ಟೀಮ್ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಯುಎಸ್ಎ ತಂಡವು ದಿಟ್ಟ ಪ್ರದರ್ಶನವನ್ನೇ ನೀಡಿದೆ. ಅದರಲ್ಲೂ ಕರಾರುವಾಕ್ ಬೌಲಿಂಗ್ ದಾಳಿ ಸಂಘಟಿಸಿದ ಯುಎಸ್ಎ ಬೌಲರ್ಗಳು ಪವರ್ಪ್ಲೇನಲ್ಲಿ ನೀಡಿದ್ದು ಕೇವಲ 46 ರನ್ಗಳು ಎಂದರೆ ನಂಬಲೇಬೇಕು.
ಇದಾಗ್ಯೂ ಸೂರ್ಯಕುಮಾರ್ ಯಾದವ್ (84) ಅವರ ಏಕಾಂಗಿ ಹೋರಾಟದ ಫಲವಾಗಿ ಟೀಮ್ ಇಂಡಿಯಾ 20 ಓವರ್ಗಳಲ್ಲಿ 161 ರನ್ ಗಳಿಸಲು ಸಾಧ್ಯವಾಯಿತು. ಈ ಗುರಿಯನ್ನು ಬೆನ್ನತ್ತಿದ ಯುಎಸ್ಎ ಪರ ಮಿಂಚಿದ್ದು ಕನ್ನಡಿಗ ಸಂಜಯ್ ಕೃಷ್ಣಮೂರ್ತಿ ಎಂಬುದು ವಿಶೇಷ.
ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸಂಜಯ್ ಕೃಷ್ಣಮೂರ್ತಿ 31 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ 1 ಫೋರ್ನೊಂದಿಗೆ 37 ರನ್ ಬಾರಿಸಿದ್ದರು. ಈ ಮೂಲಕ ಮೊದಲ ಪಂದ್ಯದಲ್ಲೇ ಸಂಜಯ್ ಅತ್ಯುತ್ತಮ ಹೊಡೆತಗಳ ಮೂಲಕ ಗಮನ ಸೆಳೆದಿದ್ದಾರೆ.
ಸಂಜಯ್ ಕೃಷ್ಣಮೂರ್ತಿ ಅವರ ತಂದೆ ಕರ್ನಾಟಕ ಮೂಲದವರು. ಸಂಜಯ್ ಅಮೆರಿಕದಲ್ಲಿ ಜನಿಸಿದ್ದರೂ, ತಮ್ಮ ಬಾಲ್ಯದ ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿ ಕಳೆದಿದ್ದಾರೆ. ಇಲ್ಲಿಯೇ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ, ಕ್ರಿಕೆಟ್ ತರಬೇತಿಯನ್ನೂ ಪಡೆದಿದ್ದಾರೆ.
ಎಡಗೈ ಸ್ಪಿನ್ ಬೌಲರ್ ಹಾಗೂ ಬಲಗೈ ಬ್ಯಾಟರ್ ಆಗಿರುವ ಸಂಜಯ್ ಕೃಷ್ಣಮೂರ್ತಿ ಕರ್ನಾಟಕದ ಅಂಡರ್-16 ತಂಡದ ಪರ ಆಡಿದ್ದರು. ಅದರಲ್ಲೂ ಪ್ರಸ್ತುತ ಕರ್ನಾಟಕ ತಂಡದ ಆಟಗಾರ ಸ್ಮರಣ್ ರವಿಚಂದ್ರನ್ ಹಾಗೂ ಸಂಜಯ್ ಕೃಷ್ಣಮೂರ್ತಿ ಜೊತೆಯಾಗಿ ಆಡಿ ಬೆಳೆದವರು. ಇದಾದ ಬಳಿಕ ಅಮೆರಿಕಾಗೆ ಮರಳಿದ್ದ ಸಂಜಯ್ ಇದೀಗ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಬೆಂಗಳೂರು, ಫೆಬ್ರುವರಿ 8: ಈ ವಾರ ಹೆಚ್ಚಿನ ದಿನ ಕುಸಿತ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ವಾರಾಂತ್ಯದಲ್ಲಿ ಹೆಚ್ಚಳಗೊಂಡಿವೆ. ಚಿನ್ನದ ಬೆಲೆ (Gold Rate) ಗ್ರಾಮ್ಗೆ ಮುನ್ನೂರಕ್ಕೂ ಹೆಚ್ಚು ರೂಗಳಷ್ಟು ಏರಿಕೆ ಕಂಡಿದೆ. ಆಭರಣ ಚಿನ್ನದ ಬೆಲೆ ಮತ್ತೆ 14,000 ರೂ ಗಡಿ ದಾಟಿ ಹೋಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಏರಿಕೆ ಆಗಿದೆ. ಬೆಳ್ಳಿ ಬೆಲೆ ಗ್ರಾಮ್ಗೆ 10 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,43,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,56,600 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,43,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 8ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,660 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,355 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,745 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,660 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,355 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಬೆಂಗಳೂರು, ಫೆಬ್ರವರಿ 08: ಪ್ರೀತಿಸಿದ ಯುವತಿ ಕೈಕೊಟ್ಟ ಹಿನ್ನೆಲೆ ಬಾಡಿ ಬಿಲ್ಡರ್ ಆತ್ಮಹತ್ಯೆ ನಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿ ನಡೆದಿದೆ. ಮನೆಯಲ್ಲಿ ನೇಣು ಬಿಗಿದುಕೊಂಡು ಕಿರಣ್(26) ಪ್ರಾಣಬಿಟ್ಟಿದ್ದು, 3 ವರ್ಷಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಯುವತಿಗೆ ಬೇರೆ ಯುವಕನ ಜತೆ ಮದುವೆ ನಿಶ್ಚಯವಾದ ಕಾರಣ, ಯುವತಿ ಹಾಗೂ ಆಕೆಯ ತಾಯಿ ಹೆಸರನ್ನು ಡೆತ್ನೋಟ್ನಲ್ಲಿ ಉಲ್ಲೇಖಿಸಿ ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತನಗೆ ಬೇರೆ ಯುವಕನ ಜೊತೆ ಮದುವೆ ನಿಶ್ಚಯವಾಗಿದೆ ಎಂದು ಯುವತಿ ಕಿರಣ್ಗೆ ಹೇಳಿದ್ದಲ್ಲದೆ ಮದುವೆಯ ಆಮಂತ್ರಣ ಪತ್ರಿಕೆ, ಹೊಸ ಸೀರೆ ತೋರಿಸಿದ್ದಳು. ಇದರಿಂದ ಮನನೊಂದು ನೇರವಾಗಿ ಮನೆಗೆ ಬಂದು ಕಿರಣ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಮಹಾಲಕ್ಷ್ಮೀಲೇಔಟ್ ಠಾಣೆಯ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹಲವು ವರ್ಷಗಳಿಂದ ಜಿಮ್ ಟ್ರೈನರ್, ಬಾಡಿ ಬಿಲ್ಡಿಂಗ್ ಮಾಡ್ತಿದ್ದ ಕಿರಣ್, ಪ್ರಿಯತಮೆಗೆ ಪ್ರೇಮಿಗಳ ದಿನಾಚರಣೆಗೆ ಗಿಫ್ಟ್ ಕೊಡಲು ಸಹ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ನಡುವೆ ಪ್ರೇಯಸಿ ಮತ್ತೊಬ್ಬನ ಜೊತೆ ಮದುವೆ ವಿಷಯ ಪ್ರಸ್ತಾಪಿಸಿದ ಕಾರಣ ಆಘಾತಕೊಳ್ಳಗಾಗಿದ್ದ ಕಿರಣ್ ದುಡುಕಿನ ನಿರ್ಧಾರ ಮಾಡಿದ್ದಾರೆ.
ಇನ್ನು ಪ್ರಿಯತಮೆ ಮದುವೆ ವಿಚಾರ ತಿಳಿದು ಬೇಸರದಲ್ಲಿ ಮನೆಗೆ ಬಂದಿದ್ದ ಕಿರಣ್ ನಿನ್ನೆ ಸಂಜೆ ತಾಯಿಯನ್ನ ವೈಟ್ ಶೀಟ್ ಮತ್ತು ಪೆನ್ ಕೇಳಿದ್ದರು. ಇದರಿಂದ ಅನುಮಾನಗೊಂಡ ತಾಯಿ ಯಾಕಪ್ಪಾ ವೈಟ್ ಹಾಳೆ ಎಂದು ವಿಚಾರಿಸಿದಾಗ, ಹೆದರಬೇಡಮ್ಮ ಫೈನಾನ್ಸ್ ಲೆಕ್ಕ ಬರೀತಿನಿ ಎಂದು ಕಿರಣ್ ಹೇಳಿದ್ದರಂತೆ. ಘಟನೆ ಸಂಬಂಧ ಸದ್ಯ ಯುವತಿ ಹಾಗೂ ಕುಟುಂಬಸ್ಥರ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಕಿರಣ್ ಕುಟುಂಬಸ್ಥರು ದೂರು ನೀಡಿದ್ದು, ತನಿಖೆ ಮುಂದುವರಿದಿದೆ.
ಪ್ರೇಮಿಗಳ ವಾರವು ಪ್ರೀತಿ ಮತ್ತು ಪ್ರಣಯದಿಂದ ತುಂಬಿದ ವಿಶೇಷ ಸಮಯವಾಗಿದ್ದು, ವ್ಯಾಲೆಂಟೈನ್ ವೀಕ್‌ನ ಪ್ರತಿ ದಿನವೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಪ್ರೇಮಿಗಳ ವಾರದ ಮೊದಲ ದಿನ ರೋಸ್ ಡೇಯನ್ನು ಆಚರಿಸಿದರೆ, ಮೂರನೇ ದಿನ ಅಂದರೆ ಫೆಬ್ರವರಿ 9 ರಂದು ಚಾಕೊಲೇಟ್ ದಿನವನ್ನು (Chocolate Day) ಆಚರಿಸಲಾಗುತ್ತದೆ. ಇದು ಸಂಬಂಧಗಳಿಗೆ ಮಾಧುರ್ಯವನ್ನು ಸೇರಿಸುವ ವಿಶೇಷ ಸಂದರ್ಭವಾಗಿದ್ದು, ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರಿಗೆ ಚಾಕೊಲೇಟ್ ನೀಡುವ ಮೂಲಕ ತಮ್ಮ ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸುತ್ತಾರೆ. ಅಷ್ಟಕ್ಕೂ ಚಾಕೊಲೇಟ್ ದಿನದ ಆಚರಣೆ ಯಾವಾಗ ಮತ್ತು ಹೇಗೆ ಪ್ರಾರಂಭವಾಯಿತು, ಈ ದಿನವ ಮಹತ್ವವೇನು ಎಂಬುದನ್ನು ತಿಳಿಯಿರಿ.
ಚಾಕೊಲೇಟ್ ದಿನದ ಇತಿಹಾಸವೇನು?
ಚಾಕೊಲೇಟ್ ದಿನದ ಇತಿಹಾಸವು 19 ನೇ ಶತಮಾನದ ಯುರೋಪಿನಲ್ಲಿ ಪ್ರಾರಂಭವಾಯಿತು, ಆಗ ಚಾಕೊಲೇಟ್ ಜನಪ್ರಿಯವಾಯಿತು ಮತ್ತು ಚಾಕೊಲೇಟ್ ಪ್ರೀತಿ ಮತ್ತು ವಾತ್ಸಲ್ಯದ ಸಂಕೇತವೆಂದು ಪರಿಗಣಿಸಲ್ಪಟ್ಟಿತು. ಕ್ರಮೇಣ, ಚಾಕೊಲೇಟ್ ಅನ್ನು ಪ್ರೇಮ ಪ್ರಸ್ತಾಪಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಉಡುಗೊರೆಯಾಗಿ ನೀಡುವುದು ಒಂದು ಸಂಪ್ರದಾಯವಾಯಿತು.
ವ್ಯಾಲೆಂಟೈನ್ ವೀಕ್‌ಗೆ ಚಾಕೊಲೇಟ್ ದಿನವನ್ನು 1990 ರಲ್ಲಿ ಸೇರಿಸಲಾಯಿತು. ಪ್ರೇಮಿಗಳ ವಾರದ ಮೂರನೇ ದಿನವಾದ ಫೆಬ್ರವರಿ 9 ಅನ್ನು ಅಮೆರಿಕದಲ್ಲಿ ಚಾಕೊಲೇಟ್ ದಿನವೆಂದು ಘೋಷಿಸಲಾಯಿತು ಎಂದು ನಂಬಲಾಗಿದೆ. ಚಾಕೊಲೇಟ್ ಮಾರಾಟವನ್ನು ಹೆಚ್ಚಿಸಲು ಈ ನಿರ್ಧಾರ ತೆಗೆದುಕೊಳ್ಳಲಾಯಿತು, ಇದು ಚಾಕೊಲೇಟ್ ಮಾರಾಟದ ಹೆಚ್ಚಳಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತದೆ.
ಚಾಕೊಲೇಟ್ ದಿನವನ್ನು ಏಕೆ ಆಚರಿಸಲಾಗುತ್ತದೆ?
ಚಾಕೊಲೇಟ್ ದಿನದ ಆಚರಣೆಯು ಪಾಶ್ಚಿಮಾತ್ಯ ದೇಶಗಳಲ್ಲಿ ಹುಟ್ಟಿಕೊಂಡಿತು, ಅಲ್ಲಿ ಚಾಕೊಲೇಟ್ ಅನ್ನು ಸಂತೋಷ, ಪ್ರೀತಿ ಮತ್ತು ಕಾಳಜಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಚಾಕೊಲೇಟ್ ರುಚಿಯಲ್ಲಿ ಸಿಹಿಯಾಗಿರುತ್ತದೆ, ಜೊತೆಗೆ ಅದನ್ನು ತಿನ್ನುವುದರಿಂದ ಮನಸ್ಥಿತಿಯೂ ಸುಧಾರಿಸುತ್ತದೆ. ಇದಲ್ಲದೆ, ಚಾಕೊಲೇಟ್ ಅಥವಾ ಸಿಹಿತಿಂಡಿಗಳನ್ನು ತಿಂದ ನಂತರ ಪ್ರತಿಯೊಬ್ಬರೂ ಸಂತೋಷವಾಗಿರುತ್ತಾರೆ. ಆದ್ದರಿಂದ, ಸಂಬಂಧದಲ್ಲಿ ಪ್ರೀತಿ ಮತ್ತು ಮಾಧುರ್ಯವನ್ನು ಬಲಪಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಚಾಕೊಲೇಟ್‌ನ ಸಿಹಿ ರುಚಿ ಪ್ರೀತಿ ಮತ್ತು ಸ್ನೇಹದ ಮಾಧುರ್ಯವನ್ನು ಸಂಕೇತಿಸುತ್ತದೆ. ಈ ದಿನವು ಜನರಿಗೆ ಸಂಬಂಧಗಳನ್ನು ಬಲಪಡಿಸಲು ಮತ್ತು ತಪ್ಪುಗ್ರಹಿಕೆಗಳನ್ನು ಪರಿಹರಿಸಲು ಅವಕಾಶವನ್ನು ನೀಡುತ್ತದೆ.
ಚಾಕೊಲೇಟ್ ತಿನ್ನುವುದರಿಂದ ಸಿರೊಟೋನಿನ್ ಮತ್ತು ಡೋಪಮೈನ್ ಎಂಬ ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ, ಇದು ಮನಸ್ಥಿತಿಯನ್ನು ಹೆಚ್ಚಿಸುತ್ತದೆ ಮತ್ತು ಸಂತೋಷವನ್ನು ತರುತ್ತದೆ.
ನಿಮ್ಮ ಪ್ರೀತಿ ಪಾತ್ರರಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬಯಸಿದರೆ, ಚಾಕೊಲೇಟ್ ದಿನದಂದು ಅವರಿಗೆ ಚಾಕೊಲೇಟ್ ನೀಡುವ ಮೂಲಕ ನೀವು ಸ್ನೇಹ ಮತ್ತು ಪ್ರೀತಿಯನ್ನು ಪ್ರಾರಂಭಿಸಬಹುದು.
ಚಾಕೊಲೇಟ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆದ್ದರಿಂದ ನಿಮ್ಮ ಸಂಗಾತಿ ಅಥವಾ ಸ್ನೇಹಿತರಿಗೆ ಚಾಕೊಲೇಟ್ ಉಡುಗೊರೆಯಾಗಿ ನೀಡುವುದರಿಂದ ಅವರ ಮನಸ್ಥಿತಿ ಉತ್ತಮವಾಗಿರುತ್ತದೆ.
ಚಾಕೊಲೇಟ್ ದಿನದಂದು ನಿಮ್ಮ ಸಂಗಾತಿಗೆ ಚಾಕೊಲೇಟ್ ನೀಡುವುದು ಕೇವಲ ಉಡುಗೊರೆಯಲ್ಲ, ಅದು ಒಂದು ಭಾವನೆ. ನಿಮ್ಮ ಸಂಬಂಧದಲ್ಲಿ ಮಾಧುರ್ಯ, ತಿಳುವಳಿಕೆ ಮತ್ತು ಸಂತೋಷವನ್ನು ಕಾಪಾಡಿಕೊಳ್ಳಲು ನೀವು ಬಯಸುತ್ತೀರಿ ಎಂದು ಇದು ತೋರಿಸುತ್ತದೆ.
ಡಾರ್ಕ್ ಚಾಕೊಲೇಟ್ ಆಳವಾದ ಪ್ರೀತಿ ಮತ್ತು ವಿಶ್ವಾಸವನ್ನು ಪ್ರತಿನಿಧಿಸುತ್ತದೆ, ಮಿಲ್ಕ್ ಚಾಕೊಲೇಟ್ ಕಾಳಜಿ ಮತ್ತು ಮೃದು ಭಾವನೆಗಳನ್ನು ಸಂಕೇತಿಸುತ್ತದೆ.
T20 World Cup 2026: ಟಿ20 ವಿಶ್ವಕಪ್ 2026ರ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ (Team India) ವಿಶ್ವ ದಾಖಲೆ ನಿರ್ಮಿಸಿದೆ. ಅದು ಸಹ ಸತತ ಗೆಲುವಿನೊಂದಿಗೆ. ಅಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಸತತವಾಗಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ವರ್ಲ್ಡ್ ರೆಕಾರ್ಡ್ ಟೀಮ್ ಇಂಡಿಯಾ ಪಾಲಾಗಿದೆ.
ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಯುಎಸ್ಎ ವಿರುದ್ಧದ ಮ್ಯಾಚ್ನಲ್ಲಿ ಭಾರತ ತಂಡವು 29 ರನ್ಗಳ ಗೆಲುವು ದಾಖಲಿಸಿದೆ. ಈ ಗೆಲುವಿನ ರೂವಾರಿಗಳಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರು. ಅದರಲ್ಲೂ ನಿನ್ನೆಯಷ್ಟೇ ಭಾರತ ತಂಡವನ್ನು ಕೂಡಿಕೊಂಡಿದ್ದ ಸಿರಾಜ್ಗೆ ಈ ಪಂದ್ಯದಲ್ಲಿ ಆಡುವ ಬಗ್ಗೆ ಯಾವುದೇ ಖಚಿತತೆ ಇರಲಿಲ್ಲ. ಆದರೆ ಜಸ್ಪ್ರೀತ್ ಬುಮ್ರಾ ಜ್ವರಕ್ಕೆ ತುತ್ತಾಗಿದ್ದರಿಂದ ದಿಢೀರ್ ಕಣಕ್ಕಿಳಿಯಬೇಕಾಯಿತು. ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಸಿರಾಜ್ 3 ವಿಕೆಟ್ ಕಬಳಿಸಿ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ವಿಶೇಷ ಎಂದರೆ ಮೊಹಮ್ಮದ್ ಸಿರಾಜ್ ಟಿ20 ವಿಶ್ವಕಪ್ಗೆ ಆಯ್ಕೆಯಾಗಿಯೇ ಇರಲಿಲ್ಲ. ಅಂದರೆ ಭಾರತ ತಂಡದ ಘೋಷಣೆಯಾದಾಗ ಪ್ರಮುಖ ವೇಗಿಗಳಾಗಿ ಆಯ್ಕೆಯಾಗಿದ್ದು ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ. ಆದರೆ ಸೌತ್ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಹರ್ಷಿತ್ ರಾಣಾ ಗಾಯಗೊಂಡಿದ್ದರು. ಈ ಗಾಯವು ಗಂಭೀರವಾಗಿದ್ದ ಕಾರಣ ಅವರನ್ನು ವಿಶ್ವಕಪ್ ತಂಡದಿಂದ ಕೈ ಬಿಡಲಾಯಿತು.
ಇತ್ತ ಹರ್ಷಿತ್ ರಾಣಾ ಟಿ20 ವಿಶ್ವಕಪ್ನಿಂದ ಹೊರಬೀಳುವುದು ಖಚಿತವಾಗುತ್ತಿದ್ದಂತೆ, ಶುಕ್ರವಾರ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊಹಮ್ಮದ್ ಸಿರಾಜ್ಗೆ ಕರೆ ಮಾಡಿದ್ದರು. ಹೀಗೆ ಕರೆ ಮಾಡಿದ ಸೂರ್ಯ ಹೇಳಿದ್ದು ಒಂದೇ ಮಾತು, ಮಿಯಾ ಬ್ಯಾಗ್ ಪ್ಯಾಕ್ ಮಾಡಿ ಬಂದು ಬಿಡು.
ಸೂರ್ಯಕುಮಾರ್ ಯಾದವ್ ಬ್ಯಾಗ್ ಪ್ಯಾಕ್ ಮಾಡಿ ಬಂದು ಬಿಡು ಅಂದಾಗ, ನಾನು ತಮಾಷೆ ಅಂದ್ಕೊಂಡೆ. ಹೀಗಾಗಿ ಸೂರ್ಯನ ಜೊತೆ ಪ್ರಾಂಕ್ ಮಾಡಬೇಡ ಅಂದೆ. ಆ ಬಳಿಕ ಅವರು ಸಿರಿಯಸ್ಸ್ ಆಗಿ ಮಾತನಾಡಿದರು. ಹೀಗಾಗಿ ನಾನು ಮುಂಬೈಗೆ ಹೊರಟೆ. ವಿಮಾನದಲ್ಲಿದ್ದಾಗಲೂ ನನಗೆ ಇದೊಂದು ಕನಸು ಅನಿಸುತ್ತಿತ್ತು.
ಏಕೆಂದರೆ ತವರಿನಲ್ಲಿ ವಿಶ್ವಕಪ್ ಆಡುವುದು ನನ್ನ ಕನಸಾಗಿತ್ತು. ಇದಾಗ್ಯೂ ನಾನು ಆಯ್ಕೆಯಾಗಿರಲಿಲ್ಲ. ಇದೀಗ ಅನಿರೀಕ್ಷಿತವಾಗಿ ಅವಕಾಶ ಸಿಕ್ಕಿದೆ. ಎಲ್ಲವೂ ಅದೃಷ್ಟ ಎಂದು ಭಾವಿಸಿದ್ದೀನಿ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.
ಸ್ಪೇನ್ಗೆ ತೆರಳಲು ಪ್ಲ್ಯಾನ್ ರೂಪಿಸಿದ್ದ ಸಿರಾಜ್:
ನನ್ನ ದೇಶೀಯ ಟೂರ್ನಿಯ ಸೀಸನ್ ಮುಗಿದಿದೆ. ಟಿ20 ವಿಶ್ವಕಪ್ ತಂಡದಲ್ಲೂ ನಾನಿಲ್ಲ. ಹೀಗಾಗಿ ಫುಟ್ಬಾಲ್ ಮ್ಯಾಚ್ ನೋಡಲು ಪ್ಲ್ಯಾನ್ ರೂಪಿಸಿದ್ದೆ. ಫೆಬ್ರವರಿ 15 ರಂದು ರಿಯಲ್ ಮ್ಯಾಡ್ರಿಡ್ ಮ್ಯಾಚ್ ಇದೆ. ಈ ಪಂದ್ಯವನ್ನು ನೋಡಲು ಸ್ಪೇನ್ಗೆ ತೆರಳಲು ಯೋಜನೆ ಹಾಕಿಕೊಂಡಿದ್ದೆ.
ಅಷ್ಟೇ ಅಲ್ಲದೆ ರಂಝಾನ್ ಬೇರೆ ಬರುತ್ತಿದೆ. ಹೀಗಾಗಿ ಸಂಪೂರ್ಣ ವಿಶ್ರಾಂತಿ ಪಡೆಯಬೇಕೆಂದು ನಿರ್ಧರಿಸಿದ್ದೆ. ಆದರೆ ಎಲ್ಲವೂ ದೇವರ ಇಚ್ಛೆ. ಏನಾಗುತ್ತದೋ, ಅದು ಆಗುತ್ತದೆ.
ಇದಾಗ್ಯೂ ನನಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಸಿಗುತ್ತದೆ ಅಂದುಕೊಂಡಿರಲಿಲ್ಲ. ಏಕೆಂದರೆ ಈಗಷ್ಟೇ ನಾನು ತಂಡವನ್ನು ಕೂಡಿಕೊಂಡಿದ್ದೆ. ಮೊದಲ ಪಂದ್ಯಕ್ಕಾಗಿ ಸಿದ್ಧತೆಗಳನ್ನು ಸಹ ಶುರು ಮಾಡಿರಲಿಲ್ಲ.
ಆದರೆ ಜಸ್ಪ್ರೀತ್ ಬುಮ್ರಾಗೆ ಹುಷಾರಿಲ್ಲದ ಕಾರಣ ನೀನು ಆಡಬೇಕೆಂದು ತಿಳಿಸಿದ್ದರು. ಬೆಳಿಗ್ಗೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಭಾಗವಾಗಬೇಕೆಂದು ತಿಳಿಸಿದಾಗ ನಿಜಕ್ಕೂ ಖುಷಿಯಾಯಿತು. ಈ ಖುಷಿಯೊಂದಿಗೆ ನಾನು ಕೆಲ ವಿಡಿಯೋಗಳನ್ನು ವೀಕ್ಷಿಸಿ ಪಂದ್ಯಕ್ಕಾಗಿ ಸಿದ್ಧತೆಗಳನ್ನು ಆರಂಭಿಸಿದೆ.
ಇನ್ನು ಬ್ಯಾಟಿಂಗ್ ಮುಗಿಸಿದ ಬಂದ ಇಶಾನ್ ಕಿಶನ್ ಕೂಡ ಪಿಚ್ ಬಗ್ಗೆ ಕೆಲ ಮಾಹಿತಿಗಳನ್ನು ಹಂಚಿಕೊಂಡರು. ಹೀಗಾಗಿ ಹೇಗೆ ಬೌಲಿಂಗ್ ಮಾಡಬೇಕೆಂದು ನಾನು ಯೋಜನೆ ರೂಪಿಸಿದ್ದೆ. ಅದರಂತೆ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರುವುದಕ್ಕೆ ಖುಷಿಯಿದೆ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.
ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದಿದ್ದ ಮೊಹಮ್ಮದ್ ಸಿರಾಜ್ 29 ರನ್ ನೀಡಿ 4 ವಿಕೆಟ್ ಕಬಳಿಸಿದ್ದಾರೆ. ಅದು ಕೂಡ 2024 ರ ಬಳಿಕ. ಅಂದರೆ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಪರ ಕೊನೆಯ ಟಿ20 ಪಂದ್ಯವಾಡಿದ್ದು 2024 ರಲ್ಲಿ. ಇದಾದ ಬಳಿಕ ಅವರು ಭಾರತ ಟಿ20 ತಂಡದ ಭಾಗವಾಗಿರಲಿಲ್ಲ. ಇದೀಗ ದಿಢೀರ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಮಿಯಾ ಭಾಯ್ ಯಶಸ್ವಿಯಾಗಿದ್ದಾರೆ.
ಮೈಸೂರು, ಫೆಬ್ರವರಿ 08: ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಸಚಿವ ಕೆ.ಜೆ. ಜಾರ್ಜ್ ನಂತರ ಕಾಂಗ್ರೆಸ್ನ ಮತ್ತೊಬ್ಬ ನಾಯಕ ಅಸಮಾಧಾನ ಹೊರ ಹಾಕಿದ್ದಾರೆ. ಪೊಲೀಸ್ ಠಾಣೆ ಉದ್ಘಾಟನೆ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿ ಹೊರ ನಡೆಯಲು ಮುಂದಾದ ಪ್ರಸಂಗ ನಡೆದಿದೆ. ಈ ವೇಳೆ ಸಚಿವ ಪರಮೇಶ್ವರ್ ತನ್ವೀರ್ಸೇಠ್ ಮನವೊಲಿಕೆ ಯತ್ನ ಮಾಡಿದ್ದು, ಜೊತೆಗೆ ಶಾಸಕ ಅನಿಲ್ ಕೂಡ ಅವರನ್ನು ಸಮಾಧಾನ ಮಾಡಿದ್ದಾರೆ. ಸ್ಟೇಜ್ ಮೇಲೆ ಬಂದರೆ ಬೇರೆ ಮಾತನಾಡುತ್ತೇನೆ ಎಂದಿದ್ದ ತನ್ವೀರ್ ಸೇಠ್, ಕೊನೆಗೆ ಒಲ್ಲದ ಮನಸ್ಸಿನಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ನಿರ್ಮಾಪಕ ಕನಕಪುರ ಶ್ರೀನಿವಾಸ್ (Kanakapura Srinivas) ಅವರು ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಅನೇಕರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಡಿಕೆ ಶಿವಕುಮಾರ್, ಧ್ರುವ ಸರ್ಜಾ, ಎ.ಪಿ. ಅರ್ಜುನ್, ಜೋಗಿ ಪ್ರೇಮ್, ಪುನೀತ್ ರಾಜ್ಕುಮಾರ್ ಸೇರಿದಂತೆ ಹಲವರ ವಿರುದ್ಧ ಅವರು ಅಶ್ಲೀಲವಾಗಿ ಮಾತನಾಡಿದ್ದರು. ಅದಕ್ಕೆ ಚಿತ್ರರಂಗದಲ್ಲಿ ಖಂಡನೆ ವ್ಯಕ್ತವಾಗಿದೆ. ಸಿಸಿಎಲ್ ಗೆಲುವಿನ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಈ ಬಗ್ಗೆ ಪ್ರಶ್ನೆ ಕೇಳಲಾಯಿತು. ತಮ್ಮದೇ ರೀತಿಯಲ್ಲಿ ಅವರು ಉತ್ತರ ನೀಡಿದ್ದಾರೆ. ‘ಇದು ಸಿಸಿಎಲ್ ಸುದ್ದಿಗೋಷ್ಠಿ. ಸಿಹಿ ತಿನ್ನುವ ಸಂದರ್ಭ. ಈ ವೇಳೆ ಮೆಣಸಿನಕಾಯಿ ಯಾಕೆ? ನಾವು ಕಪ್ ಗೆಲ್ಲಲು 12 ವರ್ಷ ಕಾದಿದ್ದೇವೆ. ನಮ್ಮ ಉತ್ತರಕ್ಕಾಗಿ ನೀವು ಕೂಡ ಸ್ವಲ್ಪ ಕಾಯಿರಿ. ಇನ್ನೊಂದು ವೇದಿಕೆ ಹತ್ತುತ್ತೇನೆ. ಆಗ ಮಾತನಾಡುತ್ತೇನೆ. ಈಗ ಲಾಡು ತಿನ್ನುವ ಸಮಯ, ಮೆಣಸಿನಕಾಯಿ ಅಲ್ಲ. ಇದು 30 ವರ್ಷದ ಅನುಭವದ ಮಾತು’ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ಕೊಡಗು, ಫೆಬ್ರುವರಿ 08: ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಆನೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಭಾನುವಾರ ಬೆಳಿಗ್ಗೆ ಏಕಾಏಕಿ ಬೆಂಕಿ (Car Catches Fire)ಕಾಣಿಸಿಕೊಂಡ ಘಟನೆ ನಡೆದಿದೆ. ಚಲಿಸುತ್ತಿದ್ದ ಕಾರಿನಿಂದ ಧೂಮ ಮತ್ತು ಬೆಂಕಿ ಕಾಣಿಸಿಕೊಂಡ ತಕ್ಷಣ ಅಬ್ದುಲ್ ಮಜೀದ್ ಹಾಗೂ ಕಾರು ಚಾಲಕ ಎಚ್ಚರಿಕೆಯಿಂದ ಕಾರಿನಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಕುಶಾಲನಗರ ಅಗ್ನಿಶಾಮಕ ದಳ, ಸ್ಥಳಕ್ಕೆ ಆಗಮಿಸಿ ತಕ್ಷಣವೇ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರಿಗೆ ಹೆಚ್ಚಿನ ಹಾನಿಯಾಗಿದ್ದು, ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದಿಲ್ಲ.
ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ (virat kohli) ಭರ್ಜರಿ ದಾಖಲೆಯನ್ನು ಮುರಿಯುವ ಮೂಲಕ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ ಮೂರನೇ ಪಂದ್ಯದಲ್ಲಿ ಭಾರತ ಮತ್ತು ಯುಎಸ್ಎ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ತಂಡದ ನಾಯಕ ಮೊನಾಂಕ್ ಪಟೇಲ್ ಭಾರತ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ನಾಯಕ ಸೂರ್ಯಕುಮಾರ್ ಯಾದವ್ ಪ್ರಚಂಡ ಬ್ಯಾಟಿಂಗ್ ಪ್ರದರ್ಶೀಸಿದ್ದರು.
49 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ 4 ಸಿಕ್ಸರ್ ಹಾಗೂ 10 ಫೋರ್ಗಳೊಂದಿಗೆ ಅಜೇಯ 84 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಭಾರತ ತಂಡವು 20 ಓವರ್ಗಳಲ್ಲಿ 161 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಯುಎಸ್ಎ ತಂಡವು 20 ಓವರ್ಗಳಲ್ಲಿ 132 ರನ್ಗಳಿಸಿ 29 ರನ್ಗಳಿಂದ ಸೋಲೊಪ್ಪಿಕೊಂಡಿತು.
ನಿರೀಕ್ಷೆಯಂತೆ ಈ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಸೂರ್ಯಕುಮಾರ್ ಪಾಲಾಯಿತು.
ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಟೀಮ್ ಇಂಡಿಯಾ ಪರ 125 ಟಿ20 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಒಟ್ಟು 16 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಭಾರತೀಯ ಎನಿಸಿಕೊಂಡಿದ್ದರು.
ಇದೀಗ ವಿರಾಟ್ ಕೊಹ್ಲಿಯ ಈ ದಾಖಲೆಯನ್ನು ಸೂರ್ಯಕುಮಾರ್ ಯಾದವ್ ಮುರಿದಿದ್ದಾರೆ. ಟೀಮ್ ಇಂಡಿಯಾ ಪರ ಈವರೆಗೆ 105 ಟಿ20 ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ ಯಾದವ್ ಒಟ್ಟು 17 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.