Bengaluru Karaga: ಇಂದು ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ; ಹಸಿ ಕರಗ ಹೊತ್ತು ದ್ರೌಪದಿ ದೇವಿ ದರ್ಶನ!

Bengaluru Karaga: ಇಂದು ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ; ಹಸಿ ಕರಗ ಹೊತ್ತು ದ್ರೌಪದಿ ದೇವಿ ದರ್ಶನ!

ಬೆಂಗಳೂರು, ಮಾರ್ಚ್​ 31: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವವು ಪ್ರತಿ ವರ್ಷದಂತೆ ಈ ಬಾರಿಯೂ ಸಡಗರದಿಂದ ನಡೆಯಲು ಸಿದ್ಧವಾಗಿದೆ. ಧರ್ಮರಾಯಸ್ವಾಮಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಲಕರಿ ನಾರಾಯಣಸ್ವಾಮಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಚೈತ್ರ ಹುಣ್ಣಿಮೆಗೆ ಮೂರು ದಿನಗಳ ಮೊದಲು ದ್ರೌಪದಿ ದೇವಿ ಭೂಮಿಗೆ ಬರುವ ನಂಬಿಕೆ ಈ ಉತ್ಸವದ ಪ್ರಮುಖ ಅಂಶವಾಗಿದೆ.

ಈ ಆಚರಣೆಗೆ ಮಹಾಭಾರತ ಕಾಲದ ಇತಿಹಾಸವಿದೆ. ಪಾಂಡವರ ಸ್ವರ್ಗಾರೋಹಣದ ಸಂದರ್ಭದಲ್ಲಿ ತಾಯಿ ದ್ರೌಪದಿ ದೇವಿ ಮೂರ್ಛೆ ಹೋದಾಗ, ತಿಮಿರಾಸುರ ಎಂಬ ರಾಕ್ಷಸನು ಅಲ್ಲಿ ಕಾಣಿಸಿಕೊಂಡನು. ಈ ರಾಕ್ಷಸನ ಸಂಹಾರಕ್ಕಾಗಿ ವೀರಕುಮಾರರನ್ನು ಸೃಷ್ಟಿಸಲಾಯಿತು. ನಂತರ ಶ್ರೀಕೃಷ್ಣ ದ್ರೌಪದಿ ದೇವಿಯನ್ನು ಕಾಣದಿದ್ದಾಗ, ವೀರಕುಮಾರರು ತಮ್ಮಲ್ಲಿದ್ದ ಖಡ್ಗದಿಂದ ತಮ್ಮ ಎದೆಗೆ ಬಡಿದುಕೊಂಡರು. ಇದನ್ನೇ ಇಂದು ಅಲಗು ಸೇವೆ ಎಂದು ಕರೆಯಲಾಗುತ್ತದೆ. ಈ ಐತಿಹಾಸಿಕ ಆಚರಣೆಗಳು ಬೆಂಗಳೂರಿನ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುತ್ತವೆ. ಕರಗ ಮಹೋತ್ಸವವು ಬೆಂಗಳೂರಿನ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

Leave a Reply

Your email address will not be published. Required fields are marked *