All posts by nagaraj11081993

‘ಧುರಂಧರ್’ ಸಿನಿಮಾ ನಿರ್ಮಾಪಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ – Kannada News | Rahul Gandhi executive producer Dhurandhar movie fact check

ರಣವೀರ್ ಸಿಂಗ್ (Ranveer Singh) ಅಭಿನಯದ ‘ಧುರಂಧರ್’ ಸಿನಿಮಾ ಇತ್ತೀಚೆಗೆ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್​​ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಈ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ನೆಟ್​ಫ್ಲಿಕ್ಸ್​ನಲ್ಲಿ ಸಹ ಲಕ್ಷಾಂತರ ಜನ ಸಿನಿಮಾ ನೋಡಿದ್ದಾರೆ. ಅಲ್ಲದೆ, ಸಿನಿಮಾದ ಬಗ್ಗೆ ಚರ್ಚೆಗಳನ್ನು ಮಾಡುತ್ತಿದ್ದಾರೆ. ಇದೀಗ ನೆಟ್ಟಿಗರು ‘ಧುರಂಧರ್’ ಸಿನಿಮಾದ ಕ್ರೆಡಿಟ್ ಲಿಸ್ಟ್ ಅಥವಾ ನೇಮ್ ಕಾರ್ಡ್​​ನಲ್ಲಿ ವಿಶೇಷ ಅಂಶವೊಂದನ್ನು ಪತ್ತೆ ಮಾಡಿದ್ದಾರೆ. ‘ಧುರಂಧರ್’ ಸಿನಿಮಾ ಕ್ರೆಡಿಟ್ಸ್‌ನಲ್ಲಿ ‘ಕಾರ್ಯಕಾರಿ ನಿರ್ಮಾಪಕ’ ಎಂಬ ಸ್ಥಾನದಲ್ಲಿ ರಾಹುಲ್ ಗಾಂಧಿ ಹೆಸರಿದೆ. ಇದು ಹಲವರ ಆಶ್ಚರ್ಯಕ್ಕೆ ಕಾರಣವಾಗಿದೆ.

‘ಧುರಂಧರ್’ ಸಿನಿಮಾದ ಕ್ರೆಡಿಟ್ಸ್​ನಲ್ಲಿ ರಾಹುಲ್ ಗಾಂಧಿ ಹೆಸರು ಕಂಡು ಹಲವರು ಅಚ್ಚರಿ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೇ ಈ ಸಿನಿಮಾವನ್ನು ನಿರ್ಮಿಸಿದ್ದಾರೆಯೇ? ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ರಾಜಕೀಯ ಬಿಟ್ಟು ಚಿತ್ರರಂಗಕ್ಕೆ ಬಂದಿದ್ದಾರೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿ ಮೀಮ್‌ಗಳನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ. ಆದರೆ ಸತ್ಯ ಬೇರೆಯೇ ಇದೆ. ‘ಧುರಂಧರ್’ ಕ್ರೆಡಿಟ್ಸ್​ನಲ್ಲಿ ಕಾಣಿಸಿಕೊಂಡಿರುವ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ರಾಹುಲ್ ಗಾಂಧಿಗೂ ಲೋಕಸಭೆ ಸದಸ್ಯ ರಾಹುಲ್ ಗಾಂಧಿಗೂ ವ್ಯತ್ಯಾಸವಿದೆ.

ಇದನ್ನೂ ಓದಿ:ನೆಟ್‌ಫ್ಲಿಕ್ಸ್‌ನಲ್ಲಿ ದಾಖಲೆ ಬರೆದ ‘ಧುರಂಧರ್’: ‘ಅನಿಮಲ್’, ‘ಪುಷ್ಪ 2’ ರೆಕಾರ್ಡ್ ಧೂಳೀಪಟ

‘ಧುರಂಧರ್’ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಲ್ಲ. ಬದಲಿಗೆ, ಅವರು ಬಾಲಿವುಡ್​ನಲ್ಲಿ ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿರುವ ಒಬ್ಬ ವೃತ್ತಿಪರ ಸಿನಿಮಾ ನಿರ್ಮಾಪಕ. ಈ ಇಬ್ಬರ ಹೆಸರು ಒಂದೇ ಆಗಿರುವುದು ಈ ಎಲ್ಲಾ ಗೊಂದಲಕ್ಕೆ ಕಾರಣ. ‘ಧುರಂಧರ್’ ಸಿನಿಮಾನಲ್ಲಿ ಕೆಲಸ ಮಾಡಿರುವ ರಾಹುಲ್ ಗಾಂಧಿ, ಈ ಹಿಂದೆಯೂ ಕೆಲವಾರು ಸಿನಿಮಾಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ ‘ರುಸ್ತುಂ’ , ಮನೋಜ್ ಬಾಜಪೇಯಿ ನಟನೆಯ ಖ್ಯಾತ ವೆಬ್ ಸರಣಿ ‘ದಿ ಫ್ಯಾಮಿಲಿ ಮ್ಯಾನ್’. ಶಾಹಿದ್ ಕಪೂರ್ ನಟನೆಯ ವೆಬ್ ಸರಣಿ ‘ಫರ್ಜಿ’, ‘ರಾಕೆಟ್ ಬಾಯ್ಸ್’ ಸರಣಿಗಳಲ್ಲೂ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

‘ಧುರಂಧರ್’ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ನಿರ್ಮಿಸಿದ್ದು, ಜ್ಯೋತಿ ದೇಶಪಾಂಡೆ ಮತ್ತು ಆದಿತ್ಯ ಧಾರ್ ಪ್ರಮುಖ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾವನ್ನು ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಹೋಗುವ ಭಾರತದ ಗೂಢಚಾರನ ಕತೆಯನ್ನು ‘ಧುರಂಧರ್’ ಸಿನಿಮಾ ಒಳಗೊಂಡಿದ್ದು, ಸಿನಿಮಾ ಈ ವರೆಗೆ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 1400 ರಿಂದ 1500 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದೀಗ ‘ಧುರಂಧರ್’ ಸಿನಿಮಾ ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಜನರೇ ನೆಹರೂ, ಇಂದಿರಾ ಗಾಂಧಿಗೆ ಸಮಸ್ಯೆಯಾಗಿದ್ದರು; ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ – Kannada News | Nehru, Indira Gandhi saw Indians as problems PM Modi attacks Congress in Rajya Sabha

ನವದೆಹಲಿ, ಫೆಬ್ರವರಿ 5: ಇಂದು ವಿರೋಧ ಪಕ್ಷದ ಸಂಸದರ ಗದ್ದಲದ ನಡುವೆ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Modi) ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಾಜಿ ಪ್ರಧಾನಿಗಳಾದ ನೆಹರೂ, ಇಂದಿರಾ ಗಾಂಧಿಯ ಹೆಸರನ್ನು ಕೂಡ ಪ್ರಸ್ತಾಪಿಸಿದ ಮೋದಿ, “ಅವರಿಬ್ಬರಿಗೂ ಭಾರತೀಯರು ಸಮಸ್ಯೆಯಾಗಿದ್ದರು. ಕಾಂಗ್ರೆಸ್ ಅವಧಿಯಲ್ಲಿ ಒಪ್ಪಂದ ಎಂದರೆ ಬೋಫೋರ್ಸ್ ಎಂಬಂತಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ವಿಷನ್, ಐಡಿಯಾ, ಪ್ಲಾನ್ ಇರಲಿಲ್ಲ” ಎಂದು ಕಿಡಿಕಾರಿದ್ದಾರೆ.

“ಕಾಂಗ್ರೆಸ್ 2014ರಲ್ಲಿ ಒಂದು ಅವ್ಯವಸ್ಥೆಯನ್ನು ಬಿಟ್ಟು ಹೋಗಿತ್ತು. ಅದನ್ನು ಸ್ವಚ್ಛಗೊಳಿಸಲು ನಮ್ಮ ಸರ್ಕಾರ ಸಾಕಷ್ಟು ಪ್ರಯತ್ನ ಮಾಡಬೇಕಾಯಿತು. ಕಾಂಗ್ರೆಸ್​​ನಿಂದಾಗಿ ಜಗತ್ತು ಭಾರತದ ಬಗ್ಗೆ ಒಂದು ನಿರ್ದಿಷ್ಟ ಇಮೇಜ್ ಅನ್ನು ಹೊಂದಿತ್ತು. ಅದನ್ನು ಬದಲಾಯಿಸಲು ನನಗೆ ಬಹಳ ಸಮಯ ಬೇಕಾಯಿತು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ ಮುಂತಾದ ಎಡಪಕ್ಷಗಳು ಕೇಂದ್ರ ಮತ್ತು ರಾಜ್ಯಗಳಲ್ಲಿ ದಶಕಗಳಿಂದ ಆಡಳಿತ ನಡೆಸಿದ್ದರೂ ಅವು ಮುಖ್ಯವಾಗಿ ಭ್ರಷ್ಟಾಚಾರಕ್ಕೆ ಹೆಸರುವಾಸಿಯಾಗಿವೆ. ಈಗಲೂ ಜನರು ಅವುಗಳ ಬಗ್ಗೆ ಮಾತನಾಡುವಾಗ ಅವರು ವ್ಯಾಪಾರ ಒಪ್ಪಂದಗಳ ಬಗ್ಗೆ ಮಾತನಾಡುವುದಿಲ್ಲ. ಅವರು ಬೋಫೋರ್ಸ್‌ನಂತಹ ಒಪ್ಪಂದಗಳ ಬಗ್ಗೆಯೇ ಮಾತನಾಡುತ್ತಾರೆ” ಎಂದು ಮೋದಿ ಲೇವಡಿ ಮಾಡಿದರು.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವಾಗಲೇ ವಿಪಕ್ಷದಿಂದ ಸಭಾತ್ಯಾಗ, ಸಂಸತ್ ಹೊರಗೆ ಪ್ರತಿಭಟನೆ

“ಕಾಂಗ್ರೆಸ್ ನಾಯಕರು ಭಾರತದ ಜನಸಂಖ್ಯೆಯನ್ನು ಶಕ್ತಿಯ ಬದಲು ಸಮಸ್ಯೆಯಾಗಿ ನೋಡುತ್ತಿದ್ದರು. ಜವಾಹರಲಾಲ್ ನೆಹರು ಅವರು ಭಾರತದ ಆಗಿನ 35 ಕೋಟಿ ಜನಸಂಖ್ಯೆಯನ್ನು ಒಂದು ಪ್ರಮುಖ ಸವಾಲು ಎಂದು ವಿವರಿಸಿದ್ದರು. ಇಂದಿರಾ ಗಾಂಧಿ ಇರಾನ್ ಭೇಟಿಯ ಸಮಯದಲ್ಲಿ ಭಾರತದ ಸಮಸ್ಯೆ 57 ಕೋಟಿ ಜನರಿಗೆ ಏರಿಕೆಯಾಗಿದೆ ಎಂದು ಒಮ್ಮೆ ಹೇಳಿದ್ದರು. ತನ್ನ ದೇಶದ ಜನಸಂಖ್ಯೆಯು ಒಂದು ಹೊರೆಯಾಗಿದೆ ಎಂಬ ಕಲ್ಪನೆಯನ್ನು ಅವರು ಬಿತ್ತರಿಸಿದರು. ಆದರೆ, ನಾವು ನಮ್ಮ ದೇಶದ ಜನರು ಯಾವಾಗಲೂ ಭಾರತದ ದೊಡ್ಡ ಶಕ್ತಿ ಎಂದು ಪ್ರತಿಪಾದಿಸಿದೆವು” ಎಂದು ಮೋದಿ ಹೇಳಿದರು.

“ದೇಶದ ಜನರು ನಮಗೆ ಸೇವೆ ಸಲ್ಲಿಸುವ ಅವಕಾಶ ನೀಡಿದ್ದಾರೆ. ನಮ್ಮ ಹೆಚ್ಚಿನ ಶಕ್ತಿಯನ್ನು ಕಾಂಗ್ರೆಸ್ ಪಕ್ಷದ ತಪ್ಪುಗಳನ್ನು ಸರಿಪಡಿಸಲು ಬಳಸಲಾಗುತ್ತಿದೆ. ಇಂದು ದೇಶವು ನೀತಿಯತ್ತ ಸಾಗುತ್ತಿದೆ. ಭಾರತವು ಸುಧಾರಣಾ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗುತ್ತಿದೆ. ಇಂದು ಜಗತ್ತು ನಮ್ಮ ಉದ್ಯಮಿಗಳನ್ನು ಸಮಾನತೆಯಿಂದ ನೋಡುತ್ತಿದೆ” ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: ಬದಲಾಗುತ್ತಿರುವ ವಿಶ್ವ ಶ್ರೇಣಿಯಲ್ಲಿ ಜಾಗತಿಕ ಶಕ್ತಿಯಾಗುತ್ತಿರುವ ಭಾರತ: ನರೇಂದ್ರ ಮೋದಿ ಹೇಳಿಕೆ

“ಕಾಂಗ್ರೆಸ್ ಆಳ್ವಿಕೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ಕುಸಿತದ ಅಂಚಿನಲ್ಲಿತ್ತು. ನಾನು ಹೊಸ ಜವಾಬ್ದಾರಿಗಳನ್ನು ವಹಿಸಿಕೊಂಡಾಗ ಅವರಿಗೆ ದೇಶದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ನಾನು ಅರಿತುಕೊಂಡೆ. ಎನ್‌ಪಿಎಗಳಿಗೆ ಏನಾಗುತ್ತದೆ ಎಂಬುದರ ಕುರಿತು ಚರ್ಚೆಗಳು ನಡೆದವು. ಸವಾಲು ದೊಡ್ಡದಾಗಿತ್ತು. ಆದರೆ ನಾವು ಬುದ್ಧಿವಂತಿಕೆಯಿಂದ ವರ್ತಿಸಿದೆವು. ನಾವು ಧೈರ್ಯದಿಂದ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ದುರ್ಬಲವಾಗಿದ್ದ ಸರ್ಕಾರಿ ಬ್ಯಾಂಕ್‌ಗಳನ್ನು ನಾವು ವಿಲೀನಗೊಳಿಸಿದ್ದೇವೆ” ಎಂದು ಮೋದಿ ಹೇಳಿದ್ದಾರೆ.

“ಮುದ್ರಾ ಯೋಜನೆಯಡಿಯಲ್ಲಿ ನಾವು ದೇಶದ ಯುವಕರಿಗೆ 30 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಸಾಲವನ್ನು ನೀಡಿದ್ದೇವೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ತಾಯಂದಿರು ಮತ್ತು ಸಹೋದರಿಯರು ಸೇರಿದ್ದಾರೆ. ಮಹಿಳೆಯರು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವ ಕನಸು ಕಾಣುತ್ತಿದ್ದಾರೆ. ನಾವು ಅವರಿಗೆ ನೇರ ಆರ್ಥಿಕ ಸಹಾಯವನ್ನು ಒದಗಿಸಿದ್ದೇವೆ” ಎಂದಿದ್ದಾರೆ.

“ಕಾಂಗ್ರೆಸ್ ನಮ್ಮ ರೈತರನ್ನೂ ಬಿಡಲಿಲ್ಲ. ಈ ದೇಶದಲ್ಲಿ 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವ 100 ಮಿಲಿಯನ್ ರೈತರಿದ್ದಾರೆ. ಅವರನ್ನು ಎಂದಿಗೂ ನೋಡಿಕೊಳ್ಳಲಿಲ್ಲ. ಅವರಿಗೆ ಈ ರೈತರ ಬಗ್ಗೆ ಯಾವುದೇ ಕಾಳಜಿ ಇರಲಿಲ್ಲ. ನಾವು ಸಣ್ಣ ರೈತರ ಬಗ್ಗೆ ಬಹಳ ಸಹಾನುಭೂತಿಯನ್ನು ಹೊಂದಿದ್ದೇವೆ. ಅವರಿಗಾಗಿ ನಾವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಪರಿಚಯಿಸಿದ್ದೇವೆ. ಇಲ್ಲಿಯವರೆಗೆ, ಈ ರೈತರ ಖಾತೆಗಳಿಗೆ 4 ಲಕ್ಷ ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ. ಈ ಯೋಜನೆಯು ರೈತರಿಗೆ ಹೊಸ ಕನಸುಗಳನ್ನು ಕಾಣುವ ಅವಕಾಶವನ್ನು ನೀಡಿದೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:52 pm, Thu, 5 February 26

Source link

ವಾಣಿಜ್ಯಾತ್ಮಕವಾಗಿ ಲಾಭವಿದ್ದರೆ ವೆನೆಜುವೆಲಾದಿಂದಲೂ ತೈಲ ಪಡೆಯುತ್ತೇವೆ: ಭಾರತ ಸರ್ಕಾರದ ಹೇಳಿಕೆ – Kannada News | Depending on commercial viability, India might crude oil from Venezuela and other regions, says MEA spokesperson

ನವದೆಹಲಿ, ಫೆಬ್ರುವರಿ 5: ರಷ್ಯಾ, ಇರಾನ್ ಬದಲು ವೆನೆಜುವೆಲಾ ಹಾಗೂ ಅಮೆರಿಕದಿಂದ ತೈಲ ಖರೀದಿ (Crude Oil) ಖರೀದಿಸಲು ಭಾರತಕ್ಕೆ ತಿಳಿಸಿರುವುದಾಗಿ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆ ವಿಚಾರವಾಗಿ ಭಾರತ ಅಧಿಕೃತವಾಗಿ ಪ್ರತಿಕ್ರಿಯಿಸಿದೆ. ವಾಣಿಜ್ಯಾತ್ಮಕವಾಗಿ ಲಾಭಕಾರಿಯಾಗುವುದಾದರೆ ವೆನೆಜುವೆಲಾ ಹಾಗೂ ಇತರ ಪ್ರದೇಶಗಳಿಂದ ಕಚ್ಚಾ ತೈಲ ಪಡೆಯುವ ಎಲ್ಲಾ ಆಯ್ಕೆಗಳನ್ನೂ ಭಾರತ ಪರಿಗಣಿಸುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಸ್ಪಷ್ಟನೆ ನೀಡಿದ್ದಾರೆ. ‘ಇಂಧನ ಎಲ್ಲಿಂದ ಪಡೆಯಲಾಗುತ್ತದೆ ಎಂಬ ವಿಚಾರದಲ್ಲಿ ಸರ್ಕಾರ ಅನೇಕ ಬಾರಿ ನಿಲುವು ಬಹಿರಂಗಪಡಿಸಿದೆ. 140 ಕೋಟಿ ಜನರಿಗೆ ಇಂಧನ ಭದ್ರತೆ ಒದಗಿಸುವುದು ಸರ್ಕಾರದ ಪರಮ ಗುರಿ ಎಂದು ಹೇಳುತ್ತಲೇ ಬಂದಿದ್ದೇವೆ. ಮಾರುಕಟ್ಟೆ ಪರಿಸ್ಥಿತಿ ಮತ್ತು ಅಂತಾರಾಷ್ಟ್ರೀಯ ಪರಿಸ್ಥಿತಿಗೆ ಅನುಗುಣವಾಗಿ ಇಂಧನ ಮೂಲ ವಿಸ್ತರಿಸುವುದು ನಮ್ಮ ತಂತ್ರದ ಭಾಗವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಬದಲಾಗುತ್ತಿರುವ ವಿಶ್ವ ಶ್ರೇಣಿಯಲ್ಲಿ ಜಾಗತಿಕ ಶಕ್ತಿಯಾಗುತ್ತಿರುವ ಭಾರತ: ನರೇಂದ್ರ ಮೋದಿ ಹೇಳಿಕೆ

ವೆನಿಜುವೆಲಾ ಜೊತೆ ಭಾರತಕ್ಕೆ ವ್ಯಾಪಾರ ಮತ್ತು ಹೂಡಿಕೆ ಸಂಬಂಧ…

ವೆನೆಜುವೆಲಾ ದೇಶದ ಇಂಧನ ಕ್ಷೇತ್ರದಲ್ಲಿ ಭಾರತವು ವ್ಯಾಪಾರ ಮತ್ತು ಹೂಡಿಕೆ ಸಂಬಂಧ ಹೊಂದಿದೆ. ವಾಣಿಜ್ಯಾತ್ಮಕವಾಗಿ ಲಾಭವಾಗುವುದಾರೆ ವೆನಿಜುವೆಲಾ ಮತ್ತಿತರ ಪ್ರದೇಶಗಳಲ್ಲಿ ತೈಲ ಪಡೆಯಲು ಪರಿಗಣಿಸುತ್ತೇವೆ. 2019-20ರವರೆಗೂ ವೆನೆಜುವೆಲಾದಿಂದ ಕಚ್ಛಾ ತೈಲ ಪಡೆಯುತ್ತಿದ್ದೆವು. ದಶಕಕ್ಕೂ ಹೆಚ್ಚು ಕಾಲ ಭಾರತೀಯ ಕಂಪನಿಗಳು ಆ ದೇಶದ ಇಂಧನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದವು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ರಷ್ಯನ್ ತೈಲ ಖರೀದಿ ಬಗ್ಗೆ ಹೇಳಿಕೆ ಇಲ್ಲ…

ರಷ್ಯಾದಿಂದ ಭಾರತವು ತೈಲ ಖರೀದಿ ನಿಲ್ಲಿಸಿದೆಯಾ ಅಥವಾ ಕಡಿಮೆ ಮಾಡಿದೆಯಾ ಎಂಬ ಕುರಿತು ಜೈಸ್ವಾಲ್ ಸ್ಪಷ್ಟನೆ ಕೊಟ್ಟಿಲ್ಲ. ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಸಿಗುತ್ತಿದ್ದರಿಂದ ಖರೀದಿಸುತ್ತಿರುವುದಾಗಿ ಅನೇಕ ಬಾರಿ ಸರ್ಕಾರ ಹೇಳಿದೆ. ಈಗಲೂ ಸರ್ಕಾರದ ನಿಲುವು ಅದೇ ಆಗಿದೆ.

ಇದನ್ನೂ ಓದಿ: ನಾಲ್ಕೈದು ದಿನದಲ್ಲಿ ವ್ಯಾಪಾರ ಒಪ್ಪಂದ ಸಂಬಂಧ ಭಾರತ-ಅಮೆರಿಕ ಜಂಟಿ ಹೇಳಿಕೆ: ಪೀಯೂಶ್ ಗೋಯಲ್

ಡೊನಾಲ್ಡ್ ಟ್ರಂಪ್ ಅವರು ಭಾರತ ಹಾಗು ಅಮೆರಿಕ ನಡುವೆ ಟ್ರೇಡ್ ಡೀಲ್ ನಡೆದಿದೆ ಎಂದು ಘೋಷಿಸಿದ್ದರು. ಈ ವೇಳೆ, ರಷ್ಯನ್ ತೈಲದ ಖರೀದಿಯನ್ನು ನಿಲ್ಲಿಸಲು ಭಾರತ ಒಪ್ಪಿದೆ. ಅದಕ್ಕೆ ಬದಲಾಗಿ ಅಮೆರಿಕ ಹಾಗೂ ವೆನೆಜುವೆಲಾದಿಂದ ತೈಲ ಖರೀದಿ ಹೆಚ್ಚಿಸಲಿದೆ ಎಂದು ಟ್ರಂಪ್ ಹೇಳಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

RCB vs DC Live Score, WPL 2026 Final: ಆರ್​ಸಿಬಿ- ಡೆಲ್ಲಿ ನಡುವೆ ಫೈನಲ್ ಫೈಟ್ – Kannada News | WPL 2026 Final RCB vs DC Live Score Royal Challengers Bengaluru Women vs Delhi Capitals Women Vadodara Full Scorecard in Kannada

ಮಹಿಳಾ ಪ್ರೀಮಿಯರ್ ಲೀಗ್ 2026 ರ ಫೈನಲ್ ಪಂದ್ಯವು ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಫೈನಲ್‌ಗೆ ತಲುಪಿದರೆ, ದೆಹಲಿ ತಂಡವು ಎಲಿಮಿನೇಟರ್ ಪಂದ್ಯವನ್ನು ಗೆದ್ದು ಫೈನಲ್​ಗೆ ಲಗ್ಗೆ ಇಟ್ಟಿದೆ. ಇದು ಡೆಲ್ಲಿ ತಂಡಕ್ಕೆ ಸತತ ನಾಲ್ಕನೇ ಫೈನಲ್ ಆಗಿದ್ದು, ತನ್ನ ಮೊದಲ ಪ್ರಶಸ್ತಿಗಾಗಿ ಕಾಯುತ್ತಿದ್ದರೆ, ಇತ್ತ ಆರ್​ಸಿಬಿ 2024 ರಲ್ಲಿ ಮೊದಲ ಬಾರಿಗೆ ಫೈನಲ್‌ನಲ್ಲಿ ದೆಹಲಿಯನ್ನು ಸೋಲಿಸುವ ಮೂಲಕ ಟ್ರೋಫಿಯನ್ನು ಗೆದ್ದಿತ್ತು. ಹೀಗಾಗಿ ಆರ್​ಸಿಬಿ ಎರಡನೇ ಬಾರಿಗೆ ಚಾಂಪಿಯನ್ ಆಗುವ ಇರಾದೆಯೊಂದಿಗೆ ಕಣಕ್ಕಿಳಿಯುತ್ತಿದೆ.

Source link

ಭಾರತದ ವಿರುದ್ಧ ಆಡದಿದ್ದರೂ ಪಾಕಿಸ್ತಾನಕ್ಕಿದೆ ಸೆಮಿಫೈನಲ್​ಗೇರುವ ಅವಕಾಶ – Kannada News | 2026 T20 World Cup: Pakistan’s Super 8 Path Without Facing India Explained

2026 ರ ಟಿ20 ವಿಶ್ವಕಪ್​ಗೆ (T20 World Cup 2026) ವೇದಿಕೆ ಸಜ್ಜಾಗಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಈ ಮೆಗಾ ಟೂರ್ನಮೆಂಟ್ ಎರಡು ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಟೂರ್ನಿಯಲ್ಲಿ 20 ತಂಡಗಳು ಮುಖಾಮುಖಿಯಾಗುತ್ತಿದ್ದು, ತಲಾ 5 ತಂಡಗಳ 4 ಗುಂಪುಗಳನ್ನು ರಚಿಸಲಾಗಿದೆ. ಗುಂಪು ಹಂತದಲ್ಲಿ ಪ್ರತಿ ತಂಡವೂ ತನ್ನ ಗುಂಪಿನಲ್ಲಿರುವ ಇತರ 4 ತಂಡಗಳ ವಿರುದ್ಧ ಆಡಲಿದೆ. ಆ ಬಳಿಕ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯುತ್ತವೆ. ಆದರೆ ಭಾರತದ ವಿರುದ್ಧ ಪಂದ್ಯವನ್ನಾಡಲು ನಿರಾಕರಿಸಿರುವ ಪಾಕಿಸ್ತಾನ (India vs Pakistan) ತಂಡ 2 ಅಂಕಗಳನ್ನು ಕಳೆದುಕೊಂಡಿರುವುದರಿಂದ ಮುಂದಿನ ಸುತ್ತಿಗೆ ಹೇಗೆ ಅರ್ಹತೆ ಪಡೆಯಲಿದೆ ಎಂಬುದು ಅಲ್ಲರ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರವೆಂದರೆ, ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿರುವುದರ ಹೊರತಾಗಿಯೂ ಪಾಕ್ ತಂಡ ಮುಂದಿನ ಹಂತಕ್ಕೆರುವ ಅವಕಾಶ ಹೊಂದಿದೆ.

ಸೂಪರ್ 8 ಸುತ್ತಿಗೆ ಪಾಕ್ ಅರ್ಹತೆ ಸುಲಭ

ಪಾಕಿಸ್ತಾನ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಪಾಕಿಸ್ತಾನವನ್ನು ಹೊರತುಪಡಿಸಿ ಭಾರತ, ನಮೀಬಿಯಾ, ನೆದರ್‌ಲ್ಯಾಂಡ್ಸ್ ಮತ್ತು ಯುಎಸ್‌ಎ ತಂಡಗಳಿವೆ. ಭಾರತದ ವಿರುದ್ಧ ಪಂದ್ಯವನ್ನಾಡಲು ನಿರಾಕರಿಸಿರುವ ಪಾಕಿಸ್ತಾನ ಉಳಿದ 3 ತಂಡಗಳ ವಿರುದ್ಧ ಪಂದ್ಯವನ್ನಾಡಲಿದೆ. ಪಾಕಿಸ್ತಾನಕ್ಕೆ ಹೋಲಿಸಿದರೆ, ಉಳಿದ ಮೂರು ತಂಡಗಳು ಅಷ್ಟು ಬಲಿಷ್ಠವಾಗಿಲ್ಲ. ಕಳೆದ ವಿಶ್ವಕಪ್​ನಲ್ಲಿ ಯುಎಸ್​ಎ, ಪಾಕಿಸ್ತಾನವನ್ನು ಸೋಲಿಸಿತ್ತಾದರೂ, ಈ ಬಾರಿ ಪಾಕಿಸ್ತಾನ ಬಲಿಷ್ಠವಾಗಿ ಕಾಣುತ್ತಿದೆ. ಇದಕ್ಕೆ ಪೂರಕವಾಗಿ ತವರಿನಲ್ಲಿ ಇತ್ತಿಚೆಗೆ ನಡೆದಿದ್ದ ಟಿ20 ಸರಣಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಪಾಕಿಸ್ತಾನ ವೈಟ್ ವಾಶ್ ಮಾಡಿದೆ.

ಒಂದೇ ಸ್ಥಳದ ನೆರವು

ಇದರ ಜೊತೆಗೆ ಒಂದೇ ಸ್ಥಳದಲ್ಲಿ ಎಲ್ಲಾ ಪಂದ್ಯಗಳನ್ನು ಆಡುವುದು ಪಾಕಿಸ್ತಾನಕ್ಕೆ ದೊಡ್ಡ ಅನುಕೂಲವಾಗಲಿದೆ. ಪಾಕಿಸ್ತಾನ ತನ್ನ ಪಂದ್ಯಗಳನ್ನು ಶ್ರೀಲಂಕಾದ ಎರಡು ಮೈದಾನಗಳಲ್ಲಿ ಆಡಲಿದೆ. ಇದು ಆಟಗಾರರಿಗೆ ಪ್ರಯಾಣದ ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ಪಿಚ್ ಪರಿಸ್ಥಿತಿಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಭಾರತವು 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ದುಬೈ ಸ್ಥಳದಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಆಡಿ ಜಯಗಳಿಸಿತು ಎಂಬುದನ್ನು ನೆನಪಿಸಿಕೊಳ್ಳಲಾಗುತ್ತಿದೆ.

ಶ್ರೀಲಂಕಾದ ಹವಾಮಾನ ಪರಿಸ್ಥಿತಿಗಳು ಪಾಕಿಸ್ತಾನಕ್ಕೆ ಹೊಸದೇನಲ್ಲ. ಅದು ಈಗಾಗಲೇ ಇಲ್ಲಿ ಹಲವಾರು ಬಾರಿ ಆಡಿದ್ದು, ದ್ವಿಪಕ್ಷೀಯ ಸರಣಿಗಳನ್ನು ಗೆದ್ದಿದೆ. ಸ್ಪಿನ್‌ಗೆ ಅನುಕೂಲಕರವಾದ ಈ ವಿಕೆಟ್‌ಗಳು ಪಾಕಿಸ್ತಾನಕ್ಕೆ ಹೆಚ್ಚು ನೆರವು ನೀಡುವ ನಿರೀಕ್ಷೆಯಿದೆ. ಪಾಕಿಸ್ತಾನ ಫೆಬ್ರವರಿ 7 ರಂದು ನೆದರ್‌ಲ್ಯಾಂಡ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಫೆಬ್ರವರಿ 10 ರಂದು ಯುಎಸ್‌ಎ ವಿರುದ್ಧ, ಫೆಬ್ರವರಿ 18 ರಂದು ನಮೀಬಿಯಾ ವಿರುದ್ಧ ಆಡಲಿದೆ. ಭಾರತದೊಂದಿಗೆ ಆಡದಿದ್ದರೂ, ಪಾಕಿಸ್ತಾನ ಯುಎಸ್‌ಎ, ನಮೀಬಿಯಾ ಮತ್ತು ನೆದರ್‌ಲ್ಯಾಂಡ್ಸ್ ವಿರುದ್ಧ ಗೆದ್ದರೆ, ಅದು ಸೂಪರ್-8 ಹಂತವನ್ನು ಸುಲಭವಾಗಿ ತಲುಪುತ್ತದೆ.

T20 World Cup 2026: ಟಿ20 ವಿಶ್ವಕಪ್ ಆಡುವ ಸಂಜು ಸ್ಯಾಮ್ಸನ್ ಕನಸು ಭಗ್ನ

ಸೆಮಿಫೈನಲ್​ವರೆಗೂ ಹಾದಿ ಅಷ್ಟು ಕಷ್ಟವಿಲ್ಲ

ಸೂಪರ್-8ರಲ್ಲಿ ಪಾಕಿಸ್ತಾನ, ಭಾರತವನ್ನು ಎದುರಿಸುವ ಸಾಧ್ಯತೆ ಇಲ್ಲ. ಲೀಗ್ ಹಂತದಲ್ಲಿ ಈ ಎರಡೂ ತಂಡಗಳು ಒಂದೇ ಗುಂಪಿನಲ್ಲಿರುವುದರಿಂದ, ಸೂಪರ್-8ಸುತ್ತಿನಲ್ಲಿ ವಿಭಿನ್ನ ಗುಂಪುಗಳಲ್ಲಿ ಆಡಲಿವೆ. ಅಲ್ಲಿಯೂ ಸಹ, ಪಾಕಿಸ್ತಾನ ಮತ್ತು ಭಾರತ ಗೆದ್ದರೆ, ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಪರಸ್ಪರ ಎದುರಾಗುವ ಸಾಧ್ಯತೆಯಿದೆ. ಆದಾಗ್ಯೂ, ಪಾಕಿಸ್ತಾನವು ಭಾರತದ ವಿರುದ್ಧ ಪಂದ್ಯವನ್ನು ಆಡದಿದ್ದರೂ ಸಹ ಸುಲಭವಾಗಿ ಸೆಮಿಫೈನಲ್ ತಲುಪುವ ಹೆಚ್ಚಿನ ಅವಕಾಶವಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಡಲು ಸಿದ್ಧರಿದ್ದೇವೆ; ಪಾಕ್ ತಂಡದ ಪಂದ್ಯ ಬಹಿಷ್ಕಾರದ ಬಗ್ಗೆ ಸೂರ್ಯ ಅಚ್ಚರಿಯ ಹೇಳಿಕೆ – Kannada News | Pakistan Boycotts India Match at T20 WC: Surya Yadav Reacts, Political Fallout Explained

2026 ರ ಟಿ20 ವಿಶ್ವಕಪ್ (T20 World Cup) ಆರಂಭಕ್ಕೂ ಮುನ್ನ ಪಾಕಿಸ್ತಾನ ತಂಡ, ಟೀಂ ಇಂಡಿಯಾ (India vs Pakistan) ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ರದ್ದಾದರೆ ಐಸಿಸಿ ಜೊತೆಗೆ ಬಿಸಿಸಿಐ ಹಾಗೂ ಪಿಸಿಬಿಗೂ ನಷ್ಟವುಂಟಾಗಲಿದೆ. ಹೀಗಾಗಿ ಐಸಿಸಿ, ಪಾಕ್ ತಂಡ ತನ್ನ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಸೂಚಿಸಿದೆ. ಆದಾಗ್ಯೂ ಇಂದು ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾಕಿಸ್ತಾನದ ಪ್ರಧಾನಿ ನಾವು ನಿಮ್ಮ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದಿದ್ದಾರೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (SuryaKumar Yadav), ಪಾಕಿಸ್ತಾನದ ನಿರ್ಧಾರದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಟೀಂ ಇಂಡಿಯಾ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿರುವ ಬಗ್ಗೆ ಮಾತನಾಡಿರುವ ಸೂರ್ಯ, ‘ಪಾಕಿಸ್ತಾನ ನಮ್ಮ ವಿರುದ್ಧ ಪಂದ್ಯ ಆಡದಿರಲು ನಿರ್ಧರಿಸಿದೆ. ಪಾಕಿಸ್ತಾನದ ನಿರ್ಧಾರಗಳು ನಮ್ಮ ನಿಯಂತ್ರಣದಲ್ಲಿಲ್ಲ. ಆದರೆ ನಾವು ಪಾಕಿಸ್ತಾನದ ವಿರುದ್ಧ ಆಡಲು ನಿರಾಕರಿಸಿಲ್ಲ, ಅವರು ಆಡಲು ನಿರಾಕರಿಸಿದ್ದಾರೆ. ಐಸಿಸಿ ವೇಳಾಪಟ್ಟಿಯ ಪ್ರಕಾರ ನಾವು ಆಡಲು ಸಿದ್ಧರಿದ್ದೇವೆ. ನಮ್ಮ ಟಿಕೆಟ್‌ಗಳು ಸಹ ಬುಕ್ ಆಗಿವೆ. ಮೊದಲು ನಾವು ಮುಂಬೈನಲ್ಲಿ ಅಮೆರಿಕ ವಿರುದ್ಧ ಮತ್ತು ನಂತರ ದೆಹಲಿಯಲ್ಲಿ ಕೆನಡಾ ವಿರುದ್ಧ ಆಡುತ್ತೇವೆ. ಈ ಎರಡು ಪಂದ್ಯಗಳ ನಂತರ, ನಾವು ದೆಹಲಿಯಿಂದ ಕೊಲಂಬೊಗೆ ಹೊರಡುತ್ತಿದ್ದೇವೆ.

ನಮ್ಮ ತಂಡ ಪಾಕಿಸ್ತಾನದ ವಿರುದ್ಧ ಉತ್ತಮವಾಗಿ ಆಡಿದೆ ಮತ್ತು ಭವಿಷ್ಯದಲ್ಲಿಯೂ ಅದಕ್ಕಾಗಿ ಶ್ರಮಿಸುವುದನ್ನು ಮುಂದುವರಿಸುತ್ತದೆ. ನಾವು ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಮೂರು ಬಾರಿ ಆಡಿದ್ದೇವೆ ಮತ್ತು ನಾವು ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ನಮಗೆ ಮತ್ತೆ ಆಡಲು ಅವಕಾಶ ಸಿಕ್ಕರೆ, ನಾವು ಆಡುತ್ತೇವೆ ಮತ್ತು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ವಾಸ್ತವವಾಗಿ, ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಪಾಕಿಸ್ತಾನ ಸರ್ಕಾರ ಬಹಿಷ್ಕರಿಸುವುದಾಗಿ ಘೋಷಿಸಿದೆ. ಈ ಘೋಷಣೆ ಪಿಸಿಬಿಯಿಂದ ಬಂದಿಲ್ಲ, ಬದಲಾಗಿ ಪಾಕಿಸ್ತಾನ ಸರ್ಕಾರದಿಂದ ಬಂದಿದೆ. ಪಾಕ್ ಸರ್ಕಾರ ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಇದನ್ನು ಘೋಷಿಸಿದೆ. ಆದಾಗ್ಯೂ, ಪಿಸಿಬಿಯಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಐಸಿಸಿ ಹೇಳಿತ್ತು.

ಅಲ್ಲದೆ ಭಾರತದ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಿದ್ದಕ್ಕೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಸಮರ್ಥನೆ ನೀಡಿದ್ದಾರೆ. ‘ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ನಾವು ಭಾರತದ ವಿರುದ್ಧ ಆಡುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದ್ದೇವೆ. ಏಕೆಂದರೆ ಆಟದ ಮೈದಾನದಲ್ಲಿ ಯಾವುದೇ ರಾಜಕೀಯ ಇರಬಾರದು. ನಾವು ಬಾಂಗ್ಲಾದೇಶದೊಂದಿಗೆ ಸಂಪೂರ್ಣವಾಗಿ ನಿಲ್ಲಬೇಕು ಮತ್ತು ಇದು ತುಂಬಾ ಸರಿಯಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ನಾವು ಬಾಂಗ್ಲಾದೇಶದೊಂದಿಗೆ ನಿಲ್ಲುತ್ತೇವೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Valentine’s Week List 2026: ಪ್ರೇಮಿಗಳ ವಾರದಲ್ಲಿ ಯಾವೆಲ್ಲಾ ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ; ಇಲ್ಲಿದೆ ಲಿಸ್ಟ್ – Kannada News | Valentine’s Week List 2026: Know which special days are celebrated during Valentine’s Week Here is the list

ವ್ಯಾಲೆಂಟೈನ್ಸ್‌ ವೀಕ್‌Image Credit source: Pinterest

ಪ್ರೀತಿಯ ತಿಂಗಳಾದ ಫೆಬ್ರವರಿ ಈಗಾಗಲೇ ಆರಂಭವಾಗಿದ್ದು, ಪ್ರೇಮಿಗಳ ದಿನ ಸಮೀಪಿಸುತ್ತಿದೆ. ಪ್ರೇಮಿಗಳ ದಿನಕ್ಕೂ ಮುಂಚಿತವಾಗಿ ಫೆಬ್ರವರಿ 7 ರಿಂದ 13 ರವರೆಗೆ ಪ್ರೇಮಿಗಳ ವಾರವನ್ನು (Valentine’s Week) ಸಹ ಆಚರಿಸಲಾಗುತ್ತದೆ. ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ನಿಮ್ಮ ಸಂಗಾತಿಯೊಂದಿಗೆ ವಿಶೇಷ ಕ್ಷಣಗಳನ್ನು ಕಳೆಯಲು ಪ್ರೇಮಿಗಳ ವಾರವು ಅತ್ಯಂತ ರೋಮ್ಯಾಂಟಿಕ್ ಸಮಯ. ಅಷ್ಟೇ ಅಲ್ಲದೆ ನಂಬಿಕೆ, ಅನ್ಯೋನ್ಯತೆ, ಸ್ನೇಹ ಮತ್ತು ಭಾವನಾತ್ಮಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಮಯವೂ ಹೌದು. ರೋಸ್‌ ಡೇ ನಿಂದ ಕಿಸ್‌ ಡೇ ವರೆಗೆ ವ್ಯಾಲೆಂಟೈನ್ಸ್‌ ವೀಕ್‌ನಲ್ಲಿ ಯಾವೆಲ್ಲಾ ವಿಶೇಷ  ದಿನಗಳನ್ನು ಆಚರಿಸಲಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ವ್ಯಾಲೆಂಟೈನ್ಸ್‌ ವೀಕ್‌ನಲ್ಲಿ ಯಾವೆಲ್ಲಾ ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ?

ಫೆಬ್ರವರಿ 7, ಗುಲಾಬಿ ದಿನ: ಪ್ರೇಮಿಗಳ ದಿನವು ಫೆಬ್ರವರಿ 7 ರಂದು ಗುಲಾಬಿ ದಿನದೊಂದಿಗೆ ಪ್ರಾರಂಭವಾಗುತ್ತದೆ. ಈ ದಿನದಂದು ಜನರು ಕೆಂಪು ಗುಲಾಬಿಯನ್ನು ನೀಡುವ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.  ಇದಲ್ಲದೆ  ನೀವು ಸ್ನೇಹವನ್ನು ಪ್ರಾರಂಭಿಸಲು ಬಯಸಿದರೆ, ಹಳದಿ ಗುಲಾಬಿಯನ್ನು, ಸೌಂದರ್ಯ ಅಥವಾ ಸ್ನೇಹವನ್ನು ಹೊಗಳಲು ಬಯಸಿದರೆ ಗುಲಾಬಿ ಬಣ್ಣದ ಗುಲಾಬಿ ಸಹ ನೀಡಬಹುದು.

ಫೆಬ್ರವರಿ 8, ಪ್ರಪೋಸ್ ಡೇ: ಪ್ರಪೋಸ್ ಡೇ ಅನ್ನು ಫೆಬ್ರವರಿ 8 ರಂದು ಆಚರಿಸಲಾಗುತ್ತದೆ. ಈ ದಿನದಂದು ಜನರು ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ.  ನೀವು ಯಾರನ್ನಾದರೂ ಇಷ್ಟಪಟ್ಟು ನಿಮ್ಮ ಭಾವನೆಗಳನ್ನು ಇನ್ನೂ ವ್ಯಕ್ತಪಡಿಸಲು ಸಾಧ್ಯವಾಗದಿದ್ದರೆ, ಪ್ರಪೋಸ್ ಡೇ ದಿನ ನೀವು ಪ್ರೀತಿಸುವ ವ್ಯಕ್ತಿಗೆ ಪ್ರೀತಿಯನ್ನು ವ್ಯಕ್ತಪಡಿಸಬಹುದು.

ಫೆಬ್ರವರಿ 9, ಚಾಕೊಲೇಟ್ ದಿನ: ಈ ದಿನ ಸಂಬಂಧಗಳಿಗೆ ಮಾಧುರ್ಯವನ್ನು ಸೇರಿಸುವ ವಿಶೇಷ ಸಂದರ್ಭವಾಗಿದೆ. ನಿಮ್ಮ ಪ್ರೇಮ ಪ್ರಸ್ತಾಪವನ್ನು ಸ್ವೀಕರಿಸಿದರೆ, ಚಾಕೊಲೇಟ್ ದಿನದಂದು ನಿಮ್ಮ ಗೆಳತಿಗೆ ಅವಳ ನೆಚ್ಚಿನ ಚಾಕೊಲೇಟ್‌ಗಳನ್ನು ನೀಡುವ ಮೂಲಕ ನೀವು ಅವಳ ಹೃದಯವನ್ನು ಮತ್ತೆ ಗೆಲ್ಲಬಹುದು. ನಿಮ್ಮ ಸಂಬಂಧವನ್ನು ಸಿಹಿಗೊಳಿಸಲು ಮತ್ತು ಅದನ್ನು ಶಾಶ್ವತವಾಗಿ ಕಾಪಾಡಿಕೊಳ್ಳಲು ಸಂಗಾತಿಗೆ ಚಾಕೊಲೇಟ್‌ ನೀಡಬಹುದು.

ಫೆಬ್ರವರಿ 10, ಟೆಡ್ಡಿ ಡೇ: ಟೆಡ್ಡಿ ಡೇ ಎಂಬುದು ಮುಗ್ಧತೆ ಮತ್ತು ಮೃದುತ್ವದ ಸಂಕೇತವಾಗಿದೆ. ಈ ದಿನದಂದು ಟೆಡ್ಡಿ ಬೇರ್ ಉಡುಗೊರೆಯಾಗಿ ನೀಡುವುದರಿಂದ ನಿಮ್ಮ ಸಂಗಾತಿಗೆ ಯಾವುದೇ ಸಂದರ್ಭಗಳಿದ್ದರೂ ನೀವು ಯಾವಾಗಲೂ ಅವರ ಜೊತೆಗಿರುತ್ತೀರಿ ಎಂಬ ಫೀಲ್‌ ಬರುತ್ತದೆ. ಅಲ್ಲದೆ ಇದು ಸ್ನೇಹ ಮತ್ತು ಪ್ರಣಯ ಸಂಬಂಧಗಳೆರಡಕ್ಕೂ ಸಂತೋಷವನ್ನು ತರುತ್ತದೆ.

ಫೆಬ್ರವರಿ 11, ಪ್ರಾಮಿಸ್ ಡೇ: ಪ್ರತಿಯೊಂದು ಸಂಬಂಧವು ನಂಬಿಕೆ ಮತ್ತು ಭರವಸೆಗಳ ಮೇಲೆ ನಿರ್ಮಿಸಲ್ಪಟ್ಟಿದೆ. ಪ್ರಾಮಿಸ್ ಡೇಯಂದು, ಸಂಗಾತಿಗಳು ಪ್ರತಿಯೊಂದು ಸನ್ನಿವೇಶದಲ್ಲೂ ಪ್ರಾಮಾಣಿಕರು, ಬದ್ಧರು ಮತ್ತು ಬೆಂಬಲ ನೀಡುವವರಾಗಿರುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತಾರೆ. ಈ ದಿನವು ಸಂಬಂಧಗಳ ಅಡಿಪಾಯವನ್ನು ಬಲಪಡಿಸುತ್ತದೆ.

ಇದನ್ನೂ ಓದಿ: ಸಂಗಾತಿಯಲ್ಲಿ ಈ ಬದಲಾವಣೆಗಳು ಕಂಡುಬಂದರೆ ನೀವು ಪ್ರೀತಿಯಲ್ಲಿ ಮೋಸ ಹೋಗ್ತಿದ್ದೀರಿ ಎಂದರ್ಥ

ಫೆಬ್ರವರಿ 12, ಹಗ್ ಡೇ: ಕೆಲವೊಮ್ಮೆ ಅಪ್ಪುಗೆಯು ಪದಗಳಿಗಿಂತ ಹೆಚ್ಚಿನದನ್ನು ಹೇಳುತ್ತದೆ. ಅಪ್ಪುಗೆಯ ದಿನದಂದು, ನಿಮ್ಮ ಪ್ರೇಮಿಯನ್ನು ಅಪ್ಪಿಕೊಂಡು ನಿಮ್ಮ ಪ್ರೀತಿ ಮತ್ತು ಸುರಕ್ಷತೆಯನ್ನು ವ್ಯಕ್ತಪಡಿಸಿ. ಈ ದಿನವು ಭಾವನಾತ್ಮಕ ಬಂಧಗಳನ್ನು ಗಾಢವಾಗಿಸುತ್ತದೆ.

ಫೆಬ್ರವರಿ 13, ಕಿಸ್ ಡೇ: ಫೆಬ್ರವರಿ 13 ರಂದು ಕಿಸ್ ಡೇ ಆಚರಿಸಲಾಗುತ್ತದೆ. ಈ ದಿನ ದಂಪತಿಗಳು ಮತ್ತು ಪ್ರೇಮಿಗಳಿಗೆ ಬಹಳ ವಿಶೇಷವಾಗಿದೆ, ಏಕೆಂದರೆ ಈ ದಿನದಂದು ಜನರು ಪರಸ್ಪರ ಪ್ರೀತಿಯಿಂದ ಚುಂಬಿಸುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

ಫೆಬ್ರವರಿ 14, ಪ್ರೇಮಿಗಳ ದಿನ: ವ್ಯಾಲೆಂಟೈನ್ಸ್‌ ವೀಕ್‌ನ ಏಳು ದಿನ ಪ್ರೀತಿಯ ವಿವಿಧ ಛಾಯೆಗಳನ್ನು ಪ್ರದರ್ಶಿಸಿದ ನಂತರ, ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಪ್ರತಿಯೊಬ್ಬರೂ ಈ ವಿಶೇಷ ದಿನವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗ 49 ಕೋಟಿ ರೂ ಲಾಟರಿ ಗೆದ್ದ, ಕುಟುಂಬಸ್ಥರ ಸಂತೋಷ ಹೇಗಿತ್ತು ನೋಡಿ – Kannada News | Udupi Family Happy after Son Shantanu Shettygar wins Rs 49 crore lottery in UAE’s Big Ticket lucky draw

ಉಡುಪಿ, (ಫೆಬ್ರವರಿ 05): ಓಮನ್​​ನಲ್ಲಿ ಉದ್ಯೋಗದಲ್ಲಿರುವ ಕರ್ನಾಟಕದ ಉಡುಪಿ ಜಿಲ್ಲೆಯ ಶಂತನು ಶೆಟ್ಟಿಗಾರ್‌ ಅಬುದಾಭಿಯಲ್ಲಿ ನಡೆದ ಬಿಗ್‌ ಟಿಕೆಟ್ ಡ್ರಾನಲ್ಲಿ 49 ಕೋಟಿ ರೂಪಾಯಿ (20 ಮಿಲಿಯನ್‌ ದಿರಮ್‌ ) ಮೊತ್ತದ ಲಾಟರಿ ಗೆದ್ದಿದ್ದಾರೆ. ಹೌದು…ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಾಂತನು‌ ಜ.20 ರಂದು ಬಿಗ್‌ ಟಿಕೆಟ್‌ನಲ್ಲಿ 305810 ಸಂಖ್ಯೆ ಲಾಟರಿ ಖರೀದಿಸಿದ್ದರು. ಫೆ.3ರಂದು ಡ್ರಾ ಫಲಿತಾಂಶ ಹೊರ ಬಿದ್ದಿದ್ದು ಇದರಲ್ಲಿ ಅವರಿಗೆ ಅದೃಷ್ಟ ಖುಲಾಯಿಸಿದೆ. ಆದರೆ ಶಂತನು ತನ್ನ ಸ್ನೇಹಿತರೊಬ್ಬರೊಂದಿಗೆ ಈ ಟಿಕೆಟನ್ನು ಜಂಟಿಯಾಗಿ ಖರೀದಿಸಿದ್ದರು. ಹೀಗಾಗಿ ಅದರಲ್ಲಿ ಅರ್ಧ ಹಣ ಅಂದರೆ ಸರಿ ಸುಮಾರು 24.5 ಕೋಟಿ ರು. ಹಣ ಅವರ ಗೆಳೆಯನಿಗೆ ಸಿಗಲಿದೆ. ಇನ್ನು ಮಟ್ಟು ಪರಿಸರದಲ್ಲಿರುವ ಶಂತನು ಕುಟುಂಬಸ್ಥರು ಫುಲ್ ಖುಷ್ ಆಗಿದ್ದಾರೆ. ಈ ಕುರಿತು ಶಾಂತನು ಪೋಷಕರ ಜೊತೆ ನಮ್ಮ ಉಡುಪಿ ಪ್ರತಿನಿಧಿ ಪ್ರಜ್ವಲ್ ನಡೆಸಿರುವ ಮಾತುಕತೆ ಇಲ್ಲಿದೆ ನೋಡಿ.

ಇದನ್ನೂ ಓದಿ: ವಿದೇಶದಲ್ಲಿ ಕನ್ನಡಿಗನ ಕಮಾಲ್: ಭರ್ಜರಿ 49 ಕೋಟಿ ರೂ. ಲಾಟ್ರಿ ಗೆದ್ದ ಉಡುಪಿಯ ಯುವಕ!

Source link

ಲಂಚ ನೀಡಲು ಹಣವಿಲ್ಲದ್ದಕ್ಕೆ ಬೆಳೆದ ಮೂಲಂಗಿಯನ್ನೇ ತಾಲೂಕು ಕಚೇರಿಗೆ ತಂದ ರೈತ – Kannada News | Tumakuru farmer brings radish to govt office, in lieu of bribe insted of Money

ತುಮಕೂರು, (ಫೆಬ್ರವರಿ 05): ಕರ್ನಾಟದಲ್ಲಿ ಯಾವುದೇ ಕಚೇರಿಗಳಿಗೂ ಹೋದರೂ ಸಹ ಲಂಚವಿಲ್ಲದೇ ಯಾವುದೇ ಕೆಲಸಗಳು ಆಗುತ್ತಿಲ್ಲ. ಏನಾದರೂ ಒಂದು ಮಾಡಿಕೊಡಬೇಕೆಂದರೆ ಅಧಿಕಾರಿಗಳು ಮೊದಲು ಲಂಚಕ್ಕೆ ಬೇಡಿಕೆ ಇಡುತ್ತಾರೆ. ಅದರಂತೆ ತುಮಕೂರಿನ ರೈತನೋರ್ವ ಜಮೀನಿಗೆ ರಸ್ತೆ ಮಾಡಿಕೊಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಹಣವಿಲ್ಲದ ಕಾರಣ ರೈತ ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ತಾಲೂಕು ಕಚೇರಿಗೆ ತಂದಿದ್ದಾರೆ. ಹೌದು.. ತುಮಕೂರು ಜಿಲ್ಲೆ ಮಧುಗುರಿ ತಾಲೂಕಿನ ದೊಡ್ಡರಿ ಜಕ್ಕೇನಹಳ್ಳಿ ಗ್ರಾಮದ ರೈತ ಪ್ರಸನ್ನಕುಮಾರ್ ಎಂಬವರಿಗೆ ಜಮೀನಿಗೆ ರಸ್ತೆ ಮಾಡಿಕೊಡುವಂತೆ ಲೋಕಾಯುಕ್ತರೇ ಸೂಚಿಸಿದ್ದರೂ ಕೂಡ ಕ್ಯಾರೇ ಎನ್ನದ ಕಂದಾಯ ಅಧಿಕಾರಿಗಳು (Revenue Officer) ಲಂಚಕ್ಕಾಗಿ (Bribe) ಬೇಡಿಕೆ ಇಟ್ಟು ಅಲೆದಾಡಿಸಿದ್ದಾರೆ. ಇದರಿಂದ  ಅಕ್ರೋಶಗೊಂಡ ರೈತರೊಬ್ಬರು ತಾನು ಬೆಳೆದ ಮೂಲಂಗಿಯನ್ನೇ (Radish) ಲಂಚವಾಗಿ ನೀಡಲು ತಾಲೂಕು ಕಚೇರಿಗೆ ತಂದಿದ್ದಾರೆ. ಮೂಲಂಗಿ ಸಮೇತ ತಾಲೂಕು ಕಚೇರಿ ಮುಂದೆ ಮೈಕ್ ಹಿಡಿದು ‘ನನಗೆ ಅಧಿಕಾರಿಗಳಿಗೆ ಲಂಚ ನೀಡಲು ಹಣವಿಲ್ಲ. ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ ಬನ್ನಿ ಬನ್ನಿ’ ಎಂದು ಕೂಗಿದ್ದಾರೆ.

ಎರಡು ತಿಂಗಳಾದರೂ ರಸ್ತೆ ನಿರ್ಮಾಣಕ್ಕಾಗಿ ಸ್ಥಳ ಮಹಜರು ಹಾಗೂ ಪರಿಶೀಲನೆಗೆ ಬರಲು ಕೆಲವು ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣವಿಲ್ಲದ ರೈತ ಪ್ರಸನ್ನಕುಮಾರ್ ಅಧಿಕಾರಿಗಳ ಈ ನಡೆಗೆ ಬೇಸರ ವ್ಯಕ್ತಪಡಿಸಿ ತಹಶೀಲ್ದಾರ್ ಬಳಿ ಮನವಿ ಮಾಡಿದ್ದರು. ಅವರು ರಸ್ತೆ ಮಾಡಿಕೊಡಲು ಸೂಚಿಸಿದ್ದರು. ಆದರೆ ಇಲ್ಲಿಯವರೆಗೂ ಕಂದಾಯ ಅಧಿಕಾರಿಗಳಾಗಲಿ, ಗ್ರಾಮ ಲೆಕ್ಕಿಗರಾಗಲಿ ಬಂದಿಲ್ಲ. ಇದರಿಂದ ಬೆಸತ್ತ ರೈತ ಪ್ರಸನ್ನಕುಮಾರ್ ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ಕೊಡಲು ತಾಲೂಕು ಕಚೇರಿಗೆ ತಂದು ಗಮನಸೆಳೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬದಲಾಗುತ್ತಿರುವ ವಿಶ್ವ ಶ್ರೇಣಿಯಲ್ಲಿ ಜಾಗತಿಕ ಶಕ್ತಿಯಾಗುತ್ತಿರುವ ಭಾರತ: ನರೇಂದ್ರ ಮೋದಿ ಹೇಳಿಕೆ – Kannada News | India has unique combination of high growth and low inflation, PM Modi says in Rajya Sabha

ನವದೆಹಲಿ, ಫೆಬ್ರುವರಿ 5: ಬಹಳ ವೇಗವಾಗಿ ಬದಲಾಗುತ್ತಿರುವ ವಿಶ್ವ ಶ್ರೇಣಿಯಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಇಂದು ಗುರುವಾರ ಮೋದಿ ಅವರು ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯದ ವೇಳೆ ಮಾತನಾಡುತ್ತಾ, ಭಾರತದ ಹೆಚ್ಚುತ್ತಿರುವ ಶಕ್ತಿಯ ಬಗ್ಗೆ ಗಮನ ಸೆಳೆದಿದ್ದಾರೆ.

‘ಎರಡನೇ ವಿಶ್ವ ಮಹಾಯುದ್ಧದ ನಂತರ ಹೊಸ ವಿಶ್ವ ಶ್ರೇಣಿ ನಿರ್ಮಾಣವಾಯಿತು. ಈಗ ಜಗತ್ತು ಮತ್ತೆ ಹೊಸ ಶ್ರೇಣಿಯತ್ತ ಸಾಗುತ್ತಿದೆ. ವಿಶ್ವ ಬಂಧು ಎನಿಸಿರುವ ಭಾರತದತ್ತ ಜಗತ್ತು ವಾಲುತ್ತಿದೆ’ ಎಂದು ಪ್ರಧಾನಿಗಳು ಹೇಳಿದ್ದಾರೆ.

ವ್ಯಾಪಾರ ಒಪ್ಪಂದಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ವಂದನಾ ನಿರ್ಣಯದ ಮೇಲಿನ ಭಾಷಣದಲ್ಲಿ ನರೇಂದ್ರ ಮೋದಿ ಅವರು ವ್ಯಾಪಾರ ಒಪ್ಪಂದಗಳ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಯೂರೋಪಿಯನ್ ಯೂನಿಯನ್ ಜೊತೆಗಿನ ವ್ಯಾಪಾರ ಒಪ್ಪಂದವು ಐತಿಹಾಸಿಕ ಎನಿಸಿದೆ. ಹಲವು ದೇಶಗಳೊಂದಿಗೆ ಭವಿಷ್ಯಕ್ಕೆ ತಾಳೆಯಾಗುವ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮೋದಿ ಈ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ: ನಾಲ್ಕೈದು ದಿನದಲ್ಲಿ ವ್ಯಾಪಾರ ಒಪ್ಪಂದ ಸಂಬಂಧ ಭಾರತ-ಅಮೆರಿಕ ಜಂಟಿ ಹೇಳಿಕೆ: ಪೀಯೂಶ್ ಗೋಯಲ್

ತಮ್ಮ ಸರ್ಕಾರದ ಹೆಚ್ಚಿನ ಶಕ್ತಿಯು ಹಿಂದಿನ ತಪ್ಪುಗಳನ್ನು ಸರಿಪಡಿಸುವುದರಲ್ಲೇ ವ್ಯಯವಾಗಿದೆ. ದೇಶದ ಬಗ್ಗೆ ಇದ್ದ ಋಣಾತ್ಮಕ ಅಭಿಪ್ರಾಯವನ್ನು ಸರಿಪಡಿಸಲು ಸುಧಾರಣೆಗಳನ್ನು ತರಲಾಗಿದೆ. ಈಗ ದೇಶದ ಆಡಳಿತದಲ್ಲಿ ಸ್ಪಷ್ಟ ನೀತಿ ಮತ್ತು ದೂರಗಾಮಿ ತಂತ್ರ ಇದೆ ಎಂದಿದ್ದಾರೆ ಪ್ರಧಾನಿಗಳು.

ಹಿಂದೊಮ್ಮೆ ಅತಿದುರ್ಬಲ ಐದು ಆರ್ಥಿಕತೆಗಳಲ್ಲಿ ಒಂದೆನಿಸಿದ್ದ ಭಾರತ ಈಗ ಮೂರನೇ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿದೆ. ಅಧಿಕ ಜಿಡಿಪಿ ವೃದ್ಧಿ ಮತ್ತು ಕಡಿಮೆ ಹಣದುಬ್ಬರದ ವಿಶೇಷ ಅನುಕೂಲ ಭಾರತಕ್ಕೆ ಇದೆ. ಮುಂದುವರಿದ ದೇಶಗಳಿಗೆ ವಯಸ್ಸಾಗುತ್ತಿದೆ. ಭಾರತಕ್ಕೆ ಯುವಜನರ ಸಂಖ್ಯಾಬಲ ಇದೆ ಎಂದು ಪ್ರಧಾನಿಗಳು ಭಾರತಕ್ಕಿರುವ ಹಲವು ಅನುಕೂಲಗಳನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಅಮೆರಿಕ, ಯೂರೋಪ್ ಜೊತೆ ಭಾರತದ ವ್ಯಾಪಾರ ಸಂಬಂಧ, 1991ರ ಉದಾರ ನೀತಿಗಿಂತಲೂ ದೊಡ್ಡದು: ಅರವಿಂದ್ ಪಣಗರಿಯಾ

ಜಾಗತಿಕ ಸಮಸ್ಯೆಗಳಿಗೆ ಭಾರತ ಪರಿಹಾರ ಕೊಡುವ ಮೂಲಕ ವಿಶ್ವಕ್ಕೆ ಭರವಸೆಯ ಬೆಳಕಾಗಿದೆ. ಗ್ಲೋಬಲ್ ಸೌತ್​ಗೆ (ಅಭಿವೃದ್ಧಿಶೀಲ ದೇಶಗಳು) ಭಾರತವು ಧ್ವನಿಯಾಗಿದೆ ಎಂದೂ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link