All posts by nagaraj11081993

ವೈಭವ್ ಸೂರ್ಯವಂಶಿ ನಿರ್ದೋಷಿ; ಶ್ರೀಲಂಕಾದ ಇಬ್ಬರು ಕ್ರಿಕೆಟಿಗರಿಗೆ ದಂಡ ವಿಧಿಸಿದ ರೆಫರಿ – Kannada News | India A vs SL A: Dambulla Cricket Controversy! Two Sri Lanka Players Punished, Sooryavanshi Spared?

ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆದಿದ್ದ ಭಾರತ ಎ ಹಾಗೂ ಶ್ರೀಲಂಕಾ ಎ ತಂಡಗಳ ನಡುವಿನ ಪಂದ್ಯದಲ್ಲಿ ಉಂಟಾಗಿದ್ದ ವಿವಾದದ ಪರಿಣಾಮವಾಗಿ ಇಬ್ಬರು ಆಟಗಾರರಿಗೆ ಮ್ಯಾಚ್ ರೆಫರಿ ಶಿಕ್ಷೆ ವಿಧಿಸಿದ್ದಾರೆ. ಅಚ್ಚರಿ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಯಾರಿಗೆ ಶಿಕ್ಷೆಯಾಗಬೇಕೆಂಬ ಮಾತುಗಳು ಕೇಳಿಬಂದಿದ್ದವೋ ಅವರಿಗೆ ಯಾವುದೇ ಶಿಕ್ಷೆಯನ್ನು ವಿಧಿಸಲಾಗಿಲ್ಲ. ವಾಸ್ತವವಾಗಿ ಉಭಯ ತಂಡಗಳ ನಡುವಿನ ಈ ಪಂದ್ಯದ ಕೊನೆಯಲ್ಲಿ ಶ್ರೀಲಂಕಾ ತಂಡದ ಆಟಗಾರರು ಹಾಗೂ ಭಾರತದ ವೈಭವ್ ಸೂರ್ಯವಂಶಿ ನಡುವೆ ವಾಗ್ವಾದ ನಡೆದಿತ್ತು. ಇದೀಗ ಈ ವಾಗ್ವಾದಕ್ಕೆ ಪ್ರಮುಖ ಕಾರಣೀಕೃತರಾಗಿದ್ದ ಶ್ರೀಲಂಕಾದ ವಿಷೇನ್ ಹಲಂಬಗೆ ಹಾಗೂ ನಿರೋಷನ್ ಡಿಕ್ವೆಲ್ಲಾ ಅವರಿಗೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.

ಶ್ರೀಲಂಕಾದ ಇಬ್ಬರಿಗೆ ಶಿಕ್ಷೆ

ಪಂದ್ಯ ಮುಗಿದ ಒಂದು ದಿನದ ಬಳಿಕ ಇಡೀ ಘಟನೆಯ ಬಗ್ಗೆ ಕುಲಂಕುಶವಾಗಿ ತನಿಖೆ ನಡೆಸಿರುವ ಪಂದ್ಯದ ರೆಫರಿ ಪ್ರದೀಪ್ ಜಯಪ್ರಕಾಶ್‌ದರನ್, ಶ್ರೀಲಂಕಾ ಎ ತಂಡದ ಭಾಗವಾಗಿರುವ ವಿಷೇನ್ ಹಲಂಬಗೆಗೆ ದಂಡ ವಿಧಿಸಿದ್ದಾರೆ. ಇದರರ್ಥ ಇಡೀ ಘಟನೆಯಲ್ಲಿ ವಿಷೇನ್ ಹಲಂಬಗೆ ತಪ್ಪಿತಸ್ಥನೆಂದು ಸಾಭೀತಾಗಿದೆ. ಇವರ ಜೊತೆಗೆ ಲಂಕಾ ತಂಡದ ಹಿರಿಯ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಅವರಿಗೂ ಮ್ಯಾಚ್ ರೆಫರಿ ದಂಡ ವಿಧಿಸಿದ್ದಾರೆ. ಆದರೆ ಡಿಕ್ವೆಲ್ಲಾಗೆ ವಿಧಿಸಿರುವ ಶಿಕ್ಷೆಗೂ, ವೈಭವ್ ಸೂರ್ಯವಂಶಿ ಜೊತೆಗಿನ ಜಗಳಕ್ಕೂ ಯಾವುದೇ ಸಂಬಂಧವಿಲ್ಲ. ಅಂದರೆ ಬೇರೆ ಪ್ರಕರಣದಲ್ಲಿ ಡಿಕ್ವೆಲ್ಲಾಗೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.

ಪ್ರತಿಕ್ರಿಯಿಸಿದ ಬಿಸಿಸಿಐ

ಇನ್ನು ಉಭಯ ಆಟಗಾರರ ನಡುವಿನ ವಾಗ್ವಾದದ ಸಮಯದಲ್ಲಿ ಎದುರಾಳಿ ತಂಡದ ಆಟಗಾರನನ್ನು ತಳ್ಳಿದ್ದ ವೈಭವ್ ಸೂರ್ಯವಂಶಿಗೆ ಶಿಕ್ಷೆಯಾಗಿದೆಯೇ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಘಟನೆ ನಡೆದ ಬಳಿಕ ವೈಭವ್​ಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿತ್ತು. ಆದರೆ ಇದುವರೆಗೆ ಆ ರೀತಿಯ ಯಾವುದೇ ಕ್ರಮವನ್ನು ಬಿಸಿಸಿಐ ತೆಗೆದುಕೊಂಡಿಲ್ಲ. ಏತನ್ಮಧ್ಯೆ, ವೈಭವ್ ಸೂರ್ಯವಂಶಿ ಅವರ ವಾಗ್ವಾದದ ವಿಷಯಕ್ಕೆ ಸಂಬಂಧಿಸಿದ್ದಂತೆ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರತಿಕ್ರಿಯಿಸಿದ್ದು, ವೈಭವ್​ಗೆ ಇತರ ವಿಷಯಗಳ ಮೇಲೆ ಕೇಂದ್ರೀಕರಿಸುವ ಬದಲು ಸರಣಿಯತ್ತ ಗಮನಹರಿಸುವಂತೆ ಸಲಹೆ ನೀಡಿದ್ದಾರೆ.

ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಸೈಕಿಯಾ, ‘ಭಾರತ ಎ ತಂಡವು ಪ್ರಮುಖ ಪಂದ್ಯಾವಳಿಯನ್ನು ಆಡುತ್ತಿದೆ, ಇದರಲ್ಲಿ ಭಾರತದ ಹಿರಿಯ ತಂಡಕ್ಕೆ ಸ್ಥಾನ ಪಡೆಯುವ ಎಲ್ಲಾ ಉದಯೋನ್ಮುಖ ಆಟಗಾರರು ಭಾಗವಹಿಸುತ್ತಿದ್ದಾರೆ. ಈ ಆಟಗಾರರು ಪ್ರಮುಖ ಪಂದ್ಯಾವಳಿಯಲ್ಲಿ ಆಡುತ್ತಿದ್ದಾರೆ, ಆದ್ದರಿಂದ ಅವರು ಇತರ ಸಮಸ್ಯೆಗಳಿಂದ ವಿಚಲಿತರಾಗುವ ಬದಲು ತಮ್ಮ ಆಟದತ್ತ ಗಮನ ಹರಿಸಬೇಕು’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕನ್ನಡಿಗರ ಎಚ್ಚರಿಕೆಯಿಂದ ರದ್ದಾಗಿದ್ದ ರೈಲ್ವೆ ಬಡ್ತಿ ಪರೀಕ್ಷೆಗೆ ಮರುದಿನಾಂಕ ನಿಗದಿ, ಈ ಬಾರಿಯೂ ಕನ್ನಡಕ್ಕೆ ಕೊಕ್‌ – Kannada News | railway department Once Again fixed promotion exam On June 25 without Kannada option

ಬೆಂಗಳೂರು, (ಜೂನ್ 16): ರೈಲ್ವೆ ಇಲಾಖೆ  (Railway department) ತನ್ನ ಹಠಮಾರಿತನ ಮುಂದುವರೆಸಿದೆ. ಹೌದು.. ನೈಋತ್ಯ ರೈಲ್ವೆ  (Southwestern Railway) ಮೈಸೂರು ವಿಭಾಗದ ಗೂಡ್ಸ್‌ ಟ್ರೇನ್‌ ಮ್ಯಾನೇಜರ್‌ ಹುದ್ದೆಯ ಪದೋನ್ನತಿ ಪರೀಕ್ಷೆಯಲ್ಲಿ ಮತ್ತೊಮ್ಮೆ ಕನ್ನಡವನ್ನು (Kannada) ಕಡೆಗಣಿಸಲಾಗಿದೆ. ಈ ಹಿಂದೆ ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ನೀಡಿಲ್ಲವೆಂದು ಕನ್ನಡಪರ ಸಂಘಟನೆಗಳ ಖಡಕ್ ಎಚ್ಚರಿಕೆ ಬೆನ್ನಲ್ಲೇ ಎಕ್ಸಾಂ ರದ್ದುಗೊಳಿಸಿತ್ತು. ಇದೀಗ ಮತ್ತೊಮ್ಮೆ ಕನ್ನಡಕ್ಕೆ ಕೊಕ್ ನೀಡಿ ಜೂನ್ 25ರಂದು ಪರೀಕ್ಷೆಗೆ ಮರುದಿನಾಂಕ ನಿಗದಿ ಮಾಡಿದ್ದು, ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯು ಜೂನ್ 25ರಂದು ನಿಗದಿಯಾಗಿರುವ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಮುಖ್ಯಾಂಶಗಳು

  • ಕನ್ನಡಿಗರ ಎಚ್ಚರಿಕೆಗೆ ರದ್ದಾಗಿದ್ದ ರೈಲ್ವೆ ಬಡ್ತಿ ಪರೀಕ್ಷೆಗೆ ಮರುದಿನಾಂಕ ನಿಗದಿ
  • ಇದೇ ಜೂನ್ 25ರಂದು ಪರೀಕ್ಷೆಗೆ ಅಧಿಸೂಚನೆ
  • ಈ ಬಾರಿಯೂ ಕನ್ನಡಕ್ಕೆ ಅವಕಾಶ ನೀಡದೇ ಪರೀಕ್ಷೆಗೆ ಮರುದಿನಾಂಕ ನಿಗದಿ
  • ರೈಲ್ವೆ ಇಲಾಖೆ ನಡೆಗೆ ಮತ್ತೆ ಸಿಡಿದೆದ್ದ ಕರವೇ ನಾರಾಯಣಗೌಡ

ಕಳೆದ ಬಾರಿಯೂ ರೈಲ್ವೆ ಬಡ್ತಿ ಪರೀಕ್ಷೆಯಲ್ಲೂ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಆದ್ರೆ, ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಇದರಿಂದ ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಲ್ಲಿ ನಡೆಯುತ್ತಿದ್ದ ಪರೀಕ್ಷಾ ಕೇಂದ್ರಗಳಿಗೆ ಕರವೇ ಕಾರ್ಯಕರ್ತರು ನುಗ್ಗಿದ್ರು, ನಂತರ ರೈಲ್ವೆ ಇಲಾಖೆ ಪರೀಕ್ಷೆಯನ್ನು ಮುಂದೂಡಿದ್ದರು. ಇದೀಗ ರೈಲ್ವೆ ಇಲಾಖೆ ತನ್ನ  ಹಠಮಾರಿತನ ಮುಂದುವರೆಸಿದೆ.

ಇದನ್ನೂ ನೋಡಿ: ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ಗೂಡ್ಸ್ ಮ್ಯಾನೇಜರ್ ಎಲ್‌ಡಿಸಿ ಹುದ್ದೆಗಳ ಮುಂಬಡ್ತಿ ಪರೀಕ್ಷೆ ಮುಂದೂಡಿಕೆ

ಕರವೇ ನಾರಾಯಣಗೌಡ ಖಡಕ್ ಎಚ್ಚರಿಕೆ

ನೈರುತ್ಯ ರೈಲ್ವೆಯ ಆಫೀಸ್ ಸೂಪರಿಂಟೆಂಡೆಂಟ್-39ಪೋಸ್ಟ್,ಸೀನಿಯರ್ ಕ್ಲರ್ಕ್- 25 ಮತ್ತು ಇಂಟರ್ಮೀಡಿಯೆಟ್ ಅಪ್ರೆಂಟಿಸ್ ಮೆಕ್ಯಾನಿಕ್ಸ್- 9 ಪೋಸ್ಟ್ ಸೇರಿದಂತೆ ಒಟ್ಟು 73 ಬಡ್ತಿ ಪೋಸ್ಟ್ ಗಾಗಿ ಎಕ್ಸಾಂ ನಡೆಯುತ್ತಿದೆ. ಆದರೆ ನೈರುತ್ಯ ರೈಲ್ವೆ ವಿಭಾಗ ಎಕ್ಸಾಂ ಅನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಬರೆಯಲು ಅವಕಾಶ ನೀಡಿದ್ದಾರೆ. ನೈಋತ್ಯ ರೈಲ್ವೆ ಮುಖ್ಯಸ್ಥರು ಈ ಮೂರು ಸುತ್ತೋಲೆಯ ದೋಷವನ್ನು ಸರಿಪಡಿಸಿ, ಪರೀಕ್ಷೆಗಳನ್ನು ಕನ್ನಡದಲ್ಲೂ ನಡೆಸುವಂತೆ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಜೂನ್ 25 ರಂದು ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ನಡೆಸಲು ಬಿಡುವುದಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ  ಖಡಕ್​ ಆಗಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು, ಕನ್ನಡಿಗರ ಹಕ್ಕುಗಳನ್ನು ಹೊಸಕಿ ಹಾಕುವ ರೈಲ್ವೆ ಇಲಾಖೆಯ ಈ ನಿರ್ಧಾರದ ವಿರುದ್ಧ ಕರವೇ ಉಗ್ರ ಹೋರಾಟ ನಡೆಸಲಿದೆ. ಜೂ. 25ರಂದು ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಂಘಟನೆ ಕಾರ್ಯಕರ್ತರು ಉಗ್ರ ಹೋರಾಟ ನಡೆಸಲಿದ್ದಾರೆ. ಅಲ್ಲಿ ಆಗುವ ಅನಾಹುತಗಳಿಗೆ ಕರವೇ ಜವಾಬ್ದಾರಿಯಲ್ಲ. ರೈಲ್ವೆ ಆಡಳಿತವು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಪರಿಣಾಮಗಳು ತೀವ್ರವಾಗಿರುತ್ತವೆ ಎಂದು ಎಚ್ಚರಿಸಿದ್ದಾರೆ.

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಜೂ.4ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಗೂಡ್ಸ್ ಟ್ರೇನ್ ಮ್ಯಾನೇಜರ್ ಹುದ್ದೆಯನ್ನು ಲೆವೆಲ್-5ರಲ್ಲಿ ಶೇ.15 ಎಲ್‌ಡಿಸಿಇ ಕೋಟಾ ಅಡಿಯಲ್ಲಿ ಭರ್ತಿ ಮಾಡಲಾಗುತ್ತಿದೆ. ಅದಕ್ಕಾಗಿ ಜೂ.25ರಂದು ಕಂಪ್ಯೂಟರ್ ಬೇಸ್ಡ್ ಟೆಸ್ಟ್ (ಸಿಬಿಟಿ) ಪದೋನ್ನತಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಸಿದ್ಧಪಡಿಸಲಾಗುತ್ತಿದ್ದು, ಕನ್ನಡ ಭಾಷೆಗೆ ಅವಕಾಶ ನೀಡಿಲ್ಲ. ಇದು ಕರ್ನಾಟಕದ ಕನ್ನಡಿಗರ ಮೇಲೆ ನಡೆಸುತ್ತಿರುವ ಘೋರ ಅನ್ಯಾಯ ಮತ್ತು ಭಾಷಾ ಹಕ್ಕುಗಳನ್ನು ಕಿತ್ತುಕೊಳ್ಳುವ ದೊಡ್ಡ ಸಂಚಾಗಿದೆ ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮನೆಯಲ್ಲಿ ಈ 7 ಔಷಧೀಯ ಸಸ್ಯಗಳು ಇರಲೇಬೇಕು! ತಪ್ಪದೆ ಬೆಳೆಸಿ ರೋಗಗಳಿಂದ ದೂರವಿರಿ – Kannada News | Best Medicinal Plants For Home That Work Like Natural Remedies

ಪ್ರಕೃತಿ ನೀಡಿರುವ ಅನೇಕ ಸಸ್ಯಗಳಲ್ಲಿ ಔಷಧೀಯ (Medicinal Plants) ಗುಣಗಳು ಅಡಗಿವೆ. ಹಳೆಯ ಕಾಲದಲ್ಲಿ, ಸಣ್ಣಪುಟ್ಟ ಅನಾರೋಗ್ಯಗಳಿಗೆ ಮನೆಯ ಸುತ್ತಮುತ್ತಲಿನ ಸಸ್ಯಗಳನ್ನೇ ಔಷಧಿಯಾಗಿ ಬಳಸಲಾಗುತ್ತಿತ್ತು. ಇಂದಿಗೂ ಕೆಲವು ಸಸ್ಯಗಳನ್ನು ಮನೆಯಲ್ಲೇ ಬೆಳೆಸುವುದರಿಂದ ಆರೋಗ್ಯ ರಕ್ಷಣೆ ಸಾಧ್ಯವಾಗುತ್ತದೆ. ಹಾಗಾದರೆ ಯಾವ ಗಿಡಗಳನ್ನು ಮನೆಯಲ್ಲಿ ಬೆಳೆಸಬೇಕು, ಅದು ಯಾವ ರೋಗಕ್ಕೆ ಮುದ್ದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತುಳಸಿ: ಪ್ರತಿ ಭಾರತೀಯರ ಮನೆಯಲ್ಲೂ ಕಾಣುವ ತುಳಸಿ ಸಸ್ಯವನ್ನು “ಔಷಧಿಗಳ ರಾಣಿ” ಎಂದು ಕರೆಯಲಾಗುತ್ತದೆ. ತುಳಸಿ ಎಲೆಗಳ ರಸ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಶೀತ, ಕೆಮ್ಮು ಮತ್ತು ಗಂಟಲು ನೋವಿಗೆ ಇದು ಸಹಕಾರಿಯಾಗಿದೆ.

ಆಲೋವೆರಾ (Aloe Vera): ಅಲೋವೆರಾ ಅಥವಾ ಲೋಳೆಸರ ಚರ್ಮದ ಆರೈಕೆಗೆ ಮಾತ್ರವಲ್ಲ, ಜೀರ್ಣಕ್ರಿಯೆ ಸುಧಾರಿಸಲು ಮತ್ತು ಸಣ್ಣಪುಟ್ಟ ಸುಟ್ಟ ಗಾಯಗಳನ್ನು ಗುಣಪಡಿಸಲು ಸಹ ಉಪಯೋಗವಾಗುತ್ತದೆ.

ಪುದೀನಾ: ಸಾಮಾನ್ಯವಾಗಿ ಪುದೀನಾ ಎಲೆಗಳು ಬಾಯಿಯ ದುರ್ವಾಸನೆ ಕಡಿಮೆ ಮಾಡುತ್ತವೆ. ಜೊತೆಗೆ ಅಜೀರ್ಣ, ಹೊಟ್ಟೆ ಉಬ್ಬರ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ.

ಕರಿಬೇವು: ಅಡುಗೆಗೆ ಬಳಸುವ ಕರಿಬೇವು ಸುವಾಸನೆ ನೀಡುವುದರ ಜೊತೆಗೆ ಕಣ್ಣಿನ ಆರೋಗ್ಯ ಮತ್ತು ಕೂದಲು ಉದುರುವ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಲೆಮನ್ ಗ್ರಾಸ್: ಲೆಮನ್ ಗ್ರಾಸ್ ಚಹಾ ಸೇವಿಸಿದರೆ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಇದು ಸಹಕಾರಿ.

ಓಂಕಾಳಿನ ಗಿಡ: ಮಕ್ಕಳಿಗೆ ಹೊಟ್ಟೆನೋವು ಬಂದಾಗ ಓಮದ ಅಥವಾ ಓಂಕಾಳಿನ ಎಲೆಗಳ ರಸ ಅಥವಾ ಪರಿಮಳ ತಕ್ಷಣದ ನೆಮ್ಮದಿ ನೀಡುತ್ತದೆ. ಜೀರ್ಣಕ್ರಿಯೆಗೂ ಇದು ಉತ್ತಮ.

ಅಮೃತಬಳ್ಳಿ (Giloy): ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಅಮೃತಬಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಜ್ವರ ಮತ್ತು ಮಧುಮೇಹ ನಿಯಂತ್ರಣಕ್ಕೂ ಇದನ್ನು ಬಳಸಲಾಗುತ್ತದೆ.

ಈ ಸಸ್ಯಗಳನ್ನು ಮನೆಯಲ್ಲೇ ಬೆಳೆಸುವುದರಿಂದ ಶುದ್ಧ ಗಾಳಿಯ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನೂ ಪಡೆಯಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫ್ರಾನ್ಸ್‌ನ ಜಿ7 ಶೃಂಗಸಭೆಯ ಗ್ರೂಪ್ ಫೋಟೋ ವೇಳೆಯೂ ಮೌನವಾಗೇ ನಿಂತ ಟ್ರಂಪ್-ಮೋದಿ – Kannada News | PM Modi joins world leaders for G7 group photo at France with Trump and Macron

ಎವಿಯಾನ್, ಜೂನ್ 16: ಫ್ರಾನ್ಸ್‌ನ ಎವಿಯಾನ್‌ನಲ್ಲಿರುವ ಜಿ7 ಶೃಂಗಸಭೆ 2026ರ ವೇದಿಕೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ಇದಾದ ಬಳಿಕ ಜಿ7 ಶೃಂಗಸಭೆಗೆ ಆಗಮಿಸಿದ್ದ ಜಾಗತಿಕ ನಾಯಕರೆಲ್ಲ ಒಟ್ಟಿಗೇ ಗ್ರೂಪ್ ಫೋಟೋಗೆ ನಿಂತರು. ವಿಶೇಷವೆಂದರೆ, ಈ ಸಂದರ್ಭದಲ್ಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ಅಕ್ಕಪಕ್ಕದಲ್ಲೇ ನಿಂತಿದ್ದರೂ ಮಾತನಾಡದೆ ಮೌನವಾಗಿಯೇ ಇದ್ದರು. ಪ್ರಧಾನಿ ಮೋದಿ ಬೇರೆ ದೇಶಗಳ ನಾಯಕರೊಂದಿಗೆ ನಗುತ್ತಾ ಮಾತನಾಡಿದರೆ ಟ್ರಂಪ್ ಅವರಿಂದ ಮಾತ್ರ ಅಂತರ ಕಾಯ್ದುಕೊಂಡರು. ಈ ಘಟನೆ ಎಲ್ಲರ ಗಮನಸೆಳೆದಿದೆ.

ಪ್ರಧಾನಿ ಮೋದಿಯವರೊಂದಿಗೆ ಈ ಐತಿಹಾಸಿಕ ಫೋಟೋದಲ್ಲಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಜರ್ಮನ್ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್, ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್, ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಜಪಾನ್ ಪ್ರಧಾನಿ ಸನಾ ಇ ಟಕೈಚಿ, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಬ್ರೆಜಿಲ್ ಅಧ್ಯಕ್ಷ ಲುಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಸೇರಿದಂತೆ ವಿಶ್ವದ ಪ್ರಮುಖ ನಾಯಕರು ಒಟ್ಟಿಗೆ ಕಾಣಿಸಿಕೊಂಡರು.

(Video Source: DD) 

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಅಡುಗೆಯ ರುಚಿ ಹೆಚ್ಚಿಸುವ ಇಂಗು ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ – Kannada News | There are many health benefits of using Asafoetida in cooking

ಭಾರತೀಯರ ಅಡುಗೆ ಮನೆಗಳಲ್ಲಿ ಇಂಗು (Asafoetida) ಇದ್ದೇ ಇರುತ್ತದೆ. ಸಣ್ಣ ಬಗೆಯ ಮಸಾಲೆಯಾಗಿರುವ ಇಂಗು ಅಡುಗೆಗೆ ವಿಭಿನ್ನ ಸುವಾಸನೆ ಮತ್ತು ರುಚಿಯನ್ನು ನೀಡುತ್ತದೆ. ಬೇಳೆ ಸಾರು, ರಸಂ, ಸಾಂಬಾರು ಸೇರಿದಂತೆ ಹೆಚ್ಚಿನ ತರಕಾರಿ ಪದಾರ್ಥಗಳಿಗೆ ಇಂಗು ಹಾಕಲಾಗುತ್ತದೆ. ಹೀಗೆ ಭಾರತೀಯ ಪಾಕಪದ್ಧತಿಯಲ್ಲಿ ಪ್ರಮುಖ ಪಾತ್ರವಹಿಸುವಂತಹ ಇಂಗಿಗೆ ಆಯುರ್ವೇದದಲ್ಲೂ ಮುಖ್ಯ ಸ್ಥಾನವಿದೆ. ಹೌದು ಹಲವು ಔಷಧೀಯ ಗುಣಗಳನ್ನು ಹೊಂದಿರುವ ಇಂಗು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿ. ಒಟ್ಟಾರೆಯಾಗಿ ಅಡುಗೆಗೆ ಚಿಟಿಕೆ ಇಂಗು ಸೇರಿಸುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ಇಂಗಿನ ಆರೋಗ್ಯ ಪ್ರಯೋಜನಗಳೇನು?

ಜೀರ್ಣಕ್ರಿಯೆಗೆ ಸಹಕಾರಿ: ಇಂಗು ಜೀರ್ಣಕ್ರಿಯೆಗೆ ಬೇಕಾಗುವಂತಹ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರ ಆಂಟಿಸ್ಪಾಸ್ಮೊಡಿಕ್‌ ಮತ್ತು ಉರಿಯೂತ ನಿವಾರಕ ಗುಣಗಳು ಹೊಟ್ಟೆಯುಬ್ಬರ, ಗ್ಯಾಸ್‌, ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ತುಂಬಾನೇ ಸಹಕಾರಿ.

ಉಸಿರಾಟದ ಸಮಸ್ಯೆಯನ್ನು ನಿವಾರಿಸುತ್ತದೆ: ಇಂಗು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಇದು ಶ್ವಾಸಕೋಶಗಳಿಗೆ ಪ್ರಯೋಜನಕಾರಿಯಾಗಿದೆ. ಇದು ಆಸ್ತಮಾ, ಕೆಮ್ಮು ಮತ್ತು ಎದೆಯಿಂದ ಕಫವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ, ಉಸಿರಾಟವನ್ನು ಸುಲಭಗೊಳಿಸುತ್ತದೆ.

ತಲೆನೋವನ್ನು ನಿವಾರಿಸುತ್ತದೆ: ಇಂಗುವಿನ ಉರಿಯೂತ ನಿವಾರಕ ಗುಣಗಳು ತಲೆಯಲ್ಲಿರುವ ರಕ್ತನಾಳಗಳ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ವಲ್ಪ ಇಂಗನ್ನು  ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಮೈಗ್ರೇನ್ ಮತ್ತು ಒತ್ತಡದ ತಲೆನೋವಿನಿಂದ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: ಪ್ರತಿದಿನ ಊಟದ ಬಳಿಕ ಒಂದು ಸ್ಪೂನ್‌ ಸೋಂಪು ತಿನ್ನಿ, ಅದ್ಭುತ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ

ಮುಟ್ಟಿನ ನೋವನ್ನು ನಿವಾರಿಸುತ್ತದೆ: ಹೆಚ್ಚಿನ ಮಹಿಳೆಯರು ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಮತ್ತು ಸೆಳೆತವನ್ನು ಅನುಭವಿಸುತ್ತಾರೆ. ಇಂತಹ ಸಂದರ್ಭದಲ್ಲಿ ನೀರಿನೊಂದಿಗೆ ಒಂದು ಚಿಟಿಕೆ ಇಂಗು ಬೆರೆಸಿ  ಸೇವಿಸಿದರೆ ನೋವು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ: ಇಂಗು ವಯಸ್ಸಾಗುವಿಕೆ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಮುಖದ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಇಂಗಿನಲ್ಲಿ ಕೂಮರಿನ್ ಎಂಬ ಪದಾರ್ಥವಿದೆ. ಇದು ರಕ್ತ ತೆಳುವಾಗಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ. ಇದು ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೀಗೆ ಅಡುಗೆಗೆ ಒಂದು ಚಿಟಿಕೆ ಇಂಗು ಸೇರಿಸುವುದರಿಂದ ರುಚಿ ಮತ್ತು ಸುವಾಸನೆ ಎರಡನ್ನೂ ಹೆಚ್ಚಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನನ್ – Kannada News | Cocktail 2 stars Rashmika Mandanna Kriti Sanon visit Presidency University Bengaluru Campus

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಕೃತಿ ಸನನ್ ಅವರು ತಮ್ಮ ಹೊಸ ಚಿತ್ರ ‘ಕಾಕ್‌ಟೇಲ್ 2’ ಪ್ರಚಾರಕ್ಕಾಗಿ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ (Presidency University) ಕ್ಯಾಂಪಸ್‌ಗೆ ಬಂದಿದ್ದರಿಂದ ವಿದ್ಯಾರ್ಥಿಗಳಿಗೆ ಇದು ಸ್ಮರಣೀಯ ದಿನವಾಗಿತ್ತು. ರಶ್ಮಿಕಾ ಅವರು ಬೆಂಗಳೂರು ನಗರದಲ್ಲಿ ಉನ್ನತ ಶಿಕ್ಷಣವನ್ನು ಪಡೆದಿರುವುದರಿಂದ ಮತ್ತು ಸ್ಯಾಂಡಲ್‌ವುಡ್‌ನಿಂದ ತಮ್ಮ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿದ್ದರಿಂದ ಬೆಂಗಳೂರು ಮತ್ತು ಕರ್ನಾಟಕದ ಜೊತೆ ಬಲವಾದ ಸಂಪರ್ಕವನ್ನು ಹೊಂದಿದ್ದಾರೆ.

ರಶ್ಮಿಕಾ ಅವರ ಮನದಲ್ಲಿ ಬೆಂಗಳೂರು ವಿಶೇಷ ಸ್ಥಾನವನ್ನು ಹೊಂದಿದೆ. ಕೃತಿ ಸನನ್‌ಗೂ ಈ ನಗರ ಮತ್ತು ಇಲ್ಲಿನ ಜನರ ಪರಿಚಯ ಮಾಡಿಕೊಡಲು ಈ ವೇದಿಕೆ ಸಹಕಾರಿ ಆಯಿತು. ಇಬ್ಬರೂ ನಟಿಯರು ತಮ್ಮ ಮೋಡಿಮಾಡುವ ನೃತ್ಯ ಮತ್ತು ಹಾಸ್ಯಮಯ ಸಂಭಾಷಣೆಯಿಂದ ಪ್ರೇಕ್ಷಕರನ್ನು ಮೋಡಿ ಮಾಡಿದರು. ಈ ಕಾರ್ಯಕ್ರಮದ ಫೋಟೋಗಳು ಗಮನ ಸೆಳೆಯುವಂತಿವೆ.

Presidency University Bengaluru

ಪ್ರೀತಿ ಮತ್ತು ಸ್ನೇಹದ ಬಗ್ಗೆ ಮಾತನಾಡುತ್ತಾ, ‘ರಶ್ಮಿಕಾ ತನ್ನ ಆತ್ಮೀಯ ಸ್ನೇಹಿತ ವಿಜಯ್ ಅವರನ್ನು ವಿವಾಹವಾಗಿದ್ದಾರೆ’ ಎಂದು ಕೃತಿ ಗಮನಸೆಳೆದರು. ಅವರ ಈ ಮಾತುಗಳು ವಿದ್ಯಾರ್ಥಿ ಬಳಗದಲ್ಲಿ ಇದ್ದ ವಿಜಯ್ ದೇವರಕೊಂಡ ಅವರ ಅಭಿಮಾನಿಗಳನ್ನು ಜೋರಾಗಿ ಹುರಿದುಂಬಿಸಿತು. ಈ ಕ್ಷಣ ರಶ್ಮಿಕಾ ಕೂಡ ಬಹಳ ಸಂತೋಷದಿಂದ ನಗು ಬೀರಿದರು.

‘ವಿಜಯ್ ನಿಮ್ಮೆಲ್ಲರನ್ನೂ ಪ್ರೀತಿಸುತ್ತಾರೆ’ ಎಂದು ರಶ್ಮಿಕಾ ಮಂದಣ್ಣ ಅವರು ಉತ್ಸಾಹಭರಿತ ಪ್ರೇಕ್ಷಕರಿಗೆ ತಿಳಿಸಿದರು. ‘ಕಾಕ್‌ಟೇಲ್ 2’ ಚಿತ್ರದಲ್ಲಿ ಸ್ನೇಹಿತರ ಪಾತ್ರ ಮಾಡಿರುವ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನನ್ ಅವರು ಅದ್ಭುತ ಕೆಮಿಸ್ಟ್ರಿ ನೋಡಲು ಅಭಿಮಾನಿಗಳು ಕಾದಿದ್ದಾರೆ. ಹಿಂದಿಯ ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಶಾಹಿದ್ ಕಪೂರ್ ಬಟ್ಟೆ ಹರಿದು, ರಶ್ಮಿಕಾ ಮೇಲೆ ಮುಗಿಬಿದ್ದ ಫ್ಯಾನ್ಸ್; ವಿಡಿಯೋ ವೈರಲ್

ವಿದ್ಯಾರ್ಥಿಗಳೊಂದಿಗಿನ ಭೇಟಿಯ ಅವಕಾಶಕ್ಕಾಗಿ ರಶ್ಮಿಕಾ ಮತ್ತು ಕೃತಿ ಸನನ್ ಅವರು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಉಪಾಧ್ಯಕ್ಷರಾದ ಶ್ರೀ ಸುಹೇಲ್ ಅಹ್ಮದ್, ಉಪಾಧ್ಯಕ್ಷರಾದ ಶ್ರೀ ಸಲ್ಮಾನ್ ಅಹ್ಮದ್, ಉಪಾಧ್ಯಕ್ಷರಾದ ಡಾ. ನಫೀಸಾ ಅಹ್ಮದ್ ಮತ್ತು ಸದಸ್ಯರಾದ ಶ್ರೀಮತಿ ಶೈಮಾ ಅಹ್ಮದ್ ಉಪಸ್ಥಿತರಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಇದು ಐಪಿಎಲ್ ಅಲ್ಲ, ಮನೆಗೆ ಹೋಗು’; ವೈಭವ್​ ಕೆರಳುವಂತೆ ಮಾಡಿದ್ದೇ ಲಂಕಾ ಕ್ರಿಕೆಟಿಗ..! – Kannada News | India A vs SL A: Vaibhav Suryavanshi Row Explained – Vishen Halambage’s ‘Go Home’ Provokes

ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎ ಹಾಗೂ ಭಾರತ ಎ (India A vs Sri Lanka A) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಶ್ರೀಲಂಕಾ ಗೆದ್ದಿತ್ತಾದರೂ, ಪಂದ್ಯ ಮುಗಿದ ಬಳಿಕ ಉಂಟಾಗಿದ್ದ ಗದ್ದಲದಿಂದಾಗಿ ವಿವಾದವೊಂದು ಹುಟ್ಟಿಕೊಂಡಿತ್ತು. ಆರಂಭದಲ್ಲಿ ಆ ಗದ್ದಲದ ವಿಡಿಯೋವನ್ನು ನೋಡಿದವರು ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ದುರಹಂಕಾರಿ ಎಂದು ಟೀಕಿಸಿದ್ದರು. ಅಲ್ಲದೆ ವೈಭವ್​ಗೆ ಸರಿಯಾದ ಶಿಕ್ಷೆಯಾಗಬೇಕೆಂಬ ಬೇಡಿಕೆಯನ್ನು ಇಟ್ಟಿದ್ದರು. ಆದರೆ ಪಂದ್ಯ ನಡೆದ ಒಂದು ದಿನದ ಬಳಿಕ ಇಡೀ ಘಟನೆಗೆ ಕಾರಣವೇನು? ವೈಭವ್ ಅಷ್ಟು ಕೋಪಗೊಳ್ಳುವಂತದ್ದು ಏನು ನಡೆಯಿತು ಎಂಬುದು ಈಗ ಬಹಿರಂಗವಾಗಿದೆ.

ವೈಭವ್ ಜಗಳದ ಹಿಂದಿನ ಕಾರಣ ಬಹಿರಂಗ

ವಾಸ್ತವವಾಗಿ ಜೂನ್ 15 ರಂದು ನಡೆದ ಈ ಪಂದ್ಯ ಸೂಪರ್ ಓವರ್​ನಲ್ಲಿ ಅಂತ್ಯಗೊಂಡಿತು. ಈ ಸೂಪರ್ ಓವರ್​ನಲ್ಲಿ ಆತಿಥೇಯ ತಂಡ ಗೆಲುವು ಸಾಧಿಸಿತು. ಇತ್ತ ಸೋಲಿನ ಹತಾಶೆಯೊಂದಿಗೆ ಡಗೌಟ್​ಗೆ ಮರಳುತ್ತಿದ್ದ ವೈಭವ್ ಸೂರ್ಯವಂಶಿ ಬಳಿ ಲಂಕಾ ಕ್ರಿಕೆಟಿಗರು ಕಾಲ್ಕೆರೆದು ಜಗಳ ಮಾಡಿದ್ದರು. ಇದರಿಂದ ಕೋಪಗೊಂಡಿದ್ದ ವೈಭವ್ ಕೂಡ ಲಂಕಾ ಕ್ರಿಕೆಟಿಗರ ವಿರುದ್ಧ ಸೆಟೆದು ನಿಂತಿದ್ದರು. ಆದರೆ ಆ ಸಮಯದಲ್ಲಿ ಈ ಇಡೀ ಘಟನೆಗೆ ಕಾರಣ ಏನು ಎಂಬುದು ತಿಳಿದುಬಂದಿರಲಿಲ್ಲ. ಆದರೀಗ ವೈಭವ್ ಅಷ್ಟು ಆಕ್ರೋಶಗೊಳ್ಳಲು ಏನು ಕಾರಣ ಎಂಬುದು ಬಹಿರಂಗವಾಗಿದೆ. ಈ ಇಡೀ ಘಟನೆಗೆ ಶ್ರೀಲಂಕಾದ ಆಲ್‌ರೌಂಡರ್ ವಿಷೇನ್ ಹಲಂಬಗೆ ಕಾರಣ ಎಂಬುದು ತಿಳಿದುಬಂದಿದೆ.

ಮನೆಗೆ ಹೋಗು, ಇದು ಐಪಿಎಲ್ ಅಲ್ಲ

ಕ್ರಿಕ್‌ಬಜ್ ವರದಿಯ ಪ್ರಕಾರ, ಸೂಪರ್​ ಓವರ್​ನಲ್ಲಿ ಪಂದ್ಯ ಮುಗಿದ ಬಳಿಕ ಡಗೌಟ್​ನತ್ತ ಬರುತ್ತಿದ್ದ ವೈಭವ್ ಬಳಿ ವಿಷೇನ್ ಹಲಂಬಗೆ, ‘ಮನೆಗೆ ಹೋಗು, ಇದು ಐಪಿಎಲ್ ಅಲ್ಲ’ ಎಂದು ಹೇಳಿದ್ದಾರೆ. ಇದನ್ನು ಕೇಳಿದ ವೈಭವ್ ಸೂರ್ಯವಂಶಿ ಕೋಪಗೊಂಡು ಅವರೊಂದಿಗೆ ಜಗಳಕ್ಕಿಳಿದಿದ್ದಾರೆ. ವಿಷೇನ್ ಹಲಂಬಗೆ ನಿನ್ನೆ ನಡೆದ ಪಂದ್ಯದಲ್ಲಿ ಮಾತ್ರವಲ್ಲದೆ ಜೂನ್ 9 ರಂದು ನಡೆದಿದ್ದ ಪಂದ್ಯದಲ್ಲೂ ವೈಭವ್​ಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ. ಆ ಪಂದ್ಯದಲ್ಲಿ ವೈಭವ್​ನನ್ನು ಪದೇ ಪದೇ ಸ್ಲೆಡ್ಜ್ ಮಾಡಲು ಪ್ರಯತ್ನಿಸಿದ್ದ ವಿಷೇನ್ ಹಲಂಬಗೆ, ಸೋಮವಾರ ನಡೆದ ಪಂದ್ಯದಲ್ಲಿ ವೈಭವ್ ಬ್ಯಾಟಿಂಗ್ ಮಾಡುವಾಗಲೂ ಅದನ್ನು ಮುಂದುವರಿಸಿದ್ದರು ಎಂದು ವರದಿಯಾಗಿದೆ.

ಮೈದಾನದಲ್ಲಿ ಜಗಳ ಮಾಡಿಕೊಂಡಿದ್ದ ವೈಭವ್ ಬೆನ್ನಿಗೆ ನಿಂತ ಶ್ರೀಲಂಕಾದ ಮಾಜಿ ಕ್ರಿಕೆಟಿಗರು

ಅಷ್ಟಕ್ಕೆ ನಿಲ್ಲದ ವಿಷೇನ್ ಹಲಂಬಗೆ, ಸೂಪರ್ ಓವರ್​ನಲ್ಲಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮಾಡಲು ಬಂದಾಗಲೂ ತನ್ನ ನೀಚತನವನ್ನು ಪ್ರದರ್ಶಿಸಿದ್ದಾರೆ. ಇದೇ ವೇಳೆ ವೈಭವ್​ಗೆ “ಮನೆಗೆ ಹೋಗು, ಇದು ಐಪಿಎಲ್ ಅಲ್ಲ” ಎಂದು ಟೀಕಿಸಿದ್ದಾರೆ ಎಂದು ವರದಿಯಾಗಿದೆ. ಮಾತ್ರವಲ್ಲದೆ ಸೂಪರ್ ಓವರ್ ಮುಗಿದ ನಂತರ ವಿಷೇನ್ ಹಲಂಬಗೆ, ವೈಭವ್ ಸೂರ್ಯವಂಶಿ ಜೊತೆಗೆ ಕಾಲ್ಕೆರೆದು ಮತ್ತೆ ಜಗಳಕ್ಕಿಳಿದಿದ್ದಾರೆ. ಇದರಿಂದ ಕೋಪಗೊಂಡ ವೈಭವ್ ಅವರೊಂದಿಗೆ ವಾಗ್ವಾದ ಶುರು ಮಾಡಿದ್ದಾರೆ. ಈ ಜಗಳಕ್ಕೆ ತಾರಕಕ್ಕೇರುತ್ತಿರುವುದನ್ನು ನೋಡಿದ ಇತರ ಆಟಗಾರರು ಇಬ್ಬರ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:25 pm, Tue, 16 June 26

Source link

ಪೇರಳೆ ಹಣ್ಣು ತಿಂದ ತಕ್ಷಣ ಅಪ್ಪಿತಪ್ಪಿಯೂ ಈ ಆಹಾರಗಳ ಸೇವನೆ ಮಾಡಬೇಡಿ! – Kannada News | Foods To Avoid Immediately After Eating Guava

ಪೇರಳೆ ಹಣ್ಣು (Guava) ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾದ ಹಣ್ಣುಗಳಲ್ಲಿ ಒಂದು. ಇದರಲ್ಲಿ ವಿಟಮಿನ್ ಸಿ, ಫೈಬರ್ ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ ಪೇರಳೆ ಹಣ್ಣು ತಿಂದ ತಕ್ಷಣ ಕೆಲವು ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಪೇರಳೆಯ ಜೊತೆ ಕೆಲವು ಆಹಾರಗಳನ್ನು ಅಪ್ಪಿತಪ್ಪಿಯೂ ಸೇವನೆ ಮಾಡಬಾರದು ಇದರಿಂದ ಆರೋಗ್ಯ ಹಾಳಾಗುವುದರಲ್ಲಿ ಸಂಶಯವೇ ಇಲ್ಲ. ಹಾಗಾದರೆ ಆ ಆಹಾರಗಳು ಯಾವವು, ಯಾಕೆ ಸೇವನೆ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಾಲು ಮತ್ತು ಹಾಲಿನ ಪದಾರ್ಥಗಳು:

ಪೇರಳೆ ಹಣ್ಣು ತಿಂದ ತಕ್ಷಣ ಹಾಲು ಕುಡಿಯುವುದು ಉತ್ತಮವಲ್ಲ. ಪೇರಳೆ ಹಣ್ಣಿನಲ್ಲಿರುವ ಆಮ್ಲ ಗುಣಗಳು ಹಾಲಿನೊಂದಿಗೆ ಬೆರೆತು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಬಹುದು. ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಮತ್ತು ಅಜೀರ್ಣ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ತಣ್ಣೀರು ಕುಡಿಯಬೇಡಿ:

ಪೇರಳೆ ಹಣ್ಣು ತಿಂದ ತಕ್ಷಣ ತಣ್ಣೀರು ಕುಡಿಯುವುದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಕೆಲವರಲ್ಲಿ ಹೊಟ್ಟೆನೋವು, ಗ್ಯಾಸ್ ಮತ್ತು ಅಸಹಜತೆ ಉಂಟಾಗಬಹುದು. ಆದ್ದರಿಂದ ಕನಿಷ್ಠ 20 ರಿಂದ 30 ನಿಮಿಷಗಳ ನಂತರ ನೀರು ಕುಡಿಯುವುದು ಉತ್ತಮ.

ಇದನ್ನೂ ಓದಿ: ಮಾನ್ಸೂನ್‌ ಋತುವಿನಲ್ಲಿ ಈ ಕಾಲೋಚಿತ ಹಣ್ಣುಗಳನ್ನು ತಿನ್ನಲು ಮರೆಯದಿರಿ

ಬಾಳೆಹಣ್ಣನ್ನು ಜೊತೆಗೆ ತಿನ್ನಬೇಡಿ:

ಪೇರಳೆ ಹಣ್ಣು ಮತ್ತು ಬಾಳೆಹಣ್ಣು ಒಂದೇ ಸಮಯದಲ್ಲಿ ಸೇವಿಸುವುದರಿಂದ ಕೆಲವರಿಗೆ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಬಹುದು. ವಿಶೇಷವಾಗಿ ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಉಬ್ಬರ ಸಮಸ್ಯೆ ಇರುವವರು ಈ ಎರಡು ಹಣ್ಣುಗಳ ಸೇವನೆ ಮಾಡದಿರುವುದು ಉತ್ತಮ.

ಹೆಚ್ಚು ಮಸಾಲೆ ಮತ್ತು ಎಣ್ಣೆಯುಕ್ತ ಆಹಾರದ ಸೇವನೆ ಒಳ್ಳೆಯದಲ್ಲ:

ಪೇರಳೆ ಹಣ್ಣಿನಲ್ಲಿ ಫೈಬರ್ ಅಧಿಕವಾಗಿರುವುದರಿಂದ ತಕ್ಷಣವೇ ಹೆಚ್ಚು ಮಸಾಲೆ ಅಥವಾ ಎಣ್ಣೆಯುಕ್ತ ಆಹಾರ ಸೇವಿಸಿದರೆ ಹೊಟ್ಟೆಯ ಮೇಲೆ ಒತ್ತಡ ಹೆಚ್ಚಾಗಬಹುದು. ಇದರಿಂದ ಅಜೀರ್ಣ, ಹೊಟ್ಟೆ ಉರಿ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಆದರೆ ನೆನಪಿರಲಿ, ಪ್ರತಿಯೊಬ್ಬರ ದೇಹದ ಸ್ವಭಾವ ಬೇರೆಬೇರೆ ಆಗಿರುವುದರಿಂದ ಈ ಸಮಸ್ಯೆಗಳು ಎಲ್ಲರಲ್ಲೂ ಒಂದೇ ರೀತಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಸಂವೇದನಾಶೀಲ ಜೀರ್ಣಕ್ರಿಯೆ ಇರುವವರು ಪೇರಳೆ ಹಣ್ಣು ತಿಂದ ಬಳಿಕ ಸ್ವಲ್ಪ ಸಮಯ ಬಿಡುವು ನೀಡಿ ಬೇರೆ ಆಹಾರ ಸೇವಿಸುವುದು ಆರೋಗ್ಯಕ್ಕೆ ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗಿ ಅಪ್ಪುಗೆಯಿಲ್ಲದೆ, ಕೈ ಕುಲುಕಿ ಟ್ರಂಪ್​- ಮೋದಿ ಉಭಯಕುಶಲೋಪರಿ; 16 ತಿಂಗಳ ಬಳಿಕ ಇಬ್ಬರ ಮುಖಾಮುಖಿ – Kannada News | No Warm Hugs; PM Modi and Donald Trump shake hands at G7 Summit in France First Meet After 16 Months

ಎವಿಯಾನ್, ಜೂನ್ 16: ಫ್ರಾನ್ಸ್‌ನ ಎವಿಯಾನ್ ನಗರದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi in France) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ಪರಸ್ಪರ ಭೇಟಿಯಾಗಿದ್ದಾರೆ. ಕಳೆದ 16 ತಿಂಗಳುಗಳಲ್ಲಿ ಉಭಯ ನಾಯಕರ ನಡುವೆ ನಡೆದ ಮೊದಲ ಮುಖಾಮುಖಿ ಇದಾಗಿದೆ. ಆಪ್ತ ಸ್ನೇಹಿತರೆಂದು ಹೇಳಿಕೊಳ್ಳುತ್ತಿದ್ದ ಈ ಇಬ್ಬರೂ ನಾಯಕರು ಇಂದು ಈ ಮೊದಲಿನಿಂತೆ ಬಿಗಿ ಅಪ್ಪುಗೆಯಿಲ್ಲದೆ ಕೇವಲ ಪರಸ್ಪರ ಮುಗುಳ್ನಕ್ಕು ಹಸ್ತಲಾಘವ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಪ್ರತಿ ಬಾರಿಯೂ ಪ್ರಧಾನಿ ಮೋದಿ ಟ್ರಂಪ್​ಗೆ ಆತ್ಮೀಯವಾದ ಅಪ್ಪುಗೆ ನೀಡುತ್ತಿದ್ದರು. ಆದರೆ, ಈ ಬಾರಿ ಎರಡೂ ದೇಶಗಳ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಉಭಯ ನಾಯಕರು ಕೇವಲ ಔಪಚಾರಿಕವಾಗಿ ಉಭಯಕುಶಲೋಪರಿ ನಡೆಸಿದ್ದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು.

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸಿರುವ ಜಿ7 ಶೃಂಗಸಭೆಯ ಔಟ್‌ರೀಚ್ ಅಧಿವೇಶನದಲ್ಲಿ ಜಾಗತಿಕ ನಾಯಕರು ಒಟ್ಟುಗೂಡಿದಾಗ ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಈ ಸಂಕ್ಷಿಪ್ತ ಭೇಟಿ ನಡೆದಿದೆ. ಶೃಂಗಸಭೆಯ ವೇದಿಕೆಯಲ್ಲಿ ಇಬ್ಬರೂ ನಾಯಕರು ಪರಸ್ಪರ ಪಕ್ಕದ ಆಸನಗಳಲ್ಲೇ ಕುಳಿತುಕೊಂಡು ಕೆಲಕಾಲ ಸಂಭಾಷಣೆ ನಡೆಸಿದರು. ಬುಧವಾರ ಇವರಿಬ್ಬರ ನಡುವೆ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿದೆ. ಈ ಮಾತುಕತೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ.

2025ರ ಫೆಬ್ರವರಿಯಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ತಕ್ಷಣ ಪ್ರಧಾನಿ ಮೋದಿ ಅವರು ವಾಷಿಂಗ್ಟನ್‌ಗೆ ಭೇಟಿ ನೀಡಿದ್ದರು. ಆ ಪ್ರವಾಸದ ಬಳಿಕ ಇಬ್ಬರು ನಾಯಕರು ಮುಖಾಮುಖಿಯಾಗಿ ಭೇಟಿಯಾಗುತ್ತಿರುವುದು ಇದೇ ಮೊದಲು.

(Video Source: BJP)

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮಳೆಗಾಲದಲ್ಲಿ ಎಣ್ಣೆಯುಕ್ತ ಚರ್ಮದ ಸಮಸ್ಯೆ ಹೆಚ್ಚಾಗೋದೇಕೆ? ಇದಕ್ಕೆ ಪರಿಹಾರವೇನು? – Kannada News | Why oily skin problems become more common during the rainy season?

ಮಾನ್ಸೂನ್‌ನಲ್ಲಿ ವಾತಾವರಣ ಆಹ್ಲಾದಕರವಾಗಿದ್ದು, ಮಳೆ ಮತ್ತು ತೇವಾಂಶದ ಕಾರಣದಿಂದ ಈ ಋತುವಿನಲ್ಲಿ ಅನೇಕ ರೋಗಗಳ ಅಪಾಯವೂ ಹೆಚ್ಚಾಗುತ್ತದೆ. ಜೊತೆಗೆ ಈ ಋತುವಿನಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಎಣ್ಣೆಯುಕ್ತ ಚರ್ಮದ ಸಮಸ್ಯೆಯೂ ಒಂದು. ಹೌದು ಈ ಸಮಯದಲ್ಲಿ ಕೆಲವರ ತ್ವಚೆ ಸಾಮಾನ್ಯಕ್ಕಿಂತ ಹೆಚ್ಚು ಎಣ್ಣೆಯುಕ್ತವಾಗುತ್ತದೆ. ಈ ಎಣ್ಣೆಯುಕ್ತ ಚರ್ಮದ (oily skin) ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ ಇದು ಮೊಡವೆ, ದದ್ದುಗಳು ಮೂಡಲು ಕಾರಣವಾಗಬಹುದು. ಹಾಗಿದ್ದರೆ ಮಳೆಗಾಲದಲ್ಲಿ ತ್ವಚೆ ಎಣ್ಣೆಯುಕ್ತವಾಗುವುದೇಕೆ, ಈ ಸಮಸ್ಯೆಯಿಂದ ಮುಕ್ತಿ ಪಡೆಯೋದೇಗೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಮಳೆಗಾಲದಲ್ಲಿ ತ್ವಚೆ ಎಣ್ಣೆಯುಕ್ತವಾಗಲು ಕಾರಣವೇನು?

ಎಣ್ಣೆಯುಕ್ತ ಚರ್ಮವು ಸಾಮಾನ್ಯ ತ್ವಚೆಯ ಸಮಸ್ಯೆಯಾಗಿದ್ದು, ಈ ಸ್ಥಿತಿಯು ವಿಶೇಷವಾಗಿ ಮಳೆಗಾಲದಲ್ಲಿ ಉಲ್ಬಣಗೊಳ್ಳುತ್ತದೆ. ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯು ಸಾಕಷ್ಟು ಪ್ರಮಾಣದಲ್ಲಿರದಿದ್ದರೆ, ಹೆಚ್ಚುವರಿ ಎಣ್ಣೆ ಸಂಗ್ರಹವಾಗುತ್ತದೆ. ಮೇದೋಗ್ರಂಥಿಗಳ ಸ್ರಾವವು ನಿಮ್ಮ ಮುಖದ ಮೇಲಿನ ಸೆಬಾಸಿಯಸ್ ಗ್ರಂಥಿಗಳಿಂದ ಉತ್ಪತ್ತಿಯಾಗುತ್ತದೆ. ಇದರ ಸ್ರವಿಸುವಿಕೆಯು ಮುಖದ ಮೇಲೆ ರಕ್ಷಣಾತ್ಮಕ ಪದರವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಚರ್ಮವನ್ನು ರಕ್ಷಿಸುವುದಲ್ಲದೆ, ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಅವುಗಳ ಕಾರ್ಯವು ಸೂಕ್ತವಾಗಿಲ್ಲದಿದ್ದರೆ, ಅತಿಯಾದ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆ ಸಂಭವಿಸುತ್ತದೆ. ಇದರಿಂದಾಗಿ ಚರ್ಮ ಸಾಕಷ್ಟು ಎಣ್ಣೆಯುಕ್ತವಾಗಿ ಕಾಣಿಸುತ್ತದೆ.

ಇದಲ್ಲದೆ ಆನುವಂಶಿಕ ಕಾರಣ, ಹಾರ್ಮೋನ್  ಅಸಮತೋಲನ ಮತ್ತು ಪರಿಸರ ಅಂಶಗಳು ಸೇರಿದಂತೆ ಹಲವು ಅಂಶಗಳು ಮೇದೋಗ್ರಂಥಿಗಳ ಸ್ರಾವದ ಮೇಲೆ ಪರಿಣಾಮ ಬೀರಬಹುದು. ಇನ್ನೊಂದು ಪ್ರಮುಖ ಅಂಶವೆಂದರೆ, ಬೇಸಿಗೆ ಮತ್ತು ಮಳೆಗಾಲದಲ್ಲಿ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆ ಹೆಚ್ಚಾಗುತ್ತದೆ. ಮಳೆಗಾಲ ಅತ್ಯಂತ ಆರ್ದ್ರವಾಗಿರುತ್ತವೆ, ಇದರಿಂದಾಗಿ ಬೆವರು ಆವಿಯಾಗುವುದು ಕಡಿಮೆಯಾಗುತ್ತದೆ ಇದರಿಂದ ಚರ್ಮ ಎಣ್ಣೆಯುಕ್ತವಾಗಿರುತ್ತದೆ.

ಮಳೆಗಾಲದಲ್ಲಿ ದೇಹವು ಹೆಚ್ಚು ಬೆವರು ಉತ್ಪಾದಿಸುತ್ತದೆ. ಚರ್ಮದ ಮೇಲೆ ಹೆಚ್ಚುವರಿ ಎಣ್ಣೆ ಮತ್ತು ಬೆವರು ಸಂಗ್ರಹವಾದಾಗ, ತ್ವಚೆ ಎಣ್ಣೆಯುಕ್ತವಾಗಿ ಕಾಣಲು ಪ್ರಾರಂಭಿಸುತ್ತದೆ. ಧೂಳು, ಕೊಳಕು ಮತ್ತು ಬ್ಯಾಕ್ಟೀರಿಯಾಗಳು ಸಂಗ್ರಹವಾದರೆ, ಮೊಡವೆಗಳ ಅಪಾಯ ಹೆಚ್ಚಾಗುತ್ತದೆ. ಇದಲ್ಲದೆ ಚರ್ಮವು ಅನೇಕ ಪ್ರಯೋಜನಕಾರಿ ಮತ್ತು ಸಾಮಾನ್ಯ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತದೆ. ಹೆಚ್ಚುವರಿ ಎಣ್ಣೆ ಮತ್ತು ತೇವಾಂಶವು ಈ ಸಮತೋಲನವನ್ನು ಅಡ್ಡಿಪಡಿಸಬಹುದು. ಇದರಿಂದ ಕೆಲವು ಬ್ಯಾಕ್ಟೀರಿಯಾ ಮತ್ತು ಯೀಸ್ಟ್‌ಗಳು ಹೆಚ್ಚಾಗುತ್ತವೆ, ಇದು ಶಿಲೀಂಧ್ರಗಳ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಹೀಗೆ ಮಳೆಗಾಲದಲ್ಲಿ ಚರ್ಮವು ಅನೇಕ ಸವಾಲುಗಳನ್ನು ಎದುರಿಸುತ್ತದೆ. ಹಾಗಾಗಿ ಈ ಋತುವಿನಲ್ಲಿ ತ್ವಚೆಯ ಆರೈಕೆಯ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು.

ಇದನ್ನೂ ಓದಿ: ಜಪಾನೀಯರ ಅಭ್ಯಾಸಗಳನ್ನು ಪಾಲಿಸುವ ಮೂಲಕ ಆರೋಗ್ಯವಂತರಾಗಿ ನೂರ್ಕಾಲ ಬಾಳಿ

ಮಳೆಗಾಲದಲ್ಲಿ ಎಣ್ಣೆಯುಕ್ತ ಚರ್ಮವನ್ನು ಹೇಗೆ ಆರೈಕೆ ಮಾಡಬೇಕು?

  • ದಿನಕ್ಕೆ ಎರಡು ಬಾರಿ ಸ್ಯಾಲಿಸಿಲಿಕ್ ಆಮ್ಲವನ್ನು ಹೊಂದಿರುವ ಫೇಸ್ ವಾಶ್ ನಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ.
  • ಚರ್ಮವನ್ನು ಸಮತೋಲನದಲ್ಲಿಡಲು ಹಗುರವಾದ, ಎಣ್ಣೆ ರಹಿತ ಮತ್ತು ಜೆಲ್ ಆಧಾರಿತ ಮಾಯಿಶ್ಚರೈಸರ್ ಬಳಸಿ.
  • ಹೊರಗೆ ಹೋಗುವಾಗ, ಜೆಲ್ ಆಧಾರಿತ ಅಥವಾ ಮ್ಯಾಟ್-ಫಿನಿಶ್ ಹೊಂದಿರುವ ಸನ್‌ಸ್ಕ್ರೀನ್ ಅನ್ನು ಹಚ್ಚಿ, ಇದು ಜಿಗುಟುತನವನ್ನು ಕಡಿಮೆ ಮಾಡುತ್ತದೆ.
  • ವಾರಕ್ಕೆ 1-2 ಬಾರಿ ಮುಲ್ತಾನಿ ಮಿಟ್ಟಿ ಮತ್ತು ರೋಸ್ ವಾಟರ್ ನ ಫೇಸ್ ಪ್ಯಾಕ್ ಹಚ್ಚಿಕೊಳ್ಳಿ. ಕಡ್ಲೆಹಿಟ್ಟಿನ ಫೇಸ್‌ ಪ್ಯಾಕ್‌ ಕೂಡ ಹಚ್ಚಿಕೊಳ್ಳಬಹುದು.
  • ಸೌತೆಕಾಯಿ ರಸ ಮತ್ತು ಅಲೋವೆರಾ ಜೆಲ್ ನಂತಹ ಮನೆಮದ್ದುಗಳು ಚರ್ಮವನ್ನು ತಂಪಾಗಿಸುತ್ತವೆ, ತೇವಗೊಳಿಸುತ್ತವೆ ಮತ್ತು ರಿಫ್ರೆಶ್ ಮಾಡುತ್ತವೆ.
  • ಎಣ್ಣೆಯುಕ್ತ ಚರ್ಮವನ್ನು ತಪ್ಪಿಸಲು, ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ. ದಿನವಿಡೀ ಸಾಕಷ್ಟು ಪ್ರಮಾಣದ ನೀರು ಕುಡಿಯಿರಿ. ಕಲ್ಲಂಗಡಿ ಇತ್ಯಾದಿ ನೀರಿನಾಂಶವಿರುವ ಹಣ್ಣುಗಳನ್ನು ಸೇವಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link