Breaking News 15 June 2026 Live Updates in Kannada: ಜಗತ್ತನ್ನೇ ತಲ್ಲಣಗೊಳಿಸಿದ್ದ ಅಮೆರಿಕ-ಇರಾನ್ ಯುದ್ಧ ಕೊನೆಗೊಳ್ಳುವ ಹಂತಕ್ಕೆ ಬಂದಿದೆ. ಯುದ್ಧವಿರಾಮದ ನಿಟ್ಟಿನಲ್ಲಿ ಉಭಯ ದೇಶಗಳು ಒಪ್ಪಂದಕ್ಕೆ ಬಂದಿದ್ದು, ಜೂನ್ 19ರಂದು ಜಿನಿವಾದಲ್ಲಿ ಸಹಿ ಹಾಕಲಿವೆ. ಇದರೊಂದಿಗೆ ಹಾರ್ಮುಝ್ ಜಲಸಂಧಿ ಸಹ ವಿಶ್ವದ ಎಲ್ಲ ದೇಶಗಳ ಹಡಗು ಸಂಚಾರಕ್ಕೆ ಮುಕ್ತವಾಗಲಿದೆ. ಪರಿಣಾಮವಾಗಿ ಕಚ್ಚಾ ತೈಲ ಬೆಲೆ ಒಂದೇ ದಿನ ಶೇ 4 ರಷ್ಟು ಇಳಿಕೆಯಾಗಿದ್ದು, ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಇಳಿಕೆಯ ನಿರೀಕ್ಷೆ ಇದೆ. ಈ ಎಲ್ಲ ಬೆಳವಣಿಗೆಗಳ ಪರಿಣಾಮ ಷೇರುಮಾರುಕಟ್ಟೆ ಚೇತರಿಕೆ ಕಂಡಿದೆ. ಇತ್ತ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಪರಿಷತ್ ಚುನಾವಣೆಯ ರಾಜಕೀಯ ಕಾವೇರಿದೆ. ಅಡ್ಡಮತದಾನದ ಭೀತಿ ಹಿನ್ನೆಲೆ ರೆಸಾಟರ್ಟ್ ರಾಜಕೀಯ ಶುರುವಾಗಿದೆ. ದಿನದ ಪ್ರಮುಖ ವಿದ್ಯಮಾನಗಳ ತಾಜಾ ಅಪ್ಡೇಟ್ ಪಡೆಯಲು ಈ ಪುಟವನ್ನು ಆಗಾಗ್ಗೆ ರಿಫ್ರೆಷ್ ಮಾಡುತ್ತಿರಿ.