Video: ರಷ್ಯಾ ಬಾಂಬರ್ ವಿಮಾನ ಪತನ: ನಾಲ್ವರು ಸಿಬ್ಬಂದಿ ಪವಾಡಸದೃಶ ರೀತಿಯಲ್ಲಿ ಪಾರು – Kannada News | Russian Long Range Bomber Goes Down in Fiery Incident Caught on Video
ಮಾಸ್ಕೋ, ಜೂನ್ 16: ರಷ್ಯಾದ ಸೈಬೀರಿಯಾ ಪ್ರಾಂತ್ಯದ ಇರ್ಕುಟ್ಸ್ಕ್ ಪ್ರದೇಶದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದ ರಷ್ಯಾದ ವಾಯುಸೇನೆಗೆ ಸೇರಿದ ಬೃಹತ್ ‘Tu-22M3’ ಕಾರ್ಯತಂತ್ರದ ಬಾಂಬರ್ ವಿಮಾನ ಪತನ(Plane Crash)ಗೊಂಡಿದೆ. ಅದೃಷ್ಟವಶಾತ್, ವಿಮಾನದಲ್ಲಿದ್ದ ನಾಲ್ವರು ಸಿಬ್ಬಂದಿಗಳು ಸಮಯಪ್ರಜ್ಞೆ ಮೆರೆದು ಸುರಕ್ಷಿತವಾಗಿ ಹೊರಜಿಗಿದಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೀಡಾದ ವಿಮಾನವು ತರಬೇತಿ ಹಾರಾಟದಲ್ಲಿದ್ದ ಕಾರಣ ಯಾವುದೇ ಯುದ್ಧ ಸಾಮಗ್ರಿ ಅಥವಾ ಬಾಂಬ್‌ಗಳನ್ನು ಹೊತ್ತೊಯ್ದಿರಲಿಲ್ಲ. ವಿಮಾನವು ಕಾಮೆಂಕಾ ಗ್ರಾಮದ ಬಳಿಯ ಅಂಗಾರ ನದಿಯ ಅರಣ್ಯ ಪ್ರದೇಶದಲ್ಲಿ ಬಿದ್ದಿರುವುದರಿಂದ ನೆಲದ ಮೇಲಿನ ಸಾರ್ವಜನಿಕ…