nagaraj11081993

ತನ್ನ ಖಾಸಗಿ ಅಂಗದಲ್ಲಿ ತಂಬಾಕು, ಸಿಮ್ ಕಾರ್ಡ್​ ತಂದು ಜೈಲಿನಲ್ಲಿ ಸ್ಮಗ್ಲಿಂಗ್! ಯುವತಿ ಅಂದರ್

ಬೆಂಗಳೂರು, ಮಾರ್ಚ್​ 30: ಪರಪ್ಪನ ಅಗ್ರಹಾರದಲ್ಲಿ ನಿರಂತರವಾಗಿ ಅವ್ಯವಹಾರಗಳ ಪ್ರಕರಣಗಳು ವರದಿಯಾಗುತ್ತಿವೆ. ಡಿಜಿಪಿ ಅಲೋಕ್ ಕುಮಾರ್​ರಿಂದ  (DGP Alok Kumar) ಜಾರಿಯಾಗಿರುವ ಕಟ್ಟುನಿಟ್ಟಿನ ಕ್ರಮದ ನಂತರವೂ ಈ ಅವ್ಯವಹಾರಗಳಿಗೆ ಬ್ರೇಕ್ ಬಿದ್ದಿಲ್ಲ. ಜೈಲಿನಲ್ಲೇ ಕೂತು ಕೈದಿಗಳು ವೀಡಿಯೋ ಮಾಡಿರುವುದು ಚರ್ಚೆಯಾದ ಬೆನ್ನಲ್ಲೇ ಕಳೆದ ಗುರುವಾರ ನಡೆದ ಮತ್ತೊಂದು ಅಕ್ರಮ ತಡವಾಗಿ ಬೆಳಕಿಗೆ ಬಂದಿದೆ.ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳನ್ನು ಒಳಗೆ ಕಳ್ಳಸಾಗಣೆ ಮಾಡಲು ಯತ್ನಿಸಿದ 27 ವರ್ಷದ ಮಹಿಳೆಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ತಪಾಸಣೆ ವೇಳೆ ವಿಷಯ ಬಯಲು ಮಾರ್ಚ್ 26ರಂದು…

Read More

ಸ್ಯಾಟಲೈಟ್ ಟು ಮೆಟ್ರೋ ಕನೆಕ್ಟಿವಿಟಿ ಕಷ್ಟ: ಒಂದು ಕಿ.ಮೀ ದಾಟಲು ಪ್ರಯಾಣಿಕರ ಹರಸಾಹಸ!

ಬೆಂಗಳೂರು, ಮಾ.30: ನಗರದ ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣ (KSRTC) ಮತ್ತು ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ನಡುವೆ ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಎರಡು ನಿಲ್ದಾಣಗಳ ನಡುವಿನ ಅಂತರ ಒಂದು ಕಿಲೋಮೀಟರ್‌ಗಿಂತಲೂ ಕಡಿಮೆ ಇದ್ದರೂ, ಸುಗಮ ಸಂಪರ್ಕದ ಕೊರತೆಯಿಂದಾಗಿ ಜನರು ಪರದಾಡುವಂತಾಗಿದೆ. ಇದೀಗ ಈ ಬಗ್ಗೆ ಜನರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಬೆಂಗಳೂರಿಗೆ ಹೊರ ಜಿಲ್ಲೆಗಳಿಂದ ಬರುವ ಪ್ರಯಾಣಿಕರು ಮೆಟ್ರೋ ಹತ್ತಲು ಈ ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ…

Read More

‘ಧುರಂಧರ್ 2’ ನೋಡಿದ ಬಳಿಕ ನಿರ್ದೇಶಕ ಆದಿತ್ಯ ಧಾರ್​​ ಎಚ್ಚರಿಸಿದ ವಿವೇಕ್ ಅಗ್ನಿಹೋತ್ರಿ

‘ಧುರಂದರ್ 2’ ಸಿನಿಮಾ ಮಾಡಿದ ದಾಖಲೆಗಳು ಹಲವು. ಈ ಚಿತ್ರವು ಕೇಲವ 11 ದಿನಗಳಲ್ಲಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ದಾಖಲೆ ಬರೆದಿದೆ ಎಂದೇ ಹೇಳಬಹುದು. ಈ ಚಿತ್ರವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಸಾಮಾನ್ಯರಿಂದ ಹಿಡಿದು, ಸೆಲೆಬ್ರಿಟಿಗಳವರೆಗೆ ಎಲ್ಲರಿಗೂ ಚಿತ್ರ ಇಷ್ಟ ಆಗಿದೆ. ಈಗ ರಣವೀರ್ ಸಿಂಗ್ ಅವರ ಸಿನಿಮಾ ನೋಡಿದ ‘ದಿ ಕಾಶ್ಮೀರಿ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಜೋತ್ರಿ ಅವರು ಆದಿತ್ಯ ಧಾರ್ ಅವರಿಗೆ ಎಚ್ಚರಿಕೆಯನ್ನು ರವಾನಿಸಿದ್ದಾರೆ. ವಿವೇಕ್ ಅವರು ‘ದಿ ಕಾಶ್ಮೀರಿ ಫೈಲ್ಸ್’…

Read More

ಒಣಗಿದ ದಾಸವಾಳ ಹೂ ನುಂಗಿದ ಪರಿಣಾಮ ಉಸಿರುಗಟ್ಟಿ 6 ತಿಂಗಳ ಮಗು ಸಾವು

ಮೈಸೂರು, ಮಾರ್ಚ್​​ 30: ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದ ದುರಂತ ಘಟನೆಯಲ್ಲಿ ಆರುವರೆ ತಿಂಗಳ ಮಗು ಸಾವನ್ನಪ್ಪಿದೆ. ಮನೆಯ ಹೊಸ್ತಿಲಿನಲ್ಲಿ ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳ ಹೂವನ್ನು ಮಗು ಚಿನ್ಮಯಿಗೌಡ ಆಟವಾಡುತ್ತಾ ನುಂಗಿದೆ. ಇದರಿಂದ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಪೋಷಕರು ಇದನ್ನು ಗಮನಿಸಿದ ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಮಗು ಅಸುನೀಗಿದೆ. ಮಗುವಿನ ಗಂಟಲಿನಲ್ಲಿ ಒಣಗಿದ ದಾಸವಾಳ ಹೂವು ಸಿಲುಕಿಕೊಂಡಿದ್ದು ಉಸಿರುಗಟ್ಟುವಿಕೆಗೆ ಕಾರಣವಾಗಿದೆ ಎಂದು ನಂತರ…

Read More

ಭೀಕರ ಅಪಘಾತ: ವಿಧಿಯಾಟಕ್ಕೆ ಮದುವೆಯಾಗಿ 6 ತಿಂಗಳಲ್ಲೇ ನವ ದಂಪತಿ ದುರ್ಮರಣ

ಶಿವಮೊಗ್ಗ/ನೆಲಮಂಗಲ, ಮಾರ್ಚ್​​ 30: ಲಾರಿಗೆ ಬೈಕ್​ ಡಿಕ್ಕಿಯಾಗಿ ನವ ದಂಪತಿ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದ ಬಿಆರ್​ಪಿ ಬಳಿ ನಡೆದಿದೆ. ಬೈಕ್​ನಲ್ಲಿದ್ದ ಬಾಬು(30), ಸಾವಿತ್ರಿ(26) ಮೃತ ದುರ್ದೈವಿಗಳಾಗಿದ್ದು, ಹೋಟೆಲ್ ಕೆಲಸ ಮುಗಿಸಿ ಊರಿಗೆ ಹೋಗ್ತಿದ್ದಾಗ ಅಪಘಾತ ನಡೆದಿದೆ. ಮೃತರು ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ಮೂಲದವರಾಗಿದ್ದು, ಇವರ ಮುದುವೆ ಆಗಿ ಕೇವಲ ಆರು ತಿಂಗಳಾಗಿತ್ತು. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ದೇಗುಲಕ್ಕೆ ತೆರಳಿ ಹಿಂದಿರುಗುವಾಗ…

Read More

ಇರಾನ್​ನ ಖರ್ಗ್ ದ್ವೀಪದ ಮೇಲೆ ಟ್ರಂಪ್​ಗೆ ಕಣ್ಣು? ಅಂಥದ್ದೇನಿದೆ ಅಲ್ಲಿ?

ನವದೆಹಲಿ, ಮಾರ್ಚ್ 30: ಇರಾನ್ ಮೇಲೆ ದಾಳಿ ಮಾಡಿ ಕ್ಷಿಪ್ರವಾಗಿ ಸಮರ ಅಂತ್ಯಗೊಳಿಸುವ ಲೆಕ್ಕಾಚಾರ ಹಾಕಿದ್ದ ಅಮೆರಿಕಕ್ಕೆ ಈ ಯುದ್ಧ ನಿರೀಕ್ಷೆಮೀರಿ ದೀರ್ಘವಾಗುತ್ತಿದೆ. ಇರಾನ್ ಪ್ರತಿರೋಧಕ್ಕೆ ಅಮೆರಿಕ ಮತ್ತು ಇಸ್ರೇಲ್ ಹೈರಾಣಾಗಿವೆ. ಇದೀಗ ಅಮೆರಿಕವು ಭೂದಾಳಿ ಮೂಲಕ ಇರಾನ್ ಅನ್ನು ಕಟ್ಟಿಹಾಕಲು ಯೋಜಿಸುತ್ತಿರುವ ಸುದ್ದಿ ಇದೆ. ಇದಕ್ಕೆ ಇಂಬುಕೊಡುವಂತೆ ಸಾವಿರಾರು ಅಮೆರಿಕನ್ ಸೈನಿಕರು ವಿವಿಧ ಕಡೆ ಬೀಡುಬಿಟ್ಟು ಸಜ್ಜಾಗಿದ್ದಾರೆ. ಇರಾನ್​ನ ಖರ್ಗ್ ದ್ವೀಪ ಸೇರಿದಂತೆ ಕೆಲ ನಿರ್ದಿಷ್ಟ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವುದು ಅಮೆರಿಕದ ತಂತ್ರವಾಗಿದೆ ಎನ್ನುವಂತಹ ಸುದ್ದಿಗಳಿವೆ. ಇರಾನ್​ನ…

Read More

ನೀರಿನ ಕೊರತೆ ಎದುರಿಸಲು ರೆಡಿಯಾಗಬೇಕಿದ್ಯಾ ಕರ್ನಾಟಕ?: ಶಾಕಿಂಗ್​​ ಮಾಹಿತಿ ಬಿಚ್ಚಿಟ್ಟ ವರದಿ

ಬೆಂಗಳೂರು, ಮಾರ್ಚ್​​ 30: ದಿನದಿಂದ ದಿನಕ್ಕೆ ರಾಜ್ಯದಲ್ಲಿನ ಏರಿಕೆಯಾಗುತ್ತಿರುವ ಬೇಸಿಗೆ ತಾಪಮಾನವು ಕುಡಿಯುವ ನೀರಿನ ಸಂಕಷ್ಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. ರಾಜ್ಯ ಮಟ್ಟದ ಹವಾಮಾನ ವೀಕ್ಷಣಾ ಸಮಿತಿಯ ಇತ್ತೀಚಿನ ವರದಿ ಪ್ರಕಾರ, ಈ ಬೇಸಿಗೆಯಲ್ಲಿ 207 ತಾಲೂಕುಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದ್ದು, ಈಗಾಗಲೇ 60 ತಾಲ್ಲೂಕುಗಳು ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿವೆ. ಜೊತೆಗೆ 2,258 ಗ್ರಾಮ ಪಂಚಾಯಿತಿಗಳನ್ನು ಅಪಾಯ ಪ್ರದೇಶಗಳಾಗಿ ಗುರುತಿಸಲಾಗಿದ್ದು, ಅವುಗಳಲ್ಲಿ 212 ಪಂಚಾಯಿತಿಗಳು ಈಗಾಗಲೇ ಗಂಭೀರ ನೀರಿನ ಸಂಕಷ್ಟದಲ್ಲಿವೆ ಎನ್ನಲಾಗಿದೆ. 31…

Read More

ದಾಖಲೆ ಬರೆದ ರಾಜ್ಯದ ವಿದ್ಯುತ್ ಬೇಡಿಕೆ: ಬೆಂಗಳೂರಿನ ಎಸಿ ಅಬ್ಬರಕ್ಕೆ ಬೆವರುತ್ತಿದೆ ಪವರ್ ಗ್ರಿಡ್!

ಬೆಂಗಳೂರು, ಮಾ.30: ಕರ್ನಾಟಕ ರಾಜ್ಯವು ಈ ತಿಂಗಳು ತನ್ನ ಇತಿಹಾಸದಲ್ಲೇ ಅತಿ ಹೆಚ್ಚಿನ ವಿದ್ಯುತ್ ಬೇಡಿಕೆಯನ್ನು ಎದುರಿಸುತ್ತಿದೆ. ಬಿಸಿಲಿನ ತಾಪ ಮತ್ತು ಹೆಚ್ಚುತ್ತಿರುವ ಎಸಿ (AC) ಬಳಕೆ ಹೈಟೆಕ್ ಸಿಟಿ ಬೆಂಗಳೂರನ್ನು ಅಕ್ಷರಶಃ ವಿದ್ಯುತ್ ಗುಳುಂ ಮಾಡುವ ದೈತ್ಯನನ್ನಾಗಿ ಮಾಡಿದೆ. ಈ ತಿಂಗಳು ರಾಜ್ಯದ ಒಟ್ಟು ವಿದ್ಯುತ್ ಬಳಕೆ 373.6 ಮಿಲಿಯನ್ ಯೂನಿಟ್ ತಲುಪುವ ನಿರೀಕ್ಷೆಯಿದೆ, ಇದು ಇದುವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ. ಒಂದು ಸಣ್ಣ ರಾಜ್ಯ ಬಳಸುವಷ್ಟು ವಿದ್ಯುತ್ ಅನ್ನು ಕೇವಲ ಬೆಂಗಳೂರು ನಗರವೊಂದೇ ಬಳಸುತ್ತಿದೆ. ನಗರದ…

Read More

ಪ್ರಕಾಶ್ ರಾಜ್​ಗೆ ಮಾತೃವಿಯೋಗ ; ಅಮ್ಮನ ದೇವತೆಯಂತೆ ನೋಡುತ್ತಿದ್ದ ನಟ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಮಾತೃವಿಯೋಗ ಉಂಟಾಗಿದೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರ ತಾಯಿ ಸ್ವರ್ಣಲತಾ ಹೈದರಾಬಾದ್​ ಅಲ್ಲಿ ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ತಾಯಿಯನ್ನು ಪ್ರಕಾಶ್ ರಾಜ್ ಅವರು ದೇವತೆಯಂತೆ ನೋಡುತ್ತಿದ್ದರು. ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಗದಗದವರು. ಅವರ ಬಗ್ಗೆ ಈ ಮೊದಲು ಪ್ರಕಾಶ್ ರಾಜ್ ಮಾತನಾಡಿದ್ದರು. ‘ನನ್ನ ತಾಯಿ ಗದಗದವರು. ಅವರು ಅನಾಥೆ ಆಗಿದ್ದರು. ನನ್ನ ಅಜ್ಜಿ ತೀರಿಕೊಂಡಾಗ ಅಮ್ಮನಿಗೆ 12 ವರ್ಷ ವಯಸ್ಸು. ಬೆಳಗಾವಿಯ…

Read More

ಇರಾನ್ ಯುದ್ಧದ ಪರಿಣಾಮ ಬೀದರ್ ಕಲ್ಲಂಗಡಿಗೂ ಇಲ್ಲ ಬೆಲೆ!

ಬೀದರ್, ಮಾರ್ಚ್​ 30: ಜಿಲ್ಲೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಕಲ್ಲಂಗಡಿ ಬೆಳೆಗಾರರಿಗೆ ಭಾರೀ ಹೊಡೆತ ಬಿದ್ದಿದೆ. ರಫ್ತು ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಿ ಕಲ್ಲಂಗಡಿ ದರ ಪಾತಾಳಕ್ಕೆ ಕುಸಿದಿದ್ದು, ಕೆಜಿಗೆ ಕೇವಲ 4 ರಿಂದ 5 ರೂಪಾಯಿಗೆ ಮಾರಾಟವಾಗುತ್ತಿದೆ. ಕಟಾವು ಮತ್ತು ಸಾಗಾಟ ವೆಚ್ಚವೂ ಮರಳದ ಸ್ಥಿತಿ ನಿರ್ಮಾಣವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತಮ ಗುಣಮಟ್ಟದ ಕಲ್ಲಂಗಡಿ ಇದ್ದರೂ ಖರೀದಿದಾರರ ಕೊರತೆಯಿಂದ ಬೆಳೆ ಹೊಲದಲ್ಲಿಯೇ ಕೊಳೆಯುತ್ತಿದ್ದು, ಜಿಲ್ಲೆಯ ಬಹುತೇಕ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಕರ್ನಾಟಕದ…

Read More