ಆರೋಗ್ಯ ಸಚಿವರ ಕ್ಷೇತ್ರದಲ್ಲೇ ರೋಗಿಗಳ ಪರದಾಟ : ಆಸ್ಪತ್ರೆ ಸಿಬ್ಬಂದಿಯನ್ನು ಜನಗಣತಿಗೆ ಬಳಸಿದ್ರೆ ಬಡ ರೋಗಿಗಳ ಗತಿಯೇನು? – Kannada News | Bengaluru Healthcare Crisis: KC General Hospital Patients Denied Care Due to Census Staffing
ಬೆಂಗಳೂರು, ಏ.27: ರಾಜ್ಯದ ರಾಜಧಾನಿಯಲ್ಲೇ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳ ಪರದಾಟ ಮುಂದುವರಿದಿದೆ. ಅದರಲ್ಲೂ ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕ್ಷೇತ್ರಕ್ಕೆ ಒಳಪಡುವ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಜನ ಹೈರಾಣಾಗಿದ್ದಾರೆ. ಈ ಹಿಂದೆಯೇ ಇಂತಹ ಸಮಸ್ಯೆಗಳು ಬರಬಹುದು ಎಂಬ ಮಾಹಿತಿ ವರದಿಯಾಗಿತ್ತು. ಬೆಂಗಳೂರಿನಲ್ಲಿ ನಡೆಯುತ್ತಿರುವ ಜನಗಣತಿ ಕಾರ್ಯಕ್ಕೆ ಆಸ್ಪತ್ರೆಯ ವೈದ್ಯಕೀಯ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ. ಕೆ.ಸಿ. ಜನರಲ್ ಆಸ್ಪತ್ರೆಯ ಸುಮಾರು 20ಕ್ಕೂ ಹೆಚ್ಚು…