Category Archives: Blog

Your blog category

ಲೋಕಾಯುಕ್ತ ದಾಳಿ ವೇಳೆ ಸಿಕ್ತು ಕಂತೆ ಕಂತೆ ನೋಟಿನ ಖಜಾನೆ! – Kannada News | Lokayukta Raids in Karnataka: Cash, Gold, and Disproportionate Assets Unearthed Across Bengaluru and Other Cities

ಬೆಂಗಳೂರು, ಫೆಬ್ರವರಿ 13: ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ನಾಲ್ವರು ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಹಲವು ಅಕ್ರಮಗಳನ್ನು ಪತ್ತೆ ಮಾಡಿದ್ದಾರೆ. ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷಕ ಎಂಜಿನಿಯರ್ ಎಚ್.ಎಂ. ಜನಾರ್ಧನ್ ಅವರಿಗೆ ಸೇರಿದ ಆರು ಸ್ಥಳಗಳಲ್ಲಿ ರೇಡ್ ಮಾಡಲಾಗಿದೆ. ಅಲ್ಲಿ ಆದಾಯ ಮೀರಿದ ಶೇಕಡ 216ರಷ್ಟು ಆಸ್ತಿ, ಅಂದರೆ 4.42 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.

PWD ಮುಖ್ಯ ಎಂಜಿನಿಯರ್ ಪುರುಷೋತ್ತಮ್ ಅವರ ಪದ್ಮನಾಭನಗರದ ಐಷಾರಾಮಿ ಮನೆ ಸೇರಿದಂತೆ ಬೆಂಗಳೂರಿನಲ್ಲಿ ಎರಡು ಕಡೆ ಹಾಗೂ ಮೈಸೂರಿನಲ್ಲಿ ಐದು ಕಡೆ ದಾಳಿ ನಡೆಸಲಾಗಿದೆ. ಇಲ್ಲಿ ಲಕ್ಷಾಂತರ ರೂಪಾಯಿ ನಗದು, ಚಿನ್ನಾಭರಣ, ಬೆಲೆಬಾಳುವ ವಸ್ತುಗಳು ಮತ್ತು ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ. ಪುರುಷೋತ್ತಮ್ ಅವರು ಎರಡು ಶಾಲೆಗಳನ್ನು ಸಹ ನಡೆಸುತ್ತಿದ್ದಾರೆ.

ದಾವಣಗೆರೆ ಬೆಸ್ಕಾಂ ಸಿವಿಲ್ ಎಂಜಿನಿಯರ್ ಆರ್.ಎಚ್. ಅರ್ಜುನ್ ಅವರ ಶಿವಮೊಗ್ಗದ ಗೋಪಾಳದಲ್ಲಿರುವ ಮನೆಯ ಮೇಲೆ ದಾಳಿ ಮಾಡಲಾಗಿದ್ದು, ಎರಡು ನಿವೇಶನ, ಮೂರು ಮನೆ ಮತ್ತು ಎರಡು ಎಕರೆ ಕೃಷಿ ಭೂಮಿಯ ದಾಖಲೆಗಳು ಪತ್ತೆಯಾಗಿವೆ. ಇದೇ ರೀತಿ ಧಾರವಾಡ ಸರ್ವೆ ಇಲಾಖೆ ಸೂಪರ್​ವೈಸರ್ ಸೋಮಲಿಂಗಪ್ಪ ಅವರಿಗೆ ಸೇರಿದ ಭಾರತಿ ನಗರ ಬಡಾವಣೆ ಮನೆ, ಐಸ್ ಗೇಟ್ ಬಳಿಯ ಸರ್ವೆ ಕಚೇರಿ, ಹಾಗೂ ಬೆಳಗಾವಿಯ ಮುರಗೋಡದ ಮನೆ ಸೇರಿದಂತೆ ಒಟ್ಟು ನಾಲ್ಕು ಕಡೆ ರೇಡ್ ಮಾಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಜ್‌ಪಾಲ್ ಯಾದವ್ ಜೈಲಿಗೆ ಹೋಗ್ತಾರೆ’; ಹಿಂದೆಯೇ ಸೂಚನೆ ಕೊಟ್ಟಿದ್ದ ಪ್ರೇಮಾನಂದ ಮಹಾರಾಜ್‌ – Kannada News | Rajpal Yadav’s Crisis: Premanand Maharaj’s Viral Spiritual Advice Amidst Jail Term

ನಟ ರಾಜ್‌ಪಾಲ್ ಯಾದವ್ (Rajpal Yadav) ಕೆಲವು ವರ್ಷಗಳ ಹಿಂದಿನ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. 9 ಕೋಟಿ ರೂ. ಸಾಲ ಮರುಪಾವತಿಸಲು ವಿಫಲವಾದ ನಂತರ ಅವರು ಜೈಲಿಗೆ ಶರಣಾಗಬೇಕಾಯಿತು. ಈ ಕಷ್ಟದ ಸಮಯದಲ್ಲಿ, ಬಾಲಿವುಡ್ ಉದ್ಯಮದ ಅನೇಕ ಜನರು ಈಗ ಅವರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ. ಏತನ್ಮಧ್ಯೆ, ರಾಜ್‌ಪಾಲ್ ಅವರ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಸುಮಾರು ಎರಡು ತಿಂಗಳ ಹಿಂದೆ ಅವರು ವೃಂದಾವನಕ್ಕೆ ಹೋಗಿದ್ದರು. ಅಲ್ಲಿ ಅವರು ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿಯಾದರು. ಈ ವೀಡಿಯೊವನ್ನು ನೋಡಿದ ನೆಟ್ಟಿಗರು, ಬಹುಶಃ ಪ್ರೇಮಾನಂದ ಮಹಾರಾಜ್ ಅವರು ರಾಜ್‌ಪಾಲ್‌ಗೆ ಬರಲಿರುವ ಬಿಕ್ಕಟ್ಟನ್ನು ಈಗಾಗಲೇ ಗ್ರಹಿಸಿರಬಹುದು ಎಂದು ಹೇಳುತ್ತಿದ್ದಾರೆ. ಅದಕ್ಕಾಗಿಯೇ ಅವರು ಬಲಶಾಲಿಯಾಗಿರಲು ಮತ್ತು ಸವಾಲುಗಳನ್ನು ಎದುರಿಸಲು ಸಲಹೆ ನೀಡುತ್ತಿದ್ದರು. ಈ ಭೇಟಿಯ ಸಮಯದಲ್ಲಿ ರಾಜ್‌ಪಾಲ್ ಭಾವುಕರಾದರು.

‘ನಿಮ್ಮ ಮನಸ್ಸನ್ನು ದೇವರೊಂದಿಗೆ ಸಂಪರ್ಕದಲ್ಲಿರಿಸಿಕೊಳ್ಳುವುದು ಜೀವನದಲ್ಲಿ ಅತ್ಯಂತ ಮುಖ್ಯವಾದ ವಿಷಯ. ಏಕೆಂದರೆ ಜೀವನದಲ್ಲಿ ದುಃಖಗಳು ಮತ್ತು ತೊಂದರೆಗಳು ಬರುತ್ತಲೇ ಇರುತ್ತವೆ. ಕೆಲವೊಮ್ಮೆ ನಾವು ನಮ್ಮ ಹತ್ತಿರವಿರುವ ಜನರಿಂದ ದೂರವಾಗುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಜೀವನವು ಕಷ್ಟಕರವೆಂದು ಭಾವಿಸಲು ಪ್ರಾರಂಭಿಸುತ್ತದೆ. ಆರ್ಥಿಕ ಸಮಸ್ಯೆಗಳು, ವ್ಯವಹಾರ ಸಮಸ್ಯೆಗಳಂತಹ ಅನೇಕ ಸಮಸ್ಯೆಗಳಿವೆ. ಆ ಕಷ್ಟದ ಸಮಯದಲ್ಲಿ, ದೇವರು ಮಾತ್ರ ನಮ್ಮನ್ನು ರಕ್ಷಿಸಬಲ್ಲನು’ ಎಂದು ಹೇಳಿದ್ದರು ಸ್ವಾಮೀಜಿ.

‘ಇಂದು ಒಬ್ಬ ವ್ಯಕ್ತಿ ನಿಮ್ಮೊಂದಿಗೆ ಕೈಜೋಡಿಸಬಹುದು, ಆದರೆ ನೀವು ಸಮಸ್ಯೆಯಲ್ಲಿ ಸಿಲುಕಿದಾಗ, ಅವನು ನಿಮ್ಮನ್ನು ಬಿಟ್ಟು ಹೋಗುತ್ತಾನೆ. ಕಷ್ಟದ ಸಮಯದಲ್ಲಿ ದೇವರು ಮಾತ್ರ ನಿಮ್ಮನ್ನು ಬೆಂಬಲಿಸುತ್ತಾನೆ. ಆದ್ದರಿಂದ, ದೇವರ ಹೆಸರನ್ನು ಜಪಿಸಿ. ಪ್ರತಿಯೊಂದು ಕಷ್ಟ ಮತ್ತು ದುಃಖವನ್ನು ಎದುರಿಸಲು ಕಲಿಯಿರಿ, ಬಿಟ್ಟುಕೊಡಬೇಡಿ’ ಎಂದಿದ್ದರು.

ಇದನ್ನೂ ಓದಿ: 11 ಕೋಟಿ ಹಾಕಿ ಮಾಡಿದ ಚಿತ್ರದ ಗಳಿಕೆ ಇಷ್ಟೇನಾ? ರಾಜ್​ಪಾಲ್ ಅವನತಿಗೆ ಇದುವೇ ಕಾರಣ

‘ಪ್ರತಿಯೊಂದು ಸಮಸ್ಯೆಯಲ್ಲೂ ಧೈರ್ಯದಿಂದಿರಿ, ಬಲಶಾಲಿಯಾಗಿರಿ. ನಿರುತ್ಸಾಹಗೊಳ್ಳಬೇಡಿ. ದೇವರ ಹೆಸರನ್ನು ಜಪಿಸುತ್ತಲೇ ಇರಿ. ದೇವರು ಸಾಕಷ್ಟು ಶಕ್ತಿ ಮತ್ತು ಬೆಂಬಲವನ್ನು ನೀಡುತ್ತಾನೆ. ನಾವು ದೇವರನ್ನು ಮರೆತಿದ್ದೇವೆ, ಆದ್ದರಿಂದ ನಾವು ಇಂದು ಪಶ್ಚಾತ್ತಾಪ ಪಡುತ್ತಿದ್ದೇವೆ’ ಎಂದು ಅವರು ರಾಜ್‌ಪಾಲ್‌ಗೆ ಸಲಹೆ ನೀಡಿದ್ದರು.
ಈ ವೀಡಿಯೋಗೆ ನೆಟ್ಟಿಗರು ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ರಾಜ್‌ಪಾಲ್‌ಗೆ ಬರಲಿರುವ ಬಿಕ್ಕಟ್ಟಿನ ಬಗ್ಗೆ ಪ್ರೇಮಾನಂದ ಮಹಾರಾಜ್‌ಗೆ ಎರಡು ತಿಂಗಳ ಮೊದಲೇ ತಿಳಿದಿತ್ತು ಎಂದು ಹಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:56 am, Fri, 13 February 26

Source link

ಮನೆಯ ಹಿಂದೆ ಸೆಪ್ಟಿಕ್ ಟ್ಯಾಂಕ್​​ನಲ್ಲಿ ತಲೆಬುರುಡೆ ಸಿಕ್ಕಾಗಲೇ ಪ್ರೀತಿ, ಮದುವೆ, ದ್ರೋಹದ ಕಥೆ ಬಯಲಾಗಿದ್ದು – Kannada News | Sagar Septic Tank Murder: Love, Betrayal and Prince’s Disappearance Unravels

ಪ್ರಿನ್ಸ್​, ಶೋಯೆಬ್ ಹಾಗೂ ತುಳಸಿImage Credit source: NDTV

ಸಾಗರ್, ಫೆಬ್ರವರಿ 13: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ಘಟನೆ ಇದು. ಆಗಸ್ಟ್​ 20ರಂದು ಪ್ರಿನ್ಸ್​ ಎಂಬುವವರು ಏಕಾಏಕಿ ನಾಪತ್ತೆ(Missing)ಯಾಗಿದ್ದರು. ಅವರು ಕಾಣೆಯಾಗಿದ್ದಾರೆಂದು ಪತ್ನಿ ತುಳಸಿ ದೂರು ನೀಡಿದ್ದರು. ಆರಂಭದಲ್ಲಿ ಪೊಲೀಸರಿಗೆ ಯಾವುದೇ ಸುಳಿವು ಸಿಗದ ಕಾರಣ ಸದ್ದಿಲ್ಲದೆ ಪ್ರಕರಣದ ವಿಚಾರಣೆ ಅಂತ್ಯ ಕಂಡಿತ್ತು. ಆದರೆ ಕುಟುಂಬದವರಿಗೆ ಮಾತ್ರ ಅನುಮಾನ ಹಾಗೇ ಮುಂದುವರೆದಿತ್ತು.

ಸೆಪ್ಟಿಕ್ ಟ್ಯಾಂಕ್​​ನಲ್ಲಿ ಸಿಕ್ಕ ತಲೆ ಬುರುಡೆ, ಮೂಳೆಗಳು ಬೇರೆಯದೇ ಕಥೆಯನ್ನು ಹೇಳಿವೆ. ಪ್ರೇಮ, ಮದುವೆ, ದ್ರೋಹದ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿವೆ. ಮಧ್ಯಪ್ರದೇಶದ ದಿಯೋರಿ ನಗರದಲ್ಲಿ ನಾಪತ್ತೆ ಪ್ರಕರಣ ದಾಖಲಾಗಿ ಆರು ತಿಂಗಳ ನಂತರ ಸತ್ಯವನ್ನು ಪೊಲೀಸರು ಬಯಲು ಮಾಡಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿ ಶೋಯೆಬ್​​ನನ್ನು ನರಸಿಂಗ್​ಪುರದಲ್ಲಿ ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ ತುಳಸಲಿ ಹಾಗೂ ಶೋಯೆಬ್​ಗೆ ಮದುವೆಗೂ ಮುಂಚೆಯೇ ಸಂಬಂಧವಿತ್ತು ಎಂಬುದು ತಿಳಿದುಬಂದಿದೆ. ಪ್ರಿನ್ಸ್​ಗೆ ಮಾದಕ ದ್ರವ್ಯ ನೀಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮದುವೆಯ ನಂತರವೂ ಅಕ್ರಮ ಸಂಬಂಧ ಮುಂದುವರೆದಿದೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

ಮತ್ತಷ್ಟು ಓದಿ: ಮನೆಯಲ್ಲಿ ಮಲಗಿದ್ದವರೂ ಇಲ್ಲ, ಜಗಳವಾಡಿ ಹೋದವರೂ ಹಿಂದಿರುಗಿಲ್ಲ, ದೆಹಲಿಯಲ್ಲಿ ಹೆಚ್ಚುತ್ತಿವೆ ಮಕ್ಕಳ ನಾಪತ್ತೆ ಪ್ರಕರಣಗಳು

ಮದುವೆಯಾದ ಒಂದು ತಿಂಗಳಿಗೆ ತುಳಸಿಯ ನಡವಳಿಕೆ ಬದಲಾಯಿತು, ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದವು, ಇಬ್ಬರೂ ಆಕೆಯ ಪೋಷಕರ ಮನೆಯಲ್ಲಿರಬೇಕೆಂದು ದಿಯೋರಿಗೆ ತೆರಳಿದ್ದರು. ನಂತರ ನಡೆದಿದ್ದು ಈ ಕೊಲೆ, ಶೋಯೆಬ್ ಪ್ರಿನ್ಸ್ ದೇವೋರಿಯಲ್ಲಿ ವಾಸಿಸುತ್ತಿದ್ದಾಗ ಅವನೊಂದಿಗೆ ಸ್ನೇಹ ಬೆಳೆಸಿದ್ದ ಎನ್ನಲಾಗಿದೆ. ಪದೇ ಪದೇ ಪ್ರಿನ್ಸ್​​ಗೆ ಮಾದಕ ದ್ರವ್ಯ ನೀಡುತ್ತಿದ್ದ. ಶೋಯೆಬ್ ತುಳಸಿಯನ್ನು ರಹಸ್ಯವಾಗಿ ಭೇಟಿಯಾಗುತ್ತಿದ್ದ. ಆದರೆ ಅದ್ಹೇಗೋ ಪ್ರಿನ್ಸ್​​ಗೆ ಈ ವಿಚಾರ ತಿಳಿದಾಗ ಇಬ್ಬರ ಸಂಬಂಧದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ. ಆಗ ಉದ್ವಿಗ್ನತೆ ಹೆಚ್ಚಾಗಿತ್ತು.

ಆಗಸ್ಟ್ 20 ರಂದು ಪ್ರಿನ್ಸ್‌ಗೆ ಮಾದಕ ದ್ರವ್ಯ ನೀಡಿ ಕೊಲೆ ಮಾಡಿದ್ದಾಗಿ ಶೋಯೆಬ್ ಒಪ್ಪಿಕೊಂಡಿದ್ದಾನೆ. ಅನುಮಾನ ಬರದಂತೆ ಶವವನ್ನು ತನ್ನ ಮನೆಯ ಹಿಂದಿನ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದು ಕಸದಿಂದ ಮುಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರು ಶೋಯೆಬ್ ಅವರನ್ನು ಅಪರಾಧ ಸ್ಥಳಕ್ಕೆ ಕರೆದೊಯ್ದು ಸೆಪ್ಟಿಕ್ ಟ್ಯಾಂಕ್ ಅನ್ನು ಅಗೆದು, ತಲೆಬುರುಡೆ ಮತ್ತು ಇತರ  ಅವಶೇಷಗಳನ್ನು ವಶಪಡಿಸಿಕೊಂಡರು. ಅವರ ಗುರುತನ್ನು ದೃಢೀಕರಿಸಲು ಅವಶೇಷಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ.

ಕೊಲೆಯ ನಂತರ, ಶೋಯೆಬ್ ತುಳಸಿ ಜೊತೆ ಗುಜರಾತ್‌ಗೆ ಪರಾರಿಯಾಗಿದ್ದ ಎನ್ನಲಾಗಿದೆ, ಅಲ್ಲಿ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಇದು ಪ್ರಿನ್ಸ್​ ಕುಟುಂಬ ಸದಸ್ಯರಲ್ಲಿ ಅನುಮಾನ ಹುಟ್ಟುಹಾಕಿತ್ತು. ಪೊಲೀಸರಿಗೆ ದೂರು ನೀಡಿದ್ದರು. ಪ್ರಿನ್ಸ್ ನಾಪತ್ತೆ ಆಕಸ್ಮಿಕವಲ್ಲ ಎಂದು ಕುಟುಂಬ ಸದಸ್ಯರು ಯಾವಾಗಲೂ ಹೇಳುತ್ತಲೇ ಇದ್ದರು. ಇಬ್ಬರ ವಿಡಿಯೋಗಳು ವೈರಲ್ ಆದಾಗ ಪೊಲೀಸರಿಗೆ ಅನುಮಾನ ಬಂದು ಶೋಯೆಬ್​​ನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಒಣ ಹವೆ – Kannada News | Bengaluru temperature: Dry weather all over the state, clear sky at Bengaluru today

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಒಣ ಹವೆ

ಬೆಂಗಳೂರು, ಫೆಬ್ರವರಿ 13: ಹತ್ತಾರು ದಿನಗಳಿಂದ ರಾಜ್ಯದಲ್ಲಿ ಒಣ ಹವೆ ಆವರಿಸಿದೆ. ಬೆಂಗಳೂರಿನಲ್ಲಿ ಚಳಿಯ ಹವಾಮಾನ ತಕ್ಕಮಟ್ಟಿಗೆ ಇಂದು ಸುಧಾರಿಸಿದೆ. ಕರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆ ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಶುಷ್ಕ ವಾತಾವರಣ

ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 16°C ಇದ್ದು, ಗರಿಷ್ಠ 30°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Daily Devotional: ಕುಂಭ ಸಂಕ್ರಮಣ ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ? – Kannada News | Daily Devotional: Kumbha Sankramana 2026: Auspicious and Inauspicious Effects on All Zodiac Signs

ಬೆಂಗಳೂರು, ಫೆಬ್ರವರಿ​ 13: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕುಂಭ ಸಂಕ್ರಮಣ ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ.ನವಗ್ರಹಗಳ ಸಂಚಾರವು ನಮ್ಮ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಅದರಂತೆ, ಸೂರ್ಯ ಭಗವಾನ್‌ರು ಒಂದು ತಿಂಗಳಿಗೆ ಒಮ್ಮೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತಾರೆ. 2026 ರ ಫೆಬ್ರವರಿ 13 ರಂದು ಸಂಜೆ 4 ಗಂಟೆ 14 ನಿಮಿಷಕ್ಕೆ ಸೂರ್ಯ ಭಗವಾನ್‌ ಕುಂಭ ರಾಶಿಗೆ ಪ್ರವೇಶಿಸಿದ್ದು, ಇದನ್ನು ಕುಂಭ ಸಂಕ್ರಮಣ ಎಂದು ಕರೆಯಲಾಗುತ್ತದೆ. ಈ ಸಂಚಾರವು ಮಾರ್ಚ್ 15 ರವರೆಗೆ ಮುಂದುವರೆಯಲಿದೆ.

ಈ ಅವಧಿಯಲ್ಲಿ ಕೆಲವು ರಾಶಿಗಳಿಗೆ ಸೂರ್ಯನ ಸಂಚಾರವು ಶುಭ ಫಲಗಳನ್ನು ತರಲಿದೆ, ಇನ್ನು ಕೆಲವು ರಾಶಿಗಳಿಗೆ ಮಿಶ್ರ ಅಥವಾ ಅಶುಭ ಫಲಗಳನ್ನು ನೀಡಲಿದೆ. ಮೇಷ, ವೃಷಭ, ಮಿಥುನ, ಕನ್ಯಾ, ಧನುಸ್ಸು ಮತ್ತು ಮಕರ ರಾಶಿಗಳಿಗೆ ಈ ಸಂಕ್ರಮಣವು ಆರ್ಥಿಕವಾಗಿ, ವೃತ್ತಿ ಕ್ಷೇತ್ರದಲ್ಲಿ ಮತ್ತು ಅದೃಷ್ಟದ ದೃಷ್ಟಿಯಿಂದ ಉತ್ತಮ ಫಲಗಳನ್ನು ನೀಡಲಿದೆ. ಆದರೆ, ಕರ್ಕಾಟಕ, ಸಿಂಹ, ವೃಶ್ಚಿಕ, ಕುಂಭ ಮತ್ತು ಮೀನ ರಾಶಿಯವರು ಆರೋಗ್ಯ, ಸಂಬಂಧಗಳು ಮತ್ತು ಇತರೆ ವಿಷಯಗಳಲ್ಲಿ ಜಾಗರೂಕರಾಗಿರಬೇಕಾಗುತ್ತದೆ. ತುಲಾ ರಾಶಿಯವರಿಗೆ ಮಿಶ್ರ ಫಲಗಳು ದೊರೆಯಲಿವೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

ಶೇ.85ರಷ್ಟು ದೃಷ್ಟಿ ಕಳೆದುಕೊಂಡಿದ್ದಾರಂತೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್​ ಖಾನ್, ಸುಪ್ರೀಂಕೋರ್ಟ್​​ನಲ್ಲಿ ಕಣ್ಣೀರಿಟ್ಟ ಸಹೋದರಿ – Kannada News | Imran Khan Losing Eyesight in Adiala Jail: Sister Pleads in Pakistan Supreme Court

ಇಸ್ಲಾಮಾಬಾದ್, ಫೆಬ್ರವರಿ 13: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಆರೋಗ್ಯದ ಬಗ್ಗೆ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ. ಅವರನ್ನು ಜೈಲಿನಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ, ಅದರ ಪರಿಣಾಮವಾಗಿ ಶೇ.85ರಷ್ಟು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಸುಪ್ರೀಂಕೋರ್ಟ್​ ಎದುರು ಇಮ್ರಾನ್ ಸಹೋದರಿ ಕಣ್ಣೀರಿಟ್ಟಿದ್ದಾರೆ. ಪಾಕಿಸ್ತಾನದ ಸುಪ್ರೀಂ ಕೋರ್ಟ್ ತಕ್ಷಣದ ವೈದ್ಯಕೀಯ ಪರೀಕ್ಷೆಗೆ ಆದೇಶಿಸಿದೆ. ನ್ಯಾಯಾಲಯಕ್ಕೆ ಸಲ್ಲಿಸಲಾದ ವರದಿಯಲ್ಲಿ ಇಮ್ರಾನ್ ಖಾನ್ ಅವರ ಬಲಗಣ್ಣಿನ ಸುಮಾರು ಶೇ. 85 ರಷ್ಟು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮುಖ್ಯ ನ್ಯಾಯಮೂರ್ತಿ ಯಾಹ್ಯಾ ಅಫ್ರಿದಿ ಮತ್ತು ನ್ಯಾಯಮೂರ್ತಿ ಶಾಹಿದ್ ಬಿಲಾಲ್ ಹಸನ್ ಅವರನ್ನೊಳಗೊಂಡ ಇಬ್ಬರು ಸದಸ್ಯರ ಪೀಠದ ಮಂದೆ ಪ್ರಕರಣದ ವಿಚಾರಣೆ ನಡೆಯಿತು. ವಿಚಾರಣೆಯ ಸಮಯದಲ್ಲಿ ಫೆಬ್ರವರಿ 16ರ ಮೊದಲು ಇಮ್ರಾನ್ ಖಾನ್ ಅವರ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸುವಂತೆ, ಕಣ್ಣಿನ ತಜ್ಞರಿಂದ ಪರೀಕ್ಷೆ ನಡೆಸುವಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿತು.

ನ್ಯಾಯಾಲಯದಿಂದ ನೇಮಿಸಲ್ಪಟ್ಟ ಅಮಿಕಸ್ ಕ್ಯೂರಿ ಬ್ಯಾರಿಸ್ಟರ್ ಸಲ್ಮಾನ್ ಸಫ್ದಾರ್, ರಾವಲ್ಪಿಂಡಿ ಅಡಿಯಾಲ ಜೈಲಿನಲ್ಲಿ ಇಮ್ರಾನ್ ಖಾನ್ ಅವರನ್ನು ಭೇಟಿಯಾದ ನಂತರ ವಿವರವಾದ ವರದಿಯನ್ನು ಮಂಡಿಸಿದ್ದಾರೆ. ವರದಿಯ ಪ್ರಕಾರ, ಇಮ್ರಾನ್ ಖಾನ್ ಅವರ ಬಲಗಣ್ಣಿನಲ್ಲಿ ಈಗ ಕೇವಲ 15 ಪ್ರತಿಶತದಷ್ಟು ದೃಷ್ಟಿ ಉಳಿದಿದೆ.

ಮತ್ತಷ್ಟು ಓದಿ: ಇಮ್ರಾನ್ ಖಾನ್ ಎಲ್ಲಿದ್ದಾರೆ? ಮಾಜಿ ಪ್ರಧಾನಿ ಸಾವಿನ ಬಗ್ಗೆ ಕೊನೆಗೂ ಮೌನ ಮುರಿದ ಪಾಕಿಸ್ತಾನ

ಅಕ್ಟೋಬರ್ 2025ರವರೆಗೆ ಇಮ್ರಾನ್ ಖಾನ್ ಅವರ ಎರಡೂ ಕಣ್ಣುಗಳ ದೃಷ್ಟಿ ಸಾಮಾನ್ಯವಾಗಿತ್ತು ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ. ಅದರ ನಂತರ ಅವರ ದೃಷ್ಟಿ ಮಸುಕಾಗುತ್ತಿದೆ. ಇಮ್ರಾನ್ ಖಾನ್ ಜೈಲು ಆಡಳಿತಕ್ಕೆ ಹಲವಾರು ಬಾರು ದೂರು ನೀಡಿದ್ದರು. ಆದರೆ ಇದ್ದಕ್ಕಿದ್ದಂತೆ ಬಲಗಣ್ಣ ದೃಷ್ಟಿ ಹೋಗುತ್ತಾ ಬಂದಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೇತ್ರಜ್ಞರು ಕಣ್ಣಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಆಗಿರುವುದನ್ನು ದೃಢಪಡಿಸಿದ್ದಾರೆ.ಇದರಿಂದಾಗಿ ಗಂಭೀರ ಹಾನಿಯಾಗಿದೆ. ಜನವರಿ 24ರಂದಿ ಪಿಮ್ಸ್​ ಆಸ್ಪತ್ರೆಯಲ್ಲಿ ನಡೆಸಲಾದ ವೈದ್ಯಕೀಯ ವಿಧಾನಗಳ ಮರುಪರೀಕ್ಷೆ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಯಾವುದೇ ಕೈದಿಯ ಆರೋಗ್ಯಕ್ಕೆ ರಾಜ್ಯವು ಜವಾಬ್ದಾರನಾಗಿರುತ್ತದೆ, ಕೈದಿಯ ಸುರಕ್ಷತೆ ಖಚಿತಪಡಿಸಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಇಮ್ರಾನ್ ಖಾನ್ ಪುತ್ರರಾದ ಖಾಸಿಮ್ ಮತ್ತು ಸುಲೇಮಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಲು ಅವಕಾಶ ನೀಡುವಂತೆ ಸುಪ್ರೀಂಕೋರ್ಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ವಿಚಾರಣೆಯ ನಂತರ ನ್ಯಾಯಾಲಯದ ಆವರಣದ ಹೊರಗೆ ಭಾವನಾತ್ಮಕ ವಾತಾವರಣ ಸೃಷ್ಟಿಯಾಗಿತ್ತು. ಇಮ್ರಾನ್ ಖಾನ್ ಸಹೋದರಿ ಅಲೀಮಾ ಖಾನ್ ಕಣ್ಣೀರು ಹಾಕಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today 13 February​: ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 13, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ಏಕಾದಶಿ, ಮೂಲಾ ನಕ್ಷತ್ರ, ವಜ್ರ ಯೋಗ, ಬಾಲಕ ವರ್ಣ ಇರುತ್ತದೆ. ರಾಹುಕಾಲವು ಬೆಳಗ್ಗೆ 11:05 ರಿಂದ ಮಧ್ಯಾಹ್ನ 12:33 ರವರೆಗೆ ಇರುತ್ತದೆ. ಸಂಕಲ್ಪ ಕಾಲವು ಮಧ್ಯಾಹ್ನ 12:34 ರಿಂದ ಮಧ್ಯಾಹ್ನ 2:01 ರವರೆಗೆ ಇರುತ್ತದೆ.

ಇಂದು ಕುಂಭ ಸಂಕ್ರಮಣದ ವಿಶೇಷ ದಿನವಾಗಿದ್ದು, ಸೂರ್ಯ ಭಗವಾನ್ ಬೆಳಗಿನ ಜಾವ 4:14 ಕ್ಕೆ ಕುಂಭ ರಾಶಿಗೆ ಪ್ರವೇಶ ಮಾಡುತ್ತಾರೆ. ಇದು ಶನಿಯ ಮನೆ ಆದರೂ ಮೂಲ ತ್ರಿಕೋನದ ಮನೆಯಾಗಿದೆ. ಅಲ್ಲದೆ, ಇಂದಿನ ದಿನ ಸರ್ವತ್ರ ವಿಜಯದ ಏಕಾದಶಿಯಾಗಿದ್ದು, ಸೌಕೂರು ದುರ್ಗಾ ಪರಮೇಶ್ವರಿ ರಥೋತ್ಸವವೂ ನಡೆಯುತ್ತದೆ. ಸೂರ್ಯ ಸಂಕ್ರಮಣದ ದಿನ ಸೂರ್ಯ ಭಗವಾನರ ದರ್ಶನ, ಅಷ್ಟೋತ್ತರ, ಸ್ತೋತ್ರ, ಮಂತ್ರ, ಆದಿತ್ಯ ಹೃದಯ ಪಠಿಸುವುದು ಶ್ರೇಷ್ಠವೆಂದು ಗುರೂಜಿ ತಿಳಿಸಿದ್ದಾರೆ.

 

 

 

Source link

ಬಸ್ಸಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಇನ್ಮುಂದೆ ಆಧಾರ್ ಬದಲಿಗೆ ಸ್ಮಾರ್ಟ್​ಕಾರ್ಡ್ – Kannada News | Karnataka cabinet Approves Smart Card for Free Bus Travel for Women, Replaces Aadhaar Requirement

ಬೆಂಗಳೂರು, ಫೆಬ್ರವರಿ 13: ಕರ್ನಾಟಕ ಸಾರಿಗೆ ಬಸ್​ಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರತಿನಿತ್ಯ ಲಕ್ಷಾಂತರ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಈಗ ಆಧಾರ್ ಬದಲಿಗೆ ಶಕ್ತಿ ಯೋಜನೆಯಡಿ (Shakti Scheme) ಸ್ಮಾರ್ಟ್‌ ಕಾರ್ಡ್‌ (Smart Card) ವಿತರಣೆಗೆ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಜತೆಗೆ, ಹಲವು ಮತ್ವದ ನಿರ್ಣಯಗಳನ್ನು ಕ್ಯಾಬಿನೆಟ್​​ನಲ್ಲಿ ಕೈಗೊಳ್ಳಲಾಗಿದೆ.

ಮಹಿಳೆಯರ ಉಚಿತ ಪ್ರಯಾಣಕ್ಕೆ 4 ಸಾರಿಗೆ ನಿಗಮಗಳು ಸ್ಮಾರ್ಟ್​ಕಾರ್ಡ್ ವಿತರಿಸಲಿವೆ. ಶಕ್ತಿ ಸ್ಮಾರ್ಟ್​ಕಾರ್ಡ್ ತೋರಿಸಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದರೊಂದಿಗೆ, ಆಧಾರ್ ಕಾರ್ಡ್‌ ತೋರಿಸಿ ಉಚಿತವಾಗಿ ಪ್ರಯಾಣಿಸುವುದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.

ರೇಸ್​ಕೋರ್ಸ್ ಬೆಂಗಳೂರಿನಿಂದ ಕುಣಿಗಲ್​ಗೆ ಶಿಫ್ಟ್

ಬೆಂಗಳೂರಿನ ಪ್ರಸಿದ್ಧ ಸ್ಥಳಗಳಲ್ಲಿ ಒಂದಾದ ರೇಸ್ ಕೋರ್ಸ್ ಅಥವಾ ಟರ್ಫ್ ಕ್ಲಬ್​ ಸ್ಥಳಾಂತರಕ್ಕೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್‌ನ ಸ್ಟಡ್‌ ಫಾರ್ಮ್‌ಗೆ ಟರ್ಫ್ ಕ್ಲಬ್ ಶಿಫ್ಟ್ ಆಗಲಿದೆ. ಕ್ಲಬ್ ಜಾಗವನ್ನು ಹಾಗೇ ಉಳಿಸಿಕೊಳ್ಳಲು ಕ್ಯಾಬಿನೆಟ್‌ನಲ್ಲಿ ನಿರ್ಧರಿಸಲಾಗಿದೆ. ಲೀಸ್ ಅವಧಿ ಮುಕ್ತಾಯ, ಬಾಡಿಗೆಯೂ ಪರಿಷ್ಕರಣೆ ಆಗಿರಲಿಲ್ಲ. ಹೀಗಾಗಿ ಬೆಂಗಳೂರಿನಿಂದ ರೇಸ್ ಕೋರ್ಸ್ ಸ್ಥಳಾಂತರ ಮಾಡಲಿದ್ದಾರೆ.

ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಶೂ, 2 ಜೊತೆ ಸಾಕ್ಸ್

ಅಲ್ಲದೇ, ಸರ್ಕಾರಿ ಶಾಲೆಗಳಲ್ಲಿ 1-10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ, 2 ಜೊತೆ ಸಾಕ್ಸ್ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ. ವಿದ್ಯಾವಿಕಾಸ ಯೋಜನೆಯ ಅಡಿ 2026-27 ನೇ ಸಾಲಿಗೆ ಉಚಿತ ಶೂ, ಸಾಕ್ಸ್ ನೀಡಲು ನಿರ್ಧರಿಸಲಾಗಿದೆ.

ಕ್ಯಾಬಿನೆಟ್​ನಲ್ಲಿ ಕೈಗೊಂಡ ಇತರ ನಿರ್ಧಾರಗಳು

ಶಿಷ್ಟಾಚಾರ ನಿಯಮಗಳಿಗೆ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ. ಅಂದರೆ, ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡುವ ನಿಯಮ ಜಾರಿಗೆ ತರಲಾಗಿದೆ. ನ್ಯಾಯಾಲಯಗಳ ಕಟ್ಟಡ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರಕ್ಕೆ ಅನುಮೋದನೆ ನೀಡಲಾಗಿದೆ. ಬಳ್ಳಾರಿ ವಿಮ್ಸ್ ಆವರಣದಲ್ಲಿ 200 ಬೆಡ್ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುವುದು, 1777 ಎಕರೆ ಭೂಮಿ ‘ಶಾಶ್ವತ ವಿಶೇಷ’ ಕೃಷಿವಲಯ ಎಂದು ಘೋಷಿಸಲಾಗಿದೆ. ಇದರಲ್ಲಿ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1777 ಎಕರೆ ಜಮೀನು ಶಾಶ್ವತ ವಿಶೇಷ ಕೃಷಿವಲಯ ಆಗಿರಲಿದೆ. ತಿಕೋಟಾದಲ್ಲಿ ದ್ರಾಕ್ಷಾರಸ ಶೀತಲೀಕರಣ ಘಟಕ ನಿರ್ಮಾಣಕ್ಕೆ

ಇದನ್ನೂ ಓದಿ: ಅಧಿಕಾರ ಹಂಚಿಕೆ ಚರ್ಚೆ ಮಧ್ಯೆ ರಾಜ್ಯ ಬಜೆಟ್​​​ಗೆ ದಿನಾಂಕ ನಿಗದಿ

ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ SIR ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿದೆ. ಕೆಲವು ಕಡೆ ಯಾವ ರೀತಿಯಲ್ಲಿ ಏನ್ ಮಾಡ್ತಿದ್ದಾರೆ ಅದೆಲ್ಲದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಕಾನೂನು ಇಲಾಖೆ ಸಮಗ್ರವಾಗಿಯೇ ಅಧ್ಯಯನ ಮಾಡಿ ಮತ್ತೆ ಸಂಪುಟದಲ್ಲಿ ಚರ್ಚೆ ನಡೆಸುವ ಬಗ್ಗೆ ನಿರ್ಧಾರ ಮಾಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಶತ್ರುತ್ವ ದುರಂತದಲ್ಲಿ ಕೊನೆ – Kannada News | Horoscope 13 February 2026; Dina Rashi Bhavishya Today, Checkout the details here

ಮೇಷ ರಾಶಿ:

ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡುವುದು. ಕೆಲವು ಗೆಲುವಿಗಾಗಿ ಸೋಲಬೇಕಾಗುತ್ತದೆ. ಹಿತಶತ್ರುಗಳನ್ನು ಅರಿಯುವಲ್ಲಿ ನಿಮಗೆ ಸೋಲಾಗುವುದು. ಹೊಸ ಯೋಜನೆಯನ್ನು ನಿರ್ವಹಿಸುವ ಅವಕಾಶವು ಸಿಗಲಿದೆ. ನಿಮ್ಮ ನಿರ್ಧಾರವು ತೂಗುಕತ್ತಿಯಂತೆ ಇರಲಿದೆ. ವಿವಾಹಜೀವನವು ಅತ್ಯಂತ ಸುಖದಂತೆ ತೋರುವುದು. ಕೆಲವು ಅಭ್ಯಾಸವನ್ನು ನೀವು ಬಿಡಬೇಕೆಂದರೂ ಬಿಡಲಾಗದು.

ವೃಷಭ ರಾಶಿ:

ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು. ನಿಮ್ಮ ವ್ಯವಹಾರದಲ್ಲಿ ಅನ್ಯರ ಹಸ್ತಕ್ಷೇಪವನ್ನು ಸಹಿಸಲಾರಿರಿ. ಸಮಯದ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು. ಬಂಧುವನ್ನೇ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮವರ ಬಗ್ಗೆ ನಿಮಗೆ ನಂಬಿಕೆ ಕಡಮೆ ಆಗುವುದು. ಹಾರಿಕೆಯ ಉತ್ತರ ನೀಡಿ ತಪ್ಪಿಸಿಕೊಳ್ಳಿ. ಶತ್ರುಗಳ ಕುತಂತ್ರವು ನಿಮಗೆ ಲಾಭವೇ ಆಗುವುದು.

ಮಿಥುನ ರಾಶಿ:

ನಿಮ್ಮ ಸ್ವಾಭಿಮಾನಕ್ಕೆ ತೊಂದರೆ ಉಂಟಾಗಬಹುದು. ನಿಮ್ಮ ಹಾಸ್ಯಪ್ರಜ್ಞೆ ಕೆಲವರಿಗೆ ಇಷ್ಟವಾಗದು. ದೇಹವು ಅಧಿಕ ಶ್ರಮದಿಂದ ಆಯಾಸಗೊಳ್ಳುವುದು. ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಕು ಎನಿಸುವುದು. ಉದ್ವೇಗಕ್ಕೆ ಒಳಗಾಗುವ ಸಂದರ್ಭವು ನಿಮ್ಮನ್ನು ಕುಗ್ಗಿಸುವುದು. ಅತಿಯಾದ ಪ್ರೀತಿಯೂ ನಿಮಗೆ ಮುಳುವಾದೀತು. ಸಂಗಾತಿಯ ಮನೋಭಾವವು ನಿಮಗೆ ಇಂದು ಸರಿ ಹೊಂದದು. ಸಮಯಕ್ಕೆ ಯಾವುದನ್ನೂ ಸರಿಯಗಿ ಮಾಡಲಾಗದು.

ಕರ್ಕಾಟಕ ರಾಶಿ:

ದಾಖಲೆಗಾಗಿ ಓಡಾಟವನ್ನು ಮಾಡಬೇಕಾದೀತು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅಗತ್ಯ. ಇಂದು ತುರ್ತಾಗಿ ಬೇಕಾಗಿರುವ ಹಣವನ್ನು ಹೊಂದಿಸಲು ನಿಮಗೆ ಕಷ್ಟವಾಗುವುದು. ಫಲಿತಾಂಶದ ಕುತೂಹಲವು ನಿಮ್ಮ ಮನಸ್ಸಿನ ವೇಗವನ್ನು ಹೆಚ್ಚಿಸುವುದು. ಮುಳುಗುವ ದೋಣಿಗೆ ಹುಲ್ಲುಕಡ್ಡಿಯೂ ಆಸರೆಯಾದೀತು. ಯಾವುದೋ ಆಲೋಚನೆಯಲ್ಲಿ ಮುಳುಗಿರುವಿರಿ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು.

ಸಿಂಹ ರಾಶಿ:

ಇಂದು ಮಕ್ಕಳು ನಿಮಗೆ ಬೇಕಾದ ಆರ್ಥಿಕ ನೆರವನ್ನು ಕೊಡುವರು. ನಿಮ್ಮ ದುರಭ್ಯಾಸವು ಅತಿಯಾಗಲಿದೆ. ಅಪನಂಬಿಕೆಯಿಂದ ನಿಮಗೆ ತೊಂದರೆ ಆಗಬಹುದು. ವಸತಿ ಸ್ಥಾನವನ್ನು ಬದಲಿಸಬೇಕಾದೀತು. ಯಾರನ್ನೋ ನೋಡಿ ಹೊಟ್ಟಿ ಉರಿ ಮಾಡಿಕೊಳ್ಳುವುದು ಬೇಡ. ಸ್ಪರ್ಧಾತ್ಮಕ ವಿಚಾರದಲ್ಲಿ ಸೋಲುವ ಸಂಭವವಿದೆ. ಬಹಳ ದಿನಗಳ ಅನಂತರ ನ್ಯಾಯಾಲಯದಿಂದ ಸಿಕ್ಕ ಜಯವು ಸಂತಸವನ್ನು ಉಂಟುಮಾಡುವುದು.

ಕನ್ಯಾ ರಾಶಿ:

ಸಮಾಜವು ನಿಮ್ಮ ಸಾಧನೆಯನ್ನು ಗುರುತಿಸುವ ಅಪೇಕ್ಷೆ ಇರುವುದು. ನಿಮಗೆ ಗೊತ್ತಿರುವ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ಬಗ್ಗೆ ಬಂದ ಆರೋಪವನ್ನು ಜಾಣ್ಮೆಯಿಂದ ಪರಿಹಿರಿಸಿಕೊಳ್ಳುವಿರಿ. ಪರರ ತಪ್ಪುಗಳನ್ನು ಹೆಚ್ಚು ಹುಡುಕುವುದು ಬೇಡ. ಹೊಸ ವಸ್ತುವಿನ ಖರೀದಿಯಲ್ಲಿ ನಿಮಗೆ ಮೋಸ ಆಗುವ ಸಾಧ್ಯತೆ ಇದೆ. ಪ್ರೀತಿಪಾತ್ರರ ಜೊತೆ ಇಂದು ಸಲುಗೆಯಿಂದ ಇರುವಿರಿ. ಮನಸ್ಸಿಗೆ ಇಷ್ಟವಾಗದ ಕಾರ್ಯವನ್ನು ನೀವು ಮಾಡಬೇಕಾದೀತು.

ತುಲಾ ರಾಶಿ:

ಧಾರ್ಮಿಕ ಸೇವೆಯಲ್ಲಿ ನೀವು ಭಾಗಿಗಳಾಗುವಿರಿ. ಭೂಮಿಯಿಂದ ಲಾಭವನ್ನು ಪಡೆಯುವ ಯೋಜನೆಯಿರಲಿ. ಮಕ್ಕಳ ವರ್ತನೆಯು ಹಿಡಸದೇ ಇರುವುದು. ಸಾಮಾಜಿಕ ಕಾರ್ಯದಲ್ಲಿ ನೋವನ್ನು ಮರೆಯುವಿರಿ. ಆದರೂ ಏನನ್ನೂ ಹೇಳದೇ ಇರುವಿರಿ. ವಿಷಯ, ಸಮಯ ಎಲ್ಲವನ್ನೂ ನೋಡಿ ವ್ಯವಹರಿಸಿ. ದುಡುಕಿ ಯಾವುದನ್ನೂ ಮಾಡುವುದು ಬೇಡ.

ವೃಶ್ಚಿಕ ರಾಶಿ:

ಇಷ್ಟವಿಲ್ಲದ ಕಡೆ ನೀವು ಎಂದೂ ಹೋಗಲಾರಿರಿ. ನಿಮ್ಮ ಉತ್ಸಾಹದ ಕೆಲಸವು ಇನ್ನೊಬ್ಬರಿಗೆ ಮಾದರಿಯಾದೀತು. ಧಾರ್ಮಿಕ ನಂಬಿಕೆಗೆಳು ಅಂತರಂಗಕ್ಕೆ ಪುಷ್ಟಿಯನ್ನು ಕೊಡುತ್ತವೆ. ನಿಮ್ಮ ನಿರ್ಲಕ್ಷ್ಯದ ಸ್ವಭಾವದಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಹಿಂದೆ ಕೊಟ್ಟ ಸಾಲವು ಮರಳಿ ಬರುವ ನಿರೀಕ್ಷೆಯಲ್ಲಿ ಇರುವಿರಿ. ಸುಮ್ಮನೇ ವಾದ ಮಾಡುವ ಚಪಲವನ್ನು ಬಿಟ್ಟು ಸಹಜವಾಗಿ ಎಲ್ಲರ ಜೊತೆ ಮಾತನಾಡಿ. ದೈಹಿಕ ಕಾರ್ಯದಲ್ಲಿ ತೊಡಗಿದವರಿಗೆ ಹೆಚ್ಚು ಆದಾಯವು ಇರುವುದು.

ಧನು ರಾಶಿ:

ಪ್ರತಿಕೂಲ ವಾತಾವರಣವನ್ನು ನಿಭಾಯಿಸುವ ಕಲೆಯನ್ನು ಗೊತ್ತುಮಾಡಿಕೊಳ್ಳುವಿರಿ. ಸರಿಯಾದ ಉದ್ಯೋಗಕ್ಕೆ ಅಲೆಮಾರಿಗಳಂತೆ ಅಲೆಯಬೇಕಾಗುವುದು. ತಂದೆಯ ಕೆಲವು ವ್ಯವಹಾರವು ನಿಮಗೆ ಇಷ್ಟವಾಗದೇ ಅವರ ಮೇಲೆ ಮುನಿಸಿಕೊಳ್ಳುವಿರಿ. ಮಕ್ಕಳ ಭವಿಷ್ಯಕ್ಕೆ ಹಣವನ್ನು ಕೂಡಿಡಬೇಕಾಗುವುದು. ಸಾಲ ಕೊಟ್ಟವರು ನಿಮ್ಮನ್ನು ಇಂದು ಏನೂ ಕೇಳುವುದಿಲ್ಲ. ಹಾಗಾಗಿ ನಿಶ್ಚಿಂತೆಯಿಂದ ಇದ್ದುಬಿಡುವಿರಿ. ಯಾರ ಒಳ್ಳೆಯ ಮಾತುಗಳೂ ನಿಮಗೆ ಉಪಯೋಗವಾಗದು.

ಮಕರ ರಾಶಿ:

ವೈವಾಹಿಕ ಜೀವನದಲ್ಲಿ ಏರಿಳಿತವು ಆರಂಭವಾಗಬಹದು. ಸಂಗಾತಿ ಮೇಲಿನ ಸಿಟ್ಟನ್ನು ಬೇರೆ ಕಡೆ ಹೊರಹಾಕುವಿರಿ. ಕೆಲಸದಲ್ಲಿ ಮತ್ತೆ ಮತ್ತೆ ತೊಂದರೆ ಎದುರಾದರೆ ಅದನ್ನು ಕೈ ಬಿಡುವುದು ಸೂಕ್ತ. ಮನೆಯ ಕಾರ್ಯದಲ್ಲಿ ಮಂದಗತಿ, ಆಮೇಲೆ ಮಾಡಿದರಾಯಿತು ಎಂಬ ಭಾವ ಇರಲಿದೆ. ನೆಚ್ಚಿನ ವ್ಯಕ್ತಿಗಳಿಂದ ಪ್ರಭಾವಿತರಾಗಿರುವಿರಿ. ಕುಹಕ ಮಾತುಗಳನ್ನೂ ಆಡಬಹುದು. ಸಂಗಾತಿಯು ನಿಮ್ಮ ಮಾತನ್ನು ಅಲ್ಲಗಳೆಯುವಿರಿ. ಸ್ವಪ್ರತಿಷ್ಠೆಯನ್ನು ಎಲ್ಲರೆದುರು ತೋರಿಸಿದರೆ ಅಪಮಾನ.

ಕುಂಭ ರಾಶಿ:

ಅನಿಶ್ಚಿತ ಪ್ರೇಮದಿಂದ ಕಹಿ ಅನುಭವ. ಅಪಘಾತದ ಸುದ್ದಿಯಿಂದ ನೀವು ಖಿನ್ನರಾಗುವಿರಿ. ನೀವು ಅತಿಯಾದ ಆತ್ಮವಿಶ್ವಾಸದಲ್ಲಿ ಕೆಲವೊಂದನ್ನು ಕಳೆದುಕೊಳ್ಳುವಿರಿ. ಬೇಕಾದುದನ್ನು ಪಡೆಯಲು ಮುನ್ನುಗ್ಗುವ ಮಾನಸಿಕತೆಯನ್ನು ಬೆಳೆಸಿಕೊಳ್ಳುವಿರಿ. ಇನ್ನೊಬ್ಬರು ತೋರುವ ನಿರ್ಲಕ್ಷ್ಯದಿಂದ ನೀವು ಬಹಳ ದುಃಖಿಸುವಿರಿ. ದೂರದರ್ಶಿತ್ವದಿಂದ ಆಗುವ ಲಾಭದ ಮನವರಿಕೆ ಆಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಬಂಧುಗಳ ಸಹಕಾರ ಇಂದು ಲಭ್ಯವಾಗುವುದು.

ಮೀನ ರಾಶಿ:

ನೀವು ಗೆಲ್ಲಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುವುದು. ಇಂದು ನೀವಾಡುವ ಮಾತಿನ ಮೇಲೆ ನಿಮ್ಮ ಕಾರ್ಯಗಳು ನಿಂತವೆ. ಓಡಾಡಕ್ಕೆ ನಿಮಗೆ ವಾಹನದ ಅನುಕೂಲತೆಯೂ ಆಗುವುದು. ರಕ್ಷಣೆಯ ವಿಭಾಗದಲ್ಲಿ ಅಧಿಕ ಒತ್ತಡವಿರಲಿದೆ. ನೀವು ಹಣಕಾಸನ್ನು ಉಳಿಸಲು ನಾನಾಪ್ರಕಾರವಾಗಿ ಯೋಚಿಸುವಿರಿ. ಸರಳವಾಗಿರಲು ನಿಮಗೆ ಸಾಧ್ಯವಾಗುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಧನಿಷ್ಠಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ವ್ಯಾಘಾತ, ಕರಣ : ಭದ್ರ, ಸೂರ್ಯೋದಯ – 06 – 50 am, ಸೂರ್ಯಾಸ್ತ – 06 – 27 pm, ಇಂದಿನ ಶುಭಾಶುಭ ಕಾಲ : ರಾಹು 11:12 – 12:39, ಯಮಗಂಡ ಕಾಲ 06:50 – 15:33, ಗುಳಿಕ ಕಾಲ 17:00 – 09:44

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 13ರ ದಿನಭವಿಷ್ಯ

ಈ ದಿನ ಮಹಾಲಕ್ಷ್ಮೀ ಅಷ್ಟಕವನ್ನು ಶ್ರವಣ ಮಾಡಿ. ದಂಪತಿ ಅಥವಾ ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ ಇದ್ದಲ್ಲಿ ದೂರ ಆಗುತ್ತದೆ. ಇನ್ನು ನಿಮಗೆ ಬರಬೇಕಾದ ಹಣ ಬಾಕಿ ಉಳಿದುಹೋಗಿದ್ದಲ್ಲಿ ಅದು ವಸೂಲಿ ಮಾಡಿಕೊಳ್ಳಲಿಕ್ಕೆ ಮಾರ್ಗೋಪಾಯ ಗೋಚರ ಆಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ಈ ದಿನ ಹೊಸ ಸಾಧ್ಯತೆಗಳಿಂದ ತುಂಬಿರುತ್ತದೆ. ಉದ್ಯೋಗಸ್ಥರಿಗೆ ಹೊಸ ಯೋಜನೆಗಳಿಗೆ ಅವಕಾಶ ಸಿಗುತ್ತದೆ; ಮೇಲಧಿಕಾರಿಗಳ ಬೆಂಬಲ ದೊರೆತು ಕೆಲಸ- ಕಾರ್ಯಗಳು ಸುಗಮವಾಗಿ ಆಗಲಿವೆ. ವ್ಯಾಪಾರಸ್ಥರು ಗ್ರಾಹಕರ ನಿರೀಕ್ಷೆಗಳಿಗೆ ತಕ್ಕಂತೆ ಆರ್ಡರ್‌ ಗಳನ್ನು ಪೂರ್ತಿ ಮಾಡಿಕೊಡುತ್ತೀರಿ. ರೈತರಿಗೆ ಬೆಳೆಯ ಮಾರಾಟ ಸುಲಭವಾಗಿ ಆಗುತ್ತದೆ. ನಾಟಕ, ಇತರೆ ಬರಹ ಅಥವಾ ಕ್ರಿಯೇಟಿವ್ ಕೆಲಸಗಳಲ್ಲಿ ತೊಡಗಿರುವವರು ಹೊಸ ಚಿಂತನೆಗಳಿಂದ ಪ್ರೋತ್ಸಾಹ ಪಡೆಯುತ್ತೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಮನೆಯವರು, ಹಿರಿಯರು ನಿಮ್ಮ ಸಲಹೆ ಮತ್ತು ಸಹಕಾರದಿಂದ ಸಂತೋಷ ಪಡುತ್ತಾರೆ. ಪ್ರೀತಿಯಲ್ಲಿ ಇರುವವರಿಗೆ ಪರಸ್ಪರ ಮಾತುಕತೆಯಿಂದ ಬಾಂಧವ್ಯ ಬಲವಾಗುತ್ತದೆ. ಖರ್ಚು–ಉಳಿತಾಯ ಸಮತೋಲನ ಸಾಧಿಸುವ ಕಡೆಗೆ ಗಮನವನ್ನು ವಹಿಸಿ. ನಿಮ್ಮ ದೇಹಕ್ಕೆ ಒಗ್ಗುವ ಆಹಾರ ಮತ್ತು ಸರಿಯಾದ ಪ್ರಮಾಣದ ನಿದ್ರೆ ಮುಖ್ಯ. ದಿನಾಂತ್ಯಕ್ಕೆ ಸಾಧನೆಗಳ ಅನುಭವದಿಂದ ಮನಸ್ಸು ಹಿಗ್ಗುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಸಮತೋಲನದ ಆಹಾರ ಸೇವನೆಗೆ ಆದ್ಯತೆ ನೀಡಿ, ಮನೆಗೆ ತರುವಂಥ ದಿನಸಿ ಪದಾರ್ಥಗಳ ಆಯ್ಕೆಯಲ್ಲೇ ಬದಲಾವಣೆ ಮಾಡಿಕೊಳ್ಳಲಿದ್ದೀರಿ. ಶೀತ- ಕೆಮ್ಮು- ಕಫದಿಂದ ಬಳಲುತ್ತಾ ಇರುವವರು ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಔಷಧೋಪಚಾರ ಪಡೆಯುವುದಕ್ಕೆ ಆದ್ಯತೆ ನೀಡಿ. ನಿಮಗೆ ಬರಬೇಕಾದ ಬಾಕಿ ಹಣ ವಸೂಲಿಗೆ ಈ ದಿನ ಗಟ್ಟಿಯಾಗಿ ಪ್ರಯತ್ನಿಸಿ.

ಲೇಖನ- ಸ್ವಾತಿ ಎನ್.ಕೆ.

Source link