ಚಿಕ್ಕಮಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಒಂದು ಸುವರ್ಣಾವಕಾಶ ಇಲ್ಲಿದೆ. ಚಿಕ್ಕಮಗಳೂರು ಪಟ್ಟಣ ಸಹಕಾರಿ ಬ್ಯಾಂಕ್ ಲಿಮಿಟೆಡ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಹೊರಡಿಸಲಾಗಿದೆ. ಉದ್ಯೋಗದ ಸಂಪೂರ್ಣ ವಿವರಗಳು, ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕಗಳ ಮಾಹಿತಿ ಇಲ್ಲಿದೆ.
ಉದ್ಯೋಗದ ವಿವರಗಳು:
- ಸಂಸ್ಥೆಯ ಹೆಸರು: ಚಿಕ್ಕಮಗಳೂರು ಪಟ್ಟಣ ಸಹಕಾರ ಬ್ಯಾಂಕ್ ನಿಯಮಿತ
- ಹುದ್ದೆಯ ಹೆಸರು: ಕಿರಿಯ ಸಹಾಯಕರು (Junior Assistants)
- ಒಟ್ಟು ಹುದ್ದೆಗಳ ಸಂಖ್ಯೆ: 05 ಹುದ್ದೆಗಳು
- ನೇಮಕಾತಿ ವಿಧಾನ: ನೇರ ನೇಮಕಾತಿ
- ಸ್ಥಳ: ಹನುಮಂತಪ್ಪ ಸರ್ಕಲ್ ಹತ್ತಿರ, ಕೆ.ಎಂ ರಸ್ತೆ, ಚಿಕ್ಕಮಗಳೂರು
ಇದನ್ನೂ ಓದಿ: ನೀಟ್ ಇಲ್ಲದೆಯೂ ವೈದ್ಯಕೀಯ ಲೋಕಕ್ಕೆ ಎಂಟ್ರಿ; 12ನೇ ತರಗತಿ ಅಂಕಗಳ ಆಧಾರದ ಮೇಲೆ ಸಿಗಲಿದೆ ಅಡ್ಮಿಷನ್!
ಅರ್ಜಿ ಪಡೆಯುವುದು ಮತ್ತು ಶುಲ್ಕದ ವಿವರ:
ನೇಮಕಾತಿಗೆ ಸಂಬಂಧಿಸಿದ ಅರ್ಜಿಯನ್ನು ಬ್ಯಾಂಕಿನ ಕಚೇರಿ ವೇಳೆಯಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿ ನೇರವಾಗಿ ಪಡೆದುಕೊಳ್ಳಬಹುದಾಗಿದೆ.
- ಅರ್ಜಿ ಶುಲ್ಕ: ರೂ. 100 + ಜಿ.ಎಸ್.ಟಿ (100 + GST)
- ಅರ್ಜಿ ಲಭ್ಯವಿರುವ ಸ್ಥಳ: ಚಿಕ್ಕಮಗಳೂರು ಪಟ್ಟಣ ಸಹಕಾರ ಬ್ಯಾಂಕಿನ ಪ್ರಧಾನ ಕಚೇರಿ.
ಪ್ರಮುಖ ದಿನಾಂಕಗಳು:
- ಅರ್ಜಿ ವಿತರಣೆ ಆರಂಭದ ದಿನಾಂಕ: 25-06-2026 ರಿಂದ ಅರ್ಜಿಗಳನ್ನು ಪಡೆಯಬಹುದಾಗಿದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-07-2026.
ಅಭ್ಯರ್ಥಿಗಳ ಗಮನಕ್ಕೆ:
ನೇಮಕಾತಿಗೆ ಸಂಬಂಧಿಸಿದ ನಿಯಮಗಳು, ವಿದ್ಯಾರ್ಹತೆ, ವಯೋಮಿತಿ ಮತ್ತು ಇತರ ಹೆಚ್ಚಿನ ಶರತ್ತುಗಳ ಸಂಪೂರ್ಣ ಮಾಹಿತಿಗಾಗಿ ಅಭ್ಯರ್ಥಿಗಳು ಬ್ಯಾಂಕಿನ ಕಚೇರಿ ಸಮಯದಲ್ಲಿ ‘ಪ್ರಧಾನ ವ್ಯವಸ್ಥಾಪಕರು / ಸಿ.ಇ.ಒ’ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 3:16 pm, Tue, 7 July 26
