Category Archives: Blog

Your blog category

ವೈಭವ್ ಸೂರ್ಯವಂಶಿಗೆ ಬ್ಯಾನ್ ಭೀತಿ..! – Kannada News | Vaibhav Sooryavanshi Faces Match Ban After On Field Clash

ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವಣ ಪಂದ್ಯದ ಬಳಿಕ ನಡೆದ ದೈಹಿಕ ಘರ್ಷಣೆ ಹಿನ್ನಲೆ ಟೀಮ್ ಇಂಡಿಯಾದ ಯುವ ದಾಂಡಿಗ ವೈಭವ್ ಸೂರ್ಯವಂಶಿ ವಿರುದ್ಧ ಐಸಿಸಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯತೆಯಿದೆ. ದಂಬುಲ್ಲಾದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.2 ಓವರ್​ಗಳಲ್ಲಿ 265 ರನ್​ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡ 50 ಓವರ್​ಗಳಲ್ಲಿ 265 ರನ್​ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿದ್ದರು.

ಆ ಬಳಿಕ ನಡೆದ ಸೂಪರ್ ಓವರ್​ನಲ್ಲಿ ಶ್ರೀಲಂಕಾ ಬ್ಯಾಟರ್​ಗಳು 16 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 6 ಎಸೆತಗಳಲ್ಲಿ ಕೇವಲ 9 ರನ್​ಗಳಿಸಿ 7 ರನ್​ಗಳಿಂದ ಸೋಲೊಪ್ಪಿಕೊಂಡಿದ್ದರು.

ಈ ಸೋಲಿನ ಬಳಿಕ ಪೆವಿಲಿಯನ್​ ಕಡೆ ಹೆಜ್ಜೆ ಹಾಕುತ್ತಿದ್ದ ವೈಭವ್ ಸೂರ್ಯವಂಶಿಯನ್ನು ಗುರಿಯಾಗಿಸಿ ಶ್ರೀಲಂಕಾ ಆಟಗಾರ ವಿಶೇನ್ ಹಾಲಂಬಾಗೆ ಅದೇನೋ ಹೇಳಿದ್ದಾರೆ. ಇದರಿಂದ ಕೆರಳಿದ ವೈಭವ್ ಸೂರ್ಯವಂಶಿ ಲಂಕಾ ಆಟಗಾರನತ್ತ ಧಾವಿಸಿ ಮಾತಿನ ಚಕಮಕಿ ನಡೆಸಿದ್ದರು.

ಈ ವಾಗ್ವಾದದ ನಡುವೆ ವೈಭವ್ ಸೂರ್ಯವಂಶಿ ವಿಶೇನ್ ಹಾಲಂಬಾ ಅವರನ್ನು ಕೈಯಿಂದ ತಳ್ಳುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಹಿನ್ನಲೆಯಲ್ಲಿ ಐಸಿಸಿ ವೈಭವ್ ಸೂರ್ಯವಂಶಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಐಸಿಸಿ ನಿಯಮಾವಳಿ:

ಐಸಿಸಿ ಕ್ರಿಕೆಟ್ ನಿಯಮಾವಳಿಗಳ ಪ್ರಕಾರ ಮೈದಾನದಲ್ಲಿ ಎದುರಾಳಿ ಆಟಗಾರರ ಮೇಲೆ ದೈಹಿಕವಾಗಿ ಕೈಮಾಡುವುದು ಅಥವಾ ತಳ್ಳುವುದು “ಲೆವೆಲ್-2” ಅಥವಾ “ಲೆವೆಲ್-3” ಮಾದರಿಯ ಗಂಭೀರ ಶಿಸ್ತು ಉಲ್ಲಂಘನೆಯಾಗಿದೆ.

  • ರೆಫರಿ ತನಿಖೆ: ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಗಾಶ್ ಅವರು ಈ ಇಡೀ ಘಟನೆಯ ವಿಡಿಯೋ ಸಾಕ್ಷ್ಯಗಳು ಮತ್ತು ಆನ್-ಫೀಲ್ಡ್ ಅಂಪೈರ್‌ಗಳ ವರದಿಯನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ.
  • ಸಂಭವನೀಯ ಶಿಕ್ಷೆ: ಐಸಿಸಿ ನೀತಿ ಸಂಹಿತೆಯ ಅಡಿಯಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ, ವೈಭವ್ ಸೂರ್ಯವಂಶಿ ಅವರಿಗೆ ಪಂದ್ಯ ಶುಲ್ಕದ 100% ವರೆಗೆ ದಂಡ ವಿಧಿಸಬಹುದು.
  • ಪಂದ್ಯ ನಿಷೇಧ: ಮ್ಯಾಚ್ ರೆಫರಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದರೆ ವೈಭವ್ ಸೂರ್ಯವಂಶಿ ಅವರನ್ನು ಕೆಲವು ಪಂದ್ಯಗಳಿಂದ ನಿಷೇಧಿಸಬಹುದು.

ಇದನ್ನೂ ಓದಿ: ಬಲಿಷ್ಠ ಸ್ಪೇನ್ ವಿರುದ್ಧ ಸೆಟೆದು ನಿಂತ ಕೇಪ್ ವರ್ಡೆ..!

ಇದೀಗ ಮೈದಾನದಲ್ಲಿ ಅಶಿಸ್ತು ತೋರಿದ ಶ್ರೀಲಂಕಾದ ವಿಶೇನ್ ಹಾಲಂಬಾ ಹಾಗೂ ವೈಭವ್ ಸೂರ್ಯವಂಶಿ ವಿರುದ್ಧ ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಗಾಶ್ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದೇ ಸದ್ಯದ ಕುತೂಹಲ.

Source link

ಶಿಕ್ಷಣ ಸಚಿವರಿಲ್ಲದೆ ಇಲಾಖೆಯ ಚಟುವಟಿಕೆಗಳಿಗೆ ಅಡ್ಡಿ: ಸರ್ಕಾರಿ ಶಾಲೆಯ 30 ಸಾವಿರ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ – Kannada News | Karnataka Academic Year Begins in Chaos: Delayed Cabinet Expansion Leaves Education Department Ministerless for Two Weeks

ಸಾಂದರ್ಭಿಕ ಚಿತ್ರImage Credit source: Karnataka Education Department

ಬೆಂಗಳೂರು, ಜೂನ್ 16: ರಾಜ್ಯದಲ್ಲಿ 2026ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ವಾರಗಳು ಕಳೆದಿದ್ದರೂ ಇಲಾಖೆಗೆ ಶಿಕ್ಷಣ ಸಚಿವರೇ (Education Minister) ಇಲ್ಲದಿರುವುದು ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಸಚಿವರ ಅನುಪಸ್ಥಿತಿಯಿಂದಾಗಿ ಹೊಸ ಶಿಕ್ಷಣ ನೀತಿಗಳ ಅನುಷ್ಠಾನ, ಶಿಕ್ಷಕರ ನೇಮಕಾತಿ ಮತ್ತು ಶಾಲಾ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಮುಖ ನೀತಿ ನಿರ್ಧಾರಗಳನ್ನು ಕೈಗೊಳ್ಳಲು ಅಧಿಕಾರಿಗಳು ತಡಕಾಡುತ್ತಿದ್ದಾರೆ. ಇದರ ನೇರ ಪರಿಣಾಮವಾಗಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಲಕ್ಷಾಂತರ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಭಾರಿ ಹೊಡೆತ ಬಿದ್ದಿದೆ.

ಮುಖ್ಯಾಂಶಗಳು

  • ಶಿಕ್ಷಣ ಸಚಿವರಿಲ್ಲದೆ ಸ್ಥಗಿತಗೊಂಡ ನೇಮಕಾತಿ.
  • 30 ಸಾವಿರ ವಿದ್ಯಾರ್ಥಿಗಳಿಗೆ ಇಲ್ಲ 8ನೇ ತರಗತಿ.
  • ಪಠ್ಯಪುಸ್ತಕ, ಸಮವಸ್ತ್ರ ವಿತರಣೆಯಲ್ಲಿ ತೀವ್ರ ವಿಳಂಬ.

ಏನಿದು 30 ಸಾವಿರ ವಿದ್ಯಾರ್ಥಿಗಳ ಆಂಗ್ಲ ಮಾಧ್ಯಮ ಗೊಂದಲ?

ಬಡ ಮತ್ತು ಮಧ್ಯಮ ವರ್ಗದ ಪೋಷಕರ ಮಕ್ಕಳೂ ಇಂಗ್ಲಿಷ್ ಕಲಿಯಬೇಕೆಂಬ ಮಹತ್ವಾಕಾಂಕ್ಷೆಯಿಂದ ರಾಜ್ಯ ಸರ್ಕಾರವು 2018-19ನೇ ಸಾಲಿನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಟ್ಟು 1,001 ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿಸಿತ್ತು. ಅಂದು ಒಂದನೇ ತರಗತಿಗೆ ಸೇರಿದ ಸುಮಾರು 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೀಗ ಯಶಸ್ವಿಯಾಗಿ 7ನೇ ತರಗತಿ ಪಾಸಾಗಿದ್ದಾರೆ. ಆದರೆ, ಪ್ರಸಕ್ತ ಸಾಲಿನಲ್ಲಿ ಅವರು 8ನೇ ತರಗತಿಯ ಪ್ರೌಢಶಿಕ್ಷಣಕ್ಕೆ ಹೆಜ್ಜೆ ಇಡಬೇಕಾಗಿದ್ದು, ಸರ್ಕಾರದ ಯಾವುದೇ ಪ್ರೌಢಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಮುಂದುವರಿಕೆಗೆ ಮಂಜೂರಾತಿ ಸಿಕ್ಕಿಲ್ಲ! ಇದರಿಂದಾಗಿ ಈ ಮಕ್ಕಳು ಮುಂದಿನ ದಾರಿ ಕಾಣದೆ ಅತಂತ್ರರಾಗಿದ್ದಾರೆ. ಖಾಸಗಿ ಶಾಲೆಗಳಿಗೆ ಸೇರಿಸಲು ಆರ್ಥಿಕ ಶಕ್ತಿಯಿಲ್ಲದೆ ಪೋಷಕರು ಕಂಗಾಲಾಗಿದ್ದಾರೆ. ಬೆಂಗಳೂರಿನ 144, ಬೆಳಗಾವಿಯ 74 ಹಾಗೂ ತುಮಕೂರಿನ 49 ಶಾಲೆಗಳು ಸೇರಿದಂತೆ ರಾಜ್ಯದ ಒಟ್ಟು 1,001 ಶಾಲೆಗಳ ಮಕ್ಕಳು ಈ ಗೊಂದಲದಲ್ಲಿದ್ದಾರೆ.

ಶಿಕ್ಷಕರ ಕೊರತೆ, ಪಠ್ಯಪುಸ್ತಕಗಳ ವಿತರಣೆ ವಿಳಂಬ

ಇಲಾಖೆಗೆ ಮುಖ್ಯಸ್ಥರಿಲ್ಲದ ಕಾರಣ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗಳು ನನೆಗುದಿಗೆ ಬಿದ್ದಿದ್ದು, ಗ್ರಾಮೀಣ ಭಾಗದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಜೂನ್ ಅರ್ಧ ತಿಂಗಳು ಕಳೆದರೂ ಮಕ್ಕಳಿಗೆ ಸಮವಸ್ತ್ರ, ಬಿಸಿಯೂಟದ ಸರಿಯಾದ ನಿರ್ವಹಣೆ ಹಾಗೂ ಆಂಗ್ಲ ಮಾಧ್ಯಮದ ಪಠ್ಯಪುಸ್ತಕಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ‘ಪೋಷಕರ ಸಮನ್ವಯ ಸಮಿತಿ’ ಅಧ್ಯಕ್ಷ ಯೋಗಾನಂದ್ ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಶಾಲಾ ಮಕ್ಕಳಿಗಿನ್ನು ಚಪ್ಪಲಿ ಭಾಗ್ಯ!: ಮಕ್ಕಳ ಆರೋಗ್ಯ ಗಮನದಲ್ಲಿರಿಸಿ ಶಿಕ್ಷಣ ಇಲಾಖೆಯಿಂದ ಹೊಸ ಚಿಂತನೆ

ಈ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್, ‘ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಿದ್ದರೆ ಅಲ್ಲಿ ದಾಖಲಿಸಲು ಸೂಚಿಸಲಾಗಿದೆ. ಒಂದು ವೇಳೆ ಇಲ್ಲದಿದ್ದರೆ, ಅದೇ ಸರ್ಕಾರಿ ಶಾಲೆಗಳಲ್ಲೇ 8ನೇ ತರಗತಿಗೆ ಆಂಗ್ಲ ಮಾಧ್ಯಮವನ್ನು ಅಪ್‌ಗ್ರೇಡ್ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ. ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ತಕ್ಷಣವೇ ಈ ಗೊಂದಲ ನಿವಾರಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:01 am, Tue, 16 June 26

Source link

TV9 Kannada Live: ರಾಜ್ಯದಲ್ಲಿ ಮತ್ತೆ ರೆಸಾರ್ಟ್​​ ರಾಜಕೀಯ, ಕೈ ಶಾಸಕರಿಂದು ಬಿಡದಿಗೆ ಶಿಫ್ಟ್​​ – Kannada News | TV9 Kannada News Live 16 June 2026 Karnataka Politics, Weather, Politics, MLC Polls Latest Updates

ಮತ್ತೆ ಶುರುವಾದ ರೆಸಾರ್ಟ್​​ ರಾಜಕೀಯImage Credit source: Tv9 Kannada

ರಾಜ್ಯದ ವಿವಿಧೆಡೆ ಅಧಿಕಾರಿಗಳಿಗೆ ಲೋಕಾಯುಕ್ತ ಭರ್ಜರಿ ಶಾಕ್​​ ಕೊಟ್ಟಿದ್ದು ಕಲಬುರಗಿ, ಚಿಕ್ಕಮಗಳೂರು ಮತ್ತು ದಾವಣಗೆರೆಯಲ್ಲಿ ದಾಳಿ ನಡೆದಿದೆ. ಮನೆ ಮತ್ತು ಕಚೇರಿಗಳು ಸೇರಿದಂತೆ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ತಲಾಶ್​​ ನಡೆಸಿದ್ದಾರೆ. ಮತ್ತೊಂದೆಡೆ ವಿಧಾನ ಪರಿಷತ್​​ ಚುನಾವಣಾ ಕಣ ರಾಜ್ಯದಲ್ಲಿ ರಂಗೇರಿದ್ದು, ರೆಸಾರ್ಟ್​​ ಪಾಲಿಟಿಕ್ಸ್​​ ಶುರುವಾಗಿದೆ. ಇಂದು ‘ಕೈ’ ಶಾಸಕರಿಂದ ರೆಸಾರ್ಟ್​ ವಾಸ್ತವ್ಯ ಶುರುವಾಗಿದ್ದರೆ​, ನಾಳೆ JDSನವರ ಸರದಿ ನಿಗದಿಯಾಗಿದೆ. ಐದಾರು ಜೆಡಿಎಸ್​​ ಶಾಸಕರನ್ನು ಸೆಳೆಯಲು ಕೈ ಪಾಳಯದಲ್ಲಿ ಭಾರಿ ಕಸರತ್ತು ನಡೆಯುತ್ತಿದ್ದರೆ, ಕಾಂಗ್ರೆಸ್ ತಂತ್ರಕ್ಕೆ ಕೌಂಟರ್ ಕೊಡಲು JDS ನಾಯಕರ ಪ್ರತಿತಂತ್ರ ರೂಪಿಸಿರೋದು ಕುತೂಹಲ ಹೆಚ್ಚಿಸಿದೆ. ರಾಜ್ಯ, ದೇಶ, ಸಿನಿಮಾ, ಕ್ರೀಡೆ ಸೇರಿ ಇಂದಿನ ಪ್ರಮುಖ ಸುದ್ದಿಗಳ ಹೈಲೆಟ್ಸ್​​ ಇಲ್ಲಿದೆ.

Source link

ಕಾಕ್ರೋಚ್ ಬೆಂಬಲಿಸಿದ ಪ್ರಕಾಶ್ ರಾಜ್​​ಗೆ ಪವನ್ ಕಲ್ಯಾಣ್ ಕೌಂಟರ್ – Kannada News | Pawan Kalyan Slams ‘Cockroach Janata Party,’ Calls Supporters Divisive and Narrow Minded

ಇತ್ತೀಚೆಗೆ ಆರಂಭ ಆಗಿರೋ ‘ಕಾಕ್ರೋಚ್ ಜನತಾ ಪಾರ್ಟಿ’ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕರಿಂದಲೂ ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕೆಲವರು ಇದನ್ನು ಸಂಚು ಎಂದು ಕರೆದಿದ್ದಾರೆ. ಈಗ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಈ ಚಳವಳಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಸಂಘಟನೆ ಮತ್ತು ಇದನ್ನು ಬೆಂಬಲಿಸುವವರು ದೇಶವನ್ನು ಒಡೆಯುವ ಮತ್ತು ಭಾರತದ ಸಮಗ್ರತೆಯನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ಇತ್ತೀಚೆಗೆ ಪ್ರಕಾಶ್ ರಾಜ್ ಅವರು  (Prakash Raj) ‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು ಬೆಂಬಲಿಸಿದ್ದರು. ಈ ಬೆನ್ನಲ್ಲೇ ಪವನ್ ಕಲ್ಯಾಣ್ ಈ ಹೇಳಿಕೆ ನೀಡಿರುವುದು ವಿಶೇಷ.

ದೆಹಲಿಯಲ್ಲಿ ನಡೆದ ಜನಸೇನಾ ಪಕ್ಷದ (JSP) ಸಭೆಯಲ್ಲಿ ಮಾತನಾಡಿದ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ‘ಇತ್ತೀಚೆಗೆ ನೀವು ಈ ಜಿರಳೆಗಳ (ಕಾಕ್ರೋಚ್) ಬಗ್ಗೆ ಕೇಳಿರಬಹುದು. ಒಂದು ಸಣ್ಣ ಇರುವೆ ಕೂಡ ದೊಡ್ಡ ಹಾವನ್ನು ಕೊಲ್ಲಬಲ್ಲದು’ ಎಂದಿದ್ದಾರೆ.

ಬೆಂಬಲಿಗರನ್ನು ‘ಸಂಕುಚಿತ ಮನಸ್ಸಿನವರು’ ಎಂದಿದ್ದೇಕೆ?

‘ದೇಶದ ರಾಜಕಾರಣದ ಆಳ ಗೊತ್ತಿಲ್ಲದ ಕೆಲವು ಸಂಕುಚಿತ ಮನಸ್ಸಿನ ಜನರು, ದೇಶವನ್ನು ಒಡೆಯುವ ಆಲೋಚನೆಗಳ ಮೂಲಕ ಭಾರತದ ಸಮಗ್ರತೆಯನ್ನು ಹಾಳು ಮಾಡಲು ನೋಡುತ್ತಿದ್ದಾರೆ. ನಾವು ಇಂತಹ ಆಲೋಚನೆಗಳಿಗೆ ಬಲಿಯಾಗಬಾರದು. ಸಣ್ಣ ಬುದ್ಧಿಯ ಕೋಟ್ಯಂತರ ಜನರು ಒಂದಾದರೆ ಅದರ ಪ್ರಭಾವ ದೊಡ್ಡದಾಗಿರುತ್ತದೆ, ಅದು ಒಳ್ಳೆಯದಕ್ಕಾದರೂ ಆಗಬಹುದು ಅಥವಾ ಕೆಟ್ಟದ್ದಕ್ಕಾದರೂ ಆಗಬಹುದು. ಹಾಗಾಗಿ ನಾವು ಇದರ ವಿರುದ್ಧ ಹೋರಾಡಬೇಕೇ ಹೊರತು, ಇದರಲ್ಲಿ ಭಾಗಿಯಾಗಬಾರದು’ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಇದನ್ನೂ ಓದಿ: ‘ಗಾಳಿ ಸುದ್ದಿ ನಂಬಬೇಡಿ’; ಧರ್ಮಸ್ಥಳ ಪ್ರಕರಣದ ಆರೋಪಕ್ಕೆ ಪ್ರಕಾಶ್ ರಾಜ್ ಪ್ರತಿಕ್ರಿಯೆ

ಇದಕ್ಕೂ ಮುನ್ನ ಸುದ್ದಿಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿದ್ದ ಅವರು, ‘ಅವರಿಗೆ ಯಾಕೆ ಇಷ್ಟೊಂದು ಕೋಪ ಇದೆಯೋ ಗೊತ್ತಿಲ್ಲ. ಜಿರಳೆಗಳು ಯಾವಾಗಲೂ ಚರಂಡಿಯಲ್ಲೇ ಇರುತ್ತವೆ. ಅಂದರೆ ಬಹುಶಃ ಅವರ ನೋವು ಏನೆಂದು ನನಗೆ ಅರ್ಥವಾಗುತ್ತದೆ’ಎಂದು ಲೇವಡಿ ಮಾಡಿದ್ದರು.

ಪ್ರಕಾಶ್ ರಾಜ್ ಹೇಳಿದ್ದೇನು?

ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪ್ರಕಾಶ್ ರಾಜ್, ‘ಪ್ರತಿಭಟನೆ ಮಾಡುವವರನ್ನು ನೀವು ಪಾಕಿಸ್ತಾನಿಗಳು ಎಂದರೂ ನಮಗೆ ಭಯವಿಲ್ಲ, ಭಯೋತ್ಪಾದಕರು ಎಂದರೂ ಹೆದರುವುದಿಲ್ಲ, ಜಿರಳೆಗಳು (ಕಾಕ್ರೋಚ್) ಎಂದು ಕರೆದರೂ ನಾವು ಭಯ ವಿಚಲಿರತಾಗುವುದಿಲ್ಲ. ಜನರಿಂದ ಆಯ್ಕೆಯಾದ ನಾಯಕರು ತಮ್ಮ ಕೆಲಸವನ್ನು ಸರಿಯಾಗಿ ಮಾಡಬೇಕು. ನೀವು ರಾಜಕೀಯ ಮಾಡುವುದನ್ನು ಬಿಟ್ಟು ನಮಗೆ ಕೆಲಸ ಕೊಡಿ. ಈ ದೇಶದ ಯುವಕರು ತಮ್ಮ ಹಕ್ಕಿಗಾಗಿ ಹೋರಾಡಲು ನಿರ್ಧರಿಸಿದ್ದಾರೆ’ ಎಂದು ಪ್ರಕಾಶ್ ರಾಜ್ ಆಕ್ರೋಶ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಲಿಷ್ಠ ಸ್ಪೇನ್ ವಿರುದ್ಧ ಸೆಟೆದು ನಿಂತ ಕೇಪ್ ವರ್ಡೆ..! – Kannada News | Cape Verde Stuns Spain In Fifa World Cup 2026

Fifa World Cup 2026: ಮೈದಾನಕ್ಕಿಳಿದರೆ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಜಗತ್ತಿನ ಅತ್ಯಂತ ಬಲಿಷ್ಠ ಪಡೆ. ಮುಂಚೂಣಿಯಲ್ಲಿ ಲಮಿನ್ ಯಮಾಲ್, ಮೈಕೆಲ್ ಒಯರ್ಝಾಬಲ್, ಫೆರಾನ್ ಟೊರೆಸ್ ಮತ್ತು ಡ್ಯಾನಿ ಓಲ್ಮೊ ಅವರಂತಹ ಆಕ್ರಮಣಕಾರಿ ಆಟಗಾರರಿದ್ದರೆ, ಮಿಡ್‌ಫೀಲ್ಡ್​ನಲ್ಲಿ ರೋಡ್ರಿ, ಪೆಡ್ರಿ, ಗಾವಿ ಹಾಗೂ ಫ್ಯಾಬಿಯನ್ ರೂಯಿಝ್ ಅವರಂತಹ ಚಾಣಾಕ್ಷ ತಂತ್ರಜ್ಞರಿದ್ದಾರೆ. ಇಂತಹದೊಂದು ವಿಶ್ವದರ್ಜೆಯ ಬಳಗ ಕಣಕ್ಕಿಳಿದರೆ ಗೆಲುವು ಯಾರದ್ದು ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯೇ ಇಲ್ಲ! ಆದರೆ ಅಟ್ಲಾಂಟಾ ಕ್ರೀಡಾಂಗಣದಲ್ಲಿ ನಡೆದಿದ್ದೇ ಬೇರೆ.

ಹೌದು, ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ರೋಮಾಂಚನಕಾರಿ ಮತ್ತು ಅನಿರೀಕ್ಷಿತ ಪಂದ್ಯವೊಂದಕ್ಕೆ ಜೂನ್ 15 ಸಾಕ್ಷಿಯಾಗಿದೆ. ಹಾಲಿ ಯುರೋಪಿಯನ್ ಚಾಂಪಿಯನ್ಸ್ ಬಲಿಷ್ಠ ಸ್ಪೇನ್ ವಿರುದ್ಧ ಮೊದಲ ಬಾರಿಗೆ ವಿಶ್ವಕಪ್‌ ಆಡುತ್ತಿರುವ ಪುಟ್ಟ ರಾಷ್ಟ್ರ ಕೇಪ್ ವರ್ಡೆ ಐತಿಹಾಸಿಕ ಡ್ರಾ ಸಾಧಿಸಿ ಇಡೀ ವಿಶ್ವವೇ ತಮ್ಮತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ.

ಪಂದ್ಯದ ಆರಂಭದಿಂದಲೇ ಸ್ಪೇನ್ ತಂಡ ಪೂರ್ಣ ಹಿಡಿತ ಸಾಧಿಸಿತ್ತು. ಶೇ. 62 ರಷ್ಟು ಸಮಯ ಚೆಂಡನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಸ್ಪೇನ್, ಕೇಪ್ ವರ್ಡೆ ಗೋಲು ಪೆಟ್ಟಿಗೆಯ ಮೇಲೆ ಸರಣಿ ದಾಳಿ ನಡೆಸಿತು. ಆದರೆ ಕೇಪ್ ವರ್ಡೆ ತಂಡದ 40 ವರ್ಷದ ಅನುಭವಿ ಗೋಲ್‌ಕೀಪರ್ ‘ವೊಝಿನ್ಹಾ’ ಸ್ಪೇನ್ ಪಾಲಿಗೆ ಬಂಡೆಯಂತೆ ನಿಂತರು. ಪಂದ್ಯದುದ್ದಕ್ಕೂ ಸ್ಪೇನ್ ಹೊಡೆದ 8 ಅತ್ಯಂತ ಅಪಾಯಕಾರಿ ಶಾಟ್‌ಗಳನ್ನು ಅದ್ಭುತವಾಗಿ ತಡೆಯುವ ಮೂಲಕ ಅವರು ಪಂದ್ಯದ ಹೀರೊ ಆಗಿ ಹೊರಹೊಮ್ಮಿದರು.

ಕೈಕೊಟ್ಟ ಅದೃಷ್ಟ, ಮಿಸ್ ಆದ ಅವಕಾಶಗಳು:

ಮೊದಲಾರ್ಧದಲ್ಲಿ ಸ್ಪೇನ್ ತಂಡದ ಫೆರಾನ್ ಟೊರೆಸ್ ಹೊಡೆದ ಪ್ರಬಲ ಶಾಟ್ ಗೋಲ್ ಪೋಸ್ಟ್‌ಗೆ ಬಡಿದು ವಾಪಸ್ಸಾಯಿತು. ಅದರ ಬೆನ್ನಲ್ಲೇ ಮೈಕೆಲ್ ಒಯರ್ಝಾಬಲ್ ಹೆಡರ್ ಮೂಲಕ ಗೋಲು ಗಳಿಸಲು ಯತ್ನಿಸಿದರಾದರೂ ವೊಝಿನ್ಹಾ ಅದನ್ನು ತಡೆದರು. ಇನ್ನು ಮೊದಲಾರ್ಧ ಮುಗಿಯುವ ಕೆಲವೇ ಕ್ಷಣಗಳ ಮುನ್ನ ಐಮೆರಿಕ್ ಲ್ಯಾಪೋರ್ಟೆ ಅವರ ತಲೆಯ ಮೂಲಕ ಬಂದ ಚೆಂಡನ್ನು ವೊಝಿನ್ಹಾ ಅದ್ಭುತವಾಗಿ ಡೈವ್ ಮಾಡುವ ಮೂಲಕ ರಕ್ಷಿಸಿದರು.

ವರ್ಕ್ ಆಗದ ಯಮಾಲ್ ಮ್ಯಾಜಿಕ್:

ಪಂದ್ಯದ 71ನೇ ನಿಮಿಷದಲ್ಲಿ ಸ್ಪೇನ್ ತನ್ನ ಸ್ಟಾರ್ ಆಟಗಾರ ಲಮಿನ್ ಯಮಾಲ್ ಅವರನ್ನು ಮೈದಾನಕ್ಕಿಳಿಸಿತು. ಗಾಯದಿಂದ ಚೇತರಿಸಿಕೊಂಡು ಬಂದ ಯಮಾಲ್ ಕೆಲವೇ ನಿಮಿಷಗಳಲ್ಲಿ 5 ಡ್ರಿಬಲ್ಸ್ ಮಾಡಿ ಕೇಪ್ ವರ್ಡೆ ರಕ್ಷಣಾ ಕೋಟೆಯನ್ನು ಭೇದಿಸಲು ಯತ್ನಿಸಿದರು. ಆದರೆ ಕೇಪ್ ವರ್ಡೆ ಡಿಫೆಂಡರ್‌ಗಳು ಯಮಾಲ್ ಅವರಿಗೆ ಯಾವುದೇ ಅವಕಾಶ ನೀಡದೆ ಕಮಾಲ್ ಮಾಡಿದರು.

ಕೊನೆಯ ಕ್ಷಣದ ರೋಮಾಂಚನ:

ಈ ಪಂದ್ಯ ಮುಕ್ತಾಯಗೊಳ್ಳಲು ಕೆಲವೇ ನಿಮಿಷಗಳಿರುವಾಗ ಒಯರ್ಝಾಬಲ್ ಹೊಡೆದ ಚೆಂಡು ಕೇಪ್ ವರ್ಡೆಯ ಪಿಕೊ ಲೋಪೆಸ್ ತಮ್ಮ ದೇಹವನ್ನು ಅಡ್ಡವಿಟ್ಟು ತಡೆದರು. ಇಂಜುರಿ ಟೈಮ್‌ನಲ್ಲಿ ಒಯರ್ಝಾಬಲ್ ಅವರ ಕೊನೆಯ ಹೆಡರ್ ಶಾಟ್ ಗೋಲ್ ಪೋಸ್ಟ್‌ನ ಪಕ್ಕದಿಂದ ಹೊರಹೋಗುತ್ತಿದ್ದಂತೆ, ಕೇಪ್ ವರ್ಡೆ ಆಟಗಾರರು ಮತ್ತು ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದರು.

ಪಂದ್ಯದ ಪ್ರಮುಖ ಮುಖ್ಯಾಂಶಗಳು:

  • ಸ್ಪೇನ್ ಸಂಪೂರ್ಣ ನಿಯಂತ್ರಣ: ಪಂದ್ಯದುದ್ದಕ್ಕೂ ಸ್ಪೇನ್ ತಂಡ ಶೇ. 62 ರಷ್ಟು ಸಮಯ ಚೆಂಡನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು ನೂರಾರು ನಿಖರ ಪಾಸ್‌ಗಳ ಮೂಲಕ ಕೇಪ್ ವರ್ಡೆ ತಂಡದ ಮೇಲೆ ನಿರಂತರ ಒತ್ತಡ ಹೇರಿತು. ಕೇಪ್ ವರ್ಡೆ ಕೇವಲ ಶೇ. 38 ರಷ್ಟು ನಿಯಂತ್ರಣ ಹೊಂದಿದ್ದರೂ ಅತ್ಯಂತ ಶಿಸ್ತಿನ ರಕ್ಷಣಾತ್ಮಕ ಆಟ ಆಡಿತು.
  • ಗೋಲು ಶಾಟ್‌ಗಳ ಸುರಿಮಳೆ: ಸ್ಪೇನ್ ಒಟ್ಟು 23 ಬಾರಿ ಗೋಲು ಗಳಿಸಲು ಯತ್ನಿಸಿತು. ಇದರಲ್ಲಿ 8 ಶಾಟ್‌ಗಳು ನೇರವಾಗಿ ಗೋಲು ಪೆಟ್ಟಿಗೆಯತ್ತ ನುಗ್ಗಿದ್ದವು. ಆದರೆ ಕೇಪ್ ವರ್ಡೆ ಕೇವಲ 6 ಯತ್ನಗಳನ್ನು ನಡೆಸಿ, ಅದರಲ್ಲಿ 1 ಶಾಟ್ ಮಾತ್ರ ಆನ್ ಟಾರ್ಗೆಟ್ ಇಟ್ಟಿತ್ತು.
  • ವೊಝಿನ್ಹಾ ಅದ್ಭುತ ಸೇವ್ಸ್: ಕೇಪ್ ವರ್ಡೆಯ 40 ವರ್ಷದ ಗೋಲ್‌ಕೀಪರ್ ವೊಝಿನ್ಹಾ, ಸ್ಪೇನ್ ಗೋಲಾಗಬಹುದಾಗಿದ್ದ ಎಲ್ಲಾ 8 ಆನ್ ಟಾರ್ಗೆಟ್ ಶಾಟ್‌ಗಳನ್ನು ಅದ್ಭುತವಾಗಿ ತಡೆದು ಪಂದ್ಯ ಡ್ರಾ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.
  • ಕಾರ್ನರ್ ಕಿಕ್ಸ್ ಅವಕಾಶಗಳು: ಸ್ಪೇನ್ ತಂಡಕ್ಕೆ ಪಂದ್ಯದಲ್ಲಿ ಬರೋಬ್ಬರಿ 11 ಕಾರ್ನರ್ ಕಿಕ್ ಅವಕಾಶಗಳು ಸಿಕ್ಕವು. ಆದರೆ ಕೇಪ್ ವರ್ಡೆಯ ಬಲಿಷ್ಠ ಡಿಫೆಂಡರ್‌ಗಳು ಈ ಯಾವುದೇ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಲು ಬಿಡಲಿಲ್ಲ. ಕೇಪ್ ವರ್ಡೆಗೆ ಸಿಕ್ಕಿದ್ದು ಕೇವಲ 1 ಕಾರ್ನರ್ ಕಿಕ್ ಮಾತ್ರ.
  • ಶಿಸ್ತಿನ ಆಟ: ಪಂದ್ಯದಲ್ಲಿ ಸ್ಪೇನ್ ತಂಡ 10 ಫೌಲ್‌ಗಳನ್ನು ಮಾಡಿದರೆ, ಕೇಪ್ ವರ್ಡೆ ಕೇವಲ 1 ಫೌಲ್ ಮಾಡುವ ಮೂಲಕ ಅತ್ಯಂತ ಕ್ಲೀನ್ ಮತ್ತು ಶಿಸ್ತಿನ ಡಿಫೆನ್ಸ್ ಪ್ರದರ್ಶಿಸಿತು.

ಈ ಮೂಲಕ ಕೇಪ್ ವರ್ಡೆ ತಂಡವು ಬಲಿಷ್ಠ ಸ್ಪೇನ್ ವಿರುದ್ಧ ಒಂದೇ ಒಂದು ಗೋಲು ಹೊಡೆಸಿಕೊಳ್ಳದೇ 0-0 ಅಂತರದಿಂದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಡ್ರಾನೊಂದಿಗೆ ಕೇಪ್ ವರ್ಡೆ ತಂಡವು ಒಂದು ಅಂಕ ಪಡೆದುಕೊಂಡಿದೆ.

ಇದನ್ನೂ ಓದಿ: ಮೈದಾನದಲ್ಲಿ ಕಿರಿಕ್… ಆಟಗಾರನ ಮೇಲೆ ಕೈ ಮಾಡಿದ ವೈಭವ್ ಸೂರ್ಯವಂಶಿ..!

ವಿಶ್ವದ ನಂ.1 ತಂಡಗಳಲ್ಲೊಂದಾದ ಸ್ಪೇನ್ ವಿರುದ್ಧ ಪಡೆದ ಈ 1 ಪಾಯಿಂಟ್, ಕೇಪ್ ವರ್ಡೆ ಫುಟ್‌ಬಾಲ್ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಾಧನೆಯಾಗಿದೆ.

Published On – 8:37 am, Tue, 16 June 26

Source link

ರನ್​ ವೇಯಿಂದ ಹಾರಿದ ಕೆಲವೇ ಕ್ಷಣದಲ್ಲಿ ಯುಎಸ್ ಬಾಂಬರ್ ವಿಮಾನ ಪತನ: ಎಂಟು ಮಂದಿ ಸಾವು – Kannada News | Deadly B 52 Crash at California Air Base Claims Eight Lives, Spotlight Turns to Iconic Bomber

ಕ್ಯಾಲಿಫೋರ್ನಿಯಾ, ಜೂನ್ 16: ಅಮೆರಿಕದ ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿರುವ ಎಡ್ವರ್ಡ್ಸ್ ವಾಯುಪಡೆ ನೆಲೆಯಲ್ಲಿ ಭೀಕರ ವಿಮಾನ ಅಪಘಾತ(Plane Crash)ವೊಂದು ಸಂಭವಿಸಿದೆ. ಯುಎಸ್ ವಾಯುಪಡೆಗೆ ಸೇರಿದ ಪ್ರಸಿದ್ಧ ‘ಬಿ-52 ಸ್ಟ್ರಾಟೊಫೋರ್ಟ್ರೆಸ್’ (B-52 Stratofortress) ಬಾಂಬರ್ ವಿಮಾನವು ರನ್‌ವೇಯಿಂದ ಹಾರಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಂಟೂ ಜನ ಸಾವನ್ನಪ್ಪಿದ್ದಾರೆ.

ವಿಮಾನವು ಪತನಗೊಂಡ ತಕ್ಷಣ ಭಾರಿ ಪ್ರಮಾಣದ ಬೆಂಕಿ ಹೊತ್ತಿಕೊಂಡಿದ್ದರಿಂದ ವಿಮಾನ ಸಂಪೂರ್ಣವಾಗಿ ನಾಶವಾಗಿದೆ. ವಿಮಾನದಲ್ಲಿದ್ದ ಮಿಲಿಟರಿ ಸಿಬ್ಬಂದಿ ಮತ್ತು ಸರ್ಕಾರಿ ಗುತ್ತಿಗೆದಾರರು ಸೇರಿದಂತೆ ಎಂಟು ಮಂದಿಯೂ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಅಪಘಾತಕ್ಕೀಡಾದ ವಿಮಾನವು ಹಳೆಯ ರಾಡಾರ್ ವ್ಯವಸ್ಥೆಯನ್ನು ಬದಲಾಯಿಸಿ, ಅತ್ಯಾಧುನಿಕ ‘AESA’ ರಾಡಾರ್ ವ್ಯವಸ್ಥೆಯನ್ನು ಅಳವಡಿಸುವ ಮಿಲಿಟರಿ ಆಧುನೀಕರಣ ಪರೀಕ್ಷಾರ್ಥ ಹಾರಾಟದಲ್ಲಿ ಭಾಗಿಯಾಗಿತ್ತು. ಅಪಘಾತದ ನಿಖರ ಕಾರಣ ತಿಳಿಯಲು ಸುಮಾರು ಆರು ತಿಂಗಳು ಬೇಕಾಗಬಹುದು ಎಂದು ವಾಯುಸೇನೆಯ ಉಪ ಕಮಾಂಡರ್ ತಿಳಿಸಿದ್ದಾರೆ.

ಮತ್ತಷ್ಟು ಓದಿ: Video: ರಷ್ಯಾ ಬಾಂಬರ್ ವಿಮಾನ ಪತನ: ನಾಲ್ವರು ಸಿಬ್ಬಂದಿ ಪವಾಡಸದೃಶ ರೀತಿಯಲ್ಲಿ ಪಾರು

ಬೋಯಿಂಗ್ ಸಂಸ್ಥೆ ನಿರ್ಮಿಸಿರುವ ಈ ದೀರ್ಘ-ಶ್ರೇಣಿಯ ಯುದ್ಧ ವಿಮಾನವನ್ನು 1955 ರಲ್ಲಿ ಅಮೆರಿಕ ಸೇನೆಗೆ ಸೇರಿಸಲಾಯಿತು. ಇದು ಸಾಂಪ್ರದಾಯಿಕ ಮತ್ತು ಪರಮಾಣು ಶಸ್ತ್ರಾಸ್ತ್ರಗಳೆರಡನ್ನೂ ಹೊತ್ತೊಯ್ಯಬಲ್ಲದು.

ವಿಡಿಯೋ

ಎಂಟು ಜೆಟ್ ಎಂಜಿನ್‌ಗಳನ್ನು ಹೊಂದಿರುವ ಈ ಬೃಹತ್ ವಿಮಾನವು ಒಮ್ಮೆಗೆ 32 ಟನ್‌ಗಳಷ್ಟು ಶಸ್ತ್ರಾಸ್ತ್ರಗಳನ್ನು ಹೊತ್ತು, ಇಂಧನ ತುಂಬಿಸದೆಯೇ 14,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ಹಾರಬಲ್ಲದು. ಇದು ಗಂಟೆಗೆ ಸುಮಾರು 1,000 ಕಿಮೀ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:32 am, Tue, 16 June 26

Source link

ಕಿರುತೆರೆ ನಟಿ ಸಂಚಿತಾ ಸಾವಿಗೆ ಕಾರಣವಾಗಿದ್ದು ಆ ಹುಡುಗ? – Kannada News | Sanchita Ugale Death: Ujjwal Sharma Reveals Actress’s Mental Battle, Live In Woes

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಾಲೆ ಅವರು (Sanchita Ugale) ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಕೇವಲ 22ನೇ ವಯಸ್ಸಿಗೆ ನಟಿ ಇಂತಹ ಕಠಿಣ ಹೆಜ್ಜೆ ಇಟ್ಟು ಕೊನೆಯುಸಿರೆಳೆದಿರುವುದು ಇಡೀ ಚಿತ್ರರಂಗ ಹಾಗೂ ಅವರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಭಾನುವಾರ ಸಂಜೆ ಈ ದುರಂತ ಸಂಭವಿಸಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಸದ್ಯ ನಟಿಯ ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಂಚಿತಾ ಅವರ ಹಠಾತ್ ನಿಧನದ ಬೆನ್ನಲ್ಲೇ ಉದ್ಯಮದಲ್ಲಿ ಹಲವು ವದಂತಿಗಳು ಕೇಳಿಬರುತ್ತಿದ್ದು, ಅವರು ತಮ್ಮ ಸಹನಟ ಉಜ್ವಲ್ ಶರ್ಮಾ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು ಎಂಬ ಚರ್ಚೆಗಳು ನಡಯುತ್ತಿದ್ದವು. ಆದರೆ, ಈ ಹಿಂದೆ ಸ್ವತಃ ಸಂಚಿತಾ ಅವರೇ ಇದೆಲ್ಲವೂ ಕೇವಲ ವದಂತಿಗಳಷ್ಟೇ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಸಂಚಿತಾ ಸಾವಿನ ನಂತರ ಮಾಧ್ಯಮವೊಂದರ ಜೊತೆ ಮಾತನಾಡಿರುವ ನಟ ಉಜ್ವಲ್ ಶರ್ಮಾ, ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

‘ನಮ್ಮ ನಡುವೆ ಯಾವುದೇ ಪ್ರೇಮ ಸಂಬಂಧ ಇರಲಿಲ್ಲ, ಅದೆಲ್ಲವೂ ಕೇವಲ ವದಂತಿಗಳಾಗಿದ್ದವು’ ಎಂದು ಉಜ್ವಲ್ ಸ್ಪಷ್ಟನೆ ನೀಡಿದ್ದಾರೆ. ‘ಸಂಚಿತಾ ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದು, ಆತನ ಜೊತೆಯೇ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಆತನ ನಡವಳಿಕೆಯಿಂದಾಗಿ ಸಂಚಿತಾ ಮಾನಸಿಕವಾಗಿ ತೀವ್ರ ಕಷ್ಟದ ಸಮಯವನ್ನು ಎದುರಿಸುತ್ತಿದ್ದರು. ನಾನು ನನ್ನ ಊರಿಗೆ ತೆರಳಿದ್ದರಿಂದ ಕಳೆದ ಕೆಲವು ದಿನಗಳಿಂದ ಅವರೊಂದಿಗೆ ಮಾತನಾಡಲು ಸಾಧ್ಯವಾಗಿರಲಿಲ್ಲ’ ಎಂದು ಉಜ್ವಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ಸಂಚಿತಾ ಉಗಾಲೆ; ಸಾವಿಗೂ ಮುನ್ನ ರೀಲ್ಸ್ ಮಾಡಿದ್ದ ಕಿರುತೆರೆ ನಟಿ

ಕೊನೆಯ ದಿನಗಳಲ್ಲಿ ಸಂಚಿತಾ ಅನುಭವಿಸುತ್ತಿದ್ದ ಮಾನಸಿಕ ಒತ್ತಡವನ್ನು ಕಂಡು ಅನೇಕರು ಅವರಿಗೆ ನೆರವಾಗಿದ್ದರು. ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಂಬಂಧಪಟ್ಟ ಪ್ರೊಡಕ್ಷನ್ ಹೌಸ್ ಕೂಡ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿತ್ತು. ಏನೇ ನಡೆದಿದ್ದರೂ ಇದು ಅತ್ಯಂತ ದುಃಖಕರ ಮತ್ತು ಆಘಾತಕಾರಿ ಸಂಗತಿಯಾಗಿದ್ದು, ಅವರ ಸಾವಿನ ಸುದ್ದಿ ಕೇಳಿ ತಮಗೆ ತೀವ್ರ ಆಘಾತವಾಗಿದೆ ಎಂದು ಉಜ್ವಲ್ ಶರ್ಮಾ ಹೇಳಿದ್ದಾರೆ. ಸದ್ಯ ಪೊಲೀಸರು ಸಂಚಿತಾ ಅವರ ವೈಯಕ್ತಿಕ ಜೀವನ ಹಾಗೂ ಅವರ ಮಾಜಿ ಗೆಳೆಯನ ಹಿನ್ನೆಲೆಯನ್ನು ಆಧರಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:07 am, Tue, 16 June 26

Source link

ಸಿಗ್ನಲಿಂಗ್ ಸುಧಾರಣೆ, ಪ್ಲಾಟ್‌ಫಾರ್ಮ್ ವಿಸ್ತರಣೆ ಕಾಮಗಾರಿ ಹಿನ್ನೆಲೆ KSR ಬೆಂಗಳೂರು ನಿಲ್ದಾಣದಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯ – Kannada News | KSR Bengaluru Faces Major Train Disruptions Amid Signalling and Platform Upgrade Works

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣImage Credit source: deccanherald.com

ಬೆಂಗಳೂರು, ಜೂನ್​​ 16: ಯಾರ್ಡ್ ಮರು ವಿನ್ಯಾಸ (Yard Remodelling) ಹಾಗೂ ಸುರಕ್ಷತಾ ಸುಧಾರಣಾ ಕಾಮಗಾರಿಗಳು ಕೈಗೊಳ್ಳಲಾಗುತ್ತಿರುವ ಹಿನ್ನೆಲೆ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ) ಮುಂದಿನ ಕೆಲವು ದಿನ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ಕಾಮಗಾರಿಗಳ ಹಿನ್ನೆಲೆ 58 ರೈಲುಗಳನ್ನು ಸಂಪೂರ್ಣ ರದ್ದುಗೊಳಿಸಲಾಗಿದ್ದು, 116 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ನಾಲ್ಕು ರೈಲುಗಳ ಸಂಚಾರವನ್ನು ಭಾಗಶಃ ವಿಸ್ತರಿಸಲಾಗಿದ್ದು, 26 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಎರಡು ರೈಲುಗಳ ವೇಳಾಪಟ್ಟಿಯನ್ನು ಮರುನಿಗದಿಪಡಿಸಲಾಗಿದ್ದು, ಐದು ರೈಲುಗಳ ಸಂಚಾರ 15ರಿಂದ 60 ನಿಮಿಷಗಳವರೆಗೆ ನಿಯಂತ್ರಣಗೊಳ್ಳಲಿದೆ. ಕೆಲವು ರೈಲುಗಳ ರದ್ದತಿ ಜೂನ್ 16ರಿಂದಲೇ (ಇಂದಿನಿಂದ) ಆರಂಭವಾಗಲಿದ್ದು, ಸುಮಾರು ಎರಡು ತಿಂಗಳ ಕಾಲ ಇದು ಮುಂದುವರಿಯಲಿದೆ.

ವಂದೇ ಭಾರತ್ ಸಂಚಾರವೂ ಬದಲಾವಣೆ

ಒಟ್ಟು 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ ಯಾವುದೇ ವಂದೇ ಭಾರತ್ ರೈಲನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿಲ್ಲ.

ಇದನ್ನೂ ಓದಿ: ಬೆಂಗಳೂರು ರೈಲು ಪ್ರಯಾಣಿಕರಿಗೆ ಕೇಂದ್ರ ಸಚಿವ ಸೋಮಣ್ಣ ಗುಡ್ ನ್ಯೂಸ್; ಕೊನೆಗೂ ಈಡೇರಿತು ಬಹುಕಾಲದ ಬೇಡಿಕೆ

ಆಗಸ್ಟ್ 1ರಿಂದ 3ರವರೆಗೆ

  • ಬೆಳಗಾವಿ–ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ (26751) ಯಶವಂತಪುರದಲ್ಲಿ ಅಂತ್ಯಗೊಳ್ಳಲಿದೆ.
  • ಕೆಎಸ್‌ಆರ್ ಬೆಂಗಳೂರು–ಬೆಳಗಾವಿ ವಂದೇ ಭಾರತ್ (26752) ಯಶವಂತಪುರದಿಂದ ಆರಂಭವಾಗಲಿದೆ.
  • ಕಲಬುರಗಿ–ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ (22232) ಯಲಹಂಕದಲ್ಲಿ ಅಂತ್ಯಗೊಳ್ಳಲಿದೆ.
  • ಎಸ್‌ಎಂವಿಟಿ ಬೆಂಗಳೂರು–ಕಲಬುರಗಿ ವಂದೇ ಭಾರತ್ (22231) ಯಲಹಂಕದಿಂದ ಆರಂಭವಾಗಲಿದೆ.
  • ಕೆಎಸ್‌ಆರ್ ಬೆಂಗಳೂರು–ಧಾರವಾಡ ವಂದೇ ಭಾರತ್ (20661) ಯಶವಂತಪುರದಿಂದ ಸಂಚರಿಸಲಿದೆ.

ಜುಲೈ 31ರಿಂದ ಆಗಸ್ಟ್ 3ರವರೆಗೆ

  • ಧಾರವಾಡ–ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ (20662) ಯಶವಂತಪುರದಲ್ಲಿ ಅಂತ್ಯಗೊಳ್ಳಲಿದೆ.
  • ಎರ್ನಾಕುಲಂ–ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ (26652) ಕೆ.ಆರ್.ಪುರಂನಲ್ಲಿ ಅಂತ್ಯಗೊಳ್ಳಲಿದೆ.

ಆಗಸ್ಟ್ 1ರಿಂದ 4ರವರೆಗೆ

ಕೆಎಸ್‌ಆರ್ ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ (26651) ಬೆಂಗಳೂರು ಕ್ಯಾಂಟೋನ್ಮೆಂಟ್‌ನಿಂದ ಆರಂಭವಾಗಲಿದೆ.

ರಾಜಧಾನಿ ಮತ್ತು ಕರ್ನಾಟಕ ಎಕ್ಸ್‌ಪ್ರೆಸ್ ರೈಲುಗಳು

ಆಗಸ್ಟ್ 1ರಿಂದ 3ರವರೆಗೆ

  • ಕೆಎಸ್‌ಆರ್ ಬೆಂಗಳೂರು–ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ (22691) ಯಶವಂತಪುರದಿಂದ ಆರಂಭವಾಗಲಿದೆ.
  • ಇದರ ಜೋಡಿ ರೈಲು (22692) ಆಗಸ್ಟ್ 2ರಂದು ಮಾರ್ಗ ಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.

ಜುಲೈ 29ರಿಂದ ಆಗಸ್ಟ್ 1ರವರೆಗೆ

  • ನವದೆಹಲಿ–ಕೆಎಸ್‌ಆರ್ ಬೆಂಗಳೂರು ಕರ್ನಾಟಕ ಎಕ್ಸ್‌ಪ್ರೆಸ್ (12628) ಬೈಯಪ್ಪನಹಳ್ಳಿಯಲ್ಲಿ ಅಂತ್ಯಗೊಳ್ಳಲಿದೆ.
  • ಕೆಎಸ್‌ಆರ್ ಬೆಂಗಳೂರು–ನವದೆಹಲಿ ಕರ್ನಾಟಕ ಎಕ್ಸ್‌ಪ್ರೆಸ್ (12627) ಆಗಸ್ಟ್ 1ರಿಂದ 3ರವರೆಗೆ ಬೈಯಪ್ಪನಹಳ್ಳಿಯಿಂದ ಆರಂಭವಾಗಲಿದೆ.

ಮೈಸೂರು-ತುಮಕೂರು ಪ್ರಯಾಣಿಕರಿಗೆ ಹೆಚ್ಚು ಅನಾನುಕೂಲ

ಮೈಸೂರು/ಅಶೋಕಪುರಂನಿಂದ ಆರಂಭವಾಗುವ ಅಥವಾ ಅಂತ್ಯಗೊಳ್ಳುವ 16 ರೈಲುಗಳನ್ನು ರದ್ದುಗೊಳಿಸಲಾಗಿದೆ. ಇದಲ್ಲದೆ, ಕೆಎಸ್‌ಆರ್ ಬೆಂಗಳೂರು ನಗರವನ್ನು ಸಂಪರ್ಕಿಸುವ 9 ಮೆಮು ರೈಲುಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಈ ರೈಲುಗಳು ತುಮಕೂರು ಸೇರಿದಂತೆ ನಗರದ ವಿವಿಧ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದವು. ಭಾಗಶಃ ರದ್ದುಗೊಂಡ ರೈಲುಗಳು ಬೆಂಗಳೂರಿನ ಇತರ ನಿಲ್ದಾಣಗಳಿಂದ ಆರಂಭವಾಗಲಿದ್ದು ಅಥವಾ ಅಲ್ಲಿ ಅಂತ್ಯಗೊಳ್ಳಲಿವೆ.

ಕಾಮಗಾರಿಗಳಿಂದ ಆಗುವ ಪ್ರಯೋಜನಗಳು

ದಕ್ಷಿಣ ಪಶ್ಚಿಮ ರೈಲ್ವೆ (SWR) ಪ್ರಕಾರ, ಈ ಯಾರ್ಡ್ ಮರು ವಿನ್ಯಾಸ ಕಾಮಗಾರಿಯಿಂದ ಹಲವು ಕಾರ್ಯಾಚರಣಾ ಸುಧಾರಣೆಗಳು ಸಾಧ್ಯವಾಗಲಿವೆ.

  • ಬೆಂಗಳೂರು ಕ್ಯಾಂಟೋನ್ಮೆಂಟ್ ದಿಕ್ಕಿನಲ್ಲಿ ಒಂದೇ ಸಮಯದಲ್ಲಿ ರೈಲು ಆಗಮನ ಹಾಗೂ ನಿರ್ಗಮನ ವ್ಯವಸ್ಥೆ.
  • 7ನೇ ಪ್ಲಾಟ್‌ಫಾರ್ಮ್ ಅನ್ನು 460 ಮೀಟರ್‌ನಿಂದ 600 ಮೀಟರ್‌ಗೆ ವಿಸ್ತರಿಸಿ 24 ಬೋಗಿಗಳ ಪೂರ್ಣ ಉದ್ದದ ರೈಲುಗಳನ್ನು ನಿರ್ವಹಿಸುವ ಸಾಮರ್ಥ್ಯ.
  • ಸರಕು ರೈಲುಗಳಿಗೆ ಪ್ರತ್ಯೇಕ ನಾನ್-ಪ್ಲಾಟ್‌ಫಾರ್ಮ್ ಮಾರ್ಗ ಸೌಲಭ್ಯ.
  • ಮೈಸೂರು ಹಾಗೂ ಕ್ಯಾಂಟೋನ್ಮೆಂಟ್ ಮಾರ್ಗಗಳಲ್ಲಿ ಉತ್ತಮ ಸಿಗ್ನಲಿಂಗ್ ವ್ಯವಸ್ಥೆ.
  • ಹಳೆಯ Solid State Interlocking (SSI) ವ್ಯವಸ್ಥೆಯನ್ನು ಅತ್ಯಾಧುನಿಕ Electronic Interlocking (EI) ವ್ಯವಸ್ಥೆಯಾಗಿ ಪರಿವರ್ತನೆ.

ಎರಡು ಹಂತಗಳಲ್ಲಿ ಕಾಮಗಾರಿ

ದಕ್ಷಿಣ ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಾಡಿ ಅವರ ಪ್ರಕಾರ, ಕಾಮಗಾರಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ರೈಲುಗಳ ಆಗಮನ ಮತ್ತು ನಿರ್ಗಮನ ವ್ಯವಸ್ಥೆಯನ್ನು ಸುಧಾರಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಯಶವಂತಪುರ ಗ್ರಿಡ್ ಭಾಗದಲ್ಲಿ ಇನ್ನೆರಡು ಹೊಸ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:07 am, Tue, 16 June 26

Source link

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು 13ನೇ ರೈಲು: ಶೀಘ್ರದಲ್ಲೇ 5 ನಿಮಿಷಕ್ಕೊದರಂತೆ ಮೆಟ್ರೋ ಸಂಚಾರ ಶುರು – Kannada News | Namma Metro Yellow Line Receives 13th Train in Bengaluru; Waiting Time to Drop to 5 Minutes by August

ನಮ್ಮ ಮೆಟ್ರೋ ಹಳದಿ ಮಾರ್ಗ ರೈಲಿನ ಸಂಗ್ರಹ ಚಿತ್ರImage Credit source: tv9

ಬೆಂಗಳೂರು, ಜೂನ್ 16: ಬೆಂಗಳೂರಿನ ಸಂಚಾರ ದಟ್ಟಣೆಗೆ ಪ್ರಮುಖ ಪರಿಹಾರ ಎಂದೇ ಬಿಂಬಿತವಾಗಿರುವ ನಮ್ಮ ಮೆಟ್ರೋದ ಎಲೆಕ್ಟ್ರಾನಿಕ್ ಸಿಟಿ ಮಾರ್ಗ ಅಥವಾ ಹಳದಿ ಮಾರ್ಗಕ್ಕೆ (Yellow Line) ಮತ್ತೊಂದು ಹೊಸ ರೈಲು ಸೇರ್ಪಡೆಯಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸೋಮವಾರ 13ನೇ ಹೊಸ ರೈಲನ್ನು ಬರಮಾಡಿಕೊಂಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಾಂಶಗಳು

  • ಹೆಬ್ಬಗೋಡಿ ಡಿಪೋಗೆ ಆಗಮಿಸಿದ 13ನೇ ರೈಲು
  • ರಾತ್ರಿ ವೇಳೆ 750 ಕಿಮೀ ಟ್ರಯಲ್ ರನ್
  • ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿರುವ ರೈಲುಗಳ ಸೇರ್ಪಡೆ

ಆರು ಕೋಚ್‌ಗಳನ್ನು ಒಳಗೊಂಡಿರುವ ಈ ಹೊಸ ಮೆಟ್ರೋ ರೈಲು ಸೋಮವಾರ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿದೆ. ಸದ್ಯ ಟ್ರೈಲರ್‌ಗಳಿಂದ ಕೋಚ್‌ಗಳನ್ನು ಕೆಳಗಿಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಬಳಿಕ ಇವುಗಳನ್ನು ಒಟ್ಟುಗೂಡಿಸಿ (Assemble) ಸ್ಟ್ಯಾಟಿಕ್ ಟೆಸ್ಟಿಂಗ್‌ಗಾಗಿ ಇನ್ಸ್‌ಪೆಕ್ಷನ್ ಬೇ ಲೈನ್‌ಗೆ (IBL) ಕೊಂಡೊಯ್ಯಲಾಗುತ್ತದೆ. ಸಾರ್ವಜನಿಕರ ಸೇವೆಗೆ ಮುಕ್ತವಾಗುವ ಮುನ್ನ ಈ ರೈಲು ಮುಖ್ಯ ಮಾರ್ಗದಲ್ಲಿ ಸುಮಾರು 750 ಕಿಲೋಮೀಟರ್‌ಗಳಷ್ಟು ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಬೇಕಿದೆ. ಮೆಟ್ರೋ ಸಂಚಾರಕ್ಕೆ ತೊಂದರೆಯಾಗದಂತೆ ಈ ಪ್ರಕ್ರಿಯೆಯನ್ನು ಕೇವಲ ರಾತ್ರಿ ವೇಳೆಯಲ್ಲಿ ಮಾತ್ರ ನಡೆಸಲಾಗುತ್ತದೆ.

ಪೀಕ್ ಅವರ್‌ನಲ್ಲಿ 5 ನಿಮಿಷಕ್ಕೊಂದು ರೈಲು

ಪ್ರಸ್ತುತ 19.75 ಕಿಲೋಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಒಟ್ಟು 10 ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ಪೀಕ್ ಅವರ್‌ನಲ್ಲಿ (ಹೆಚ್ಚಿನ ದಟ್ಟಣೆ ಇರುವ ಸಮಯ) ಪ್ರತಿ 7 ನಿಮಿಷಕ್ಕೊಮ್ಮೆ ಮೆಟ್ರೋ ಸೌಲಭ್ಯ ಸಿಗುತ್ತಿದೆ. ಇನ್ನುಳಿದ ಎರಡು ರೈಲುಗಳು ಈಗಾಗಲೇ ಪರೀಕ್ಷಾ ಹಂತದಲ್ಲಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಸಂಚಾರಕ್ಕೆ ಲಭ್ಯವಾಗಲಿವೆ. ಕೋಲ್ಕತ್ತಾ ಸಮೀಪದ ತಿತಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಸಂಸ್ಥೆಯು 14 ಮತ್ತು 15ನೇ ರೈಲುಗಳನ್ನು ಸಿದ್ಧಪಡಿಸುತ್ತಿದ್ದು, ಜುಲೈ ಆರಂಭದ ವೇಳೆಗೆ ಅವು ಬೆಂಗಳೂರಿಗೆ ರವಾನೆಯಾಗಲಿವೆ.

ಇದನ್ನೂ ಓದಿ: ಸಿಎಂ ಡಿಕೆ ಶಿವಕುಮಾರ್ ದೆಹಲಿ ಭೇಟಿಯ ಮೊದಲ ಫಲ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸದ್ಯದಲ್ಲೇ ಮತ್ತೊಂದು ಗುಡ್ ನ್ಯೂಸ್

ಬರುವ ಆಗಸ್ಟ್ 11ಕ್ಕೆ ಹಳದಿ ಮಾರ್ಗದ ಮೊದಲ ವಾರ್ಷಿಕೋತ್ಸವದ ವೇಳೆಗೆ ಎಲ್ಲಾ 15 ರೈಲುಗಳು ಕಾರ್ಯಾಚರಣೆಗೆ ಸಜ್ಜಾಗಲಿವೆ. ಇದರಿಂದಾಗಿ ಪೀಕ್ ಅವರ್‌ನ ಕಾಯುವಿಕೆ ಅವಧಿ 5 ನಿಮಿಷ ಅಥವಾ ಅದಕ್ಕಿಂತಲೂ ಕಡಿಮೆಯಾಗಲಿದೆ. ಇದರಲ್ಲಿ ಎರಡು ರೈಲುಗಳನ್ನು ತುರ್ತು ಪರಿಸ್ಥಿತಿ ಎದುರಿಸಲು ರಿಸರ್ವ್ ಸ್ಟಾಕ್ ಆಗಿ ಇರಿಸಲಾಗುತ್ತದೆ. ಇದರ ನಂತರ ಟಿಆರ್‌ಎಸ್‌ಎಲ್ ಸಂಸ್ಥೆಯು ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಿಗಾಗಿ 18 ರೈಲುಗಳನ್ನು ಪೂರೈಸುವತ್ತ ಗಮನ ಹರಿಸಲಿದೆ. ಅಲ್ಲದೆ, 2027ರ ವೇಳೆಗೆ ಬೆಮೆಲ್ (BEML) ಸಂಸ್ಥೆಯಿಂದ ಹಳದಿ ಮಾರ್ಗಕ್ಕೆ ಹೆಚ್ಚುವರಿಯಾಗಿ ಮತ್ತೂ 6 ರೈಲುಗಳು ಪೂರೈಕೆಯಾಗಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ರಷ್ಯಾ ಬಾಂಬರ್ ವಿಮಾನ ಪತನ: ನಾಲ್ವರು ಸಿಬ್ಬಂದಿ ಪವಾಡಸದೃಶ ರೀತಿಯಲ್ಲಿ ಪಾರು – Kannada News | Russian Long Range Bomber Goes Down in Fiery Incident Caught on Video

ಮಾಸ್ಕೋ, ಜೂನ್ 16: ರಷ್ಯಾದ ಸೈಬೀರಿಯಾ ಪ್ರಾಂತ್ಯದ ಇರ್ಕುಟ್ಸ್ಕ್ ಪ್ರದೇಶದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದ ರಷ್ಯಾದ ವಾಯುಸೇನೆಗೆ ಸೇರಿದ ಬೃಹತ್ ‘Tu-22M3’ ಕಾರ್ಯತಂತ್ರದ ಬಾಂಬರ್ ವಿಮಾನ ಪತನ(Plane Crash)ಗೊಂಡಿದೆ. ಅದೃಷ್ಟವಶಾತ್, ವಿಮಾನದಲ್ಲಿದ್ದ ನಾಲ್ವರು ಸಿಬ್ಬಂದಿಗಳು ಸಮಯಪ್ರಜ್ಞೆ ಮೆರೆದು ಸುರಕ್ಷಿತವಾಗಿ ಹೊರಜಿಗಿದಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತಕ್ಕೀಡಾದ ವಿಮಾನವು ತರಬೇತಿ ಹಾರಾಟದಲ್ಲಿದ್ದ ಕಾರಣ ಯಾವುದೇ ಯುದ್ಧ ಸಾಮಗ್ರಿ ಅಥವಾ ಬಾಂಬ್‌ಗಳನ್ನು ಹೊತ್ತೊಯ್ದಿರಲಿಲ್ಲ. ವಿಮಾನವು ಕಾಮೆಂಕಾ ಗ್ರಾಮದ ಬಳಿಯ ಅಂಗಾರ ನದಿಯ ಅರಣ್ಯ ಪ್ರದೇಶದಲ್ಲಿ ಬಿದ್ದಿರುವುದರಿಂದ ನೆಲದ ಮೇಲಿನ ಸಾರ್ವಜನಿಕ ಆಸ್ತಿಗೆ ಯಾವುದೇ ಹಾನಿಯಾಗಿಲ್ಲ.

ವಿಡಿಯೋ

ವಿಮಾನವು ತಾಂತ್ರಿಕ ಕಾರಣಗಳಿಂದಾಗಿ ಇದ್ದಕ್ಕಿದ್ದಂತೆ ನೆಲಕ್ಕೆ ಧುಮುಕಿ ಬೆಂಕಿ ಹೊತ್ತಿಕೊಂಡಿದೆ. ಇರ್ಕುಟ್ಸ್ಕ್ ಗವರ್ನರ್ ಇಗೊರ್ ಕೊಬ್ಜೆವ್ ಅವರ ಪ್ರಕಾರ, ವಿಮಾನದ ಎಂಜಿನ್ ವೈಫಲ್ಯವೇ ಈ ಭೀಕರ ಅಪಘಾತಕ್ಕೆ ಪ್ರಾಥಮಿಕ ಕಾರಣ ಎನ್ನಲಾಗಿದೆ. ಗಾಯಗೊಂಡ ಸಿಬ್ಬಂದಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮತ್ತಷ್ಟು ಓದಿ: Video: ಪಾಕಿಸ್ತಾನದಲ್ಲಿ ವಾಯುಸೇನೆಯ ತರಬೇತಿ ವಿಮಾನ ಪತನ: ಇಬ್ಬರು ಪೈಲಟ್‌ಗಳ ದುರ್ಮರಣ, ಮೂವರಿಗೆ ಗಾಯ

ಅಪಘಾತಕ್ಕೀಡಾದ ‘Tu-22M3’ ಸೋವಿಯತ್ ಒಕ್ಕೂಟದ ಕಾಲದ ಅತ್ಯಂತ ವೇಗದ ಸೂಪರ್‌ಸಾನಿಕ್ ಬಾಂಬರ್ ವಿಮಾನವಾಗಿದೆ. ಇದನ್ನು ನ್ಯಾಟೋ (NATO) ಪಡೆಗಳು ಬ್ಯಾಕ್‌ಫೈರ್ ಎಂದೂ ಕೂಡ ಕರೆಯಲಾಗುತ್ತದೆ. ಅತ್ಯಾಧುನಿಕ ಆವೃತ್ತಿಯಾದ ಈ ವಿಮಾನವು ಹೈಪರ್‌ಸಾನಿಕ್ ಕಿಂಜಾಲ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಈ ಅಪಘಾತದ ಕುರಿತು ರಷ್ಯಾ ರಕ್ಷಣಾ ಸಚಿವಾಲಯವು ಆಳವಾದ ತನಿಖೆಗೆ ಆದೇಶಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:10 am, Tue, 16 June 26

Source link