ಹೊಸ ಕರೆನ್ಸಿ ನೋಟುಗಳನ್ನು ಸಾಗುತ್ತಿದ್ದ ಬೊಲಿವಿಯನ್ ವಾಯುಪಡೆಗೆ ಸೇರಿದ ಸೇನಾ ಸರಕು ವಿಮಾನವೊಂದು (Cargo Plane) ಪತನಗೊಂಡು ಕನಿಷ್ಠ 15 ಜನರು ಸಾವನ್ನಪ್ಪಿರುವುದು ವರದಿಯಾಗಿದೆ. ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ವಿಮಾನವು ನೇರವಾಗಿ ಹೆದ್ದಾರಿಯ ಮೇಲೆ ಅಪ್ಪಳಿಸಿದೆ. ಕ್ಷಣಾರ್ಧದಲ್ಲಿ ರಸ್ತೆಯಲ್ಲಿದ್ದ ಹದಿನೈದಕ್ಕೂ ಹೆಚ್ಚು ವಾಹನಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಜ್ಜುಗುಜ್ಜಾಗಿದೆ. ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ಟೋವರ್ ಅವರ ಪ್ರಕಾರ, ಈ ಭೀಕರ ದುರಂತದಲ್ಲಿ 15 ಜೀವಗಳು ಬಲಿಯಾಗಿದೆ. 15 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ವಿಮಾನ ಬೊಲಿವಿಯನ್ ವಾಯುಪಡೆಯ ಹರ್ಕ್ಯುಲಸ್ ವಿಮಾನವಾಗಿದ್ದು, ಅದು ಕೇಂದ್ರ ಬ್ಯಾಂಕಿನಿಂದ ಇತರ ನಗರಗಳಿಗೆ ಹೊಸ ಕರೆನ್ಸಿ ನೋಟುಗಳನ್ನು ಸಾಗಿಸುತ್ತಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ಹೊಸ ನೋಟುಗಳನ್ನು ಹೊತ್ತೊಯ್ಯುತ್ತಿದ್ದ ಈ ವಿಮಾನವು ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ನೋಟುಗಳ ಕಂತೆಗಳು ಗಾಳಿಯಲ್ಲಿ ಹಾರಿ, ರಸ್ತೆಯಾದ್ಯಂತ ಹರಡಿಕೊಂಡಿದೆ.
🚨 BREAKING NEWS
A #Bolivian Air Force C-130 Hercules cargo plane carrying newly printed banknotes has crashed near El Alto, close to La Paz.
At least 15 people are dead.#sstvi #WilliamEst #AVFC pic.twitter.com/QS0gogxmYG
— Eyes on the Globe (@eyes_globe) February 28, 2026
ಮತ್ತಷ್ಟು ಓದಿ: ‘ಸ್ಟಾಂಡ್ಅಪ್’ ಕಾಮಿಡಿ; ಟ್ರಂಪ್ ಮುಂದೆ ಶಾಲಾ ಬಾಲಕನಾದ ಪಾಕಿಸ್ತಾನದ ಪ್ರಧಾನಿ
ಒಂದು ಕಡೆ ಸಾವು-ನೋವಿನ ಆರ್ಕ್ರಂದನ ಕೇಳಿಬರುತ್ತಿದ್ದರೆ, ಮತ್ತೊಂದು ಕಡೆ ರಸ್ತೆಯಲ್ಲಿ ಬಿದ್ದಿದ್ದ ಹಣವನ್ನು ಆರಿಸಲು ಜನರು ಮುಗಿಬಿದ್ದಿರುವ ವಿಡಿಯೋ ಸೊಶೀಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಭೀಕರ ದುರಂತದಲ್ಲಿ ಅಪಘಾತದ ನಂತರ, ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
