Bengaluru: ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ; ಪತ್ನಿಯಿಂದಲೇ ಪತಿ ಹತ್ಯೆ – Kannada News | Husband Killed by Wife in Bengaluru Over Family Dispute; Accused Arrested

ಬೆಂಗಳೂರು, ಜನವರಿ 22: ಮಕ್ಕಳ ವಿಚಾರವಾಗಿ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಪತ್ನಿಯೇ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಮುರುಗೆಶ್​​ ಮೃತ ವ್ಯಕ್ತಿಯಾಗಿದ್ದು, ಆರೋಪಿ ಪತ್ನಿ ಲಕ್ಷ್ಮೀಯನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು, ಮೊದಲನೆಯವಳಿಗೆ ಮದುವೆಯಾಗಿತ್ತು. ಉಳಿದ ಇಬ್ಬರು ಹೆಣ್ಣು ಮಕ್ಕಳು ತಾಯಿಯ ಜೊತೆ ಕೆಲಸಕ್ಕೆ ಹೋಗುತ್ತಿದ್ದರು. ಈ ನಡುವೆ ಎರಡನೇ ಮಗಳು ಪ್ರೀತಿಸಿದ ಯುವಕನ ಜೊತೆ ಎಸ್ಕೇಪ್​​ ಆಗಿದ್ದು, ಇದರಿಂದ ಮನೆಯಲ್ಲಿ ಜಗಳವಾಗುತ್ತಿತ್ತು. ಮಕ್ಕಳನ್ನ ಸರಿಯಾಗಿ ಬೆಳೆಸಿಲ್ಲ ಎಂದು ಆಪಾದಿಸಿ ಪತಿ ಮುರುಗೇಶ್ ನಿಂದನೆ ಮಾಡುತ್ತಿದ್ದರು. ಎರಡು ದಿನಗಳ ಹಿಂದೆಯೂ ಇದೇ ವಿಚಾರವಾಗಿ ಮತ್ತೆ ಜಗಳವಾಗಿದೆ. ಈ ವೇಳೆ ಮನೆಯಲ್ಲಿದ್ದ ಚಾಕುವಿನಿಂದ ಮುರುಗೇಶ್​​ ಎದೆಗೆ ಪತ್ನಿ ಲಕ್ಷ್ಮೀ ಇರಿದಿದ್ದು, ತೀವ್ರ ರಕ್ತಸ್ರಾವವಾಗಿ ಪತಿ ಕುಸಿದು ಬಿದ್ದಿದ್ದಾರೆ. ಪಕ್ಕದ ಮನೆಯವರು ಆ್ಯಂಬ್ಯುಲೆನ್ಸ್​​ಗೆ ಕರೆ ಮಾಡಿದ್ದರಾದರೂ ಅಷ್ಟರಲ್ಲೇ ಮುರುಗೇಶ್​ ಮೃತಪಟ್ಟಿದ್ದರು. ಆತನೇ ಚುಚ್ಚಿಕೊಂಡಿದ್ದಾನೆ ಎಂದು ಲಕ್ಷ್ಮೀ ಮೊದಲು ಕತೆ ಕಟ್ಟಿದ್ದಳಾದರೂ ಪೋಲಿಸರ ತನಿಖೆಯಲ್ಲಿ ಕೊಲೆ ಮಾಡಿರೋದನ್ನು ಒಪ್ಪಿಕೊಂಡಿದ್ದಾಳೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *