ದೇವಿಯ ಕೃಪೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಯೋಗವಿರುವವರ ಜೀವನದಲ್ಲಿ ಸಮೃದ್ಧಿ, ಸಂತೋಷ ಮತ್ತು ಯಶಸ್ಸು ಸದಾ ಜೊತೆಯಾಗಿರುತ್ತದೆ ಎಂದು ವೈದಿಕ ಜ್ಯೋತಿಷ್ಯ ತಿಳಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಸತ್ತಿನಲ್ಲಿ ರಾಜಕೀಯ ಸಮರ, ಮಾರ್ಚ್​ 9ರಂದು ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯತೆ – Kannada News | Lok Sabha Speaker Om Birla No Confidence Motion: March 9 Vote Likely, Key Details here

ನವದೆಹಲಿ, ಫೆಬ್ರವರಿ 11: ಲೋಕಸಭಾ ಸ್ಪೀಕರ್ ಓಂ ಬಿರ್ಲಾ(Om Birla) ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಮಾರ್ಚ್ 9 ರಂದು ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ. ಓಂ ಬಿರ್ಲಾ ಅವರನ್ನು ಲೋಕಸಭಾ ಸ್ಪೀಕರ್ ಹುದ್ದೆಯಿಂದ ಪದಚ್ಯುತಗೊಳಿಸುವ ಪ್ರಕ್ರಿಯೆಯನ್ನು ವಿರೋಧ ಪಕ್ಷಗಳು ಆರಂಭಿಸಿರುವಂತೆಯೇ ಈ ಬೆಳವಣಿಗೆ ಸಂಭವಿಸಿದೆ.

ಕಾಂಗ್ರೆಸ್(Congress) ಪಕ್ಷವು ಇತರೆ ವಿರೋಧ ಪಕ್ಷಗಳೊಂದಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ಗೊತ್ತುವಳಿಯ ನೋಟಿಸ್​ ಅನ್ನು ಲೋಕಸಭಾ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಅವರಿಗೆ ಫೆಬ್ರವರಿ 10ರಂದು ಸಲ್ಲಿಸಿತ್ತು. ಇದಾದ ಬಳಿಕ ಓಂ ಬಿರ್ಲಾ ಸದನದಿಂದ ಹಿಂದೆ ಸರಿದಿದ್ದಾರೆ.

ಸಂವಿಧಾನದ 96ನೇ ವಿಧಿ ಏನು ಹೇಳುತ್ತೆ?
ಸಂವಿಧಾನದ 94C ವಿಧಿಯು ಲೋಕಸಭೆಯ ಸ್ಪೀಕರ್ ಅಥವಾ ಉಪ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವ ನಿಬಂಧನೆಗಳ ಬಗ್ಗೆ ಹೇಳುತ್ತದೆ. ಸಂವಿಧಾನದ 96 ನೇ ವಿಧಿಯು ಸ್ಪೀಕರ್‌ಗೆ ಸದನದಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಸ್ಪೀಕರ್ ಅನ್ನು ಪದಚ್ಯುತಗೊಳಿಸುವ ನಿರ್ಣಯದ ಮೇಲೆ ಸ್ಪೀಕರ್ ತಮ್ಮ ಮತ ಚಲಾಯಿಸಬಹುದು, ಆದರೆ ಸಮಬಲದ ಸಂದರ್ಭದಲ್ಲಿ ಮತದಾನದಿಂದ ದೂರವಿರಬಹುದು.

ಮತ್ತಷ್ಟು ಓದಿ: ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ನೋಟಿಸ್, ಸಹಿ ಹಾಕಲ್ಲ ಎಂದ ಟಿಎಂಸಿ ಶಾಸಕರು

ಲೋಕಸಭೆಯಲ್ಲಿ ಗದ್ದಲ
ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಭಾರತ-ಚೀನಾ ಸಂಘರ್ಷವನ್ನು ಉಲ್ಲೇಖಿಸುವ ಪುಸ್ತಕದ ಆಯ್ದ ಭಾಗವನ್ನು ಓದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸ್ಪೀಕರ್ ಅವಕಾಶ ನೀಡದ ಕಾರಣ ಫೆಬ್ರವರಿ 2 ರಿಂದ ಲೋಕಸಭೆಯಲ್ಲಿ ಗದ್ದಲ ಉಂಟಾಗಿದೆ. ಫೆಬ್ರವರಿ 4 ರಂದು ವಿರೋಧ ಪಕ್ಷಗಳು ಸೃಷ್ಟಿಸಿದ ಗದ್ದಲದಿಂದಾಗಿ, ಪ್ರಧಾನಿ ಮೋದಿಯವರು ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಲು ಸಾಧ್ಯವಾಗಲಿಲ್ಲ ಮತ್ತು ಫೆಬ್ರವರಿ 5 ರಂದು ಪ್ರಧಾನಿ ಭಾಷಣವಿಲ್ಲದೆಯೇ ವಂದನಾ ನಿರ್ಣಯವನ್ನು ಅಂಗೀಕರಿಸಲಾಯಿತು.

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂಬ ವಿರೋಧ ಪಕ್ಷದ ಆರೋಪ ಸೇರಿದಂತೆ 4 ಘಟನೆಗಳನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಚೀನಾದೊಂದಿಗಿನ 2020 ರ ಬಿಕ್ಕಟ್ಟನ್ನು ಪ್ರಸ್ತಾಪಿಸುವಾಗ ಗಾಂಧಿಯವರು ಜನರಲ್ ಎಂಎಂ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯನ್ನು ಉಲ್ಲೇಖಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link