Bengaluru Air Quality: ಬೆಂಗಳೂರಿನ ಗಾಳಿಯ ಮಟ್ಟ ಕಳಪೆ, ಮಂಗಳೂರು, ಉಡುಪಿ ಅತ್ಯಂತ ಉತ್ತಮ – Kannada News | Bengaluru’s Poor Air Quality; Masks Advised Good in Mangaluru and Mysuru

ಬೆಂಗಳೂರು, ಫೆ.12: ರಾಜ್ಯದ ಹಲವು ಭಾಗಗಳಲ್ಲಿ ಇಂದಿನ (ಫೆ.12)ಗಾಳಿಯ ಗುಣಮಟ್ಟದಲ್ಲಿ ಭಾರೀ ಬದಲಾವಣೆಗಳು ಇಲ್ಲ. ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಮಟ್ಟವು ಸಾಧಾರಣದಿಂದ ಉತ್ತಮ ಸ್ಥಿತಿಯಲ್ಲಿದೆ. ಬೆಂಗಳೂರಿನ ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್ ಮತ್ತು ಪೀಣ್ಯ ಭಾಗಗಳಲ್ಲಿ ವಾಹನ ದಟ್ಟಣೆಯಿಂದಾಗಿ AQI ಸ್ವಲ್ಪ ಹೆಚ್ಚಾಗಿದೆ . ಬೆಳಗಿನ ಜಾವ ಮಂಜು ಇರುವುದರಿಂದ ಧೂಳಿನ ಕಣಗಳು (PM 2.5) ಗಾಳಿಯಲ್ಲಿ ಹೆಚ್ಚು ಸಮಯದವರೆಗೆ ಇರುತ್ತದೆ. ಬಿಸಿಲು ಮತ್ತು ಒಣ ಹವೆ ಹೆಚ್ಚಾಗಿರುವುದರಿಂದ ಧೂಳಿನ ಪ್ರಮಾಣ (Dust particles) ಗಾಳಿಯಲ್ಲಿ ಕಂಡುಬರುತ್ತಿದೆ.

ಸಮುದ್ರದ ಗಾಳಿಯ ಪ್ರಭಾವದಿಂದ ಮಂಗಳೂರು ಮತ್ತು ಉಡುಪಿ ಭಾಗಗಳಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಉತ್ತಮವಾಗಿದೆ. ಬೆಂಗಳೂರಿನಂತಹ ನಗರಗಳಲ್ಲಿ ಉಸಿರಾಟದ ತೊಂದರೆ ಅಥವಾ ಅಲರ್ಜಿ ಇರುವವರು ಮಧ್ಯಾಹ್ನದ ವೇಳೆ ಹೊರಗೆ ಓಡಾಡುವಾಗ ಮಾಸ್ಕ್ ಧರಿಸುವುದು ಉತ್ತಮ ಎಂದು ತಜ್ಞರು ಹೇಳಿದ್ದಾರೆ. ಮೈಸೂರು ಮತ್ತು ಮಂಗಳೂರಿನಂತಹ ನಗರಗಳಲ್ಲಿ ಬೆಳಗಿನ ವಾಯುವಿಹಾರಕ್ಕೆ ಹವಾಮಾನ ಮತ್ತು ಗಾಳಿ ಅತ್ಯಂತ ಸೂಕ್ತವಾಗಿದೆ.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾಗಶಃ ಬಿಸಿಲಿನ ವಾತಾವರಣವಿರಲಿದೆ

ಪ್ರಮುಖ ನಗರಗಳ ಗಾಳಿಯ ಗುಣಮಟ್ಟ:

ನಗರ AQI ಮಟ್ಟ ಸ್ಥಿತಿ (Status)
ಬೆಂಗಳೂರು 110 – 135 ಸಾಧಾರಣ (Moderate)
ಮೈಸೂರು 55 – 70 ಉತ್ತಮ (Satisfactory)
ಹುಬ್ಬಳ್ಳಿ-ಧಾರವಾಡ 90 – 105 ಸಾಧಾರಣ (Moderate)
ಮಂಗಳೂರು 45 – 60 ಉತ್ತಮ (Good)
ಕಲಬುರ್ಗಿ 85 – 100 ಸಾಧಾರಣ (Moderate)
ಬೆಳಗಾವಿ 70 – 85 ಉತ್ತಮ (Satisfactory)

ಬೆಂಗಳೂರಿನಲ್ಲಿ ಇಂದು ಗಾಳಿಯ ಗುಣಮಟ್ಟ 140 ರಿಂದ 175 ರ ಆಸುಪಾಸಿನಲ್ಲಿದ್ದು ಇಂದು ಕಳಪೆ ಎಂದು ಹೇಳಲಾಗಿದೆ. ಹೆಬ್ಬಾಳ , ಸಿಲ್ಕ್ ಬೋರ್ಡ್ ಮತ್ತು ಬಿಟಿಎಂ ಲೇಔಟ್​​​ನಲ್ಲಿ ಗಾಳಿಯ ಗುಣಮಟ್ಟ 158ಕ್ಕೆ ತಲುಪಿದೆ. ಕಳಪೆ’ ವಾಯು ಗುಣಮಟ್ಟವಿರುವುದರಿಂದ ಉಸಿರಾಟದ ತೊಂದರೆ ಇರುವವರು, ಮಕ್ಕಳು ಮತ್ತು ವೃದ್ಧರು ಮಧ್ಯಾಹ್ನದ ವೇಳೆ ಹೊರಗೆ ಬರುವಾಗ ಮಾಸ್ಕ್ ಧರಿಸುವುದು ಸೂಕ್ತ ಎಂದು ಹೇಳಲಾಗಿದೆ. ಮೈಸೂರು, ಮಂಗಳೂರು ಮತ್ತು ಚಾಮರಾಜನಗರದಲ್ಲಿ ಗಾಳಿ ಶುದ್ಧವಾಗಿದ್ದು, ದೈಹಿಕ ಚಟುವಟಿಕೆಗಳಿಗೆ ಪೂರಕವಾಗಿದೆ.

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *