Headlines

nagaraj11081993

ವಿದ್ಯಾರ್ಥಿಗಳಿಗೆ ಗುಡ್​​ನ್ಯೂಸ್: ಆಂಗ್ಲ ಮಾಧ್ಯಮ ಶಾಲೆಗಳ ಮೇಲ್ದರ್ಜೆಗೆ ಮುಂದಾದ ಶಿಕ್ಷಣ ಇಲಾಖೆ – Kannada News | Karnataka Education Department decide Upgrade Governmnet English Medium School up to 10th

ಬೆಂಗಳೂರು, (ಜೂನ್ 16): 2018-19ರಲ್ಲಿ ಆರಂಭವಾದ 1001 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ (Karnataka English medium Schools) 7ನೇ ತರಗತಿ ಪೂರೈಸಿದ ಸುಮಾರು 30 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ. ಸರ್ಕಾರವು 8ನೇ ತರಗತಿಗೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆರಂಭಿಸದ ಕಾರಣ, ಎಲ್ಲಿಗೆ ಪ್ರವೇಶ ಪಡೆಯಬೇಕೆಂಬ ಗೊಂದಲದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿದ್ದರು. ಹೀಗಾಗಿ ಈ ಬಗ್ಗೆ ಟವಿ9 ವರದಿ ಮಾಡಿತ್ತು. ಇದರ ಬೆನ್ನಲ್ಲೇ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಪರ್ಯಾಯ ಕ್ರಮಕ್ಕೆ ಶಾಲಾ ಶಿಕ್ಷಣ ಇಲಾಖೆ ಮುಂದಾಗಿದ್ದು, …

Read More

ಮೈದಾನದಲ್ಲಿ ಜಗಳ ಮಾಡಿಕೊಂಡಿದ್ದ ವೈಭವ್ ಬೆನ್ನಿಗೆ ನಿಂತ ಶ್ರೀಲಂಕಾದ ಮಾಜಿ ಕ್ರಿಕೆಟಿಗರು – Kannada News | Vaibhav Sooryavanshi Cleared: India A Star Avoids Ban After Sri Lanka A Cricket Controversy

ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ಎ ಹಾಗೂ ಶ್ರೀಲಂಕಾ ಎ (India A vs Sri Lanka A) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತದ ವೈಭವ್ ಸೂರ್ಯವಂಶಿ (Vaibhav Sooryavanshi), ಶ್ರೀಲಂಕಾ ಎ ತಂಡದ ಆಟಗಾರರೊಂದಿಗೆ ಜಗಳ ಮಾಡಿಕೊಂಡಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದ ಕಾರಣ, ನಿಯಮ ಉಲ್ಲಂಘಿಸಿದ ವೈಭವ್ ಸೂರ್ಯವಂಶಿ ವಿರುದ್ಧ ಶಿಸ್ತುಕ್ರಮ ಜರುಗಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿತ್ತು. ಅಂದರೆ ವೈಭವ್​ಗೆ ಡಿಮೆರಿಟ್…

Read More

ಭವಾನಿಪುರದ ಸೋಲು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮಾಜಿ ಸಿಎಂ ಮಮತಾ ಬ್ಯಾನರ್ಜಿ – Kannada News | Mamata Banerjee files plea in Calcutta High Court challenging Assembly Election result in Bhabanipur

ಕೊಲ್ಕತ್ತಾ, ಜೂನ್ 16: ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಭವಾನಿಪುರ ಕ್ಷೇತ್ರದಲ್ಲಿ 15,105 ಮತಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದ್ದರು. ಮೇ 4ರಂದು ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ಅಭೂತಪೂರ್ವ ಬಹುಮತ ಗಳಿಸಿ, ಸುವೇಂದು ಅಧಿಕಾರಿ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭವಾನಿಪುರ ಕ್ಷೇತ್ರದ ಸೋಲನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮದೇ ಭದ್ರಕೋಟೆಯಾಗಿದ್ದ…

Read More

E20 ಪೆಟ್ರೋಲ್ ಹಾಕಿಸುವ ವಾಹನಗಳ ಇನ್ಷೂರೆನ್ಸ್ ಕ್ಲೇಮ್ ತಿರಸ್ಕೃತವಾಗುತ್ತದಾ? ಸರ್ಕಾರದ ಸ್ಪಷ್ಟನೆ ಇದು – Kannada News | E20 Fuel & Car Insurance: Government Clarifies No Claim Rejection for E20 Use

ನವದೆಹಲಿ, ಜೂನ್ 16: ಇ20 ಇಂಧನ ಬಳಸುವ ಕಾರಿಗೆ ಇನ್ಷೂರೆನ್ಸ್ ಕ್ಲೇಮ್ ತಿರಸ್ಕೃತವಾಗಬಹುದು ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ಕೊಟ್ಟಿದ್ದು, ಆ ರೀತಿ ಆಗುವುದಿಲ್ಲ ಎಂದು ಹೇಳಿದೆ. ಶೇ. 20ರಷ್ಟು ಎಥೆನಾಲ್ ಮಿಶ್ರಣವಿರುವ ಇ20 ಪೆಟ್ರೋಲ್ (E20 fuel) ಅನ್ನು ಹಳೆಯ ವಾಹನಗಳು ಬಳಸಿದರೆ ಇನ್ಷೂರೆನ್ಸ್ ಕ್ಲೇಮ್ ಸಾಧ್ಯವಾಗದೇ ಹೋಗಬಹುದು ಎಂದು ಐಸಿಐಸಿಐ ಲೊಂಬಾರ್ಡ್ ಎನ್ನುವ ವಿಮಾ ಕಂಪನಿ ಕಳೆದ ವಾರ ತನ್ನ ಬ್ಲಾಗ್​ನಲ್ಲಿ ಮಾಹಿತಿ ಹಂಚಿಕೊಂಡಿತ್ತು. ಅದು ಸೋಷಿಯಲ್ ಮೀಡಿಯಾದಲ್ಲಿ…

Read More

ಹೀರೋ ಆದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ; ಕೈ ಜೋಡಿಸಿದ ‘ಕೆವಿಎನ್ ಪ್ರೊಡಕ್ಷನ್ಸ್’ – Kannada News | BBK 12 Gilli Nataraj turns hero KVN Productions new movie announcement

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಟ್ರೋಫಿ ಗೆದ್ದ ಗಿಲ್ಲಿ ನಟ (Gilli Nata) ಅವರಿಗೆ ಸಿನಿಮಾಗಳಿಂದ ಸಖತ್ ಆಫರ್ ಬರುತ್ತಿವೆ. ಈಗಾಗಲೇ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ವಿಶೇಷ ಏನೆಂದರೆ ಅವರು ಈಗ ಹೀರೋ ಆಗುತ್ತಿದ್ದಾರೆ. ಅವರು ನಾಯಕ ನಟನಾಗಿ ಅಭಿನಯಿಸಲಿರುವ ಹೊಸ ಸಿನಿಮಾಗೆ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಬೆಂಬಲ ಸಿಕ್ಕಿದೆ. ‘ಜನ ನಾಯಗನ್’, ‘ಟಾಕ್ಸಿಕ್’ ರೀತಿಯ ದೈತ್ಯ ಸಿನಿಮಾಗಳನ್ನು ನಿರ್ಮಿಸಿದ ಈ ಸಂಸ್ಥೆಯು ಗಿಲ್ಲಿ ನಟನ ಸಿನಿಮಾಗೆ ಸಾಥ್…

Read More

ಸುಳ್ಳು ಆರೋಪ ಮಾಡುವುದೇ ಕಾಂಗ್ರೆಸ್‌ ಕೆಲಸ; ಪ್ರಿಯಾಂಕ್ ಖರ್ಗೆ ಪತ್ರಕ್ಕೆ ವಿಎಚ್‌ಪಿ ಅಧ್ಯಕ್ಷ ಅಲೋಕ್ ಕುಮಾರ್ ತಿರುಗೇಟು – Kannada News | VHP International President Alok Kumar hits back to Priyank Kharge open letter on RSS

ನವದೆಹಲಿ, ಜೂನ್ 16: ಕರ್ನಾಟಕ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಬರೆದಿದ್ದ ಬಹಿರಂಗ ಪತ್ರಕ್ಕೆ ವಿಶ್ವ ಹಿಂದೂ ಪರಿಷತ್ (VHP) ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಅವರು ನವದೆಹಲಿಯಲ್ಲಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಆರ್‌ಎಸ್‌ಎಸ್‌ನ ನೋಂದಣಿ ಮತ್ತು ಆದಾಯದ ಮೂಲಗಳ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಎತ್ತಿದ್ದ ಪ್ರಶ್ನೆಗಳಿಗೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕ ಅಲೋಕ್ ಕುಮಾರ್ ಉತ್ತರಿಸಿದ್ದಾರೆ. “ದೇಶದ ಎಲ್ಲಾ ಸಂಸ್ಥೆಗಳೂ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು…

Read More

ಸಿಎಂ ವಿಜಯ್​ರ ಭೇಟಿಯಾದ ವಿಶಾಲ್, ಹೂಗುಚ್ಛ, ಶಾಲು ಬದಲಿಗೆ ಕೊಟ್ಟಿದ್ದೇನು?

ತಮಿಳುನಾಡಿನ ಮುಖ್ಯಮಂತ್ರಿಯಾಗಿ ನಟ ವಿಜಯ್ (Vijay) ಅಧಿಕಾರ ಸ್ವೀಕರಿಸಿದ ನಂತರ, ತಮಿಳು ಚಿತ್ರರಂಗದ ಹಲವು ನಟರು, ತಂತ್ರಜ್ಞರು ಅವರನ್ನು ಭೇಟಿಯಾಗಿ ಅಭಿನಂದಿಸುತ್ತಿದ್ದಾರೆ. ಇತ್ತೀಚೆಗಷ್ಟೆ ನಟ ವಿಶಾಲ್ ಕೂಡ ಸಿಎಂ ವಿಜಯ್ ಅವರನ್ನು ಭೇಟಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಭೇಟಿಯ ಸಂದರ್ಭದಲ್ಲಿ ವಿಶಾಲ್ ಅವರು ವಿಜಯ್ ಅವರಿಗೆ ಹೂಗುಚ್ಛ ಅಥವಾ ಇನ್ಯಾವುದೇ ಉಡುಗೊರೆ ನೀಡಿಲ್ಲ, ಬದಲಿಗೆ ಒಂದೊಳ್ಳೆ ಕಾರ್ಯವನ್ನು ವಿಜಯ್ ಹೆಸರಿನಲ್ಲಿ ಮಾಡಿದ್ದಾರೆ. ಸಿಎಂ ಜೊತೆಗಿನ ಭೇಟಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೊಸ್ಟ್ ಹಂಚಿಕೊಂಡಿರುವ ವಿಜಯ್, ‘ನನ್ನ…

Read More

ಇಸ್ರೇಲ್ ಕೈಲಾಗದಿದ್ದರೆ ಸಿರಿಯಾ ನಿಭಾಯಿಸಲಿ; ಹೆಜ್ಬುಲ್ಲಾ ನಿಗ್ರಹಕ್ಕೆ ಟ್ರಂಪ್ ಐಡಿಯಾ – Kannada News | Let Syria handle Hezbollah if Israel can’t avoid mass killings; Donald Trump suggests

ವಾಷಿಂಗ್ಟನ್, ಜೂನ್ 16: ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಅಲ್ಲಿ ಹೆಜ್ಬುಲ್ಲಾ ವಿರುದ್ಧ ಹೋರಾಡುವಲ್ಲಿ ಇಸ್ರೇಲ್‌ಗಿಂತ ಸಿರಿಯಾ ದೇಶವೇ ಉತ್ತಮ ಕೆಲಸ ಮಾಡಬಲ್ಲದು ಎಂದು ಪ್ರತಿಪಾದಿಸಿದ್ದಾರೆ. ಫ್ರಾನ್ಸ್‌ನಲ್ಲಿ ನಡೆದ ಜಿ7 (G7) ಶೃಂಗಸಭೆಯ ಸಂದರ್ಭದಲ್ಲಿ ಕತಾರ್‌ನ ಎಮಿರ್ ಅವರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಟ್ರಂಪ್, ಇರಾನ್ ಬೆಂಬಲಿತ ಸಶಸ್ತ್ರ ಸಂಘಟನೆಯ ವಿರುದ್ಧ ಬೆಂಜಮಿನ್ ನೆತನ್ಯಾಹು ಅವರ ಮಿಲಿಟರಿ ಕಾರ್ಯಾಚರಣೆಯು ಇರಾನ್…

Read More

ಎಂಬಿಎ ಕಾಲಘಟ್ಟ ಮುಗಿಯಿತು, ಈಗ ಬೇಕಿರೋದು ಟ್ರೇಡ್ ಸ್ಕಿಲ್ಸ್: ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್ ಸಲಹೆ – Kannada News | No MBA, future jobs will be of trade skills, says Chief Economic Advisor V Anantha Nageswaran

ವಿ. ಅನಂತ ನಾಗೇಶ್ವರನ್Image Credit source: PTI ನವದೆಹಲಿ, ಜೂನ್ 16: ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ (CEA) ವಿ. ಅನಂತ ನಾಗೇಶ್ವರನ್ ಅವರು ದೇಶದ ಪ್ರಸ್ತುತ ಶಿಕ್ಷಣ ವ್ಯವಸ್ಥೆ ಮತ್ತು ಉದ್ಯೋಗ ಮಾರುಕಟ್ಟೆಯ ಕುರಿತು ಅತ್ಯಂತ ಕಟು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ. “ಕೇವಲ ದೊಡ್ಡ ಪದವಿಗಳನ್ನು (Degrees) ಪಡೆಯುವುದರಿಂದ ಉದ್ಯೋಗ ಸಿಗುವುದಿಲ್ಲ. ಇಂದಿನ ಮಾರುಕಟ್ಟೆಗೆ ಬೇಕಿರುವುದು ಉದ್ಯೋಗದ ಕೌಶಲ್ಯಗಳು (Employability). ಯುವಜನರು ಕೇವಲ ಸರ್ಟಿಫಿಕೇಟ್‌ಗಳ ಹಿಂದೆ ಓಡುವ ಬದಲು ಪ್ರಾಯೋಗಿಕ ಕೌಶಲ್ಯ ಮತ್ತು ಉತ್ತಮ ಆರೋಗ್ಯವನ್ನು…

Read More

ಮೊಬೈಲ್ ಅತಿಯಾಗಿ ಬಳಸಿದ್ರೆ ಮಣಿಕಟ್ಟು ನೋವು ಬರುತ್ತಾ? ಹಾಗಿದ್ರೆ ನೀವು ಈ ಸಿಂಡ್ರೋಮ್ ಬಗ್ಗೆ ತಿಳಿಯಲೇಬೇಕು – Kannada News | How Excessive Screen Time Is Damaging Your Wrist Health

ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಹಾಗೂ ಗೇಮಿಂಗ್ ಸಾಧನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಇವುಗಳ ಅತಿಯಾದ ಬಳಕೆ ಮಣಿಕಟ್ಟಿನ (Wrist) ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಮತ್ತು ಮೊಬೈಲ್‌ ಹೆಚ್ಚು ಬಳಸುವವರಲ್ಲಿ ‘ಕಾರ್ಪಲ್ ಟನಲ್ ಸಿಂಡ್ರೋಮ್’ (CTS) ಸಮಸ್ಯೆ ಹೆಚ್ಚುತ್ತಿದೆ. ಹೆಸರು ಕೇಳಿದಾಗ ವಿಚಿತ್ರ ಎನಿಸಬಹುದು ಆದರೆ ಇದರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಹಾಗಾದರೆ ಕಾರ್ಪಲ್ ಟನಲ್ ಸಿಂಡ್ರೋಮ್ ಎಂದರೇನು, ಲಕ್ಷಣಗಳು ಹೇಗಿರುತ್ತವೆ ಮತ್ತು ಈ…

Read More