All posts by nagaraj11081993

ತನ್ನ ಖಾಸಗಿ ಅಂಗದಲ್ಲಿ ತಂಬಾಕು, ಸಿಮ್ ಕಾರ್ಡ್​ ತಂದು ಜೈಲಿನಲ್ಲಿ ಸ್ಮಗ್ಲಿಂಗ್! ಯುವತಿ ಅಂದರ್

ತನ್ನ ಖಾಸಗಿ ಅಂಗದಲ್ಲಿ ತಂಬಾಕು, ಸಿಮ್ ಕಾರ್ಡ್​ ತಂದು ಜೈಲಿನಲ್ಲಿ ಸ್ಮಗ್ಲಿಂಗ್! ಯುವತಿ ಅಂದರ್

ಬೆಂಗಳೂರು, ಮಾರ್ಚ್​ 30: ಪರಪ್ಪನ ಅಗ್ರಹಾರದಲ್ಲಿ ನಿರಂತರವಾಗಿ ಅವ್ಯವಹಾರಗಳ ಪ್ರಕರಣಗಳು ವರದಿಯಾಗುತ್ತಿವೆ. ಡಿಜಿಪಿ ಅಲೋಕ್ ಕುಮಾರ್​ರಿಂದ  (DGP Alok Kumar) ಜಾರಿಯಾಗಿರುವ ಕಟ್ಟುನಿಟ್ಟಿನ ಕ್ರಮದ ನಂತರವೂ ಈ ಅವ್ಯವಹಾರಗಳಿಗೆ ಬ್ರೇಕ್ ಬಿದ್ದಿಲ್ಲ. ಜೈಲಿನಲ್ಲೇ ಕೂತು ಕೈದಿಗಳು ವೀಡಿಯೋ ಮಾಡಿರುವುದು ಚರ್ಚೆಯಾದ ಬೆನ್ನಲ್ಲೇ ಕಳೆದ ಗುರುವಾರ ನಡೆದ ಮತ್ತೊಂದು ಅಕ್ರಮ ತಡವಾಗಿ ಬೆಳಕಿಗೆ ಬಂದಿದೆ.ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳನ್ನು ಒಳಗೆ ಕಳ್ಳಸಾಗಣೆ ಮಾಡಲು ಯತ್ನಿಸಿದ 27 ವರ್ಷದ ಮಹಿಳೆಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ತಪಾಸಣೆ ವೇಳೆ ವಿಷಯ ಬಯಲು

ಮಾರ್ಚ್ 26ರಂದು ಸಂಜೆ ಸುಮಾರು 4 ಗಂಟೆಗೆ ಸಾಮಾನ್ಯ ಭೇಟಿಯ ವಿಭಾಗದಲ್ಲಿ ಈ ಘಟನೆ ನಡೆದಿದೆ. ಆರೋಪಿಯಾಗಿರುವ ರಿತಿಕಾ ರೈ, ಅಂಡರ್‌ಟ್ರಯಲ್ ಕೈದಿ ಫರ್ಹಾನ್ ಖಾನ್ ಅವರನ್ನು ಭೇಟಿ ಮಾಡಲು ಮಾನ್ಯ ಪಾಸ್ ಪಡೆದು ಬಂದಿದ್ದಳು. ಸಾಮಾನ್ಯ ತಪಾಸಣೆ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಅನುಮಾನ ಉಂಟಾಗಿ ಸವಿವರ ಪರಿಶೀಲನೆ ನಡೆಸಿದಾಗ, ಮಹಿಳೆ ತನ್ನ ದೇಹದ ಖಾಸಗಿ ಭಾಗದಲ್ಲಿ ತಂಬಾಕು ಪದಾರ್ಥಗಳ ಮೂರು ಪ್ಯಾಕೆಟ್‌ಗಳು ಹಾಗೂ ಏರ್ಟೆಲ್ 5ಜಿ ಸಿಮ್ ಕಾರ್ಡ್‌ಗಳನ್ನು ಅಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ ‘ನಮಗೆ ಡಿಜಿಪಿನೇ ಮೊಬೈಲ್ ಕೊಟ್ಟಿದ್ದು’: ಜೈಲಲ್ಲೇ ಕೂತು ವಿಡಿಯೋ ಮಾಡಿದ ಕೈದಿಗಳು!

ತಕ್ಷಣವೇ ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಪೊಲೀಸರಿಗೆ ಒಪ್ಪಿಸಲಾಗಿದೆ. ಜೈಲು ಅಧೀಕ್ಷಕರು ನೀಡಿದ ದೂರಿನ ಆಧಾರದ ಮೇಲೆ ರಿತಿಕಾ ರೈ ಮತ್ತು ಫರ್ಹಾನ್ ಖಾನ್ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಕಾಯ್ದೆ 2022 ಮತ್ತು ಬಿಎನ್‌ಎಸ್ ಸೆಕ್ಷನ್ 323 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸ್ಯಾಟಲೈಟ್ ಟು ಮೆಟ್ರೋ ಕನೆಕ್ಟಿವಿಟಿ ಕಷ್ಟ: ಒಂದು ಕಿ.ಮೀ ದಾಟಲು ಪ್ರಯಾಣಿಕರ ಹರಸಾಹಸ!

ಬೆಂಗಳೂರು, ಮಾ.30: ನಗರದ ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣ (KSRTC) ಮತ್ತು ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ನಡುವೆ ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಎರಡು ನಿಲ್ದಾಣಗಳ ನಡುವಿನ ಅಂತರ ಒಂದು ಕಿಲೋಮೀಟರ್‌ಗಿಂತಲೂ ಕಡಿಮೆ ಇದ್ದರೂ, ಸುಗಮ ಸಂಪರ್ಕದ ಕೊರತೆಯಿಂದಾಗಿ ಜನರು ಪರದಾಡುವಂತಾಗಿದೆ. ಇದೀಗ ಈ ಬಗ್ಗೆ ಜನರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಬೆಂಗಳೂರಿಗೆ ಹೊರ ಜಿಲ್ಲೆಗಳಿಂದ ಬರುವ ಪ್ರಯಾಣಿಕರು ಮೆಟ್ರೋ ಹತ್ತಲು ಈ ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಬೇಕಿದೆ. ಆದರೆ, ಮೈಸೂರು ರಸ್ತೆಯ ಫುಟ್‌ಪಾತ್‌ಗಳು ಒಡೆದು ಹೋಗಿದ್ದು, ಬೀದಿ ಬದಿ ವ್ಯಾಪಾರಿಗಳಿಂದ ಆಕ್ರಮಣಕ್ಕೊಳಗಾಗಿವೆ. ಇದರಿಂದಾಗಿ ಲಗೇಜ್‌ಗಳೊಂದಿಗೆ ನಡೆಯುವುದು ಅಸಾಧ್ಯವಾಗಿದ್ದು, ಅನಿವಾರ್ಯವಾಗಿ ಆಟೋರಿಕ್ಷಾಗಳನ್ನು ಅವಲಂಬಿಸಬೇಕಿದೆ. ಕೇವಲ ಅರ್ಧ ಕಿಲೋಮೀಟರ್ ದೂರಕ್ಕೆ ಆಟೋ ಚಾಲಕರು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಈ ಬಗ್ಗೆ ನಗರ ಸಾರಿಗೆ ತಜ್ಞರ ಪ್ರಕಾರ, ಮೆಟ್ರೋ ಮತ್ತು ಬಸ್ ನಿಲ್ದಾಣಗಳ ನಡುವಿನ ಈ ಕನೆಕ್ಟಿವಿಟಿ ಕೊರತೆಯು ಯೋಜನಾ ಹಂತದ ದೊಡ್ಡ ಲೋಪವಾಗಿದೆ. “ಬಸ್, ಮೆಟ್ರೋ ಮತ್ತು ಪಾದಚಾರಿ ಮಾರ್ಗಗಳು ಒಂದಕ್ಕೊಂದು ಬೆಸೆದಾಗ ಮಾತ್ರ ಸಾರಿಗೆ ವ್ಯವಸ್ಥೆ ಯಶಸ್ವಿಯಾಗುತ್ತದೆ. ಇಲ್ಲದಿದ್ದರೆ ವಿಶ್ವದರ್ಜೆಯ ಮೆಟ್ರೋ ಇದ್ದರೂ ಪ್ರಯೋಜನವಿಲ್ಲ” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೈಸೂರು, ಮಡಿಕೇರಿ ಮತ್ತು ಕೇರಳದ ಭಾಗಗಳಿಗೆ ತೆರಳುವ ಸಾವಿರಾರು ಜನರಿಗೆ ಸ್ಯಾಟಲೈಟ್ ಬಸ್ ನಿಲ್ದಾಣ ಪ್ರಮುಖ ಕೇಂದ್ರವಾಗಿದೆ. ಬಿಎಂಆರ್‌ಸಿಎಲ್ (BMRCL) ಮತ್ತು ಬಿಎಂಟಿಸಿ ಸಮನ್ವಯ ಸಾಧಿಸಿ ಈ ಸಮಸ್ಯೆಗೆ ಶೀಘ್ರ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ದಾಖಲೆ ಬರೆದ ರಾಜ್ಯದ ವಿದ್ಯುತ್ ಬೇಡಿಕೆ: ಬೆಂಗಳೂರಿನ ಎಸಿ ಅಬ್ಬರಕ್ಕೆ ಬೆವರುತ್ತಿದೆ ಪವರ್ ಗ್ರಿಡ್!

ಪರಿಹಾರಗಳೇನು?

ಸ್ಕೈವಾಕ್ ಅಥವಾ ವಾಕ್‌ವೇ: ಈ ಎರಡು ನಿಲ್ದಾಣಗಳ ನಡುವೆ ಮೀಸಲಾದ ಸ್ಕೈವಾಕ್ ಅಥವಾ ಸುಸಜ್ಜಿತ ಪಾದಚಾರಿ ಮಾರ್ಗ ನಿರ್ಮಿಸಬೇಕು.

ಫೀಡರ್ ಬಸ್‌ಗಳು: ಬಿಎಂಟಿಸಿ (BMTC) ವತಿಯಿಂದ ಸಣ್ಣ ಫೀಡರ್ ಬಸ್ ಅಥವಾ ಮಿನಿ ಶಟಲ್ ಸರ್ವಿಸ್ ಆರಂಭಿಸಬೇಕು.

ಕಟ್ಟುನಿಟ್ಟಿನ ಗಡುವು: ಒಂದು ವೇಳೆ ಕಾಮಗಾರಿ ಆರಂಭಿಸಿದರೆ, ಅದು ಸಂಚಾರಕ್ಕೆ ತೊಂದರೆಯಾಗದಂತೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ನೋಡಿದ ಬಳಿಕ ನಿರ್ದೇಶಕ ಆದಿತ್ಯ ಧಾರ್​​ ಎಚ್ಚರಿಸಿದ ವಿವೇಕ್ ಅಗ್ನಿಹೋತ್ರಿ

‘ಧುರಂದರ್ 2’ ಸಿನಿಮಾ ಮಾಡಿದ ದಾಖಲೆಗಳು ಹಲವು. ಈ ಚಿತ್ರವು ಕೇಲವ 11 ದಿನಗಳಲ್ಲಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ದಾಖಲೆ ಬರೆದಿದೆ ಎಂದೇ ಹೇಳಬಹುದು. ಈ ಚಿತ್ರವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಸಾಮಾನ್ಯರಿಂದ ಹಿಡಿದು, ಸೆಲೆಬ್ರಿಟಿಗಳವರೆಗೆ ಎಲ್ಲರಿಗೂ ಚಿತ್ರ ಇಷ್ಟ ಆಗಿದೆ. ಈಗ ರಣವೀರ್ ಸಿಂಗ್ ಅವರ ಸಿನಿಮಾ ನೋಡಿದ ‘ದಿ ಕಾಶ್ಮೀರಿ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಜೋತ್ರಿ ಅವರು ಆದಿತ್ಯ ಧಾರ್ ಅವರಿಗೆ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ವಿವೇಕ್ ಅವರು ‘ದಿ ಕಾಶ್ಮೀರಿ ಫೈಲ್ಸ್’ ಹೆಸರಿನ ಸಿನಿಮಾ ಮಾಡಿದವರು. ಈ ಸಿನಿಮಾ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಕುರಿತಂತೆ ಇತ್ತು. ಇನ್ನು, ಆದಿತ್ಯ ಧಾರ್ ಕೂಡ ಕಾಶ್ಮೀರಿ ಪಂಡಿತರ ಹಿನ್ನೆಲೆ ಹೊಂದಿರುವವರು. ಹೀಗಿರುವಾಗ ಅವರಿಗೆ ಎಚ್ಚರಿಕೆ ರವಾನೆ ಆಗಿದ್ದೇಕೆ ಎಂಬ ಪ್ರಶ್ನೆ ನಿಮಗೆ ಮೂಡಬಹುದು. ಅದಕ್ಕೂ ಉತ್ತರ ಇದೆ. ಅವರು ಸಿನಿಮಾ ಹೊಗಳಿದ್ದಾರೆ ಜೊತೆಗೆ ಎಚ್ಚರಿಕೆ ನೀಡಿದ್ದು ಒಳ್ಳೆಯ ಉದ್ದೇಶದಿಂದ.

‘ಎಲ್ಲರೂ ಅಸಾಧಾರಣ ಕೆಲಸ ಮಾಡಿದ್ದಾರೆ. ಆದರೆ ಚಿತ್ರದ ಛಾಯಾಗ್ರಹಣ ಹಾಗೂ ನಿರ್ಮಾಣ ವಿನ್ಯಾಸ ಸಿನಿಮಾ ಮತ್ತೊಂದು ಹಂತಕ್ಕೆ ಹೋಯಿತು. ಸಿನಿಮಾದಲ್ಲಿ, ಕ್ಯಾಮೆರಾ ಮತ್ತು ನಿರ್ಮಾಣ ವಿನ್ಯಾಸ ಪರಸ್ಪರ ಸಂಬಂಧ ಹೊಂದಿವೆ. ಎರಡೂ ಸಂಪೂರ್ಣ ಸಾಮರಸ್ಯವಿಲ್ಲದಿದ್ದರೆ, ಒಂದು ಚಿತ್ರವು ಒಂದು ಮೇರುಕೃತಿಯ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ಧುರಂಧರ್‌ನಲ್ಲಿ ಅದನ್ನು ಕಾಣಬಹುದು’ ಎಂದು ಹೇಳಿದ್ದಾರೆ ವಿವೇಕ್ ಅಗ್ನಿಹೋತ್ರಿ.

ಇದನ್ನೂ ಓದಿ: ‘ಧುರಂಧರ್ 2’ ನಿರ್ದೇಶಕ ಆದಿತ್ಯ ಧಾರ್ ಹಾಗೂ ಪತ್ನಿ ಯಾಮಿ ಪೈಕಿ ಯಾರು ಹೆಚ್ಚು ಶ್ರೀಮಂತರು?

ಆದಿತ್ಯ ಅವರನ್ನು ಎಚ್ಚರಿಸುವ ಮೂಲಕ ಅವರು ತಮ್ಮ ಪೋಸ್ಟ್ ಕೊನೆ ಮಾಡಿದ್ದಾರೆ. ‘ಅನುಭವದಿಂದ ಬಂದ ಒಂದು ಅಪೇಕ್ಷಿಸದ ಮಾತು: ನೀವು ಚುರುಕಾಗಿದ್ದೀರಿ. ನಿಮ್ಮ ದಾರಿ ನಮಗೆ ಗೊತ್ತು. ಆದರೆ, ವ್ಯವಸ್ಥೆಯ ಬಗ್ಗೆ ಗಮನವಿರಲಿ, ಅದು ಎಷ್ಟು ಒಳ್ಳೆಯದೋ, ಅಷ್ಟೇ ಕೆಟ್ಟದ್ದೂ ಆಗಿರಬಹುದು’ ಎಂದು ಎಚ್ಚರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಒಣಗಿದ ದಾಸವಾಳ ಹೂ ನುಂಗಿದ ಪರಿಣಾಮ ಉಸಿರುಗಟ್ಟಿ 6 ತಿಂಗಳ ಮಗು ಸಾವು

ಮೈಸೂರು, ಮಾರ್ಚ್​​ 30: ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದ ದುರಂತ ಘಟನೆಯಲ್ಲಿ ಆರುವರೆ ತಿಂಗಳ ಮಗು ಸಾವನ್ನಪ್ಪಿದೆ. ಮನೆಯ ಹೊಸ್ತಿಲಿನಲ್ಲಿ ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳ ಹೂವನ್ನು ಮಗು ಚಿನ್ಮಯಿಗೌಡ ಆಟವಾಡುತ್ತಾ ನುಂಗಿದೆ. ಇದರಿಂದ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಪೋಷಕರು ಇದನ್ನು ಗಮನಿಸಿದ ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಮಗು ಅಸುನೀಗಿದೆ. ಮಗುವಿನ ಗಂಟಲಿನಲ್ಲಿ ಒಣಗಿದ ದಾಸವಾಳ ಹೂವು ಸಿಲುಕಿಕೊಂಡಿದ್ದು ಉಸಿರುಗಟ್ಟುವಿಕೆಗೆ ಕಾರಣವಾಗಿದೆ ಎಂದು ನಂತರ ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭೀಕರ ಅಪಘಾತ: ವಿಧಿಯಾಟಕ್ಕೆ ಮದುವೆಯಾಗಿ 6 ತಿಂಗಳಲ್ಲೇ ನವ ದಂಪತಿ ದುರ್ಮರಣ

ಶಿವಮೊಗ್ಗ/ನೆಲಮಂಗಲ, ಮಾರ್ಚ್​​ 30: ಲಾರಿಗೆ ಬೈಕ್​ ಡಿಕ್ಕಿಯಾಗಿ ನವ ದಂಪತಿ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದ ಬಿಆರ್​ಪಿ ಬಳಿ ನಡೆದಿದೆ. ಬೈಕ್​ನಲ್ಲಿದ್ದ ಬಾಬು(30), ಸಾವಿತ್ರಿ(26) ಮೃತ ದುರ್ದೈವಿಗಳಾಗಿದ್ದು, ಹೋಟೆಲ್ ಕೆಲಸ ಮುಗಿಸಿ ಊರಿಗೆ ಹೋಗ್ತಿದ್ದಾಗ ಅಪಘಾತ ನಡೆದಿದೆ. ಮೃತರು ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ಮೂಲದವರಾಗಿದ್ದು, ಇವರ ಮುದುವೆ ಆಗಿ ಕೇವಲ ಆರು ತಿಂಗಳಾಗಿತ್ತು. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ದೇಗುಲಕ್ಕೆ ತೆರಳಿ ಹಿಂದಿರುಗುವಾಗ ಅಪಘಾತ: ಓರ್ವ ಸಾವು

ದೇವಸ್ಥಾನಕ್ಕೆ ತೆರಳಿ ಸಹೋದರರು ಹಿಂದಿರುಗುತ್ತಿದ್ದ ವೇಳೆ ನಡೆದ ಬೈಕ್​​ ಅಪಘಾತದಲ್ಲಿ ಓರ್ವ ಮೃತಪಟ್ಟು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿ ಬಳಿ ನಡೆದಿದೆ. ಶ್ರೀನಿವಾಸ್​​ (68) ಮೃತ ವ್ಯಕ್ತಿಯಾಗಿದ್ದು, ವೆಂಕಟಾಚಲ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಚಿಕ್ಕ ಮದುರೈ ದೇವಸ್ಥಾನಕ್ಕೆ ತೆರಳಿದ್ದ ಇವರು ನೈಸ್​​ ರೋಡ್​​ ಮಾರ್ಗವಾಗಿ ಹಿಂದಿರುಗುವ ವೇಳೆ ದುರ್ಘಟನೆ ನಡೆದಿದೆ. ಇವರಿಬ್ಬರೂ ಕನಕಪುರದ ಹಾರೋಹಳ್ಳಿ ನಿವಾಸಿಗಳಾಗಿದ್ದು, ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿದ್ದಾರೆ. ನೆಲಮಂಗಲ ಶವಗಾರಕ್ಕೆ ಶ್ರೀನಿವಾಸ್​​ ಮೃತದೇಹವನ್ನು ರವಾನಿಸಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ ಖಾಸಗಿ ಆಸ್ಪತ್ರೆ ಎಡವಟ್ಟು?; ಹರ್ನಿಯಾ ಆಪರೇಷನ್ ಬಳಿಕ ಕೋಮಾಗೆ ಜಾರಿದ ಮಹಿಳೆ

ಹಿಟ್​​ ಆ್ಯಂಡ್​​ ರನ್​​ಗೆ ಯುವಕ ಬಲಿ

ಮೈಸೂರಿನ ಬೈಲಕುಪ್ಪೆಯಲ್ಲಿ ನಡೆದ ಹಿಟ್​​ ಆ್ಯಂಡ್​​ ರನ್​​ನಲ್ಲಿ ಓರ್ವ ಯುವಕ ದಾರುಣವಾಗಿ ಮೃತಪಟ್ಟಿದ್ದಾನೆ. ನಿನ್ನೆ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅನಿಲ್​ ಮೃತನಾಗಿದ್ದು, ಸ್ನೇಹಿತನ ಹುಟ್ಟುಹಬ್ಬದ ಪ್ರಯುಕ್ತ ಕೇಕ್​​ ಕೊಂಡೊಯ್ಯುತ್ತಿದ್ದ ವೇಳೆ ಅಪಘಾತ ನಡೆದಿದೆ. ಕುಶಾಲನಗರದಿಂದ ಬೈಲಕುಪ್ಪೆಗೆ ಅಗಮಿಸುತ್ತಿದ್ದ ವೇಳೆ ಅಪರಿಚಿತ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಆಟೋ ಬೈಕಿಗೆ ಗುದ್ದಿದ್ದು, ನೆಲದ ಮೇಲೆ ಬಿದ್ದ ಅನಿಲ್ ಮೇಲೆ ಅದೇ ಕಾರು ಹರಿದ ಪರಿಣಾಮ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಕಾರು ಸಮೇತ ಚಾಲಕ ಎಸ್ಕೇಪ್​​ ಆಗಿದ್ದು, ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇರಾನ್​ನ ಖರ್ಗ್ ದ್ವೀಪದ ಮೇಲೆ ಟ್ರಂಪ್​ಗೆ ಕಣ್ಣು? ಅಂಥದ್ದೇನಿದೆ ಅಲ್ಲಿ?

ನವದೆಹಲಿ, ಮಾರ್ಚ್ 30: ಇರಾನ್ ಮೇಲೆ ದಾಳಿ ಮಾಡಿ ಕ್ಷಿಪ್ರವಾಗಿ ಸಮರ ಅಂತ್ಯಗೊಳಿಸುವ ಲೆಕ್ಕಾಚಾರ ಹಾಕಿದ್ದ ಅಮೆರಿಕಕ್ಕೆ ಈ ಯುದ್ಧ ನಿರೀಕ್ಷೆಮೀರಿ ದೀರ್ಘವಾಗುತ್ತಿದೆ. ಇರಾನ್ ಪ್ರತಿರೋಧಕ್ಕೆ ಅಮೆರಿಕ ಮತ್ತು ಇಸ್ರೇಲ್ ಹೈರಾಣಾಗಿವೆ. ಇದೀಗ ಅಮೆರಿಕವು ಭೂದಾಳಿ ಮೂಲಕ ಇರಾನ್ ಅನ್ನು ಕಟ್ಟಿಹಾಕಲು ಯೋಜಿಸುತ್ತಿರುವ ಸುದ್ದಿ ಇದೆ. ಇದಕ್ಕೆ ಇಂಬುಕೊಡುವಂತೆ ಸಾವಿರಾರು ಅಮೆರಿಕನ್ ಸೈನಿಕರು ವಿವಿಧ ಕಡೆ ಬೀಡುಬಿಟ್ಟು ಸಜ್ಜಾಗಿದ್ದಾರೆ. ಇರಾನ್​ನ ಖರ್ಗ್ ದ್ವೀಪ ಸೇರಿದಂತೆ ಕೆಲ ನಿರ್ದಿಷ್ಟ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವುದು ಅಮೆರಿಕದ ತಂತ್ರವಾಗಿದೆ ಎನ್ನುವಂತಹ ಸುದ್ದಿಗಳಿವೆ.

ಇರಾನ್​ನ ಆರ್ಥಿಕ ಜೀವನಾಳ ಈ ಖರ್ಗ್ ದ್ವೀಪ

ಇತರ ಪಶ್ಚಿಮ ಏಷ್ಯನ್ ರಾಷ್ಟ್ರಗಳಂತೆ ಇರಾನ್​ಗೂ ತೈಲ ಮಾರಾಟವೇ ಪ್ರಮುಖ ಆದಾಯ ಮೂಲ. ಇರಾನ್ ಬಳಿ ಅಪಾರ ಪ್ರಮಾಣದ ತೈಲ ಸಂಪತ್ತು ಇದೆ. ಒಂದು ಅಂದಾಜು ಪ್ರಕಾರ 208.6 ಬಿಲಿಯನ್ ಬ್ಯಾರಲ್​ಗಳಷ್ಟು ತೈಲ ನಿಕ್ಷೇಪವು ಇರಾನ್​ನಲ್ಲಿ ಸದ್ಯದವರೆಗೆ ಪತ್ತೆಯಾಗಿದೆ. ಇದು ಜಗತ್ತಿನ ಒಟ್ಟು ತೈಲ ಸಂಪತ್ತಿನ ಶೇ. 12ರಷ್ಟು ಎಂದರೆ ಅದೆಷ್ಟು ಬೃಹತ್ ಇರಬಹುದು ಊಹಿಸಬಹುದು.

ಇದನ್ನೂ ಓದಿ: ಭಾರತದಲ್ಲಿ ಪೆಟ್ರೋಲ್, ಎಲ್​ಪಿಜಿ, ನ್ಯಾಚುರಲ್ ಗ್ಯಾಸ್ ಪೂರೈಕೆ ಹೇಗಿದೆ? ಸರ್ಕಾರದಿಂದ ಮಾಹಿತಿ

ಸದ್ಯ ಅಮೆರಿಕ ಹಾಕಿರುವ ನಿಷೇಧದ ನಡುವೆಯೂ ಇರಾನ್ ದೇಶವು ದಿನಕ್ಕೆ ಸುಮಾರು 40 ಲಕ್ಷ ಬ್ಯಾರಲ್​ಗಳಷ್ಟು ಕಚ್ಛಾ ತೈಲವನ್ನು ಹೊರತರುತ್ತದೆ. ಆಂತರಿಕ ಬಳಕೆ ಬಿಟ್ಟು ಅದು ರಫ್ತು ಮಾಡುವ ತೈಲ ದಿನಕ್ಕೆ 11ರಿಂದ 15 ಲಕ್ಷ ಬ್ಯಾರಲ್​ನಷ್ಟು ಎನ್ನಲಾಗುತ್ತಿದೆ.

ಖರ್ಗ್ ದ್ವೀಪದಲ್ಲೇ ಈ ತೈಲ ಸಂಪತ್ತು ಇಲ್ಲ…

ಇರಾನ್​ನ ಖರ್ಗ್ ದ್ವೀಪವು ಒಂದು ಪ್ರಮುಖ ಬಂದರಿನಂತೆ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಬೃಹತ್ತಾದ ಶಿಪ್ ಟರ್ಮಿನಲ್ ಇದೆ. ಇರಾನ್​ನ ಶೇ. 90ಕ್ಕೂ ಹೆಚ್ಚು ತೈಲ ರಫ್ತು ಇದೇ ಟರ್ಮಿನಲ್ ಮೂಲಕ ನಡೆಯುತ್ತದೆ. ಅಂದರೆ ಖರ್ಗ್ ದ್ವೀಪವು ಇರಾನ್​ನ ಆರ್ಥಿಕ ಜೀವನಾಡಿಯೇ ಆಗಿಹೋಗಿದೆ.

ಇದನ್ನೂ ಓದಿ: ಹಾರ್ಮುಜ್ ನಂತರ ಮತ್ತೊಂದು ಜಲಸಂಧಿ ಕಂಟಕ; ಜಗತ್ತಿಗೆ ಕಾದಿದೆ ಡಬಲ್ ಶಾಕ್

ಇರಾನ್​ನ ಅಪಾರ ತೈಲ ಸಂಪತ್ತಿನ ಮೇಲೆ ಅಮೆರಿಕ ಮತ್ತು ಟ್ರಂಪ್​ನ ಕಣ್ಣು ನೆಟ್ಟಿದೆ. ಇದನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಮೆರಿಕಕ್ಕೆ ಈಗ ಖರ್ಗ್ ದ್ವೀಪ ಬೇಕು. ಇದು ಅದರ ತೆಕ್ಕೆಗೆ ಹೋದರೆ ಇರಾನ್​ನ ಜುಟ್ಟು ಜನಿವಾರ ಅಮೆರಿಕಕ್ಕೆ ಸಿಕ್ಕಂತಾಗುತ್ತದೆ. ಇದೇನಾದರೂ ಸಾಧ್ಯವಾದಲ್ಲಿ ವಿಶ್ವದ ಬಹುತೇಕ ಎಲ್ಲಾ ತೈಲ ಸಂಪತ್ತು ಅಮೆರಿಕದ ಪ್ರತ್ಯಕ್ಷ ಮತ್ತು ಪರೋಕ್ಷ ನಿಯಂತ್ರಣಕ್ಕೆ ಬಂದಂತಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನೀರಿನ ಕೊರತೆ ಎದುರಿಸಲು ರೆಡಿಯಾಗಬೇಕಿದ್ಯಾ ಕರ್ನಾಟಕ?: ಶಾಕಿಂಗ್​​ ಮಾಹಿತಿ ಬಿಚ್ಚಿಟ್ಟ ವರದಿ

ಬೆಂಗಳೂರು, ಮಾರ್ಚ್​​ 30: ದಿನದಿಂದ ದಿನಕ್ಕೆ ರಾಜ್ಯದಲ್ಲಿನ ಏರಿಕೆಯಾಗುತ್ತಿರುವ ಬೇಸಿಗೆ ತಾಪಮಾನವು ಕುಡಿಯುವ ನೀರಿನ ಸಂಕಷ್ಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. ರಾಜ್ಯ ಮಟ್ಟದ ಹವಾಮಾನ ವೀಕ್ಷಣಾ ಸಮಿತಿಯ ಇತ್ತೀಚಿನ ವರದಿ ಪ್ರಕಾರ, ಈ ಬೇಸಿಗೆಯಲ್ಲಿ 207 ತಾಲೂಕುಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದ್ದು, ಈಗಾಗಲೇ 60 ತಾಲ್ಲೂಕುಗಳು ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿವೆ. ಜೊತೆಗೆ 2,258 ಗ್ರಾಮ ಪಂಚಾಯಿತಿಗಳನ್ನು ಅಪಾಯ ಪ್ರದೇಶಗಳಾಗಿ ಗುರುತಿಸಲಾಗಿದ್ದು, ಅವುಗಳಲ್ಲಿ 212 ಪಂಚಾಯಿತಿಗಳು ಈಗಾಗಲೇ ಗಂಭೀರ ನೀರಿನ ಸಂಕಷ್ಟದಲ್ಲಿವೆ ಎನ್ನಲಾಗಿದೆ.

31 ಜಿಲ್ಲೆಗಳ ಪೈಕಿ ಉತ್ತರ ಕನ್ನಡ (12), ಬೆಳಗಾವಿ (14), ಕಲಬುರಗಿ (11) ಮತ್ತು ತುಮಕೂರು (10) ಜಿಲ್ಲೆಗಳ ತಾಲೂಕುಗಳು ಹೆಚ್ಚು ಸಮಸ್ಯೆಗೆ ಒಳಗಾಗಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಲಬುರಗಿ (180), ಉತ್ತರ ಕನ್ನಡ (170), ಹಾವೇರಿ (138), ಮಂಡ್ಯ (130) ಮತ್ತು ಬೆಳಗಾವಿ (126) ಜಿಲ್ಲೆಗಳು ಹೆಚ್ಚು ಪರಿಣಾಮ ಎದುರಿಸುತ್ತಿವೆ. ಸಂಕಷ್ಟ ನಿವಾರಣೆಗೆ ಸರ್ಕಾರ ಒಟ್ಟು 60 ಟ್ಯಾಂಕರ್‌ಗಳನ್ನು ನಿಯೋಜಿಸಿದೆ. ಜೊತೆಗೆ 270 ಖಾಸಗಿ ಬೋರ್‌ವೆಲ್‌ಗಳನ್ನು ಬಳಸಿಕೊಂಡು 246 ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಇದನ್ನೂ ಓದಿ: ಎಸ್ಟಿಯವರ ಜಮೀನಿನಲ್ಲಿ ಎಸ್ಸಿ ಯುವಕ ನೀರು ಕುಡಿದಿದ್ದಕ್ಕೆ ಭಾರೀ ಗಲಾಟೆ; 24 ಮಂದಿಗೆ ಗಾಯ!

ಮಾರ್ಚ್​​ನಿಂದ ಮೇ ಅವಧಿಯ ತೀವ್ರ ಬೇಸಿಗೆಯಲ್ಲಿ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ಕಾಣಿಸಿಕೊಳ್ಳುವ ಸಾಧ್ಯತೆ ಅಂದಾಜಿಸಲಾಗಿದೆ. ಜುಲೈ-ಆಗಸ್ಟ್ ಅವಧಿಯಲ್ಲಿ ಕಡಿಮೆ ಮಳೆಯಾಗುವ ನಿರೀಕ್ಷೆ ಇದ್ದು, ಕೃಷ್ಣಾ ಮತ್ತು ಕಾವೇರಿ ನದಿ ತಟ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯ ಕೊರತೆ ಉಂಟಾಗಬಹುದು. ಇದರಿಂದ ಕೃಷಿ ಕಾರ್ಯಗಳಿಗೆ ಹಾನಿಯಾಗುವುದಲ್ಲದೆ, ನೀರಿನ ಕೊರತೆಯಿಂದ ಕಾಡು ಪ್ರಾಣಿಗಳು ಮಾನವ ವಸತಿಗಳತ್ತ ಬರುತ್ತಿರುವ ಸಾಧ್ಯತೆ ಇದೆ. ಜೊತೆಗೆ ಜನರಲ್ಲಿ ರೋಗಗಳ ಪ್ರಮಾಣವೂ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ದಾಖಲೆ ಬರೆದ ರಾಜ್ಯದ ವಿದ್ಯುತ್ ಬೇಡಿಕೆ: ಬೆಂಗಳೂರಿನ ಎಸಿ ಅಬ್ಬರಕ್ಕೆ ಬೆವರುತ್ತಿದೆ ಪವರ್ ಗ್ರಿಡ್!

ಬೆಂಗಳೂರು, ಮಾ.30: ಕರ್ನಾಟಕ ರಾಜ್ಯವು ಈ ತಿಂಗಳು ತನ್ನ ಇತಿಹಾಸದಲ್ಲೇ ಅತಿ ಹೆಚ್ಚಿನ ವಿದ್ಯುತ್ ಬೇಡಿಕೆಯನ್ನು ಎದುರಿಸುತ್ತಿದೆ. ಬಿಸಿಲಿನ ತಾಪ ಮತ್ತು ಹೆಚ್ಚುತ್ತಿರುವ ಎಸಿ (AC) ಬಳಕೆ ಹೈಟೆಕ್ ಸಿಟಿ ಬೆಂಗಳೂರನ್ನು ಅಕ್ಷರಶಃ ವಿದ್ಯುತ್ ಗುಳುಂ ಮಾಡುವ ದೈತ್ಯನನ್ನಾಗಿ ಮಾಡಿದೆ. ಈ ತಿಂಗಳು ರಾಜ್ಯದ ಒಟ್ಟು ವಿದ್ಯುತ್ ಬಳಕೆ 373.6 ಮಿಲಿಯನ್ ಯೂನಿಟ್ ತಲುಪುವ ನಿರೀಕ್ಷೆಯಿದೆ, ಇದು ಇದುವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.

ಒಂದು ಸಣ್ಣ ರಾಜ್ಯ ಬಳಸುವಷ್ಟು ವಿದ್ಯುತ್ ಅನ್ನು ಕೇವಲ ಬೆಂಗಳೂರು ನಗರವೊಂದೇ ಬಳಸುತ್ತಿದೆ. ನಗರದ ಐಟಿ ಆಫೀಸ್‌ಗಳು, ಮಾಲ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ದಿನವಿಡೀ ಎಸಿಗಳು ಓಡುತ್ತಿರುವುದರಿಂದ ಬೆಂಗಳೂರಿನ ಪೀಕ್ ಡಿಮ್ಯಾಂಡ್ 2,000 ರಿಂದ 2,500 ಮೆಗಾವ್ಯಾಟ್ (MW) ತಲುಪಿದೆ. ಒಂದು ಮೆಗಾವ್ಯಾಟ್‌ನಿಂದ ಸುಮಾರು 800 ರಿಂದ 1,000 ಮನೆಗಳಿಗೆ ವಿದ್ಯುತ್ ನೀಡಬಹುದು ಎನ್ನುವುದನ್ನು ಗಮನಿಸಿದರೆ ನಗರದ ಬೇಡಿಕೆ ಎಷ್ಟು ಬೃಹತ್ ಎಂಬುದು ತಿಳಿಯುತ್ತದೆ.

ಮಾರ್ಚ್ ತಿಂಗಳಲ್ಲಿ ಎರಡು ಪ್ರಮುಖ ಕಾರಣಗಳಿಂದಾಗಿ ವಿದ್ಯುತ್ ಜಾಲದ (Grid) ಮೇಲೆ ಒತ್ತಡ ಹೆಚ್ಚಿದೆ. ಬೇಸಿಗೆಯ ಶಾಖದಿಂದಾಗಿ ನಗರವಾಸಿಗಳು ಎಸಿಗಳ ಮೇಲೆ ಅವಲಂಬಿತರಾಗಿದ್ದಾರೆ.ಗ್ರಾಮೀಣ ಕರ್ನಾಟಕದಲ್ಲಿ ರೈತರು ಬೇಸಿಗೆ ಬೆಳೆಗಾಗಿ ನೀರಾವರಿ ಪಂಪ್‌ಸೆಟ್‌ಗಳನ್ನು ನಿರಂತರವಾಗಿ ಬಳಸುತ್ತಿದ್ದಾರೆ.ಅಡುಗೆ ಅನಿಲದ ಕೊರತೆಯೂ ವಿದ್ಯುತ್ ಬೇಡಿಕೆ ಹೆಚ್ಚಲು ಕಾರಣವಾಗಬಹುದು. ಹೋಟೆಲ್‌ಗಳು ಮತ್ತು ಮನೆಗಳು ಗ್ಯಾಸ್ ಬದಲು ಇಂಡಕ್ಷನ್ ಸ್ಟೌವ್ ಅಥವಾ ಹೀಟರ್‌ಗಳಿಗೆ ಬದಲಾದರೆ, ಗ್ರಿಡ್ ಮೇಲೆ ಮತ್ತೆ 400 ರಿಂದ 500 ಮೆಗಾವ್ಯಾಟ್ ಹೆಚ್ಚುವರಿ ಹೊರೆ ಬೀಳುವ ಆತಂಕವಿದೆ.

ಇದನ್ನೂ ಓದಿ: ಹೋಟೆಲ್ ಬಿಲ್‌ನಲ್ಲಿ ಗ್ಯಾಸ್ ಶುಲ್ಕ, ಎಲ್‌ಪಿಜಿ ಫೀಸ್ ಹಾಕುವಂತಿಲ್ಲ: ಬೆಂಗಳೂರಿನ ಹೋಟೆಲ್‌ಗಳಿಗೆ ಸಿಸಿಪಿಎ ಖಡಕ್​ ಸೂಚನೆ!

ಇನ್ನು ವಿದ್ಯುತ್ ಅಭಾವ ತಲೆದೋರದಂತೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಹಗಲಿನ ಸಮಯದಲ್ಲಿ ಸೌರಶಕ್ತಿಯಿಂದ ಸುಮಾರು 7,000–7,500 ಮೆಗಾವ್ಯಾಟ್ ಪೂರೈಕೆಯಾಗುತ್ತಿದೆ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದೊಂದಿಗೆ ಕರ್ನಾಟಕವು ವಿದ್ಯುತ್ ಹಂಚಿಕೆ ಒಪ್ಪಂದ ಮಾಡಿಕೊಂಡಿದೆ. ಈಗ ಅಲ್ಲಿಂದ ವಿದ್ಯುತ್ ಪಡೆದು, ಮಳೆಗಾಲದಲ್ಲಿ ನಮ್ಮಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾದಾಗ ಅವರಿಗೆ ಮರಳಿ ನೀಡಲಾಗುತ್ತದೆ.ಏಪ್ರಿಲ್ 1 ರಿಂದ ಖಾಸಗಿ ಉಷ್ಣ ವಿದ್ಯುತ್ ಸ್ಥಾವರಗಳಿಂದ ಹೆಚ್ಚುವರಿ 1,000 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಾಗಲಿದೆ. ಏಪ್ರಿಲ್ ಆರಂಭದ ವೇಳೆಗೆ ರೈತರು ಬೆಳೆ ಕಟಾವು ಮಾಡುವುದರಿಂದ ಮತ್ತು ಪ್ರೀ-ಮಾನ್ಸೂನ್ ಮಳೆ ಆರಂಭವಾಗುವುದರಿಂದ ವಿದ್ಯುತ್ ಬೇಡಿಕೆ ಕೊಂಚ ತಗ್ಗುವ ನಿರೀಕ್ಷೆಯಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಕಾಶ್ ರಾಜ್​ಗೆ ಮಾತೃವಿಯೋಗ ; ಅಮ್ಮನ ದೇವತೆಯಂತೆ ನೋಡುತ್ತಿದ್ದ ನಟ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಮಾತೃವಿಯೋಗ ಉಂಟಾಗಿದೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರ ತಾಯಿ ಸ್ವರ್ಣಲತಾ ಹೈದರಾಬಾದ್​ ಅಲ್ಲಿ ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ತಾಯಿಯನ್ನು ಪ್ರಕಾಶ್ ರಾಜ್ ಅವರು ದೇವತೆಯಂತೆ ನೋಡುತ್ತಿದ್ದರು.

ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಗದಗದವರು. ಅವರ ಬಗ್ಗೆ ಈ ಮೊದಲು ಪ್ರಕಾಶ್ ರಾಜ್ ಮಾತನಾಡಿದ್ದರು. ‘ನನ್ನ ತಾಯಿ ಗದಗದವರು. ಅವರು ಅನಾಥೆ ಆಗಿದ್ದರು. ನನ್ನ ಅಜ್ಜಿ ತೀರಿಕೊಂಡಾಗ ಅಮ್ಮನಿಗೆ 12 ವರ್ಷ ವಯಸ್ಸು. ಬೆಳಗಾವಿಯ ಅನಾಥಾಶ್ರಾಮದಲ್ಲಿ ಬೆಳೆದರು. ನರ್ಸಿಂಗ್ ಟ್ರೇನಿಂಗ್ ಮಾಡಿ ಬೆಂಗಳೂರಿಗೆ ಬಂದರು’ ಎಂದಿದ್ದರು ಪ್ರಕಾಶ್ ರಾಜ್.

‘ನಮ್ಮ ಅಪ್ಪ ಮಂಗಳೂರಿನವರು. ಅವರು ಬೆಂಗಳೂರಿಗೆ ಬಂದರು. ಇಬ್ಬರೂ ಮದುವೆ ಆದರು. ನಮ್ಮ ಅಪ್ಪನಿಗೆ ಅವರದ್ದೇ ಆದ ನಂಬಿಕೆ ಇದೆ, ತಾಯಿಗೆ ಅವರದ್ದೇ ಆದ ದೇವರ ನಂಬಿಕೆ ಇದೆ. ನನ್ನ ನಂಬಿಕೆ ಬೇರೆಯದೇ ಇದೆ’ ಎಂದು ಪ್ರಕಾಶ್ ರಾಜ್ ಅವರು ಹೇಳಿದ್ದರು.

ತಾಯಿಯನ್ನು ದೇವತೆ ರೀತಿಯಲ್ಲಿ ಪ್ರಕಾಶ್ ರಾಜ್ ನೋಡಿಕೊಳ್ಳುತ್ತಿದ್ದರು. ‘ಎಲ್ಲರನ್ನೂ ಓದಿಸಿದ್ದಳು ನನ್ನ ಅಮ್ಮ. ಅವಳ ತ್ಯಾಗ ಅಮೂಲ್ಯವಾದುದು. ನನ್ನ ತಂದೆ ದುಡಿಯುತ್ತಾ ಇರಲಿಲ್ಲ. ತಂಗಿಯನ್ನು ಮದುವೆ ಮಾಡಿದ್ದು ಅವಳೇ. ದೇವರ ಮುಂದೆ ನಿಂತು ಜಗಳ ಆಡುತ್ತಿದ್ದಳು, ಪ್ರಾರ್ಥನೆ ಮಾಡುತ್ತಿದ್ದಳು’ ಎಂದು ಪ್ರಕಾಶ್ ರಾಜ್ ಹೇಳಿದ್ದರು. ಸ್ವರ್ಣಲತಾ ಮಾಡಿದ ತ್ಯಾಗ ನೋಡಿ ತಾಯಿ ದೇವತೆ ರೀತಿಯೇ ಕಾಣುತ್ತಿದ್ದಳು.

ಇದನ್ನೂ ಓದಿ: ಜಗಳ ಆಡಿ ಖ್ಯಾತ ನಿರ್ದೇಶಕನ ಸಿನಿಮಾದಿಂದ ಹೊರ ನಡೆದ ಪ್ರಕಾಶ್ ರಾಜ್? 

ಪ್ರಕಾಶ್ ರಾಜ್ 1965 ಮಾರ್ಚ್ 26ರಂದು ಜನಿಸಿದರು. ಅವರ ತಂದೆ ಹೆಸರು ಮಂಜುನಾಥ್. 2000 ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ ಪ್ರಕಾಶ್ ರಾಜ್. ಕನ್ನಡ, ತೆಲುಗು, ತಮಿಳು ಸೇರಿದಂತೆ ಅನೇಕ ಚಿತ್ರಗಳಲ್ಲಿ ಪ್ರಕಾಶ್ ರಾಜ್ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್ ಯುದ್ಧದ ಪರಿಣಾಮ ಬೀದರ್ ಕಲ್ಲಂಗಡಿಗೂ ಇಲ್ಲ ಬೆಲೆ!

ಬೀದರ್, ಮಾರ್ಚ್​ 30: ಜಿಲ್ಲೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಕಲ್ಲಂಗಡಿ ಬೆಳೆಗಾರರಿಗೆ ಭಾರೀ ಹೊಡೆತ ಬಿದ್ದಿದೆ. ರಫ್ತು ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಿ ಕಲ್ಲಂಗಡಿ ದರ ಪಾತಾಳಕ್ಕೆ ಕುಸಿದಿದ್ದು, ಕೆಜಿಗೆ ಕೇವಲ 4 ರಿಂದ 5 ರೂಪಾಯಿಗೆ ಮಾರಾಟವಾಗುತ್ತಿದೆ. ಕಟಾವು ಮತ್ತು ಸಾಗಾಟ ವೆಚ್ಚವೂ ಮರಳದ ಸ್ಥಿತಿ ನಿರ್ಮಾಣವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತಮ ಗುಣಮಟ್ಟದ ಕಲ್ಲಂಗಡಿ ಇದ್ದರೂ ಖರೀದಿದಾರರ ಕೊರತೆಯಿಂದ ಬೆಳೆ ಹೊಲದಲ್ಲಿಯೇ ಕೊಳೆಯುತ್ತಿದ್ದು, ಜಿಲ್ಲೆಯ ಬಹುತೇಕ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link